Monday, June 27, 2011

ನನ್ನ ವಿರುದ್ಧ ಆರೋಪಗಳಿಗೆ ಇಗೋ ಸಮಾರೋಪ

ವರ್ಷ ಸಂಕ್ರಾಂತಿ ನನ್ನ ವೃತ್ತಿ ಜೀವನದಲ್ಲೂ ಸಂಕ್ರಾಂತಿಯ ಗಳಿಗೆ. ಆ ವೇಳೆಯಲ್ಲಿ ನಾನು ದಿಢೀರನೆ ಸುವರ್ಣ ನ್ಯೂಸ್ ಬಿಡುವ ನಿರ್ಧಾರ ಕೈಗೊಂಡಿದ್ದು, ಕನ್ನಡದ ಎರಡು ಪ್ರಮುಖ ಪತ್ರಿಕೆಗಳಲ್ಲಿ ಯಾವುದನ್ನು ಸೇರಲಿ ಎಂಬ ಆಯ್ಕೆಯ ಮುಂದೆ ಕುಳಿತು ಹಗಲೂ ರಾತ್ರಿ ಯೋಚಿಸಿದ್ದು, ನನ್ನ ಸಹೋದ್ಯೋಗಿಗಳೋಡನೆ ಈ ಕುರಿತು ಚರ್ಚಿಸಿದ್ದು, ನಂತರ ಉದಯವಾಣಿಯ ಗ್ರೂಪ್ ಎಡಿಟರ್ ಆದದ್ದು, ಯಾವುದೇ ತಯಾರಿ ಇಲ್ಲದೇ ಮೂರು ಬಜೆಟ್, ವಿಶ್ವಕಪ್ ಕ್ರಿಕೆಟ್ ಮುಂತಾದ ಪ್ರಮುಖ ದಿನಗಳ ಪತ್ರಿಕೆ ರೂಪಿಸಿದ್ದು, ದಿಢೀರನೆ ಹುಬ್ಬಳ್ಳಿ ಆವೃತ್ತಿ ಆರಂಭಿಸಿದ್ದು, ಪತ್ರಿಕೆಯ ಮುಂದಿನ 5 ವರ್ಷಗಳ ನೀಲನಕ್ಷೆ ರೂಪಿಸಲು ಕೈಹಾಕಿದ್ದು, ಮಂಗಳೂರು ಆವೃತ್ತಿಯ ವೃತ್ತಿಸೂಕ್ಷ್ಮಗಳನ್ನು ಅಭ್ಯಸಿಸಿದ್ದು, ಬೆಂಗಳೂರು ಆವೃತ್ತಿಯ ಮೂಲಸೌಕರ್ಯ ಹೆಚ್ಚಿಸಿಕೊಳ್ಳಲು ಅವಿರತ ಪ್ರಯತ್ನಿಸಿದ್ದು.... ಹೀಗೆ ಒಂದು ದಿನವೂ ಬಿಡುವಿಲ್ಲದೇ ಕಳೆದ 5 ತಿಂಗಳು ಅದು ಹೇಗೆ ಉರುಳಿತೋ ಗೊತ್ತಾಗುತ್ತಲೇ ಇಲ್ಲ.

ಇದೆಲ್ಲ ಗಡಿಬಿಡಿಯಲ್ಲಿ ನಾನು ಎಷ್ಟು ಕಳೆದುಹೋದೆನೆಂದರೆ ನನಗೆ ಶುಭ ಕೋರಿದ ಎಷ್ಟೋ ಹಿತೈಷಿಗಳಿಗೆ ಒಂದು Thank You ಮೇಲ್ ಕಳಿಸಲಿಲ್ಲ. ನನ್ನ ವಿರುದ್ಧ ಕುಹಕವಾಡಿದವರು ಹಾಗೂ ವಿವಿಧ ಆಪಾದನೆ ಮಾಡಿದವರಿಗೆ ಒಮ್ಮೆಯಾದರೂ ಉತ್ತರ ನೀಡುವ ಮನಸ್ಥಿತಿಯಲ್ಲಿರಲಿಲ್ಲ.

ನಾನು ಸುವರ್ಣ ಬಿಟ್ಟು ಉದಯವಾಣಿ ಸೇರುವಾಗಲೇ ಗೊತ್ತಿತ್ತು... ಎಂಥ ಕಷ್ಟದ ನಿರ್ಧಾರ ಅದು ಎಂದು. ಸಂಪಾದಕ ಅಥವಾ ಗ್ರೂಪ್ ಎಡಿಟರ್ ಎಂಬ ಆಕರ್ಷಕ ಪಟ್ಟಕ್ಕೆಲ್ಲಾ ಮೋಹಗೊಳ್ಳುವ ವ್ಯಕ್ತಿ ನಾನಲ್ಲ. ಇದು ನನ್ನನ್ನು ಬಲ್ಲ ಎಲ್ಲರಿಗೂ ಗೊತ್ತು. ನಾನಾಗಿ ಯಾವುದೇ ಹುದ್ದೆಯನ್ನು ಹುಡುಕಿಕೊಂಡು ಹೋಗಿಲ್ಲ. ಅವಾಗಿಯೇ ಬಂದ ಎಲ್ಲ exciting offerಗಳನ್ನು ಬಾಚಿಕೊಂಡವನೂ ಅಲ್ಲ. ಹಾಗೆ ನೋಡಿದರೆ, ನಾನು ಉದಯವಾಣಿ ಸೇರುವ ಹಂತದಲ್ಲೇ ಇದ್ದ ಇನ್ನೊಂದು ಅತ್ಯಾಕರ್ಷಕ ಆಹ್ವಾನ ಬಿಟ್ಟು, ಕ್ಲಿಷ್ಟ ಎನಿಸಿದರೂ ಉದಯವಾಣಿಯ ಆಯ್ಕೆಯನ್ನೇ ಕೈಗೊತ್ತಿಕೊಂಡವನು ನಾನು.

ಬಹುಶಃ ನೀವೂ ಒಪ್ಪುತ್ತೀರಿ... ಕನ್ನಡ ಪತ್ರಿಕೋದ್ಯಮದಲ್ಲಿ ಉದಯವಾಣಿ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳ ಚುಕ್ಕಾಣಿ ಹಿಡಿಯುವುದು ಸುಲಭದ ವಿಷಯವಲ್ಲವೇ ಅಲ್ಲ. ಈ ಎರಡೂ ಪತ್ರಿಕೆಯ ಓದುಗ-ಸಿಬ್ಬಂದಿ-ಮಾಲಿಕತ್ವfabric ತುಂಬಾ delicate ಆದದ್ದು. ಅದರಲ್ಲಿ ಒಂದು ನೂಲನ್ನು ಅತ್ತಿತ್ತ ಮಾಡಿದರೂ ಇಡೀ ವ್ಯವಸ್ಥೆಯ ಹದ ಹಾಳಾಗುತ್ತದೆ. ಅಲ್ಲದೇ, Media Strategists ಈ ಎರಡೂ ಪತ್ರಿಕೆಗಳನ್ನು “Prisoners of their own strong fort” ಎಂದೇ ಗುರುತಿಸುತ್ತಾರೆ. ಈ ಪತ್ರಿಕೆಗಳ ಪರಂಪರಾಗತ ಹದವನ್ನೂ ಉಳಿಸಿಕೊಂಡು, ಕೋಟೆಯ ಹೊರಗೂ ಹರವನ್ನು ಹೆಚ್ಚಿಸುವುದು ಆಟದ ಮಾತಲ್ಲ ಎನ್ನುವುದು ನನಗೆ ತುಂಬಾ ಚೆನ್ನಾಗಿಗೊತ್ತು. ಇದೆಲ್ಲ ಗೊತ್ತಿದ್ದೂ ನಾನು ಉದಯವಾಣಿಯ hot-seat ಆರಿಸಿಕೊಂಡೆ ಎಂದರೆ ನಿಮಗೆ ರಾಬರ್ಟ್ ಫ್ರಾಸ್ಟ್ ಬರೆದ “The Road Not Taken” ಕವನ ನೆನಪಾಗುತ್ತಿದೆಯೇ? Well, I love challenges. I am used to challenges in all my previous 20 years. I am happy that I have made the right choice :-)

ನಾನು ಉದಯವಾಣಿಯ ಗ್ರೂಪ್ ಎಡಿಟರ್ ಆಗುತ್ತೇನೆ ಎಂದಾಗ ಅನೇಕರು ಸಂತಸ ಪಟ್ಟರು. ಇನ್ನು ಅನೇಕರು ಸಂಶಯಪಟ್ಟರು. Can he fit the bill ಅಂತ! ಅದು ಸಹಜ ಬಿಡಿ. ಕನ್ನಡಪ್ರಭದಲ್ಲಿ ನಾನು ಕಾರ್ಯನಿರ್ವಾಹಕ ಸಂಪಾದಕ ಹಾಗೂ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಸಂಪಾದಕನಾಗಿ ಅನುಭವಹೊಂದಿದ್ದರೂ ಸ್ವತಂತ್ರವಾಗಿ ಪತ್ರಿಕೆಯನ್ನು ನಡೆಸುವುದು ಇದೇ ಮೊದಲ ಬಾರಿ. ಹಾಗಾಗಿ, ಅಂತಹುದೊಂದು ಸಂಶಯ ಅಸಹಜವೇನಲ್ಲ. ಹಾಗೆ ನೋಡಿದರೆ, ಮೊದಲಬಾರಿ ಸಂಪಾದಕನಾಗುವ ಎಲ್ಲ ವ್ಯಕ್ತಿಯ ಕುರಿತೂ ಇಂತಹ ಸಣ್ಣ ಸಂದೇಹ ಇದ್ದೇ ಇರುತ್ತದೆ. ಅಂದು ವಿಶ್ವೇಶ್ವರ ಭಟ್ ಹಾಗೂ ರಂಗ ಸಂಪಾದಕರಾಗುವಾಗಲೂ ಇದೇ ರೀತಿಯ ಸಂಶಯ ಇತ್ತು. ಹಾಗೂ ಹಿಂದೆ ನನ್ನನ್ನು ಕನ್ನಡಪ್ರಭದ ಸುದ್ದಿಸಂಪಾದಕನ್ನಾಗಿ ಮಾಡಿದಾಗಲೂ ನಾನು ಇಂತಹ ಸಂಶಯಕ್ಕೆ ಗ್ರಾಸನಾಗಿದ್ದೆ. ಹಾಗಾಗಿ, ಈ ಸಂಶಯಕ್ಕೆಲ್ಲ ಕಾಲವೇ ಉತ್ತರಿಸುತ್ತದೆ ಬಿಡಿ. ಅಂದಹಾಗೆ, 1996ರಿಂದ ಕನ್ನಡಪ್ರಭದಲ್ಲಿ ಏನೆಲ್ಲ ಬದಲಾವಣೆಯಾಗಿದೆ, ಅದರಲ್ಲಿ ನನ್ನ ಪಾತ್ರ ಏನು-ಎಷ್ಟು ಎಂದು ಈಗಲೂ ಕನ್ನಡಪ್ರಭದಲ್ಲಿರುವವರಿಗೆ ಗೊತ್ತು. Well, ಕನ್ನಡಪ್ರಭದಲ್ಲಿರುವವರಿಗೆ ಮಾತ್ರ ಗೊತ್ತು! ಏಕೆಂದರೆ, I always worked under shadow… the shadow of YNK, TJS George, Satya, Venkatnarayan and Ranga. I, just now, have come out of the shadow.


ಈ ಹಂತದಲ್ಲಿ, ನನ್ನ ಕುರಿತು, ನನ್ನ ಸಾಮರ್ಥ್ಯ ಹಾಗೂ ಕೆಲಸದ ಕುರಿತು ಅನೇಕ ಬ್ಲಾಗುಗಳಲ್ಲಿ ಅನೇಕ ಅಭಿಪ್ರಾಯಗಳು ವ್ಯಕ್ತವಾಗಿವೆ. ನಾನು ಅವುಗಳನ್ನು ಗಮನಿಸಲೇ ಇಲ್ಲ ಎಂದು ಸುಳ್ಳು ಹೇಳುವುದಿಲ್ಲ. I read blogs and I try to take positive things out of them. In fact, ಕನ್ನಡಪತ್ರಿಕೋದ್ಯಮದಲ್ಲಿ ಬ್ಲಾಗ್ ಎಂದರೆ ಏನು ಎಂದು ಗೊತ್ತಿರದ ಕಾಲದಲ್ಲೇ ನಾನು ಬ್ಲಾಗ್ ಕುರಿತು ಭಾಷಣ ಮಾಡುತ್ತಿದ್ದೆ. ನಾನೂ ಬ್ಲಾಗ್ ಆರಂಭಿಸಿದ್ದೆ. ಆದರೆ, ಈ ಬ್ಲಾಗುಗಳು ಯಾವಾಗ ಬೇರೆಯವರನ್ನು ಬಾಯಿಗೆ ಬಂದಂತೇ ದೂಷಿಸಲು ಆರಂಭಿಸಿದವೋ ಆಗಿನಿಂದ ನಾನು ಬ್ಲಾಗುಗಳಿಂದ ಸ್ವಲ್ಪ ದೂರವಾದದ್ದು ನಿಜ.

ಅದರಲ್ಲೂ ಕನ್ನಡ ಮಾಧ್ಯಮ ಕ್ಷೇತ್ರದ ವಿಮರ್ಶೆ ಮಾಡುವ ಅನೇಕ ಬ್ಲಾಗುಗಳು ಕನ್ನಡದಲ್ಲಿವೆ. ಅವುಗಳನ್ನು ಒಮ್ಮೆ ಓದಿದರೆ ಸಾಕು ಅವು ಯಾರ ವಿರೋಧಿ ಬ್ಲಾಗುಗಳು, ಯಾರ ಪರ ಬ್ಲಾಗುಗಳು ಎಂದು ಗೊತ್ತಾಗಿಬಿಡುತ್ತವೆ. ಆದರೂ, I respect their freedom of speech. ಕೆಲವೊಮ್ಮೆ ಈ ಬ್ಲಾಗುಗಳಲ್ಲಿನ speculationಗಳು ಕಚೇರಿಯ administrationನಲ್ಲಿ intruding ಅನ್ನಿಸಿದರೂ ನಾನು ಆ ಬ್ಲಾಗುಗಳನ್ನು ನನ್ನ ಕಚೇರಿಯಲ್ಲಿ block ಮಾಡಿಸಿಲ್ಲ. This is information age. ಈ ಬ್ಲಾಗುಗಳಲ್ಲಿ ಸಾಕಷ್ಟು information ಇರುತ್ತೆ. ಪಾಸಿಟಿವ್ ಆದದ್ದನ್ನು ಆರಿಸಿಕೊಳ್ಳಿ ಉಳಿದದ್ದು ಬಿಟ್ಟಾಕಿ. ಸಾಧ್ಯವಾದಷ್ಟೂ ಬ್ಲಾಗ್ ಬೈಗುಳದ ಕಾಮೆಂಟುಗಳಿಂದ ದೂರವಿರಿ – ಎನ್ನುವುದಷ್ಟೇ ನನ್ನ ಮಿತ್ರರಿಗೆ ನನ್ನ ಹಿತನುಡಿ.

Good or bad ಈ ಬ್ಲಾಗುಗಳು ಕನ್ನಡಪತ್ರಿಕೋದ್ಯಮದ watchdogs ಅನ್ನುವುದನ್ನು ನಾನು ಖಂಡಿತ ಒಪ್ಪುತ್ತೇನೆ. ಆದರೆ, ಈ ಬ್ಲಾಗುಗಳಲ್ಲಿ ಪ್ರಕಟವಾಗುವ ಅಭಿಪ್ರಾಯ, ವಿಮರ್ಶೆ, ಸಲಹೆ ಸೂಚನೆಗಳಲ್ಲಿ ನನಗೆ ಕಾಣಿಸುವ ಒಂದೇ ಒಂದು ಕೊರತೆ ಅಂದರೆ – Media Economics. Ideal journalismಗೂ real journalismಗೂ ಇರುವ ದೊಡ್ಡ ಕಂದಕವೇ ಅದು. ಇಂದು ಸಂಪಾದಕರು ಅಂದರೆ ಕೇವಲ ಕಾಂಟೆಂಟ್ ತುಂಬಿಸುವ ಪತ್ರಿಕೋದ್ಯಮಿಗಳಲ್ಲ... He should always work for ROI of the media house. ಇದರ ಬಗ್ಗೆ ದೊಡ್ಡ ದೊಡ್ಡ ಚರ್ಚೆ, ವಿಮರ್ಶೆ ನಡೆಸುವುದು ಸುಲಭ ಆದರೆ ಅದರ ಕಷ್ಟ ಸಂಪಾದಕನ ಹಾಟ್ ಸೀಟಲ್ಲಿ ಕುಳಿತವರಿಗೆ ಮಾತ್ರ ಗೊತ್ತು. Thanks to Manoj Kumar Sonthalia – ಕಳೆದ 8 ವರ್ಷಗಳಲ್ಲಿ ಅವರಿಂದ ನಾನು ಮತ್ತು ರಂಗ ಕಲಿತ Media Economics ನಮ್ಮ ಈ ಜನ್ಮಪೂರ್ತಿ ಸಾಕು. ಅಂದಹಾಗೆ. ಕನ್ನಡದಲ್ಲಿ ಲಾಭ ಗಳಿಕೆಯಲ್ಲಿ ನಂಬರ್-1 ಪತ್ರಿಕೆ ಉದಯವಾಣಿ ಎಂಬುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ!

ಈ ನಡುವೆ, ನನ್ನ ಕುರಿತು ಕೆಲ ಆರೋಪಗಳು ಕೇಳಿ ಬಂದವು. ಕೆಲವಕ್ಕೆ ಇಲ್ಲಿ ಉತ್ತರಿಸಿದ್ದೇನೆ. ಯಾವುದೇ ಕುಹಕವಿಲ್ಲ. Plain facts ಮುಂದಿಟ್ಟಿದ್ದೇನೆ. ಈ ಕುರಿತು ಚರ್ಚೆ ಮುಂದುವರಿಸುವ ಉದ್ದೇಶ ಇಲ್ಲ. ಕೆಲವು ಪ್ರಮುಖ ಆರೋಪಗಳಿಗೆ ಇದು ಸಮಾರೋಪ ಆಗಲಿ ಎಂದಷ್ಟೇ ಆಶಯ.

1 – ರವಿ ಹೆಗಡೆ ಎರಡು ಮುಖದ ವ್ಯಕ್ತಿ. ನಯವಂಚಕ. ನಗುತ್ತಲೇ ಜನರನ್ನು ಕೊಲ್ಲುವಷ್ಟು ಕ್ರೂರ ವ್ಯಕ್ತಿ.

Over a period of time, ನಮ್ಮಿಂದ ಕಠಿಣ ಕ್ರಮಕ್ಕೆ ಒಳಗಾದವರು ಹೀಗೆ INTERPRET ಮಾಡುವುದು ಸಹಜ. ಆದರೆ, ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ನನಗೆ ಶತ್ರುಗಳಿಗಿಂತ ಮಿತ್ರರ ಸಂಖ್ಯೆ ಅಧಿಕ – 1:8. I think it’s a pretty good score!

2. ರಂಗ ಮತ್ತು ರವಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಂಸ್ಥೆಗಳನ್ನು ತಮ್ಮ ದಬ್ಬಾಳಿಕೆಯಿಂದ ಹಾಳುಮಾಡಿದರು.

ಕನ್ನಡಪ್ರಭ ನಮ್ಮ ಕೈಗೆ ಬಂದಾಗ ಪ್ರಸರಣ ಸಂಖ್ಯೆ 48000. ನಾವು ಅಲ್ಲಿಂದ ಹೊರಬಂದಾಗ ಗರಿಷ್ಠ ಹಂತದಲ್ಲಿ 210000 ಪ್ರತಿ ಇತ್ತು. ಸುವರ್ಣ ನ್ಯೂಸಿಗೆ ನಾವು ಕಾಲಿಡುವಾಗ 28 GRP ಇತ್ತು. ಬಿಡುವ ಹಂತದಲ್ಲಿ 100ರ ಆಜುಬಾಜು ಇತ್ತು. (ವಿವಿಧ ಕಾರಣಗಳಿಗೆ ಇದು +/-30 ಪಾಯಿಂಟ್ ಹೊಯ್ದಾಡುತ್ತಿತ್ತು. ಇದು ಸಹಜ.) ಅದಕ್ಕಿಂತ ಸಂಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವ ತಂಡ ಹಾಗೂ ವ್ಯವಸ್ಥೆಯನ್ನು ಎರಡೂ ಸಂಸ್ಥೆಗಳಿಗೆ ನೀಡಿದ ಹೆಮ್ಮೆ ನಮಗಿದೆ. ಅಲ್ಲದೇ ಮಾಧ್ಯಮಗಳ ಮಾರ್ಕೆಟ್ ವ್ಯಾಲ್ಯೂಯೇಶನ್ ಹಲವು ಪಟ್ಟು ಹೆಚ್ಚಿಸಿದ್ದಕ್ಕೆ ಮಾಲಿಕರಿಬ್ಬರಿಗೂ ಸಂತೋಷವಿದೆ. ಅಂದಹಾಗೆ, ಕಂಪನಿ turn-around ಮಾಡುವಾಗ ಕೆಲವು ಕಠಿಣ ಕ್ರಮಗಳು ಅಗತ್ಯ. ಆ ಕ್ರಮಕ್ಕೆ ಒಳಗಾದವರು ನಮ್ಮ ಕುರಿತು ಒಳ್ಳೆಯ ಮಾತನ್ನು ಹೇಗೆ ಹೇಳಿಯಾರು?

3. ರವಿ ಹೆಗಡೆ ಮ್ಯಾನೇಜ್ ಮೆಂಟಿನ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ರವಿ ಹೆಗಡೆ ಕುರಿತು ಮ್ಯಾನೇಜ್ ಮೆಂಟ್ ಅಸಮಾಧಾನಗೊಂಡಿದೆ. ರವಿ ಸದ್ಯವೇ ಉದಯವಾಣಿ ಬಿಟ್ಟು ವಿಜಯ ಕರ್ನಾಟಕಕ್ಕೆ ಹೋಗುತ್ತಾರೆ. ರವಿ ಹೆಗಡೆಯನ್ನು ಶೀಘ್ರ ಕಿತ್ತುಹಾಕಲಾಗುತ್ತದೆ. ರವಿ ಹೆಗಡೆ ರಂಗನ ಚಾನಲ್ಗೆ ಹೋಗುತ್ತಾರೆ.

Bull S***

4. ರವಿ ಹೆಗಡೆ ತಮ್ಮ ವೆಬ್‌ಸೈಟಿನಲ್ಲಿ ತಮ್ಮ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. Transferred to Belgaum for launching and planning Kannada Prabha edition ಅಂತ ಬರೆದಿದ್ದಾರೆ. ಇದು ಸುಳ್ಳು. ಆಗ, ರವಿ ಹೆಗಡೆ ಇನ್ನೂ ಜ್ಯೂನಿಯರ್. ತಿಮ್ಮಪ್ಪ ಭಟ್ ಬೆಳಗಾವಿ ಆವೃತ್ತಿಯ ಮುಖ್ಯಸ್ಥರಾಗಿದ್ದರು.

1995ರಲ್ಲಿ ಅಪ್ರೆಂಟಿಸ್ ವರದಿಗಾರನಾಗಿ ಕನ್ನಡಪ್ರಭ ಸೇರಿದ ಮೊದಲ 3 ತಿಂಗಳು ಮಾತ್ರ ನಾನು ಮುಖ್ಯವರದಿಗಾರರಿಗೆ ವರದಿಮಾಡಿಕೊಳ್ಳುತ್ತಿದೆ. ನಂತರ As per the orders of Mr YNK, then editor ನಾನು ನೇರವಾಗಿ ವರದಿಮಾಡಿಕೊಳ್ಳುತ್ತಿದ್ದುದು ಸಂಪಾದಕರಿಗೆ ಮಾತ್ರ. ನಾನು ಯಾವ ಕೆಲಸ ಮಾಡಬೇಕು, ಎಲ್ಲಿ ಕೆಲಸ ಮಾಡಬೇಕು, ನನ್ನ ರಜಾ, ಪ್ರಮೋಷನ್ ಇತ್ಯಾದಿ ಎಲ್ಲವನ್ನೂ ತೀರ್ಮಾನಿಸುತ್ತಿದ್ದುದು ಸಂಪಾದಕರು ಮಾತ್ರ. ಟೆಕ್ನಾಲಜಿ ಕೌಶಲ್ಯ ಹಾಗೂ ಹೊಸ ಆವೃತ್ತಿ ಆರಂಭಿಸುವ ಮತ್ತು ನಡೆಸುವ ಅನುಭವ ಆಗ ಕನ್ನಡಪ್ರಭದಲ್ಲಿ ನನಗೆ ಮಾತ್ರ ಇತ್ತು. ತಿಮ್ಮಪ್ಪಭಟ್ಟರಿಗಾಗಲೀ ಇತರರಿಗಾಗಲೀ ಆ ಅನುಭವ ಇರಲಿಲ್ಲ. ಹಾಗಾಗಿ, ಸಹಜವಾಗೇ ಸಂಪಾದಕರು ನನ್ನನ್ನು ಹೈದರಾಬಾದಿನಿಂದ ಬೆಳಗಾವಿಗೆ 6 ತಿಂಗಳ ಮಟ್ಟಿಗೆ ಹೊಸ ಆವೃತ್ತಿ ಆರಂಭಿಸಲು ಕಳಿಸಿದರು. ಆವೃತ್ತಿಯ ಇನ್ ಚಾರ್ಜ್ ತಿಮ್ಮಪ್ಪ ಭಟ್ ಆಗಿದ್ದರು. ಕಂಪನಿಯ ಯೋಜನೆಯಂತೆ ಅದು ಕೇವಲ ಪ್ರಿಂಟ್ ಎಡಿಷನ್ ಆಗಿತ್ತು. ಆದರೆ, ಅದನ್ನು ಲೈವ್ ಎಡಿಷನ್ ಆಗುವಂತೆ ಯೋಜನೆ ರೂಪಿಸಿದ್ದು ಸ್ವತಃ ನಾನು. ಆವೃತ್ತಿ ಆರಂಭವಾದ ಬಳಿಕ, ನಾನು ಬೆಂಗಳೂರಿಗೆ ವರ್ಗವಾದೆ. ತಿಮ್ಮಪ್ಪ ಭಟ್ ಬೆಳಗಾವಿಯ ಮುಖ್ಯಸ್ಥರಾಗೇ ಮುಂದುವರೆದಿದ್ದರು. ನಂತರ ನಾನು ಇನ್ನೂ ಹಲವಾರು ಪ್ರಾಜೆಕ್ಟ್ ಮುಗಿಸಿ ಸುದ್ದಿ ಸಂಪಾದಕನಾದೆ. ಆಗ ಸುಮಾರು 1 ವರ್ಷ ತಿಮ್ಮಪ್ಪ ಭಟ್ ಉಪ-ಸುದ್ದಿ ಸಂಪಾದಕರಾಗಿ ನನ್ನ ಜೊತೆಯೇ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು. ನಂತರ ಅವರು ಸುದ್ದಿ ಸಂಪಾದಕರಾಗಿ ಉಷಾ ಕಿರಣಕ್ಕೆ ಹೋದರು. ಅಷ್ಟರೊಳಗೇ ನಾನು ಕನ್ನಡಪ್ರಭದ ಕಾರ್ಯನಿರ್ವಾಹಕ ಸಂಪಾದಕನೂ ಆಗಿದ್ದೆ. ಇದು ವಾಸ್ತವ. ಇಂಥ ವಿಷಯಗಳನ್ನೆಲ್ಲ ವೆಬ್‌ಸೈಟಿನಲ್ಲಿ ಯಾಕಾದರೂ ಸುಳ್ಳುಹೇಳಬೇಕೋ ನನಗಂತೂ ಗೊತ್ತಿಲ್ಲ!

5. ರವಿ ಹೆಗಡೆ ವಿಶ್ವೇಶ್ವರ ಭಟ್ಟರನ್ನು ಕಾಪಿ ಮಾಡಿ ಉದಯವಾಣಿಗೆ ಹೊಸ ರೂಪ ಕೊಟ್ಟಿದ್ದಾರೆ. ಅಡ್ವಾಣಿ ಅಂಕಣವನ್ನು ಕನ್ನಡಪ್ರಭದಲ್ಲಿ ಮೊದಲು ಆರಂಭಿಸಲಾಯಿತು. ಅದನ್ನು ಉದಯವಾಣಿ ಕಾಪಿ ಮಾಡಿತು. ಟ್ವೀಟರನ್ನು ವಿ.ಭಟ್ ಮೊದಲು ಬಳಸಿದರು. ರವಿ ಹೆಗಡೆ ಕಾಪಿ ಮಾಡಿದರು. ಪುಟಕ್ಕೊಂದು ಪಂಚ್ ವಿ.ಕದಲ್ಲಿ ಮಾಡಿದ ಪ್ರಯೋಗಗಳು. ಇತ್ಯಾದಿ...

ಟೀಕೆ, ಹೊಗಳಿಕೆಗಳೇನೇ ಇರಲಿ... ಕನ್ನಡ ಪತ್ರಿಕೋದ್ಯಮದ ಅತ್ಯುತ್ತಮ ಸಂಪಾದಕರಲ್ಲಿ ವಿಶ್ವೇಶ್ವರ ಭಟ್ಟರು ಒಬ್ಬರು. ಅವರು ಅತ್ಯಂತ ಪ್ರಯೋಗಶೀಲ, ಸೃಜನಶೀಲ ಸಂಪಾದಕ ಎಂಬುದರಲ್ಲಿ ಎರಡು ಮಾತಿಲ್ಲವೇ ಇಲ್ಲ. ಅಲ್ಲದೇ ಅವರು ನನಗಿಂತ ಹಿರಿಯರೂ ಕೂಡ. ಕನ್ನಡಪ್ರಭದಲ್ಲಿರುವಾಗಲೇ ನಾನು ಅವರಿಂದ ಕಲಿತದ್ದು ಬೇಕಾದಷ್ಟಿದೆ. ಅವರೂ ಸಹ ಅನೇಕ ಸಲ ನನ್ನ ಬೆನ್ನುತಟ್ಟಿದ್ದಿದೆ. ನಾವಿಬ್ಬರೂ ಪರಸ್ಪರ ಗೌರವಿಸುವ ಸಂಬಂಧ ಇರಿಸಿಕೊಂಡವರು. ಅದಕ್ಕಿಂತಲೂ ಅವರು ಹಾಗೂ ನಾನು ವೈಎನ್ಕೆ ಹಾಗೂ ಟಿಜೆಎಸ್ ಗರಡಿಯಲ್ಲೇ ಪಳಗಿದವರು. ಸಮಕಾಲೀನ ಜಗತ್ತಿನ ಅತ್ಯುತ್ತಮ ಪತ್ರಿಕೋದ್ಯಮವನ್ನು ಅಳವಡಿಸಿಕೊಳ್ಳುವ ಮುಕ್ತ ಮನಸ್ಸು ಇಬ್ಬರಲ್ಲೂ ಇದೆ. ಹಾಗಾಗಿ ಭಟ್ಟರ ಪ್ರಭಾವ ನನ್ನ ಮೇಲಿರುವುದು ಸ್ವಾಭಾವಿಕ. ಹಾಗೆ ಭಟ್ಟರ ಮೇಲೂ ಹಲವು ಅತ್ಯುತ್ತಮ ಸಂಪಾದಕರ ಪ್ರಭಾವ ಇದ್ದೇ ಇರುತ್ತದೆ. ಅಂತಹ ಪ್ರಭಾವಗಳ ಪಟ್ಟಿ ಮಾಡುತ್ತಾ ಕುಳಿತುಕೊಳ್ಳುವಷ್ಟು Childish ನಾನಾಗಲಾರೆ. ಆದರೆ, ಈ ಆಡ್ವಾಣಿ ಲೇಖವಿದೆಯಲ್ಲ... ಅದನ್ನು ಮೊದಲು ಪ್ರಕಟಿಸಿದ್ದು ಉದಯವಾಣಿ. ಕನ್ನಡಪ್ರಭದಲ್ಲಿ ಆಡ್ವಾಣಿ ಅಂಕಣ ಆರಂಭವಾಗುವಕ್ಕಿಂತ ವಾರಗಟ್ಟಲೆ ಮೊದಲೇ ಆಡ್ವಾಣಿಯವರ ಅದೇ ಲೇಖನ ಪ್ರಕಟವಾಗಿತ್ತು. 13-4-2011 ಉದಯವಾಣಿಯ ಸಂಪಾದಕೀಯ ಪುಟ ನೋಡಿ. ಅದಕ್ಕೂ ಮೊದಲೇ ಅಡ್ವಾಣಿ ಲೇಖನವನ್ನು ನಾವು ಕನ್ನಡಪ್ರಭದಲ್ಲಿ ಎಷ್ಟು ಬಾರಿ ಬಳಸಿದ್ದೆವೋ ಲೆಕ್ಕವಿಲ್ಲ. ಇನ್ನು ಟ್ವಿಭಾಷಿತದ ವಿಚಾರ. ಟ್ವೀಟರ್ ಅಂದರೆ ಏನು ಅಂತ ಕನ್ನಡ ಪತ್ರಿಕೆಗಳಲ್ಲಿ ಮೊದಲ ಲೇಖನ ನಾನು ಬರೆದದ್ದು 2008ರಲ್ಲಿ. ಅಷ್ಟರಲ್ಲೇ ಕನ್ನಡದ ಅನೇಕ ಟೆಕ್ಕಿಗಳು ಟ್ವೀಟರ್ ಬಳಸುತ್ತಿದ್ದರು. ನಂತರ ಅನೇಕ ಕಾಲೇಜುಗಳಲ್ಲಿ ನಾನು ಟ್ವೀಟರ್ ಹಾಗೂ ನ್ಯೂಮೀಡಿಯಾ ಕುರಿತು ಉಪನ್ಯಾಸ ನೀಡಿದ್ದೇನೆ. I am one of the earliest (mostly first) Kannada Journalists to have twitter id. ಅಲ್ಲದೇ, ಟ್ವೀಟರನ್ನು ಕನ್ನಡಪ್ರಭದಲ್ಲೂ, ಸುವರ್ಣ ನ್ಯೂಸಲ್ಲೂ ಸಿಕ್ಕಾಪಟ್ಟೆ ಬಳಸಿಕೊಂಡಿದ್ದೇನೆ. ಇಷ್ಟಕ್ಕೂ ಕನ್ನಡಪ್ರಭದಲ್ಲಿ ಟ್ವಿಭಾಷಿತ ಆರಂಭವಾಗುವುದಕ್ಕೂ ಮೊದಲೇ, ನಾನು ಉದಯವಾಣಿ ಸೇರುವುದಕ್ಕೂ ಮೊದಲೇ, ಟ್ವೀಟರ್ ಕೋಟ್ ಎನ್ನುವ ಚುಟುಕು ಅಂಕಣ ಉದಯವಾಣಿಯಲ್ಲೇ ಇತ್ತು. ಇನ್ನು ಪುಟಕ್ಕೊಂದು ಪಂಚ್, ಹಾಸ್ಯ ಪ್ರಶ್ನೋತ್ತರದ ಬಗ್ಗೆ ಹೇಳುವುದಾದರೆ ಅವು ನಾನು ಹುಟ್ಟುವುದಕ್ಕೂ ಮೊದಲೇ ಕನ್ನಡ ಪತ್ರಿಕೋದ್ಯಮದಲ್ಲಿ ಇತ್ತು. ಹಾಗಾಗಿ,, ಇವನ್ನೆಲ್ಲ ಯಾರಿಗೋ ಒಬ್ಬರಿಗೆ ಪೇಟೆಂಟ್ ಕೊಡುವುದು ಸರಿಯಲ್ಲ ಅಂತ ನನ್ನ ಭಾವನೆ. ಆರೋಪ ಮಾಡುವವರು ಈ ಸ್ಪಷ್ಟೀಕರಣವನ್ನೆಲ್ಲ ಒಪ್ಪಲಿಕ್ಕಿಲ್ಲ. ಅವರಿಗೆ ಇನ್ನೇನಾದರೂ ಕೊಂಕು ಕಂಡೇ ಕಾಣುತ್ತದೆ. ನಾವು ನಡೆಯುತ್ತಿರುತ್ತೇವೆ ನೋಡಿ... ಎಲ್ಲೂ ಎಡವುವುದೇ ಇಲ್ಲ ಅನ್ನುವ ಭ್ರಮೆ ನನಗಿಲ್ಲ.

ಕೊನೆಯದಾಗಿ – ನಾನಾಗಲೀ, ನಮ್ಮ ಪತ್ರಿಕೆಯಾಗಲೀ ಯಾರೊಂದಿಗೂ ಕಾಲು ಕೆರೆದುಕೊಂಡು ಸ್ಪರ್ಧೆಗೆ ಇಳಿದಿಲ್ಲ ಎಂದು ಸ್ಪಷ್ಟಪಡಿಸಿಬಿಡುತ್ತೇನೆ. ನಮಗೆ ನಂಬರ್ 1 ಪ್ರಸರಣ ಹೊಂದಿದ ಪತ್ರಿಕೆ ಆಗುವ ಬಯಕೆಯೂ ಇಲ್ಲ. ಅಂಥ ROI ಸ್ಕೀಮ್ ಕೂಡ ನಮ್ಮದಲ್ಲ. Our objective is to give the best possible content mix for our target readers. And ದಿನಾ ದಿನಾ ನೋಡ್ತಾ ಇರಿ... We will evolve into a better newspaper :-)