ದೇಶದಲ್ಲಿ ಕೋಳಿ ಜ್ವರ, ಇಲಿ ಜ್ವರ, ಚಿಕನ್ ಗುನ್ಯಾ, ಏಡ್ಸ್, ಹಾಗೂ
ಮೆರಿಟ್ ನಿರ್ಮೂಲನೆ ಆಗಬೇಕು - ರಾಜಕಾರಣಿ ಉತ್ರ
ನೀಮ ಮೆರಿಟ್ ವಿದ್ಯಾರ್ಥಿಗಳು ನಮ್ಮ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಕಲಿಯುತ್ತೀರಿ. ಆಮೇಲೆ, ಲಕ್ಷಾಂತರ ರುಪಾಯಿ ಸಂಬಳ ಅಂತ ಫಾರಿನ್ನಿಗೆ ಹೋಗ್ತೀರಿ. ಮೆರಿಟ್ ಹೆಚ್ಚಾದಷ್ಟೂ ನೀಮ ಫಾರಿನ್ನಿಗೆ ಹೋಗೋದು ಹೆಚ್ಚು. ಆದರೆ, ಮೆರಿಟ್ ಇಲ್ಲದ ವಿದ್ಯಾರ್ಥಿಗಳು ದೇಶದಲ್ಲೇ ಉಳಿದು ತಾಯ್ನಾಡಿನ ಸೇವೆ ಮಾಡ್ತಾರೆ. ಅಂಥವರಿಗೇ ಸೀಟು ನೀಡಬೇಕಾದ್ದು ನಮ್ಮಂಥ ದೇಶಪ್ರೇಮಿಗಳ ಕರ್ತವ್ಯ ತಾನೆ?
ಮೆರಿಟ್ ಮಹಾಶಯರಿಗೆ ದೊಡ್ಡ ನಮಸ್ಕಾರ,
ಕಳೆದ ವಾರ ರಾಜ್ಯ ಮತ್ತು ಕೇಂದ್ರದಲ್ಲಿ ನಾಮ ಮಂಡಿಸಿರತಕ್ಕಂಥ ಮೀಸಲಾತಿ ನೀತಿಗೆ ನಿಮ್ಮ ಪ್ರತಿಭಟನೆ ಪತ್ರ ನಮ್ಮ ಕೈತಲುಪಿದೆ. ನಾಮ ಇನ್ನೂ ಈ ಮಂಡಲ ವರದಿಯನ್ನು ಅನುಷ್ಠಾನ ಮಾಡಿಲ್ಲ. ಆಗಲೇ, ನೀಮ ಕೆಂಡಾ- ಮಂಡಲ ಆಗಿದ್ದೀರಿ. ಹೀಗಾಗತಕ್ಕಂಥದ್ದು ಸಹಜವೇ. ಕೂಲ್ ಡೌನ್ ಸ್ವಾಮಿ. ನಿಮ್ಮ ಪತ್ರಕ್ಕೆ ಇಲ್ಲಿದೆ ನಮ್ಮ ಉತ್ರ.
ನಾಮ ಈ ಮೀಸಲಾತಿ ನೀತಿ ಅನುಷ್ಠಾನ ಮಾಡಲು ಹೊರಟಿದ್ದಕ್ಕೆ ಪ್ರಜಾಪ್ರಭುತ್ವಾತ್ಮಕ ಕಾರಣವಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಹಾಗಾಗಿ, ಮೆರಿಟ್ ವಿದ್ಯಾರ್ಥಿಗಳು ಮೇಲಲ್ಲ. ಮೆರಿಟ್ಟಿಲ್ಲದ ವಿದ್ಯಾರ್ಥಿಗಳು ಕೀಳಲ್ಲ! ಇಷ್ಟು ವರ್ಷ ಮೆರಿಟ್ ವಿದ್ಯಾರ್ಥಿಗಳಿಂದ ಮೆರಿಟ್ಟಿಲ್ಲದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿತ್ತು. ಒಟ್ಟೂ ಸೀಟುಗಳ ಸಿಂಹಪಾಲನ್ನು ಮೆರಿಟ್ ವಿದ್ಯಾರ್ಥಿಗಳೇ ಕಬಳಿಸುತ್ತಿದ್ದರು. ಈ ರೀತಿ ಎಲ್ಲಾ ಶಾಲಾ ಕಾಲೇಜುಗಳ ಸೀಟುಗಳನ್ನೂ ಮೆರಿಟ್ ವಿದ್ಯಾರ್ಥಿಗಳೇ ತಿಂದು ತೇಗಿದರೆ, ಮೆರಿಟ್ಟಿಲ್ಲದ ವಿದ್ಯಾರ್ಥಿಗಳು ಏನು ತಿನ್ನಬೇಕು ಸ್ವಾಮಿ?
ಹಾಗಾಗಿ ಈ ಮೆರಿಟ್ ಎನ್ನತಕ್ಕಂಥದ್ದು ಒಂದು ಸಮಾಜಿಕ ಪಿಡುಗಾಗಿದೆ! ಆದ್ದರಿಂದ, ನಾಮ ದೇಶದಲ್ಲಿನ ’ಮೆರಿಟ್’ ಪಿಡುಗನ್ನೇ ನಿರ್ಮೂಲನ ಮಾಡಲು ಪಣ ತೊಟ್ಟಿದ್ದೇವೆ. ಸಿಡುಬು, ಪೋಲಿಯೋ, ಪ್ಲೇಗ್, ಏಡ್ಸ್, ಕ್ಷಯ, ಇಲಿಜ್ವರ, ಕೋಳಿಜ್ವರ, ಚಿಕನ್‌ಗುನ್ಯಾ ಥರ ಮೆರಿಟ್ ಎನ್ನತಕ್ಕಂಥ ಹೆಮ್ಮಾರಿಯನ್ನೂ ನಾಮ ದೇಶದಿಂದ ಸಂಪೂರ್ಣ ತೊಡೆದು ಹಾಕಬೇಕಾಗಿದೆ!
ಕೆಲವೇ ವರ್ಷಗಳಲ್ಲಿ ಯಾರೂ ’ಮೆರಿಟ್’ ಎನ್ನತಕ್ಕಂಥ ಶಬ್ದವನ್ನೇ ಉಚ್ಚರಿಸದಂಥ ಪರಿಸ್ಥಿತಿ ನಿರ್ಮಾಣ ಮಾಡುತ್ತೇವೆ ಎನ್ನತಕ್ಕಂಥ ಭರವಸೆಯನ್ನು ನಾಮ ನೀಡಲು ಬಯಸಿದ್ದೇವೆ.
ಇನ್ನೊಂದು ಪ್ರಜಾಸತ್ತಾತ್ಮಕ ಕಾರಣ ನೋಡಿ. ಈ ವ್ಯವಸ್ಥೆಯಲ್ಲಿ ಯಾವತ್ತೂ ಬಹುಮತಕ್ಕೇ ಜಯ. ಈ ದೇಶದ ಅಂಕಿಸಂಕಿಯನ್ನು ಗಮನಿಸಿ. ಮೆರಿಟ್ ವಿದ್ಯಾರ್ಥಿಗಳು ಹಾಗೂ ಮೆರಿಟ್ ಇಲ್ಲದ ವಿದ್ಯಾರ್ಥಿಗಳಲ್ಲಿ ಯಾರ ಸಂಖ್ಯೆ ಹೆಚ್ಚಿದೆ? ಸಿಂಪಲ್ಲಾಗಿ ಕಳೆದ ೧೦ ವರ್ಷಗಳ ಎಸ್‌ಎಸ್‌ಎಲ್‌ಸಿ, ಪಿಯೂಸಿ ಫಲಿತಾಂಶವನ್ನೇ ನೋಡಿ. ಪರೀಕ್ಷೆಗೆ ಕುಳಿತವರಲ್ಲಿ ಶೇ.೫೩ರಿಂದ ಶೇ.೬೩ರಷ್ಟು ಜನ ನಪಾಸಾಗುತ್ತಾರೆ. ಅಂದರೆ, ಪಾಸಾಗುವವರಿಗಿಂತ ನಪಾಸಾಗುವವರ ಸಂಖ್ಯೆಯೇ ಹೆಚ್ಚು. ಪಾಸಾದವರಲ್ಲೂ ಸ್ವಂತ ಮೆರಿಟ್ ಮೇಲೆ ಪಾಸಾಗುವವರ ಸಂಖ್ಯೆ ಇನ್ನೂ ಕಡಿಮೆ. ಅಲ್ಲದೇ, ಬರೀ ಪಾಸಾದವರನ್ನು ಮೆರಿಟ್ ವಿದ್ಯಾರ್ಥಿಗಳು ಎನ್ನಲಾಗುತ್ತದೆಯೇ? ಕನಿಷ್ಠ ೭೦-೮೦ ಪರ್ಸೆಂಟ್ ಅಂಕ ಪಡೆದವರನ್ನು ಮೆರಿಟ್ ಸಾಲಿಗೆ ಸೇರಿಸಬಹುದು. ಇಂಥವರ ಸಂಖ್ಯೆ ದೇಶದಲ್ಲಿ ಎಷ್ಟಿದೆ ಮಹಾ? ವಿಶ್ವಾಸಮತ ಕೋರಿದರೆ, ಮೆರಿಟ್ ವಿದ್ಯಾರ್ಥಿಗಳು ಎಂದೂ ಬಹುಮತ ಸಾಬೀತು ಮಾಡಲು ಸಾಧ್ಯವಿಲ್ಲ! ಆದ್ದರಿಂದ, ಮೆರಿಟ್ ಇಲ್ಲದಿದ್ದರೂ ಬಹುಮತ ಇರುವ ವಿದ್ಯಾರ್ಥಿಗಳಿಗೇ ಕಿರೀಟ ತೊಡಿಸಬೇಕು ಎನ್ನತಕ್ಕಂಥದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಸಿದ್ಧಾಂತ. ಅಂದರೆ, ಮೆರಿಟ್‌ರಹಿತ ವಿದ್ಯಾರ್ಥಿಗಳಿಗೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಿಂಹಪಾಲು ಸೀಟು ಸಿಗಬೇಕು ಎನ್ನತಕ್ಕಂಥದ್ದು ಪ್ರಜಾತಂತ್ರ ವ್ಯವಸ್ಥೆಯ ಮೂಲ ಪಾಠ.
ಅಷ್ಟೇ ಅಲ್ಲ, ಈ ಮೆರಿಟ್‌ಗೆ, ಶಿಕ್ಷಣದಲ್ಲಿ ಯಾಕೆ ಆದ್ಯತೆ ನೀಡಬೇಕು? ಎನ್ನತಕ್ಕಂಥದ್ದು ನಮ್ಮ ಮೂಲಭೂತ ಪ್ರಶ್ನೆ.
ನೀಮ ಮೆರಿಟ್ ವಿದ್ಯಾರ್ಥಿಗಳು, ನಮ್ಮ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಕಲಿಯುತ್ತೀರಿ. ಆಮೇಲೆ, ಲಕ್ಷಾಂತರ ರುಪಾಯಿ ಸಂಬಳ ಸಿಗುತ್ತೆ ಅಂತ ಫಾರಿನ್‌ಗೆ ಹಾರಿ ಹೋಗುತ್ತೀರಿ. ವಿದೇಶಿ ಕಂಪನಿಗಳನ್ನು ಶ್ರೀಮಂತಗೊಳಿಸಲು ನೀಮ ದುಡಿಯುತ್ತೀರಿ. ಅಲ್ಲಿನ ಸರ್ಕಾರಗಳಿಗೆ ನೆರಮ ನೀಡುತ್ತೀರಿ. ಮೆರಿಟ್ ಹೆಚ್ಚಾದಂತೆ ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚು. ಮೆರಿಟ್ ಕಡಿಮೆ ಆದಂತೆ ದೇಶದಲ್ಲಿ ಉಳಿದು ತಾಯ್ನಾಡಿಗೆ ಸೇವೆ ಸಲ್ಲಿಸುವವರ ಸಂಖ್ಯೆ ಅಧಿಕ. ಆದ್ದರಿಂದ ತಾಯ್ನಾಡಿಗೆ ಸೇವೆ ಸಲ್ಲಿಸುವ ಮೆರಿಟ್‌ರಹಿತ ವಿದ್ಯಾರ್ಥಿಗಳಿಗೇ ಆದ್ಯತೆ ನೀಡಬೇದ್ದು ನಮ್ಮಂಥ ದೇಶಪ್ರೇಮಿಗಳ ಕರ್ತವ್ಯ. ಏನಂತೀರಿ?
ಕೋಟಾ ಕೊಟ್ಟಿದ್ದು ತನಗೆ,
ಮೆರಿಟ್ಟಿಗೆ ಮುಚ್ಚಿಟ್ಟಿದ್ದು ಪರರಿಂಗೆ,
ಎಂದು ಸ್ವತಃ ಸರ್ವಜ್ಞನೇ ಹೇಳಿದ್ದಾನೆ ಗೊತ್ತಲ್ಲ!
ಈ ಮೆರಿಟ್ಟಿನಿಂದಾಗಿ ಬರೀ ಶೈಕ್ಷಣಿಕ ಅಸಮಾನತೆಯಲ್ಲ. ಆರ್ಥಿಕ ಅಸಮಾನತೆಯೂ ಉಂಟಾಗುತ್ತದೆ. ಯಾಕೆಂದರೆ, ಮೆರಿಟ್ ಇರುವ ವಿದ್ಯಾರ್ಥಿಗಳು, ಒಳ್ಳೊಳ್ಳೆ ಕಂಪನಿ ಸೇರಿ, ಒಳ್ಳೊಳ್ಳೆ ಸಂಬಳ ಪಡೆಯುತ್ತಾರೆ. ಆದರೆ, ಮೆರಿಟ್ ಇಲ್ಲದ ವಿದ್ಯಾರ್ಥಿಗಳಿಗೆ ಸಂಬಳ ಹಾಗಿರಲಿ, ಪುಗಸಟ್ಟೆ ಬರ್ತೀನಿ ಅಂದರೂ ಯಾರೂ ಕೆಲಸ ಕೊಡುಮದಿಲ್ಲ. ಇದರಿಂದ ಈ ದೇಶದ ಅಲ್ಪಸಂಖ್ಯಾತ ಮೆರಿಟ್ ವಿದ್ಯಾರ್ಥಿಗಳಿಗೆ ಹಣದುಬ್ಬರ. ಬಹುಸಂಖ್ಯಾತ ಮೆರಿಟ್‌ರಹಿತ ವಿದ್ಯಾರ್ಥಿಗಳಿಗೆ ಹಣದ-ಬರ ಆಗಿ ದೇಶದಲ್ಲಿ ಆರ್ಥಿಕ ಅಸಮತೋಲನ ಉಂಟಾಗುತ್ತದೆ. ಇದನ್ನು ತಪ್ಪಿಸಬೇಕೆಂದರೆ, ದೇಶದಲ್ಲಿ ಮೆರಿಟ್ ವಿದ್ಯಾರ್ಥಿಗಳು ಹೆಚ್ಚದಂತೆ ಜಾಗ್ರತೆ ವಹಿಸಬೇಕು.
ಈ ಎಲ್ಲ ಕಾರಣಗಳಿಗಾಗಿ, ನಾಮ ಹೊಸ ಹೊಸ ಶೈಕ್ಷಣಿಕ ಸುಧಾರಣೆಗಳನ್ನು ತರುತ್ತಿದ್ದೇವೆ. ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಗೊಂದಲ ಉಂಟುಮಾಡಿ ಮೆರಿಟ್ ವಿದ್ಯಾರ್ಥಿಗಳಾಗಲು ಏನನ್ನು ಕಲಿಯಬೇಕು ಎಂಬುದೇ ಅರ್ಥವಾಗದಂತೆ ಮಾಡುತ್ತಿದ್ದೇವೆ. ಪ್ರತಿವರ್ಷ ಬೇರೆ ಬೇರೆ ರೀತಿಯ ಪರೀಕ್ಷಾ ಪದ್ಧತಿಯನ್ನು ಅಳವಡಿಸಿ ವಿದ್ಯಾರ್ಥಿಗಳನ್ನು ಕಂಗಾಲು ಮಾಡುತ್ತಿದ್ದೇವೆ. ಇಂಗ್ಲಿಷ್ ಮೀಡಿಯಂ ಮತ್ತು ಕನ್ನಡ ಮೀಡಿಯಂ ಎನ್ನತಕ್ಕಂತ ವಿವಾದ ಸೃಷ್ಟಿ ಮಾಡಿ ಪಾಲಕರ ತಲೆ ಚಿಟ್ಟು ಹಿಡಿಯುವಂತೆ ಮಾಡಿದ್ದೇವೆ. ಶಾಲಾ ಕಾಲೇಜು ಪುಸ್ತಕಗಳಲ್ಲಿ ತಪುý್ಪ ತಪುý್ಪ ಮಾಹಿತಿ ಮುದ್ರಿಸಿ ವಿದ್ಯಾರ್ಥಿಗಳು ದಾರಿತಪುý್ಪವಂತೆ ಪ್ರಯತ್ನಿಸುತ್ತಿದ್ದೇವೆ. ಪತ್ರಿಕೆಗಳಲ್ಲಿ ಸಿಇಟಿ, ಕಾಮೆಡ್, ಸೀಟು ಹಂಚಿಕೆ, ಮುಂತಾದ ವಿಷಯಗಳ ಕುರಿತು ದಿನಕ್ಕೊಂದು ರೀತಿಯ ಹೇಳಿಕೆ ಪ್ರಕಟವಾಗುವಂತೆ ಮಾಡಿ ನಿಜ ಏನು ಎನ್ನತಕ್ಕಂಥದ್ದು ಯಾರಿಗೂ ಅರ್ಥವಾಗದ ಪರಿಸ್ಥಿತಿಯನ್ನು ಕಾಯ್ದುಕೊಂಡುಬಂದಿದ್ದೇವೆ.
ಅಷ್ಟೇ ಅಲ್ಲ. ಮೆರಿಟ್ ಇಲ್ಲದ ವಿದ್ಯಾರ್ಥಿಗಳಿಗೆ ಗರಿಷ್ಠ ರ್ಯಾಂಕ್ ನೀಡುತ್ತಿದ್ದೇವೆ. ಉದಾಹರಣೆಗೆ, ಎಂಬಿಬಿಎಸ್ ಪರೀಕ್ಷೆ ಪಾಸು ಮಾಡಲು ೧೦ ವರ್ಷ ತೆಗೆದುಕೊಂಡ ಹಲವಾರು ಮೆರಿಟ್‌ರಹಿತ ವಿದ್ಯಾರ್ಥಿಗಳಿಗೆ ಉನ್ನತ ರ್ಯಾಂಕ್ ನೀಡಿ ನಿಜವಾಗಲೂ ಉನ್ನತ ಅಂಕ ಪಡೆದಿದ್ದ ವಿದ್ಯಾರ್ಥಿಗಳಿಗೆ ಕನಿಷ್ಠ ರ್ಯಾಂಕ್ ನೀಡಿದ್ದೇವೆ. ಈ ಮೆರಿಟ್ ನಿರ್ಮೂಲನಾ ಪದ್ಧತಿಯನ್ನು ರಾಜ್ಯದ ಅತ್ಯಂತ ಪ್ರತಿಷ್ಠಿತ ರಾಜೀವ್‌ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲೇ ಅಳವಡಿಸಿದ್ದೇವೆ. ಉಳಿದ ವಿ.ವಿ.ಗಳಲ್ಲೂ ಇದೇ ವ್ಯವಸ್ಥೆಯಿದೆ. ಕೆಪಿಎಸ್‌ಸಿ, ಐಎಎಸ್ ಪರೀಕ್ಷೆಯಲ್ಲೂ ನಾಮ ರ್ಯಾಂಕ್ ಹೆಚ್ಚು ಕಡಿಮೆ ಮಾಡಿ ಮೆರಿಟ್ ತಡೆಗೆ ಯಶಸ್ವಿಯಾಗಿದ್ದೇವೆ. ಹೀಗೆ, ನಾಮ ಕೈಗೊಂಡಿರುವ ಎಲ್ಲಾ ಮೆರಿಟ್ ನಿರ್ಮೂಲನಾ ಕ್ರಮಮಗಳನ್ನು ಇಲ್ಲಿ ವಿವರಿಸಲು ಆಗುಮದಿಲ್ಲ.
ಅಲ್ಲಾ ಮೆರಿಟ್ ಮಹನೀಯರೇ,
ಈಗ ನಮ್ಮ ಶೈಕ್ಷಣಿಕ ಕ್ಷೇತ್ರದ ಸುಧಾರಣೆ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದೀರಲ್ಲ. ನಾಮ ನಿಮಗೆ ಈಗ ನೆನಪಾದೆವಾ? ಚುನಾವಣೆಯಾದಾಗ ನಮ್ಮ ಕುರಿತು ಸ್ವಲ್ಪವಾದರೂ ಚಿಂತಿಸಿದಿರಾ? ನೀವೇನು ಓಟು ಹಾಕ್ತೀರಾ? ನೀಮ ಮೆರಿಟ್ಟಿದೆ ಅಂತ ನಿಮ್ಮ ಸಂಬಳ, ದುಡ್ಡು ಲೆಕ್ಕ ಮಾಡಿಕೊಂಡು ಮನೆಯಲ್ಲಿ ಕುಳಿತಿರ್ತೀರಿ. ಮತದಾನ ಕೇಂದ್ರದ ಮುಂದೆ ಯಾರು ಕ್ಯೂ ನಿಲ್ತಾರೆ ಅಂತ ಮನೆಯಲ್ಲೋ, ಕಚೇರಿಯಲ್ಲೋ ಆರಾಮವಾಗಿರ್ತೀರಿ. ನಿಮ್ಮಂಥವರು ನಮಗೆ ಓಟ್ ಹಾಕ್ತೀರಿ ಅಂತ ನಂಬಿಕೊಂಡ್ರೆ ನಾಮ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾ?
ನಮಗೆ ಓಟ್ ಕೊಡೋದು ಯಾರು ಅಂತ ನಮಗೆ ಚೆನ್ನಾಗಿ ಗೊತ್ತು. ನಾಮ ಅವರನ್ನು ಚೆನ್ನಾಗಿ ನೋಡಿಕೊಳ್ತೇವೆ. ನಮಗೆ ನಿಮ್ಮ ಓಟೂ ಬೇಡ. ಮೆರಿಟ್ಟೂ ಬೇಡ. ಬೇಕಾದರೆ, ಮೆರಿಟ್ಟಿಗೆ ಮರ್ಯಾದೆ ಕೊಡುವ ರಾಜಕಾರಣಿಯನ್ನೇ ಮುಂದಿನ ಎಲೆಕ್ಷನ್‌ನಲ್ಲಿ ಆರಿಸಿಕೊಳ್ಳಿ. ಯಾರು ಬ್ಯಾಡ ಅಂತಾರೆ ಸ್ವಾಮಿ. ಇದು ಪ್ರಜಾಪ್ರಭುತ್ವ. ಇಡೀ ವ್ಯವಸ್ಥೆ ಓಟಿನಿಂದಲೇ ನಡೆಯುತ್ತದೆ. ಇದ್ಯಾಕೆ ನಿಮ್ಮ ಮೆರಿಟ್ ಬುದ್ಧಿಗೆ ಹೊಳೆಯೋದಿಲ್ಲ ಸ್ವಾಮಿ?
ಇಂತಿ ಮೆರಿಟ್ ವಿರೋಧಿ
ಸರ್ವಪಕ್ಷ ರಾಜಕೀಯ ಒಕ್ಕೂಟ
Kannada Prabha issue dated April 10, 2006
Oh.. Merit Student? You Wouldn't Vote Us. We Know.
--
Showing posts with label Quota. Show all posts
Showing posts with label Quota. Show all posts
Tuesday, April 11, 2006
ಮೆರಿಟ್ ಸ್ಟೂಡೆಂಟಂತೆ! ನೀವೇನು ನಮಗೆ ಓಟ್ ಕೊಡ್ತೀರಾ?
Subscribe to:
Posts (Atom)