ಭಾಗ - 2
ಚಿರಂಜೀವಿ ವೆಡ್ಸ್ ಚಿರಂಜೀವಿ
ಚಿರಂಜೀವಿ ವೆಡ್ಸ್ ಚಿರಂಜೀವಿ
ಮದುವೆ ಹಾGay ಸುಮ್ಮನೆ!
ನಿಮಗೆ ಸಲಿಂಗ ವಿವಾಹ ಗೊತ್ತಿರಬಹುದು. ಆದರೆ, ‘ಸಿವಿಲ್ ಯೂನಿಯನ್’ ಅಂದರೆ ಗೊತ್ತೇ? ಗಂಡು-ಗಂಡನ್ನು, ಹೆಣ್ಣು-ಹೆಣ್ಣನ್ನು ಮದುವೆಯಾದಾಗ ಅಮೆರಿಕ ಮತ್ತಿತರ ಕೆಲ ದೇಶಗಳಲ್ಲಿ ಸಿಗುವ ಹೊಸ ವೈವಾಹಿಕ ಮಾನ್ಯತೆ ಇದು. ಅಂದಹಾಗೆ, ಅಮೆರಿಕದಲ್ಲಿ ಮೊನ್ನೆ ಮೊನ್ನೆ ಚುನಾವಣೆ ನಡೆಯಿತಷ್ಟೇ. ಈ ಚುನಾವಣೆ ಅಮೆರಿಕ ಅಧ್ಯಕ್ಷರ ಆಯ್ಕೆಗಾಗಿ ಮಾತ್ರ ನಡೆಯಿತು ಅಂದುಕೊಳ್ಳಬೇಡಿ. ಇದೇ ಚುನಾವಣೆಯ ದಿನ ಒಬಾಮಾಗೆ ಮತ ಹಾಕುವ ಜೊತೆಯಲ್ಲೇ ಸಲಿಂಗ ವಿವಾಹ ಬೇಕೋ ಬೇಡವೋ ಎನ್ನುವ ಕುರಿತೂ ಅಮೆರಿಕದ ಮೂರು ರಾಜ್ಯದ ಜನ ಮತಚಲಾಯಿಸಿದರು!
ರಂಗೇನ ಹಳ್ಳಿಯಾಗೆ,
ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇ ಗೌಡ ಮೆರೆದಿದ್ದ
ನಾನು ಚಿಕ್ಕವನಿದ್ದಾಗ, ಪ್ರತಿದಿನವೂ ರೇಡಿಯೋದಲ್ಲಿ ಈ ಹಾಡು ಕೇಳುತ್ತಿದ್ದೆ. ಆಗೆಲ್ಲ ನಾನೂ ಧ್ವನಿ ಸೇರಿಸಿ ಗುನುಗುತ್ತಿದ್ದೆ. ನಂತರ, ಅಂತ್ಯಾಕ್ಷರಿ ಆಡುವಾಗ ‘ರ’ ಅಕ್ಷರ ಸಿಕ್ಕರೆ ಸಾಕು, ಈ ಹಾಡು ಹಾಡುವುದು ಗ್ಯಾರಂಟಿ. ಆಗೆಲ್ಲ, ರಂಗೇನ ಹಳ್ಳಿ, ರಂಗೇ ಗೌಡ ಎನ್ನುವಾಗ ಏನೂ ವಿಶೇಷ ಅನ್ನಿಸುತ್ತಿರಲಿಲ್ಲ. ಆದರೆ, ಮೊನ್ನೆ ಅಮೆರಿಕಕ್ಕೆ ಹೋಗಿ ಬಂದ ಮೇಲೆ, ಯಾಕೋ ರಂಗೇನ ಹಳ್ಳಿ ‘ರಂGayನ ಹಳ್ಳಿಯಂತೆಯೂ’ ರಂಗೇ ಗೌಡ ‘ರಂGay ಗೌಡನಂತೆಯೂ’ ಕಂಡು ಕಿರಿಕಿರಿ ಎನಿಸತೊಡಗಿದೆ. ಅದರಲ್ಲೂ ರಂಗಾದ ರಂಗೇ ಗೌಡ ಅನ್ನುವಾಗ ಅತನೊಬ್ಬ ಪಕ್ಕಾ Gay (ಸಲಿಂಗಕಾಮಿ) ಎನ್ನುವ ಚಿತ್ರಣ ಮೂಡತೊಡಗಿದೆ. ಇದು ‘ಗೇ’ವರಾಣೆ ನನ್ನ ತಪ್ಪಲ್ಲ!
ಕಳೆದ ಒಂದು ತಿಂಗಳ ಅಮೆರಿಕ ಪ್ರವಾಸದಲ್ಲಿ Gay (ಸಲಿಂಗಕಾಮಿ), Gay Marriage (ಸಲಿಂಗ ವಿವಾಹ), Gay Rights (ಸಲಿಂಗಿ ಹಕ್ಕು), Gay Movements (ಸಲಿಂಗಿ ಆಂದೋಲನ) ಕುರಿತು ನಾನು ಕೇಳದ, ಓದದ, ಮಾತನಾಡದ ದಿನವೇ ಇಲ್ಲ. ಹಾಗಾ‘ಗೇ’ ನನ‘ಗೆ’ ‘ಗೇ’ಗಳೆಲ್ಲ Gayಗಳಂತೆ ಕಾಣತೊಡಗಿದೆ.
ತಮಾಷೆಯಲ್ಲ, ಅಕ್ಟೋಬರ್ ತಿಂಗಳಲ್ಲಿ ಅಮೆರಿಕದಲ್ಲಿ ಸಾರ್ವತ್ರಿಕವಾಗಿ ಚರ್ಚೆಯಾದ ಪ್ರಮುಖ ವಿಷಯಗಳು ನಾಲ್ಕು:
೧. ಬುಷ್, ಜಾನ್ ಮೆಕೇನ್ ಮತ್ತು ‘ಮೊದ್ದುಮಣಿ’ ಸಾರಾ ಪಾಲಿನ್
೨. ಒಬಾಮಾ ಮತ್ತು ಆತನ ‘ಭಯೋತ್ಪಾದಕ’ ಮಿತ್ರ ಜೋ ದ ಪ್ಲಂಬರ್
೩. ಆರ್ಥಿಕ ಹಿಂಜರಿತ ಮತ್ತು ಹೆಚ್ಚಿದ ಉದ್ಯೋಗಿಗಳ ವಜಾ
೪. ಸಲಿಂಗ ಮದುವೆ ಮತ್ತು ಅದರ ಪರ-ವಿರೋಧ ಚುನಾವಣಾ ಪ್ರಚಾರ
ಕಳೆದ ಆರು ತಿಂಗಳಿಂದ ಅಮೆರಿಕದಲ್ಲಿ ಒಬಾಮ ಕುರಿತು ಎಷ್ಟು ಸಾರ್ವಜನಿಕ ಚರ್ಚೆ ನಡೆದಿದೆಯೋ, ಹೆಚ್ಚು ಕಡಿಮೆ ಅದರ ಅರ್ಧದಷ್ಟು ಚರ್ಚೆ ಸಲಿಂಗ ವಿವಾಹದ ಕುರಿತು ನಡೆದಿದೆ. ಅದರಲ್ಲೂ ಕ್ಯಾಲಿಫೋರ್ನಿಯಾ, ಫ್ಲೋರಿಡಾ ಮತ್ತು ಅರಿಝೋನಾ ರಾಜ್ಯಗಳಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಬ್ಯಾಲಟ್‌ನಲ್ಲೇ ಸಲಿಂಗ ಮದುವೆ ಪರ-ವಿರೋಧ ಮತದಾನವೂ ನಡೆದಿದೆ. ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚಾ ವೇದಿಕೆಯಲ್ಲಿ ಒಬಾಮಾ ಮತ್ತು ಮೆಕೇನ್ ಸಲಿಂಗ ವಿವಾಹದ ಕುರಿತು ಗಂಭೀರ ಚರ್ಚೆ ನಡೆಸಬೇಕಾಯಿತು.
ಅಂದರೆ, ಅಮೆರಿಕದಲ್ಲಿ ಸಲಿಂಗ ವಿವಾಹದ ಬಗ್ಗೆ ಎಷ್ಟು ಗದ್ದಲ ನಡೆಯುತ್ತಿದೆ ಎಂದು ನಿಮಗೆ ಅರ್ಥವಾಗಬಹುದು.
ಅಲ್ಲಿGay... ಇಲ್ಲಿGay!
ಹಾ‘ಗೆ’ ನೋಡಿದರೆ, ಸಲಿಂಗ ವಿವಾಹದ ವಿವಾದ ಅಮೆರಿಕಾ‘ಗೇ’ ಸೀಮಿತವಲ್ಲ. ಭಾರತವೂ ಸೇರಿದಂತೆ ವಿಶ್ವಾದ್ಯಂತ ಈಗ ಸಲಿಂಗ ವಿವಾಹ ಕುರಿತ ಚರ್ಚೆ, ಹೋರಾಟ ನಡೆಯುತ್ತಿದೆ.
ಅಂದಹಾ‘ಗೆ’, ಇತ್ತೀಚೆ‘ಗೆ’ ಹಿಂದಿ ಸಿನಿಮಾಗಳಿ‘ಗೆ’ ಹೋಗಿದ್ದೀರಾ? ಸಲಿಂಗಕಾಮ ಇಲ್ಲದ ಯಾವುದಾದರೂ ಸಿನಿಮಾ ಬಂದಿದೆಯೇ? ಮೊನ್ನೆ ಬಿಡುಗಡೆಯಾದ ಫ್ಯಾಷನ್ ಎಂಬ ಮಧುರ್ ಭಂಡಾರ್‌ಕರ್ ಚಿತ್ರದಲ್ಲಿ ಹಲವಾರು ಸಲಿಂಗಕಾಮಿಗಳಿದ್ದರೆ, ದೋಸ್ತಾನಾ ಎಂಬ ಚಿತ್ರದಲ್ಲಿ ಹೀರೋಗಳೇ ಸಲಿಂಗಕಾಮಿಗಳು! ಸ್ವತಃ ಸಲಿಂಗ ಕಾಮಿ ಎಂದು ‘ಪ್ರಚಾರಕ್ಕೆ’ ಗುರಿಯಾಗಿರುವ ಸೂಪರ್ ಹಿಟ್ ಹಿಂದಿ ಚಿತ್ರ ನಿರ್ದೇಶಕ ಕರಣ್ ಜೋಹರ್‌ಗೆ ಸಲಿಂಗಕಾಮಿಗಳಿಲ್ಲದ ಚಿತ್ರ ನಿರ್ದೇಶನ ಮಾಡಲು ಬರುವುದೇ ಇಲ್ಲವೇನೋ! ಗರ್ಲ್‌ಫ್ರೇಂಡ್ ಎಂಬ ಲೆಸ್ಬಿಯನ್ ಚಿತ್ರ ಸಲಿಂಗಕಾಮಿ ಹಿಂದಿ ಚಿತ್ರಕ್ಕೆ ಇನ್ನೊಂದು ಉದಾಹರಣೆ. ಕನ್ನಡ ಚಿತ್ರಗಳಲ್ಲಿ ಇನ್ನೂ ಈ ‘ಗೇ’ ಟ್ರೆಂಡ್ ಆರಂಭವಾಗಿಲ್ಲ, ಏಕೋ ಕಾಣೆ!
ರೂಮಿನೊಳGay ಹೊರGay
ಸಲಿಂಗರತಿ, ಸಲಿಂಗ ಕಾಮ ಇಂದು ನಿನ್ನೆಯದಲ್ಲ. ಆದರೆ, ಕಳೆದ ದಶಕದವರೆಗೂ ಸಲಿಂಗಕಾಮಿಗಳು ತಮ್ಮ ಸಂಬಂಧವನ್ನು ಗುಪ್ತವಾಗಿ ಇಟ್ಟುಕೊಳ್ಳುತ್ತಿದ್ದರು. ಹೋಮೋ ಸೆಕ್ಸ್ ಎಂಬುದು ಹೇಯ ಹಾಗೂ ನಾಚಿಗೆಗೇಡಿನ ವಿಷಯವಾಗಿತ್ತು. ಈಗ ಹಾಗಲ್ಲ. ಸಲಿಂಗ ಕಾಮ ನೈಸರ್ಗಿಕ ಕ್ರಿಯೆ. ಆದ್ದರಿಂದ ಅದು ಕೂಡ ಮಾನವ ಹಕ್ಕು ಎಂದು ವಾದಿಸಲಾಗುತ್ತಿದೆ. ಸಲಿಂಗಕಾಮಿಗಳು ಈಗ ಸಾರ್ವಜನಿಕವಾಗೇ ತಮ್ಮ ವಿಶೇಷತೆಯನ್ನು ಒಪ್ಪಿಕೊಳ್ಳತೊಡಗಿದ್ದಾರೆ. ಗಂಡು ಗಂಡನ್ನೂ, ಹೆಣ್ಣು ಹೆಣ್ಣನ್ನೂ ಮದುವೆಯಾಗಿ ಸಾರ್ವಜನಿಕವಾಗೇ ದಾಂಪತ್ಯ ನಡೆಸತೊಡಗಿದ್ದಾರೆ. ಕೆನಡಾ, ಸ್ಪೇನ್, ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ನೆದರ್‌ಲ್ಯಾಂಡ್‌ಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನ ಮನ್ನಣೆ ಇದೆ. ಇಸ್ರೇಲ್ ಹಾಗೂ ಫ್ರಾನ್ಸ್‌ನಲ್ಲಿ ವಿದೇಶೀ ನೋಂದಾಯಿತ ಸಲಿಂಗ ದಂಪತಿಗಳಿಗೆ ಕಾನೂನಿನ ಅಭ್ಯಂತರವಿಲ್ಲ.
ಆದರೆ, ಈ ‘ಸಲಿಂಗ ಸಂಬಂಧ’ ಬೆಡ್‌ರೂಮಿನ ಒಳGay ಇರುವ ತನಕ ತೊಂದರೆ ಇರಲಿಲ್ಲ. ನಾಲ್ಕು ಗೋಡೆಯಿಂದ ಹೊರಬಂದು ಸಲಿಂಗ ಕಾಮದ ಸಾರ್ವಜನಿಕ ಪ್ರದರ್ಶನ ಆರಂಭವಾದದ್ದರಿಂದಲೇ ವಿವಾದವೂ ಆರಂಭವಾಗಿದೆ. ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಸಲಿಂಗ ವಿವಾಹ ಕಾನೂನು ಬಾಹಿರ. ಇನ್ನೂ ಕೆಲವು ದೇಶಗಳಲ್ಲಿ ಸಲಿಂಗರತಿ ಕ್ರಿಮಿನಲ್ ಅಪರಾಧ.
ಈ ವಿವಾದದ ನಡುವೆಯೂ, ಕೆಲವು ದೇಶಗಳಲ್ಲಿ ಸಲಿಂಗರತಿ ಹಾಗೂ ಸಲಿಂಗ ದಾಂಪತ್ಯಕ್ಕೆ ಕಾನೂನಿನ ರಕ್ಷೆ ಹಾಗೂ ಮನ್ನಣೆ ದೊರೆತಿದೆ. ಮತ್ತೆ ಕೆಲವು ದೇಶಗಳಲ್ಲಿ ಕಾನೂನು ಮನ್ನಣೆ ಪಡೆಯಲು ಸಲಿಂಗ ಪ್ರಿಯರು ಹೋರಾಟ ನಡೆಸಿದ್ದಾರೆ. ಈ ಕುರಿತ ಪರ-ವಿರೋಧ ಹೋರಾಟ ಅತ್ಯಂತ ತೀವ್ರವಾಗಿ ನಡೆಯುತ್ತಿರುವುದು ಸದ್ಯಕ್ಕೆ ಅಮೆರಿಕದಲ್ಲಿ ಮಾತ್ರ.
ತ್ರಿಶಂಕು ಕಲ್ಯಾಣ
ಅಮೆರಿಕ ‘ಕೇಂದ್ರ ಸರ್ಕಾರದ’ ಪ್ರಕಾರವೂ ಸಲಿಂಗ ವಿವಾಹ ಕಾನೂನು ಬಾಹಿರ. ಒಂದು ಗಂಡು - ಹೆಣ್ಣಿನ ನಡುವೆ ನಡೆಯುವ ಮದುವೆ ಮಾತ್ರ ಕಾನೂನುಬದ್ಧ. ಗಂಡು-ಗಂಡು ಅಥವಾ ಹೆಣ್ಣು-ಹೆಣ್ಣಿನ ನಡುವೆ ಮದುವೆ ನಡೆದರೆ ಅದಕ್ಕೆ ಕಾನೂನಿನ ಒಪ್ಪಿಗೆಯಿಲ್ಲ. ಹಾಗೆಂದು, ಇಂತಹ ಮದುವೆಗೆ ಅಲ್ಲಿನ ಕೇಂದ್ರ ಸರ್ಕಾರ ನಿಷೇಧವನ್ನೇನೂ ಹೇರಿಲ್ಲ. ಸಲಿಂಗ ವಿವಾಹ ಮಾಡಿಕೊಂಡವರಿಗೆ ಪೆನ್‌ಶನ್, ಇಮಿಗ್ರೇಶನ್ ಸೇರಿದಂತೆ ಕೇಂದ್ರ ಸರ್ಕಾರದ ಯಾವುದೇ ಸೌಲಭ್ಯಗಳೂ ದೊರೆಯುವುದಿಲ್ಲ. ಅಷ್ಟೇ.
ಆದರೆ, ಅಮೆರಿಕದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಕಾನೂನಿದೆ. ಮೆಸಾಚುಸೆಟ್ಸ್ ಹಾಗೂ ಕನೆಕ್ಟಿಕಟ್ ಎಂಬ ಎರಡು ರಾಜ್ಯಗಳಲ್ಲಿ ಸಲಿಂಗ ವಿವಾಹ ಸಂಪೂರ್ಣ ಕಾನೂನುಬದ್ಧ. ಮೆಸಾಚುಸೆಟ್ಸ್‌ನಲ್ಲಿ, ೫ ವರ್ಷಗಳ ಹಿಂದೆಯೇ ಸಲಿಂಗ ವಿವಾಹಕ್ಕೆ ಕಾನೂನು ಮನ್ನಣೆ ದೊರಕಿದ್ದರೆ, ಕನೆಕ್ಟಿಕಟ್‌ನಲ್ಲಿ ಈ ವರ್ಷ ಅಕ್ಟೋಬರ್‌ನಲ್ಲಿ ಕಾನೂನಿನ ಆಶೀರ್ವಾದ ದೊರೆತಿದೆ.
ಈ ನಡುವೆ ಕ್ಯಾಲಿಫೋರ್ನಿಯಾದಲ್ಲಿ ತ್ರಿಶಂಕು ಪರಿಸ್ಥಿತಿ. ಈ ರಾಜ್ಯದಲ್ಲಿ, ಇದೇ ವರ್ಷ ಮೇ ತಿಂಗಳಿಂದ ಸಲಿಂಗ ವಿವಾಹಕ್ಕೆ ಕಾನೂನಿನ ಒಪ್ಪಿಗೆ ಸಿಕ್ಕಿತ್ತು. ಸಲಿಂಗ ಮದುವೆಯನ್ನು ತಪ್ಪು ಎನ್ನುವ ಅಧಿಕಾರ ಕಾನೂನಿಗೆ ಇಲ್ಲ ಎಂದು ಕ್ಯಾಲಿಫೋರ್ನಿಯಾ ಸುಪ್ರೀಂ ಕೋರ್ಟು ಮೇ ತಿಂಗಳಲ್ಲಿ ತೀರ್ಪು ನೀಡಿತ್ತು. ಇದಾದದ್ದೇ ತಡ, ಕೇವಲ ೫ ತಿಂಗಳಲ್ಲಿ ಕನಿಷ್ಠ ೧೮೦೦೦ ಸಲಿಂಗ ದಂಪತಿಗಳು ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ, ಕೋರ್ಟಿನ ಈ ತೀರ್ಪಿನ ವಿರುದ್ಧ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ದೊಡ್ಡ ವಿರೋಧದ ಅಲೆ ಎದ್ದಿತು. ಈ ಕುರಿತು ಕ್ಯಾಲಿಫೋರ್ನಿಯಾ ಸಂವಿದಾನಕ್ಕೇ ತಿದ್ದುಪಡಿ ತಂದು, ಸಲಿಂಗ ಮದುವೆಯನ್ನು ಕಾನೂನು ಬಾಹಿರಗೊಳಿಸುವ ಸಲುವಾಗಿ ಭಾರೀ ಜನಾಂದೋಲನ ನಡೆಯಿತು. ಪ್ರತಿಭಟನಾಕಾರರು ಸುಮಾರು ೧೦ ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿದರು. ಪರಿಣಾಮವಾಗಿ ಸಲಿಂಗ ವಿವಾಹದ ಕುರಿತು ಅಧಿಕೃತ ಜನಮತ (ರೆಫರೆಂಡಮ್) ಪಡೆಯಲು ಕ್ಯಾಲಿಫೋರ್ನಿಯಾ ಸರ್ಕಾರ ನಿರ್ಧರಿಸಿತು. ಅದಕ್ಕಾಗಿ ಮೊನ್ನೆ ನವೆಂಬರ್ ೪ರ ಅಧ್ಯಕ್ಷೀಯ ಚುನಾವಣೆಯ ಬ್ಯಾಲಟ್ ಜೊತೆಯೇ ಸಲಿಂಗ ವಿವಾಹದ ಕುರಿತೂ ಮತದಾನ ನಡೆಯಿತು. ಈ ಚುನಾವಣೆಯಲ್ಲಿ ಸಲಿಂಗ ವಿವಾಹದ ವಿರುದ್ಧ ಶೇ.೫೨ಕ್ಕಿಂತ ಹೆಚ್ಚು ಮತಗಳು ಚಲಾವಣೆಯಾದವು. ಅದೇ ರೀತಿ ಅರಿಝೋನಾ ಹಾಗೂ ಅಟ್ಲಾಂಟಾ ಚುನಾವಣೆಯಲ್ಲೂ (ರೆಫರೆಂಡಮ್‌ನಲ್ಲೂ) ಸಲಿಂಗ ವಿವಾಹಕ್ಕೆ ಸೋಲಾಗಿದೆ. ಸಲಿಂಗ ವಿವಾಹದ ಪರವಾಗಿದ್ದ ತನ್ನ ಹಿಂದಿನ ತೀರ್ಪನ್ನು ಪುನಾಪರಿಶೀಲಿಸಲು ಕ್ಯಾಲಿಫೋರ್ನಿಯಾ ಸುಪ್ರೀಂ ಕೋರ್ಟು ಒಪ್ಪಿಕೊಂಡಿದೆ. ಈ ಜನಾದೇಶ ಹಾಗೂ ತೀರ್ಪು ಆಧರಿಸಿ ಕ್ಯಾಲಿಫೋರ್ನಿಯಾ ಸರ್ಕಾರ ತನ್ನ ಸಂವಿಧಾನಕ್ಕೆ ತಿದ್ದುಪಡಿ ತರುವ ಸಾಧ್ಯತೆ ಇದೆ.
ಹಾಗಾದರೆ, ಈಗಾಗಲೇ ಕ್ಯಾಲಿಫೋರ್ನಿಯಾದಲ್ಲಿ ಮದುವೆಯಾಗಿರುವ ೧೮೦೦೦ಕ್ಕಿಂತ ಹೆಚ್ಚು ಸಲಿಂಗ ದಂಪತಿಗಳ ಗತಿ ಏನು? ಅವರ ವಿವಾಹ ಕಾನೂನು ಬಾಹಿರವೇ, ಕಾನೂನುಬದ್ಧವೇ? ಈ ಕುರಿತು ಕ್ಯಾಲಿಫೋರ್ನಿಯಾ ಸುಪ್ರೀಂ ಕೋರ್ಟು ತೀರ್ಪು ನೀಡಬೇಕಾಗಿದೆ.
ಅಷ್ಟೇ ಅಲ್ಲ, ಈ ಸಲಿಂಗ ದಂಪತಿಗಳಿಗೆ ಇನ್ನೂ ಒಂದು ಪೇಚಿದೆ. ಕ್ಯಾಲಿಫೋರ್ನಿಯಾ, ಮೆಸಾಚುಸೆಟ್ಸ್ ಹಾಗೂ ಕನೆಕ್ಟಿಕಟ್ ರಾಜ್ಯಗಳಲ್ಲಿ ಕಾನೂನು ಪ್ರಕಾರ ಮದುವೆಯಾಗಿದ್ದರೂ ಇವರು ಅಮೆರಿಕದ ಇತರ ರಾಜ್ಯಗಳಿಗೆ ಹೋದಾಗ ಇವರ ದಾಂಪತ್ಯ ಕಾನೂನು ಬಾಹಿರವಾಗುತ್ತದೆ.
ಮದುವೆ ಬದಲು ಸಿವಿಲ್ ಯೂನಿಯನ್
ಅಮೆರಿಕದ ಕೆಲವು ರಾಜ್ಯಗಳಲ್ಲಿ ಹಾಗೂ ವಿಶ್ವದ ಕೆಲವು ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಪರ್ಯಾಯ ವೈವಾಹಿಕ ಕಾನೂನು ವ್ಯವಸ್ಥೆಯೊಂದಿದೆ. ಇದಕ್ಕೆ ‘ಸಿವಿಲ್ ಯೂನಿಯನ್’ ಎಂದು ಹೆಸರು. ಈ ಕಾನೂನಿನ ಪ್ರಕಾರ ಗಂಡು-ಗಂಡು ಅಥವಾ ಹೆಣ್ಣು-ಹೆಣ್ಣು ದಂಪತಿಯಾಗಬಹುದು. ಆದರೆ ಇವರ ಮದುವೆ ಮದುವೆಯಲ್ಲ. ಅದನ್ನು ‘ಸಿವಿಲ್ ಯೂನಿಯನ್’ (ನಾಗರಿಕ ಒಂದಾಗುವಿಕೆ) ಎಂದು ಪ್ರತ್ಯೇಕವಾಗಿ ಕಾನೂನು ಪರಿಗಣಿಸುತ್ತದೆ. ವರ್ಮಾಂಟ್, ನ್ಯೂಜೆರ್ಸಿ ಹಾಗೂ ನ್ಯೂಹೆಮ್‌ಸ್ಪೈರ್ ರಾಜ್ಯಗಳಲ್ಲಿ ಸಿವಿಲ್ ಯೂನಿಯನ್‌ಗೆ ವಿವಾಹದಷ್ಟೇ ಮಾನ್ಯತೆಯಿದ್ದರೆ, ಹವಾಯಿ, ಮೇನ್, ವಾಷಿಂಗ್‌ಟನ್, ಓರೆಗಾಂವ್ ರಾಜ್ಯಗಳಲ್ಲಿ ಸಿವಿಲ್ ಯೂನಿಯನ್‌ಗೆ ಭಾಗಶಃ ಮಾತ್ರ ಮಾನ್ಯತೆಯಿದೆ.
ಬ್ರಿಟನ್, ಜರ್ಮನಿ, ಸ್ವಿಜರ್‌ಲೆಂಡ್ ಸೇರಿದಂತೆ ಯುರೋಪಿನ ಅನೇಕ ದೇಶಗಳಲ್ಲಿ ಸಿವಿಲ್ ಯೂನಿಯನ್‌ಗೆ ಮಾನ್ಯತೆಯಿದೆ. ಆದರೆ, ಸಿವಿಲ್ ಯೂನಿಯನ್‌ನ ಕಲ್ಪನೆ ಭಾರತಕ್ಕೆ ಸಂಪೂರ್ಣ ಹೊಸತು.
ಬಾಡಿGay ತಾಯಿ ಬಿಸಿನೆಸ್
ಈ ನಡುವೆ, ಅಮೆರಿಕ ಸೇರಿದಂತೆ ಅನೇಕ ದೇಶಗಳ ಸಲಿಂಗ ದಂಪತಿಗಳಿಗೆ ಭಾರತ ‘ಪ್ರಸೂತಿ ಔಟ್ ಸೋರ್ಸಿಂಗ್’ ಸೇವೆ ನೀಡಲು ಆರಂಭಿಸಿದೆ. ಮೊನ್ನೆ ತಾನೆ ಇಸ್ರೇಲಿನ ‘ಗಂಡ-ಗಂಡತಿ’ ದಂಪತಿಯೊಂದು ಭಾರತದ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದುಕೊಂಡ ಸುದ್ದಿಯನ್ನು ನೀವು ಓದಿರಬಹುದು. ಅಮೆರಿಕ ಹಾಗೂ ಲಂಡನ್‌ನಲ್ಲಿ ಭಾರತದ ಬಾಡಿಗೆ ತಾಯಂದಿರಿಗೆ ಭಾರೀ ಡಿಮಾಂಡ್ ಬಂದಿದೆ.
ಅಮೆರಿಕದಲ್ಲಿ ಬಾಡಿಗೆ ತಾಯಿಯಾಗಲು ಸುಮಾರು ೪೦ ಲಕ್ಷ ರುಪಾಯಿ ಖರ್ಚು ತಗುಲಿದರೆ, ಭಾರತದಲ್ಲಿ ೧೫ ಲಕ್ಷ ರುಪಾಯಿ ಮಾತ್ರ ಸಾಕು. ಭಾರತದ ಬಾಡಿಗೆ ತಾಯಿಗೆ ಸುಮಾರು ೩.೫ ಲಕ್ಷ ರುಪಾಯಿ ಶುಲ್ಕ ದೊರೆತರೆ ಉಳಿದ ೧೨-೧೩ ಲಕ್ಷ ರುಪಾಯಿ ಆಸ್ಪತ್ರೆ ಹಾಗೂ ವೈದ್ಯರ ಕಿಸೆ ಸೇರುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಬಾಡಿಗೆ ತಾಯಿ ಬಿಸಿನೆಸ್ ಏರತೊಡಗಿದೆ. ಈ ಬಿಸಿನೆಸ್, ಸುಮಾರು ೨೫೦೦ ಕೋಟಿ ರುಪಾಯಿಯಷ್ಟು ಭಾರೀ ಮಾರುಕಟ್ಟೆಯಾಗಿ ಬೆಳೆಯುವ ಸಾಧ್ಯತೆ ಇದೆಯಂತೆ.
ಬಾಡಿಗೆ ಮಾತಾಕೀ ಜೈ!

4 comments:
ಈ ಲೇಖನ ಆಧುನಿಕ ಜಗತ್ತಿನಲ್ಲಿ ‘ಮದುವೆ’ ಎಂಬ ಬಂಧನ ಯಾವ ರೀತಿ ಬದಲಾವಣೆ ಹೊಂದಿದೆ ಎಂಬ ಸತ್ಯವನ್ನು ತಿಳಿಸುವಂತಿದೆ. ಸಲಿಂಗ ವಿವಾಹದ ದುಃಸ್ಥಿತಿಯನ್ನು ತಿಳಿಸುವ ಬರಹ ವಿಚಿತ್ರವಾಗಿತ್ತು. ಹೀಗೂ ಉಂಟೆ? ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿತ್ತು.
- ಪಿ. ಗೋವಿಂದರಾಜ್, ಶಿವಮೊಗ್ಗ
ಅಮೆರಿಕದ ಅಧ್ಯಕ್ಷರ ಚುನಾವಣೆಯ ಜೊತೆ‘ಗೇ’ ಇನ್ನೊಂದು ಚುನಾವಣೆಯೂ ನಡೆದ ಬ‘ಗೆ’ಯನ್ನು ಈ ಲೇಖನ ತಿಳಿಸಿತು.
- ಚಂದ್ರಕಾಂತ, ಹೊಸಪೇಟೆ
ಭಾರತದಲ್ಲಿ ಇಂಥ ಪದ್ಧತಿ ಬೇಡವೇ ಬೇಡ
ಈ ಲೇಖನ - ವಿಚಿತ್ರ ಪದ್ಧತಿಯೊಂದರ ಕುರಿತು ವೈಶಿಷ್ಟ್ಯತೆಯಿಂದ ಕೂಡಿದ್ದು ಎನಿಸಿತು. ಗಂಡಸರು ಗಂಡಸರನ್ನು, ಹೆಂಗಸರು ಹೆಂಗಸರನ್ನು ಪರಸ್ಪರ ವಿವಾಹವಾಗುವ ಮೂಲಕ ಸಲಿಂಗ ಕಾಮಿಗಳಾಗಿ ಅದೇನು ತೃಪ್ತಿ ಪಡೆಯುತ್ತಾರೋ! ಅವರ ಬದುಕು ಅದ್ಹೇಗೆ ಸಾರ್ಥಕ-ಅರ್ಥಪೂರ್ಣವೆನಿಸುತ್ತದೋ ಅಂಥವರಿಗೇ ಗೊತ್ತು! ಸಮಂಜಸವೆನಿಸಲರ್ಹವಲ್ಲದ ಇಂಥ ಪದ್ಧತಿ ಅಮೆರಿಕಾದ ಕೆಲವು ರಾಜ್ಯಗಳಲ್ಲಿದೆಯೆಂಬುದು ವಿಚಿತ್ರ ಹಾಗೂ ವಿಸ್ಮಯಕರ! ಆದರೆ, ಹಾಗೆ ಮದುವೆಯಾದವರು ತಮ್ಮ ವಂಶೋದ್ಧಾರಕ ಹಾಗೂ ತಮ್ಮ ಮರಣಾನಂತರ ಪಿತ್ರಾರ್ಜಿತ-ಸ್ವಯಾರ್ಜಿತ ಹಣಕ್ಕೆ, ಆಸ್ತಿಗೆ ವಾರಸುದಾರರನ್ನು ಸಹಜ-ನಿಯಮಬದ್ಧವಾಗಿ ಹೊಂದಲಾಗದ ಅಸಹಾಯಕತೆ-ಅನರ್ಹತೆ ಬೇರೆ. ಅಂಥ ಗುರಿ ಸಾಧನೆಗಾಗಿ ಬಾಡಿಗೆ ತಾಯಂದಿರನ್ನು ಅರಸುವ, ಒಪ್ಪಿಸುವ ಹಾಗೂ ಅಂಥ ಸಂದರ್ಭದ ದುರ್ಲಾಭ ಪಡೆಯ ಬಯಸುವವರ ಧನದಾಹವನ್ನು ಈಡೇರಿಸುವ ಸಂದಿಗ್ಧತೆಗೂ ಸಿಲುಕುವ ಪ್ರಮೇಯ; ಇಂಥ ಎಲ್ಲ ವಿವಿಧ ಪೂರಕವಲ್ಲದ ಕಾರಣಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಅಂಥ ಅಸಂಬದ್ಧ ಪದ್ಧತಿಯನ್ನು ಯಾರೂ ಅನುಸರಿಸದಿರುವುದು ವಿಹಿತ.
- ನಾ. ಕು. ಗಣೇಶ್, ರಾಮಮೂರ್ತಿ ನಗರ, ಬೆಂಗಳೂರು
‘ಸಾಪ್ತಾಹಿಕ ಪ್ರಭ’ ಮುಖಪುಟದಲ್ಲಿ ಪ್ರಕಟವಾದ ಸಲಿಂಗಿಗಳ ಮದುವೆ ಲೇಖನ ಓದಿದಾಗ ವಿನೂತನ ಅನುಭವ ನೀಡಿತು. ಕಾಲದ ಮಹಿಮೆಯೋ, ಕಲಿಜನರ ಹವ್ಯಾಸವೋ ಒಂದೂ ಅರಿಯೆ. ಅಪರೂಪದ ಲೇಖನ ವಿಶಿಷ್ಟಪೂರ್ಣವಾಗಿತ್ತು.
- ಎಚ್. ಭೀಮರಾವ್ ವಾಷ್ಠರ್, ಕೋಡಿಹಾಳ, ಸುಳ್ಯ
Post a Comment