Wednesday, March 04, 2009

ಪತ್ರಿಕೆಯಲ್ಲಿ ಜಾಹೀರಾತು ಸಂಗೀತ ಕೇಳಿದ್ದೀರಾ?

ರಂಗ ವಾರ ಪತ್ರಿಕೆ ಕೊಂಡರೆ ಕ್ಲಿನಿಕ್ ಪ್ಲಸ್ ಶ್ಯಾಂಪು ಸ್ಯಾಷೆ ಉಚಿತ. ಸುಧಾ ಕೊಂಡರೆ ಪಾಂಡ್ಸ್ ಪೌಡರಿನ ಪುಟ್ಟ ಪೊಟ್ಟಣ ಉಚಿತ. ಪಿ.ಸಿ.ವರ್ಲ್ಡ್ ಕೊಂಡರೆ ಒಂದು ಸಿ.ಡಿ. ಖಚಿತ... ಇಂಥ ಜಾಹೀರಾತು ತಂತ್ರಗಳನ್ನು ನೀವು ಕೇಳಿದ್ದೀರಿ. ನೋಡಿದ್ದೀರಿ. ಇದೀಗ ಇನ್ನೂ ಒಂದು ಹೊಸ ತಂತ್ರದ ಬಗ್ಗೆ ಕೇಳಿ.


"ಮೇರಿ ಸಹೇಲಿ" ಹಿಂದಿಯ ಪ್ರಸಿದ್ಧ ಮಹಿಳಾ ಪತ್ರಿಕೆ. ಅದು ಇತ್ತೀಚೆಗೆ ಹೊಸತೊಂದು ಪ್ರಯೋಗ ಮಾಡಿತು. ಮುದ್ರಣ ಮಾಧ್ಯಮದಲ್ಲಿ ಶ್ರಾವ್ಯ ಜಾಹೀರಾತು! ಪತ್ರಿಕೆಯ ಮೊದಲ ಪುಟ ತೆರೆಯುತ್ತಿದ್ದಂತೆ ಪತ್ರಿಕೆಯಿಂದ ಜಾಹೀರಾತು ಜಿಂಗಲ್ ಕೇಳಿಸಲಾರಂಭಿಸುತ್ತದೆ.

ನಿಮಗೆ - ಹ್ಯಾಪಿ ಬರ್ತ್ ಡೇ ಟು ಯೂ - ಎಂದು ಹಾಡು ಹೇಳುವ ಮ್ಯೂಸಿಕಲ್ ಗ್ರೀಟಿಂಗ್ ಕಾರ್ಡ್ ನೆನಪಾಯಿತೆ? ಹೌದು. ಇದೇ ತತ್ವ ಆಧರಿಸಿ 'ಮೇರಿ ಸಹೇಲಿ' ಹೊಸ ಜಾಹೀರಾತು ಪ್ಯಾಕೇಜ್ ರೂಪಿಸಿದೆ. ಮೊದಲ ಕಂತಿನಲ್ಲಿ ಪತ್ರಿಕೆ ತನ್ನದೇ ಜಿಂಗಲ್ ಕೇಳಿಸಿದೆ. ಇದೀಗ ಜಾಹೀರಾತುದಾರರಿಗಾಗಿ ಹುಡುಕುತ್ತಿದೆ. ಈ ಪ್ಯಾಕೇಜ್ ವರ್ಕ್ಔಟ್ ಆದರೆ, ಪತ್ರಿಕೆಯ ಮೊದಲ ಪುಟ ತಿರುಗಿಸುತ್ತಿದ್ದಂತೆಯೇ ಓದುಗರಿಗೆ "ವಾಷಿಂಗ್ ಪೌಡರ್ ನಿರ್ಮಾ ಹಾಡು" ಕೇಳಿಸಬಹುದು.

2 comments:

ಸಂದೀಪ್ ಕಾಮತ್ said...

ಎಂಥ ಮಂಡೆ ಖರ್ಚು ಮಾಡಿದ್ದಾರೆ!

Ittigecement said...

ರವಿಯವರೆ...

ಜಾಹಿರಾತಿನ..
ಯುಗ ಇದು..

ಇನ್ನೂ ಏನೇನು ಬರತ್ತೋ...!

ಧನ್ಯವಾದಗಳು..!