ತನ್ನ ಪತ್ತೆದಾರಿ ಕೆಲಸದ ಕುರಿತು ಬೀರಬಲ್‌ಗೆ
‘ವಿಕಟೆಕಟೆಕವಿ’ ತೆನಾಲಿರಾಮನ ಪತ್ರ
ಈಗ ವಕೀಲರ ವಾದಗಳ ನಡುವೆ ಸತ್ಯವನ್ನು ಹುಡುಕಿ ತೆಗೆಯಲು ನ್ಯಾಯಾಧೀಶರಿಗೆ ಬಹುತೇಕ ಪ್ರಕರಣಗಳಲ್ಲಿ ಸಾಧ್ಯವಾಗುಮದಿಲ್ಲ. ಜೆಸ್ಸಿಕಾ ಪ್ರಕರಣದಲ್ಲಿ ಆದದ್ದೂ ಇದೇ. ಆದರೆ, ನಮ್ಮ ಕಾಲದಲ್ಲಿ ವಾದಿ-ಪ್ರತಿವಾದಿ ವಕೀಲರಿರಲಿಲ್ಲ. ನಾವೇ ಜಾಣತನದಿಂದ ಅಪರಾಧಿ ಬಾಯಿಂದ ನಿಜ ಹೊರಡಿಸುತ್ತಿದ್ದೆಮ. ಅಪರಾಧಿಗಳಿಗಿಂತ ನಾಮ ಹೆಚ್ಚು ಜಾಣರಾದ್ದರಿಂದ ಸತ್ಯಕ್ಕೇ ಜಯವಾಗುತ್ತಿತ್ತು.
ಹಾಯ್ ಬೀರ್ಬಲ್, ಹೌ ಆರ್ ಯು?
ಹೌಹಾರಿದ್ಯಾ... ಈ ಪತ್ರ ನೋಡಿ!
ನಾನು ಕಣಯ್ಯಾ ತೆನಾಲಿ ರಾಮ. ಇದೇನು ಸಡನ್ನಾಗಿ ನಾನು ನಿಂಗೆ ಪತ್ರ ಬರೆದಿದ್ದೇನೆ ಅಂತ ನಿಂಗೆ ಸರ್‌ಪ್ರೈಸ್ ಆಗಿರಬೇಕಲ್ಲ. ಹೀಗೆ ಎಲ್ಲಾರನ್ನೂ ಸರ್‌ಪ್ರೈಸ್ ಮಾಡೋದೇ ನನ್ ಸ್ಟೈಲು ಗೊತ್ತಲ್ಲ? ಅದಿರಲಿ, ನಾನು ನಿಂಗೆ ಈ ಪತ್ರ ಬರೆಯೋಕೆ ಒಂದು ಕಾರಣ ಇದೆ. ನಾನು ಇತ್ತೀಚೆಗೆ ಒಂದು ಮಹತ್ವದ ಪತ್ತೆದಾರಿ ಕೆಲಸ ಮಾಡಿದ್ದೇನೆ. ಆ ವಿಚಾರವನ್ನ ನಿನ್ನತ್ರ ಸ್ವಲ್ಪ ಡಿಸ್‌ಕಸ್ ಮಾಡೋದಿತ್ತು.
ಎಕ್ಚುವಲಿ ನಮ್ಮ ಕಾಲ ಮುಗಿದು ಶತಮಾನಗಳೇ ಆಯ್ತು ಅನ್ನೋದು ನಿಜ. ಈಗ ಎಷ್ಟೋ ಎಜುಕೇಟೆಡ್ ಹುಡುಗರಿಗೆ ನಮ್ಮಿಬ್ಬರ ಹೆಸರೇ ಗೊತ್ತಿಲ್ಲ. ನಾಕೌಟ್ ಗಿರಾಕಿಗಳು... ಬೀರ್ ಓಕೆ. ಬಲ್ ಯಾಕೇ... ಅಂತ ಕೂಗ್ತಾರೆ. ನಮ್ಮ ಕಥೆ ಕೇಳಿ ಗೊತ್ತಿರೋರಂತೂ ನಮ್ಮನ್ನ ಜೋಕರ್‌ಗಳ ಥರ ನೋಡ್ತಾರೆ. ಪ್ರೆೃಮರಿ ಸ್ಕೂಲಲ್ಲಿ ಕಲಿತಿರೋ ಮಕ್ಕಳಿಗೆ ನಮ್ಮ ಹೆಸರು ಗೊತ್ತಿರುತ್ತೆ. ದುರದೃಷ್ಟವಶಾತ್ ಅವರು ನಮ್ಮನ್ನೂ ಮಿಕ್ಕಿ ಮೌಸ್, ಸ್ಕೂಬಿ ಡೂ, ಟಾಮ್ ಆಂಡ್ ಜೆರ್ರಿ ಥರ ಕಾರ್ಟೂನ್ ಅಂದುಕೊಂಡಿರ್ತಾರೆ. ಐ ಪಿಟಿ ಯೂ. ಯೂ ಪಿಟಿ ಮಿ!
ಅಲ್ವಾ ಮತ್ತೆ? ಎಷ್ಟು ಜನರು ನಮ್ಮನ್ನು ಅತಿ ಬುದ್ಧಿವಂತ ನ್ಯಾಯದಾನಿಗಳು ಅಂತ ಗುರುತಿಸುತ್ತಾರೆ? ಕೃಷ್ಣದೇವರಾಯನ ಆಸ್ಥಾನದಲ್ಲಿ ನಾನು ವಿದೂಷಕ ಆಗಿದ್ದೆ ಅನ್ನೋದು ನಿಜ. ಆದರೆ, ನಾನು ಬುದ್ಧಿವಂತ ವಿಕಟಕವಿ ಕೂಡ ಆಗಿದ್ದೆನಲ್ಲ. ನನ್ನ ಲಾ ನಾಲೆಜ್‌ನಿಂದಾಗಿ ನಾನು ಕೋರ್ಟಿನ ಕಟೆಕಟೆಯಲ್ಲೂ ಎತ್ತಿದ ಕೈ ತಾನೆ. ಅದಕ್ಕೆ ನನ್ನನ್ನು ಬೇಕಾದರೆ ನೀನು ‘ವಿಕಟೆಕಟೆಕವಿ’ ಅಂತ ಕರಿ. ನೀನು? ಅಕ್ಬರ್ ಮಹಾರಾಜನ ಆಸ್ಥಾನದ ನವರತ್ನಗಳಲ್ಲಿ ಎಲ್ಲರಿಗೂ ಗೊತ್ತಿರುವ ಏಕೈಕ ರತ್ನ ತಾನೆ? ಈ ದೇಶ ಕಂಡ ಚಾಣಾಕ್ಷ ಮಂತ್ರಿ. ಆದರೂ ಜನ ನಿನ್ನನ್ನು ನೆನಪು ಮಾಡಿಕೊಳ್ಳುಮದು ನಿನ್ನ ತಮಾಷೆಯ ಕಥೆಗಳಿಗಾಗಿ ಮಾತ್ರ. ಹೌ ರಿಡಿಕ್ಯುಲಸ್!
ನಮ್ಮಿಬ್ಬರ ನ್ಯಾಯದಾನ ಸಾಮರ್ಥ್ಯಕ್ಕೆ ಸರಿಸಾಟಿಯಾದ ಬುದ್ಧಿವಂತರೇ ನಮ್ಮ ಕಾಲದಲ್ಲಿ ಯಾರೂ ಇರಲಿಲ್ಲ. ಅತ್ಯಂತ ಕಠಿಣವಾದ ಕೇಸುಗಳಲ್ಲೂ ಅತಿ ಜಾಣ್ಮೆಯಿಂದ ಸತ್ಯ ಕಂಡು ಹಿಡಿದವರು ನಾಮ. ನಮ್ಮ ನ್ಯಾಯದಾನದ ಮುಂದೆ ಉಳಿದ ಮಂತ್ರಿ -ಮಹೋದಯರು ಇಂಗು ತಿಂದ ಮಂಗನಂತಾದ ಘಟನೆಗಳು ನೂರಾರು. ಇನ್ ಫ್ಯಾಕ್ಟ್, ಉಳಿದ ಆಸ್ಥಾನ ವಿದ್ವಾಂಸರು ಹಾಗೂ ರಾಜರು ಬರೀ ಕಣ್ಣಿಗೆ ಕಾಣುವ, ಕಿವಿಗೆ ಕೇಳುವ ಸಾಕ್ಷ್ಯಗಳನ್ನು ನಂಬಿ ಪ್ರಜೆಗಳಿಗೆ ಅನ್ಯಾಯ ಮಾಡುತ್ತಿದ್ದರು. ಆಗೆಲ್ಲ ನಾಮ ಜಾಣ್ಮೆಯಿಂದ ಸತ್ಯ ಕಂಡುಹಿಡಿದು ನಿಜವಾದ ನ್ಯಾಯ ಒದಗಿಸಿದ್ದೇವೆ. ಬೋಗಸ್ ಸಾಕ್ಷ್ಯಗಳನ್ನು ಬಯಲುಮಾಡಿ ಅವರ ನ್ಯಾಯ ವಿತರಣೆ ಪದ್ಧತಿ ಎಷ್ಟು ಸ್ಟುಪಿಡ್ ಎಂದು ಪ್ರೂವ್ ಮಾಡಿದ್ದೇವೆ. ಕರೆಕ್ಟಾಗಿ ನ್ಯಾಯ ಒದಗಿಸುಮದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಆದರೂ, ಈ ಜನರಿಗೆ ನಾಮ ಮಾದರಿ ನ್ಯಾಯಾಧೀಶರಾಗಲೇ ಇಲ್ವಲ್ಲ ಮಾರಾಯ. ಯಾಕೆ?
ಐರನಿ ಏನು ಅಂದರೆ, ಅಂದು ಯಾವ ಪದ್ಧತಿ ತಪುý್ಪ ಅಂತ ನಾಮ ತೋರಿಸಿಕೊಟ್ಟೆವೋ ಈಗಿನ ಕೋರ್ಟುಗಳು ಆ ಪದ್ಧತಿಯನ್ನೇ ಸರಿ ಎಂಬಂತೆ ಪಾಲಿಸುತ್ತಿವೆ. ಯಾಮದು ಮೂರ್ಖತನದ ನ್ಯಾಯವಿಚಾರಣೆ ಎಂದು ನಾಮ ಜಗಜ್ಜಾಹೀರು ಮಾಡಿದೆವೋ ಅದನ್ನೇ ಇಂದಿನ ನ್ಯಾಯಾಲಯಗಳು ಸರಿ ಎನ್ನುವಂತೆ ಪಾಲಿಸುತ್ತಿವೆ. ಬರೀ ಸಾಕ್ಷಿಗಳು ಹಾಗೂ ವಕೀಲರ ವಾಕ್ಚಾತುರ್ಯದಲ್ಲಿ ನ್ಯಾಯದೇವತೆ ತಲೆಚಿಟ್ಟು ಹಿಡಿದು ಕುಳಿತಿದ್ದಾಳೆ.
ಈಗಿನ ಕೋರ್ಟುಗಳಿಂದ ನ್ಯಾಯದಾನ ಪದ್ಧತಿಯನ್ನೇ ಗೇಲಿಯಾದಂಥ ಎರಡು ಘಟನೆಗಳು ಕಳೆದವಾರ ನಡೆದುಹೋಗಿವೆ. ಜೆಸ್ಸಿಕಾ ಲಾಲ್ ಪ್ರಕರಣ. ಇನ್ನೊಂದು ಬೆಸ್ಟ್ ಬೇಕರಿ ಪ್ರಕರಣ.
ಹಾಗೆಂದು, ಭಾರತದ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಅಂತ ನಾನು ಹೇಳುತ್ತಿಲ್ಲ. ಆದರೆ, ಜನರ ನಂಬಿಕೆ ಕಳೆದುಕೊಳ್ಳುತ್ತಿದೆ ಅನ್ನೋದು ಮಾತ್ರ ನಿಜ. ನೂರಾರು ಜನರ ಕಣ್ಣೆದುರೇ ಹುಡುಗಿಯೊಬ್ಬಳು ಕೊಲೆಯಾದರೂ, ಅಪರಾಧಿಗಳು ನಾಜೂಕಾಗಿ ತಪ್ಪಿಸಿಕೊಳ್ಳುತ್ತಾರೆ. ಅಪರಾಧಿಗಳು ಧರ್ಮಗ್ರಂಥದ ಮೇಲೆ ಪ್ರಮಾಣ ಮಾಡಿ ಸುಳ್ಳು ಹೇಳಿ ಕೋರ್ಟುಗಳ ದಾರಿ ತಪ್ಪಿಸುತ್ತಾರೆ. ಇದು ಸದ್ಯ ಭಾರತದ ನ್ಯಾಯಾಂಗ ವ್ಯವಸ್ಥೆಗೇ ಸವಾಲಾಗಿದೆ. ಈ ಎರಡೂ ಪ್ರಕರಣವನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿದೆ ಅನ್ನೋದು ನಿಜಕ್ಕೂ ಗುಡ್ ನ್ಯೂಸ್.
ಆದ್ರೆ ಬೀರಬಲ್, ನನಗನಿಸುತ್ತೆ. ಈ ರೀತಿ ಒಂದೋ ಎರಡು ಪ್ರಕರಣಗಳನ್ನು ಮಾತ್ರ ಕೋರ್ಟುಗಳು ಪರಿಹರಿಸುಮದು ಪ್ರಾಕ್ಟಿಕಲಿ ಸಾಧ್ಯ. ದೇಶದಲ್ಲಿ ಇಂತಹ ಸಾವಿರಾರು ಪ್ರಕರಣಗಳು ಆಗುತ್ತವಲ್ಲ. ಅಮಗಳ ಬಗ್ಗೆ ಯಾರು ಹೋರಾಟ ಮಾಡುತ್ತಾರೆ. ಎಷ್ಟು ಕೋರ್ಟುಗಳು, ಎಷ್ಟು ಪ್ರಕರಣಗಳನ್ನು, ಎಷ್ಟು ಸಲ ಅಂತ ಪದೇ ಪದೇ ವಿಚಾರಣೆ ಮಾಡಲು ಸಾಧ್ಯ? ಅದಕ್ಕೆ, ಇದಕ್ಕೆಲ್ಲ ಮೂಲಭೂತ ಕಾರಣ ಏನು? ಪರಿಹಾರ ಏನು ಅಂತ ಕಂಡುಹಿಡಿಯಬೇಕೆನಿಸಿತು ನನಗೆ. ಹಾಗಾಗಿ, ನಾನೊಂದು ತನಿಖೆ ಮಾಡಿ ಒಂದು ಪರಿಹಾರ ಸೂಚಿಸುತ್ತಿದ್ದೇನೆ. ಸ್ವಲ್ಪ ಯೋಚಿಸಿ ನಿನ್ನ ಅಬಿಪ್ರಾಯ ಹೇಳಯ್ಯ.
ಅನ್‌ಫಾರ್ಚುನೇಟ್‌ಲಿ, ಈಗಿನ ನ್ಯಾಯ ವ್ಯವಸ್ಥೆಯಲ್ಲಿ ಸಾಕ್ಷಿಗಳೇ ಭಾಳಾ ಇಂಪಾರ್ಟೆಂಟು. ಅವರಿಗಿಂತ ವಕೀಲರು ಇನ್ನೂ ಇಂಪಾರ್ಟೆಂಟು. ನ್ಯಾಯವಾಗಿ ಇಮಗಳಿಗಿಂತ ನ್ಯಾಯಾಧೀಶರ ಬುದ್ಧಿವಂತಿಕೆ ಇಂಪಾರ್ಟೆಂಟ್ ಆಗಬೇಕಿತ್ತು! ಆದರೆ, ಪರಿಸ್ಥಿತಿ ಹಾಗಿಲ್ಲ. ಪಾಯಿಂಟ್ ಟು ಬಿ ನೋಟೆಡ್ ಯುವರ್ ಆನರ್.
ಬೀರಬಲ್, ಒಂದು ಅಪ್ರಿಯ ಸತ್ಯ ಹೇಳುತ್ತೇನೆ ಕೇಳು. ನಮ್ಮ ಎಷ್ಟೋ ನ್ಯಾಯಾಧೀಶರಿಗಿಂತ ವಕೀಲರೇ ಬುದ್ಧಿವಂತರಿರುಮದು ನಮ್ಮ ನ್ಯಾಯಾಂಗ ವ್ಯವಸ್ಥೆಯ ವೈಫಲ್ಯಕ್ಕೆ ಕಾರಣ. ಈ ವಕೀಲರ ವಾದಗಳ ನಡುವೆ ಸತ್ಯವನ್ನು ಹುಡುಕಿ ತೆಗೆಯಲು ನ್ಯಾಯಾಧೀಶರಿಗೆ ಬಹುತೇಕ ಪ್ರಕರಣಗಳಲ್ಲಿ ಸಾಧ್ಯವಾಗುಮದಿಲ್ಲ. ಜೆಸ್ಸಿಕಾ ಪ್ರಕರಣದಲ್ಲಿ ಆದದ್ದೂ ಇದೇ.
ಈಗ ವಕೀಲರೇ ತಮ್ಮ ಜಾಣ ತರ್ಕದಿಂದ ಕೇಸುಗಳನ್ನು ಗೆಲ್ಲಿಸುತ್ತಾರೆ ಅಥವಾ ಸೋಲಿಸುತ್ತಾರೆ. ಇವರ ವಾದ- ವಿವಾದಗಳಿಂದಾಗಿ ನ್ಯಾಯಾಧೀಶರು ಪ್ರತಿ ಹಂತದಲ್ಲೂ ಗೊಂದಲಗೊಳ್ಳುತ್ತಾ ಹೋಗುತ್ತಾರೆ. ಎಷ್ಟೋ ವರ್ಷಗಳ ನಂತರ ನ್ಯಾಯಾಧೀಶರು ಈ ವಾದ - ವಿವಾದಗಳ ಆಧಾರದ ಮೇಲೆ ಯಾರ ವಾದ ಗಟ್ಟಿಯಾಗಿದೆಯೋ ಅವರ ಪರ ತೀರ್ಪು ನೀಡುತ್ತಾರೆ. ಇದು ಈಗಿನ ಸಿಸ್ಟಂ. ಭಾರತದಲ್ಲಿ ಅಷ್ಟೇ ಅಲ್ಲ. ಜಗತ್ತಿನ ಬಹುತೇಕ ದೇಶಗಳಲ್ಲಿ ಇದೇ ಕಥೆ. ಇಡೀ ವ್ಯವಸ್ಥೆಯಲ್ಲಿ ಸತ್ಯ ಏನು ಎನ್ನುಮದಕ್ಕಿಂತ ವಾದ ಹಾಗೂ ಸಾಕ್ಷಿ ಎರಡೇ ಮುಖ್ಯವಾಗುತ್ತದೆ.
ಅದರಲ್ಲೂ, ಭಾರತೀಯ ನ್ಯಾಯಾಂಗದಲ್ಲಿ ಒಂದು ಬಹಳ ಮುಖ್ಯವಾದ ಪಾಯಿಂಟ್ ಇದೆ. ಹತ್ತು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು. ಇದರ ಉದ್ದೇಶವೇನೋ ಭಾಳಾ ಒಳ್ಳೆಯದು ಬೀರ್‌ಬಲ್. ಆದರೆ, ಬಹುತೇಕ ಅಪರಾಧಿಪರ ವಕೀಲರು ಬಚಾವಾಗಲು ಇದೇ ಪಾಯಿಂಟನ್ನು ಬಳಸಿಕೊಳ್ಳುತ್ತಾರೆ ಅನ್ನೋದೆ ಡ್ರಾಬ್ಯಾಕು. ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ‘ಬೆನಿಫಿಟ್ ಆಫ್ ಡೌಟ್’ ಆಧಾರದಲ್ಲಿ ಅಪರಾಧಿಗಳು ಕೇಸಿನಿಂದ ಹೊರಬರುತ್ತಾರೆ. ನ್ಯಾಯಾಧೀಶರು ಈ ವಿಷಯದಲ್ಲಿ ನಿಸ್ಸಹಾಯಕರು.
ಅನೇಕ ಭಯಂಕರ ಆರೋಪಿಗಳು ಅತಿ ಜಾಣ ವಕೀಲರನ್ನು ಹಿಡಿದುಕೊಂಡು ಪ್ರಕರಣದಿಂದ ಬಚಾವಾಗುತ್ತಾರೆ. ಉದಾಹರಣೆಗೆ ಭಾರತದ ‘ಮೋಸ್ಟ್ ವಾಂಟೆಡ್ ಕ್ರಿಮಿನಲ್’ ದಾವೂದ್ ಇಬ್ರಾಹಿಂ ಈಗ ಖ್ಯಾತ ವಕೀಲ ಹಾಗೂ ರಾಜಕಾರಣಿ ರಾಮ್ ಜೇಠ್ಮಲಾನಿಯವರನ್ನು ಹಿಡಿದುಕೊಂಡು ಪಾರಾಗಲು ಹವಣಿಸುತ್ತಿಲ್ಲವೇ ಹಾಗೆ.
ಆದರೆ, ನಮ್ಮ ಕಾಲದಲ್ಲಿ ಹಾಗಲ್ಲ. ನಾಮ ನೇರವಾಗಿ ವಾದಿಗಳು ಹಾಗೂ ಪ್ರತಿವಾದಿಗಳ ಜೊತೆ ಮಾತನಾಡುತ್ತಿದ್ದೆಮ. ಆಗ ವಾದಿ ಹಾಗೂ ಪ್ರತಿವಾದಿ ವಕೀಲರಿರಲಿಲ್ಲ. ನಮ್ಮ ಜಾಣತನ ಉಪಯೋಗಿಸಿ ಅಪರಾಧಿಯ ಬಾಯಿಂದ ನಾವೇ ನಿಜ ಹೊರಡಿಸುತ್ತಿದ್ದೆಮ. ಅಪರಾಧಿಗಳಿಗಿಂತ ನಾಮ ಹೆಚ್ಚು ಬುದ್ಧಿವಂತರಾಗಿದ್ದುದರಿಂದ ಸತ್ಯಕ್ಕೇ ಜಯವಾಗುತ್ತಿತ್ತು. ನಾಮ ಕೇಸುಗಳನ್ನು ವರ್ಷಾನುಗಟ್ಟಲೆ ಎಳೆಯುತ್ತ ಹೋಗುತ್ತಿರಲಿಲ್ಲ. ಸತ್ಯ ಗೊತ್ತಾದ ತಕ್ಷಣ ತೀರ್ಪು ನೀಡುತ್ತಿದ್ದೆಮ. ಇದರಿಂದ ನ್ಯಾಯ ವಿತರಣೆ ಸುಲಭವೂ, ಕ್ಷಿಪ್ರವೂ ಆಗಿರುತ್ತಿತ್ತು. ಈಗಲೂ ಇಂಥದೇ ಸಿಸ್ಟಂ ಮತ್ತೆ ಜಾರಿಗೆ ತರಬೇಕು. ಅಂತ ನನ್ನ ಸಲಹೆ.
ಆದರೆ, ಕಾನೂನು ಪುಸ್ತಕದ ಬದನೇಕಾಯಿಯ ಈ ಪ್ರಪಂಚದಲ್ಲಿ ನನ್ನ ಹಿಸ್ಟಾರಿಕಲ್ ಸಲಹೆಯನ್ನು ಜಾರಿಗೆ ತರಲು ಶ್ರೀಕೃಷ್ಣ ದೇವರಾಯನೂ ಇಲ್ಲ. ನಿನ್ನ ಅಕ್ಬರ್ ಬಾದಶಹಾ ಕೂಡ ಇಲ್ಲ. ವಾಟ್ ಡು ವಿ ಡೂ?
ನಿನ್ನ ಚತುರ ಉತ್ತರಕ್ಕೆ ಕಾದಿರುತ್ತೇನೆ.
ಇಂತಿ ವಿಕಟೆಕಟೆಕವಿ
ತೆನಾಲಿ ರಾಮ
Kannada Prabha issue dated February 27, 2006
Honey.. Now I know why our courts Fail
-
Tuesday, February 28, 2006
ಈಗ ಪತ್ತೆಯಾಗಿದೆ ನಮ್ಮ ಕೋರ್ಟುಗಳ ವೈಫಲ್ಯಕ್ಕೆ ಕಾರಣ
Tuesday, February 21, 2006
ಅಣು ಬಾಂಬ್‌ಗಿಂತ ನನಗೆ ಧರ್ಮದ ಭಯ
ಮಹಾನ್ ವಿಜ್ಞಾನಿ ಐನ್‌ಸ್ಟೈನ್‌ಗೆ
ಶಾ೦ತಿ ಪ್ರಶಸ್ತಿ ಸ್ಥಾಪಕ ಆಲ್‌ಫ್ರೆಡ್ ನೊಬೆಲ್‌ನ ಪತ್ರ
ನನಗೆ ಈ ಬಾಂಬುಗಳ ಹೆದರಿಕೆಯಿಲ್ಲ ಗೊತ್ತಾ? ಈ ಬಾಂಬುಗಳಷ್ಟೇ ಅಪಾಯಕಾರಿಯಾಗುತ್ತಿರುವ ಧರ್ಮಾಂಧತೆಯ ಬಗ್ಗೆ ನನಗೆ ಭಯವಾಗಿದೆ. ಧರ್ಮದ ಹೆಸರು ಹೇಳಲೂ ಅಂಜಿಕೆಯಾಗುತ್ತಿದೆ. ಒಂದೊಂದು ಧರ್ಮದ ಹೆಸರೂ ನನ್ನ ಬೆನ್ನಹುರಿಯಲ್ಲಿ ಲಿಟ್ಲ್ ಬಾಯ್, ಫ್ಯಾಟ್‌ಮ್ಯಾನ್ ಎಂಬಷ್ಟೇ ಛಳಿಯನ್ನುಂಟು ಮಾಡುತ್ತವೆ. ಜಗತ್ತಿನ ಯಾಮದೋ ಮೂಲೆಯಲ್ಲಿ ಸಿಡಿದ ಧಾರ್ಮಿಕ ಸ್ಫೋಟ ಇನ್ನೊಂದು ಮೂಲೆಯನ್ನೂ ಸುಟ್ಟುಹಾಕುತ್ತದೆ. ಜಗತ್ತಿಗೆ ಅಟಂಬಾಂಬಿನಷ್ಟೇ ಧರ್ಮಾಂಧತೆಯಿಂದಲೂ ಅಪಾಯವಿದೆ.
ಸರ್ ಅಲ್ಬರ್ಟ್ ಐನ್‌ಸ್ಟೈನ್,
ಜಗತ್ತಿನಲ್ಲಿ ಎಲ್ಲರೂ ಈಗ ನಮ್ಮಿಬ್ಬರನ್ನು ಮಹಾನ್ ವ್ಯಕ್ತಿಗಳೆಂದು ನಂಬಿದ್ದಾರೆ. ನಿಮ್ಮನ್ನು ಅದ್ಭುತ ವಿಜ್ಞಾನಿ ಎಂದು ಜನ ಕೊಂಡಾಡುತ್ತಾರೆ. ಜಗತ್ತಿನ ಅತಿ ಪ್ರತಿಷ್ಠಿತ ‘ನೊಬೆಲ್ ಪ್ರಶಸ್ತಿಯ’ ಸ್ಥಾಪಕ ಎಂದು ಜನ ನನ್ನನ್ನು ಗೌರವಿಸುತ್ತಾರೆ.
ಆದರೆ, ನಮ್ಮ ಬಗ್ಗೆ ಸ್ವಲ್ಪ ಇತಿಹಾಸ ಗೊತ್ತಿರುವವರು ನಿಮ್ಮನ್ನೂ, ನನ್ನನ್ನೂ ನಮ್ಮ ಸಂಶೋಧನೆ ಮತ್ತು ಕೊಡುಗೆಗಳಿಗಾಗಿ ಜರಿಯುತ್ತಾರೆ. ನಾನೋ ಡೈನಮೈಟ್ ಸಂಶೋಧನೆ ಮಾಡಿ ಭೂಮಿಯ ನಾಶಕ್ಕೆ ಮಹಾನ್ ಆಯುಧ ಕಂಡು ಹಿಡಿದೆ ಎಂಬ ಆರೋಪವಿದೆ.
ಅಷ್ಟೇ ಅಲ್ಲ, ನನ್ನ ಹೆಸರಿನಲ್ಲಿ ನೀಡಲಾಗುತ್ತಿರುವ ನೊಬೆಲ್ ಪ್ರಶಸ್ತಿ ಕೂಡ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯಂತೇ ಲಾಬಿದಾರರಿಗೆ ಸಿಗುತ್ತದೆ ಎಂಬ ಆಪಾದನೆಯಿದೆ. ಎಷ್ಟೋ ಅಯೋಗ್ಯರಿಗೆ ಈ ಪ್ರಶಸ್ತಿ ದಕ್ಕಿದೆ. ಎಷ್ಟೋ ಯೋಗ್ಯರಿಗೆ ಈ ಪ್ರಶಸ್ತಿ ಸಿಗಲಿಲ್ಲ. ಉದಾಹರಣೆಗೆ: ಜಗತ್ತಿಗೇ ಶಾಂತಿಯುತ ಹೋರಾಟದ ಮಾರ್ಗ ಕಲಿಸಿದ ಮಹಾತ್ಮಾ ಗಾಂಧಿಗೆ ನನ್ನ ಪ್ರಶಸ್ತಿ ಸಿಗಲಿಲ್ಲ. ಕಾರಣ ಏನೆಂದರೆ, ಬ್ರಿಟನ್ ಸರ್ಕಾರಕ್ಕೆ ಇರುಸು ಮುರುಸು ಉಂಟುಮಾಡಲು ನಮ್ಮ ನಾರ್ವೆ ಸರ್ಕಾರಕ್ಕೆ ಇಷ್ಟ ಇರಲಿಲ್ಲ. ಅದಕ್ಕೇ ನಾಲ್ಕು ಬಾರಿ ಗಾಂಧೀಜಿ ಹೆಸರು ನಾಮಕರಣವಾದರೂ ಅವರಿಗೆ ನಾಲ್ಕೂ ಬಾರಿ ಪ್ರಶಸ್ತಿ ನಿರಾಕರಿಸಲಾಯಿತು ಎಂಬ ದೂರಿದೆ.
ಆದರೆ, ನನಗಿಂತ ನಿಮ್ಮ ಮೇಲಿನ ಆರೋಪ ಇನ್ನೂ ಗುರುತರವಾದದ್ದು. ನೀಮ ತಮ್ಮ ಸಾಪೇಕ್ಷತಾ ವಾದದ ಮೂಲಕ ಅಣುಬಾಂಬಿನ ಮೂಲ ಸೂತ್ರವನ್ನು ಕಂಡು ಹಿಡಿದಿರಿ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಣುಬಾಂಬ್ ತಯಾರಿಸುವಂತೆ ನೀವೇ ಅಮೆರಿಕವನ್ನು ಪ್ರೇರೇಪಿಸಿದಿರಿ. ಇದು ಬಹಳ ಜನರಿಗೆ ಗೊತ್ತಿಲ್ಲ. ನೀಮ ೧೯೩೯ ಅ.೨ರಂದು ಅಂದಿನ ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಟ್‌ಗೆ ಬರೆದ ಪತ್ರದ ನಕಲು ಈಗ ನನ್ನ ಕೈಲಿದೆ. ಅದನ್ನು ನೋಡುತ್ತಿದ್ದೆ. ಅಣು ಬಾಂಬ್ ಸಿದ್ಧಗೊಂಡ ಘಟನಾವಳಿಗಳು ನನ್ನ ಕಣ್ಣ ಮುಂದೆ ಚಲಿಸುತ್ತಿವೆ.
ನೀವು ಅಮೆರಿಕ ಅಧ್ಯಕ್ಷರಿಗೆ ಬರೆದದ್ದು ಇಷ್ಟು:
‘೧೯೩೮ರ ಈಚೆಗಿನ ಸಂಶೋಧನೆ ನೋಡಿದ ಮೇಲೆ ಅಣುಗಳಿಂದ ಹೊಸ ಶಕ್ತಿ ಸ್ಥಾವರ ಸ್ಥಾಪನೆ ಸಾಧ್ಯ ಎಂಬುದು ನನಗೂ ಮನವರಿಕೆಯಾಗಿದೆ. ಅಲ್ಲದೇ, ಈ ಶಕ್ತಿಯಿಂದ ಅತ್ಯಂತ ಶಕ್ತಿಶಾಲಿ ಬಾಂಬುಗಳ ತಯಾರಿಕೆ ಕೂಡ ಸಾಧ್ಯ. ಇಂತಹ ಒಂದು ಬಾಂಬನ್ನು ತುಂಬಿಕೊಂಡ ಹಡಗು ಯಾಮದಾದರೂ ಬಂದರಿನಲ್ಲಿ ಸ್ಫೋಟಿಸಿದರೆ ಆ ಇಡೀ ಬಂದರೇ ನಾಶವಾಗುತ್ತದೆ. ಅಷ್ಟೇ ಅಲ್ಲ ಅಕ್ಕಪಕ್ಕದ ಭೂಭಾಗವೂ ಹಾನಿಗೆ ಒಳಗಾಗುತ್ತದೆ. ಇಷ್ಟು ಸಾಮರ್ಥ್ಯ ಈ ಬಾಂಬಿಗೆ ಇರುತ್ತದೆ. ಆದರೆ, ಈ ಬಾಂಬುಗಳನ್ನು ಸಣ್ಣ ಹಡಗಿನಲ್ಲಿ ಒಯ್ಯುಮದು ಕಷ್ಟ ಅಂತ ನನ್ನ ಅನಿಸಿಕೆ.’
‘ಈ ನಡುವೆ ಜರ್ಮನಿಯ ನಾರಿhುಗಳು ಇಂತಹ ಬಾಂಬಿಗೆ ಬೇಕಾದ ಯುರೇನಿಯಮ್-೨೩೫ರ ಶುದ್ಧೀಕರಣದಲ್ಲಿ ತೊಡಗಿದ್ದಾರೆ ಎಂಬ ಸುಳಿವಿದೆ. ಅವರು ಇದರಿಂದ ಬಾಂಬ್ ತಯಾರಿಸುವ ಸಾಧ್ಯತೆಯಿದೆ. ಆದ್ದರಿಂದ ಅವರಿಗಿಂತ ಮೊದಲು ಬಾಂಬ್ ತಯಾರಿಸಬೇಕಾದರೆ, ಅಮೆರಿಕ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ವಿಷಯ ತಮ್ಮ ಗಮನಕ್ಕೆ ತರುಮದು ನನ್ನ ಕರ್ತವ್ಯ.’
ತಮ್ಮ ಈ ಪತ್ರ ಓದಿದ ಕೂಡಲೇ ಅಮೆರಿಕದ ಅಧ್ಯಕ್ಷರು ಅಣು ಬಾಂಬ್ ತಯಾರಿಕೆಗೆ ಗುಪ್ತ ಆದೇಶ ನೀಡಿದರು. ಆ ಗುಪ್ತ ಯೋಜನೆಗೆ ಇಟ್ಟ ಹೆಸರು ‘ದಿ ಮ್ಯಾನ್‌ಹಟನ್ ಪ್ರಾಜೆಕ್ಟ್.‘ ಈ ಯೋಜನೆಯ ಉದ್ದೇಶ ವಿಶ್ವದ ಮೊತ್ತ ಮೊದಲ ಅಣು ಬಾಂಬ್ ತಯಾರಿಕೆ. ಇದರ ಹೊಣೆ ಆಗಿನ ಖ್ಯಾತ ಅಣು ವಿಜ್ಞಾನಿ ಜೆ. ರಾಬರ್ಟ್ ಓಪನ್‌ಹೈಮರ್.
ಸತತ ೫ ವರ್ಷಗಳ ಸಂಶೋಧನೆಯ ಬಳಿಕ ತಣ್ಣಗೆ ಸಿದ್ಧಗೊಂಡಿತ್ತು ಒಂದು ಅಣುಬಾಂಬು. ಅದಕ್ಕೆ ಇದ್ದ ಗುಪ್ತನಾಮ ‘ದಿ ಗ್ಯಾಜೆಟ್‘. ಈ ಯೋಜನೆಗಾಗಿ ಆಗಿನ ಕಾಲದಲ್ಲೇ ೨ ಬಿಲಿಯನ್ ಡಾಲರ್ ಖರ್ಚಾಯಿತು.
೧೯೪೫ರ ಜುಲೈ ೧೬ ಮುಂಜಾಮ ೫ ಗಂಟೆ ೨೯ ನಿಮಿಷ ೪೫ ಸೆಕೆಂಡು. ಅಮೆರಿಕ ಸರ್ಕಾರ, ಮಿಲಿಟರಿ ಮತ್ತು ವಿಜ್ಞಾನಿಗಳ ಅತ್ಯಂತ ಗುಪ್ತ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆ ಹೆಸರು ‘ದಿ ಟ್ರಿನಿಟಿ’. ನ್ಯೂ ಮೆಕ್ಸಿಕೋ ಉತ್ತರ ಭಾಗದ ಮರುಭೂಮಿ ಪ್ರದೇಶದ ಅಲಮಗಾರ್ಡೋ ಬಾಂಬಿಂಗ್ ರೇಂಜ್‌ನಲ್ಲಿ ೧೦೦ ಅಡಿ ಎತ್ತರದ ಒಂದು ಕಬ್ಬಿಣದ ಗೋಪುರ ಮೇಲೆ ಏರಿ ಕುಳಿತಿದ್ದ ದಿ ಗ್ಯಾಜೆಟ್ ಸ್ಫೋಟ. ಭಯಂಕರ ಶಬ್ದದೊಂದಿಗೆ ಜಗತ್ತಿನ ಮೊದಲ ಅಣುಬಾಂಬ್ ಸಿಡಿಯಿತು! ಕೋರೈಸುವ ಬೆಂಕಿ ಬಣ್ಣದ ಬೆಳಕು ನೂರಾರು ಮೈಲಿ ದೂರಕ್ಕೂ ಕಾಣಿಸಿತು. ನೋಡು ನೋಡುತ್ತಲೇ ಅಣಬೆಯಂತೆ ದಟ್ಟ ಮೋಡಗಗಳು ತುಂಬಿಕೊಂಡಮ. ಅಣು ಬಾಂಬಿನ ಯುಗ ಆರಂಭವಾಯಿತು.
ಈ ಮರುಭೂಮಿ ಪ್ರದೇಶದಿಂದ ಬಹುದೂರದಲ್ಲಿದ್ದ ಜನರಿಗೆ ಏನಾಯಿತೆಂದೇ ಗೊತ್ತಾಗಲಿಲ್ಲ. ಆ ದಿನ ಸೂರ್ಯನೇಕೋ ಡಬ್ಬಲ್ ಪ್ರಖರವಾಗಿದ್ದ ಅಂತ ಅಂದರು ಕೆಲವರು. ಇದಕ್ಕಿಂತ ಅಚ್ಚರಿಯೆಂದರೆ... ಈ ಸ್ಫೋಟ ನಡೆದ ಸ್ಥಳದಿಂದ ೧೨೫ ಕಿ.ಮೀ. ದೂರದಲ್ಲಿದ್ದ ಅಂಧ ಬಾಲಕಿಯೊಬ್ಬಳಿಗೆ ಮಿಂಚು ಕಾಣಿಸಿತಂತೆ! ಎಷ್ಟು ಪ್ರಖರವಾಗಿ ಇದ್ದೀತು ಆ ಸ್ಫೋಟ!
ಈ ತಂಡದಲ್ಲಿದ್ದ ವಿಜ್ಞಾನಿಯೊಬ್ಬರಂತೂ ‘ಓಹ್ ಇದರಿಂದ ಭೂಮಿಯ ಸಮತೋಲನವೇ ತಪ್ಪಲಿದೆ. ಈ ಆಯುಧದಿಂದ ಮಾನವ ತಾನು ವಾಸಿಸುವ ಭೂಮಿಯನ್ನೇ ನಾಶ ಮಾಡಿಕೊಳ್ಳುತ್ತಾನೆ‘ ಎಂದು ಭವಿಷ್ಯ ನುಡಿದ. ಅಣು ಬಾಂಬ್ ಪಿತಾಮಹ ಓಪನ್‌ಹೈಮರ್‌ಗೆ ಹಿಂದೂಗಳ ಭಗವದ್ಗೀತೆ ಅಷ್ಟಷ್ಟು ಗೊತ್ತಿತ್ತು. ಅದನ್ನು ಉದ್ಧರಿಸಿ ಆತ ಹಲುಬಿದ -‘ನಾನು ಮೃತ್ಯು. ಈ ವಿಶ್ವದ ವಿನಾಶಕ’ ಎಂದು. ಈ ಯೋಜನೆಯ ನಿರ್ದೇಶಕ ಕೆನ್ ಬೇನ್‌ಬ್ರಿಡ್ಜ್ ಹೇಳಿದ ‘ನೌ ವಿ ಆರ್ ಆಲ್ ಸನ್ಸ್ ಆಫ್ ಬಿಚ್ಚಸ್’.
ಜಗತ್ತಿನ ಮೊದಲ ಬಾಂಬ್ ಸೃಷ್ಟಿಕರ್ತರ ತಂಡ ತನ್ನ ಯಶಸ್ಸಿನಿಂದ ಕಂಗಾಲಾಗಿತ್ತು! ಪ್ರಯೋಗಾರ್ಥ ಸ್ಫೋಟಿಸಿದ ಸಣ್ಣ ಬಾಂಬಿಗೆ ಅವರು ನಡುಗಿಹೋಗಿದ್ದರು. ಅಣು ಬಾಂಬಿನ ಶಕ್ತಿಯನ್ನು ಕಂಡು ಈ ಅಸ್ತ್ರವನ್ನು ಕೈಬಿಡುವಂತೆ ಅವರು ಅಮೆರಿಕಕ್ಕೆ ಮನವಿ ಮಾಡಿದರು. ಆದರೆ, ಅಮೆರಿಕ ಅಂಥ ಮನಸ್ಥಿತಿಯಲ್ಲಿ ಇರಲಿಲ್ಲ. ಎರಡನೇ ಮಹಾಯುದ್ಧದ ತುತ್ತತುದಿಯಲ್ಲಿತ್ತು. ಹೊಸ ಬ್ರಹ್ಮಾಸ್ತ್ರವನ್ನು ಕೈಲಿ ಹಿಡಿದುಕೊಂಡು ಕೇಕೆ ಹಾಕಿ ನಲಿಯುತ್ತಿತ್ತು.
ಅಮೆರಿಕದ ಬಳಿ ಇನ್ನೂ ಎರಡು ಬಾಂಬ್‌ಗಳಿತ್ತು. ಒಂದು ‘ಲಿಟ್ಲ್ ಬಾಯ್’ ಇನ್ನೊಂದು ‘ಫ್ಯಾಟ್ ಮ್ಯಾನ್’.
ಜಗತ್ತಿನ ಮೊದಲ ಬಾಂಬ್ ಸಿಡಿದ ಸರಿಯಾಗಿ ೨೦ ದಿನಗಳ ನಂತರ, ೧೯೪೫ ಆಗಸ್ಟ್ ೬ರಂದು, ಹಿರೋಶಿಮಾ ಮೇಲೆ ಹಾರಿ ಬಂತು ಅಮೆರಿಕದ ಎನೋಲಾ ಗೇ -ಎಂಬ ಬಿ ೨೯ ವಿಮಾನ. ಅದು ಅಲ್ಲಿನ ಸೇತುವೆಯೊಂದನ್ನು ಗುರಿಯಾಗಿಟ್ಟುಕೊಂಡು ‘ಲಿಟ್ಲ್ ಬಾಯ್’ ಅಣು ಬಾಂಬನ್ನು ಧಸಕ್ಕೆಂದು ಬೀಳಿಸಿ ಹೊರಟು ಹೋಯಿತು. ಸುಮಾರು ನಾಲ್ಕೂವರೆ ಟನ್ ತೂಕದ ‘ಲಿಟ್ಲ್ ಬಾಯ್’ ತನ್ನ ಗುರಿಗಿಂತ ಕೇವಲ ೮೦೦ ಅಡಿ ದೂರಬಿತ್ತು. ಅಣು ಬಾಂಬಿಗೆ ಇದ್ಯಾವ ಲೆಕ್ಕ. ಹಿರೋಶಿಮಾ ಚಿಂದಿಯಾಯಿತು. ಇದಾದ ಮೂರು ದಿನಗಳ ನಂತರ ಇನ್ನೊಂದು ಅಣುಬಾಂಬ್ ‘ಫ್ಯಾಟ್ ಮ್ಯಾನ್’ ಬಿತ್ತು. ನಾಗಾಸಾಕಿ ಚಿಂದಿಯಾಯಿತು. ಜಪಾನ್ ಅಮೆರಿಕಕ್ಕೆ ಶರಣಾಯಿತು. ಅಲ್ಲಿಗೆ ಎರಡನೇ ಮಹಾಯುದ್ಧ ಮುಗಿಯಿತು. ಆದರೆ, ೬೦ ವರ್ಷ ಕಳೆದರೂ ಅಂದು ಸ್ಪೋಟಗೊಂಡ ಅಣುಬಾಂಬಿನ ದುಷ್ಪರಿಣಾಮ ಇಂದಿಗೂ ಮುಗಿದಿಲ್ಲ.
ಇತಿಹಾಸದ ಯುದ್ಧಗಳಲ್ಲಿ ಇದೆರಡೇ ಬಾರಿ ಅಟಂ ಬಾಂಬ್ ಸಿಡಿದದ್ದು. ನಡೆದ ಸಣ್ಣ ಸಣ್ಣ ಯುದ್ಧದಲ್ಲಿ ಅಟಂ ಬಾಂಬ್ ಬಳಕೆಯಾಗಿಲ್ಲ. ಆದರೆ, ಇಂದು ಅಮೆರಿಕ ಅಷ್ಟೇ ಅಲ್ಲ, ಅಂದು ಸಿಡಿದ ಬಾಂಬುಗಳಿಗಿಂತ ೧೦೦೦ ಪಟ್ಟು ಶಕ್ತಿಶಾಲಿ ಬಾಂಬುಗಳನ್ನು ಬಚ್ಚಿಟ್ಟುಕೊಂಡು ಕುಳಿತಿವೆ ಅನೇಕ ದೇಶಗಳು. ಅಮಗಳಲ್ಲಿ ಭಾರತ ಪಾಕಿಸ್ತಾನಗಳು ಎರಡು ದೇಶಗಳು. ಈಗ ಇರಾನ್ ಇಡೀ ವಿಶ್ವವನ್ನೇ ಎದುರುಹಾಕಿಕೊಂಡು ಅಣು ಬಾಂಬ್ ತಯಾರಿಸುತ್ತಿದೆ. ಇವೆಲ್ಲಾ ಬಾಂಬುಗಳು ಸಿಡಿಯದೇ ಇರುತ್ತವಾ? ಸಿಡಿದರೆ ಭೂಮಿಯ ಮೇಲೆ ಯಾರು ಬದುಕಿರುತ್ತಾರೆ. ಹೋಗಲಿ ಭೂಮಿಯಾದರೂ ಇರುತ್ತದಾ? ಗೊತ್ತಿಲ್ಲ. ಇದಕ್ಕೆ ವಿಜ್ಞಾನದ ಯಾವ ಸಿದ್ಧಾಂತ ಉತ್ತರಿಸುತ್ತದೆ!
ಡಿಯರ್ ಐನ್‌ಸ್ಟೈನ್,
ಆದರೆ, ನನಗೆ ಈ ಬಾಂಬುಗಳ ಹೆದರಿಕೆಯಿಲ್ಲ ಗೊತ್ತಾ? ಈ ಬಾಂಬುಗಳಷ್ಟೇ ಅಪಾಯಕಾರಿಯಾಗುತ್ತಿರುವ ಧರ್ಮಾಂಧತೆಯ ಬಗ್ಗೆ ನನಗೆ ಭಯವಾಗಿದೆ. ಧರ್ಮದ ಹೆಸರು ಹೇಳಲೂ ಅಂಜಿಕೆಯಾಗುತ್ತಿದೆ. ಒಂದೊಂದು ಧರ್ಮದ ಹೆಸರೂ ನನ್ನ ಬೆನ್ನಹುರಿಯಲ್ಲಿ ಲಿಟ್ಲ್ ಬಾಯ್, ಫ್ಯಾಟ್ ಮ್ಯಾನ್ ಎಂಬಷ್ಟೇ ಚಳಿಯನ್ನುಂಟು ಮಾಡುತ್ತವೆ. ಜಗತ್ತಿನ ಯಾಮದೋ ಮೂಲೆಯಲ್ಲಿ ಸಿಡಿದ ಧಾರ್ಮಿಕ ಸ್ಫೋಟ ಇನ್ನೊಂದು ಮೂಲೆಯನ್ನೂ ಸುಟ್ಟುಹಾಕುತ್ತದೆ. ಜಗತ್ತಿಗೆ ಅಟಂಬಾಂಬಿನಷ್ಟೇ ಧರ್ಮಾಂಧತೆಯಿಂದಲೂ ಅಪಾಯವಿದೆ. ಇನ್ನೊಂದು ಜಾಗತಿಕ ಯುದ್ಧದ ಭೀತಿಯನ್ನು ಹುಟ್ಟಿಸುತ್ತದೆ.
ಇನ್ನು ಎಷ್ಟು ಸಾವಿರ ಜನರಿಗೆ ನನ್ನ ಪ್ರತಿಷ್ಠಾನದಿಂದ ‘ನೊಬೆಲ್ ಶಾಂತಿ ಪ್ರಶಸ್ತಿ’ ನೀಡಿದರೂ ಅಷ್ಟೇ... ಭೂಮಿ ಎಂದೂ ಶಾಂತಿಯಿಂದ ಇರದು.
ಇಂತಿ ಭಯಭೀತ,
ಆಲ್‌ಫ್ರೆಡ್ ನೊಬೆಲ್
Kannada Prabha issue dated February 20, 2006
Religion is more Scarier than the Atom Bomb!
Tuesday, February 14, 2006
ನೀವೆಷ್ಟು ಅದೃಷ್ಟವಂತರು? ಸ್ಕೇರ್ ಡೆಕ್ಕನ್‌ನಿಂದ ತಿಳಿಯಿರಿ
ನಿಮ್ಮ ವಿಮಾನಯಾನ ಸುಖಕರವಾಗಿದ್ದರೆ ಪೂರ್ವಜನ್ಮದ ಪುಣ್ಯ ಫಲ ಗ್ಯಾರಂಟಿ:
ಕ್ಯಾಪ್ಟನ್ ಪಾಪಿನಾಥನ ಪತ್ರ
ಈ ವಿಮಾನದಲ್ಲಿ ಪ್ರಯಾಣಿಸುಮದು ಅಂದರೆ ಒಂಥರಾ ಸಾಹಸ ಯಾತ್ರೆ ಮಾಡಿದಂತೆ. ಒಮ್ಮೆ ಜುರಾಸಿಕ್ ಪಾರ್ಕ್ ಸಿನಿಮಾದಂತೆ ಥ್ರಿಲ್ಲಿಂಗ್. ಇನ್ನೊಮ್ಮೆ ಜಗ್ಗೇಶ್ ಸಿನಿಮಾ ಥರ ಕಾಮೆಡಿ. ಇನ್ನೊಮ್ಮೆ ಶ್ರುತಿ ಸಿನಿಮಾ ರೀತಿ ಟ್ರಾಜಿಡಿ. ಮಗದೊಮ್ಮೆ ’ಈವಿಲ್ ಡೆಡ್’ ಥರ ಹಾರರ್, ಇನ್ನಷ್ಟು ಸಲ ಗುಪ್ತ್ ಸಿನಿಮಾದಂತೆ ಸಸ್ಪೆನ್ಸ್... ಬಹುತೇಕ ಬಾರಿ ಟ್ರಾಜಿಡಿ, ಕಾಮೆಡಿ, ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಸೇರಿದ ಹಿಂದಿ ಸಿನಿಮಾದ ಮಿನಿಮಮ್ ಮನರಂಜನೆ ಗ್ಯಾರಂಟಿ.
ಪ್ರಿಯ ಸೋವಿನಾಥ್,
ನಾನೂ ನೋಡುತ್ತಲೇ ಇದ್ದೇನೆ. ಬಹಳ ದಿನಗಳಿಂದ ನೀನ್ಯಾಕೋ ತುಂಬಾ ಡಲ್ಲಾಗಿದ್ದೀಯಲ್ಲ. ಯಾಕೆ? ಜೀವನ ಬಹಳ ಯಾಂತ್ರಿಕವಾಗಿದೆ ಎಂದು ಬೋರಾಗಿದೆಯೇ? ಅದೇ ಆಫೀಸು. ಅದೇ ಕೆಲಸ. ಅದೇ ಓಡಾಟ. ಅದೇ ಹಾರಾಟ. ಒಂದು ದಿನ ಮಜವಾಗಿ ಕಳೆಯೋಣ ಅಂದರೆ ರಜಾ ತಗೊಳ್ಳೋಕೇ ಆಗಲ್ಲ ಅಂತೀಯಾ? ಇಂಥ ಬ್ಯುಸಿ ಲೈಫಲ್ಲಿ ಚಾರ್ಮೇ ಇಲ್ಲ ಅನಿಸುತ್ತಾ?
ನೀನು ಬುದ್ದು ಕಣೋ. ನಿಂಗೆ ಲೈಫನ್ನ ಹೇಗೆ ಎಂಜಾಯ್ ಮಾಡಬೇಕು ಅಂತಾನೇ ಗೊತ್ತಿಲ್ಲ. ಅದಕ್ಕೇ ಹೀಗೆ ಜೀವನ ಯಾಂತ್ರಿಕವಾಗಿದೆ ಅಂತ ಗೂಬೆ ಥರ ಕೂತಿರುತ್ತೀಯ. ನಿನ್ನ ಸಮಸ್ಯೆಗೆಲ್ಲ ಕಾರಣ ಏನು ಗೊತ್ತಾ? ನೀನು ಒಳ್ಳೇ ಕಂಪ್ಯೂಟರ್ ಥರ ಪ್ಲಾನ್ ಮಾಡಿಕೊಂಡು, ರೋಬಟ್ ಥರ ದುಡಿತೀಯ. ಹಾಗೆ ಸಿಸ್ಟಮ್ಯಾಟಿಕ್ ಆಗಿ ಇರೋ ಬದಲು, ಮಾಡುತ್ತಿರುವ ಕೆಲಸವನ್ನೇ ಸ್ವಲ್ಪ ಡಿಫರೆಂಟ್ ಆಗಿ ಮಾಡೋಕೆ ಆಗಲ್ವ ನಿಂಗೆ? ಲೈಫ್‌ನಲ್ಲಿ ಚೇಂಜ್ ಇರುತ್ತೆ ಕಣೋ. ಇಲ್ಲಾಂದ್ರೆ ನೀನು ಹೇಳೋ ಹಾಗೆ ಲೈಫು ಬರೀ ರೊಬೊಟಿಕ್ ಆಗದೇ ಇನ್ನೇನು ಆಗುತ್ತೆ ಹೇಳು.
ಉದಾಹರಣೆಗೆ ನೀನು ಡೆಲ್ಲಿಗೆ ಹೋಗಬೇಕು ಅಂದ್ಕೊ. ಬೆಂಗಳೂರಲ್ಲಿ ಯಾಮದೋ ವಿಮಾನ ಹತ್ತುತೀಯ. ಅದು ನಿನ್ನನ್ನು ಡೆಲ್ಲಿಯಲ್ಲಿ ಇಳಿಸುತ್ತೆ. ಆಮೇಲೆ ನೀನು ಡೆಲ್ಲಿ ಆಫೀಸಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಇನ್ನೊಂದು ವಿಮಾನ ಹತ್ತುತೀಯ. ಆ ವಿಮಾನ ನಿನ್ನನ್ನ ಬೆಂಗಳೂರಲ್ಲಿ ಇಳಿಸುತ್ತೆ. ಇಷ್ಟೇ ತಾನೇ ನೀನು ಮಾಡೋದು.
ಈ ರೂಟೀನ್ ಬದಲು, ನಾನು ಹೇಳೋ ಮಾತು ಕೇಳು. ನಿನ್ನ ಪ್ರಯಾಣ ಎಷ್ಟು ಮಜವಾಗಿರುತ್ತೆ ನೋಡು!
ನಮ್ಮ ಕನ್ನಡದವರದ್ದೇ ಒಂದು ವಿಮಾನ ಕಂಪನಿ ಇದೆ. ಹೆಸರು ಸ್ಕೇರ್ ಡೆಕ್ಕನ್ ಅಂತ. ಈ ವಿಮಾನಯಾನ ಅಂದ್ರೆ ಕ್ಷಣ ಕ್ಷಣಕ್ಕೂ ರೋಮಾಂಚಕಾರಿ ಅನುಭವ. ಒಂದು ದಿನದ ಪ್ರಯಾಣದಂತೆ ಇನ್ನೊಂದು ದಿನದ ಪ್ರಯಾಣ ಇರುಮದಿಲ್ಲ. ಒಮ್ಮೆ ಆದ ಅನುಭವವನ್ನು ನೀನೆಂದೂ ಮರೆಯುಮದಿಲ್ಲ! ಪ್ರತಿ ಪ್ರಯಾಣವೂ ಒಂದೊಂದು ಥರ ಮಜ. ಒಮ್ಮೆ ಜುರಾಸಿಕ್ ಪಾರ್ಕ್ ಸಿನಿಮಾದಂತೆ ಥ್ರಿಲ್ಲಿಂಗ್. ಇನ್ನೊಮ್ಮೆ ಜಗ್ಗೇಶ್ ಸಿನಿಮಾದಂತೆ ಕಾಮೆಡಿ. ಇನ್ನೊಮ್ಮೆ ಶ್ರುತಿ ಸಿನಿಮಾ ಥರ ಟ್ರಾಜಿಡಿ. ಮಗದೊಮ್ಮೆ ’ಈವಿಲ್ ಡೆಡ್’ ಥರ ಹಾರರ್, ಇನ್ನಷ್ಟು ಸಲ ಗುಪ್ತ್ ಸಿನಿಮಾದಂತೆ ಸಸ್ಪೆನ್ಸ್... ಬಹುತೇಕ ಬಾರಿ ಟ್ರಾಜಿಡಿ, ಕಾಮೆಡಿ, ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಸೇರಿದ ಹಿಂದಿ ಸಿನಿಮಾದ ಮಿನಿಮಮ್
ಎಂಟರ್‌ಟೇನ್‌ಮೆಂಟ್ ಗ್ಯಾರಂಟಿ.
ನಾನು ಹೇಳೋದು ನಂಬು... ಈ ಸ್ಕೇರ್ ಡೆಕ್ಕನ್ ವಿಮಾನ ಯಾನ ಮಾಡಿ ಬಂದ ಮೇಲೆ, ನೀನು ಖಂಡಿತ ’ಪ್ರಯಾಣ ಮಾಮೂಲಾಗಿತ್ತು ಕಣೋ’ ಅಂತ ಮಾತ್ರ ಹೇಳೋಲ್ಲ. ಅಷ್ಟು ಭರವಸೆಯನ್ನು ನಾನು ಕೊಡುತ್ತೇನೆ.
ಅಷ್ಟೇ ಏನು? ಈ ವಿಮಾನ ಯಾನ ಮಾಡೋದ್ರಿಂದ ನಿನ್ನ ಅದೃಷ್ಟ ಕೂಡ ಪರೀಕ್ಷಿಸಿಕೊಳ್ಳಬಹುದು. ಟಿಕೆಟ್ ಬುಕಿಂಗ್‌ನಿಂದಲೇ ನಿನ್ನ ಅದೃಷ್ಟ ಪರೀಕ್ಷೆ ಆರಂಭವಾಗುತ್ತೆ. ಕೇವಲ ೫೦೦ ರುಪಾಯಿಗೆ ಡೆಲ್ಲಿಗೆ ಹೋಗಿ, ಕೊಲ್ಕತಾಗೆ ಹಾರಿ, ಹೈದರಾಬಾದ್, ಮುಂಬೈ, ಗೋವಾ, ಚೆನ್ನೈ... ಎಲ್ಲಿಗೆ ಬೇಕಾದರೂ ಪ್ರಯಾಣಿಸಿ. ಈ ತಿಂಗಳಿಗೆ ಇಷ್ಟು ಕಡಿಮೆ ಬೆಲೆಯ ೧ ಲಕ್ಷ ಟಿಕೆಟ್ ಬಿಡುಗಡೆ ಮಾಡಿದ್ದೀವಿ ಅಂತ ಕಂಪನಿ ಪ್ರಚಾರ ಮಾಡುತ್ತೆ. ನಿಮಗೇನಾದರೂ ಈ ಟಿಕೆಟ್ ಸಿಕ್ಕರೆ ನೀನು ೧೦ ಪರ್ಸೆಂಟ್ ಅದೃಷ್ಟವಂತ ಅಂದ್ಕೊ. ಆಮೇಲೆ ಆ ವಿಮಾನ ನಿಗದಿತ ವೇಳೆಗಿಂತ ಕೇವಲ ೨-೩ ಗಂಟೆ ತಡವಾಗಿ ಹಾರಿದರೆ ನೀನು ೨೦ ಪರ್ಸೆಂಟ್ ಅದೃಷ್ಟವಂತ. ಈ ವಿಮಾನ ಏನಾದರೂ ಟೈಮಿಗೆ ಸರಿಯಾಗಿ ಹಾರಿಬಿಟ್ಟರಂತೂ ವಾರೇ ವ್ಹಾ... ನೀನು ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿರಬೇಕು ಕಣೋ... ೫೦ ಪರ್ಸೆಂಟ್ ಅದೃಷ್ಟವಂತ ಅಂತ ಖುಷಿಪಡು. ಈಗೀಗ ಸ್ಕೇರ್ ಡೆಕ್ಕನ್ ವಿಮಾನ ನಿಗದಿತ ವೇಳೆಗಿಂತ ಮುಂಚೆಯೂ ಹಾರುಮದಕ್ಕೆ ಶುರುಮಾಡಿದೆ. ಅಂದರೆ ನೀನು ವಿಮಾನ ನಿಲ್ದಾಣ ತಲುಪುಮದಕ್ಕಿಂತ ಮೊದಲೇ ಅದು ಹಾರಿ ಹೋಗಿಲ್ಲ ಅಂದರೆ ನೀನು ೬೦ ಪರ್ಸೆಂಟ್ ಅದೃಷ್ಟವಂತ. ಪ್ರತಿದಿನ ಈ ವಿಮಾನದ ೩-೪ ಟ್ರಿಪುý್ಪಗಳು ಕ್ಯಾನ್ಸಲ್ ಆಗುತ್ತವೆ. ಯಾರಿಗೂ ಹೇಳದೇ, ಕೇಳದೇ, ಈ ಕಂಪನಿಯ ಸಿಬ್ಬಂದಿ ವಿಮಾನ ನಿಲ್ದಾಣದಿಂದ ಹಾರಿಬಿಟ್ಟಿರುತ್ತಾರೆ! ನೀನು ಅಲ್ಲೇ ಕೋತಿ ಥರ ಕೂತಿರಬೇಕಾಗುತ್ತದೆ. ಅಂತಹ ಸಂದರ್ಭ ನಿನಗೆ ಬಂದಿಲ್ಲ ಅಂದರೆ ನೀನು ೭೦ ಪರ್ಸೆಂಟ್ ಲಕ್ಕಿ.
ಒಮ್ಮೊಮ್ಮೆ ಈ ವಿಮಾನದ ಟೈರು ಒಡೆದುಹೋಗಿ ಗಾಡಿ ರನ್‌ವೇಯಲ್ಲೇ ನಿಂತು ಬಿಡುತ್ತದೆ. ಅಥವಾ ರೆಕ್ಕೆ ಕಳಚಿ ನೇತಾಡಲು ಶುರುಮಾಡುತ್ತದೆ. ಮತ್ತೊಮ್ಮೆ ವಿಮಾನದ ಬಾಗಿಲೇ ಸರಿಯಾಗಿ ಹಾಕಿಕೊಳ್ಳುಮದಿಲ್ಲ. ಅಂಥದ್ದೇನು ನಡೆಯಲಿಲ್ಲ ಅಂದರೆ ನೀನು ೮೦ ಪರ್ಸೆಂಟ್ ಲಕ್ಕಿ. ವಿಮಾನ ಸರಿಯಾಗಿ ಇಳಿಯಬೇಕಾದ ನಿಲ್ದಾಣದಲ್ಲೇ ಇಳಿದರೆ ನೀನು ೧೦೦ ಪರ್ಸೆಂಟ್ ಅದೃಷ್ಟಶಾಲಿ. ಗೊತ್ತಾಯ್ತ? ನಿನಗೀ ವಿಮಾನದಲ್ಲಿ ಗುಟುಕು ನೀರು ಬೇಕಾದರೂ ದುಡ್ಡು ಕೊಡಬೇಕು. ಆದರೆ, ನಿನ್ನ ಅದೃಷ್ಟ ಪರೀಕ್ಷೆ ಉಚಿತ!
ಕಚೇರಿ ಕೆಲಸ ಬಿಟ್ಟು ಯಾಮದೇ ಇಂಟರೆಸ್ಟಿಂಗ್ ಟೈಮ್‌ಪಾಸ್ ಆಟಕ್ಕೆ ನಿನಗೆ ಟೈಮ್ ಸಿಗುಮದಿಲ್ಲ ಅಂತ ನಂಗೆ ಗೊತ್ತು. ಆದರೆ, ನಿನ್ನ ಕೆಲಸವನ್ನೇ ಒಂದು ಟೈಮ್‌ಪಾಸ್ ಗೇಮ್ ಮಾಡಿಕೊಳ್ಳಬಹುದು ಅಂತ ನಿಂಗೆ ಗೊತ್ತಾ? ಉದಾಹರಣೆಗೆ, ನೀನು ಸ್ಕೇರ್ ಡೆಕ್ಕನ್ ವಿಮಾನದ ಟಿಕೆಟ್ ಬುಕ್ ಮಾಡಿನೋಡು ಗೊತ್ತಾಗುತ್ತೆ. ೫೦೦ ರು.ಗೆ ಎಲ್ಲಿಗೆ ಬೇಕಾದರೂ ಟಿಕೆಟ್ ಸಿಗುತ್ತೆ ಅಂತ ಕಂಪನಿ ಹೇಳುತ್ತೆ ತಾನೆ? ನೀನು ಕಂಪನಿಯ ವೆಬ್‌ಸೈಟಿನಲ್ಲಿ ಎಲ್ಲಿ ಬೇಕಾದರೂ ಕ್ಲಿಕ್ ಮಾಡಿ ನೋಡು. ನಿಂಗೆ ೫೦೦ ರು. ಟಿಕೆಟ್ ಬುಕ್ ಮಾಡೋದಕ್ಕೇ ಆಗೋಲ್ಲ. ಒಂಥರಾ ಸುಡೊಕು ಥರ. ಒಮ್ಮೆ ನೀನು ಬುಕ್ ಮಾಡಲು ಶುರು ಹಚ್ಚಿಕೊಂಡೆಯೋ, ಆಯ್ತು. ಅದು ಟಿಕೆಟ್ ಬುಕ್ ಆಗುಮದಿಲ್ಲ. ನೀನು ಬಿಡುಮದಿಲ್ಲ! ಎಂಥಾ ಟೈಮ್ ಪಾಸ್. ಸುಡೊಕು ತೆಗೆದು ಮೂಲೆಗೆ ಬಿಸಾಕು!
ಇದಕ್ಕಿಂತ ಹೆಚ್ಚಾಗಿ ನೀನು ವಿಮಾನ ಅಪಹರಣದ ಬಗ್ಗೆ ಕೇಳಿದ್ದೀಯಲ್ಲ. ಹಾಗೆ ವಿಮಾನ ಹೈಜಾಕ್ ಆದಾಗ ಅದರೊಳಗಿನ ಯಾತ್ರಿಗಳ ಪರಿಸ್ಥಿತಿ ಹೇಗಿರುತ್ತದೆ ಗೊತ್ತಾ? ಸಾಕ್ಷಾತ್ ಅನುಭವ ಬೇಕೆಂದರೆ ಸ್ಕೇರ್ ಡೆಕ್ಕನ್ ವಿಮಾನ ಯಾನ ಮಾಡಬೇಕು. ನೀನು ಬೋರ್ಡಿಂಗ್ ಪಾಸ್ ತೆಗೆದುಕೊಂಡು, ಸೆಕ್ಯುರಿಟಿ ಚೆಕ್ ಮುಗಿಸಿಕೊಂಡು ಒಳಗೆ ಹೋಗಿರುತ್ತೀಯ. ಎಷ್ಟೋ ಹೊತ್ತಿನ ನಂತರ ನಿನ್ನನ್ನು ವಿಮಾನದೊಳಕ್ಕೆ ತುಂಬಿಯೂ ಆಗುತ್ತದೆ. ಆದರೆ, ವಿಮಾನ ಮಾತ್ರ ಹಾರುಮದೇ ಇಲ್ಲ. ಆಮೇಲೆ ನೋಡು ಥ್ರಿಲ್ ಶುರು. ವಿಮಾನದಲ್ಲಿ ಏನಾಗುತ್ತಿದೆ ಎಂದು ಯಾರೂ ಹೇಳುಮದಿಲ್ಲ. ಯಾವಾಗ ಟೇಕ್‌ಆಫ್ ಎಂದು ತಿಳಿಯುಮದಿಲ್ಲ. ಒಂದೆಡೆ ನಿನಗೆ ಹಸಿವೆ ಆಗುತ್ತಿರುತ್ತದೆ. ಆದರೆ, ತಿಂಡಿಯಿಲ್ಲ. ಗುಟುಕು ನೀರೂ ಇಲ್ಲ. ಪೆಟ್ರೋಲ್ ಖರ್ಚಾಗುತ್ತದೆ ಎಂದು ವಿಮಾನದ ಎಸಿಯನ್ನೂ ಪೈಲಟ್ ಆನ್ ಮಾಡಿರುಮದಿಲ್ಲ. ಹಾಗಾಗಿ ವಿಮಾನದ ಒಳಗೆ ಸೆಖೆ ಆರಂಭವಾಗುತ್ತದೆ. ಕುರ್ಚಿಗಳೇನೂ ಸುಖಾಸನಗಳಲ್ಲವಲ್ಲ. ಕುಳಿತುಕೊಳ್ಳುಮದು ಕಷ್ಟವಾಗುತ್ತದೆ. ವಿಮಾನದಿಂದ ಇಳಿಯಲು ಕೊಡುಮದಿಲ್ಲ. ಇತ್ತ ನಿನ್ನ ಬಂಧುಗಳು ನೀನು ಸುರಕ್ಷಿತವಾಗಿ ಗಮ್ಯ ತಲುಪಿದ್ದೀಯೋ ಇಲ್ಲವೋ ಅಂತ ಚಿಂತಿಸುತ್ತಿರುತ್ತಾರೆ. ಅತ್ತ ಒಂದಷ್ಟು ಜನರು ನಿನ್ನ ಬರವಿಗಾಗಿ ಕಾಯುತ್ತಿರುತ್ತಾರೆ. ಈ ಹೈಜಾಕ್‌ನಲ್ಲಿ ಉಗ್ರಗಾಮಿಗಳ ಮುಖವೊಂದು ಕಾಣುಮದಿಲ್ಲ ಅಷ್ಟೇ. ಉಳಿದಂತೆ ಆಹಾ... ಥೇಟ್ ಅಪಹರಣವಾದ ವಿಮಾನದಲ್ಲಿ ಕುಳಿತ ಅನುಭವ ನಿನಗೆ!
ಇನ್ನೊಂದು ಹೆಮ್ಮೆಯ ವಿಷಯ ಏನು ಗೊತ್ತಾ? ಏರ್‌ಪೋರ್ಟ್‌ನಲ್ಲಿ ನಿನ್ನ ಕೈಲಿ ಸ್ಕೇರ್ ಡೆಕ್ಕನ್ ಟಿಕೆಟ್ ನೋಡಿದ ಕೂಡಲೇ ಉಳಿದ ಪ್ರಯಾಣಿಕರಿಗೆ ನಿನ್ನ ಬಗ್ಗೆ ಗೌರವ ಹುಟ್ಟುತ್ತದೆ. ಈ ಭಯಂಕರ ವಿಮಾನದಲ್ಲಿ ಪ್ರಯಾಣಿಸುವ ಎದೆಗಾರಿಕೆ ನಿನಗಿದೆಯಲ್ಲ ಎಂದು ಅವರು ಅಚ್ಚರಿಪಡುತ್ತಾರೆ. ನಿನ್ನ ಧೈರ್ಯಕ್ಕೆ ಮೆಚ್ಚುತ್ತಾರೆ. ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತಾರೆ.
ಶಾರ್ಟಾಗಿ ಹೇಳಬೇಕೆಂದರೆ, ಸ್ಕೇರ್ ಡೆಕ್ಕನ್ ಯಾನ ಎಂದರೆ ಒಂಥರಾ ಸಾಹಸ ಯಾತ್ರೆ. ಒಮ್ಮೆ ಯಾತ್ರೆ ಮಾಡಿನೋಡು. ಆಮೇಲಾದರೂ ನೀನು ಸ್ವಲ್ಪ ಲವಲವಿಕೆಯಿಂದ ಇರುತ್ತೀಯೇನೋ ಅಂತ ನನಗೊಂದು ಆಸೆ ಕಣೋ.
Dare it man. Dare it.
ನಿನ್ನ ಪ್ರಿಯ ಫ್ರೆಂಡು
ಕ್ಯಾಪ್ಟನ್ ಪಾಪಿನಾಥ್
Kannada Prabha issue dated February ೧೩, 2006
How Lucky You Are?.. Test it with Scare Deccan!
-
Tuesday, February 07, 2006
ಇಲ್ಲಿ ಎಲ್ಲರ ಆಕರ್ಷಕ ಭೂತಗಳು ಸಿಗುತ್ತವೆ!
ಸೋನಿಯಾ ತಗೊಂಡರೆ ಮನಮೋಹನ್ ಫ್ರೀ, ೪ ಯಡಿಯೂರ್ ಜತೆ ೨ ಉಚಿತ, ಧರಂ ಕ್ಲಿಯರೆನ್ಸ್ ಸೇಲ್
ನೀಮ ಗೌರಿ- ಗಣೇಶ ಮೂರ್ತಿ, ಪೆಂಡಾಲ್ ಐಟಂ, ರೆಡಿಮೇಡ್ ಬಟ್ಟೆ, ಖರೀದಿಸಿ, ಬಾಡಿಗೆಗೆ ಪಡೆದು ಅದರಿಂದ ದಿಢೀರ್ ಸಿಗುವ ಅನುಕೂಲ ಅನುಭವಿಸಿದ್ದೀರಿ. ಈಗ ನಮ್ಮ ರೆಡಿ-ಟು-ಯೂಸ್ ಭೂತ, ಬೋರ್ಡುಗಳಿಂದ ನಿಮ್ಮ ಹೋರಾಟಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೇ,ನಮ್ಮ ಬ್ರಾಂಡೆಡ್ ಭೂತಗಳು ಆಕರ್ಷಕವೂ, ವರ್ಣಮಯವೂ ಆಗಿರುಮದರಿಂದ ನಿಮ್ಮ ಹೋರಾಟದ ಹೆಚ್ಚು ಹೆಚ್ಚು ಚಿತ್ರಗಳು ಟೀವಿಯಲ್ಲಿ ಪ್ರಸಾರವಾಗುತ್ತವೆ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ.
ಕೇಳಿ!! ಕೇಳಿ!!
ಇದೀಗ ಸುಸಂಧಿ!!! ತ್ವರೆ ಮಾಡಿ!!!
ವಿದೇಶಿ ಮಹಿಳೆ ಸೋನಿಯಾ ವಿರುದ್ಧ ನೀಮ ಹೋರಾಟ ಮಾಡಬೇಕೆ? ಪ್ರಧಾನಿ ಮನಮೋಹನ್ ಸಿಂಗ್ ಅವರ ಭೂತದಹನ ಮಾಡಬೇಕೆ? ಕಾವೇರಿ ನೀರು ಕೇಳುವ ಜಯಲಲಿತಾ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಬೇಕೆ? ಮುಕ್ತ ಲೈಂಗಿಕ ಹೇಳಿಕೆ ನೀಡುವ ಖುಷ್ಬೂ ವಸ್ತ್ರಾಪಹರಣ ಮಾಡಿ ಸಾರ್ವಜನಿಕವಾಗಿ ಅವಮಾನ ಮಾಡಬೇಕೇ? ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ, ಅನಂತಕುಮಾರ್, ಎಸ್.ಎಂ. ಕೃಷ್ಣ, ಮುಷರ್ರಫ್, ಬುಷ್ ಅವರ ಅಣಕು ಶವಯಾತ್ರೆ ನಡೆಸಬೇಕೆ?
ಚಿಂತೆ ಬೇಡ... ನಿಮ್ಮ ಸೇವೆಗಾಗೇ ನಾಮ ಹೊಸ ಬಿಸಿನೆಸ್ ಆರಂಭಿಸಿದ್ದೇವೆ. ನಗರದ ಎಲ್ಲಾ ಬಡಾವಣೆಯಲ್ಲೂ ಒಂದೊಂದು ‘ಭೂತ್ ಮಹಲ್’ ಬ್ರಾಂಡೆಡ್ ಷೋರೂಮ್ ತೆರೆದಿದ್ದೇವೆ!
ನಮ್ಮಲ್ಲಿ ನಗರಪಾಲಿಕೆ ಸದಸ್ಯರಿಂದ ಹಿಡಿದು, ರಾಜ್ಯ, ದೇಶ ಹಾಗೂ ವಿದೇಶಗಳ ಹಲವಾರು ವಿಐಪಿಗಳ ಆಕರ್ಷಕ ರೆಡಿಮೇಡ್ ಭೂತಗಳು, ಪ್ರತಿಕೃತಿಗಳು ಮತ್ತು ಕಟೌಟುಗಳು ಲಭ್ಯ. ಅಲ್ಲದೇ, ಕೇಂದ್ರ ಸರ್ಕಾರದ ಹಣಕಾಸು ನೀತಿ, ಅಮೆರಿಕದ ದಬ್ಬಾಳಿಕೆ ನೀತಿ, ರಾಜ್ಯ ಸರ್ಕಾರದ ಜನವಿರೋಧಿ ನೀತಿ, ನಗರಪಾಲಿಕೆಯ ಕಳಪೆ ಕಾಮಗಾರಿ, ಕನ್ನಡ ವಿರೋಧಿ ಧೋರಣೆಗಳಲ್ಲದೇ ಮಾನವ ಹಕ್ಕು, ಸ್ತ್ರೀ ಭ್ರೂಣಹತ್ಯೆ, ಬಾಲಕಾರ್ಮಿಕ ಪದ್ಧತಿ, ಕೋಮುವಾದ, ಉಗ್ರವಾದ, ಪೊಲೀಸ್ ದೌರ್ಜನ್ಯ, ಭ್ರಷ್ಟಾಚಾರ, ಖಾಸಗೀಕರಣ, ಸಾಮಾನ್ಯ ಬೆಲೆ ಏರಿಕೆ, ಪೆಟ್ರೋಲ್ ಮತ್ತು ತೈಲ ಬೆಲೆ ಏರಿಕೆ ಮುಂತಾದ ಸಾರ್ವಕಾಲಿಕ ವಿಷಯಗಳನ್ನು ಚಿತ್ತಾಕರ್ಷಕವಾಗಿ ಬಿಂಬಿಸುವ ಮತ್ತು ವಿರೋಧಿಸುವ ಪ್ರತಿಕೃತಿಗಳೂ, ಮಾದರಿಗಳೂ ನಮ್ಮಲ್ಲಿ ರೆಡಿ ಸ್ಟಾಕ್ ಇವೆ.
ನಮ್ಮ ಭೂತ ಹಾಗೂ ಪ್ರತಿಕೃತಿಗಳು ವಾಸ್ತವ ರೂಪ, ಮುಖ ಚಹರೆ ಹಾಗೂ ನೈಜ ಉಡುಗೆಯನ್ನು ಹೋಲುಮದು ನಮ್ಮ ವೈಶಿಷ್ಟ್ಯ. ನಿಮ್ಮ ಬಜೆಟ್‌ಗೆ ಸರಿಯಾಗಿ ೩ ಅಡಿ ಎತ್ತರದಿಂದ ಹಿಡಿದು ನೈಜ ಗಾತ್ರದ ಮತ್ತು ದುಪ್ಪಟ್ಟು ಗಾತ್ರದ ಗೊಂಬೆಗಳು ನಮ್ಮಲ್ಲಿ ದೊರೆಯುತ್ತವೆ. ಇಮ ಸಾಗಣೆಗೆ ಹಗುರವಾಗಿದ್ದು, ಸೀಮೆಎಣ್ಣೆ ಅಥವಾ ಪೆಟ್ರೋಲ್ ಸಹಾಯವಿಲ್ಲದೆ ಸುಲಭವಾಗಿ ಸುಟ್ಟು ಬೂದಿಯಾಗುವ ಗ್ಯಾರಂಟಿಯನ್ನು ನಾಮ ನೀಡುತ್ತೇವೆ.
ಸುಡುವಾಗ ದಟ್ಟ ಹೊಗೆ, ಪಟಾಕಿ ಸಿಡಿತ, ಬೊಯ್ಯೆಂದು ವಿಚಿತ್ರ ಸದ್ದು ಅಥವಾ ಬೇರೆ ಬೇರೆ ಬಣ್ಣದ ಬೆಂಕಿ ಉಂಟುಮಾಡುವ ಸ್ಪೆಷಲ್ ಇಫೆಕ್ಟ್ ಭೂತಗಳೂ ನಮ್ಮಲ್ಲಿವೆ.
ವಿವಿಧ ವಿಐಪಿಗಳ ರಾಜೀನಾಮೆಗೆ ಆಗ್ರಹಿಸುವ ಫಲಕಗಳು ಹಾಗೂ ಅವರಿಗೆ ಧಿಕ್ಕಾರ ಘೋಷಣೆಯ ಬೋರ್ಡುಗಳು, ಬ್ಯಾನರುಗಳೂ ನಮ್ಮಲ್ಲಿದ್ದು ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ನೀಮ ಆಯ್ಕೆ ಮಾಡಿಕೊಳ್ಳಬಹುದು.
ವಿಶೇಷ ಸೂಚನೆ: ನಮ್ಮಲ್ಲಿ ಈಗಾಗಲೇ, ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ರಾಜೀನಾಮೆ ಮತ್ತು ವಜಾಕ್ಕೆ ಕೋರುವ ಹಾಗೂ ಅವರಿಗೆ ಧಿಕ್ಕಾರ ಕೂಗುವ ಫಲಕಗಳು ಮತ್ತು ಅವರ ಭೂತಗಳ ಹೊಸ ಸ್ಟಾಕೂ ಬಂದಿದೆ. ನೂತನ ಮಂತ್ರಿಮಂಡಳ ರಚನೆಯ ದಿನವೇ ಆ ಎಲ್ಲ ನೂತನ ಮಂತ್ರಿಗಳ ವಿರೋಧಿ ಬೋರ್ಡುಗಳೂ, ಪ್ರತಿಕೃತಿಗಳೂ ನಮ್ಮಲ್ಲಿ ಮಾರಾಟಕ್ಕೆ ಸಿದ್ಧಗೊಳ್ಳುತ್ತವೆ. ಈ ಎಲ್ಲ ಹೊಸ ಸರಕುಗಳಿಗೆ ತೀವ್ರ ಬೇಡಿಕೆ ಬರಲಿದ್ದು, ಈಗಲೇ ಅಡ್ವಾನ್ಸ್ ನೀಡುವ ಮೂಲಕ ತಾಮ ಸರಕನ್ನು ಬುಕ್ ಮಾಡುವ ಸೌಲಭ್ಯವನ್ನು ನಾಮ ನೀಡುತ್ತೇವೆ.
ಅಷ್ಟೇ ಅಲ್ಲ, ನಮ್ಮಲ್ಲಿ ರೆಡಿಮೇಡ್ ಹರಕು ಚಪ್ಪಲಿ ಹಾರ, ಬೆಂಕಿ ಹಾಕಲು ಹಳೇ ಟೈರುಗಳು ಸದಾ ಕಾಲ ಲಭ್ಯವಿರುತ್ತದೆ. ಆದರೆ, ಕೊಳೆತ ಟೊಮೇಟೊ ಮತ್ತು ಕೋಳಿಮೊಟ್ಟೆಗಳು ಪ್ರತಿದಿನ ಸ್ಟಾಕ್ ಇರುವವರೆಗೆ ಮಾತ್ರ ಸಿಗುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ.
ಬಾಡಿಗೆಗೆ ಬೇಕೆ? ಇಲ್ಲಿ ಗಮನಿಸಿ:
ಈ ಬೋರ್ಡುಗಳನ್ನು ನೀಮ ಖರೀದಿ ಮಾಡಲು ಬಯಸದಿದ್ದರೆ ಬಾಡಿಗೆಗೂ ಪಡೆಯಬಹುದು. ಒಂದು ವೇಳೆ ಭೂತದಹನ ಅಥವಾ ಪ್ರತಿಕೃತಿ ಸುಡುವ ಕಾರ್ಯಕ್ರಮ ಇಲ್ಲದೇ, ಕೇವಲ ಕತ್ತೆಯ ಮೇಲೆ ಮೆರವಣಿಗೆ, ಅಣಕು ಶವಯಾತ್ರೆ, ಚಪ್ಪಲಿ ಹಾರಾರ್ಪಣೆ, ಚಪ್ಪಲಿಯಲ್ಲಿ ಥಳಿತ, ಪ್ರತಿಕೃತಿಯ ಮುಂದೆ ರೋದನ ಮುಂತಾದ ಪ್ರದರ್ಶನವಿದ್ದರೆ, ಈ ಪ್ರತಿಕೃತಿಗಳನ್ನು ನಾಮ ಬಾಡಿಗೆಗೆ ನೀಡಲೂ ಸಿದ್ಧ. ಆದರೆ, ಈ ಸರಕುಗಳು ಹಾಳಾಗದಂತೆ ವಾಪಸ್ ತಂದೊಪ್ಪಿಸುವ ಜವಾಬ್ದಾರಿ ಸಂಘಟಕರ ಮೇಲಿರುತ್ತದೆ. ಒಂದು ವೇಳೆ ನಮ್ಮ ಸರಕಿಗೆ ಹಾನಿಯುಂಟಾದರೆ ನೀಮ ನೀಡಿದ ಠೇವಣಿಯಿಂದ ಡ್ಯಾಮೇಜ್ ಚಾರ್ಜ್ ಮುರಿದುಕೊಳ್ಳಲಾಗುಮದು. ಈ ವಿಷಯದಲ್ಲಿ ಮಳಿಗೆಯ ಮಾಲೀಕರ ನಿರ್ಧಾರವೇ ಅಂತಿಮ.
ಹೋಲ್‌ಸೇಲ್ ರೇಟ್:
ಅರ್ಧ ಡಜನ್ ಭೂತಗಳಿಗೆ ಆರ್ಡರ್ ಮಾಡಿದರೆ ಸಗಟು ರಿಯಾಯಿತಿಯಿದೆ. ೨೫ಕ್ಕಿಂತ ಹೆಚ್ಚಿನ ಭೂತಗಳಿಗೆ ಭಾರಿ ರಿಯಾಯಿತಿ ನೀಡಲಾಗುಮದು. ನೂರಕ್ಕಿಂತ ಹೆಚ್ಚಿನ ಭೂತಗಳಿಗೆ ಬೇಡಿಕೆ ನೀಡಿದರೆ ರಾಜ್ಯದ ಬೇರೆ ಬೇರೆ ಭಾಗಗಳಿಗೆ ಭೂತಗಳ ಸಾಗಣೆ ವೆಚ್ಚವನ್ನೂ ನಾವೇ ಭರಿಸುತ್ತೇವೆ. ನಮ್ಮ ರೆಗ್ಯುಲರ್ ಗ್ರಾಹಕರಿಗೆ ಶೇ.೧೦ರಷ್ಟು ವಿಶೇಷ ರಿಯಾಯಿತಿಯಿದೆ. ಕ್ರೆಡಿಟ್ ಕಾರ್ಡ್ ಮೂಲಕ ಬಿಲ್ ಪಾವತಿಸಿದರೆ ಶೇ.೨ರಷ್ಟು ಅಧಿಕ ದರ ವಿಧಿಸುಮದು ಅನಿವಾರ್ಯ. ಕ್ಯಾಶ್ ಅಂಡ್ ಕ್ಯಾರಿ ವ್ಯವಹಾರಕ್ಕೇ ನಮ್ಮ ಆದ್ಯತೆ.
ದಯವಿಟ್ಟು ಉದ್ರಿ ಕೇಳಬೇಡಿ.
ಸೋನಿಯಾ ಜತೆ ಮನಮೋಹನ್ ಫ್ರೀ:
ನಮ್ಮ ಭೂತದ ಷೋರೂಮ್ ಆರಂಭೋತ್ಸವದ ನಿಮಿತ್ತ, ನಾಮ ವಿಶೇಷ ಆಫರ್‌ಗಳನ್ನು ನೀಡುತ್ತಿದ್ದೇವೆ. ಸೋನಿಯಾ ಭೂತ ತಗೊಂಡರೆ ಮನಮೋಹನ್ ರಾಕ್ಷಸ ಫ್ರೀ. ಪ್ರತಿ ೪ ಯಡಿಯೂರಪ್ಪ ಪ್ರತಿಕೃತಿ ಜತೆ ೨ ಯಡಿಯೂರಪ್ಪ ಉಚಿತ. ಖರ್ಗೆ, ಐಟಂಗೆ ಶೇ.೫೦ ಪರ್ಸೆಂಟ್ ಡಿಸ್ಕೌಂಟ್. ಧರಂ ಸಿಂಗ್ ಹಾಗೂ ಪೂಜಾರಿ ಅವರ ಹಳೆ ಸ್ಟಾಕ್ ಕ್ಲಿಯರೆನ್ಸ್ ಸೇಲ್! ಸೇಲ್! ಸೇಲ್! ಭಾರಿ ರಿಯಾಯಿತಿ ಮಾರಾಟ. ಶೇ.೯೦ ಕಡಿತ. ಈ ಆಫರ್ ಸ್ಟಾಕ್ ಇರುವವರೆಗೆ ಮಾತ್ರ.
ಬ್ರಾಂಡೆಡ್ ಭೂತದ ಅನುಕೂಲಗಳು:
೧ ಪ್ರಿಯ ಗ್ರಾಹಕರೇ, ನಾಮ ನಿಮ್ಮಂಥ ಹೋರಾಟಗಾರರು, ಪ್ರತಿಭಟನಕಾರರು, ಚಳವಳಿಕೋರರಿಗೆ ನೆರಮ ನೀಡಲೆಂದೇ ಈ ಹೊಸ ಬಿಸಿನೆಸ್ ಆರಂಭಿಸಿದ್ದೇವೆ. ಇಷ್ಟರವರೆಗೆ ನೀಮ ಗೌರಿ- ಗಣೇಶ ಮೂರ್ತಿ, ಪೆಂಡಾಲ್ ಐಟಂ, ರೆಡಿಮೇಡ್ ಬಟ್ಟೆ, ರೆಡಿ-ಟು-ಈಟ್ ಆಹಾರ ಖರೀದಿಸಿ, ಬಾಡಿಗೆಗೆ ಪಡೆದು ಅದರಿಂದ ದಿಢೀರ್ ಸಿಗುವ ಅನುಕೂಲ ಅನುಭವಿಸಿದ್ದೀರಿ. ಆದರೆ, ದಿಢೀರ್ ಆಗಿ ಹೋರಾಟ ನಡೆಸಲು ನೀಮ ಪರದಾಡುತ್ತಿದ್ದೀರಿ. ಈಗ ನಮ್ಮ ರೆಡಿ-ಟು-ಯೂಸ್ ಭೂತ, ಬೋರ್ಡುಗಳಿಂದ ನಿಮ್ಮ ಹೋರಾಟಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ನಮ್ಮ ವಿಶ್ವಾಸ.
೨ ಸದ್ಯ ನೀಮ ಬಳಸುತ್ತಿರುವ ಕಚ್ಚಾ ಭೂತ ಹಾಗೂ ಪ್ರತಿಕೃತಿಗಳನ್ನು ನೋಡಿ ನೋಡಿ ಜನರಿಗೆ ಬೋರಾಗಿದೆ. ನಿಮ್ಮ ಎಲ್ಲ ವಿನೂತನ ಹೋರಾಟಗಳೂ ಹಳೆಯದಾಗಿವೆ. ಈಗ ನಮ್ಮ ಹೊಸ ಬ್ರಾಂಡೆಡ್ ಭೂತಗಳಿಂದ ನಿಮ್ಮ ಪ್ರದರ್ಶನಗಳಿಗೆ ಹೊಸ ಕಳೆ ಮೂಡುತ್ತವೆ. ನಮ್ಮ ಭೂತಗಳು ಹೆಚ್ಚು ಆಕರ್ಷಕವೂ, ವರ್ಣಮಯವೂ ಆಗಿರುಮದರಿಂದ ನಿಮ್ಮ ಹೋರಾಟದ ಹೆಚ್ಚು ಹೆಚ್ಚು ಚಿತ್ರಗಳು ಟೀವಿಯಲ್ಲಿ ಪ್ರಸಾರವಾಗುತ್ತವೆ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ನಮ್ಮ ಭೂತಗಳು ಜನರಿಗೆ ಹೆಚ್ಚು ಮನರಂಜನೆ ನೀಡುಮದರಿಂದ ಅವರೂ ನಿಮ್ಮ ಹೋರಾಟವನ್ನು ಒಮ್ಮೆ ಗಮನಿಸುತ್ತಾರೆ.
ಬನ್ನಿ, ಹೋರಾಟ ನಮ್ಮ ಜನ್ಮಸಿದ್ಧ ಹಕ್ಕು. ನಾಮ ಹೆಚ್ಚು ಹೆಚ್ಚು ಹೋರಾಟ ಮಾಡೋಣ. ಹೋರಾಟವೇ ಪ್ರಜಾಪ್ರಭುತ್ವಕ್ಕೆ ಭೂಷಣ. ಪ್ರತಿಭಟನೆ ನಿಮ್ಮದು. ಭೂತ ನಮ್ಮದು. ಜೈ ಭಾರತ್ ಮಾತಾಕಿ
ನಿಮ್ಮ ಸನಿಹದ ‘ಭೂತ್ ಮಹಲ್’ ಮಳಿಗೆಗೆ ಒಮ್ಮೆ ಭೇಟಿ ಕೊಡಿ.
ವಿ.ಸೂ: ಅಧಿಕಾರ ಸ್ವೀಕಾರದ ದಿನದಿಂದಲೇ ಅಂಬೇಡ್ಕರ್ ಫೋಟೋ ಹಗರಣಕ್ಕೆ ಸಿಲುಕಿಕೊಂಡಿರುವ ಉಪ ಮುಖ್ಯಮಂತ್ರಿ ಯಡಿಯೂರಪ್ಪನವರ ‘ಭೂತಗಳಿಗೆ’ ರಾಜ್ಯದಲ್ಲಿ ದಿಢೀರ್ ಬೇಡಿಕೆ ಬಂದಿದ್ದು ನಮ್ಮಲ್ಲಿ ಸ್ಟಾಕ್ ಮುಗಿದಿದೆ. ದಯವಿಟ್ಟು ಯಡಿಯೂರಪ್ಪನವರ ಪ್ರತಿಕೃತಿಗಳಿಗೆ ಎರಡು ದಿನ ಮುಂಗಡ ಬುಕಿಂಗ್ ಮಾಡಬೇಕಾಗಿ ವಿನಂತಿ.
Kannada Prabha issue dated February 6, 2006
Effigy of all Prominent People Are Available Here!
Bhoot Mahal Effigy Stores - A New Business Venture.
--