ದೇಶದ ಅತ್ಯಂತ ಲಾಭದ ಹುದ್ದೆ ಸೋನಿಯಾ ಕೈಲೇ ಇದೆ
- ಸಂಸದ ಲಾಸು ಪ್ರಸಾದ್ ಯಾದವ್
ಈ ದೇಶದ ಅತ್ಯಂತ ಲಾಭದ ಹುದ್ದೆ ಈಗಲೂ ಸೋನಿಯಾ ಕೈಲೇ ಇದೆ. ನೆನಪಿರಲಿ. ಸೋನಿಯಾ ಅಣತಿ ಇಲ್ಲದೇ ‘ಕಾಂಗ್ರೆಸ್ ಹುಲ್ಲು’ ಕಡ್ಡಿ ಕೂಡ ಚಲಿಸದು. ಹಾಗಿರುವಾಗ ಜುಜುಬಿ ಒಂದು ಹುದ್ದೆ ಸೋನಿಯಾ ಕೈಲಿ ಇದ್ದರೆಷ್ಟು ಬಿಟ್ಟರೆಷ್ಟು! ಇಷ್ಟಕ್ಕೂ ಸೋನಿಯಾ ತಾವೇ ಪ್ರಧಾನಿ ಹುದ್ದೆ ಅಲಂಕರಿಸ್ತೀನಿ ಅಂದ್ರೆ ಬೇಡ ಅನ್ನೋರು ಕಾಂಗ್ರೆಸ್‌ನಲ್ಲಿ ಯಾರಾದರೂ ಇದ್ದಾರಾ? ಈಗಲೂ, ಸೋನಿಯಾ ಅವರು, ತಮ್ಮ ಮನೆಯಲ್ಲಿ ಕುಳಿತುಕೊಳ್ಳುವ ಕುರ್ಚಿಯೇ ಈ ದೇಶದ ಅತ್ಯಂತ ಲಾಭದಾಯಕ ಹುದ್ದೆ. ನೀವೇನಂತೀರಾ ರಾಬಡ್ಡಿ?
ಶ್ರೀಮತಿ ರಾಬಡ್ಡಿ ದೇವಿಯವರೆ,
ನಾನು ದುಃಖದಲ್ಲಿದ್ದೇನೆ. ನನ್ನಂತೆ ನೀವೂ ದುಃಖದಲ್ಲಿ ಇದ್ದೀರಿ ಎಂದು ನಾನು ತೀರ್ಮಾನಿಸುತ್ತೇನೆ. ನಾನು ಈ ಪತ್ರವನ್ನು ತಮ್ಮ ಪತಿಯಾಗಿ ಬರೆಯುತ್ತಿಲ್ಲ. ಲಾಭದಾಯಕ ಹುದ್ದೆಯಲ್ಲಿರುವ ಓರ್ವ ರಾಜಕಾರಣಿಯಾಗಿ ನನ್ನ ವಿಚಾರಧಾರೆಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಈ ದೇಶದ ರಾಜಕೀಯ ಯಾವ ಲೆವಲ್ಲಿಗೆ ಬಂತು ನೋಡಿದಿರಾ? ಲಾಭದಾಯಕ ಹುದ್ದೆಯಲ್ಲಿರುಮದು ತಪ್ಪಂತೆ ತಪುý್ಪ. ಅದ್ಯಾಮದೋ ಸಂವಿಧಾನದಲ್ಲೂ ಕರೆಕ್ಟಾಗಿ ವ್ಯಾಖ್ಯಾನ ಇಲ್ಲದ ರೂಲ್ಸ್ ಹಿಡಿದುಕೊಂಡು ಬಂದು ಈಗಿನ ರಾಜಕೀಯ ವ್ಯವಸ್ಥೆಯನ್ನೇ ತಲೆಕೆಳಗು ಮಾಡಲು ಪ್ರಯತ್ನಿಸುತ್ತಿದ್ದಾರೆ ಕೆಲವರು.
ವಾಟ್ ನಾನ್‌ಸೆನ್ಸ್! ಲಾಭ ಇಲ್ಲದಿದ್ದರೆ ಹುದ್ದೆ ಯಾಕೆ ಬೇಕು? ರಾಜಕೀಯ ಯಾರಿಗೆ ಬೇಕು! ಎಂಬುದನ್ನೂ ಯೋಚಿಸದ, ಕೆಲ ನಾನ್‌ಸೆನ್ಸ್ ರಾಜಕಾರಣಿಗಳು ಈ ಲಾಭದಾಯಕ ಹುದ್ದೆಯ ಗದ್ದಲವೆಬ್ಬಿಸಿದ್ದಾರೆ. ಈ ಗದ್ದಲದಿಂದ ಸುಮ್ಮನೆ ನಮ್ಮಂಥವರಿಗೆ ನಿದ್ದೆ ಹಾಳು ಅಷ್ಟೇ.
ಯಾವ ಹುದ್ದೆ ಕೊಟ್ಟರೂ ಲಾಭ ಮಾಡಿಕೊಳ್ಳುಮದು ಹೇಗೆ ಅಂತ ನಮ್ಮಂಥವರಿಗೆ ಗೊತ್ತಿಲ್ಲವಾ? ಲಾಭದಾಯಕ ಹುದ್ದೆ ಇಲ್ಲದಿದ್ದರೇನು ನಮಗೆ ಲಾಭ ಮಾಡಿಕೊಳ್ಳಲು ಆಗುಮದಿಲ್ಲವಾ? ವೋ ಹಮೆ ಕ್ಯಾ ಸಮಝ್‌ತೇ ಹೈ? ಎಮ್ಮೆಯ ಮೇವಿನಿಂದಲೇ ಲಾಭ ಹಿಂಡುಮದು ಹೇಗೆ ಎಂಬ ತಂತ್ರಜ್ಞಾನ ನಮಗೆ ಗೊತ್ತಿದೆ!
ಈ ಸೋನಿಯಾ ಮೇಡಂಗೆ ಏನಾಗಿದೆ? ಉತ್ತರ ಪ್ರದೇಶದಲ್ಲಿ ಯಾರೋ ಹೆಸರೇ ಗೊತ್ತಿಲ್ಲದ ರಾಜಕಾರಣಿ ಲಾಭದಾಯಕ ಹುದ್ದೆಯ ಅಪಸ್ವರ ಎತ್ತಿದ. ಅದಕ್ಕೆ ಈ ಅಮ್ಮ ರಾಜೀನಾಮೆ ಬಿಸಾಕಿಬಿಡೋದಾ? ಇದು ಬಿಜೆಪಿಯ ಕಾಲ ಇರಬಹುದು. ಆದರೆ, ರಾಮಾಯಣದ ಕಾಲ ಅಲ್ಲವಲ್ಲ! ಯಾಮದೋ ಅಗಸ ಸೀತೆಯ ಸಾಚಾತನದ ಬಗ್ಗೆ ಗಾಸಿಪ್ ಹಬ್ಬಿಸಿದ. ಈ ರಾಮ ಸಂಸಾರಕ್ಕೆ ರಾಜೀನಾಮೆ ನೀಡಿ ಸೀತೆಯನ್ನು ಕಾಡಿಗೆ ಕಳಿಸಿದ!
ನಾವೀಗ ಅದನ್ನೇ ಫಾಲೋ ಮಾಡಬೇಕಾ? ಈಗಿನ ಕಾಲದಲ್ಲಾಗಿದ್ದರೆ ಸೀತೆ, ರಾಮನಿಂದ ಕಾಂಪನ್‌ಸೇಷನ್ ಪಡೆಯಬಹುದಾಗಿತ್ತು. ಮೊನ್ನೆ ಮೊನ್ನೆ, ಸುಪ್ರೀಂ ಕೋರ್ಟು ಹೇಳಿಲ್ಲವಾ? ಗಂಡ ಹೆಂಡತಿ ದೂರವಾಗಿದ್ದರೆ, ಲೈಂಗಿಕ ಸಂಪರ್ಕ ಇಲ್ಲದಿದ್ದರೆ ಡೈವೋರ್ಸ್ ಪಡೆಯಬಹುದು ಅಂತ? ಆಗಿನ ಕಾಲಕ್ಕೇನೋ ರಾಮ ಮಾಡಿದ್ದು ಸರಿ ಅನ್ನಬಹುದು. ಈಗಿನ ಕಾಲದಲ್ಲಿ ಅದನ್ನೇ ಸರಿ ಅಂದರೆ ದೇಶದಲ್ಲಿ ಶೇ.೫೦ ರಷ್ಟು ಸೀತೆಯರನ್ನು ಕಾಡಿಗೆ ಕಳಿಸಬೇಕಾಗುತ್ತೆ.
ಇಷ್ಟಕ್ಕೂ ಸೋನಿಯಾ ಅವರ್ಯಾಕೆ ನಮ್ಮಂಥ ಮಾದರಿ ರಾಜಕಾರಣಿಗಳಿಂದ ಪಾಠ ಕಲಿಯುಮದಿಲ್ಲ? ರಾಜೀನಾಮೆ ಕೊಡಲೇ ಬೇಕು ಅಂತಿದ್ದರೆ, ಸೋನಿಯಾ ಕೂಡ ನಾನು ಮಾಡಿದಂತೆ ಮಾಡಬಹುದಾಗಿತ್ತು. ತಾಮ ಲಾಭದಾಯಕ ಹುದ್ದೆಗೆ ರಾಜೀನಾಮೆ ಕೊಟ್ಟು ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಆ ಹುದ್ದೆಯಲ್ಲಿ ಕೂರಿಸಿ ಲಾಭ ಮಾಡಿಕೊಳ್ಳಬಹುದಾಗಿತ್ತು! ನಾನು ನಿಮ್ಮಂಥ ಅವಿದ್ಯಾವಂತೆಯನ್ನೇ ರಾಜ್ಯದ ಅತ್ಯಂತ ಲಾಭದಾಯಕ ಹುದ್ದೆಯಾದ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕೂರಿಸಿರಲಿಲ್ಲವಾ? ಇಡೀ ದೇಶಕ್ಕೇ ಇದೊಂದು ಮಾದರಿಯಾಗಿ, ದೇಶದ ರಾಜಕಾರಣದ ಗಿನ್ನಿಸ್ ದಾಖಲೆಯಾಗಿ ಉಳಿದಿದೆ. ಹೀಗಿರುವಾಗ, ಪ್ರಿಯಾಂಕನಂಥ ಚೆಲುವೆ, ವಿದ್ಯಾವಂತೆ, ಸ್ಟೈಲ್ ಐಕಾನನ್ನು ಲಾಭದ ಹುದ್ದೆಯಲ್ಲಿ ಕೂರಿಸಿದ್ದರೆ ಸೋನಿಯಾಗೇ ಇನ್ನೂ ಹೆಚ್ಚಿನ ಲಾಭ ಆಗುತ್ತಿತ್ತು.
ಹೋಗ್ಲಿ ಬಿಡಿ. ಈಗ ಸೋನಿಯಾ ಲಾಭದ ಹುದ್ದೆ ಹೆಸರಲ್ಲಿ ಎರಡು ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ ತಾನೇ? ಒಂದು ತಮ್ಮ ಸಂಸತ್ ಸದಸ್ಯತ್ವಕ್ಕೆ ಹಾಗೂ ಇನ್ನೊಂದು ರಾಷ್ಟ್ರೀಯ ಸಲಹಾ ಮಂಡಳಿಗೆ. ಹಾಗಂತ, ಸೋನಿಯಾ ಅವರ ಲಾಭ ಏನು ಈಗ ಕಡಿಮೆ ಆಗೋಯ್ತಾ? ಈ ದೇಶದ ಅತ್ಯಂತ ಲಾಭದ ಹುದ್ದೆ ಈಗಲೂ ಸೋನಿಯಾ ಕೈಲೇ ಇದೆ. ನೆನಪಿರಲಿ. ‘ತೇನ ವಿನಾ ತೃಣಮಪಿ ನ ಚಲತಿ...’ ಅನ್ನುವಂತೆ ಸೋನಿಯಾ ಅಣತಿ ಇಲ್ಲದೇ ’ಕಾಂಗ್ರೆಸ್ ಹುಲ್ಲು’ ಕಡ್ಡಿ ಕೂಡ ಚಲಿಸದು. ಹಾಗಿರುವಾಗ ಕಾಂಗ್ರೆಸ್‌ನ ’ಹುಲು ಮಾನವ’ ಆಗಿರುವ ಪ್ರಧಾನಮಂತ್ರಿಯ ಬುದ್ಧಿ ಹೇಗೆ ಚಲಿಸೀತು?
ಸದ್ಯಕ್ಕೆ ಪ್ರಧಾನ ಮಂತ್ರಿಯ ಸಿಂಹಾಸನವೇ ಸೋನಿಯಾ ಕೈಲಿರುವಾಗ ಜುಜುಬಿ ಒಂದು ಹುದ್ದೆ ಸೋನಿಯಾ ಕೈಲಿ ಇದ್ದರೆಷ್ಟು ಬಿಟ್ಟರೆಷ್ಟು! ಇಷ್ಟಕ್ಕೂ ಸೋನಿಯಾ ನಾಳೆ ತಾವೇ ಪ್ರಧಾನಿ ಹುದ್ದೆ ಅಲಂಕರಿಸ್ತೀನಿ ಅಂದ್ರೆ ಬೇಡ ಅನ್ನೋರು ಕಾಂಗ್ರೆಸ್‌ನಲ್ಲಿ ಯಾರಾದರೂ ಇದ್ದಾರಾ? ಈಗಲೂ, ಸೋನಿಯಾ ಅವರು, ನಂ.೧೦, ಜನ್‌ಪಥ್ ರಸ್ತೆಯ, ತಮ್ಮ ಮನೆಯಲ್ಲಿ ಕುಳಿತುಕೊಳ್ಳುವ ಕುರ್ಚಿಯೇ ಈ ದೇಶದ ಅತ್ಯಂತ ಲಾಭದಾಯಕ ಹುದ್ದೆ. ನೀವೇನಂತೀರಾ ರಾಬಡ್ಡಿ?
ನಾನು ನನ್ನ ಈ ವಿಚಾರಧಾರೆಯನ್ನು ವಿವರಿಸುತ್ತ ಇರುವಾಗ, ಅದ್ಯಾರೋ ಬಂದು ಲಾಭದಾಯಕ ಹುದ್ದೆಗೆ ಸಂವಿಧಾನದಲ್ಲಿ ಈ ರೀತಿಯ ಲೌಕಿಕ ಲಾಭದ ಅರ್ಥವಿಲ್ಲ. ಅಲ್ಲಿನ ಅರ್ಥವೇ ಬೇರೆ ಎಂದು ಸಾಂವಿಧಾನಿಕವಾಗಿ ವಿವರಿಸಲು ಆರಂಭಿಸಿದ. ನಾನು ಅವನಿಗೆ ಶಟ್ ಅಪ್ ಅಂದೆ. ಈ ಸಂವಿಧಾನದಲ್ಲಿ ಏನೇನೋ ಹೇಳಿರ್ತಾರೆ. ಅದನ್ನೆಲ್ಲ ಸೀರಿಯಸ್ಸಾಗಿ ತಗೋಳ್ಳೋಕಾಗುತ್ತಾ ಅಂತ ಬೈದು ಕಳಿಸಿದೆ.
ನಾಮ ಯಾಮದನ್ನೇ ಆದರೂ ಪ್ರಾಕ್ಟಿಕಲ್ಲಾಗಿ ನೋಡಬೇಕು. ಸರ್ಕಾರದ ಹುದ್ದೆಗಳಲ್ಲಿ ಯಾಮದು ಲಾಭದಾಯಕ ಹುದ್ದೆ ಯಾಮದು ಅಲ್ಲ ಎಂದು ವಿಭಾಗ ಮಾಡುಮದೇ ಪ್ರಾಕ್ಟಿಕಲ್ ಅಲ್ಲ. ಇದನ್ನು ನ್ಯಾಯಾಲಯವಾಗಲೀ, ಚುನಾವಣಾ ಆಯೋಗವಾಗಲೀ ತೀರ್ಮಾನಿಸುಮದೇ ತಪುý್ಪ ಅಂತ ನನ್ನ ವಾದ. ಸರ್ಕಾರ ಅಂದಮೇಲೆ, ಎಲ್ಲ ಹುದ್ದೆಗಳೂ ಲಾಭದಾಯಕವೇ. ಆದರೆ, ಲಾಭ ಮಾಡಿಕೊಳ್ಳುಮದು ಹೇಗೆ ಮತ್ತು ಎಷ್ಟು ಎನ್ನುಮದು ಆಯಾ ವ್ಯಕ್ತಿಯ ಶಕ್ತಿ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ -ಎನ್ನುಮದು ನನ್ನ ವಿಚಾರಧಾರೆ.
ಹುದ್ದೆ ಯಾಮದೇ ಆಗಿರಲಿ, ಅದಕ್ಕೆ ಘನತೆ ಹೇಗೆ ಬರುತ್ತೆ ಗೊತ್ತಾ? ಆ ಹುದ್ದೆ ಎಷ್ಟು ಲಾಭ ತಂದು ಕೊಡುತ್ತೆ ಎಂಬ ಒಂದೇ ಅಂಶದಿಂದ! ಉದಾಹರಣೆಗೆ, ಪೊಲೀಸ್ ಪೇದೆಯ ಹುದ್ದೆಗಿಂತ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಯಾಕೆ ಹೆಚ್ಚು ಘನತೆಯಿದೆ ಹೇಳು. ಪೇದೆಯ ಹುದ್ದೆಗೆ ಬರೀ ೫ ರುಪಾಯಿಯಿಂದ ೫೦೦ ರುಪಾಯಿ ಲಂಚ ಸಿಗುತ್ತೆ. ಅದೇ ಸಬ್ ಇನ್‌ಸ್ಪೆಕ್ಟರ್ ಹುದ್ದೆಯಲ್ಲಿ ಇರುವಾತನಿಗೆ ೫೦೦ ರುಪಾಯಿಯಿಂದ ೫೦,೦೦೦ ರುಪಾಯಿ ಘನತೆಯಿದೆ. ಇನ್‌ಸ್ಪೆಕ್ಟರ್ ಹುದ್ದೆಗೆ ಲಕ್ಷ ರುಪಾಯಿಗಳಲ್ಲಿ ಘನತೆಯಿದೆ. ಹೀಗೆ ಹುದ್ದೆ ಹೆಚ್ಚಿದಂತೆಲ್ಲಾ ಘನತೆ ಹೆಚ್ಚುತ್ತಾ ಹೋಗುತ್ತದೆ! ಈ ಘನತೆ ಮೀರಿ ಕೋಟಿ ಗಟ್ಟಲೆ ಸಂಪಾದಿಸಿದರೆ ಮಿಕ್ಕವರ ಕಣ್ಣು ಆ ಹುದ್ದೆಯ ಮೇಲೆ ಬೀಳುತ್ತದೆ. ಆಗ ಲೋಕಾಯುಕ್ತ ವೆಂಕಟಾಚಲಯ್ಯ ದಾಳಿ ಮಾಡುತ್ತಾರೆ. ಪರಿಣಾಮವಾಗಿ ಲೋಕಾಯುಕ್ತ ಕಚೇರಿಯ ಅನೇಕ ಹುದ್ದೆಗಳ ಘನತೆ ಹೆಚ್ಚುತ್ತಾ ಹೋಗುತ್ತದೆ! ಶಾಸಕರು, ಸಂಸದರು, ಮಂತ್ರಿಗಳ ಹುದ್ದೆಗಳಿಗೂ ಇದೆ ನೀತಿ ಅನ್ವಯಿಸುತ್ತದೆ.
ಹೀಗೆ, ಇಡೀ ಸರ್ಕಾರಿ ವ್ಯವಸ್ಥೆಯ ಘನತೆ ಲಾಭದಾಯಕ ಹುದ್ದೆಗಳ ಮೇಲೆ ಅವಲಂಬಿತವಾಗಿದೆ. ಲಾಭದಾಯಕ ಹುದ್ದೆಗಳು ಹೆಚ್ಚಿದಷ್ಟೂ ಇಡೀ ಸರ್ಕಾರದ ಘನತೆ ಹೆಚ್ಚುತ್ತದೆ. ಆದ್ದರಿಂದ, ಲಾಭದಾಯಕ ಹುದ್ದೆಗಳ ಬಗ್ಗೆ ಯಾರೂ ಅಪಸ್ವರ ಎತ್ತಬಾರದು.
ಆದರೆ, ಒಬ್ಬರಿಗೆ ಒಂದೇ ಲಾಭದಾಯಕ ಹುದ್ದೆ ಎಂದು ಬೇಕಾದರೆ ಕಾನೂನು ಮಾಡಬಹುದು. ಇದರಿಂದ ದೇಶದಲ್ಲಿ ಹೆಚ್ಚಿನ ಜನರಿಗೆ ಲಾಭದಾಯಕ ಹುದ್ದೆ ಲಭಿಸಿ ಸರ್ವರ ಅಭಿವೃದ್ಧಿಯಾಗುತ್ತದೆ ಅಂತ ನನ್ನ ಸಲಹೆ.
ಒಂದು ವೇಳೆ ನನ್ನ ಸಲಹೆಗೆ ಮನ್ನಣೆ ನೀಡದೆ, ಸದ್ಯ ಲಾಭದ ಹುದ್ದೆಯಲ್ಲಿರುವ ಎಲ್ಲ ಶಾಸಕರೂ, ಸಂಸದರೂ ರಾಜೀನಾಮೆ ನೀಡುವಂತಾದರೆ, ಮತ್ತೆ ಚುನಾವಣೆ ನಡೆಸಬೇಕಾಗುತ್ತದೆ. ಇದರಿಂದ ದೇಶಕ್ಕೆ ನಷ್ಟವಾಗುತ್ತದೆ. ಹಾಗಾಗಬಾರದು ಎಂದರೆ, ಲಾಭದ ಹುದ್ದೆಗಳ ಗದ್ದಲ ತಕ್ಷಣ ಸ್ಥಗಿತವಾಗಬೇಕು.
ಲಾಭಾಕಾಂಕ್ಷಿ
ಲಾಸು ಪ್ರಸಾದ್ ಯಾದವ್
Kannada Prabha issue dated March 27, 2006
Priyanka Gets The Office-of-Profit Witch Sonia Quit
Tuesday, March 28, 2006
ಸೋನಿಯಾ ಬಿಟ್ಟ ಲಾಭದ ಹುದ್ದೆಗೆ ಪುತ್ರಿ ಪ್ರಿಯಾಂಕಾ?
Tuesday, March 21, 2006
‘ಮಿಸ್ ಇಂಡಿಯಾ’ಗಳು ಹೆಚ್ಚುತ್ತಿದ್ದಾರೆ ಎಚ್ಚರಿಕೆ!
ಭುವನ ಸೌಂದರ್ಯದಲ್ಲಿ ಭಾರತ ನಂಬರ್-೧, ಗ್ರಾನ್ ಸ್ಲಾಂ ರ್ಯಾಂಕಿಂಗ್ ನಂ.೨ -
ಊರ್ವಶಿಗೆ ಮೊದಲ ಮಿಸ್ ಇಂಡಿಯಾ ಯೂನಿವರ್ಸ್ ರಂಭೆ ಪತ್ರ
ನಿಂಗೊತ್ತಾ? ಜಾಗತಿಕ ‘ಗ್ರಾನ್ ಸ್ಲಾಂ’ ಸೌಂದರ್ಯದಲ್ಲಿ ಭಾರತಕ್ಕೆ ೨ನೇ ಸ್ಥಾನವಿದೆ. ಭುವನ ಸುಂದರಿ ಸ್ಪರ್ಧೆಯನ್ನಷ್ಟೇ ಲೆಕ್ಕಕ್ಕೆ ಹಿಡಿದರೆ ಭಾರತಕ್ಕೆ ೧ನೇ ಗ್ರಾನ್ ಸ್ಲಾಂ ಪಟ್ಟ! ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ೩ನೇ ರ್ಯಾಂಕ್. ಮಿಸ್ ಇಂಟರ್‌ನ್ಯಾಶನಲ್ ಹಾಗೂ ಮಿಸ್ ಅರ್ಥ್ ಸ್ಪರ್ಧೆ ಭಾರತಕ್ಕೆ ತುಸು ಹೊಸತಾದ್ದರಿಂದ ಭಾರತದ ರ್ಯಾಂಕ್ ಇನ್ನೂ ಏರಿಲ್ಲ. ಆದರೂ, ಕ್ರಮವಾಗಿ ೫ ಹಾಗೂ ೧೨ನೇ ಸ್ಥಾನ ಭಾರತಕ್ಕಿದೆ.
ಊರ್ವಶಿ, ಊರ್ವಶಿ..
ಇದೂನೂ ಟೇಕ್ ಇಟ್ ಈಸಿ ಪಾಲಿಸಿ?
ಅಲ್ಲಾ ಕಣೆ, ಮೊನ್ನೆ ರಾತ್ರಿ ಟೀವೀಲಿ ಮಿಸ್ ಇಂಡಿಯಾ ಸ್ಪರ್ಧೆ ನೋಡಿದ್ಯಾ? ನಾನು ಯಾವ ಪ್ರೋಗ್ರಾಂ ಮಿಸ್ ಮಾಡಿದ್ರೂ ಈ ಸೌಂದರ್ಯ ಸ್ಪರ್ಧೆ ನೇರಪ್ರಸಾರ ನೋಡೋಕ್ ಮಾತ್ರ ಮರೆಯೋಲ್ಲ. ಈ ಸ್ಪರ್ಧೇಲಿ ಭಾಗವಹಿಸೋವ್ರಲ್ಲಿ ನನಗಿಂತ ಸುಂದರಿ ಯಾರಾದ್ರೂ ಇದ್ದಾಳಾ ಅಂತ ಆತಂಕದಿಂದಾನೇ ನೋಡ್ತೇನೆ. ಆಮೇಲೆ ಯಾರೂ ಇಲ್ಲಾಂತ ಖಚಿತ ಮಾಡ್ಕೊಂಡು ಸಮಾಧಾನ ಪಡ್ತೇನೆ! ಅಲ್ವಾ ಮತ್ತೆ... ನನಗಿಂತ ಸುಂದರಿ ಯಾರಾದ್ರೂ ಇರೋಕೆ ಸಾಧ್ಯಾನಾ?
ಏಯ್... ನಿನ್ ಬಗ್ಗೆ ಹೇಳ್ತಿಲ್ಲ ಕಣೆ. ನೀನೂ ನನ್ ಥರಾ ಸುಂದರೀನೇ. ಖರೇ ಹೇಳ್ಲಾ? ನಂಗೆ ತುಂಬಾ ವರ್ಷದಿಂದ ಒಂದು ಸಣ್ಣ ಅಹಂಕಾರ ಇತ್ತು. ನಾನು, ನೀನು, ಮೇನಕೆ ಮತ್ತು ತಿಲೋತ್ತಮೆ... ಮಾತ್ರ ತ್ರಿಲೋಕ ಸುಂದರಿಯರು. ನಮ್ಮನ್ನು ಬಿಟ್ರೆ ಇನ್ಯಾರೂ ಇಷ್ಟು ಸುಂದರಿಯರಲ್ಲ ಅನ್ನೋ ನಂಬಿಕೆಯಿತ್ತು. ಶ್ರೀಮಂತಿಕೆಗೆ ಕುಬೇರ ಹೇಗೋ, ಸೌಂದರ್ಯಕ್ಕೆ ನಾಮ ಹಾಗೆ ಅಂತ ನನ್ನೊಳಗೇ ಬೀಗ್ತಾಇದ್ದೆ. ಸೌಂದರ್ಯ ಅಂದರೆ ನಾಮ. ನಾಮ ಅಂದರೆ ಸೌಂದರ್ಯ ಅನ್ನೋ ಮಾತು ಕೇಳಿದಾಗೆಲ್ಲ ಖುಷಿಯಾಗ್ತಾ ಇತ್ತು. ಆದರೆ, ಈಗ ಸೌಂದರ್ಯ ಅಂದರೆ ಜನ ಐಶ್ವರ್ಯ ರೈ, ಸೆಕ್ಸಿ ಅಂದರೆ ಮಲ್ಲಿಕಾ ಶೆರಾವತ್ ಅಂತಾರೆ. ನಂಗೆ ಬೇಜಾರಾಗಲ್ವಾ ಹೇಳು? ನಿಂಗೂ ಬೇಜಾರಾಗಿರಬೇಕಲ್ವಾ? ಮೇನಕೆ, ತಿಲೋತ್ತಮೆಗೂ ಆಗಿರುತ್ತೆ ಬಿಡೆ.
ಇಷ್ಟಕ್ಕೂ ಈ ಮಿಸ್ ಇಂಡಿಯಾ ಸ್ಪರ್ಧೆ ಇದೆಯಲ್ಲಾ. ಇದು ಅಮೆರಿಕ ಮತ್ತು ಯೂರೋಪ್‌ನ ಸೌಂದರ್ಯ ಸ್ಪರ್ಧೆಗಳ ಮಾದರಿಯಲ್ಲಿ ಆರಂಭವಾದದ್ದು ಅಂತ ಮೊನ್ನೆ ಇಂದ್ರ ಹೇಳಿದ ಕಣೆ. ಆರಂಭದಲ್ಲಿ ’ಬಿಕಿನಿ ಡ್ರೆಸ್’ ಕಾರ್ಯಕ್ರಮವಾಗಿ ಆರಂಭವಾಯ್ತಂತೆ. ಆಮೇಲೆ ಅಮ ಟೀವಿ ಕಾರ್ಯಕ್ರಮಗಳಾಗಿ ರೂಪಾಂತರವಾದವಂತೆ.
ಕನ್ನಡದ ಉದಯ ಚಾನಲ್‌ನಲ್ಲಿ ಆದರ್ಶ ದಂಪತಿಗಳು ಅನ್ನೋ ಕಾರ್ಯಕ್ರಮ ಬರ್ತಿತ್ತಲ್ಲ. ಈಗ ಈ-ಟೀವಿಯಲ್ಲಿ ‘ಸಿಲ್ಲಿ ಲಲ್ಲಿ’ ಧಾರಾವಾಹಿ ಬರುತ್ತಲ್ಲ... ಹಾಗೆ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ಇಂಡಿಯಾ ಎಲ್ಲಾ ಈಗ ದುಡ್ಡು ಮಾಡೋ ಟೀವಿ ಕಾರ್ಯಕ್ರಮಗಳು ಅಷ್ಟೇ.
ಆದರ್ಶ ದಂಪತಿ ಕಾರ್ಯಕ್ರಮದಲ್ಲಿ ಬಹುಮಾನ ಪಡೆಯೋರು ನಿಜವಾಗ್ಲೂ ಆದರ್ಶ ದಂಪತಿಗಳು ಹೇಗಲ್ವೋ, ಈ ಸೌಂದರ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆಯೋರೂ ನಿಜವಾಗಿ ಸುಂದರಿಯರಲ್ಲ. ಈ ವರ್ಷದ ಮಿಸ್ ಇಂಡಿಯಾ ನೇಹಾ ಕಪೂರ್ ನೋಡು. ಬ್ಯೂಟಿಯಂತೆ ಬ್ಯೂಟಿ! ಈ ವರ್ಷ ಮಿಸ್ ಯೂನಿವರ್ಸ್‌ನಲ್ಲಿ ಸೋಲು ಗ್ಯಾರಂಟಿ.
ಈ ಜಗತ್ತಿನಲ್ಲಿ ಸುಂದರಿಯರು ಯಾರಾದರೂ ಇದ್ದರೆ ನಾಮ ನಾಲ್ಕೇ ಜನ ಅಂತ ಇಂದ್ರ ಹೇಳಿದ್ದಾನೆ ಕಣೆ. ಸೋ ನೈಸ್ ಆಫ್ ಹಿಮ್ ಅಲ್ವಾ?
ಈಗಂತೂ, ಪ್ರಪಂಚದಲ್ಲಿ ನೂರಾರು ರೀತಿಯ ಸುಂದರಿಯರ ಸ್ಪರ್ಧೆ ನಡೀತಿದೆ. ಮಿಸ್ ಯೂನಿವರ್ಸ್, ಮಿಸ್ ವರ್ಲ್ಡ್, ಮಿಸ್ ಇಂಟರ್‌ನ್ಯಾಶನ್, ಮಿಸ್ ಅರ್ತ್, ಮಿಸ್ ಇಂಟರ್‌ನ್ಯಾಶನ್ ಟೂರಿಸಂ, ಮಿಸ್ ಕಾಂಟಿನೆಂಟಲ್... ನಿಂದ ಹಿಡಿದು ಭಾರತದ ಮಿಸ್ ಇಂಡಿಯಾ, ಮಿಸ್ ಬೆಂಗಳೂರು, ಮಿಸ್ ದೊಡ್ಡಬಳ್ಳಾಪುರದ ವರೆಗೆ ಪ್ರತಿ ಊರು ಕೇರಿಗೂ ಒಂದೊಂದು ಸ್ಪರ್ಧೆಯಿದೆ. ಅಷ್ಟೇ ಅಲ್ದೇ, ಸುಡೊಕು ಸುಂದರಿ, ಬಿಕನಿ ಸುಂದರಿ, ಸೆಕ್ಸಿ ಸುಂದರಿ, ಮಂದಹಾಸ ಸುಂದರಿ, ಕೇಶ ಸುಂದರಿ, ತ್ವಚಾ ಸುಂದರಿ, ನೀಳ್ಗಾಲ ಸುಂದರಿ, ಇನಿದನಿಯ ಸುಂದರಿ... ಓಹೋಹೋ... ಸುಂದರಿಯರ ಪಟ್ಟಿ ಉದ್ದವಿದೆ. ಸಾಲದು ಅಂತ ಮದುವೆಯಾದ ಶ್ರೀಮತಿ ಸುಂದರಿ, ವೃದ್ಧ ಸುಂದರಿ, ಡುಮ್ಮಿ ಸುಂದರಿ ಅಂತೆಲ್ಲಾ ಇನ್ನೂ ಹಲವಾರು ಸ್ಪರ್ಧೆಗಳಿವೆ.
ಅಷ್ಟೇ ಅಲ್ಲ ಊರ್ವಶಿ,
ನಿಂಗೊತ್ತಾ? ಭಾರತದಲ್ಲಿ ಸುಂದರಿಯರ ಸಂಖ್ಯೆ ಹೆಚ್ಚುತ್ತಿದೆ. ಜಾಗತಿಕ ’ಗ್ರಾನ್ ಸ್ಲಾಂ’ ಸೌಂದರ್ಯದಲ್ಲಿ ಭಾರತಕ್ಕೆ ೨ನೇ ಸ್ಥಾನವಿದೆ. ಭುವನ ಸುಂದರಿ ಸ್ಪರ್ಧೆಯನ್ನಷ್ಟೇ ಲೆಕ್ಕಕ್ಕೆ ಹಿಡಿದರೆ ಭಾರತಕ್ಕೆ ೧ನೇ ಗ್ರಾನ್ ಸ್ಲಾಂ ಪಟ್ಟ! ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ೩ನೇ ರ್ಯಾಂಕ್. ಮಿಸ್ ಇಂಟರ್‌ನ್ಯಾಶನಲ್ ಹಾಗೂ ಮಿಸ್ ಅರ್ಥ್ ಸ್ಪರ್ಧೆ ಭಾರತಕ್ಕೆ ತುಸು ಹೊಸತಾದ್ದರಿಂದ ಭಾರತದ ರ್ಯಾಂಕ್ ಇನ್ನೂ ಏರಿಲ್ಲ. ಆದರೂ, ಕ್ರಮವಾಗಿ ೫ ಹಾಗೂ ೧೨ನೇ ಸ್ಥಾನ ಭಾರತಕ್ಕಿದೆ.
ಗ್ಲೋಬಲ್ ಬ್ಯೂಟಿಸ್ ಎಂಬ ಪ್ರತಿಷ್ಠಿತ ವೆಬ್‌ಸೈಟು ಈ ಲೆಕ್ಕವನ್ನು ಇಟ್ಟಿದೆ. ಪ್ರತಿ ಸೌಂದರ್ಯ ಸ್ಪರ್ಧೆಯಲ್ಲಿ ಆಯಾ ದೇಶದ ಪ್ರಗತಿಗನುಗುಣವಾಗಿ ಅಂಕಗಳನ್ನು ನೀಡುವ ಈ ವೆಬ್‌ಸೈಟು ಆ ಅಂಕಗಳ ಆಧಾರದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ದೇಶಗಳಿಗೆ ಸೌಂದರ್ಯದ ಗ್ರಾನ್ ಸ್ಲಾಂ ರ್ಯಾಂಕ್ ನೀಡಿದೆ. (ಪಟ್ಟಿ ನೋಡಿ)
ಗ್ಲೋಬಲ್ ಬ್ಯೂಟಿಸ್ ಗ್ರಾನ್ ಸ್ಲಾಂ
೨೦೦೫ರಲ್ಲಿ ಸ್ಥಾನ ----- ದೇಶ --------- ಅಂಕಗಳು
೧. ----------------- ವೆನಿಜುವೆಲಾ ----- ೬೦೧.೦೦
೨. ----------------- ಭಾರತ --------- ೫೫೭.೫೦
೩. ----------------- ಅಮೆರಿಕಾ ------- ೪೬೫.೦೦
೪. ----------------- ದಕ್ಷಿಣ ಆಫ್ರಿಕಾ --- ೩೪೨.೦೦
೫. ----------------- ಕೊಲಂಬಿಯಾ --- ೩೨೬.೦೦
೬. ----------------- ಪೋರ್ಟರಿಕೋ --- ೨೮೩.೦೦
೭. ----------------- ರಷ್ಯಾ ---------- ೨೭೮.೫೦
೮. ----------------- ಫಿಲಿಪೈನ್ಸ್ ------ ೨೭೬.೫೦
೯. ----------------- ಸ್ಪೇನ್ ---------- ೨೭೫.೫೦
೧೦. --------------- ಪೆರು ----------- ೨೩೩.೦೦
ಹೀಗೆ ದಿಢೀರ್ ಆಗಿ ಭಾರತದ ಸುಂದರಿಯರ ಸಂಖ್ಯೆ ಹೆಚ್ಚಾಗಲು ಕಾರಣವೇನು ಅಂತ ನಂಗೆ ಕುತೂಹಲ ಉಂಟಾಯ್ತು. ಅದಕ್ಕೆ ಒಂದು ತನಿಖೆ ನಡೆಸಿದಾಗ ಸತ್ಯ ಏನೂಂತ ಗೊತ್ತಾಯ್ತು. ಕಳೆದ ೧೦ ವರ್ಷಗಳ ಈಚೆ, ಸೌಂದರ್ಯ ಸ್ಪರ್ಧೆಗಳ ಸಂಖ್ಯೆ ಹೆಚ್ಚಾಗಿದೆ. ಈ ಸಮಯದಲ್ಲೇ ಭಾರತದಲ್ಲಿ ಟೆಲಿವಿಷನ್ ಕ್ರಾಂತಿಯಾಗಿದೆ. ಬಟ್ಟೆ ಬಿಚ್ಚುವ ಫ್ಯಾಷನ್‌ಗೆ ಜನ ಒಪ್ಪಿಕೊಂಡಿದ್ದಾರೆ. ಇದನ್ನು ನೋಡಲು ಪುರುಷರು ಹುಚ್ಚೆದ್ದಿದ್ದಾರೆ. ಫ್ಯಾಷನ್‌ಗೆ ಖರ್ಚು ಮಾಡಲು ಭಾರತದಲ್ಲಿ ಸಾಕಷ್ಟು ಹಣವಿದೆ. ಹಾಗಾಗಿ, ಭಾರತದ ಮೇಲೆ ಸೌಂದರ್ಯ ಪ್ರಸಾಧನಗಳ ಕಂಪನಿಗಳ ಕಣ್ಣಿದೆ. ಅದಕ್ಕೇ, ಭಾರತದಲ್ಲಿ ಸೌಂದರ್ಯ ಉದ್ಯಮ ಬೆಳೆಸಲು ನಿರ್ಧರಿಸಿರೋ ಈ ಕಂಪನಿಗಳು ವಿಪರೀತ ಬಂಡವಾಳ ಹೂಡಿವೆ. ಯುವ ಜನತೆಯ ಕ್ರೇಜ್ ಹೆಚ್ಚಿಸಲು ಸಿಕ್ಕ ಸಿಕ್ಕ ಸೌಂದರ್ಯ ಸ್ಪರ್ಧೆ ಹಾಗೂ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಿವೆ. ಈ ಹುಚ್ಚುಹೊಳೆಗೆ ಕೊಚ್ಚಿ ಹೋಗುತ್ತಿರುವ ನಮ್ಮ ಹುಡುಗ ಹುಡುಗಿಯರು ಫ್ಯಾಷನ್ ಲೋಕದ ದಾಸರಾಗುತ್ತಿದ್ದಾರೆ. ಪರಿಣಾಮವಾಗಿ ಜಗತ್ತಿನಲ್ಲೇ ಫ್ಯಾಷನ್ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಭಾರತವಾಗಿದೆ. ಅಜ್ಜಿಯರೂ ಬ್ಯೂಟಿ ಪಾರ್ಲರ್‌ಗೆ ಹೋಗ್ತಾ ಇರೋದೇ ಇದಕ್ಕೆ ಸಾಕ್ಷಿ!
ಇದು ತಪ್ಪಾ ಅಂತ ಕೇಳ ಬೇಡ ಊರ್ವಶಿ. ಕೆಲಮ ವಿಷಯಗಳಲ್ಲಿ ತಪ್ಪೋ ಸರಿಯೋ ಅನ್ನೋದು ಮುಖ್ಯವಲ್ಲ. ಇಷ್ಟವಾಗುತ್ತೋ ಇಲ್ಲವೋ ಅನ್ನೋದಷ್ಟೇ ವಾಸ್ತವವಾಗುತ್ತೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಹೇಳಿದ್ದ ಮಾತು ನಿಜ ಕಣೆ. ’ಸೌಂದರ್ಯ ಸ್ಪರ್ಧೆಯನ್ನು ಯಾಕೆ ವಿರೋಧಿಸ್ತೀರಿ? ಸೌಂದರ್ಯ ಇರೋರು ತೋರಿಸ್ತಾರೆ. ಆಸಕ್ತಿ ಇರೋರು ನೋಡಿಕೊಳ್ತಾರೆ. ಉಳಿದೋರು ತಮ್ಮ ತಮ್ಮ ಕೆಲಸ ನೋಡಿಕೊಳ್ಳಲಿ...’ ಅಂತ.
ನಂಗೆ ಅದಲ್ಲ ಕಣೆ ಚಿಂತೆ. ಈಗಿನ ಮಿಸ್ ಇಂಡಿಯಾಗಳಾದರೋ ವರ್ಷ ಕಳೆದ ಕೂಡಲೇ ಮಾಜಿ ಆಗುತ್ತಾರೆ. ಆದರೆ, ಈ ದೇಶದ ಮೊಟ್ಟ ಮೊದಲ ಮಿಸ್ ಇಂಡಿಯಾಗಳಾದ ನಾವಿನ್ನೂ ಮಾಜಿಗಳಾಗದೇ ಹಾಗೂ ಹೀಗೂ ಈವರೆಗೂ ಉಳಿದುಕೊಂಡಿಡ್ವಿ. ಆದ್ರೆ, ಭಾರತದಲ್ಲಿ ಈ ರೀತಿ ಮಿಸ್ ಇಂಡಿಯಾಗಳ ಸಂಖ್ಯೆ ಹೆಚ್ಚುತ್ತಾ ಹೋದ್ರೆ ನಮ್ಮ ಸ್ಥಾನ ಎಲ್ಲಿ ಮಿಸ್ ಆಗುತ್ತೋ ಅಂತ ಕಾಳಜಿಯಾಗಿದೆ.
ನೀನಗೇನೂ ಅನ್ನಿಸ್ತಿಲ್ವಾ ಊರ್ವಶಿ? ಇದಕ್ಕೆ ನಿನ್ನದೇನು ಸಮಜಾಯಿಶಿ?
ಮೊದಲ ಮಿಸ್ ಇಂಡಿಯಾ ಯೂನಿವರ್ಸ್
ರಂಭೆ
Kannada Prabha issue dated March 20, 2006
Tuesday, March 14, 2006
ಕಾಶಿಯಲ್ಲಿ ಬಾಂಬ್ ಸ್ಫೋಟಿಸಿದ ಉಗ್ರರಿಗೆ ನಿರಾಶೆ
ಇಡೀ ಭಾರತ ಹೊತ್ತಿ ಉರಿಯುತ್ತದೆ ಎಂದುಕೊಂಡಿದ್ದು ಸುಳ್ಳಾಯಿತಲ್ಲ:
ಲಾಡೆನ್‌ಗೆ ಉಗ್ರನ ಪತ್ರ
ನಾಮ ಕಾಶಿ ಬಾಂಬ್ ಘಟನೆಯ ಕುರಿತು ಒಂದು ಮಾರ್ಕೆಟ್ ಸರ್ವೆ ನಡೆಸಿದೆಮ. ಈ ಸಮೀಕ್ಷೆಯಲ್ಲಿ ಅಚ್ಚರಿಯ ವಿಷಯವೊಂದು ಪತ್ತೆಯಾಗಿದೆ. ಕಾಶಿಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಬಗ್ಗೆ ಜನರಿಗೆ ಅಂತಹ ಭಯವೇನೂ ಆಗಿಲ್ಲವಂತೆ. ಆದರೆ, ಇದೇ ಬಾಂಬ್ ಏನಾದರೂ ಮೆಕ್ಕಾದಲ್ಲಿ ಸ್ಫೋಟಗೊಂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಊಹೆಯೇ ಜನರಿಗೆ ಭಯ ಉಂಟುಮಾಡಿದೆಯಂತೆ.
$$iND987432$$
*********
ತಮ್ಮೊಡನೆ ಸಂಪರ್ಕ ಹೊಂದಿರಲು ಅಂತಾರಾಷ್ಟ್ರೀಯ ಜಿಹಾದಿ ದಂಡನಾಯಕರು ಬಳಸುವ ಈ ಮೇಲಿನ ಎರಡೂ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಸರಿಯಾಗಿದೆ ಎಂದು ಭಾವಿಸುತ್ತೇನೆ. ಹಾಗೆಯೇ ನನ್ನ ಪರಿಚಯಕ್ಕಾಗಿ ಈ ಕೆಳಗಿನ ಐಡಿ ಮತ್ತು ಪಾಸ್‌ವರ್ಡನ್ನು ತಾಮ ತಮ್ಮ ಲ್ಯಾಪ್‌ಟಾಪಿನಲ್ಲಿ ಪರಿಶೀಲಿಸಿ ಖಾತ್ರಿ ಮಾಡಿಕೊಳ್ಳಬಹುದಾಗಿ ವಿನಂತಿಸುತ್ತೇನೆ.
$$iND987432$$
*********
ಮರ್‍ಹಬಾ ಲಾಡನ್, ಕೈಫಾ ಹಲೂಕ್?
ಅಲ್ ಹಮ್ದು ಲೆಲ್ಲಾಹ್. ನಾನು ಆರಾಂ ಇದ್ದೇನೆ. ಹೆಚ್ಚು ಹೆಚ್ಚು ಭಯೋತ್ಪಾದನೆಗಳಲ್ಲಿ ಯಶಸ್ವಿಯಾಗುತ್ತಿದ್ದೇನೆ. ನಮಗೆ ಸಾಕಷ್ಟು ನೆರಮ ಹಾಗೂ ನೈತಿಕ ಬೆಂಬಲ ನೀಡುತ್ತಿರುಮದಕ್ಕೆ ಶುಕ್ರಾನ್.
ಕಳೆದ ವಾರ ಕಾಶಿಯ ಸಂಕಟ ಮೋಚನ ಹನುಮಾನ್ ಮಂದಿರದಲ್ಲಿ ಬಾಂಬ್ ಸ್ಫೋಟ ಮಾಡುವಲ್ಲಿ ನಾಮ ಯಶಸ್ವಿಯಾಗಿದ್ದಕ್ಕೆ ತಾಮ ಕಳಿಸಿದ ಮಬ್ರೂಕ್ ಸಂದೇಶ ತಲುಪಿದೆ. ಹಿಂದೂಗಳ ಪರಮ ಪವಿತ್ರ ಕ್ಷೇತ್ರದಲ್ಲೇ ಭಯೋತ್ಪಾದನೆ ನಡೆಸಿದ್ದಕ್ಕೆ ನೀಮ ಹರ್ಷ ವ್ಯಕ್ತಪಡಿಸಿದ್ದೀರಿ. ಶುಕ್ರಾನ್.
ಆದರೆ, ಅಫ್‌ವಾನ್... ನಾವಂದುಕೊಂಡಂತೆ, ಈ ಬಾಂಬ್ ಸ್ಫೋಟದಿಂದ ಏನೂ ಪ್ರಯೋಜನವಾಗಿಲ್ಲ ಎನ್ನುವ ಖೇದದ ಸಂಗತಿಯನ್ನು ನಿಮಗೆ ತಿಳಿಸಬೇಕಾಗಿದೆ.
ಕಾಶಿಯಂಥ ಪವಿತ್ರ ಕ್ಷೇತ್ರಕ್ಕೆ ಬಾಂಬ್ ಹಾಕಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಭೆ ಉಂಟುಮಾಡಬೇಕು ಅಂತ ನಮ್ಮ ಉದ್ದೇಶವಾಗಿತ್ತು. ಆದರೆ, ನಮ್ಮ ಮೂಲ ಉದ್ದೇಶವೇ ವಿಫಲವಾಗಿದೆ. ಯಾಕೆ ಅಂತಾನೇ ಗೊತ್ತಾಗ್ತಾ ಇಲ್ಲ.
ನಮ್ಮ ಪ್ರಕಾರ, ಕಾಶಿಯ ದೇವಾಲಯದಲ್ಲಿ ಬಾಂಬ್ ಸ್ಫೋಟವಾದ ಸುದ್ದಿ ಟೀವಿಯಲ್ಲಿ ಪ್ರಸಾರವಾಗುತ್ತಿದ್ದಂತೆ, ಇಡೀ ಭಾರತ ಉದ್ವಿಗ್ನವಾಗಬೇಕಿತ್ತು. ರಾತ್ರೋ ರಾತ್ರಿ ಹಿಂದೂಗಳು ಕ್ರುದ್ಧರಾಗಿ ಹಿಂಸಾಚಾರ ಆರಂಭಿಸಬೇಕಿತ್ತು. ಕೋಮು ಗಲಭೆಗಳಾಗಿ ದೇಶವೆಲ್ಲ ತಲ್ಲಣಗೊಳ್ಳಬೇಕಿತ್ತು. ಕನಿಷ್ಠ ನೂರಾರು ಮುಸ್ಲಿಮರನ್ನು ಹಿಂದುಗಳು ಇರಿದು ಕೊಂದುಹಾಕುತ್ತಾರೆ ಅಂತ ನಾಮ ಅಂದುಕೊಂಡಿದ್ದೆಮ. ಒಂದೆರಡು ಮಸೀದಿಗಳ ಮೇಲೆ ದಾಳಿ ನಡೆಯುತ್ತದೆ ಅಂತ ನಮ್ಮ ನಿರೀಕ್ಷೆಯಿತ್ತು.
ಕನಿಷ್ಠ ೧೫ ದಿನ ಭಾರತ ಹಿಂದೂ ಮುಸ್ಲಿಂ ಹಿಂಸೆಯಲ್ಲಿ ನಲುಗಿಹೋಗುತ್ತದೆ ಅನ್ನುವ ನಂಬಿಕೆ ನಮ್ಮದಾಗಿತ್ತು. ನಮ್ಮದಷ್ಟೇ ಅಲ್ಲ, ಭಾರತದಾದ್ಯಂತ ಎಲ್ಲ ಸಾಮಾನ್ಯ ಜನರ ಭಯವೂ ಇದೇ ಆಗಿತ್ತು.
ಆದರೆ, ಹಾಗಾಗಲೇ ಇಲ್ಲ. ಇಡೀ ಭಾರತ ಬಹಳ ಜವಾಬ್ದಾರಿಯಿಂದ ವರ್ತಿಸಿತು. ಸ್ವಲ್ಪ ಕೂಡ ಹಿಂಸಾಚಾರ ಆಗದಂತೆ ಇಡೀ ದೇಶ ಎಚ್ಚರ ವಹಿಸಿತು. ಇದು ಹೇಗೆ ಸಾಧ್ಯವಾಯಿತು? ಹಿಂಸಾಚಾರ ಭುಗಿಲೇಳದಂತೆ ತಡೆದವರು ಯಾರು ಅಂತಾನೇ ಗೊತ್ತಾಗ್ತಾ ಇಲ್ಲ. ನಮಗಷ್ಟೇ ಅಲ್ಲ... ಭಾರತದ ಜನಸಾಮಾನ್ಯರಿಗೂ ಇದೇ ಅಚ್ಚರಿಯ ವಿಷಯ!
ನಾಮ ಒಂದು ವಾರ ಹಾಗೂ ಹೀಗೂ ಕಾದು ನೋಡಿದ್ದಾಯ್ತು. ಈ ಬಿಜೆಪಿಯವರು, ಹಿಂದೂ ಪರಿವಾರದವರು ದೇಶದ ಶಾಂತಿ ಕದಡುವ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಅವರು ಯಾಮದೇ ಪ್ರಚೋದನಾತ್ಮಕ ಹೇಳಿಕೆ ನೀಡದೇ ಬಹಳ ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ. ಜನತೆ ಸಹನೆಯಿಂದ ಇರುವಂತೆ ಕರೆ ನೀಡಿದ್ದಾರೆ. ಈ ಹಿಂದುಗಳೂ ಕೆರಳದ ಹೊರತು ನಾಮ ಮುಸ್ಲಿಮರ ಕಿಚ್ಚು ಎಬ್ಬಿಸಲು ಸಾಧ್ಯವಾಗ್ತಾ ಇಲ್ಲ.
ಒಟ್ಟಿನಲ್ಲಿ ನಮ್ಮ ಕಾಶಿ ಬಾಂಬ್ ಪುಸ್ ಅಂದಿದೆ... ಹಿಂಸೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇದರಿಂದ ನಮ್ಮ ತಂಡದ ಎಲ್ಲರಿಗೂ ಬಹಳ ನಿರಾಶೆಯಾಗಿದೆ. ಕಾಶಿಗೆ ಬಾಂಬ್ ಹಾಕಿದರೂ ಏನೂ ಆಗಲಿಲ್ಲ ಎಂದರೆ, ಇನ್ಯಾವ ರೀತಿಯ ಭಯೋತ್ಪಾದನೆ ಮಾಡುಮದು ಅಂತ ನಮ್ಮ ಕೆಲಮ ಯುವಕರು ಚಿಂತೆಗೆ ಒಳಗಾಗಿದ್ದಾರೆ.
ಈ ಸಮಯದಲ್ಲಿ ನಮ್ಮ ಯುವಕರ ‘ಜಿಹಾದ್’ ಇಚ್ಛಾಶಕ್ತಿ ಉಡುಗದಂತೆ ತಾವೇ ಏನಾದರೂ ಮಾಡಬೇಕು. ತಮ್ಮ ಉಪನ್ಯಾಸದ ಲೇಟೆಸ್ಟ್ ಕ್ಯಾಸೆಟ್ ಒಂದನ್ನು ಕಳಿಸಿಕೊಡಿ. ಅದನ್ನು ನೋಡಿಯಾದರೂ ನಮ್ಮ ಯುವ ಜಿಹಾದ್ ಸೇನಾನಿಗಳಿಗೆ ಉತ್ಸಾಹ ಬಂದೀತು!
ಹಾಗೆ ನೋಡಿದರೆ, ಈ ಭಾರತದ ಹೊಸ ಪರಿಸ್ಥಿತಿಯೇ ನಮಗೆ ಬಹಳ ನಿರಾಸೆ ತರುವಂತಿದೆ. ಮೊದಲಿನಂತೆ ಹಿಂದೂ ಧರ್ಮದ ಹೆಸರಿನಲ್ಲಿ ಶಾಂತಿ ಕದಡುಮದು ನಮಗೆ ಸಾಧ್ಯವಾಗುತ್ತಿಲ್ಲ.
ಉದಾಹರಣೆಗೆ: ಇತ್ತೀಚೆಗೆ ರೋಮ್‌ನ ಒಂದು ಬಾರ್‌ನಲ್ಲಿ ದುರ್ಗಾ ದೇವಿಯ ಕೈಯಲ್ಲಿ ಹೆಂಡದ ಬಾಟಲಿಗಳನ್ನು ಹಿಡಿಸಿರುವ ಜಾಹೀರಾತು ಪೋಸ್ಟರುಗಳನ್ನು ಹಚ್ಚಲಾಯಿತು. ಈ ಸುದ್ದಿ ಕೇಳಿದ ಹಿಂದೂಗಳು ಕೆರಳಿ ಹಿಂಸಾಚಾರಕ್ಕೆ ಇಳಿಯಲಿಲ್ಲ. ಎಂ. ಎಫ್. ಹುಸೇನ್ ಎಂಬ ಮಹಾ ಕಲಾವಿದ ಹಿಂದೂಗಳ ದೇವರನ್ನೂ, ಭಾರತ ಮಾತೆಯನ್ನೂ ಕಲಾತ್ಮಕವಾಗಿ ನಗ್ನಗೊಳಿಸಿದ. ಒಂಚೂರು ಪ್ರತಿಭಟನೆ ನಡೆಯಿತು ಎಂಬುದನ್ನು ಬಿಟ್ಟರೆ ಹುಸೇನ್‌ಗೆ ಹಿಂದಿನಂತೆ ಭಾರೀ ಪ್ರಚಾರ ಸಿಗಲಿಲ್ಲ. ಅಲ್ಲೊಂದು ಇಲ್ಲೊಂದು ದೇವರ ಪ್ರತಿಮೆಗಳು ಭಗ್ನವಾದರೂ ಉದ್ವಿಗ್ನ ಪರಿಸ್ಥಿತಿ ಗ್ರಾಮದ ಗಡಿ ದಾಟಲಿಲ್ಲ.
ಇದೇ ರೀತಿ ಮುಂದುವರಿದರೆ, ಮತಾಂಧತೆಯ ಮಂತ್ರದಿಂದ ಹಿಂದೂಗಳನ್ನು ರೊಚ್ಚಿಗೆಬ್ಬಿಸುಮದು ಕಷ್ಟ ಅಂತ ನಮಗನ್ನಿಸಿದೆ. ಸದ್ಯ ನಾವಂತೂ ಇನ್ನಷ್ಟು ಹಿಂದೂ ದೇವಾಲಯಗಳು ಹಾಗೂ ಪುಣ್ಯ ಕ್ಷೇತ್ರಗಳ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದೇವೆ. ಆದರೆ, ಅಮಗಳಿಂದ ನಿಶ್ಚಿತ ಫಲ ದೊರೆಯುಮದೇ ಅಂತ ನಮಗೇ ಗೊಂದಲ ಉಂಟಾಗಿದೆ.
ಇಷ್ಟಕ್ಕೂ ಜನರು ಈಗ ಬಾಂಬಿಗೆ ಬೆದರುತ್ತಲೇ ಇಲ್ಲ. ಮೊದಲಾದರೆ ಹುಸಿಬಾಂಬ್ ಕರೆಗೂ ಜನ ಹೆದರಿ ವಾರಗಟ್ಟಲೆ ಅಳುಕಿ ನಡೆಯುತ್ತಿದ್ದರು. ಈಗ ಶಕ್ತಿಶಾಲಿ ಬಾಂಬ್ ಸಿಡಿದರೂ ಕೆಲವೇ ಗಂಟೆಗಳಲ್ಲಿ ಆರಾಮವಾಗಿ ಅಲ್ಲಿ ಜನ ನಡೆದಾಡಿಕೊಂಡಿರುತ್ತಾರೆ. ಬಾಂಬುಗಳಿಗೆ ಜನ ಒಗ್ಗಿಹೋಗಿದ್ದಾರೆ. ಹೀಗಾದರೆ, ನಾಮ ಭಯೋತ್ಪಾದನೆ ಮಾಡುಮದು ಹೇಗೆ ಎಂಬ ಭಯ ನಮಗೇ ಉಂಟಾಗಿದೆ.
ಸಾಲದು ಎಂಬಂತೇ, ರಾಜಕಾರಣಿಗಳೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಹೊಸ ವಿದ್ಯೆ ಕಲಿತುಕೊಂಡಿರುಮದು ನಮ್ಮ ಹಿನ್ನಡೆಗೆ ಇನ್ನೊಂದು ಕಾರಣ. ಬಾಂಬ್ ಸ್ಫೋಟವಾದ ಕೆಲವೇ ಗಂಟೆಯಲ್ಲಿ ಪೊಲೀಸರು ಯಾರನ್ನೋ ಹಿಡಿದು ಹಾಕಿ ಈತನೇ ‘ಬಾಂಬರ್’ ಎಂದು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಅಥವಾ ಯಾರನ್ನೋ ಗುಂಡುಹೊಡೆದು ಸಾಯಿಸಿ ಈತನೇ ಬಾಂಬ್ ಇಟ್ಟವನು ಅಂತ ಟೀವಿಯಲ್ಲಿ ತೋರಿಸುತ್ತಾರೆ. ಅದು ನಿಜವೋ ಸುಳ್ಳೋ ಎಂಬುದು ಗೊತ್ತಾಗುವ ಹೊತ್ತಿಗೆ ಇಡೀ ಘಟನೆಯ ಮೇಲೆ ಮಾಧ್ಯಮಗಳಿಗೆ ಹಾಗೂ ಜನರಿಗೆ ಆಸಕ್ತಿ ಕಡಿಮೆಯಾಗುತ್ತದೆ. ಸುದ್ದಿ ಮೊದಲ ಪುಟದಿಂದ ಒಳಪುಟಕ್ಕೆ ಜಾರುತ್ತದೆ. ಬೆಂಗಳೂರು ಐಐಎಸ್‌ಸಿ ಮೇಲಿನ ದಾಳಿ, ದೆಹಲಿಯಲ್ಲಿ ಬಾಂಬ್ ಸ್ಫೋಟ ಹಾಗೂ ಕಾಶಿಯಲ್ಲಿ ಬಾಂಬ್ ಸ್ಫೋಟ... ಎಲ್ಲ ಘಟನೆಯಲ್ಲೂ ಹೀಗೇ ಆಯಿತು.
ಈ ಸಿನಿಮಾಗಳೋ... ನಮಗಿಂತಲೂ ಹೆಚ್ಚು ಭಯೋತ್ಪಾದನೆ ಉಂಟು ಮಾಡುತ್ತವೆ. ಲಾಂಗು, ಮಚ್ಚು, ಬಾಂಬು, ಪಿಸ್ತೂಲು, ರಕ್ತ, ಕಿರುಚಾಟ ಇಲ್ಲದ ಸಿನಿಮಾವೇ ಇಲ್ಲ. ಇವಿಷ್ಟು ಐಟಂ ಹೆಚ್ಚಿದ್ದಷ್ಟೂ ಸಿನಿಮಾ ಹಿಟ್ ಆಗುತ್ತವೆ. ಹಿಂಸೆ ಹೆಚ್ಚಾದಷ್ಟೂ ಜನ ಆನಂದ ಪಡುತ್ತಾರೆ. ಹಾಗಾಗಿ ಜನ ಭಯೋತ್ಪಾದನೆಯನ್ನೂ ಹಿಂದಿ ಸಿನಿಮಾಗಳ ಥರ ಎಂಜಾಯ್ ಮಾಡೋದನ್ನು ಕಲಿತುಬಿಟ್ಟಿದ್ದಾರೆಯೇ ಅಂತ ನಮ್ಮ ಅನುಮಾನ.
ನಾಮ ಕಾಶಿ ಬಾಂಬ್ ಘಟನೆಯ ಕುರಿತು ಒಂದು ಮಾರ್ಕೆಟ್ ಸರ್ವೆ ನಡೆಸಿದೆಮ. ಈ ಸಮೀಕ್ಷೆಯಲ್ಲಿ ಅಚ್ಚರಿಯ ವಿಷಯವೊಂದು ಪತ್ತೆಯಾಗಿದೆ. ಕಾಶಿಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಬಗ್ಗೆ ಜನರಿಗೆ ಅಂತಹ ಭಯವೇನೂ ಆಗಿಲ್ಲವಂತೆ.
ಆದರೆ, ಇದೇ ಬಾಂಬ್ ಏನಾದರೂ ಮೆಕ್ಕಾದಲ್ಲಿ ಸ್ಫೋಟಗೊಂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಊಹೆಯೇ ಜನರಿಗೆ ಭಯ ಉಂಟುಮಾಡಿದೆಯಂತೆ. ಒಂದು ಕಾರ್ಟೂನ್ ವಿಶ್ವಾದ್ಯಂತ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಲು ಯಶಸ್ವಿಯಾದರೆ ಒಂದು ಬಾಂಬ್ ಇನ್ನೆಂತಹ ಪರಿಸ್ಥಿತಿಯನ್ನು ಉಂಟುಮಾಡಬಲ್ಲದು ಎಂಬ ಕಲ್ಪನೆಯೇ ಹೆಚ್ಚು ಭಯಾನಕ. ಥ್ಯಾಂಕ್ ಗಾಡ್. ಮೆಕ್ಕಾದಲ್ಲಿ ಈ ಬಾಂಬ್ ಸ್ಫೋಟಿಸಲಿಲ್ಲ ... ಎಂದು ಸಮೀಕ್ಷೆಯಲ್ಲಿ ವ್ಯಕ್ತಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಮ ದೇಶದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಲು ಹೊಸ ದಾರಿಯನ್ನು ಹುಡುಕಬೇಕಾಗಿದೆ. ಇದಕ್ಕೆ ಭಯೋತ್ಪಾದನಾ ಎಕ್ಸ್‌ಪರ್ಟ್ ಆದ ತಾವೇ ಏನಾದರೂ ಸಲಹೆ ನೀಡಬೇಕು. ಆಸೆಫ್. ಅಫ್‌ವಾನ್. ನಾನು ತಮಗೆ ಈ ರೀತಿಯ ಪತ್ರ ಬರೆಯಬೇಕಾಯಿತು. ದಯವಿಟ್ಟು ದಾರಿ ತೋರಿ. ಇಲ್ಲವಾದರೆ ನಾಮ ಸಿನಿಮಾ ಡೈರಕ್ಟರುಗಳು ಹಾಗೂ ಚಿತ್ರಕಥೆಗಾರರ ಸಲಹೆ ಕೋರಬೇಕಾಗುತ್ತದೆ.
ತಮ್ಮ ಮಾರ್ಗದರ್ಶನದ ನಿರೀಕ್ಷೆಯಲ್ಲಿ,
-ಖುದಾ ಆಫೀಸ್
$$iND987432$$
Kannada Prabha issue dated March 13, 2006
Kashi Bombers are disappointed
--