ಭೂತ, ವರ್ತಮಾನ ಹಾಗೂ ಭವಿಷ್ಯದಲ್ಲಿ ಅವರ ಆಶೀರ್ವಾದದಿಂದ ಏನೇನಾಗುತ್ತದೆ
- ಒಂದು ಸಂಶೋಧನಾ ಪ್ರಬಂಧ
‘ದೇವೇಗೌಡರ ಆಶೀರ್ವಾದ ಇಲ್ಲದಿದ್ದರೆ ಇಷ್ಟೆನ್ನೆಲ್ಲ ಮಾಡಲು ತಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಇದರ ಸಂಪೂರ್ಣ ಕೀರ್ತಿ ದೇವೇಗೌಡರಿಗೇ ಸಲ್ಲಬೇಕು’ ಎಂದು ಧರ್ಮಸಿಂಗ್ ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಇಂಥ ದೇವೇಗೌಡರ ಆಶೀರ್ವಾದ ಈಗ ಕುಮಾರಸ್ವಾಮಿಯವರಿಗೂ ಸಿಗಲು ಆರಂಭವಾಗಿದೆ! ಈ ಆಶೀರ್ವಾದದ ಫಲ ಹೇಗಿರುತ್ತದೆ ಎಂಬುದನ್ನು ನಾಮ ಕಾದು ನೋಡೋಣ ಮಗಾ.
ಪ್ರೀತಿಯ ಕುಮಾರಸಿಂಗನಿಗೆ,
ಈ ನಿನ್ನ ತಂದೆ ಗ್ರಾಮಸಿಂಗ ಮಾಡುವ ಆಶೀರ್ವಾದಗಳು. ಈಗಾಗಲೇ, ಮುಕ್ಕೋಟಿ ದೇವತೆಗಳು ಹಾಗೂ ಪಂಚಕೋಟಿ ಕನ್ನಡಿಗರ ಆಶೀರ್ವಾದ ಪಡೆದ ನಿನಗೆ ನನ್ನೊಬ್ಬನ ಆಶೀರ್ವಾದ ಮಾತ್ರ ಬಾಕಿ ಇತ್ತು. ಇಗೋ, ನಾನೂ ನಿನಗೆ ಆಶೀರ್ವಾದ ಮಾಡಿದ್ದೇನೆ. ಇದರೊಂದಿಗೆ, ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಆಶೀರ್ವಾದ ಪಡೆದ ಗಿನ್ನೆಸ್ ದಾಖಲೆ ನಿನ್ನದಾಗಬಹುದು.
ಬೈ ದ ವೇ ಮಗಾ, ಈ ಧರ್ಮಸಿಂಗರಿಗೆ ಈಗ ದಿಢೀರಾಗಿ ಧೈರ್ಯ ಬಂದಂತಿದೆ ಅಲ್ಲವಾ? ಅವರು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರ ವಿರುದ್ಧ ಒಂದಕ್ಷರ ಮಾತಾಡಲೂ ಅಂಜುತ್ತಿದ್ದರು. ಈಗ ನೋಡು, ಗೌಡರ ವಿರುದ್ಧ ಹೇಗೆ ಕಿಡಿಕಾರುವ ಸಾಮರ್ಥ್ಯ ಬಂದಿದೆ. ಈ ರೀತಿಯ ಶಕ್ತಿ ಅವರಿಗೆ ಎಲ್ಲಿಂದ ಬಂತು? ಯಾವ ಟಾನಿಕ್ ತಗೊಂಡರು ಗೊತ್ತಾಗ್ತಿಲ್ವೇ!
ಧರ್ಮಸಿಂಗರು ಸಹನೆಯ ಸಾಕ್ಷಾತ್ ಸ್ವರೂಪಿಯಷ್ಟೇ ಅಲ್ಲ... ಮಹಾ-ಸ್ವರೂಪಿ ಕೂಡ ಹೌದು. ಇನ್‌ಫ್ಯಾಕ್ಟ್ ಕುಮಾರಸ್ವಾಮಿ ಅವರಿಗಿಂತ ಧರ್ಮಸಿಂಗ್ ಸಹನೆ, ಮೆಲು ಮಾತು, ಸಮಚಿತ್ತದಲ್ಲಿ ಒಂದು ಮಣ ಹೆಚ್ಚೇ ತೂಗುತ್ತಿದ್ದರು. ಧರ್ಮಸಿಂಗರಿಗೂ ಕುಮಾರಸ್ವಾಮಿಗೂ ಎರಡು ಮೇಜರ್ ವ್ಯತ್ಯಾಸಗಳಿವೆ.
ವ್ಯತ್ಯಾಸ ಒಂದು - ಕುಮಾರಸ್ವಾಮಿ ನಿದ್ದೆ ಮಾಡುಮದೇ ಅಪರೂಪ. ಆದರೆ, ಧರ್ಮಸಿಂಗ್ ನಿದ್ದೆಯಿಂದ ಎದ್ದೇಳುಮದರಲ್ಲೂ ಬಹಳ ಸಹನಾಶೀಲ! ವ್ಯತ್ಯಾಸ ಎರಡು - ಯಾಮದೇ ವಿಷಯ ಎದುರಾದರೂ ಧರ್ಮಸಿಂಗ್ ನೋಡೋಣ್ ಬಿಡ್ರಿ... ಮಾಡೋಣ್ ಬಿಡ್ರಿ... ಎನ್ನುವ ಅಣಿಮುತ್ತು ಉದುರಿಸುತ್ತಿದ್ದರು. ಈಗ ಕುಮಾರಸ್ವಾಮಿ ಯಾಮದೇ ವಿಷಯ ಎದುರಾದರೂ ಒಂದು ದಿಢೀರ್ ಭರವಸೆ ಬಿಸಾಕುತ್ತಾರೆ!
ಧರ್ಮಸಿಂಗ್ ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತಷ್ಟೂ ಕಾಲ, ಒಂದು ಕ್ಷಣವೂ ತಮ್ಮ ಸಹನೆಯನ್ನು ಕಳೆದುಕೊಂಡವರಲ್ಲ. ಪತ್ರಕರ್ತರನ್ನೂ ಸೇರಿದಂತೆ ಯಾರ ಮೇಲೂ ಸಿಡುಕಿದವರಲ್ಲ. ಸೋನಿಯಾ ಗಾಂಧಿಯವರನ್ನೂ, ದೇವೇಗೌಡರನ್ನೂ ಸಮಚಿತ್ತದಿಂದ ಸ್ವೀಕರಿಸಿದರು. ಗೌಡರ ಆದೇಶವನ್ನೂ ಶಿರಸಾವಹಿಸಿದರು. ಸೋನಿಯಾ ಕಮಾಂಡನ್ನೂ ಅಕ್ಷರಶಃ ಪಾಲಿಸಿದರು. ಆದ್ದರಿಂದಲೇ, ದೇವೇಗೌಡರಿಂದಲೂ ಭೇಷ್ ಎನ್ನಿಸಿಕೊಂಡರು. ಸೋನಿಯಾರಿಂದಲೂ ಭಲೆ ಅನ್ನಿಸಿಕೊಂಡರು.
ಇದೊಂದು ಮುಖ್ಯವಾದ ವಿಚಾರ. ದೇವೇಗೌಡರು ಬೇರೆ ಪಕ್ಷದ ನರಪಿಳ್ಳೆ ಹಾಗಿರಲಿ, ಸೊಳ್ಳೆಯನ್ನು ಕೂಡ ಹೊಗಳುವಂಥವರಲ್ಲ. ಅಂಥವರೂ ಸಹ ಧರ್ಮಸಿಂಗರನ್ನು ಅತ್ಯುತ್ತಮ ಮುಖ್ಯಮಂತ್ರಿ ಎಂದೇ ಹೊಗಳುತ್ತಿದ್ದರು! ಹೀಗೆ ದೇವೇಗೌಡರ ಆಶೀರ್ವಾದ ಪಡೆದ ಕಾಂಗ್ರೆಸ್ಸಿನ ಏಕೈಕ ವ್ಯಕ್ತಿ ಧರ್ಮಸಿಂಗ್ ಮಾತ್ರ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆಯಾಗಬಹುದು!
ಅದೇ ರೀತಿ, ದೇಶಾದ್ಯಂತ ಇಡೀ ಕಾಂಗ್ರೆಸ್ಸು ದೇವೇಗೌಡರನ್ನು ವಿರೋಧಿಸುತ್ತಿದ್ದರೂ ಒಬ್ಬ ಧರ್ಮಸಿಂಗ್ ಮಾತ್ರ ದೇವೇಗೌಡರನ್ನು ಸ್ತುತಿಸುತ್ತಿದ್ದರು. ಸರ್ಕಾರ ಪತನವಾದ ಕ್ಷಣದಲ್ಲೂ ಧರ್ಮಸಿಂಗ್ ದೇವೇಗೌಡರ ಪರವಾಗೇ ಮಾತನಾಡಿದ್ದರು. ಎಲ್ಲಾ ತಪ್ಪೂ ಗೌಡರ ಮಗಂದೇ. ದೇವೇಗೌಡರದ್ದು ಯಾಮದೇ ತಪ್ಪಿಲ್ಲ ಎಂದು ಧರ್ಮಸಿಂಗ್ ಸಾರಿ.. ಸಾರಿ.. ಹೇಳಿದ್ದರು. ಇಷ್ಟು ಆತ್ಮೀಯವಾಗಿತ್ತು ದೇವೇಗೌಡರು ಮತ್ತು ಧರ್ಮಸಿಂಗರ ಸಂಬಂಧ.
ಮಗಾ... ಈಗ ನೋಡು ಪರಿಸ್ಥಿತಿ ಹೇಗಾಗಿದೆ! ಧರ್ಮಸಿಂಗ್ -ದೇವೇಗೌಡರ ಸಂಬಂಧ ಭಾರತ -ಪಾಕಿಸ್ತಾನ್ ಥರ ಆಗಿದೆ! ಎಂದೂ ದೇವೆಗೌಡರಿಗೆ ಎದುರಾಡದ ಧರ್ಮಸಿಂಗ್ ಈಗ ದೇವೇಗೌಡರ ವಿರುದ್ಧವೇ ನೇರಾನೇರ ಆರೋಪ ಮಾಡುತ್ತಿದ್ದಾರೆ. ದೇವೇಗೌಡರು ತಮಗೆ ಬರೆದ ’ಪ್ರೇಮಪತ್ರ’ಗಳ ಸಂಪುಟ ಪ್ರಕಟಿಸುತ್ತೇನೆ ಎಂದು ಧರ್ಮಸಿಂಗರು ಧಮಕಿ ಹಾಕಿದ್ದಾರೆ. ತಾಮ ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ಸರ್ಕಾರದ ಆಡಳಿತದ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪದೇ ಪದೆ ಸೋಲುತ್ತಿರುಮದಕ್ಕೆ ದೇವೇಗೌಡರ ತಪುý್ಪ ತಪುý್ಪ ಸಲಹೆಗಳೇ ಕಾರಣ ಎಂದು ಧರಂ ಸ್ಪಷ್ಟೀಕರಣ ನೀಡಿದ್ದಾರೆ.
ಹಾಗಾದರೆ, ದೇವೇಗೌಡರು ರಾಜ್ಯದ ಆಡಳಿತಕ್ಕೆ ಅಡ್ಡಿ ಮಾಡುತ್ತಿದ್ದ ರಹಸ್ಯಗಳನ್ನು ಧರ್ಮಸಿಂಗ್ ತಾಮ ಮುಖ್ಯಮಂತ್ರಿಯಾಗಿದ್ದಾಗಲೇ ಯಾಕೆ ಬಹಿರಂಗ ಮಾಡಲಿಲ್ಲ ಹೇಳಿ? ಒಂದು -ಆಗ ದೇವೇಗೌಡರ ವಿರುದ್ಧ ಮಾತನಾಡಲು ಧರ್ಮಸಿಂಗರಿಗೆ ಧೈರ್ಯ ಇರಲಿಲ್ಲ. ಅಥವಾ ಆಗ ದೇವೇಗೌಡರು ನೀಡಿದ ಸಲಹೆಗಳೆಲ್ಲ ತಪುý್ಪ ತಪುý್ಪ ಎಂದು ಧರ್ಮಸಿಂಗರಿಗೆ ಈಗ ಜ್ಞಾನೋದಯವಾಗಿದೆ! ಅಥವಾ, ದೇವೇಗೌಡರ ಸಲಹೆಗಳು ತಪುý್ಪ ಎಂದು ಗೊತ್ತಿದ್ದೂ ಅವನ್ನೇ ಪಾಲಿಸಿ ಧರ್ಮಸಿಂಗ್ ರಾಜ್ಯಕ್ಕೆ ಅನ್ಯಾಯ ಮಾಡಿದರು. ಈಗ ಗೌಡರ ರಹಸ್ಯಗಳನ್ನು ಬಹಿರಂಗಮಾಡಿ ಧರ್ಮಸಿಂಗರು ರಾಜ್ಯಕ್ಕೆ ನ್ಯಾಯದಾನ ಮಾಡುತ್ತಿದ್ದಾರೆ!
ಎನಿವೇ, ಒಂದಂತೂ ಸ್ಪಷ್ಟ. ಆಗಿನ ಧರ್ಮಸಿಂಗ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಏನೆಲ್ಲಾ ಆಯಿತು, ರಾಜ್ಯಕ್ಕೆ ಯಾವ್ಯಾವ ಸ್ಥಿತಿ ಒದಗಿತು, ಧರ್ಮಸಿಂಗರಿಗೆ ಯಾವ ರೀತಿಯ ಹೆಸರು ಬಂತು... ಎಲ್ಲವೂ ದೇವೇಗೌಡರ ಆಶೀರ್ವಾದದ ಫಲ ಎಂಬುದು ಎಲ್ಲರಿಗೂ ಗೊತ್ತಾಗಿರುವ ಸತ್ಯ.
ಆದರೆ, ಈಗಿನ ರಾಜ್ಯ ಸರ್ಕಾರಕ್ಕೆ ಈವರೆಗೂ ಗೌಡರ ಆಶೀರ್ವಾದ ಇರಲಿಲ್ಲ. ಅದರಿಂದಾಗಿ ರಾಜ್ಯದಲ್ಲಿ ಏನೇನು ಆಗಿದೆ, ರಾಜ್ಯಕ್ಕೆ ಯಾವ ರೀತಿಯ ಪ್ರಚಾರ ಸಿಕ್ಕದೆ, ಕುಮಾರಸ್ವಾಮಿಯವರಿಗೆ ಯಾವ ರೀತಿಯ ಹೆಸರು ಬಂದಿದೆ ನೋಡಿ...
ಈ ಎರಡೂ ಸರ್ಕಾರದ ಅವಧಿಗಳನ್ನು ಆಧಾರವಾಗಿಟ್ಟುಕೊಂಡು ದೇವೇಗೌಡರ ಆಶೀರ್ವಾದದ ಫಲಶೃತಿ ಹೇಗಿರುತ್ತದೆ ಎಂಬುದರ ತುಲನಾತ್ಮಕ ಅಧ್ಯಯನ ಆಗಬೇಕು. ಸರಿಯಾಗಿ ಅಧ್ಯಯನ ಮಾಡಿದರೆ, ಇದೊಂದು ಒಳ್ಳೆಯ ಪಿಎಚ್‌ಡಿ ಪ್ರಬಂಧವಾದೀತು ಅಥವಾ ಜ್ಯೋತಿಷ್ಯ ಶಾಸ್ತ್ರಕ್ಕೆ ಒಂದು ಉತ್ತಮ ಗ್ರಂಥವಾದೀತು. ’ದೇವೇಗೌಡರ ಆಶೀರ್ವಾದದ ಫಲಶೃತಿ : ಭೂತ, ವರ್ತಮಾನ ಹಾಗೂ ಭವಿಷ್ಯ’ -ಎಂದು ಈ ಪ್ರಬಂಧ ಅಥವಾ ಗ್ರಂಥಕ್ಕೆ ಹೆಸರಿಡಬಹುದು!
ದೇವೇಗೌಡರ ಆಶೀರ್ವಾದದ ಬಲದಿಂದ ಧರ್ಮಸಿಂಗ್ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಉದ್ಯಮಿಗಳನ್ನು ಬಹುತೇಕ ಓಡಿಸಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಹಿಡಿದಿದ್ದ ಇನ್‌ಫೋಸಿಸ್ ನಾರಾಯಣಮೂರ್ತಿ ಎಂಬ ಗ್ರಹಣವನ್ನು ಬಿಡಿಸಿದರು. ಜಲ ನ್ಯಾಯಾಧೀಕರಣದ ವಿರುದ್ಧವೇ ಅರ್ಜಿ ಸಲ್ಲಿಸಿ ನೆರೆ ರಾಜ್ಯಗಳಿಗೆ ಅನುಕೂಲ ಮಾಡಿಕೊಟ್ಟರು. ಬೆಂಗಳೂರು ಫಾರ್ವಡ್ ಎಂಬ ನಗರಾಭಿವೃದ್ಧಿ ವೇದಿಕೆಯನ್ನು ಸಂಪೂರ್ಣ ವಿಸರ್ಜನೆ ಮಾಡಿದರು. ಬೆಂಗಳೂರು -ಮೈಸೂರು ಕಾರಿಡಾರ್ ವಿರುದ್ಧ ಸುಪ್ರೀಂಕೋರ್ಟ್ ವರೆಗೆ ಹೋಗಿ ನೈಸ್ ಕಂಪನಿಯ ಕೀರ್ತಿ ಹೆಚ್ಚಿಸಿದರು. ಮೆಟ್ರೋ ರೈಲಿಗೆ ಮೊದಲು ಬ್ರೇಕ್ ಹಾಕಿದರೂ ಕೊನೆಗೆ ಬೆಂಗಳೂರಿಗೆ ಮೆಟ್ರೋ ಹಾಗೂ ಮಾನೋ ಎರಡೂ ರೈಲು ಸಿಗುವಂತೆ ಮಾಡಿದರು. ಅರ್ಕಾವತಿ ಬಡಾವಣೆಯಲ್ಲಿ ಸರ್ಕಾರಕ್ಕೆ ಕಪಾಳಮೋಕ್ಷವಾದ ನಂತರವೇ ಪ್ರಜೆಗಳಿಗೆ ಸೈಟು ಸಿಗುವಂತೆ ಮಾಡಿದರು. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎಂಬ ಸುದ್ದಿ ಸುಳ್ಳು ಎಂದು ವಿಶ್ವ ಬ್ಯಾಂಕಿನಿಂದಲೇ ಸ್ಪಷ್ಟೀಕರಣ ತರಿಸಿದರು. ದರಿದ್ರನಾರಾಯಣ ಹೆಸರಿನಲ್ಲಿ ಕನ್ನಡೇತರರಿಗೆಲ್ಲ ಬೆಂಗಳೂರಿನಲ್ಲಿ ನಿವೇಶನದ ಹಕ್ಕು ಸಿಗುವಂತೆ ಮಾಡಿದರು. ಸಿದ್ದರಾಮಯ್ಯನವರು ಅಹಿಂದ ಸಂಘಟನೆ ಸ್ಥಾಪನೆ ಮಾಡಲು ಕಾರಣರಾದರು. ಸಿಂಧ್ಯಾಗೆ ತ್ರಿಶಂಕು ಸ್ವರ್ಗ ತೋರಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ, ಸ್ವತಃ ತಮ್ಮ ಅಧಿಕಾರ ಬಿಟ್ಟುಕೊಟ್ಟು ಕರ್ನಾಟಕಕ್ಕೆ ಒಬ್ಬ ಹೊಸ ಕಾರ್ಯಶೀಲ ಮುಖ್ಯಮಂತ್ರಿ ಸಿಗಲು ಅನುಮ ಮಾಡಿಕೊಟ್ಟರು. ’ದೇವೇಗೌಡರ ಆಶೀರ್ವಾದ ಇಲ್ಲದಿದ್ದರೆ ಇಷ್ಟೆನ್ನೆಲ್ಲ ಮಾಡಲು ತಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಇದರ ಸಂಪೂರ್ಣ ಕೀರ್ತಿ ದೇವೇಗೌಡರಿಗೇ ಸಲ್ಲಬೇಕು’ ಎಂದು ಧರ್ಮಸಿಂಗ್ ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.ಇಂಥ ದೇವೇಗೌಡರ ಆಶೀರ್ವಾದ ಈಗ ಕುಮಾರಸ್ವಾಮಿಯವರಿಗೂ ಸಿಗಲು ಆರಂಭವಾಗಿದೆ! ಈ ಆಶೀರ್ವಾದದ ಫಲ ಹೇಗಿರುತ್ತದೆ ಎಂಬುದನ್ನು ನಾಮ ಕಾದು ನೋಡೋಣ ಮಗಾ.
ಇನ್ನೊಂದಿಷ್ಟು ಆಶೀರ್ವಾದಗಳೊಂದಿಗೆ,
ಇಂತಿ ನಿನ್ನಪ್ಪ
ಗ್ರಾಮಸಿಂಗ
Kannada Prabha issue dated April 24, 2006
A Research on the Effects of Dewe Gowda's Blessings!
--
Tuesday, April 25, 2006
ದೇವೇಗೌಡರ ಆಶೀರ್ವಾದದ ಪರಿಣಾಮಗಳ ಅಧ್ಯಯನ
Tuesday, April 18, 2006
ಹೊಡಿ ಮಗಾ, ಹೊಡಿ ಮಗಾ.. ಸಲ್ಮಾನ್ ಖಾನ್‌ಗೇ ಜೈ
ಡಾ.ರಾಜ್ ಆದರ್ಶಗಳು ಈಗ ಯಾರಿಗೆ ಬೇಕು? ವಿವೇಕ್ ಒಬೇರಾಯ್‌ಗೆ
ಸುಂದರಿ ಸುಶ್ಮಿತಾ ಪತ್ರ
ಕಾನೂನನ್ನು ಪದೇ ಪದೆ ಗಾಳಿಗೆ ತೂರಿ, ಅಪರಾಧಿ ಎನಿಸಿಕೊಂಡಿರುವ ಈ ದೇಶದ ನ್ಯಾಶನಲ್ ಹೀರೋ ಸಲ್ಮಾನ್ ಖಾನ್ ಕಳೆದ ವಾರ ಅಕ್ಷರಶಃ ಜೈಲು ಸೇರಿದ. ಮೂರು ದಿನದ ನಂತರ ಜಾಮೀನಿನ ಮೇಲೆ ಹೊರಬಂದ. ಆಗ ನೋಡಬೇಕಿತ್ತು... ಸ್ವಾತಂತ್ರ್ಯ ಹೋರಾಟಗಾರ ಜೈಲಿನಿಂದ ಹೊರಗೆ ಬಂದಾಗ ನೀಡುವಂಥ ಸ್ವಾಗತವನ್ನು ಅಭಿಮಾನಿಗಳು ಸಲ್ಮಾನ್‌ಗೆ ನೀಡಿದರು. ಇತ್ತ ರಾಜ್ ಮತ್ತು ಅವರ ಆದರ್ಶಗಳು ಸಮಾಧಿಯಾಗುತ್ತಿರುವಾಗ ಅತ್ತ ಸಲ್ಮಾನ್ ಮತ್ತು ಆತನ ಹೀರೋಯಿಸಂಗಳು ಸಂಭ್ರಮಿಸುತ್ತಿದ್ದಮ!
ಅಬ್ಬೇ ವಿವೇಕ್,
ಈಗಾದರೂ ಬುದ್ಧಿ ಬಂತಾ ಮರೀ? ಆ ನಖ್ರಾವಾಲಿ ಐಶ್ವರ್ಯ ನಿನ್ನ ಮಹಾ ಫ್ರೆಂಡು ಅಂತ ಹೇಳ್ತಾ ಇದ್ದೆ. ಆಕೆ ಜತೆ ನಿನ್ನ ಮದುವೆ ಅಂತಿದ್ದೆ. ಆಕೆಗಾಗಿ, ನೀನು ಪತ್ರಿಕಾಗೋಷ್ಠಿ ನಡೆಸಿ ’ಸಲ್ಮಾನ್ ಖಾನ್ ಒಬ್ಬ ವಿಕೃತ ಮನಸಿನ ರೋಗಿ’ ಅಂತ ಆರೋಪ ಮಾಡಿದ್ದೆ. ಈಗೇನಾಯ್ತು? ಐಶ್ವರ್ಯ ನಿನ್ನ ತೋಳು ಬಿಟ್ಟು ಪುರ್ರಂತ ಹಾರಿಹೋಗಿ ಅಭಿಷೇಕ್ ಬಚ್ಚನ್ ಭುಜದ ಮೇಲೆ ಕುಳಿತಿದ್ದಾಳೆ. ನಿಂಗೆ ಇದರಿಂದ ಬೇಜಾರಾಗಿದೆಯೇನೋ... ಪಾಪ. ಹೋಗಲಿ ಬಿಡು ವಿವೇಕ್. ಇದನ್ನ ಸುಮ್ಮನೆ ತಮಾಷೆ ಅಂತ ನೋಡ್ತಾ ಇರು ಅಷ್ಟೇ. ಅಭಿಷೇಕ್‌ಗೂ ಐಶ್ ಕೈಕೊಡುವ ಲಕ್ಷಣ ಕಾಣಿಸಿಸ್ತಿದೆ.
ಅವರ ಕಥೆ ಏನಾದ್ರೂ ಆಗಲಿ. ಆದರೆ, ಆಕೆಗಾಗಿ ನೀನು ಸಾಧಿಸಿದ್ದಾದರೂ ಏನು? ಸಲ್ಮಾನ್ ಜತೆ ದುಶ್ಮನಿ ತಾನೆ? ಅದರಿಂದ ನಿನ್ನ ಭವಿಷ್ಯ ಏನಾಯ್ತು? ನಿನ್ನ ಹಾದಿಯಲ್ಲಿದ್ದ ಎಲ್ಲಾ ಸಿನಿಮಾಗಳೂ ಬ್ಲಾಕ್ ಆಗಿಹೋದಮ ಗೊತ್ತಾ! ನಿಂಗೆ ಒಳ್ಳೆ ಅವಕಾಶಗಳು ಎಲ್ಲಿಂದ ಬರಬೇಕು ಹೇಳು? ಯೂ ಲಾಸ್ಟ್ ಬೋಥ್... ಐಶ್ವರ್ಯ ಆಂಡ್ ಆಫರ್ಸ್. ನಿನ್ನಥರ, ಇನ್ನಿತರ ಬಾಲಿಮಡ್ ಹೀರೋಗಳೂ, ಐಶ್ವರ್ಯಾಗಾಗಿ ಸಲ್ಮಾನ್ ಖಾನ್ ವಿರೋಧ ಕಟ್ಟಿಕೊಂಡರಾ? ಇಲ್ಲ. ಯಾಕೆ ಹೇಳು? ಅವರಿಗೆ ಗೊತ್ತು ಇಂಡಸ್ಟ್ರಿಯಲ್ಲಿ ಸಲ್ಮಾನ್ ಎಷ್ಟು ಪವರ್‌ಫುಲ್ ಅಂತ.
ಹೋಗಲಿ, ಇದು ನಿಂಗೆ ತಡವಾಗಿಯಾದರೂ ಅರ್ಥವಾಯಿತಲ್ಲ ಮಾರಾಯ. ನೀನೀಗ ಸಲ್ಮಾನ್ ಜತೆ ಗೆಳತನ ಬೆಳೆಸೋದಕ್ಕೆ ನಿರ್ಧರಿಸಿದ್ದೀಯಂತೆ. ಮೊನ್ನೆ ಮೊನ್ನೆ ಸಲ್ಮಾನ್ ತಾಯಿ ಆಸ್ಪತ್ರೆಯಲ್ಲಿ ಇದ್ದಾಗ, ನೀನು ಮತ್ತು ನಿನ್ನ ಅಪ್ಪ-ಅಮ್ಮ ಅಲ್ಲಿಗೆ ಭೇಟಿ ನೀಡಿದ್ದಿರಂತೆ. ನೀನು ಅಲ್ಲಿ ಸಲ್ಮಾನ್ ಖಾನ್‌ನ ತಾಯಿಯ ಕಾಲಿಗೆ ನಮಸ್ಕಾರ ಮಾಡಿದೆಯಂತೆ? ಆಮೇಲೆ, ಸಲ್ಮಾನ್ ಖಾನ್‌ನ ತಂದೆಯನ್ನೂ ಹೋಗಿ ನೋಡಿಬಂದಿರಂತೆ?
ಹೀಗೆಲ್ಲಾ ಮಾಡಿದರೆ, ಸಲ್ಮಾನ್ ದಾದಾನ ಕೃಪೆ ದೊರೆಯುತ್ತಾ ವಿವೇಕ್? ನನಗೆ ಗೊತ್ತಾಗಿರುವ ಮಾಹಿತಿ ಪ್ರಕಾರ, ಸಲ್ಮಾನ್‌ಗೆ ಇನ್ನೂ ನಿನ್ನ ಬಗ್ಗೆ ಕೋಪ ಹೋಗಿಲ್ಲ. ಅದು ಹಾಗೆಲ್ಲ ಹೋಗೋದೂ ಇಲ್ಲ. ನಿಂಗೆ ಸಲ್ಮಾನ್ ಹ್ಯಾಗೆ ಅಂತ ಗೊತ್ತಲ್ಲ? ಆತನನ್ನು ಒಲಿಸಿಕೊಳ್ಳಲು ಮಾಮೂಲಿ ವಿಧಾನಗಳು ನಡೆಯೋಲ್ಲ. ನನ್ನ ಸಲಹೆ ಕೇಳು.
ಸಲಹೆ ೧. ಮೊದಲು ಸಲ್ಮಾನ್‌ಗೆ ಒಂದು ಸ್ಲಗಲ್ ಆಗಿರುವ ಬಂದೂಕು ಉಡುಗೊರೆ ನೀಡು. ಇಂಥ ಉಡುಗೊರೆ ಸಿಕ್ಕರೆ ಸಲ್ಮಾನ್ ಖುಷಿಯಾಗುತ್ತಾನೆ.
ಸಲಹೆ ೨. ಯಾಮದಾದರೂ ಕಾಡಿಗೆ ಕರೆದುಕೊಂಡು ಹೋಗಿ ಜಿಂಕೆಗಳನ್ನು ತೋರಿಸು. ಸಲ್ಮಾನ್ ಖುಷಿಯಿಂದ ಬೇಟೆಯಾಡುತ್ತಾನೆ. ನೀನದಕ್ಕೆ ಕೇಕೆ ಹಾಕಿ ಉತ್ತೇಜನ ನೀಡು. ಜತೆಗೆ ಕಿಲಕಿಲ ನಗಲು ಒಂದಿಬ್ಬರು ಹೀರೋಯಿನ್‌ಗಳು ಇರಲಿ.
ಸಲಹೆ ೩. ಸಲ್ಮಾನ್‌ಗೆ ರಾತ್ರಿ ಮೂರು ಗಂಟೆಗೆ ಯದ್ವಾತದ್ವಾ ಹೆಂಡ ಕುಡಿಸಿ, ಸುಂಕ ತಪ್ಪಿಸಿ ತಂದ ವಿದೇಶಿ ಕಾರನ್ನು ಏಕಮುಖ ರಸ್ತೆಯಲ್ಲಿ ಡ್ರೆೃವಿಂಗಿಗೆ ಅಂತ ಕೊಡು. ಆಗ ನೋಡು ಸಲ್ಮಾನ್ ಒಂದೋ ಎರಡೋ ಆಕ್ಸಿಡೆಂಟ್ ಮಾಡಿ ಹೇಗೆ ಆನಂದ ಪಡ್ತಾನೆ ಅಂತ.
ಸಲಹೆ ೪. ಸಲ್ಮಾನ್ ಖಾನ್‌ಗೆ ಇರುವ ಭೂಗತ ವ್ಯಕ್ತಿಗಳ ಬಗ್ಗೆ ಪ್ರಶ್ನೆ ಹಾಕು. ಆತ ಒಂದೊಂದಾಗಿ... ದಾವೂದ್ ಇಬ್ರಾಹಿಂ, ನೂರ್ ಇಬ್ರಾಹಿಂ, ಚೋಟಾ ಶಕೀಲ್, ಅಬುಸಲೇಂ ಅಂತ ಕಥೆ ಹೇಳ್ತಾನೆ. ಕೆಲಮ ಸುಳ್ಳು ಸುಳ್ಳೇ ಘಟನೆ ಹೇಳ್ತಾನೆ. ನೀನದಕ್ಕೆ ಭಯ ಬಿದ್ದವನಂತೆ ನಟಿಸು.
ಸಲಹೆ ೫. ವೇಳೆ ಸಿಕ್ಕಾಗಲೆಲ್ಲ ಆಧುನಿಕ ಜಿಮ್‌ಗೆ ಕರೆದುಕೊಂಡು ಹೋಗು. ಬಾಡಿ ಬಿಲ್ಡ್ ಮಾಡಲು ಹೊಸ ಹೊಸ ಡ್ರಗ್ ಯಾಮದು ಬಂದಿದೆ ಅಂತ ಮಾಹಿತಿ ಕೊಡು.
ಸಲಹೆ ೬. ಅತ್ಯಂತ ಹೊಲಸು ಭಾಷೆ ಹಾಗೂ ಶಬ್ದಗಳನ್ನು ಬಳಸಿ ಮಾತನಾಡು. ಸಲ್ಮಾನ್ ಖುಷ್ ಹೋಗಾ!
ಒಂದು ಅಂಶವನ್ನು ಚೆನ್ನಾಗಿ ತಿಳಿದಿರು... ಸಲ್ಮಾನ್‌ಗೆ ಕಾನೂನು ಅಂದರೆ ಅಲರ್ಜಿ. ಹಿ ಹೇಟ್ಸ್ ನಯ, ವಿನಯ, ಶಿಸ್ತು, ನಾಗರಿಕತೆ, ಘನತೆ, ಗೌರವ ಇತ್ಯಾದಿ... ಅಷ್ಟೇ ಅಲ್ಲ. ಆತನಿಗೆ ಅಂಗಿ ಕಂಡರೂ ಆಗೋಲ್ಲ. ಅದಕ್ಕೇ ಸಲ್ಮಾನ್ ಬರೀ ಪ್ಯಾಂಟು ಮಾತ್ರ ಹಾಕ್ಕೊಂಡು ಅಕ್ಷರಶಃ ಅರೆನಗ್ನವಾಗಿರ್ತಾನೆ!
ಸಲ್ಮಾನ್ ಖಾನ್ ಈ ದೇಶದ ನ್ಯಾಶನಲ್ ಹೀರೋ ಅನ್ನೋದನ್ನ ಮರೆಯಬೇಡ. ಕಳೆದ ವಾರ, ಆತ ಮೂರು ದಿನ ಜೈಲಿನಲ್ಲಿ ಇದ್ದ ತಾನೆ? ಅದರಿಂದ, ಆತನ ಬಗ್ಗೆ ಉದ್ಯಮದಲ್ಲಿ ವಿಪರೀತ ಕನಿಕರ ಉಂಟಾಗಿದೆ. ಅನೇಕ ಮಹಾನ್ ವ್ಯಕ್ತಿಗಳು ಸಲ್ಮಾನ್ ಪರವಾಗಿ ಮಾತನಾಡಿದ್ದಾರೆ. ಅವರೆಲ್ಲ ಕೋರ್ಟಿನ ಮೇಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಅಭಿಮಾನಿ ಬಳಗ ಕೋರ್ಟಿಗೆ ಕಲ್ಲು ತೂರಿ ಪ್ರತಿಭಟನೆ ವ್ಯಕ್ತಪಡಿಸಿದೆ. ಕಟ್ರಿನಾ ಕೈಫ್ ಎಂಬ ಸುಂದರಿಯ ಹೃದಯ ಸಲ್ಮಾನ್‌ಗಾಗಿ ಮಿಡಿಯುತ್ತಾ ಜೈಲಿನವರೆಗೂ ಹೋಗಿತ್ತು. ಬಾಲಿಮಡ್‌ನ ನೂರಾರು ಕಿರಿಯ ಕಲಾವಿದರು ಸಲ್ಮಾನ್ ಖಾನ್‌ಗೆ ಬೆಂಬಲ ನೀಡಲು ತಮ್ಮ ತಲೆ ಬೋಳಿಸಿಕೊಂಡರು.
ಮೂರು ದಿನದ ನಂತರ ಸಲ್ಮಾನ್ ಜಾಮೀನು ಪಡೆದು ಜೈಲಿನಿಂದ ಹೊರಬಂದ. ಆಗ ನೋಡಬೇಕಿತ್ತು... ಸ್ವಾತಂತ್ರ್ಯ ಹೋರಾಟಗಾರ ಜೈಲಿನಿಂದ ಹೊರಗೆ ಬಂದಾಗ ನೀಡುವಂಥ ಸ್ವಾಗತವನ್ನು ಅಭಿಮಾನಿಗಳು ಸಲ್ಮಾನ್‌ಗೆ ನೀಡಿದರು. ಇದರಿಂದಲೇ ಗೊತ್ತಾಗುತ್ತದೆ, ಸಲ್ಮಾನ್ ಎಂಥ ಹೀರೋ ಅಂತ!
ಈ ನಡುವೆ ಸಲ್ಮಾನ್ ಎಂಥ ಒಳ್ಳೆಯ ಮನುಷ್ಯ ಅಂತ ಸಾಬೀತು ಪಡಿಸುವ ಅನೇಕ ಘಟನೆಗಳು ಜೈಲಿನಲ್ಲಿ ನಡೆದಮ. ಜೈಲಿನಲ್ಲಿ ಟಾಯ್ಲೆಟ್ ಸರಿಯಿಲ್ಲ ಎನ್ನುವ ವಿಷಯ ಸಲ್ಮಾನ್‌ಗೆ ಸ್ವತಃ ಅನುಭವಕ್ಕೆ ಬಂತು. ಅದ್ಕಕಾಗಿ, ಸಲ್ಮಾನ್ ಈಗ ಜೈಲಿನ ಟಾಯ್ಲೆಟ್‌ಗಳ ಅಭಿವೃದ್ಧಿಯ ಸಂಪೂರ್ಣ ವೆಚ್ಚ ಭರಿಸುಮದಾಗಿ ಭರವಸೆ ನೀಡಿದ್ದಾನೆ. ಕೈದಿಗಳು ತಮ್ಮ ಶಕ್ತಿವರ್ದಿಸಿಕೊಳ್ಳಲು ಅಗತ್ಯವಾದ ವ್ಯಾಯಾಮ ಶಾಲೆಕಟ್ಟಿಸಲೂ ಆತ ನಿರ್ಧರಿಸಿದ್ದಾನೆ. ಕೈದಿಗಳು ಜೈಲಿನಲ್ಲಿ ಆರಾಮವಾಗಿರಬೇಕು ಎಂಬ ಸಲ್ಮಾನ್ ಖಾನನ ಕಳಕಳಿ ನಿಜಕ್ಕೂ ಶ್ಲಾಘನೀಯವಲ್ಲವೇ?
ಅಲ್ಲದೇ, ಸಲ್ಮಾನ್ ಖಾನ್‌ಗೆ ಜೈಲಿನಲ್ಲಿ ಸಾಥಿಯಾಗಿದ್ದವನು ಒಬ್ಬ ಕೊಲೆಗಾರ. ಆತ ೪೭೫೦೦ ರು. ತುಂಬಿದರೆ, ಆತನ ಶಿಕ್ಷೆ ೫ ವರ್ಷ ಕಡಿಮೆಯಾಗಿ ಆತ ಬೇಗನೆ ಜೈಲಿನಿಂದ ಹೊರಬರಲು ಸಾಧ್ಯವಂತೆ. ಅದಕ್ಕೆ ನೆರಮ ನೀಡುಮದಾಗಿ ಸಲ್ಮಾನ್ ಖಾನ್ ಕೊಲೆಗಾರನಿಗೆ ಭರವಸೆ ನೀಡಿದ್ದಾನೆ.
ಅಷ್ಟೇ ಅಲ್ಲ, ಸಲ್ಮಾನ್ ಖಾನ್ ನಿಜಕ್ಕೂ ತಾಯಿಗೆ ತಕ್ಕ ಮಗ. ಸಲ್ಮಾನ್‌ಗೆ ತಂದೆಗಿಂತ ತಾಯಿ ಅಂದರೆ ಅತೀವ ಪ್ರೀತಿ. ಆತ ಜೈಲು ಸೇರಿದ ಸುದ್ದಿ ಕೇಳಿ ತಾಯಿ ಆಸ್ಪತ್ರೆ ಸೇರಿದ್ದರು. ಈ ವಿಷಯ ಸಲ್ಮಾನ್‌ಗೆ ಗೊತ್ತಾಗಿದ್ದು ಆತ ಜೈಲಿನಿಂದ ಹೊರಬಂದ ನಂತರ. ಆಗ... ಸಲ್ಮಾನ್ ಅರಚಿದ್ದೇನು ಗೊತ್ತೇ?... ’ಈ ವಿಷಯ ನನಗೆ ಮೊದಲೇ ಗೊತ್ತಾಗಿದ್ದರೆ, ನಾನು ಜೈಲನ್ನೇ ಒಡೆದುಕೊಂಡು ಹೊರಬಹುತ್ತಿದ್ದೆ’ ಅಂತ! ಇಂಥ ಉದ್ಘಾರ ಕೇಳಿದ ಯಾವ ಮಾತೃಹೃದಯ ತಾನೆ ಉಕ್ಕಿಬರುಮದಿಲ್ಲ? ಭಾರತದಲ್ಲಿ ಎಲ್ಲ ತಾಯಂದಿರಿಗೂ ಇದ್ದರೆ ಇರಬೇಕು ಇಂಥ ಮಗ! ಎಲ್ಲ ಅಭಿಮಾನಿಗಳಿಗೂ ಇರಬೇಕು ಇಂಥ ಹೀರೋ!
ಅದನ್ನು ಬಿಟ್ಟು, ಕಣ್ಣೀರಧಾರೆ ಎಂದು ದುಃಖಿಸುವ, ಹಿರಿಯರಿಗೆ ಗೌರವ ನೀಡುವ, ಮಹಿಳೆಯರೆಂದರೆ ಸೌಜನ್ಯದಿಂದ ವರ್ತಿಸುವ, ನೆಲದ ಕಾನೂನನ್ನು ಶಿರಸಾವಹಿಸುವ, ಕುಡಿತ, ಧೂಮಪಾನವನ್ನು ಎಂದೂ ಉತ್ತೇಜಿಸದ ೧೯ನೇ ಶತಮಾನದ ಹೀರೋ ಈಗ ಯಾರಿಗೆ ಬೇಕು?
ಈಗಿನ ಕಾಲ ಬದಲಾಗಿದೆ. ಪ್ರೇಕ್ಷಕ ಬದಲಾಗಿದ್ದಾನೆ. ಅದಕ್ಕಾಗಿ ಈಗಿನ ಕಾಲಕ್ಕೆ ರಾಜ್‌ಕಪೂರ್ ಅಥವಾ ರಾಜ್‌ಕುಮಾರ್ ಅವರಂಥ ಹೀರೋಗಳು ಬೇಕಾಗಿಲ್ಲ. ರಾಜ್‌ಕುಮಾರ್ ಮೊನ್ನೆ ನಿಧನರಾದರೂ ಅವರ ಆದರ್ಶ ಸಿನೆಮಾಗಳ ಯುಗ ಬಹಳ ಹಿಂದೆಯೇ ಅವಸಾನವಾಗಿದೆ. ಅವರ ತೆರೆಯ ಮೇಲಿನ ಕಲೆಗಾಗಲೀ, ತೆರೆಯ ಹೊರಗಿನ ನಡತೆಗಾಗಲೀ ಈಗ ಬೆಲೆಯಿಲ್ಲ. ಜನರಿಗೇನಿದ್ದರೂ ಈಗ ಬೇಟೆಗಾರ ಸಲ್ಮಾನ್ ಖಾನ್, ಮುಂಬೈ ಬಾಂಬರ್- ಮುನ್ನಾಭಾಯಿ ಸಂಜಯ ದತ್ ಅಂಥವರೇ ಹೀರೋಗಳು. ಹೊಡಿ ಮಗ ಹೊಡಿ ಮಗ ಎನ್ನುಮದೇ ಆದರ್ಶ. ಆದ್ದರಿಂದಲೇ ಕಳೆದ ವಾರ ರಾಜ್‌ಕುಮಾರ್ ಅವರ ಅಂತಿಮ ಯಾತ್ರೆಯಲ್ಲಿ ಹಲವಾರು ಸಲ್ಮಾನ್ ಖಾನ್‌ಗಳ ಹೀರೋಯಿಸಂ ವಿಜ್ರಂಭಿಸಿತು!
ವಿವೇಕ್, ಇದನ್ನು ಅರ್ಥ ಮಾಡಿಕೊಂಡು ನಿನ್ನ ಇಮೇಜನ್ನು ಬದಲಾಯಿಸಿಕೊಂಡರೆ ನೀನೂ ಸಲ್ಮಾನ್ ಥರಾ ಹೀರೋ ಆಗ್ತೀಯಾ. ಆಲ್ ದಿ ಬೆಸ್ಟ್!
ಇಂತಿ ನಿನ್ನ ಹಿತೈಷಿ
ತ್ರಿಪುರ ಸುಂದರಿ ಸುಶ್ಮಿತಾ
Kannada Prabha issue dated April 17, 2006
Our National Hero Is Mahatma Salman Khan... Jai Jai Khan
--
Tuesday, April 11, 2006
ಮೆರಿಟ್ ಸ್ಟೂಡೆಂಟಂತೆ! ನೀವೇನು ನಮಗೆ ಓಟ್ ಕೊಡ್ತೀರಾ?
ದೇಶದಲ್ಲಿ ಕೋಳಿ ಜ್ವರ, ಇಲಿ ಜ್ವರ, ಚಿಕನ್ ಗುನ್ಯಾ, ಏಡ್ಸ್, ಹಾಗೂ
ಮೆರಿಟ್ ನಿರ್ಮೂಲನೆ ಆಗಬೇಕು - ರಾಜಕಾರಣಿ ಉತ್ರ
ನೀಮ ಮೆರಿಟ್ ವಿದ್ಯಾರ್ಥಿಗಳು ನಮ್ಮ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಕಲಿಯುತ್ತೀರಿ. ಆಮೇಲೆ, ಲಕ್ಷಾಂತರ ರುಪಾಯಿ ಸಂಬಳ ಅಂತ ಫಾರಿನ್ನಿಗೆ ಹೋಗ್ತೀರಿ. ಮೆರಿಟ್ ಹೆಚ್ಚಾದಷ್ಟೂ ನೀಮ ಫಾರಿನ್ನಿಗೆ ಹೋಗೋದು ಹೆಚ್ಚು. ಆದರೆ, ಮೆರಿಟ್ ಇಲ್ಲದ ವಿದ್ಯಾರ್ಥಿಗಳು ದೇಶದಲ್ಲೇ ಉಳಿದು ತಾಯ್ನಾಡಿನ ಸೇವೆ ಮಾಡ್ತಾರೆ. ಅಂಥವರಿಗೇ ಸೀಟು ನೀಡಬೇಕಾದ್ದು ನಮ್ಮಂಥ ದೇಶಪ್ರೇಮಿಗಳ ಕರ್ತವ್ಯ ತಾನೆ?
ಮೆರಿಟ್ ಮಹಾಶಯರಿಗೆ ದೊಡ್ಡ ನಮಸ್ಕಾರ,
ಕಳೆದ ವಾರ ರಾಜ್ಯ ಮತ್ತು ಕೇಂದ್ರದಲ್ಲಿ ನಾಮ ಮಂಡಿಸಿರತಕ್ಕಂಥ ಮೀಸಲಾತಿ ನೀತಿಗೆ ನಿಮ್ಮ ಪ್ರತಿಭಟನೆ ಪತ್ರ ನಮ್ಮ ಕೈತಲುಪಿದೆ. ನಾಮ ಇನ್ನೂ ಈ ಮಂಡಲ ವರದಿಯನ್ನು ಅನುಷ್ಠಾನ ಮಾಡಿಲ್ಲ. ಆಗಲೇ, ನೀಮ ಕೆಂಡಾ- ಮಂಡಲ ಆಗಿದ್ದೀರಿ. ಹೀಗಾಗತಕ್ಕಂಥದ್ದು ಸಹಜವೇ. ಕೂಲ್ ಡೌನ್ ಸ್ವಾಮಿ. ನಿಮ್ಮ ಪತ್ರಕ್ಕೆ ಇಲ್ಲಿದೆ ನಮ್ಮ ಉತ್ರ.
ನಾಮ ಈ ಮೀಸಲಾತಿ ನೀತಿ ಅನುಷ್ಠಾನ ಮಾಡಲು ಹೊರಟಿದ್ದಕ್ಕೆ ಪ್ರಜಾಪ್ರಭುತ್ವಾತ್ಮಕ ಕಾರಣವಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಹಾಗಾಗಿ, ಮೆರಿಟ್ ವಿದ್ಯಾರ್ಥಿಗಳು ಮೇಲಲ್ಲ. ಮೆರಿಟ್ಟಿಲ್ಲದ ವಿದ್ಯಾರ್ಥಿಗಳು ಕೀಳಲ್ಲ! ಇಷ್ಟು ವರ್ಷ ಮೆರಿಟ್ ವಿದ್ಯಾರ್ಥಿಗಳಿಂದ ಮೆರಿಟ್ಟಿಲ್ಲದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿತ್ತು. ಒಟ್ಟೂ ಸೀಟುಗಳ ಸಿಂಹಪಾಲನ್ನು ಮೆರಿಟ್ ವಿದ್ಯಾರ್ಥಿಗಳೇ ಕಬಳಿಸುತ್ತಿದ್ದರು. ಈ ರೀತಿ ಎಲ್ಲಾ ಶಾಲಾ ಕಾಲೇಜುಗಳ ಸೀಟುಗಳನ್ನೂ ಮೆರಿಟ್ ವಿದ್ಯಾರ್ಥಿಗಳೇ ತಿಂದು ತೇಗಿದರೆ, ಮೆರಿಟ್ಟಿಲ್ಲದ ವಿದ್ಯಾರ್ಥಿಗಳು ಏನು ತಿನ್ನಬೇಕು ಸ್ವಾಮಿ?
ಹಾಗಾಗಿ ಈ ಮೆರಿಟ್ ಎನ್ನತಕ್ಕಂಥದ್ದು ಒಂದು ಸಮಾಜಿಕ ಪಿಡುಗಾಗಿದೆ! ಆದ್ದರಿಂದ, ನಾಮ ದೇಶದಲ್ಲಿನ ’ಮೆರಿಟ್’ ಪಿಡುಗನ್ನೇ ನಿರ್ಮೂಲನ ಮಾಡಲು ಪಣ ತೊಟ್ಟಿದ್ದೇವೆ. ಸಿಡುಬು, ಪೋಲಿಯೋ, ಪ್ಲೇಗ್, ಏಡ್ಸ್, ಕ್ಷಯ, ಇಲಿಜ್ವರ, ಕೋಳಿಜ್ವರ, ಚಿಕನ್‌ಗುನ್ಯಾ ಥರ ಮೆರಿಟ್ ಎನ್ನತಕ್ಕಂಥ ಹೆಮ್ಮಾರಿಯನ್ನೂ ನಾಮ ದೇಶದಿಂದ ಸಂಪೂರ್ಣ ತೊಡೆದು ಹಾಕಬೇಕಾಗಿದೆ!
ಕೆಲವೇ ವರ್ಷಗಳಲ್ಲಿ ಯಾರೂ ’ಮೆರಿಟ್’ ಎನ್ನತಕ್ಕಂಥ ಶಬ್ದವನ್ನೇ ಉಚ್ಚರಿಸದಂಥ ಪರಿಸ್ಥಿತಿ ನಿರ್ಮಾಣ ಮಾಡುತ್ತೇವೆ ಎನ್ನತಕ್ಕಂಥ ಭರವಸೆಯನ್ನು ನಾಮ ನೀಡಲು ಬಯಸಿದ್ದೇವೆ.
ಇನ್ನೊಂದು ಪ್ರಜಾಸತ್ತಾತ್ಮಕ ಕಾರಣ ನೋಡಿ. ಈ ವ್ಯವಸ್ಥೆಯಲ್ಲಿ ಯಾವತ್ತೂ ಬಹುಮತಕ್ಕೇ ಜಯ. ಈ ದೇಶದ ಅಂಕಿಸಂಕಿಯನ್ನು ಗಮನಿಸಿ. ಮೆರಿಟ್ ವಿದ್ಯಾರ್ಥಿಗಳು ಹಾಗೂ ಮೆರಿಟ್ ಇಲ್ಲದ ವಿದ್ಯಾರ್ಥಿಗಳಲ್ಲಿ ಯಾರ ಸಂಖ್ಯೆ ಹೆಚ್ಚಿದೆ? ಸಿಂಪಲ್ಲಾಗಿ ಕಳೆದ ೧೦ ವರ್ಷಗಳ ಎಸ್‌ಎಸ್‌ಎಲ್‌ಸಿ, ಪಿಯೂಸಿ ಫಲಿತಾಂಶವನ್ನೇ ನೋಡಿ. ಪರೀಕ್ಷೆಗೆ ಕುಳಿತವರಲ್ಲಿ ಶೇ.೫೩ರಿಂದ ಶೇ.೬೩ರಷ್ಟು ಜನ ನಪಾಸಾಗುತ್ತಾರೆ. ಅಂದರೆ, ಪಾಸಾಗುವವರಿಗಿಂತ ನಪಾಸಾಗುವವರ ಸಂಖ್ಯೆಯೇ ಹೆಚ್ಚು. ಪಾಸಾದವರಲ್ಲೂ ಸ್ವಂತ ಮೆರಿಟ್ ಮೇಲೆ ಪಾಸಾಗುವವರ ಸಂಖ್ಯೆ ಇನ್ನೂ ಕಡಿಮೆ. ಅಲ್ಲದೇ, ಬರೀ ಪಾಸಾದವರನ್ನು ಮೆರಿಟ್ ವಿದ್ಯಾರ್ಥಿಗಳು ಎನ್ನಲಾಗುತ್ತದೆಯೇ? ಕನಿಷ್ಠ ೭೦-೮೦ ಪರ್ಸೆಂಟ್ ಅಂಕ ಪಡೆದವರನ್ನು ಮೆರಿಟ್ ಸಾಲಿಗೆ ಸೇರಿಸಬಹುದು. ಇಂಥವರ ಸಂಖ್ಯೆ ದೇಶದಲ್ಲಿ ಎಷ್ಟಿದೆ ಮಹಾ? ವಿಶ್ವಾಸಮತ ಕೋರಿದರೆ, ಮೆರಿಟ್ ವಿದ್ಯಾರ್ಥಿಗಳು ಎಂದೂ ಬಹುಮತ ಸಾಬೀತು ಮಾಡಲು ಸಾಧ್ಯವಿಲ್ಲ! ಆದ್ದರಿಂದ, ಮೆರಿಟ್ ಇಲ್ಲದಿದ್ದರೂ ಬಹುಮತ ಇರುವ ವಿದ್ಯಾರ್ಥಿಗಳಿಗೇ ಕಿರೀಟ ತೊಡಿಸಬೇಕು ಎನ್ನತಕ್ಕಂಥದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಸಿದ್ಧಾಂತ. ಅಂದರೆ, ಮೆರಿಟ್‌ರಹಿತ ವಿದ್ಯಾರ್ಥಿಗಳಿಗೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಿಂಹಪಾಲು ಸೀಟು ಸಿಗಬೇಕು ಎನ್ನತಕ್ಕಂಥದ್ದು ಪ್ರಜಾತಂತ್ರ ವ್ಯವಸ್ಥೆಯ ಮೂಲ ಪಾಠ.
ಅಷ್ಟೇ ಅಲ್ಲ, ಈ ಮೆರಿಟ್‌ಗೆ, ಶಿಕ್ಷಣದಲ್ಲಿ ಯಾಕೆ ಆದ್ಯತೆ ನೀಡಬೇಕು? ಎನ್ನತಕ್ಕಂಥದ್ದು ನಮ್ಮ ಮೂಲಭೂತ ಪ್ರಶ್ನೆ.
ನೀಮ ಮೆರಿಟ್ ವಿದ್ಯಾರ್ಥಿಗಳು, ನಮ್ಮ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಕಲಿಯುತ್ತೀರಿ. ಆಮೇಲೆ, ಲಕ್ಷಾಂತರ ರುಪಾಯಿ ಸಂಬಳ ಸಿಗುತ್ತೆ ಅಂತ ಫಾರಿನ್‌ಗೆ ಹಾರಿ ಹೋಗುತ್ತೀರಿ. ವಿದೇಶಿ ಕಂಪನಿಗಳನ್ನು ಶ್ರೀಮಂತಗೊಳಿಸಲು ನೀಮ ದುಡಿಯುತ್ತೀರಿ. ಅಲ್ಲಿನ ಸರ್ಕಾರಗಳಿಗೆ ನೆರಮ ನೀಡುತ್ತೀರಿ. ಮೆರಿಟ್ ಹೆಚ್ಚಾದಂತೆ ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚು. ಮೆರಿಟ್ ಕಡಿಮೆ ಆದಂತೆ ದೇಶದಲ್ಲಿ ಉಳಿದು ತಾಯ್ನಾಡಿಗೆ ಸೇವೆ ಸಲ್ಲಿಸುವವರ ಸಂಖ್ಯೆ ಅಧಿಕ. ಆದ್ದರಿಂದ ತಾಯ್ನಾಡಿಗೆ ಸೇವೆ ಸಲ್ಲಿಸುವ ಮೆರಿಟ್‌ರಹಿತ ವಿದ್ಯಾರ್ಥಿಗಳಿಗೇ ಆದ್ಯತೆ ನೀಡಬೇದ್ದು ನಮ್ಮಂಥ ದೇಶಪ್ರೇಮಿಗಳ ಕರ್ತವ್ಯ. ಏನಂತೀರಿ?
ಕೋಟಾ ಕೊಟ್ಟಿದ್ದು ತನಗೆ,
ಮೆರಿಟ್ಟಿಗೆ ಮುಚ್ಚಿಟ್ಟಿದ್ದು ಪರರಿಂಗೆ,
ಎಂದು ಸ್ವತಃ ಸರ್ವಜ್ಞನೇ ಹೇಳಿದ್ದಾನೆ ಗೊತ್ತಲ್ಲ!
ಈ ಮೆರಿಟ್ಟಿನಿಂದಾಗಿ ಬರೀ ಶೈಕ್ಷಣಿಕ ಅಸಮಾನತೆಯಲ್ಲ. ಆರ್ಥಿಕ ಅಸಮಾನತೆಯೂ ಉಂಟಾಗುತ್ತದೆ. ಯಾಕೆಂದರೆ, ಮೆರಿಟ್ ಇರುವ ವಿದ್ಯಾರ್ಥಿಗಳು, ಒಳ್ಳೊಳ್ಳೆ ಕಂಪನಿ ಸೇರಿ, ಒಳ್ಳೊಳ್ಳೆ ಸಂಬಳ ಪಡೆಯುತ್ತಾರೆ. ಆದರೆ, ಮೆರಿಟ್ ಇಲ್ಲದ ವಿದ್ಯಾರ್ಥಿಗಳಿಗೆ ಸಂಬಳ ಹಾಗಿರಲಿ, ಪುಗಸಟ್ಟೆ ಬರ್ತೀನಿ ಅಂದರೂ ಯಾರೂ ಕೆಲಸ ಕೊಡುಮದಿಲ್ಲ. ಇದರಿಂದ ಈ ದೇಶದ ಅಲ್ಪಸಂಖ್ಯಾತ ಮೆರಿಟ್ ವಿದ್ಯಾರ್ಥಿಗಳಿಗೆ ಹಣದುಬ್ಬರ. ಬಹುಸಂಖ್ಯಾತ ಮೆರಿಟ್‌ರಹಿತ ವಿದ್ಯಾರ್ಥಿಗಳಿಗೆ ಹಣದ-ಬರ ಆಗಿ ದೇಶದಲ್ಲಿ ಆರ್ಥಿಕ ಅಸಮತೋಲನ ಉಂಟಾಗುತ್ತದೆ. ಇದನ್ನು ತಪ್ಪಿಸಬೇಕೆಂದರೆ, ದೇಶದಲ್ಲಿ ಮೆರಿಟ್ ವಿದ್ಯಾರ್ಥಿಗಳು ಹೆಚ್ಚದಂತೆ ಜಾಗ್ರತೆ ವಹಿಸಬೇಕು.
ಈ ಎಲ್ಲ ಕಾರಣಗಳಿಗಾಗಿ, ನಾಮ ಹೊಸ ಹೊಸ ಶೈಕ್ಷಣಿಕ ಸುಧಾರಣೆಗಳನ್ನು ತರುತ್ತಿದ್ದೇವೆ. ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಗೊಂದಲ ಉಂಟುಮಾಡಿ ಮೆರಿಟ್ ವಿದ್ಯಾರ್ಥಿಗಳಾಗಲು ಏನನ್ನು ಕಲಿಯಬೇಕು ಎಂಬುದೇ ಅರ್ಥವಾಗದಂತೆ ಮಾಡುತ್ತಿದ್ದೇವೆ. ಪ್ರತಿವರ್ಷ ಬೇರೆ ಬೇರೆ ರೀತಿಯ ಪರೀಕ್ಷಾ ಪದ್ಧತಿಯನ್ನು ಅಳವಡಿಸಿ ವಿದ್ಯಾರ್ಥಿಗಳನ್ನು ಕಂಗಾಲು ಮಾಡುತ್ತಿದ್ದೇವೆ. ಇಂಗ್ಲಿಷ್ ಮೀಡಿಯಂ ಮತ್ತು ಕನ್ನಡ ಮೀಡಿಯಂ ಎನ್ನತಕ್ಕಂತ ವಿವಾದ ಸೃಷ್ಟಿ ಮಾಡಿ ಪಾಲಕರ ತಲೆ ಚಿಟ್ಟು ಹಿಡಿಯುವಂತೆ ಮಾಡಿದ್ದೇವೆ. ಶಾಲಾ ಕಾಲೇಜು ಪುಸ್ತಕಗಳಲ್ಲಿ ತಪುý್ಪ ತಪುý್ಪ ಮಾಹಿತಿ ಮುದ್ರಿಸಿ ವಿದ್ಯಾರ್ಥಿಗಳು ದಾರಿತಪುý್ಪವಂತೆ ಪ್ರಯತ್ನಿಸುತ್ತಿದ್ದೇವೆ. ಪತ್ರಿಕೆಗಳಲ್ಲಿ ಸಿಇಟಿ, ಕಾಮೆಡ್, ಸೀಟು ಹಂಚಿಕೆ, ಮುಂತಾದ ವಿಷಯಗಳ ಕುರಿತು ದಿನಕ್ಕೊಂದು ರೀತಿಯ ಹೇಳಿಕೆ ಪ್ರಕಟವಾಗುವಂತೆ ಮಾಡಿ ನಿಜ ಏನು ಎನ್ನತಕ್ಕಂಥದ್ದು ಯಾರಿಗೂ ಅರ್ಥವಾಗದ ಪರಿಸ್ಥಿತಿಯನ್ನು ಕಾಯ್ದುಕೊಂಡುಬಂದಿದ್ದೇವೆ.
ಅಷ್ಟೇ ಅಲ್ಲ. ಮೆರಿಟ್ ಇಲ್ಲದ ವಿದ್ಯಾರ್ಥಿಗಳಿಗೆ ಗರಿಷ್ಠ ರ್ಯಾಂಕ್ ನೀಡುತ್ತಿದ್ದೇವೆ. ಉದಾಹರಣೆಗೆ, ಎಂಬಿಬಿಎಸ್ ಪರೀಕ್ಷೆ ಪಾಸು ಮಾಡಲು ೧೦ ವರ್ಷ ತೆಗೆದುಕೊಂಡ ಹಲವಾರು ಮೆರಿಟ್‌ರಹಿತ ವಿದ್ಯಾರ್ಥಿಗಳಿಗೆ ಉನ್ನತ ರ್ಯಾಂಕ್ ನೀಡಿ ನಿಜವಾಗಲೂ ಉನ್ನತ ಅಂಕ ಪಡೆದಿದ್ದ ವಿದ್ಯಾರ್ಥಿಗಳಿಗೆ ಕನಿಷ್ಠ ರ್ಯಾಂಕ್ ನೀಡಿದ್ದೇವೆ. ಈ ಮೆರಿಟ್ ನಿರ್ಮೂಲನಾ ಪದ್ಧತಿಯನ್ನು ರಾಜ್ಯದ ಅತ್ಯಂತ ಪ್ರತಿಷ್ಠಿತ ರಾಜೀವ್‌ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲೇ ಅಳವಡಿಸಿದ್ದೇವೆ. ಉಳಿದ ವಿ.ವಿ.ಗಳಲ್ಲೂ ಇದೇ ವ್ಯವಸ್ಥೆಯಿದೆ. ಕೆಪಿಎಸ್‌ಸಿ, ಐಎಎಸ್ ಪರೀಕ್ಷೆಯಲ್ಲೂ ನಾಮ ರ್ಯಾಂಕ್ ಹೆಚ್ಚು ಕಡಿಮೆ ಮಾಡಿ ಮೆರಿಟ್ ತಡೆಗೆ ಯಶಸ್ವಿಯಾಗಿದ್ದೇವೆ. ಹೀಗೆ, ನಾಮ ಕೈಗೊಂಡಿರುವ ಎಲ್ಲಾ ಮೆರಿಟ್ ನಿರ್ಮೂಲನಾ ಕ್ರಮಮಗಳನ್ನು ಇಲ್ಲಿ ವಿವರಿಸಲು ಆಗುಮದಿಲ್ಲ.
ಅಲ್ಲಾ ಮೆರಿಟ್ ಮಹನೀಯರೇ,
ಈಗ ನಮ್ಮ ಶೈಕ್ಷಣಿಕ ಕ್ಷೇತ್ರದ ಸುಧಾರಣೆ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದೀರಲ್ಲ. ನಾಮ ನಿಮಗೆ ಈಗ ನೆನಪಾದೆವಾ? ಚುನಾವಣೆಯಾದಾಗ ನಮ್ಮ ಕುರಿತು ಸ್ವಲ್ಪವಾದರೂ ಚಿಂತಿಸಿದಿರಾ? ನೀವೇನು ಓಟು ಹಾಕ್ತೀರಾ? ನೀಮ ಮೆರಿಟ್ಟಿದೆ ಅಂತ ನಿಮ್ಮ ಸಂಬಳ, ದುಡ್ಡು ಲೆಕ್ಕ ಮಾಡಿಕೊಂಡು ಮನೆಯಲ್ಲಿ ಕುಳಿತಿರ್ತೀರಿ. ಮತದಾನ ಕೇಂದ್ರದ ಮುಂದೆ ಯಾರು ಕ್ಯೂ ನಿಲ್ತಾರೆ ಅಂತ ಮನೆಯಲ್ಲೋ, ಕಚೇರಿಯಲ್ಲೋ ಆರಾಮವಾಗಿರ್ತೀರಿ. ನಿಮ್ಮಂಥವರು ನಮಗೆ ಓಟ್ ಹಾಕ್ತೀರಿ ಅಂತ ನಂಬಿಕೊಂಡ್ರೆ ನಾಮ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾ?
ನಮಗೆ ಓಟ್ ಕೊಡೋದು ಯಾರು ಅಂತ ನಮಗೆ ಚೆನ್ನಾಗಿ ಗೊತ್ತು. ನಾಮ ಅವರನ್ನು ಚೆನ್ನಾಗಿ ನೋಡಿಕೊಳ್ತೇವೆ. ನಮಗೆ ನಿಮ್ಮ ಓಟೂ ಬೇಡ. ಮೆರಿಟ್ಟೂ ಬೇಡ. ಬೇಕಾದರೆ, ಮೆರಿಟ್ಟಿಗೆ ಮರ್ಯಾದೆ ಕೊಡುವ ರಾಜಕಾರಣಿಯನ್ನೇ ಮುಂದಿನ ಎಲೆಕ್ಷನ್‌ನಲ್ಲಿ ಆರಿಸಿಕೊಳ್ಳಿ. ಯಾರು ಬ್ಯಾಡ ಅಂತಾರೆ ಸ್ವಾಮಿ. ಇದು ಪ್ರಜಾಪ್ರಭುತ್ವ. ಇಡೀ ವ್ಯವಸ್ಥೆ ಓಟಿನಿಂದಲೇ ನಡೆಯುತ್ತದೆ. ಇದ್ಯಾಕೆ ನಿಮ್ಮ ಮೆರಿಟ್ ಬುದ್ಧಿಗೆ ಹೊಳೆಯೋದಿಲ್ಲ ಸ್ವಾಮಿ?
ಇಂತಿ ಮೆರಿಟ್ ವಿರೋಧಿ
ಸರ್ವಪಕ್ಷ ರಾಜಕೀಯ ಒಕ್ಕೂಟ
Kannada Prabha issue dated April 10, 2006
Oh.. Merit Student? You Wouldn't Vote Us. We Know.
--