ಡಾ.ರಾಜ್ ಆದರ್ಶಗಳು ಈಗ ಯಾರಿಗೆ ಬೇಕು? ವಿವೇಕ್ ಒಬೇರಾಯ್‌ಗೆ
ಸುಂದರಿ ಸುಶ್ಮಿತಾ ಪತ್ರ
ಕಾನೂನನ್ನು ಪದೇ ಪದೆ ಗಾಳಿಗೆ ತೂರಿ, ಅಪರಾಧಿ ಎನಿಸಿಕೊಂಡಿರುವ ಈ ದೇಶದ ನ್ಯಾಶನಲ್ ಹೀರೋ ಸಲ್ಮಾನ್ ಖಾನ್ ಕಳೆದ ವಾರ ಅಕ್ಷರಶಃ ಜೈಲು ಸೇರಿದ. ಮೂರು ದಿನದ ನಂತರ ಜಾಮೀನಿನ ಮೇಲೆ ಹೊರಬಂದ. ಆಗ ನೋಡಬೇಕಿತ್ತು... ಸ್ವಾತಂತ್ರ್ಯ ಹೋರಾಟಗಾರ ಜೈಲಿನಿಂದ ಹೊರಗೆ ಬಂದಾಗ ನೀಡುವಂಥ ಸ್ವಾಗತವನ್ನು ಅಭಿಮಾನಿಗಳು ಸಲ್ಮಾನ್‌ಗೆ ನೀಡಿದರು. ಇತ್ತ ರಾಜ್ ಮತ್ತು ಅವರ ಆದರ್ಶಗಳು ಸಮಾಧಿಯಾಗುತ್ತಿರುವಾಗ ಅತ್ತ ಸಲ್ಮಾನ್ ಮತ್ತು ಆತನ ಹೀರೋಯಿಸಂಗಳು ಸಂಭ್ರಮಿಸುತ್ತಿದ್ದಮ!
ಅಬ್ಬೇ ವಿವೇಕ್,
ಈಗಾದರೂ ಬುದ್ಧಿ ಬಂತಾ ಮರೀ? ಆ ನಖ್ರಾವಾಲಿ ಐಶ್ವರ್ಯ ನಿನ್ನ ಮಹಾ ಫ್ರೆಂಡು ಅಂತ ಹೇಳ್ತಾ ಇದ್ದೆ. ಆಕೆ ಜತೆ ನಿನ್ನ ಮದುವೆ ಅಂತಿದ್ದೆ. ಆಕೆಗಾಗಿ, ನೀನು ಪತ್ರಿಕಾಗೋಷ್ಠಿ ನಡೆಸಿ ’ಸಲ್ಮಾನ್ ಖಾನ್ ಒಬ್ಬ ವಿಕೃತ ಮನಸಿನ ರೋಗಿ’ ಅಂತ ಆರೋಪ ಮಾಡಿದ್ದೆ. ಈಗೇನಾಯ್ತು? ಐಶ್ವರ್ಯ ನಿನ್ನ ತೋಳು ಬಿಟ್ಟು ಪುರ್ರಂತ ಹಾರಿಹೋಗಿ ಅಭಿಷೇಕ್ ಬಚ್ಚನ್ ಭುಜದ ಮೇಲೆ ಕುಳಿತಿದ್ದಾಳೆ. ನಿಂಗೆ ಇದರಿಂದ ಬೇಜಾರಾಗಿದೆಯೇನೋ... ಪಾಪ. ಹೋಗಲಿ ಬಿಡು ವಿವೇಕ್. ಇದನ್ನ ಸುಮ್ಮನೆ ತಮಾಷೆ ಅಂತ ನೋಡ್ತಾ ಇರು ಅಷ್ಟೇ. ಅಭಿಷೇಕ್‌ಗೂ ಐಶ್ ಕೈಕೊಡುವ ಲಕ್ಷಣ ಕಾಣಿಸಿಸ್ತಿದೆ.
ಅವರ ಕಥೆ ಏನಾದ್ರೂ ಆಗಲಿ. ಆದರೆ, ಆಕೆಗಾಗಿ ನೀನು ಸಾಧಿಸಿದ್ದಾದರೂ ಏನು? ಸಲ್ಮಾನ್ ಜತೆ ದುಶ್ಮನಿ ತಾನೆ? ಅದರಿಂದ ನಿನ್ನ ಭವಿಷ್ಯ ಏನಾಯ್ತು? ನಿನ್ನ ಹಾದಿಯಲ್ಲಿದ್ದ ಎಲ್ಲಾ ಸಿನಿಮಾಗಳೂ ಬ್ಲಾಕ್ ಆಗಿಹೋದಮ ಗೊತ್ತಾ! ನಿಂಗೆ ಒಳ್ಳೆ ಅವಕಾಶಗಳು ಎಲ್ಲಿಂದ ಬರಬೇಕು ಹೇಳು? ಯೂ ಲಾಸ್ಟ್ ಬೋಥ್... ಐಶ್ವರ್ಯ ಆಂಡ್ ಆಫರ್ಸ್. ನಿನ್ನಥರ, ಇನ್ನಿತರ ಬಾಲಿಮಡ್ ಹೀರೋಗಳೂ, ಐಶ್ವರ್ಯಾಗಾಗಿ ಸಲ್ಮಾನ್ ಖಾನ್ ವಿರೋಧ ಕಟ್ಟಿಕೊಂಡರಾ? ಇಲ್ಲ. ಯಾಕೆ ಹೇಳು? ಅವರಿಗೆ ಗೊತ್ತು ಇಂಡಸ್ಟ್ರಿಯಲ್ಲಿ ಸಲ್ಮಾನ್ ಎಷ್ಟು ಪವರ್‌ಫುಲ್ ಅಂತ.
ಹೋಗಲಿ, ಇದು ನಿಂಗೆ ತಡವಾಗಿಯಾದರೂ ಅರ್ಥವಾಯಿತಲ್ಲ ಮಾರಾಯ. ನೀನೀಗ ಸಲ್ಮಾನ್ ಜತೆ ಗೆಳತನ ಬೆಳೆಸೋದಕ್ಕೆ ನಿರ್ಧರಿಸಿದ್ದೀಯಂತೆ. ಮೊನ್ನೆ ಮೊನ್ನೆ ಸಲ್ಮಾನ್ ತಾಯಿ ಆಸ್ಪತ್ರೆಯಲ್ಲಿ ಇದ್ದಾಗ, ನೀನು ಮತ್ತು ನಿನ್ನ ಅಪ್ಪ-ಅಮ್ಮ ಅಲ್ಲಿಗೆ ಭೇಟಿ ನೀಡಿದ್ದಿರಂತೆ. ನೀನು ಅಲ್ಲಿ ಸಲ್ಮಾನ್ ಖಾನ್‌ನ ತಾಯಿಯ ಕಾಲಿಗೆ ನಮಸ್ಕಾರ ಮಾಡಿದೆಯಂತೆ? ಆಮೇಲೆ, ಸಲ್ಮಾನ್ ಖಾನ್‌ನ ತಂದೆಯನ್ನೂ ಹೋಗಿ ನೋಡಿಬಂದಿರಂತೆ?
ಹೀಗೆಲ್ಲಾ ಮಾಡಿದರೆ, ಸಲ್ಮಾನ್ ದಾದಾನ ಕೃಪೆ ದೊರೆಯುತ್ತಾ ವಿವೇಕ್? ನನಗೆ ಗೊತ್ತಾಗಿರುವ ಮಾಹಿತಿ ಪ್ರಕಾರ, ಸಲ್ಮಾನ್‌ಗೆ ಇನ್ನೂ ನಿನ್ನ ಬಗ್ಗೆ ಕೋಪ ಹೋಗಿಲ್ಲ. ಅದು ಹಾಗೆಲ್ಲ ಹೋಗೋದೂ ಇಲ್ಲ. ನಿಂಗೆ ಸಲ್ಮಾನ್ ಹ್ಯಾಗೆ ಅಂತ ಗೊತ್ತಲ್ಲ? ಆತನನ್ನು ಒಲಿಸಿಕೊಳ್ಳಲು ಮಾಮೂಲಿ ವಿಧಾನಗಳು ನಡೆಯೋಲ್ಲ. ನನ್ನ ಸಲಹೆ ಕೇಳು.
ಸಲಹೆ ೧. ಮೊದಲು ಸಲ್ಮಾನ್‌ಗೆ ಒಂದು ಸ್ಲಗಲ್ ಆಗಿರುವ ಬಂದೂಕು ಉಡುಗೊರೆ ನೀಡು. ಇಂಥ ಉಡುಗೊರೆ ಸಿಕ್ಕರೆ ಸಲ್ಮಾನ್ ಖುಷಿಯಾಗುತ್ತಾನೆ.
ಸಲಹೆ ೨. ಯಾಮದಾದರೂ ಕಾಡಿಗೆ ಕರೆದುಕೊಂಡು ಹೋಗಿ ಜಿಂಕೆಗಳನ್ನು ತೋರಿಸು. ಸಲ್ಮಾನ್ ಖುಷಿಯಿಂದ ಬೇಟೆಯಾಡುತ್ತಾನೆ. ನೀನದಕ್ಕೆ ಕೇಕೆ ಹಾಕಿ ಉತ್ತೇಜನ ನೀಡು. ಜತೆಗೆ ಕಿಲಕಿಲ ನಗಲು ಒಂದಿಬ್ಬರು ಹೀರೋಯಿನ್‌ಗಳು ಇರಲಿ.
ಸಲಹೆ ೩. ಸಲ್ಮಾನ್‌ಗೆ ರಾತ್ರಿ ಮೂರು ಗಂಟೆಗೆ ಯದ್ವಾತದ್ವಾ ಹೆಂಡ ಕುಡಿಸಿ, ಸುಂಕ ತಪ್ಪಿಸಿ ತಂದ ವಿದೇಶಿ ಕಾರನ್ನು ಏಕಮುಖ ರಸ್ತೆಯಲ್ಲಿ ಡ್ರೆೃವಿಂಗಿಗೆ ಅಂತ ಕೊಡು. ಆಗ ನೋಡು ಸಲ್ಮಾನ್ ಒಂದೋ ಎರಡೋ ಆಕ್ಸಿಡೆಂಟ್ ಮಾಡಿ ಹೇಗೆ ಆನಂದ ಪಡ್ತಾನೆ ಅಂತ.
ಸಲಹೆ ೪. ಸಲ್ಮಾನ್ ಖಾನ್‌ಗೆ ಇರುವ ಭೂಗತ ವ್ಯಕ್ತಿಗಳ ಬಗ್ಗೆ ಪ್ರಶ್ನೆ ಹಾಕು. ಆತ ಒಂದೊಂದಾಗಿ... ದಾವೂದ್ ಇಬ್ರಾಹಿಂ, ನೂರ್ ಇಬ್ರಾಹಿಂ, ಚೋಟಾ ಶಕೀಲ್, ಅಬುಸಲೇಂ ಅಂತ ಕಥೆ ಹೇಳ್ತಾನೆ. ಕೆಲಮ ಸುಳ್ಳು ಸುಳ್ಳೇ ಘಟನೆ ಹೇಳ್ತಾನೆ. ನೀನದಕ್ಕೆ ಭಯ ಬಿದ್ದವನಂತೆ ನಟಿಸು.
ಸಲಹೆ ೫. ವೇಳೆ ಸಿಕ್ಕಾಗಲೆಲ್ಲ ಆಧುನಿಕ ಜಿಮ್‌ಗೆ ಕರೆದುಕೊಂಡು ಹೋಗು. ಬಾಡಿ ಬಿಲ್ಡ್ ಮಾಡಲು ಹೊಸ ಹೊಸ ಡ್ರಗ್ ಯಾಮದು ಬಂದಿದೆ ಅಂತ ಮಾಹಿತಿ ಕೊಡು.
ಸಲಹೆ ೬. ಅತ್ಯಂತ ಹೊಲಸು ಭಾಷೆ ಹಾಗೂ ಶಬ್ದಗಳನ್ನು ಬಳಸಿ ಮಾತನಾಡು. ಸಲ್ಮಾನ್ ಖುಷ್ ಹೋಗಾ!
ಒಂದು ಅಂಶವನ್ನು ಚೆನ್ನಾಗಿ ತಿಳಿದಿರು... ಸಲ್ಮಾನ್‌ಗೆ ಕಾನೂನು ಅಂದರೆ ಅಲರ್ಜಿ. ಹಿ ಹೇಟ್ಸ್ ನಯ, ವಿನಯ, ಶಿಸ್ತು, ನಾಗರಿಕತೆ, ಘನತೆ, ಗೌರವ ಇತ್ಯಾದಿ... ಅಷ್ಟೇ ಅಲ್ಲ. ಆತನಿಗೆ ಅಂಗಿ ಕಂಡರೂ ಆಗೋಲ್ಲ. ಅದಕ್ಕೇ ಸಲ್ಮಾನ್ ಬರೀ ಪ್ಯಾಂಟು ಮಾತ್ರ ಹಾಕ್ಕೊಂಡು ಅಕ್ಷರಶಃ ಅರೆನಗ್ನವಾಗಿರ್ತಾನೆ!
ಸಲ್ಮಾನ್ ಖಾನ್ ಈ ದೇಶದ ನ್ಯಾಶನಲ್ ಹೀರೋ ಅನ್ನೋದನ್ನ ಮರೆಯಬೇಡ. ಕಳೆದ ವಾರ, ಆತ ಮೂರು ದಿನ ಜೈಲಿನಲ್ಲಿ ಇದ್ದ ತಾನೆ? ಅದರಿಂದ, ಆತನ ಬಗ್ಗೆ ಉದ್ಯಮದಲ್ಲಿ ವಿಪರೀತ ಕನಿಕರ ಉಂಟಾಗಿದೆ. ಅನೇಕ ಮಹಾನ್ ವ್ಯಕ್ತಿಗಳು ಸಲ್ಮಾನ್ ಪರವಾಗಿ ಮಾತನಾಡಿದ್ದಾರೆ. ಅವರೆಲ್ಲ ಕೋರ್ಟಿನ ಮೇಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಅಭಿಮಾನಿ ಬಳಗ ಕೋರ್ಟಿಗೆ ಕಲ್ಲು ತೂರಿ ಪ್ರತಿಭಟನೆ ವ್ಯಕ್ತಪಡಿಸಿದೆ. ಕಟ್ರಿನಾ ಕೈಫ್ ಎಂಬ ಸುಂದರಿಯ ಹೃದಯ ಸಲ್ಮಾನ್‌ಗಾಗಿ ಮಿಡಿಯುತ್ತಾ ಜೈಲಿನವರೆಗೂ ಹೋಗಿತ್ತು. ಬಾಲಿಮಡ್‌ನ ನೂರಾರು ಕಿರಿಯ ಕಲಾವಿದರು ಸಲ್ಮಾನ್ ಖಾನ್‌ಗೆ ಬೆಂಬಲ ನೀಡಲು ತಮ್ಮ ತಲೆ ಬೋಳಿಸಿಕೊಂಡರು.
ಮೂರು ದಿನದ ನಂತರ ಸಲ್ಮಾನ್ ಜಾಮೀನು ಪಡೆದು ಜೈಲಿನಿಂದ ಹೊರಬಂದ. ಆಗ ನೋಡಬೇಕಿತ್ತು... ಸ್ವಾತಂತ್ರ್ಯ ಹೋರಾಟಗಾರ ಜೈಲಿನಿಂದ ಹೊರಗೆ ಬಂದಾಗ ನೀಡುವಂಥ ಸ್ವಾಗತವನ್ನು ಅಭಿಮಾನಿಗಳು ಸಲ್ಮಾನ್‌ಗೆ ನೀಡಿದರು. ಇದರಿಂದಲೇ ಗೊತ್ತಾಗುತ್ತದೆ, ಸಲ್ಮಾನ್ ಎಂಥ ಹೀರೋ ಅಂತ!
ಈ ನಡುವೆ ಸಲ್ಮಾನ್ ಎಂಥ ಒಳ್ಳೆಯ ಮನುಷ್ಯ ಅಂತ ಸಾಬೀತು ಪಡಿಸುವ ಅನೇಕ ಘಟನೆಗಳು ಜೈಲಿನಲ್ಲಿ ನಡೆದಮ. ಜೈಲಿನಲ್ಲಿ ಟಾಯ್ಲೆಟ್ ಸರಿಯಿಲ್ಲ ಎನ್ನುವ ವಿಷಯ ಸಲ್ಮಾನ್‌ಗೆ ಸ್ವತಃ ಅನುಭವಕ್ಕೆ ಬಂತು. ಅದ್ಕಕಾಗಿ, ಸಲ್ಮಾನ್ ಈಗ ಜೈಲಿನ ಟಾಯ್ಲೆಟ್‌ಗಳ ಅಭಿವೃದ್ಧಿಯ ಸಂಪೂರ್ಣ ವೆಚ್ಚ ಭರಿಸುಮದಾಗಿ ಭರವಸೆ ನೀಡಿದ್ದಾನೆ. ಕೈದಿಗಳು ತಮ್ಮ ಶಕ್ತಿವರ್ದಿಸಿಕೊಳ್ಳಲು ಅಗತ್ಯವಾದ ವ್ಯಾಯಾಮ ಶಾಲೆಕಟ್ಟಿಸಲೂ ಆತ ನಿರ್ಧರಿಸಿದ್ದಾನೆ. ಕೈದಿಗಳು ಜೈಲಿನಲ್ಲಿ ಆರಾಮವಾಗಿರಬೇಕು ಎಂಬ ಸಲ್ಮಾನ್ ಖಾನನ ಕಳಕಳಿ ನಿಜಕ್ಕೂ ಶ್ಲಾಘನೀಯವಲ್ಲವೇ?
ಅಲ್ಲದೇ, ಸಲ್ಮಾನ್ ಖಾನ್‌ಗೆ ಜೈಲಿನಲ್ಲಿ ಸಾಥಿಯಾಗಿದ್ದವನು ಒಬ್ಬ ಕೊಲೆಗಾರ. ಆತ ೪೭೫೦೦ ರು. ತುಂಬಿದರೆ, ಆತನ ಶಿಕ್ಷೆ ೫ ವರ್ಷ ಕಡಿಮೆಯಾಗಿ ಆತ ಬೇಗನೆ ಜೈಲಿನಿಂದ ಹೊರಬರಲು ಸಾಧ್ಯವಂತೆ. ಅದಕ್ಕೆ ನೆರಮ ನೀಡುಮದಾಗಿ ಸಲ್ಮಾನ್ ಖಾನ್ ಕೊಲೆಗಾರನಿಗೆ ಭರವಸೆ ನೀಡಿದ್ದಾನೆ.
ಅಷ್ಟೇ ಅಲ್ಲ, ಸಲ್ಮಾನ್ ಖಾನ್ ನಿಜಕ್ಕೂ ತಾಯಿಗೆ ತಕ್ಕ ಮಗ. ಸಲ್ಮಾನ್‌ಗೆ ತಂದೆಗಿಂತ ತಾಯಿ ಅಂದರೆ ಅತೀವ ಪ್ರೀತಿ. ಆತ ಜೈಲು ಸೇರಿದ ಸುದ್ದಿ ಕೇಳಿ ತಾಯಿ ಆಸ್ಪತ್ರೆ ಸೇರಿದ್ದರು. ಈ ವಿಷಯ ಸಲ್ಮಾನ್‌ಗೆ ಗೊತ್ತಾಗಿದ್ದು ಆತ ಜೈಲಿನಿಂದ ಹೊರಬಂದ ನಂತರ. ಆಗ... ಸಲ್ಮಾನ್ ಅರಚಿದ್ದೇನು ಗೊತ್ತೇ?... ’ಈ ವಿಷಯ ನನಗೆ ಮೊದಲೇ ಗೊತ್ತಾಗಿದ್ದರೆ, ನಾನು ಜೈಲನ್ನೇ ಒಡೆದುಕೊಂಡು ಹೊರಬಹುತ್ತಿದ್ದೆ’ ಅಂತ! ಇಂಥ ಉದ್ಘಾರ ಕೇಳಿದ ಯಾವ ಮಾತೃಹೃದಯ ತಾನೆ ಉಕ್ಕಿಬರುಮದಿಲ್ಲ? ಭಾರತದಲ್ಲಿ ಎಲ್ಲ ತಾಯಂದಿರಿಗೂ ಇದ್ದರೆ ಇರಬೇಕು ಇಂಥ ಮಗ! ಎಲ್ಲ ಅಭಿಮಾನಿಗಳಿಗೂ ಇರಬೇಕು ಇಂಥ ಹೀರೋ!
ಅದನ್ನು ಬಿಟ್ಟು, ಕಣ್ಣೀರಧಾರೆ ಎಂದು ದುಃಖಿಸುವ, ಹಿರಿಯರಿಗೆ ಗೌರವ ನೀಡುವ, ಮಹಿಳೆಯರೆಂದರೆ ಸೌಜನ್ಯದಿಂದ ವರ್ತಿಸುವ, ನೆಲದ ಕಾನೂನನ್ನು ಶಿರಸಾವಹಿಸುವ, ಕುಡಿತ, ಧೂಮಪಾನವನ್ನು ಎಂದೂ ಉತ್ತೇಜಿಸದ ೧೯ನೇ ಶತಮಾನದ ಹೀರೋ ಈಗ ಯಾರಿಗೆ ಬೇಕು?
ಈಗಿನ ಕಾಲ ಬದಲಾಗಿದೆ. ಪ್ರೇಕ್ಷಕ ಬದಲಾಗಿದ್ದಾನೆ. ಅದಕ್ಕಾಗಿ ಈಗಿನ ಕಾಲಕ್ಕೆ ರಾಜ್‌ಕಪೂರ್ ಅಥವಾ ರಾಜ್‌ಕುಮಾರ್ ಅವರಂಥ ಹೀರೋಗಳು ಬೇಕಾಗಿಲ್ಲ. ರಾಜ್‌ಕುಮಾರ್ ಮೊನ್ನೆ ನಿಧನರಾದರೂ ಅವರ ಆದರ್ಶ ಸಿನೆಮಾಗಳ ಯುಗ ಬಹಳ ಹಿಂದೆಯೇ ಅವಸಾನವಾಗಿದೆ. ಅವರ ತೆರೆಯ ಮೇಲಿನ ಕಲೆಗಾಗಲೀ, ತೆರೆಯ ಹೊರಗಿನ ನಡತೆಗಾಗಲೀ ಈಗ ಬೆಲೆಯಿಲ್ಲ. ಜನರಿಗೇನಿದ್ದರೂ ಈಗ ಬೇಟೆಗಾರ ಸಲ್ಮಾನ್ ಖಾನ್, ಮುಂಬೈ ಬಾಂಬರ್- ಮುನ್ನಾಭಾಯಿ ಸಂಜಯ ದತ್ ಅಂಥವರೇ ಹೀರೋಗಳು. ಹೊಡಿ ಮಗ ಹೊಡಿ ಮಗ ಎನ್ನುಮದೇ ಆದರ್ಶ. ಆದ್ದರಿಂದಲೇ ಕಳೆದ ವಾರ ರಾಜ್‌ಕುಮಾರ್ ಅವರ ಅಂತಿಮ ಯಾತ್ರೆಯಲ್ಲಿ ಹಲವಾರು ಸಲ್ಮಾನ್ ಖಾನ್‌ಗಳ ಹೀರೋಯಿಸಂ ವಿಜ್ರಂಭಿಸಿತು!
ವಿವೇಕ್, ಇದನ್ನು ಅರ್ಥ ಮಾಡಿಕೊಂಡು ನಿನ್ನ ಇಮೇಜನ್ನು ಬದಲಾಯಿಸಿಕೊಂಡರೆ ನೀನೂ ಸಲ್ಮಾನ್ ಥರಾ ಹೀರೋ ಆಗ್ತೀಯಾ. ಆಲ್ ದಿ ಬೆಸ್ಟ್!
ಇಂತಿ ನಿನ್ನ ಹಿತೈಷಿ
ತ್ರಿಪುರ ಸುಂದರಿ ಸುಶ್ಮಿತಾ
Kannada Prabha issue dated April 17, 2006
Our National Hero Is Mahatma Salman Khan... Jai Jai Khan
--
Tuesday, April 18, 2006
ಹೊಡಿ ಮಗಾ, ಹೊಡಿ ಮಗಾ.. ಸಲ್ಮಾನ್ ಖಾನ್‌ಗೇ ಜೈ
Subscribe to:
Post Comments (Atom)
No comments:
Post a Comment