Saturday, May 02, 2009

ಇಂಟರ್ನೆಟ್ಟಲ್ಲಿ ಕನ್ನಡ ಟೈಪ್ ಮಾಡುವುದು ಹೇಗಯ್ಯಾ?

ದೊಂದು ದೊಡ್ಡ ಸಮಸ್ಯೆ ಅಂತ ಈಗ ಗೊತ್ತಾಯಿತು. ತುಂಬ ಜನರಿಗೆ ಕನ್ನಡದಲ್ಲಿ ಬರೆಯಲು ಬರುತ್ತೆ. ಆದರೆ ಕಂಪ್ಯೂಟರಿನಲ್ಲಿ ಟೈಪ್ ಮಾಡಲು ಕಷ್ಟವಾಗುತ್ತಿದೆ. ಅನೇಕರು ಈ-ಮೇಲಲ್ಲಿ ಈ ಕುರಿತು ಪ್ರಶ್ನೆ ಕೇಳಿದ್ದಾರೆ. ಅಂಥವರಿಗೆ ಕೆಲ ಸರಳ ಮಾಹಿತಿ ಇಲ್ಲಿದೆ.

A. ಯೂನಿಕೋಡ್ ಹಾಗೂ ಇಂಟರ್ನೆಟ್ಟಿನಲ್ಲಿ ಕನ್ನಡ ಅಕ್ಷರ ಕುರಿತ ಮೂಲಜ್ಞಾನ.
B. ಕನ್ನಡ ಟೈಪಿಸುವ 6 ವಿಧಾನಗಳು. ಸುಲಭವಾದದ್ದನ್ನು ಆರಿಸಿಕೊಳ್ಳಬಹುದು.
C. ಕನ್ನಡ ಟೈಪಿಸುವ 4 ಕೀಬೋರ್ಡ್ ವಿನ್ಯಾಸಗಳ ಪುಟ್ಟ ಮಾಹಿತಿ.

A. ಯೂನಿಕೋಡ್ ಹಾಗೂ ಇಂಟರ್ನೆಟ್ಟಿನಲ್ಲಿ ಕನ್ನಡ ಅಕ್ಷರ ಕುರಿತ ಮೂಲಜ್ಞಾನ.

ಕನ್ನಡ ಯೂನಿಕೋಡ್: ತೀರಾ ಟೆಕ್ನಾಲಜಿ ಕೊರೆತ ಬೇಡ. ಕೇವಲ ಎರಡು-ಮೂರು ವಾಕ್ಯಗಳಲ್ಲಿ ಯೂನಿಕೋಡಿನ ಸ್ಥೂಲ ಪರಿಚಯ ಇದ್ದರೆ ಸಾಕು. ಯುನಿಕೋಡ್ ಅಂದರೆ, ಇಂಟರ್ನೆಟ್ಟಿನಲ್ಲಿ ಬಳಸುವ ಅಕ್ಷರಗಳ ಒಂದು ಶಿಷ್ಟಪದ್ಧತಿ. ಜಗತ್ತಿನ ನೂರಾರು ಭಾಷೆಯ ಅಕ್ಷರಗಳನ್ನು ಇದೊಂದೇ ನಮೂನಿಯಲ್ಲಿ ಬರೆಯಬಹುದು ಹಾಗೂ ಓದಬಹುದು. ಇದರಿಂದಾಗಿ, ಬೇರೆ ಬೇರೆ ಭಾಷೆಯವರು ಬೇರೆ ಬೇರೆ ಭಾಷೆಯ ಫಾಂಟುಗಳನ್ನು ಸಿಕ್ಕ ಸಿಕ್ಕ ಕಂಪ್ಯೂಟರಿನಲ್ಲೆಲ್ಲಾ Install ಮಾಡಿಕೊಳ್ಳಬೇಕೆಂಬ ತಾಪತ್ರಯವಿಲ್ಲ. ಕಂಪ್ಯೂಟರಿನಲ್ಲಿ ಯೂನಿಕೋಡ್ ಹಾಗೂ ಸ್ಥಳೀಯ ಭಾಷೆಯನ್ನು Enable ಮಾಡಿದರೆ ಸಾಕು. UTF ಅಥವಾ UTF8 ಮಾದರಿಯಲ್ಲಿ ಯೂನಿಕೋಡ್ ಬರಹಗಳನ್ನು ಸೇವ್ ಮಾಡಲಾಗಿರುತ್ತದೆ. ಈಗ ಇಂಟರ್ನೆಟ್ಟಿನಲ್ಲಿ, ಕನ್ನಡ ಸೇರಿದಂತೆ ಬಹುತೇಕ ಭಾಷೆಗಳ ಬ್ಲಾಗುಗಳು ಹಾಗೂ ವೆಬ್ ಸೈಟುಗಳು ಬಳಸುವುದು ಯೂನಿಕೋಡ್ ಮಾದರಿಯ ಅಕ್ಷರಗಳನ್ನು. (ಯೂನಿಕೋಡ್ ಕುರಿತು ಹೆಚ್ಚು ತಿಳಿಯಲು ಇಲ್ಲಿ ನೋಡಿ.)

B. ಕನ್ನಡ ಟೈಪಿಸುವ 6ವಿಧಾನಗಳು.

ಯೂನಿಕೋಡ್ ಆಧರಿಸಿ ಇಂಟರ್ನೆಟ್ಟಿನಲ್ಲಿ ಕನ್ನಡ ಟೈಪ್ ಮಾಡುವುದು ತೀರಾ ಸುಲಭ. ಆದರೆ, ಮೊದಲು, ನಿಮ್ಮ ಕಂಪ್ಯೂಟರ್ ಹಾಗೂ ಬ್ರೌಸರ್, ಕನ್ನಡ ಯೂನಿಕೋಡನ್ನು ಅರ್ಥ ಮಾಡಿಕೊಳ್ಳುತ್ತಿದೆಯೇ - ಎಂದು ಮೊದಲು ಅರಿತುಕೊಳ್ಳಿ. ನಿಮ್ಮ ಕಂಪ್ಯೂಟರಿನಲ್ಲಿ Windows 2003 ಅಥವಾ XP ಇದ್ದರೆ, ಸಾಮಾನ್ಯವಾಗಿ ಕನ್ನಡ ಯೂನಿಕೋಡ್ ಅಕ್ಷರಗಳು ಕಾಣಿಸುತ್ತವೆ. ಆದರೆ, ಎಲ್ಲ ಬ್ರೌಸರುಗಳಲ್ಲಿ ಹಾಗೂ ಸಾಫ್ಟ್ ವೇರುಗಳಲ್ಲಿ ಯೂನಿಕೋಡ್ ಅಕ್ಷರ ಕಾಣಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಕ್ಷರಗಳಿದ್ದ ಜಾಗದಲ್ಲಿ ಅಥವಾ ಕಾಣಿಸಿದರೆ, ಆ ಸಾಫ್ಟ್ ವೇರ್ ಅಥವಾ ಬ್ರೌಸರ್ ಯೂನಿಕೋಡ್ ಅಕ್ಷರಗಳನ್ನು ಬೆಂಬಲಿಸುತ್ತಿಲ್ಲ ಎಂದು ಅರ್ಥ. Windows 95 ಹಾಗೂ 98, ಕನ್ನಡ ಯೂನಿಕೋಡನ್ನು ಬೆಂಬಲಿಸುವುದಿಲ್ಲ.

ಕನ್ನಡ ಯೂನಿಕೋಡ್ ಅಕ್ಷರಗಳನ್ನು ಬರೆಯಲು ಬೇಕಾದ ಟೂಲ್.
ಈ ಕೆಳಗಿನ ಆರು ಟೂಲ್ ಬಳಸಿ ಸುಲಭವಾಗಿ ಕನ್ನಡ ಅಕ್ಷರಗಳನ್ನು ಟೈಪ್ ಮಾಡಬಹುದು.
1. ಬರಹ IME
2. ಬರಹ ಪ್ಯಾಡ್
3. ಗೂಗಲ್ ಇಂಡಿಕ್ ಟ್ರಾನ್ಲ್ ಲಿಟರೇಶನ್ ಟೂಲ್
4. ಕ್ವಿಲ್ ಪ್ಯಾಡ್ ಆನ್ ಲೈನ್ ಕನ್ನಡ ಟೂಲ್
5. ವಿಂಡೋಸ್ XP ಲಾಂಗ್ವೇಜ್ ಟೂಲ್ / ವಿಂಡೋಸ್ ಕನ್ನಡ IME
6. ಗೂಗಲ್ಲಿನ ಸರಳ ಕನ್ನಡ Bookmarklet

1. ಬರಹ IME : ಬರಹ - ಕನ್ನಡದ ಒಂದು ಅದ್ಭುತ, ಉಚಿತ ಸಾಫ್ಟ್ ವೇರ್. ಕಂಪ್ಯೂಟರ್ ಹಾಗೂ ಇಂಟರ್ನೆಟ್ಟಿನಲ್ಲಿ ಕನ್ನಡ ಬಳಸಲು ಬೇಕಾದ ಬಹುತೇಕ ಎಲ್ಲ Toolಗಳನ್ನೂ "ಬರಹ" ಒಳಗೊಂಡಿದೆ. ಹವ್ಯಾಸಿ ಕನ್ನಡ ಬರಹಗಾರರಿಗೆ, ಅಂತರ್ಜಾಲದಲ್ಲಿ ಕನ್ನಡ ಟೈಪಿಸಲು "ಬರಹ-IME" ಉತ್ತಮ ಟೂಲ್. IME ಅಂದರೆ Input Method Editor. ಇದೊಂದು ಒಂದು ಚಿಕ್ಕ ಪ್ರೋಗ್ರಾಂ.



BarahaIME is a transliteration based software, which can be used to type Indian language Unicode text directly into applications such as Internet Explorer, MS Word, Notepad, e.t.c. It also provides functions for sorting/converting Indian language text. When BarahaIME program is started, it shows as an icon in the system tray at the bottom-right portion of the screen. BarahaIME Supports Kannada, Hindi, Marathi, Sanskrit, Tamil, Telugu, Malayalam, Gujarati, Gurumukhi, Bengali, Assamese, Manipuri and Oriya languages.

ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

2. ಬರಹ ಪ್ಯಾಡ್: ಇತ್ತೀಚೆಗೆ ಬರಹ 8.0 ಹೊಸ ವರ್ಷನ್ ಬಿಡುಗಡೆಯಾಗಿದೆ. ಇದರೊಂದಿಗೆ ಬರಹ ಪ್ಯಾಡ್ ಎಂಬ ಟೂಲ್ ಕೂಡ ಇದೆ. ಇದು ವಿಂಡೋಸ್ ನೋಟ್ ಪ್ಯಾಡಿನಂಥ ಒಂದು ಟೂಲ್. ಇದರಲ್ಲಿ ಕನ್ನಡ ಅಕ್ಷರಗಳನ್ನು ಸುಲಭವಾಗಿ ಟೈಪ್ ಮಾಡಬಹುದು. ಅದನ್ನು ಯೂನಿಕೋಡ್ ನೂಮೂನೆಯಲ್ಲೇ ಸೇವ್ ಮಾಡಬಹುದು ಅಥವಾ ಅದರಲ್ಲಿ ಟೈಪ್ ಮಾಡಿದ ಅಕ್ಷರಗಳನ್ನು ಕಾಪಿ ಮಾಡಿ, ಬ್ಲಾಗುಗಳಲ್ಲಿ ಅಥವಾ ಈಮೇಲುಗಳಲ್ಲಿ ಅಥವಾ ಇನ್ನೆಲ್ಲಾದರೂ ಪೇಸ್ಟ್ ಮಾಡಬಹುದು.

3. ಗೂಗಲ್ ಇಂಡಿಕ್ ಟ್ರಾನ್ಲ್ ಲಿಟರೇಶನ್ ಟೂಲ್ : ಇಂಗ್ಲಿಷ್ ಟೈಪಿಂಗ್ ಮೂಲಕ, ಭಾರತೀಯ ಭಾಷಾ ಅಕ್ಷರಗಳು ಇಂಟರ್ನೆಟ್ಟಿನಲ್ಲಿ ಸುಲಭವಾಗಿ ಕಾಣುವಂತೆ ಮಾಡಲು ಗೂಗಲ್ - ಆನ್ ಲೈನ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ಬಿಡುಗಡೆ ಮಾಡಿದೆ. "ಫೊನೆಟಿಕ್ ವಿನ್ಯಾಸ" ಆಧಾರಿತ ಈ ಟೂಲ್ ಕನ್ನಡದ ಹವ್ಯಾಸಿ ಬಳಕೆದಾರರಿಗೆ ಯೋಗ್ಯ. ಜಿಮೇಲ್, ಬ್ಲಾಗರ್ ಮುಂತಾದ ಗೂಗಲ್ ಸೇವೆಗಳಲ್ಲಿ ಈ ಟೂಲನ್ನು ನೇರವಾಗಿ ಬಳಸಬಹುದು ಅಥವಾ ಈ ಟೂಲ್ ಬಳಸಿ ಕನ್ನಡಲ್ಲಿ ಟೈಪ್ ಮಾಡಿ ಅದನ್ನು ಕಟ್ ಮಾಡಿ ಬೇಕಾದಲ್ಲಿ ಪೇಸ್ಟ್ ಮಾಡಬಹುದು.

Google Indic Transliteration offers an option for converting Roman characters to the Indian Language characters used in Hindi, Kannada, Tamil etc.. This lets you type Indian Language words phonetically in English script and still have them appear in their correct alphabet. Note that this is not the same as translation -- it is the sound of the words that are converted from one alphabet to the other, not their meaning. For example, typing "Baruttane" transliterates into kannada as: ಬರುತ್ತಾನೆ.

Transliteration is now available in Bengali, Gujarati, Hindi, Kannada, Malayalam, Marathi, Nepali, Tamil, and Telugu. The transliteration feature is available in GMail, Knol, Orkut scraps, Blogger, as part of the Google Language API, and as an iGoogle gadget.

ಈ ಟೂಲ್ ಬಳಸಲು ಇಲ್ಲಿ ಕ್ಲಿಕ್ ಮಾಡಿ. ಅಥವಾ ವಿವರಗಳು ಬೇಕಾದರೆ ಇಲ್ಲಿ ನೋಡಿ.

ಇದೇ ಟೂಲ್ ಆದಾರಿತ ಹೊಸ ಸರಳ ಕನ್ನಡ Bookmarklet ಎಂಬ ಇನ್ನೊಂದು ಟೂಲ್ ಇದೆ. ಆ ಕುರಿತ ಮಾಹಿತಿ ಇಲ್ಲಿದೆ.

4. ಕ್ವಿಲ್ ಪ್ಯಾಡ್ ಆನ್ ಲೈನ್ ಕನ್ನಡ ಟೂಲ್ : ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ಬಿಡುಗಡೆ ಆಗುವುದಕ್ಕೂ ಮೊದಲೇ ಬೆಂಗಳೂರಿನ Tachyon Technologies ಕಂಪನಿ ಕ್ವಿಲ್ ಪ್ಯಾಡ್ ಎಂಬ ಆನ್ ಲೈನ್ ಕನ್ನಡ ಟ್ರಾನ್ಲ್ ಲಿಟರೇಶನ್ ಟೂಲ್ ಬಿಡುಗಡೆ ಮಾಡಿತ್ತು. ಈ ಟೂಲನ್ನು ಕೆಲವು ಮೊಬೈಲ್ ಫೋನ್ ಕಂಪನಿಗಳೂ ಹ್ಯಾಂಡ್ ಸೆಟ್ಟಿನಲ್ಲಿ ಅಳವಡಿಸಿವೆ. ಇದನ್ನು ಕೂಡ ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ರೀತಿಯೇ ಬಳಸಬಹುದು.

ಹೆಚ್ಚಿನ ಮಾಹಿತಿಗೆ ಹಾಗೂ ಟೂಲ್ ಬಳಸಲು ಇಲ್ಲಿ ಕ್ಲಿಕ್ ಮಾಡಿ.


5. ವಿಂಡೋಸ್ XP ಲಾಂಗ್ವೇಜ್ ಟೂಲ್: ಇದು ವಿಂಡೋಸ್ ಬಳಕೆದಾರರಿಗೆ ವರದಾನ. ವಿಂಡೋಸ್ XP ಹಾಗೂ ಆನಂತರದ ವಿಂಡೋಸ್ ಸಾಫ್ಟ್ ವೇರ್ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು ನೇರವಾಗಿ ಟೈಪ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದು ನಾಲ್ಕು ರೀತಿಯ ಕಿಬೋರ್ಡ್ ವಿನ್ಯಾಸವನ್ನು ಹೊಂದಿದೆ. ಫೊನೆಟಿಕ್ ಟ್ರಾನ್ಸ್ ಲಿಟರೇಷನ್ ಕೀಬೋರ್ಡ್, ಬಳಕೆದಾರರ ಸ್ನೇಹಿ ಕಗಪ ಕೀಬೋರ್ಡ್, ವೇಗದ ಬಳಕೆದಾರರಿಗೆ ಬೇಕಾದ ಇನ್ ಸ್ಕ್ರಿಪ್ಟ್ ಕೀಬೋರ್ಡ್, ಕನ್ನಡ ಟೈಪ್ ರೈಟಿಂಗ್ ಗೊತ್ತಿರುವವರಿಗೆ ಟೈಪ್ ರೈಟರ್ ಕೀಬೋರ್ಡ್. ಅದರಲ್ಲಿ ಕನ್ನಡ (ತುಂಗಾ) ಫಾಂಟ್ ಡಿಫಾಲ್ಟ್ ಆಗಿ ಲಭ್ಯವಿದೆ. ಭಾರತೀಯ ಭಾಷೆ ಟೈಪ್ ಮಾಡುವ ಮೊದಲು ಆ ಸೇವೆಯನ್ನು Enable ಮಾಡಬೇಕು ಅಷ್ಟೇ. ಅದಕ್ಕೆ ಈ ಕೆಳಗಿನಂತೆ ಮಾಡಿ.

1. ನಿಮ್ಮ ಬಳಿ XP ಸೀಡಿ ಇದ್ದರೆ, ಅದನ್ನು ಸೀಡಿ ಡ್ರೈವ್ ಗೆ ಹಾಕಿ ಅಥವಾ ಇಲ್ಲಿಂದ ಕನ್ನಡ ಭಾಷಾ IMEಯನ್ನು ಡೌನ್ ಲೋಡ್ ಮಾಡಿಕೊಳ್ಳಿ.

2. Start button ಕ್ಲಿಕ್ ಮಾಡಿ, Control panel ತೆರೆಯಿರಿ.

3. ಅದರಲ್ಲಿ Regional and language options ಎಂಬ ಐಕಾನ್ ಸಿಗುತ್ತದೆ. ಅದನ್ನು ಡಬಲ್ ಕ್ಲಿಕ್ ಮಾಡಿ.

4. ಆಗ ತೆರೆಯುವ ಪಾಪ್ ಅಪ್ ಬಾಕ್ಸ್ ನಲ್ಲಿ Languages ಎಂಬ ಟ್ಯಾಬ್ ಇದೆ. ಅದನ್ನು ಕ್ಲಿಕ್ ಮಾಡಿ.

5. ಅದರಲ್ಲಿ Install files for complex script and right-to-left languages (including Thai) ಎಂಬ ಆಯ್ಕೆಯನ್ನು select ಮಾಡಿ.

6. ಇಷ್ಟಾದ ಮೇಲೆ ಅದೇ ಟ್ಯಾಬ್ ನಲ್ಲಿರುವ Details ಎಂಬ ಬಟನ್ ಕ್ಲಿಕ್ ಮಾಡಿ. Text services and input languages ಎಂಬ ಪಾಪ್ ಅಪ್ ತೆರೆದುಕೊಳ್ಳುತ್ತದೆ.

7. ಅಲ್ಲಿ Add ಬಟನ್ ಕ್ಲಿಕ್ ಮಾಡಿ. Add input language ಎಂಬ ಪಾಪ್ ಅಪ್ ತೆರೆದುಕೊಳ್ಳುತ್ತದೆ. ಅದರಲ್ಲಿ Input language ಎಂಬ ಆಯ್ಕೆಯಿದ್ದು, ಅದನ್ನು ಕ್ಲಿಕ್ ಮಾಡಿದರೆ, ಕನ್ನಡ ಎಂಬ option ಸಿಗುತ್ತದೆ. ಸೆಲೆಕ್ಟ್ ಮಾಡಿ.

8. ಕಡೆಯದಾಗಿ, ಎಲ್ಲಾ ಪಾಪ್ ಅಪ್ ಗಳಿಗೂ ok ಆದೇಶ ನೀಡುತ್ತಾ ಬನ್ನಿ. ಒಂದು ಹಂತದಲ್ಲಿ ನಿಮ್ಮ ಎಕ್ಸ್ ಪಿ ಸೀಡಿಯಿಂದ ಅಥವಾ ನೀವು ಡೌನ್ ಲೋಡ್ ಮಾಡಿಕೊಂಡ ವಿಂಡೋಸ್ ಕನ್ನಡ IME ಫೈಲಿಂದ ಕಂಪ್ಯೂಟರ್ ತನಗೆ ಅಗತ್ಯವಿರುವ ಫೈಲ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುತ್ತದೆ. ಇನ್ನು ನೀವು ಟೈಪ್ ಮಾಡುವುದಷ್ಟೇ ಬಾಕಿ.

9. ಇಷ್ಟಾದ ಮೇಲೆ ಬ್ರೌಸರ್ ಅಥವಾ ನೋಟ್ ಪ್ಯಾಡ್ ಅಥವಾ ವರ್ಡ್ ಪ್ಯಾಡ್ ತೆರೆಯಿರಿ.

10. ಅಲ್ಲಿ Alt ಕೀ ಒತ್ತಿ ಹಿಡಿದು Shift ಕೀ ಒತ್ತಿದರೆ, ಕನ್ನಡ ಟೈಪ್ ಮಾಡಬಹುದು. ಮತ್ತೊಮ್ಮೆ ಇದೇ ರೀತಿ ಮಾಡಿದರೆ english ಟೈಪ್ ಮಾಡಬಹುದು. ಇದು toggle option. ನಿಮ್ಮ ಕಪ್ಯೂಟರ್ ವಿಂಡೋದ ಕೆಳ-ಬಲ-ತುದಿಯ ಸಿಸ್ಟಂ ಟ್ರೇ ಪಕ್ಕ EN ಅಥವಾ KN ಎಂಬ ಲಾಂಗ್ವೇಜ್ ಬಾರ್ ಕಾಣಿಸುತ್ತದೆ. EN ಟಾಗಲ್ ಆದಾಗ ಇಂಗ್ಲೀಷ್ ಅಕ್ಷರವೂ, KN ಟಾಗಲ್ ಆದಾಗ ಕನ್ನಡ ಅಕ್ಷರವೂ ಮೂಡುತ್ತದೆ.

11. ಈ ಪದ್ಧತಿ ಬಳಸಿ ನೀವು ಯಾವುದೇ ವೆಬ್ ಪುಟದಲ್ಲಿ, ಬ್ಲಾಗಿನಲ್ಲಿ, ಪ್ರತಿಕ್ರಿಯೆ ನೀಡುವಲ್ಲಿ ಅಥವಾ ಬಹುತೇಕ ವಿಂಡೋಸ್ ಸಾಫ್ಟ್ ವೇರುಗಳಲ್ಲಿ ನೇರವಾಗಿ ಕನ್ನಡ ಟೈಪ್ ಮಾಡಬಹುದು. ಅಥವಾ ನೀವು ಟೈಪ್ ಮಾಡಿದ್ದನ್ನು ಬೇಕಾದಲ್ಲಿಗೆ ಕಾಪಿ-ಪೇಸ್ಟ್ ಮಾಡಬಹುದು.

ಒಮ್ಮೆ ವಿಂಡೋಸ್ XPಯಲ್ಲಿ ಯುನಿಕೋಡ್ ಇನ್ಸ್ಟಾಲ್ ಮಾಡಿದರೆ, ನೀವು toggle ಮಾಡುವುದಷ್ಟೇ ಕೆಲಸ.

ಸಚಿತ್ರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

6. ಗೂಗಲ್ಲಿನ ಸರಳ ಕನ್ನಡ Bookmarklet : ಭಾರತೀಯ ಭಾಷಾ ಟೂಲ್ ಅಭಿವೃದ್ಧಿಯಲ್ಲಿ ಗೂಗಲ್ ಇನ್ನೂ ಒಂದು ಹೆಜ್ಜೆ ಮುಂದೆ ಬಂದಿದೆ. ಕೆಲ ತಿಂಗಳ ಹಿಂದೆ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ಗೂಗಲ್ ಲಿಪ್ಯಂತರ (Transliteration) ಟೂಲ್ ನೀಡಿತ್ತು ತಾನೇ? ಆದರೆ, ಆ ಟೂಲ್ ಗೂಗಲ್ ಒಡೆತನದ ಜಿಮೇಲ್, ಬ್ಲಾಗರ್ ಮುಂತಾದ ಸೈಟುಗಳಲ್ಲಿ ಮಾತ್ರ ಕೆಲಸ ಮಾಡುತ್ತಿತ್ತು. ಇದೀಗ, ಕನ್ನಡ ಬುಕ್ಮಾರ್ಕ್-ಲೆಟ್ ಎಂಬ ವಿನೂತನ ಟೂಲನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ಟೂಲಿಂದ ಯಾವುದೇ ಸೈಟಿನಲ್ಲಿ ಬೇಕಾದರೂ ಕನ್ನಡ ಅಥವಾ ಇತರ ಭಾರತೀಯ ಭಾಷೆಯನ್ನು ಸುಲಭವಾಗಿ ಟೈಪ್ ಮಾಡಬಹುದು. ಕನ್ನಡ ಟೈಪ್ ಮಾಡಲು ಹೆಣಗಾಡುವ ಎಲ್ಲರಿಗೂ ಈ ಟೂಲ್ ನಿಜಕ್ಕೂ ಒಂದು ವರ. ಮಾಹಿತಿ ಇಲ್ಲಿದೆ.

C. ಕನ್ನಡ ಟೈಪಿಸುವ 4 ಕೀಬೋರ್ಡ್ ವಿನ್ಯಾಸಗಳ ಪುಟ್ಟ ಮಾಹಿತಿ.

ಕನ್ನಡ ಟೈಪಿಸಲು ಹಲವಾರು ರೀತಿಯ ಕೀಬೋರ್ಡ್ ವಿನ್ಯಾಸಗಳಿವೆ. ನಿಮ್ಮ ಮಟ್ಟಕ್ಕೆ ಸರಿಯಾಗಿ ಯಾವುದನ್ನು ಬೇಕಾದರೂ ಬಳಸಬಹುದು. ಈ ಕೆಳಗಿನ 4 ಕೀಬೋರ್ಡ್ ವಿನ್ಯಾಸದಲ್ಲಿ ಒಂದು ನಿಮಗೆ ಸೂಕ್ತ ಎನಿಸಬಹುದು. ಆಯ್ದುಕೊಳ್ಳಿ.

ಬರಹ ಕೀಬೋರ್ಡ್ ವಿನ್ಯಾಸ:
ಬಹಳ ಜನರಿಗೆ ಗೊತ್ತಿರುವ ಸುಲಭದ ಕೀಬೋರ್ಡ್ ವಿನ್ಯಾಸ ಇದು. ಇದನ್ನು ಬರಹ IME ಹಾಗೂ ಬರಹಪ್ಯಾಡ್ ಟೂಲಲ್ಲಿ ಬಳಸಬಹುದು.

ಕಗಪ ಕೀಬೋರ್ಡ್:
ಇದು ನುಡಿ ಸಾಫ್ಟ್ ವೇರಿನ ಕೀಬೋರ್ಡ್. "ನುಡಿ" ಬಳಸುವವರಿಗೆ ಇದು ಅನುಕೂಲ.

ಗೂಗಲ್ ಟ್ರಾನ್ಸ್ ಲಿಟರೇಶನ್ ಕೀಬೋರ್ಡ್ ವಿನ್ಯಾಸ
Using phonetic typing, the user can type his message in Roman using the Standard English keyboard, which is transliterated on-the-fly to Kannada. It works on the logic of phonetics and is most effective when you spell the word the way it is spoken. ಗೂಗಲ್ ಈಮೇಲ್, ಬ್ಲಾಗರ್ ಮುಂತಾದ ಗೂಗಲ್ ಸೇವೆಯಲ್ಲಿ, ಗೂಗಲ್ ಟ್ರಾನ್ಸ್ ಲಿಟರೇಶನ್ ಟೂಲ್ ಹಾಗೂ ಕ್ವಿಲ್ ಪ್ಯಾಡ್-ನಲ್ಲಿ ಇದನ್ನು ಬಳಸಬಹುದು.

ಇನ್ ಸ್ಕ್ರಿಪ್ಟ್ ಕೀಬೋರ್ಡ ಲೇ ಔಟ್ :
ಭಾರತೀಯ ಭಾಷೆಯ ಸಾಫ್ಟ್ ವೇರುಗಳನ್ನು ಅಭಿವೃದ್ಧಿ ಪಡಿಸಿದ ಸಿಡಾಕ್ ಸರ್ಕಾರಿ ಸಂಸ್ಥೆ ಅಭಿವೃದ್ಧಿ ಪಡಿಸಿದ ಕೀಬೋರ್ಡ ಇದು. A Kannada Keyboard where the user types the basic characters in sequence and an underlying logic determines that which of these characters have to be combined and substituted to form a glyph. ಕೀಬೋರ್ಡ್ ವಿನ್ಯಾಸ ಹೀಗಿದೆ ನೋಡಿ. ಇದನ್ನು ಒಂದೆರಡು ದಿನ ಪ್ರಾಕ್ಟಿಸ್ ಮಾಡಿದರೆ, ವೇಗವಾಗಿ ಟೈಪ್ ಮಾಡಬಹುದು.

ಟೈಪ್ ರೈಟರ್ ಕೀಬೋರ್ಡ್ ಲೇಔಟ್:
ಕನ್ನಡ ಟೈಪ್ ರೈಟಿಂಗ್ ಯಂತ್ರದ ಕೀಬೋರ್ಡ್ ಲೇ ಔಟ್ ಇದು. ಟೈಪ್ ಟೈರಿಂಗ್ ಶಾಲೆಯಲ್ಲಿ ಕಲಿತ ಬೆರಳಚ್ಚು ವಿಧಾನಕ್ಕೆ ಇದು ಸೂಕ್ತ.

4 comments:

Anonymous said...

ಇನ್ನೊಂದು ಸೈಟ್ ಬಿಟ್ಟೀದೀರಿ - http://www.kannadaslate.com/ ಇದು ಬಹಳ ಉಪಯುಕ್ತವಾಗಿದೆ.

ಸಂದೀಪ್ ಕಾಮತ್ said...

ಉತ್ತಮ ಬರಹ.ಆದ್ರೆ ಇದರ ಹೆಡ್ಡಿಂಗ್ how to type in kannada ಅಂತ ಇದ್ರೆ ಗೂಗಲ್ ಸರ್ಚ್ ನಲ್ಲಿ ಈ ಲೇಖನ ಕಾಣಿಸಬಹುದೇನೋ ಜನರಿಗೆ.

Jyoti Ajay said...

I have been reading your blog for quite some time..and since i have started my own web-space, you have been blog-rolled:))
You’ve been here in the blogging world for quite sometime…and a newbie like me would be very grateful if you give me your feedback on my blog. My blog is a record of my life as well as about sharing the things I love. And my blogging philosophy is that i write because I love it.Your feedback would be very valuable.
visit my blog at www.myspacejyoti.blogspot.com

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಉತ್ತಮವಾದ ಮಾಹಿತಿಪೂರ್ಣ ಲೇಖನ.ತಮ್ಮ ಅನುಮತಿಯನ್ನು ನಿರೀಕ್ಷಿಸುತ್ತಾ.."havyaka"ಗ್ರೂಪ್ ನಲ್ಲಿ ಹಂಚಿಕೊಂಡಿದ್ದೆನೆ.