
ಭಾಗ - 8
ಇದು ಅಮೆರಿಕದ ಇನ್ನೊಂದು ಮಗ್ಗಲು

ಈ ಪಟ್ಟಣವನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಫೋರ್ಬ್ಸ್ ಪತ್ರಿಕೆ ಸಮೀಕ್ಷೆಯ ಪ್ರಕಾರ, ಇದು ಅಮೆರಿಕದ ಒಂಬತ್ತನೇ ಅತ್ಯಂತ ದುಬಾರಿ ವಾಸ ಪ್ರದೇಶ. ಅಮೆರಿಕದ ರಿಯಲ್ ಎಸ್ಟೇಟ್ ಭಾಷೆಯಲ್ಲೇ ಹೇಳುವುದಾದರೆ 9th Costliest Residential Zip Code!
ನಿಜ ಹೇಳಿ. ಅಮೆರಿಕದ ಪಟ್ಟಣ ಎಂದರೆ, ನಿಮ್ಮ ಕಲ್ಪನೆ ಹೇಗಿರುತ್ತದೆ? ಶೇ.೮೦ರಷ್ಟು ಭಾರತೀಯರ ಪ್ರಕಾರ ಅಮೆರಿಕ ಎಂದರೆ... ಹಾಲಿವುಡ್ ಸಿನೆಮಾಗಳಲ್ಲಿ ಕಾಣುವ ಎತ್ತರೆತ್ತರದ ಕಟ್ಟಡ, ನೆಲ-ಗಗನ ಕಾಣದಷ್ಟು ಗಗನ ಚುಂಬಿಗಳ ದಟ್ಟ ಕಾಂಕ್ರೀಟ್ ಕಾಡು, ಬ್ಯೂಸಿಯಾಗಿ ಓಡಾಡುವ ಜನ ಜಂಗುಳಿ, ಕಾರ್ ಕಾರ್ ಕಾರ್...
ಕ್ಷಮಿಸಿ. ನ್ಯೂಯಾರ್ಕ್ ಸಿಟಿ ಅಥವಾ ಷಿಕಾಗೋ ಶಹರದಂಥ ಅಮೆರಿಕದ ಕೆಲ ನಗರಗಳು ಮಾತ್ರ ಹಾಗಿವೆ. ಉದಾಹರಣೆಗೆ, ಅಮೆರಿಕದ ರಾಜಧಾನಿ ವಾಷಿಂಗ್‌ಟನ್ ಡಿ.ಸಿ.ಯೇ ಹಾಗಿಲ್ಲ. ೫೫೫ ಅಡಿ ಎತ್ತರದ ‘ವಾಷಿಂಗ್‌ಟನ್ ಸ್ಮಾರಕ’ ಸ್ತಂಭ ಈ ನಗರದ ಅತಿ ಎತ್ತರದ ಕಟ್ಟಡ. ಕಾನೂನಿನ ಪ್ರಕಾರ ವಾಷಿಂಗ್‌ಟನ್ ಡಿ.ಸಿ.ಯಲ್ಲಿ ಈ ಸ್ಮಾರಕಕ್ಕಿಂತ ಎತ್ತರದ ಕಟ್ಟಡವನ್ನು ನಿರ್‍ಮಿಸುವಂತಿಲ್ಲ. ಹಾಗಾಗಿ, ವಿಶ್ವದ ಹಿರಿಯಣ್ಣನ ರಾಜಧಾನಿಯಲ್ಲಿ ಗಗನಚುಂಬಿ ಕಟ್ಟಡಗಳೇ ಇಲ್ಲ! ಜಗತ್ಪ್ರಸಿದ್ಧ ಲಾಸ್‌ವೇಗಾಸ್ ಇನ್ನೊಂದು ಉದಾಹರಣೆ. ಪ್ರತಿ ೩ ನಿಮಿಷಕ್ಕೆ ಇಲ್ಲಿಗೆ ಒಂದು ವಿಮಾನದ ತುಂಬಾ ಜನರು ಬರುತ್ತಾರೆ. ಮತ್ತೆ ಮೂರು ನಿಮಿಷಕ್ಕೆ ಒಂದು ವಿಮಾನದಷ್ಟು ಜನರು ಹಾರಿ ಹೋಗುತ್ತಾರೆ. ಆದರೆ, ಇದೊಂದು ಬರೀ ಮರುಭೂಮಿಯಂಥ ಊರು! ಕೇವಲ ಒಂದು ರಸ್ತೆ ಮಾತ್ರ ಇಲ್ಲಿನ ಹೈಲೈಟ್. ಝಗಮಗಿಸುವ ನಿಯಾನ್ ದೀಪಗಳ, ಅಂದಕ್ಕಿಂತ ಅಂದದ ವಿನ್ಯಾಸದ, ಹಲಮಹಡಿ ಕಟ್ಟಡಗಳ ಜೂಜು ಅಡ್ಡೆಗಳು, ವಯಸ್ಕರ ಮನರಂಜನಾ ಕೇಂದ್ರಗಳು ಹಾಗೂ ಹೊಟೆಲ್‌ಗಳೇ ಇರುವ ರಸ್ತೆ ಇದು. ಇದನ್ನು ಬಿಟ್ಟರೆ ಇಡೀ ಊರು ಮಾಮೂಲಿ.
ಇನ್ನು ‘ರಾಸ್’ ಎಂಬೋ ಪಟ್ಟಣವಂತೂ ‘ಅಮೆರಿಕದ ಕಲ್ಪನಾ ನಗರಿಗೆ’ ತದ್ವಿರುದ್ಧ ಪ್ರಪಂಚ.

ವಿಶೇಷವೆಂದರೆ, ಈ ಪಟ್ಟಣದ ತುಂಬಾ ದಟ್ಟ ಕಾಡು! ಎತ್ತರೆತ್ತರದ ಶತಾಯುಷಿ ರೆಡ್‌ವುಡ್ ಮರಗಳ ಕಾನನ. ಪಟ್ಟಣ ಎಂದರೆ ನಂಬಲು ಸಾಧ್ಯವೇ ಇಲ್ಲ. ಹಳ್ಳಿ ಎಂದಿದ್ದರೂ ಪರವಾಗಿರಲಿಲ್ಲ. ಆದರೆ, ನಿಜಕ್ಕೂ ಇದೊಂದು ಪಟ್ಟಣ. ಗುಂಡಿಗಳಿಲ್ಲದ ಟಾರ್ ರಸ್ತೆಗಳು, ಎಲ್ಲೆಡೆ ಟ್ರಾಫಿಕ್ ಸಿಗ್ನಲ್ ಬೋರ್‍ಡುಗಳು, ಸಿಗ್ನಲ್ ಲೈಟುಗಳು, ಒಂದು ಬಿಸಿನೆಸ್ ಬೀದಿ, ಅಲ್ಲಿ ಹತ್ತೋ ಹನ್ನೆರಡೋ ಅಂಗಡಿಗಳು, ಟೌನ್ ಅಂದರೆ ಅಷ್ಟೇ.

ಹಾಗಂತ ಈ ಪಟ್ಟಣವನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಫೋರ್ಬ್ಸ್ ಪತ್ರಿಕೆ ಸಮೀಕ್ಷೆಯ ಪ್ರಕಾರ, ಇದು ಅಮೆರಿಕದ ಒಂಬತ್ತನೇ ಅತ್ಯಂತ ದುಬಾರಿ ವಾಸ ಪ್ರದೇಶ. ಅಮೆರಿಕದ ರಿಯಲ್ ಎಸ್ಟೇಟ್ ಭಾಷೆಯಲ್ಲೇ ಹೇಳುವುದಾದರೆ 9th Costliest Residential Zip Code!
ಕರಡಿ ಲಾಂಛನ:

ಫೆಡರಲ್, ಸ್ಟೇಟ್, ಕೌಂಟಿ, ಟೌನ್, ವಿಲೇಜ್ ಸರ್‍ಕಾರಗಳಿವೆ. ಅಮೆರಿಕ ದೇಶಕ್ಕೆ ಒಂದು ಧ್ವಜ ಮತ್ತು ಲಾಂಛನ ಇರುವಂತೆ ಅಲ್ಲಿ ಪ್ರತಿ ರಾಜ್ಯ, ಜಿಲ್ಲೆ, ಪಟ್ಟಣ, ಗ್ರಾಮಕ್ಕೂ ಒಂದೊಂದು ಧ್ವಜ ಮತ್ತು ಲಾಂಛನ ಇದೆ. ಆದ್ದರಿಂದ, ಅಮೆರಿಕ ಸರ್‍ಕಾರದ ಕಾರ್‍ಯಕ್ರಮಗಳಲ್ಲಿ ಬೇರೆ ಬೇರೆ ರೀತಿಯ ಅನೇಕ ಧ್ವಜಗಳನ್ನು ಕಾಣಬಹುದು. ಪ್ರತಿ ಹಂತದ ಸರ್‍ಕಾರವೂ ತನಗಿಂತ ಉನ್ನತ ಹಂತದ ಸರ್‍ಕಾರಕ್ಕೆ ಅಧೀನವಾಗಿದ್ದರೂ ಸ್ವತಂತ್ರ ‘ದೇಶದಂತೆ’ ಕಾರ್‍ಯನಿರ್‍ವಹಿಸುತ್ತದೆ. ಪ್ರತಿ ಹಂತದ ಸರ್‍ಕಾರವೂ ತನ್ನ ಉನ್ನತ ಹಂತದ ಸರ್‍ಕಾರದ ಕಾನೂನುಗಳನ್ನಲ್ಲದೇ ತನ್ನದೇ ಸಂವಿಧಾನವನ್ನೂ, ಕಾನೂನನ್ನೂ, ತೆರಿಗೆ ವ್ಯವಸ್ಥೆಯನ್ನೂ, ನ್ಯಾಯಾಂಗ ವ್ಯವಸ್ಥೆಯನ್ನೂ ಹೊಂದಿರುತ್ತದೆ.
ಈ ಹಿನ್ನೆಲೆಯಲ್ಲಿ ರಾಸ್ ಪಟ್ಟಣಕ್ಕೂ ತನ್ನದೆ ಆದ ಕಾನೂನು, ನೀತಿ ನಿಯಮಾವಳಿ, ಧ್ವಜ, ಲಾಂಛನ ಇದೆ. ಈ ಪಟ್ಟಣದ ಲಾಂಛನ ಕರಡಿ.
ಅಲ್ಲೊಂದು ಪಟ್ಟಣ ಪಂಚಾಯ್ತಿ

ಈ ಪಂಚಾಯ್ತಿ ತನ್ನ ಊರನ್ನು ಹೇಗೆ ಅಭಿವೃದ್ಧಿ ಮಾಡುತ್ತದೆ, ಹೇಗೆ ರಕ್ಷಿಸಿಕೊಳ್ಳುತ್ತದೆ -ಎನ್ನುವುದಕ್ಕೆ ಕೆಲವು ಉದಾಹರಣೆ ನೋಡಿ.
ಊರೆಂದರೆ, ಮನೆ ಕಟ್ಟುವುದು, ಬೀಳಿಸುವುದು, ನವೀಕರಿಸುವುದು ಇದ್ದದ್ದೇ. ಕಟ್ಟಡ ಕಾಮಗಾರಿ ಎಂದರೆ, ಮಣ್ಣು, ಸಿಮೆಂಟು, ಜಲ್ಲಿ ಕಲ್ಲು ಸಾಗಣೆ, ಯಂತ್ರಗಳ ಕರ್‍ಕಶ ಹೊಗೆ, ಶಬ್ದ, ಧೂಳು, ಕಾಮಗಾರಿಯ ಸುತ್ತಲ ಪ್ರದೇಶ ಹಾಗೂ ರಸ್ತೆ ತುಂಬ ಗಲೀಜು... ಇವೆಲ್ಲಾ ನಮ್ಮೂರಿನಲ್ಲಿ ಸಾಮಾನ್ಯ ತಾನೇ? ಆದರೆ, ಈ ಪಟ್ಟಣದ ಪಂಚಾಯ್ತಿ ಇದಕ್ಕೆಲ್ಲಾ ಕಠಿಣ ಕಾನೂನು ರೂಪಿಸಿದೆ. ಮನೆ ಕಟ್ಟಲು ಕಾಲಾವಕಾಶವನ್ನು ನಿಗದಿಪಡಿಸುತ್ತದೆ. ನಮ್ಮೂರಿನಂತೆ ಹಲವಾರು ವರ್‍ಷ ಮನೆ ಕಟ್ಟುತ್ತಲೇ ಇರುವಂತಿಲ್ಲ. ನಿಗದಿತ ಅವಧಿಯೊಳಗೆ ಮನೆ ಕಟ್ಟಿ ಮುಗಿಸದಿದ್ದರೆ ಯದ್ವಾತದ್ವಾ ದಂಡ ವಿಧಿಸುತ್ತದೆ. ಬೇಕಾದರೆ ನಿರ್‍ಮಾಣ ಪರವಾನಗಿಯನ್ನೂ ರದ್ದು ಪಡಿಸುತ್ತದೆ. ಕಟ್ಟುವವರು ಊರು ಗಲೀಜು ಮಾಡಿದರೂ ವಿಪರೀತ ದಂಡ.
ಮನೆ ಕಟ್ಟುವವರು ಇಲ್ಲಿನ ಕಾಡಿನ ಅಂದಕ್ಕೆ ಸರಿಯಾದ ವಿನ್ಯಾಸದ ಮನೆಯನ್ನು ಮಾತ್ರ ಕಟ್ಟಬಹುದು. ಮನೆಗಳಿಗೆ ಯಾವ ಯಾವ ಬಣ್ಣ ಬಳಸಬಹುದು ಎಂಬುದನ್ನು ನಿರ್‍ಧರಿಸಲು ಈ ಪಟ್ಟಣ ಪಂಚಾಯ್ತಿ ಊರಿನಲ್ಲಿ ಚುನಾವಣೆ ನಡೆಸಿ ಜನಾಭಿಪ್ರಾಯ ಪಡೆಯುತ್ತದೆ.
ಇಲ್ಲಿ ಅತ್ಯಾಧುನಿಕ ಹಾಗೂ ದೊಡ್ಡ ಅಂಚೆ ಕಚೇರಿಯಿದೆ. ಆದರೆ, ಮನೆ ಮನೆಗೆ ಅಂಚೆಯನ್ನು ತಲುಪಿಸುವ ವ್ಯವಸ್ಥೆ ಮಾತ್ರ ಇಲ್ಲ! ಇದೇಕೆ ಹೀಗೆ?

ವಿದ್ಯಾಭ್ಯಾಸ ದುಬಾರಿ

ಸ್ಯಾನ್‌ಫ್ರಾನ್ಸಿಸ್ಕೋದ ಅನೇಕ ಶಾಲೆಗಳಿಗಿಂತ ದುಬಾರಿ.
ಇಲ್ಲಿನ ಪಟ್ಟಣ ಪಂಚಾಯ್ತಿಯಲ್ಲಿ ಕೈಗೊಳ್ಳುವ ಎಲ್ಲ ನಿರ್‍ಣಯಗಳನ್ನೂ ಪ್ರತಿ ಮನೆ ಮನೆಗೂ ತಲುಪಿಸಲಾಗುತ್ತದೆ. ಜನರು ಯಾವುದೇ ವಿವರಗಳನ್ನೂ ಕೇಳಬಹುದು. ಅಷ್ಟೊಂದು ಪಾರದರ್‍ಶಕ ಆಡಳಿತ ಇಲ್ಲಿದೆ. ಇಲ್ಲಿ ಆಡಳಿತ ನಡೆಸುವ ಯಾರೂ ರಾಜಕಾರಣಿಗಳಲ್ಲ. ಪಕ್ಷವಂತೂ ಯಾರಿಗೂ ಇಲ್ಲ.
ನಮ್ಮ ಪಂಚಾಯ್ತಿಗಳು ಹಾಗಲ್ಲ. ಪಂಚಾಯ್ತಿ ಮಟ್ಟದಲ್ಲಿ ಚುನಾವಣೆ ಪಕ್ಷಾತೀತ ಎಂಬುದು ಕಾದದ ಮೇಲೆ ಮಾತ್ರ ಇದೆ. ವಾಸ್ತವವಾಗಿ ಪ್ರತಿ ಪಂಚಾಯ್ತಿಯೂ ರಾಜಕೀಯ ಪಕ್ಷಗಳಿಂದ ಗಬ್ಬೆದ್ದುಹೋಗಿವೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದರೂ ನಮ್ಮ ರಾಜಕಾರಣಿಗಳು ಇನ್ನೂ ಗ್ರಾಮ ಪಂಚಾಯ್ತಿ ಚುನಾವಣೆಯ ತಂತ್ರ ರೂಪಿಸುವುದರಲ್ಲಿ ನಿರತ.
ಇವನ್ನೆಲ್ಲ ಬಿಟ್ಟು, ಒಂದು ಪಂಚಾಯ್ತಿಯನ್ನು ಹೇಗೆ ನಡೆಸಬಹುದು ಎಂಬುದನ್ನು ‘ರಾಸ್’ ನೋಡಿ ನಾವು ಕಲಿಯಬೇಕು.
ವಿವರಗಳಿಗೆ ನೋಡಿ. www.townofross.org
No comments:
Post a Comment