Thursday, April 02, 2009

ಬ್ರೇಕಿಂಗ್ ನ್ಯೂಸ್. ಬರಹ 8.0 ಬಿಡುಗಡೆಯಾಗಿದೆ

ಈಗ ಸುಮಾರು ಒಂದು ದಶಕದ ಹಿಂದೆ, ಭಾರತೀಯ ಭಾಷೆಗಳನ್ನು ಬಳಸಬೇಕೆಂದರೆ, ನಾವು ಶ್ರೀಲಿಪಿ, ಪ್ರಕಾಶಕ್ ಅಥವಾ ಐಲೀಪ್ ಸಾಫ್ಟ್ ವೇರ್ ಕೊಂಡುಕೊಳ್ಳಬೇಕಿತ್ತು. ಅಂತಹ ಕಾಲದಲ್ಲಿ ನನಗೆ ಬರಹ - ಎಂಬ ಪುಟ್ಟ ಸಾಫ್ಟ್ ವೇರ್ ಪರಿಚಯವಾಯಿತು. ಅದು ಉಚಿತ ತಂತ್ರಾಂಶ. ಅದರಲ್ಲೂ ಮೆನು ಎಲ್ಲಾ ಕನ್ನಡದಲ್ಲಿ ಕಾಣುತ್ತೆ ಎನ್ನುವುದು ನನಗೆ ವಿಚಿತ್ರವಾಗಿ ಕಂಡಿತ್ತು. ನಂತರ 'ಕಲಿತ' ಎಂಬ ತಂತ್ರಾಂಶವನ್ನು ಕನ್ನಡ ಗಣಕ ಪರಿಷತ್ ಅಭಿವೃದ್ಧಿಪಡಿಸಿತು. ಅದೇ ಮುಂದೆ 'ನುಡಿ' ಎಂದು ನಾಮಕರಣಗೊಂಡಿತು. ಈ ನಡುವೆ, ಪ್ರಕಾಶಕ್ ಹೇಳ ಹೆಸರಿಲ್ಲದೇ ಕಾಣೆಯಾಯಿತು. 3-4 ವರ್ಷಗಳ ಹಿಂದೆ ವಿಂಡೋಸ್ ಎಕ್ಸ್.ಪಿ.ಯಲ್ಲಿ ಕನ್ನಡವೂ ಸೇರಿಕೊಂಡು ಬಂತು. ಇದೀಗ 'ಕುವೆಂಪು' ಸೇರಿದಂತೆ ಅನೇಕ ಉಚಿತ ಕನ್ನಡ ಸಾಫ್ಟ್ ವೇರ್ ಇದ್ದರೂ ಬರಹ ಮಾತ್ರ ಎಂದಿನಂತೆ ವಲ್ಡ್ ಫೇಮಸ್!



ಈ ಸಾಫ್ಟ್ ವೇರಿನ ಹೊಸ ವರ್ಷನ್ ಬರಹ 8.0 ಇಂದು (ಅಮೆರಿಕಾ ಲೆಕ್ಕದಲ್ಲಿ ಏಪ್ರಿಲ್ ಒಂದರಂದು!) ಬಿಡುಗಡೆಯಾಗಿದೆ. http://www.baraha.com/download.htm ಭಾರತೀಯ ಭಾಷೆಯ ಹೊಸ ಯೂನಿಕೋಡ್ ಎಡಿಟರ್ BarahaPad ಈ ವರ್ಷನ್ನಿನಲ್ಲಿದೆ. ಯೂನಿಕೋಡ್ ಫಾಂಟುಗಳನ್ನು ಉಚಿತವಾಗಿ ( under GPL ) ನೀಡಲಾಗಿದೆ. ಶೇಷಾದ್ರಿ ವಾಸುಗೊಂದು ದೊಡ್ಡ ಥ್ಯಾಂಕ್ಸ್.

No comments: