Tuesday, November 08, 2005

೧೦೦೦೦ ರು. ಕೊಡಿ, ಹೊಸ ಟಾಟಾ ಕಾರು ತಗೊಳ್ಳಿ

ಬುಕಿಂಗ್‌ ಆರಂಭಿಸುವ ಕುರಿತು ಜೈಲಿನಿಂದ ಹರ್ಷದ್‌ ಮೆಹ್ತಾಗೆ ವಿನಿವಿಂಕಿಯ ಯೋಜನಾ ಪತ್ರ!

ಈಗಿನ ಕಾರ್‌ ಲೋನ್‌ ಯುಗಕ್ಕೆ ತಕ್ಕ ಯೋಜನೆ ರೂಪಿಸಿದ್ದೇವೆ. ‘ಈಗ ಕೇವಲ ೧೦ ಸಾವಿರ ರುಪಾಯಿ ನೀಡಿ. ಮೂರು ವರ್ಷ ಬಿಟ್ಟು ೧ ಲಕ್ಷ ರುಪಾಯಿಯ ಟಾಟಾ ಕಾರು ಪಡೆಯಿರಿ’ ಎಂಬುದು ನಮ್ಮ ಘೋಷಣೆ. ಈ ಯೋಜನೆಗೆ ಮ್ಯೂಚುವಲ್‌ ಫಂಡ್‌ ರೀತಿಯಲ್ಲಿ ‘ಟಾಟಾ ವೆಹಿಕಲ್‌ ಫಂಡ್‌’ ಎಂದು ಆಕರ್ಷಕ ಹೆಸರು. ಜನರು ಮುಗಿಬಿದ್ದು ಹಣ ಹೂಡುತ್ತಾರೆ ನೋಡುತ್ತಿರಿ!


ಇವರಿಂದ:
ಮಿ. ವಿನಿವಿಂಕಿ,
ಟಾಟಾ ಬೈ ಬೈ ಪಬ್ಲಿಕ್‌ ಲಿ.,
ನಂ.೧-೪೨೦, ಚೋರ್‌ ಬಝಾರ್‌,
ಕನ್ನಿಂಗ್‌ ಹ್ಯಾಂ ರಸ್ತೆ, ಪೆಂಗಳೂರು -೪೨೦೮೪೦

ಇವರಿಗೆ:
ಮಿ. ಹರ್ಷದ್‌ ಮೆಹ್ತಾ
ಲೂಸ್‌ ಮೋರ್‌ ರಿಸರ್ಚ್‌ ಆಂಡ್‌
ಅಸೆಟ್‌ ಡ್ಯಾಮೇಜ್‌ಮೆಂಟ್‌ ಕಂ. ಲಿ.
ಸ್ವರ್ಗ ಅಪಾರ್ಟ್‌ಮೆಂಟ್‌ ಎದುರು,
ಗೋ ಟು ಹೆಲ್‌ ರಸ್ತೆ, ಖಬರಸ್ತಾನ್‌ -೨೩೪೧೯೯೨

ವಿಷಯ: ನೂತನ ಬ್ಲೇಡ್‌ ಯೋಜನೆಯ ರೂಪರೇಷೆ

ಉಲ್ಲೇಖ: ರತನ್‌ ಟಾಟಾ ಕಂಪನಿಯ ೧ ಲಕ್ಷ ರು. ಕಾರು

ಡಿಯರ್‌ ಮಿ.ಮೆಹ್ತಾ,
ಈ ಮೇಲೆ ಉಲ್ಲೇಖಿಸಲಾದ ವಿಷಯಕ್ಕೆ ಸಂಬಂಧಿಸಿ ನಮ್ಮ ಕಂಪನಿಯು ತಮ್ಮಿಂದ ಕೆಲಮ ಸಲಹೆ ಪಡೆಯಲು ಬಯಸುತ್ತದೆ. ಈ ಹಿನ್ನೆಲೆಯಲ್ಲಿ ನಾಮ ನಿಮಗೆ ಈ ಪತ್ರ ಬರೆಯುತ್ತಿದ್ದೇವೆ. ‘೧೯೯೨ ಎ ಸ್ಕಾü್ಯಮ್‌ ಸ್ಟೋರಿ’ಯ ಕರ್ತೃರೂ, ಭಾರತದ ಷೇರು ಹಗರಣದ ಪಿತಾಮಹರೂ ಆದ ತಾಮ ದಯಮಾಡಿ ನಮ್ಮ ಕಂಪನಿಗೆ ಅಮೂಲ್ಯ ಸಲಹೆ, ಸಹಕಾರ ನೀಡುತ್ತೀರೆಂದು ಭಾವಿಸಿದ್ದೇವೆ.

ನಮ್ಮ ಈ ಮೊದಲಿನ ಕಂಪನಿಯ ಮೂಲಕ ನಾಮ ಈಗಾಗಲೇ ಪಂಗನಾಮ ಉದ್ಯಮದಲ್ಲಿ ಪಳಗಿದ್ದು, ಸುಮಾರು ೯೦೦೦ ಹೂಡಿಕೆದಾರರ ೧೫೦ ಕೋಟಿ ರುಪಾಯಿಗಿಂತಲೂ ಹೆಚ್ಚು ಮೊತ್ತದ ಹಣದ ಅವ್ಯವಹಾರ ಮಾಡಿದ್ದೇವೆ. ನಮ್ಮ ಈ ಮೊದಲ ಕಂಪನಿಯನ್ನು ಯಶಸ್ವಿಯಾಗಿ ಮುಚ್ಚಲಾಗಿದ್ದು, ಬಹುಪಾಲು ಹಣವನ್ನು ಮಾಯಮಾಡಿದ್ದೇವೆ. ಸದ್ಯ ನಾಮ ಪೊಲೀಸರ ಬಲೆಗೆ ಬಿದ್ದು ಜೈಲು ಸೇರಿದ್ದೇವೆ. ಆದರೆ, ಈ ಹಿಂದೆ, ನೀಮ ಜೈಲಿನಿಂದ ಹೊರಬಂದು ಹೊಸ ವ್ಯವಹಾರ ಶುರುವಿಟ್ಟುಕೊಂಡ ರೀತಿಯಲ್ಲೇ ನಾವೂ ಸಹ ಆದಷ್ಟು ಬೇಗನೆ ಜೈಲಿನಿಂದ ಹೊರಬರುವ ವಿಶ್ವಾಸ ನಮಗಿದೆ.
ಈ ಹಿನ್ನೆಲೆಯಲ್ಲಿ ಭವಿಷ್ಯದ ಯೋಜನೆಯನ್ನು ರೂಪಿಸಲು ನಾಮ ಆರಂಭಿಸಿದ್ದು ಜೈಲಿನ ಪ್ರಶಾಂತ ಕೊಠಡಿಯಲ್ಲಿ ಕುಳಿತು ಕೂಲಂಕಷ ಸ್ಕೆಚ್‌ ಹಾಕುತ್ತಿದ್ದೇವೆ.

ನಾಮ ಜೈಲಿನಿಂದ ಹೊರಬಂದು ಹೊಸ ಅವ್ಯವಹಾರ ಆರಂಭಿಸುವ ಬಗ್ಗೆ ತಮಗೆ ಸಂಶಯ ಬೇಡ. ಇದಕ್ಕೆ ನಾಮ ಈ ಕೆಳಗಿನ ಕಾರಣಗಳನ್ನು ನೀಡಲು ಬಯಸುತ್ತೇವೆ:

೧. ಕಳೆದ ಒಂದು ದಶಕದಲ್ಲಿ ಭಾರತದ ಯಾಮದೇ ಹಣಕಾಸು ಹಗರಣಗಳನ್ನಾದರೂ ಗಮನಿಸಿ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿಲ್ಲ. ಎಲ್ಲರೂ ಜೈಲಿನಿಂದ ಹೊರಬಂದು ಇನ್ನಷ್ಟು ಭಾರೀ ಹಗರಣಗಳಿಗೆ ಕಾರಣವಾಗಿದ್ದಾರೆ. ಅಥವಾ ಜೈಲಿನಲ್ಲೇ ಕುಳಿತು ಯಶಸ್ವಿಯಾಗಿ ಇನ್ನೊಂದು ಹಗರಣವನ್ನು ನಡೆಸಿದ್ದಾರೆ.

೨. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಣಕಾಸು ಅವ್ಯವಹಾರಕ್ಕೆ ಯಾಮದೇ ಕಠೋರ ಶಿಕ್ಷೆಗಳಿಲ್ಲ. ಅಲ್ಲದೇ, ಹಗರಣದಿಂದ ನುಣುಚಿಕೊಳ್ಳಲು ನಮಗೆ ಅನೇಕ ಅನುಕೂಲಕರ ದಾರಿಗಳಿವೆ.

೩. ಉದಾಹರಣೆಗೆ, ನಿಮ್ಮ ಪ್ರಕರಣವನ್ನೇ ತೆಗೆದುಕೊಳ್ಳಿ. ಭಾರತದ ಆರ್ಥಿಕ ಹಗರಣದ ’ಮಹಾತಾಯಿ’ ಎಂದೇ ಬಣ್ಣಿಸಲಾಗುವ ೧೯೯೨ರ ನಿಮ್ಮ ಷೇರು ಹಗರಣದ ಬಳಿಕ ತಮ್ಮನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಆದರೆ, ಕೆಲಮ ತಿಂಗಳ ನಂತರ ನೀಮ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿರಿ. ಹರ್ಷದ್‌ ಡಾಟ್‌ ಕಾಮ್‌ ಹಾಗೂ ಕೆಲ ಪತ್ರಿಕೆಗಳ ಅಂಕಣಗಳ ಮೂಲಕ ನೀಮ ಹೊಸ ವ್ಯವಹಾರಕ್ಕೆ ಶುರುವಿಟ್ಟುಕೊಂಡಿರಿ. ಅಲ್ಲದೇ, ಜೈಲಿನಲ್ಲೇ ಕುಳಿತು ನೀಮ ಷೇರುಪೇಟೆಯನ್ನು ಆಟವಾಡಿಸುತ್ತಿದ್ದಿರಿ ಎನ್ನುವ ಸುದ್ದಿಯೂ ಇತ್ತು. ಈ ನಡುವೆ, ಭಾರತದ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರಿಗೆ ೧ ಕೋಟಿ ರುಪಾಯಿಯನ್ನು ಸೂಟ್‌ಕೇಸ್‌ನಲ್ಲಿ ಲಂಚ ನೀಡಿದ್ದಿರಿ ಎಂದು ನೀಮ ನಿರೂಪಿಸಿದಿರಿ. ಈ ಘಟನೆಯ ನಂತರ ನಿಮ್ಮ ಕೇಸುಗಳೆಲ್ಲ ಮುಚ್ಚಿಹೋದಮ. ಆದರೆ, ದುರದೃಷ್ಟವಶಾತ್‌ ಹೃದಯಾಘಾತ ನಿಮ್ಮನ್ನು ಬಲಿತೆಗೆದುಕೊಂಡಿತು. ಜೈಲಿನಿಂದ ಹೊರಬಂದಂತೆ ಈ ಬಾರಿ ನಿಮಗೆ ಸಾವಿನಿಂದ ಹೊರಬರಲಾಗಲಿಲ್ಲ ಎಂಬುದೇ ವಿಷಾದದ ಸಂಗತಿ. ಇಷ್ಟಾದರೂ, ೪೦೦೦ ಕೋಟಿ ರುಪಾಯಿಯನ್ನು ತೆಳ್ಳನೆ ಗಾಳಿಯಲ್ಲಿ ಮಾಯ ಮಾಡಿದ ನಿಮಗೆ ಶಿಕ್ಷೆಯಾಗಲಿಲ್ಲ ಎಂಬುದು ನಮಗೆ ಅತ್ಯಂತ ಸಂತೋಷದ ವಿಷಯ.

೪. ನಂತರ ಬಂದ ಎಂ.ಎಸ್‌.ಶೂ ಹಗರಣವೂ ಅಷ್ಟೇ. ಪವನ್‌ ಸಚದೇವ ಹಾಗೂ ಇನ್ನಿತರ ಚಾಣಾಕ್ಷರಿಂದ ಸೃಷ್ಟಿಯಾದ ಈ ಹೊಸ ಷೇರುಗಳ ಹಗರಣ ವಾಸ್ತವವಾಗಿ ನಿಮ್ಮ ಹಗರಣಕ್ಕಿಂತ ದೊಡ್ಡದು. ಆದರೆ, ಈ ನೆಲದ ಕಾನೂನು ಯಾರನ್ನೂ ಶಿಕ್ಷಿಸಲಿಲ್ಲ.

೫. ನಂತರ ನಡೆದ ಸಿಆರ್‌ಬಿ ಕ್ಯಾಪಿಟಲ್‌ ಹಗರಣದಲ್ಲಿ ಲಕ್ಷಾಂತರ ಹೂಡಿಕೆದಾರರ ೧೦೦೦ ಕೋಟಿ ರುಪಾಯಿ ಠೇವಣಿ ಹಣ ತಗುಲಿಕೊಂಡಿತು. ಹಗರಣದ ರೂವಾರಿ ಸಿ. ಆರ್‌. ಬನ್ಸಾಲಿಗೆ ಶಿಕ್ಷೆಯಾಯಿತೆ? ಇಲ್ಲ. ಜಾಮೀನಿನ ಮೇಲೆ ಹೊರಬಂದು ಬೇರೆ ಬಿಸಿನೆಸ್‌ ಶುರುವಿಟ್ಟುಕೊಂಡ.

೬. ಅನುಭವ ಟೀಕ್‌ನಂತಹ ಅನೇಕ ಪ್ಲಾಂಟೇಶನ್‌ ಕಂಪನಿಗಳ ಹಗರಣದಲ್ಲಿ ಸುಮಾರು ೮೦೦೦ ಕೋಟಿ ರುಪಾಯಿ ಹಣ ಎಲ್ಲಿ ಹೋಯಿತೋ ಗೊತ್ತಾಗಲಿಲ್ಲ. ಯಾರಿಗೂ ಶಿಕ್ಷೆಯಾಗಲಿಲ್ಲ. ಈಗಲೂ ಅನೇಕ ಟೀಕ್‌ ಕಂಪನಿಗಳು ಜನರಿಂದ ರಾಜಾರೋಷವಾಗಿ ಹಣ ಸಂಗ್ರಹಿಸುತ್ತಿವೆ.

೭. ನಿಮಗಿಂತ ದೊಡ್ಡ ಹಗರಣಕ್ಕೆ ಕಾರಣವಾದ ಖೇತನ್‌ ಪಾರಿಖ್‌ಗೆ ಯಾವ ಮಹಾ ಶಿಕ್ಷೆಯಾಯಿತು? ಹೋಮ್‌ ಟ್ರೇಡ್‌ ಡಾಟ್‌ ಕಾಮ್‌ನ ೬೦೦ ಕೋಟಿ ರುಪಾಯಿ ಪ್ರಕರಣದಲ್ಲಿ ಸಹಕಾರಿ ಬ್ಯಾಂಕುಗಳೂ ಹಗರಣದಲ್ಲಿ ತೊಡಗಿವೆ ಎಂಬುದು ಸಾಬೀತಾಗಲಿಲ್ಲವೇ? ಶಿಕ್ಷೆ ಆಗಿದ್ದು ಹಣ ಕಳೆದುಕೊಂಡ ಜನರಿಗೇ ಹೊರತು ನಮ್ಮಂಥ ಜಾಣರಿಗಲ್ಲ.

೯. ಹೋಗಲಿ, ಕರ್ನಾಟಕದ ಲೋಕಾಯುಕ್ತರು ಕಳೆದ ಮೂರು ವರ್ಷಗಳಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರಗಳನ್ನು ಪತ್ತೆ ಮಾಡಿ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಆರೋಪಿಗಳ ಫೋಟೋಗಳನ್ನು ಪ್ರಕಟಿಸಿ ಪ್ರಚಾರ ನೀಡಿದ್ದಾರೆ. ಯಾರಿಗಾದರೂ ಶಿಕ್ಷೆಯಾಯಿತೇ?

೧೦. ಭಾರತ ಕಂಡ ಅತಿ ದೊಡ್ಡ ಹಗರಣ ಕರೀಂ ಲಾಲಾ ತೆಲಗಿಯ ಛಾಪಾ ಹಗರಣ. ಇದರಲ್ಲಿ ಸಿಲುಕಿದ್ದ ಹಲವಾರು ಜನರು ಈಗ ನಿಷ್ಕಳಂಕ ಎಂದು ಖುಲಾಸೆಯಾಗಲಿಲ್ಲವೇ? ಕರೀಂ ಲಾಲಾ ತೆಲಗಿಗೆ ಈವರೆಗೂ ಶಿಕ್ಷೆಯಾಗಿದೆಯೇ?

ಇಂತಹ ಇನ್ನೂ ಹಲವಾರು ಉದಾಹರಣೆಗಳಿರುಮದು ನಿಮಗೂ ಗೊತ್ತು. ಆದ್ದರಿಂದ ಈಗ ಜೈಲಿನಲ್ಲಿರುವ ನಾಮ ಕೂಡ ಇಂದಲ್ಲ ನಾಳೆ ಹೊರಬರುತ್ತೇವೆ ಎಂಬ ಭರವಸೆಯನ್ನು ನಿಮಗೆ ನೀಡಲು ಇಚ್ಛಿಸುತ್ತೇವೆ. ಒಂದು ವೇಳೆ ಹೊರ ಬರಲು ಸಾಧ್ಯವಾಗದಿದ್ದರೆ ನಾಮ ಜೈಲಿನಲ್ಲೇ ಕುಳಿತು ವ್ಯವಹಾರ ನಡೆಸಲೂ ಉತ್ಸುಕರಾಗಿದ್ದೇವೆ.

ಈಗ ನಾಮ ಹಾಕಿರುವ ಯೋಜನೆ ಆಕರ್ಷಕವಾಗಿದೆ. ಇನ್ನು ಮೂರು ವರ್ಷದಲ್ಲಿ ರತನ್‌ ಟಾಟಾ ಕಂಪನಿ ತನ್ನ ಮಹತ್ವಾಕಾಂಕ್ಷೆಯ ಕಾರನ್ನು ಹೊರತರಲಿದೆ. ಕೇವಲ ೧ ಲಕ್ಷ ರುಪಾಯಿ ಬೆಲೆಯ ಈ ಕಾರಿನ ತಯಾರಿ ಪುಣೆ ಕಾರ್ಖಾನೆಯಲ್ಲಿ ಸಾಗಿದ್ದು, ಭಾರತದ ಮಧ್ಯಮ ವರ್ಗದ ಜನರು ಈ ಕಾರನ್ನು ಖರೀದಿಸಲು ಮುಗಿಬೀಳಲಿದ್ದಾರೆ.

ಈ ಆಮಿಷವನ್ನೇ ಇಟ್ಟುಕೊಂಡು ನಾಮ ಈಗಿನ ಕಾರ್‌ ಲೋನ್‌ ಯುಗಕ್ಕೆ ತಕ್ಕ ಯೋಜನೆ ರೂಪಿಸಿದ್ದೇವೆ. ’ಈಗ ಕೇವಲ ೧೦ ಸಾವಿರ ರುಪಾಯಿ ನೀಡಿ. ಮೂರು ವರ್ಷ ಬಿಟ್ಟು ೧ ಲಕ್ಷ ರುಪಾಯಿಯ ಟಾಟಾ ಕಾರು ಪಡೆಯಿರಿ’ ಎಂಬುದು ನಮ್ಮ ಘೋಷಣೆ. ಈ ಯೋಜನೆಗೆ ಮ್ಯೂಚುವಲ್‌ ಫಂಡ್‌ ರೀತಿಯಲ್ಲಿ ’ಟಾಟಾ ವೆಹಿಕಲ್‌ ಫಂಡ್‌’ ಎಂದು ಆಕರ್ಷಕ ಹೆಸರಿಡಬಹುದು.
ಆನಂತರ ನಾಮ ‘ಬುಕಿಂಗ್‌ ಆರಂಭವಾಗಿದೆ. ಇಂದೇ ಹಣ ಠೇವಣಿ ಮಾಡಿ’ ಎಂದು ಜಾಹೀರಾತು ನೀಡಬಹುದು.
೧೦೦೦೦ ಸಾವಿರ ರುಪಾಯಿಗೆ ೧ ಲಕ್ಷ ರುಪಾಯಿ ಕಾರು ಹೇಗೆ ನೀಡಲು ಸಾಧ್ಯ ಎಂದು ಜನರು ಯೋಚಿಸುಮದಿಲ್ಲ. ಹಿಂದಿನ ಇಂಥ ಬ್ಲೇಡ್‌ ಯೋಜನೆಗಳಿಂದ ಪಾಠ ಕಲಿಯುಮದಿಲ್ಲ. ಪಾಠ ಕಲಿತರೂ, ’ಇರಲಿ ಒಂದು ಕೈ ನೋಡಿ ಬಿಡುವಾ... ಕೇವಲ ೧೦ ಸಾವಿರ ತಾನೇ?’ ಎಂದು ರಿಸ್ಕ್‌ ತೆಗೆದುಕೊಳ್ಳುವ ದಡ್ಡರೂ ಕಡಿಮೆ ಏನಿಲ್ಲ.

ಈ ಯೋಜನೆ ಮೂಲಕ ಮೂರು ವರ್ಷದಲ್ಲಿ ಕನಿಷ್ಠ ೧೦೦-೨೦೦ ಕೋಟಿ ರುಪಾಯಿ ಸಂಗ್ರಹವಾಗುಮದು ಗ್ಯಾರಂಟಿ. ಆಮೇಲೆ ನಮ್ಮ ಎಲ್ಲಾ ಸುಂದರ ಶಾಖೆಗಳನ್ನೂ ಮುಚ್ಚಿ ನಾಮ ಓಡಿ ಹೋಗಬಹುದು. ಬಿಸಿನೆಸ್‌ ನಷ್ಟವಾಯಿತು ಎಂದು ಬಹುಪಾಲು ಹಣವನ್ನು ನಾಮ ಬಚ್ಚಿಡಬಹುದು. ಆಮೇಲೆ ನಾಮ ಸಿಕ್ಕಿಬಿದ್ದರೂ ಜಾಮೀನು ಪಡೆದು ಹೊರಬಂದು ಸುಖವಾಗಿ ಇರಬಹುದು.

ಕೊಟ್ಟವ ಮಂಕಿ. ಇಸಕೊಂಡವ ವಿನಿವಿಂಕಿ ಎಂಬುದೇ ನಮ್ಮ ಕಂಪನಿಯ ಧ್ಯೇಯ ವಾಕ್ಯ. ಇದನ್ನು ತಾವೂ ಒಪುý್ಪತ್ತೀರಿ ಎಂಬ ವಿಶ್ವಾಸ ನಮಗಿದ್ದು, ಈ ಯೋಜನೆಯನ್ನು ಪರಿಷ್ಕರಿಸುವ ಕುರಿತು ತಾಮ ತಮ್ಮ ಅಮೂಲ್ಯ ಸಲಹೆ, ಸೂಚನೆ ನೀಡಬೇಕಾಗಿ ನಾಮ ಈ ಮೂಲಕ ಕೋರುತ್ತೇವೆ.

ಧನ್ಯವಾದಗಳೊಂದಿಗೆ,
ಟಾಟಾ ಬೈ ಬೈ ಪಬ್ಲಿಕ್‌ ಲಿ. ಪರವಾಗಿ
ಮಿ. ವಿನಿವಿಂಕಿ


Kannada Prabha issue dated November 7, 2005
Pay just Rs.10000. Get Tata 1 lakh Rupee Nano Car Vinivinc Scam

-

No comments: