ದಕ್ಷಿಣ ಭಾರತದ ಕಾಶ್ಮೀರವಾಗಿರುವ ಬೆಳಗಾವಿ ಗಡಿಯಲ್ಲಿ ಶೀಘ್ರ ಎಲ್‌ಒಸಿ:ಸರ್ಕಾರಕ್ಕೆ ಮೀರ್‌ಸಾಧಿಕ್ ಪತ್ರ
ಪಾಕಿಸ್ತಾನ ಮತ್ತು ಭಾರತದ ನಡುವೆ ಸಿಲುಕಿರುವ ಕಾಶ್ಮೀರದಂತಾಗಿದೆ ನಮ್ಮ ಬೆಳಗಾವಿಯ ಪರಿಸ್ಥಿತಿ . ಅದಕ್ಕಾಗಿ ಬೆಳಗಾವಿಯನ್ನು ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಬಹುದು. ಕರ್ನಾಟಕ ಹಾಗೂ ಮಹಾರಾಷ್ಟ್ರ ಥೇಟ್ ಭಾರತ-ಪಾಕ್ ಥರ ಗುದ್ದಾಟದಲ್ಲಿ ತೊಡಗಿವೆ. ಕಾಶ್ಮೀರ ಸಮಸ್ಯೆಗೂ ಗೋಲ್ಡನ್ ಜುಬಿಲಿ. ಬೆಳಗಾವಿ ಸಮಸ್ಯೆಗೂ ಸುವರ್ಣಮಹೋತ್ಸವ. ಈಗ ಬಾಕಿ ಏನು ಗೊತ್ತಾ? ಭಾರತ-ಪಾಕ್ ನಡುವೆ ಇರುವಂಥ LOC !
ಪರಮ ಪೂಜ್ಯ ಮುಖ್ಯಮಂತ್ರಿಯವರೇ,
ಟಿಪುý್ಪ ಸುಲ್ತಾನರ ಆಪ್ತ ಸಲಹೆಗಾರನಾಗಿದ್ದ ಮೀರ್ ಸಾಧಿಕ್‌ನ ಅಭಿನಂದನೆಗಳು! ಪೂಜ್ಯ ಎಂದರೆ ಕನ್ನಡದಲ್ಲಿ ಸೊನ್ನೆ ಎಂಬ ಅರ್ಥವೂ ಇದೆ. ಆದರೆ, ನಾನು ಈ ಮೇಲೆ ಬಳಸಿರುವ ಪೂಜ್ಯ ಎಂಬುದು ಪೂಜನೀಯರು ಎಂಬ ಅರ್ಥದಲ್ಲಿ. ದಯವಿಟ್ಟು ಇದು ತಮ್ಮ ಸರ್ಕಾರದ ಕುರಿತು ಹೇಳಿದ್ದು ಎಂದು ತಪುý್ಪ ತಿಳಿಯಬೇಡಿ. ನೀವೇ ಹೇಳಿಕೊಂಡಂತೆ, ತಾಮ ಕರ್ನಾಟಕದ ಲಕ್ಕಿ ಮುಖ್ಯಮಂತ್ರಿ ಎನ್ನುಮದನ್ನು ನಾನು ಒಪ್ಪಿಕೊಂಡೇ ಈ ಪತ್ರ ಬರೆಯುತ್ತಿದ್ದೇನೆ.
ತಾಮ ಮುಖ್ಯಮಂತ್ರಿ ಆದ ಮೇಲೆ ಈ ರಾಜ್ಯದ ಎಷ್ಟೋ ಸಮಸ್ಯೆಗಳು ಪರಿಹಾರವಾಗಿರುಮದು ನಿಜ. ಮುಖ್ಯವಾಗಿ ಕರ್ನಾಟಕದ ಸಿಂಹ ಹಾಗೂ ಸಿಂಹಿಣಿ ಸ್ವಪ್ನಗಳು ಈಗಿಲ್ಲ. ಸಿಂಹಸ್ವಪ್ನವಾಗಿದ್ದ ವೀರಪ್ಪನ್ ಹತನಾಗಿದ್ದಾನೆ. ಕಾವೇರಿ ನೀರಿಗಾಗಿ ನಮಗೆ ಸಿಂಹಿಣಿಸ್ವಪ್ನವಾಗಿದ್ದ ಜಯಲಲಿತಾ ಕೂಡ ತೆಪ್ಪಗಾಗಿದ್ದಾರೆ. ಈ ಬಾರಿ ಆದ ಭಾರೀ ಮಳೆಯಿಂದ ತಮಿಳುನಾಡಿನ ಅರ್ಧ ಭೂಭಾಗ ಪ್ರವಾಹದಲ್ಲಿ ಮುಳುಗಿಹೋಗಿದೆ. ಆದ್ದರಿಂದ ಈಗ ನಾಮ ನೀರು ಬಿಡುತ್ತೇವೆಂದರೂ... ’ಬೇಡ ದಯವಿಟ್ಟು ಆ ಕೆಲಸ ಮಾಡಬೇಡಿ’ ಎಂದು ಅಂಗಾಲಾಚುವ ಸ್ಥಿತಿ ಜಯಲಲಿತಾ ಅವರಿಗೆ ಬಂದಿದೆ. ಯಾಕೋ ಎರಡು ವರ್ಷಗಳಿಂದ ಜಯಲಲಿತಾ ಹೋಗಿ ಜಲ-ಯಲಿತಾ ಆಗಿಬಿಟ್ಟಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಸುನಾಮಿಯಿಂದ ಜಲಪ್ರಳಯವಾಗಿ ತಮಿಳುನಾಡಿನ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ವಿಪರೀತ ಮಳೆ, ಚಂಡಮಾರುತದಿಂದಾಗಿ ಅಲ್ಲಿಯ ಜನ ಜಲಪ್ರಳಯದಲ್ಲಿ ಸಿಲುಕಿದ್ದಾರೆ. ಪಾಪ... ಹತ್ತಾರು ಸಾವಿರ ಜನರು ಮೃತರಾಗಿ ಹಲವಾರು ಲಕ್ಷ ಬಡವರು ನಿರಾಶ್ರಿತರಾಗಿದ್ದಾರೆ. ಹೀಗೆ, ನೀಮ ಲಕ್ಕಿ ಆದ ಕೂಡಲೇ ಜಯಾ ಅನ್‌ಲಕ್ಕಿ ಆಗಿದ್ದಾರೆ.
ಆದರೂ ಮುಖ್ಯಮಂತ್ರೀಜಿ,
ಕರ್ನಾಟಕದಲ್ಲಿನ್ನೂ ದಶಕಗಳಿಂದ ಇರುವ ಕೆಲಮ ಸಮಸ್ಯೆಗಳು ಹಾಗೇ ಮುಂದುವರೆದಿವೆ. ನಿಮ್ಮಂಥ ಲಕ್ಕಿ ಮುಖ್ಯಮಂತ್ರಿಗೂ ಅಮ ಜಗ್ಗುತ್ತಿಲ್ಲ. ಉದಾಹರಣೆಗೆ ಬೆಳಗಾವಿಯ ಗಡಿ ಸಮಸ್ಯೆ. ಉತ್ತರ ಕರ್ನಾಟಕದ ಅಭಿವೃದ್ಧಿ. ಕೊಡವರ ಕೊರಗು... ಇತ್ಯಾದಿ.
ಚಿಂತೆ ಬೇಡ. ನಿಮ್ಮ ಅದೃಷ್ಟದಿಂದಾಗಿ, ನನ್ನ ಕೆಲಮ ಸಲಹೆಯಿಂದಾಗಿ ಹಾಗೂ ಅತ್ಯಂತ ದೀರ್ಘವಾದ ತಮ್ಮ ತಾಳ್ಮೆಯಿಂದಾಗಿ ಈ ಸಮಸ್ಯೆಗಳೂ ಕೂಡ ತಂತಾನೇ ಪರಿಹಾರವಾಗುತ್ತವೆ ಎಂಬ ನಂಬಿಕೆ ನನಗಿದೆ.
ಉದಾಹರಣೆಗೆ, ಹೈದರಾಬಾದ್ ಕರ್ನಾಟಕದ ವಿಷಯವನ್ನೇ ನೋಡಿ. ಆ ಪ್ರದೇಶದ ಜನರು ತಮ್ಮ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಒತ್ತಾಯಿಸಿ ಬೇಸತ್ತು ಈಗ ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಂಡಿದ್ದಾರೆ! ಅವರು ತಮ್ಮದು ಪ್ರತ್ಯೇಕ ರಾಜ್ಯ ಎಂದು ಘೋಷಿಸಿಕೊಂಡು ಈ ತಿಂಗಳು, ಕನ್ನಡ ರಾಜ್ಯೋತ್ಸವದ ದಿನವೇ ತಮ್ಮ ನೂತನ ಹೈ-ಕ ರಾಜ್ಯದ ಧ್ವಜಾರೋಹಣ ಮಾಡಿಬಿಟ್ಟಿದ್ದಾರೆ! ಅಲ್ಲಿಗೆ, ಅವರ ಬಹುದಿನಗಳ ಬೇಡಿಕೆ ಈಡೇರಿದಂತಾಯಿತು. ರಾಜ್ಯದ ಅಭಿವೃದ್ಧಿಯ ತಲೆಬಿಸಿ ನಿಮಗೆ ಕಡಿಮೆಯಾಯಿತು. ’ನಿಮಗೂ ನಿಮ್ಮ ರಾಜ್ಯಕ್ಕೂ ಶುಭವಾಗಲಿ...’ ಎಂದು ಹೈ-ಕ ರಾಜ್ಯಕ್ಕೆ ಒಂದು ಸಾಲಿನ ಶುಭ ಸಂದೇಶ ಕಳಿಸಿಬಿಟ್ಟರೆ ನಿಮ್ಮ ಜವಾಬ್ದಾರಿ ಮುಗಿದುಹೋಯಿತು. ಹೈ-ಕ ರಾಜ್ಯದ ಪ್ರಜೆಗಳೇ ತಮ್ಮ ರಾಜ್ಯವನ್ನು ಅಭಿವೃದ್ಧಿ ಮಾಡಿಕೊಳ್ಳುತ್ತಾರಂತೆ. ಅದು ಹೇಗೆ ಅವರ ಅಭಿವೃದ್ಧಿಯಾಗುತ್ತದೋ ಗೊತ್ತಿಲ್ಲ.
ಬಟ್...ಹೌ ಲಕ್ಕಿ ಯು ಆರ್!
ಆದರೆ, ಉತ್ತರ ಕರ್ನಾಟಕದ ಇನ್ನೂ ಕೆಲಮ ಜಿಲ್ಲೆಗಳು ತಮ್ಮದೇ ರಾಜ್ಯವನ್ನು ರಚಿಸಿಕೊಳ್ಳುವಲ್ಲಿ ಪೂರ್ಣ ಯಶಸ್ವಿಯಾಗಿಲ್ಲ. ಹೈ-ಕ ರಾಜ್ಯದಂತೆ ಅವರೂ ಸಹ ಆದಷ್ಟು ಬೇಗ ತಮ್ಮ ರಾಜ್ಯದ ಬಾಮಟ ಹಾರಿಸಿಸುವ ಸಾಧ್ಯತೆ ಇದೆ. ಅವರೂ ತಮ್ಮ ರಾಜ್ಯದ ಬಾಮಟ ಹಾರಿಸಿಬಿಟ್ಟರೆ, ಕರ್ನಾಟಕ ಸರ್ಕಾರದ ಅರ್ಧ ಸಮಸ್ಯೆ ಪರಿಹಾರವಾದಂತೆ ಲೆಕ್ಕ. ಉತ್ತರ ಕರ್ನಾಟಕವನ್ನು ಈಗಾಗಲೇ ಅರ್ಧ ಮರೆತ ಕರ್ನಾಟಕ ಸರ್ಕಾರ ಆಮೇಲೆ ಸಂಪೂರ್ಣ ಮರೆಯಬಹುದು. ಆಮೇಲೆ, ಬೆಂಗಳೂರಿನ ಅಭಿವೃದ್ಧಿಗೆ ಮಾತ್ರ ಗಮನ ಕೇಂದ್ರೀಕರಿಸಲು ಕರ್ನಾಟಕ ಸರ್ಕಾರಕ್ಕೆ ದಾರಿ ಸುಗಮವಾಗುತ್ತದೆ.
ಆದೇ ರೀತಿ ಕೊಡವರಿಗೂ ಉತ್ತೇಜನ ನೀಡಬೇಕು. ಪ್ರತ್ಯೇಕ ರಾಜ್ಯ ರಚನೆಯ ಅವರ ಕೂಗು ಬಹಳ ವರ್ಷಗಳಿಂದ ಇದ್ದೇ ಇದೆ. ಅವರೂ ಒಂದು ರಾಜ್ಯ ರಚಿಸಿಕೊಂಡು ತಮ್ಮ ರಾಜ್ಯದ ಧ್ವಜಾರೋಹಣ ಮಾಡಿಬಿಟ್ಟರೆ ಮುಗಿಯಿತು. ಕೊಡವರ ದಶಕಗಳ ಬೇಡಿಕೆಯೂ ಈಡೇರಿದಂತಾಗುತ್ತದೆ. ಕರ್ನಾಟಕದ ಈ ಸಮಸ್ಯೆ ಪರಿಹಾರವಾದಂತೆ ಆಗುತ್ತದೆ.
ಒಂದು ವೇಳೆ ನಿಮಗೆ ಈ ಪ್ರತ್ಯೇಕ ರಾಜ್ಯ ರಚನೆ ಇಷ್ಟವಾಗಲಿಲ್ಲ ಅಂದರೆ, ನನ್ನದೊಂದು ಸಲಹೆಯಿದೆ. ಕೋಲೂ ಮುರಿಯಬಾರದು, ಹಾವೂ ಸಾಯಬೇಕು ಎನ್ನುವ ತಂತ್ರ ಅನುಸರಿಸುಮದು. ಅಂದರೆ, ಹೊಸ ರಾಜ್ಯ ರಚನೆಯೂ ಆಗಬಾರದು. ಕರ್ನಾಟಕ ಸರ್ಕಾರದಿಂದ ಈ ಪ್ರದೇಶಗಳು ಪ್ರತ್ಯೇಕವೂ ಆಗಬೇಕು ಎನ್ನುವ ಐಡಿಯಾ. ಹೈಕೋರ್ಟ್ ‘ಪೀಠ’ವೇ ಬೇಕೆಂದು ಹಠ ಹಿಡಿದವರಿಗೆ ಹೈಕೋರ್ಟ್ ‘ಬೆಂಚು’ ಕೊಟ್ಟು ನೀಮ ಸುಮ್ಮನಿರಿಸಿದಿರಲ್ಲ... ಆ ಥರದ್ದು!
ಹೈ-ಕ, ಉತ್ತರ ಕರ್ನಾಟಕ ಹಾಗೂ ಕೊಡಗುಗಳನ್ನು ಪ್ರತ್ಯೇಕ ರಾಜ್ಯಗಳೆಂದು ಕರೆಯುವ ಬದಲು ಇಮಗಳಿಗೆ ಕರ್ನಾಟಕದ ಉಪ-ರಾಜ್ಯಗಳೆಂದು ಮಾನ್ಯತೆ ನೀಡುಮದು. ಹಳೆಯ ಕಾಲದಲ್ಲಿ ಒಬ್ಬ ರಾಜನಿಗೆ ಹಲವಾರು ಸಾಮಂತರು ಇರುತ್ತಿರಲಿಲ್ಲವೇ? ಅದೇ ರೀತಿ ಈ ಉಪ ರಾಜ್ಯಗಳು ಕರ್ನಾಟಕ ರಾಜ್ಯದ ಅಡಿಯಲ್ಲಿ ಸ್ವತಂತ್ರ ರಾಜ್ಯಗಳಾಗಿ ಕಾರ್ಯನಿರ್ವಹಿಸಬೇಕು. ವರ್ಷಕ್ಕೆ ನಿಗದಿತ ಮೊತ್ತವನ್ನು ಈ ಉಪರಾಜ್ಯಗಳು ಕರ್ನಾಟಕದ ಬೊಕ್ಕಸಕ್ಕೆ ತೆರಿಗೆ ಸಲ್ಲಿಸಬೇಕು. ಹಾಗೂ ತಮ್ಮ ಅಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು.
ಈ ‘ಉಪ ರಾಜ್ಯ’ ಪದ್ಧತಿ ಭಾರತದ ಇತಿಹಾಸದಲ್ಲಿ ಯಶಸ್ವಿಯಾಗಿತ್ತು ಎಂಬುದನ್ನು ತಾಮ ಗಮನಿಸಬೇಕು. ಅಷ್ಟೇ ಅಲ್ಲ, ಇಂಥ ಪರಿಕಲ್ಪನೆ ವಾಣಿಜ್ಯ, ವ್ಯಾಪಾರದಲ್ಲೂ ಇದೆ. ಅದನ್ನು ಸಬ್ ಬ್ರೋಕರ್, ಸಬ್ ಲೀಸಿಂಗ್, ಸಬ್ ಕಾಂಟ್ರಾಕ್ಟ್ ಮುಂತಾದ ಪದಗಳಿಂದ ಬಣ್ಣಿಸುತ್ತಾರೆ. ಯೆ ಸಬ್... ಯಶಸ್ವಿಯಾಗಿ ನಡೆಯುತ್ತಿರುವಾಗ ’ಸಬ್ ಸ್ಟೇಟ್’ ಅಥವಾ ’ಉಪ ರಾಜ್ಯ’ ವ್ಯವಸ್ಥೆಯೂ ಯಶಸ್ವಿಯಾಗುಮದರಲ್ಲಿ ಯಾಮದೇ ಅನುಮಾನ ಬೇಡ. ಪ್ರಜಾತಂತ್ರ ಭಾರತದಲ್ಲಿ ಇಂಥ ಹೊಸ ರಾಜ್ಯಾಡಳಿತ ನೀತಿಯನ್ನು ಜಾರಿಗೊಳಿಸುವ ಮೊದಲ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗುವ ಲಕ್ ನಿಮ್ಮದಾಗುತ್ತದೆ. ಸ್ವಲ್ಪ ಯೋಚಿಸಿ.
ಆದರೆ, ಬೆಳಗಾವಿಯ ವಿಷಯ ತುಸು ಕಠಿಣ. ಯಾಕೆಂದರೆ, ಅದರ ಪರಿಸ್ಥಿತಿ ಪಾಕಿಸ್ತಾನ ಮತ್ತು ಭಾರತದ ನಡುವೆ ಸಿಲುಕಿರುವ ಕಾಶ್ಮೀರದಂತಾಗಿದೆ. ಅದಕ್ಕಾಗಿ ಬೆಳಗಾವಿಯನ್ನು ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಬಹುದು. ಅಧಿಕೃತವಾಗಿ ಬೆಳಗಾವಿ ಕರ್ನಾಟಕದಲ್ಲಿದೆ. ಆದರೆ, ಇದು ತನಗೆ ಸೇರಬೇಕು ಎಂದು ಮಹಾರಾಷ್ಟ್ರ ಹೋರಾಟ ಮಾಡುತ್ತಿದೆ. ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರದ ಆಡಳಿತವನ್ನು ದುರ್ಬಲಗೊಳಿಸಲು ಕೆಲಮ ಉಗ್ರಗಾಮಿಗಳು ಭಯೋತ್ವಾದನೆ ಮಾಡುತ್ತಿದ್ದಾರೆ. ಆ ಉಗ್ರರಿಗೆ ಗಡಿಯಾಚೆಗಿನ ಕುಮ್ಮಕ್ಕು ಮತ್ತು ನೆರಮ ದೊರೆಯುತ್ತಿದೆ. ಉಭಯ ರಾಜ್ಯಗಳ ಸರ್ಕಾರಗಳು ಥೇಟ್ ಭಾರತ-ಪಾಕ್ ಸರ್ಕಾರಗಳ ಥರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಅಲ್ಲಿ ಕಾಶ್ಮೀರ ಗಡಿಯ ಶಾಲೆಗಳಲ್ಲಿ ಜಿಹಾದಿ ಶಿಕ್ಷಣ ನೀಡುತ್ತಿದ್ದರೆ ಬೆಳಗಾವಿಯ ಗಡಿಯ ಶಾಲೆಗಳಲ್ಲಿ ಮರಾಠಿ ಜಿಹಾದಿ ತರಬೇತಿ ನೀಡಲಾಗುತ್ತಿದೆ. ಕನ್ನಡದ ವಿರುದ್ಧ, ಕನ್ನಡಿಗರ ವಿರುದ್ಧ ಪ್ರಚೋದನೆ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯೋತ್ಸವದ ದಿನ ಈ ಶಾಲೆಗಳಲ್ಲಿ ಕಪುý್ಪದಿನ ಆಚರಿಸಲಾಗುತ್ತದೆ. ಕಾಶ್ಮೀರ ಸಮಸ್ಯೆಗೂ ಗೋಲ್ಡನ್ ಜುಬಿಲಿ. ಬೆಳಗಾವಿ ಸಮಸ್ಯೆಗೂ ಸುವರ್ಣಮಹೋತ್ಸವ. ಇದನ್ನೆಲ್ಲ ನೋಡಿದರೆ, ಕಾಶ್ಮೀರವೇ ಬೆಳಗಾವಿಯಲ್ಲಿ ಅವತರಿಸಿದಂತೆ ಕಾಣುತ್ತದೆ.
ಹಾಗಾಗಿ, ಬೆಳಗಾವಿ ಸಮಸ್ಯೆಗೆ ಸದ್ಯಕ್ಕೆ ಯಾಮದೇ ಪರಿಹಾರ ಕಾಣುತ್ತಿಲ್ಲ. ಕರ್ನಾಟಕದ ಗಡಿಯಾಚೆಗಿನ ಉಗ್ರರು ಬೆಳಗಾವಿಯನ್ನು ಉಪ-ರಾಜ್ಯ ಎಂದು ಘೋಷಿಸಲೂ ಅವಕಾಶ ನೀಡುಮದಿಲ್ಲ. ಅದಕ್ಕಾಗಿ ಬೆಳಗಾವಿಯಲ್ಲಿ ಈಗಲೇ ಒಂದು ಗಡಿ ನಿಯಂತ್ರಣ ರೇಖೆ Line Of Control -LOC ಹಾಕಿಬಿಡುಮದು ಸೂಕ್ತ. ಇಲ್ಲವಾದರೆ, ಆಮೇಲೆ ಪಾಕ್ ಆಕ್ರಮಿತ ಕಾಶ್ಮೀರ ಇದ್ದಹಾಗೆ ಇನ್ನೊಂದು ಮಹಾರಾಷ್ಟ್ರ ಆಕ್ರಮಿತ ಬೆಳಗಾವಿ ಪ್ರದೇಶ ಸೃಷ್ಟಿಯಾಗಬಹುದು.
ಎಚ್ಚರ... ಎಚ್ಚರ!
ಇಂತು ಕರ್ನಾಟಕದ ಹಿತೈಷಿ
ಮೀರ್ ಸಾಧಿಕ್
Kannada Prabha issue dated November 28, 2005
Karnataka Divided in to Three Sub-States
-
Tuesday, November 29, 2005
ಕರ್ನಾಟಕದಲ್ಲಿ ಮೂರು ಉಪರಾಜ್ಯಗಳ ರಚನೆ
Subscribe to:
Post Comments (Atom)
1 comment:
MODHALU..nam karnatakdoru kannada maathododh kalibeku,mukya vaagi
sarvajanika sthaladalli...
mathe hora rajya'da janara nodi kalibeku (Hege avaru avara bashe maatra upayogistaare antha.. office nallu avaru avara avara bashe bittu bere maatadodilla... anya bashikarondigoo saha avaru tannade basheyalli maatadthaare)
ist kaltre nam bashe nam rajya antha iruthhe.... avaga karnataka/kannadigarige yaaru enu maadokagodilla.....
Nodee nam karnataka dalli yella basheya (News paper) siguthe.. aadre neevu Andra,TamilNadu... yelle hogi alli yellu nimge kannada paper siguvudu apuroopa, illave illa antha helbahudu....
matthe nam rajakarinigulige bengluru bittare bere yava jaaganu siguthilla avarige abivrudhi maadoke antha kanuthe.....
nam rajakarinigulu abhivrudhi aagirodhunna abhivrudi maadodh bittu rajyada bere(uttar karnatakada kade janagalige upayoga vaaguva reethiyalli abhivrudhi madadre eethara yella agolla....)
Post a Comment