ಸಲ್ಮಾನ್, ಫರ್ದಿನ್ ಖಾನ್ ವಿರುದ್ಧ ಫತ್ವಾ ಇಲ್ಲ. ಪುರುಷರಿಗೆ ಶಿಕ್ಷೆಯಿಲ್ಲ
- ನೈತಿಕ ಕಾಂಡೋಂಗಳ ಕರಪತ್ರ
ನಾಮ ಎಷ್ಟು ಸಂಪ್ರದಾಯ ರಕ್ಷಕರು ನೋಡಿ. ಸಾನಿಯಾ ಜತೆ, ಅದೇ ಸ್ಥಳದಲ್ಲಿ, ಅದೇ ಸಂದರ್ಭದಲ್ಲಿ, ಅದೇ ಕ್ಷಣದಲ್ಲಿ ಅದೇ ರೀತಿಯ ಹೇಳಿಕೆಯನ್ನು ನೀಡಿದ ನರೇನ್ ಕಾರ್ತಿಕೇಯನ್ ವಿರುದ್ಧ ನಾಮ ತಕರಾರು ಮಾಡಲೇ ಇಲ್ಲವಲ್ಲ. ಯಾಕೆ? ಮದುವೆಗಿಂತ ಮೊದಲೇ ತಾಯಿಯಾದ ಕುಂತಿ, ವಿಷಯ ಬಯಲಾದಾಗ ದೋಷಾರೋಪಕ್ಕೆ ಒಳಗಾದಳು. ಆದರೆ, ಯಾರೂ ಇದಕ್ಕೆ ಕಾರಣನಾದ ಸೂರ್ಯನನ್ನು ದೂಷಿಸಲಿಲ್ಲ. ಇದೇ ತಾನೇ ನಮ್ಮ ಸಂಸ್ಕೃತಿ?
ಮಹಾಜನಗಳೇ,
ನಾಮ ಈ ಭೂಮಿಯ ಸಾಮಾಜಿಕ, ಸಾಂಸ್ಕೃತಿಕ, ನೈತಿಕ ಹಾಗೂ ಚಾರಿತ್ರಿಕ ರಕ್ಷಕರು. ನಮ್ಮನ್ನು ಬೇಕಾದರೆ ನೀಮ, ಸಮಾಜ ಸಂಸ್ಕೃತಿಯ ಕಮಾಂಡೋಗಳು ಅಥವಾ ನೈತಿಕ ಕಾಂಡೋಂಗಳು ಅಂತ ಕರೆಯಬಹುದು. ಯಾವ್ಯಾವಾಗ ಧರ್ಮಕ್ಕೆ, ಸಂಸ್ಕೃತಿಗೆ ಚ್ಯುತಿಯಾಗುತ್ತದೋ, ಆಗೆಲ್ಲ ನಾಮ ಪ್ಯಾಕಿನಿಂದ ಹೊರಬರುತ್ತೇವೆ... ಅರ್ಥಾತ್ ಅವತರಿಸುತ್ತೇವೆ! ...ಸಂಭವಾಮಿ ಯುಗೇ ಯುಗೇ, ಅಂತ ಹೇಳಿದ ಆ ಕೃಷ್ಣ ಪರಮಾತ್ಮ ಎಲ್ಲಿ ಮಾಯವಾದನೋ ಗೊತ್ತಿಲ್ಲ! ನಾಮ ಮಾತ್ರ ಕರೆಕ್ಟಾಗಿ ಟೈಮಿಗೆ ಸರಿಯಾಗಿ ಅವತರಿಸುತ್ತೇವೆ.
ನಮ್ಮನ್ನು ನಾಮ ಸಂಸ್ಕೃತಿಯ ರಕ್ಷಕರು, ನೈತಿಕತೆಯ ಕಮಾಂಡೋಗಳು ಅಂತ ಕರೆದುಕೊಳ್ಳುತ್ತೇವೆ.
ನಮಗೆ ಕಾಂಡೋಂಗಳು ಅಂತ ಸೆಕ್ಸೀ ಹೆಸರೂ ಇದೆ. ಏಕೆಂದರೆ, ಮನುಷ್ಯನಿಗೆ ಏಡ್ಸ್ ರೋಗ ಹರಡುಮದನ್ನು ಕಾಂಡೋಂಗಳು ಹೇಗೆ ತಡೆಯುತ್ತವೋ ಅದೇ ರೀತಿ ನಾಮ ನಮ್ಮ ಧರ್ಮ ಮತ್ತು ಸಂಸ್ಕೃತಿಗೆ ಲೈಂಗಿಕ ರೋಗ ಹರಡುಮದನ್ನು ತಡೆಯುತ್ತೇವೆ. ನೈತಿಕತೆ ಕೆಡುಮದನ್ನು ತಡೆಯುತ್ತೇವೆ. ಅದಕ್ಕಾಗಿ, ನಮಗೆ ಈ ಅನ್ವರ್ಥಕ ನಾಮ.
ಮಹಾಜನಗಳೇ,
ಎಂಥಾ ಪುಣ್ಯ ಭೂಮಿಯಾಗಿತ್ತು ನಮ್ಮದು! ಒಂದು ಕಾಲದಲ್ಲಿ ಲೈಂಗಿಕ ಕ್ರಿಯೆಯೇ ಇಲ್ಲದೇ ಸಂತಾನ ಉತ್ಪತ್ತಿಯಾಗುತ್ತಿದ್ದ ದೇಶ ನಮ್ಮದು. ದೇಶದ ಆರಾಧ್ಯ ದೈವ ಗಣಪತಿ ಸೃಷ್ಟಿಯಾದದ್ದು ಪಾರ್ವತಿ ತನ್ನ ಮೈಕೆಸರಿನಿಂದ ಮಾಡಿದ ಮೂರ್ತಿಯಿಂದ. ನಂತರ ಆತನಿಗೆ ಆನೆಯ ಮುಖ ಬಂದಿದ್ದು ಅಂಗಾಂಗ ಕಸಿಯಿಂದ. ಶ್ರೀರಾಮಚಂದ್ರ ಆಂಡ್ ಬ್ರದರ್ಸ್ ಹುಟ್ಟಿದ್ದು ದಶರಥನ ರಾಣಿಯರಿಗೆ ಯಜ್ಞದಿಂದ ಪ್ರಾಪ್ತವಾದ ಪಾಯಸದಿಂದ. ಈ ವೈದ್ಯ ವಿಜ್ಞಾನವನ್ನೇ ಈಗ ಕೃತಕ ಗರ್ಭಧಾರಣೆ ಎನ್ನಲಾಗುತ್ತದೆ. ಹಾಗೆ ನೋಡಿದರೆ, ಕೌರವರು ವಿಶ್ವದ ಮೊದಲ ಸಾಮೂಹಿಕ ಟೆಸ್ಟ್‌ಟ್ಯೂಬ್ ಬೇಬಿಗಳು. ವ್ಯಾಸ ಮಹಾಮುನಿಗಳು ನೀಡಿದ ತುಪ್ಪವನ್ನು ತಾಯಿ ಗಾಂಧಾರಿ ನೂರು ಕುಂಭಗಳಲ್ಲಿ ತುಂಬಿಟ್ಟಳು. ಕೆಲ ತಿಂಗಳುಗಳ ನಂತರ ಆ ಕುಂಭಗಳಿಂದ ಕೌರವರು ಜನಿಸಿದರು. ಇವರಿಗಿಂತ ಮೊದಲು ದ್ರೋಣರು ಎಲೆಯ ತಟ್ಟೆಯಲ್ಲಿ ಜನ್ಮ ಪಡೆದಿದ್ದರಿಂದ ಅವರೇ ವಿಶ್ವದ ಮೊದಲ ಟೆಸ್ಟ್‌ಟ್ಯೂಬ್ ಬೇಬಿ ಇರಬಹುದು. ಪಾಂಡವರು ಹುಟ್ಟಿದ್ದು ಕುಂತಿಗೆ ಪ್ರಾಪ್ತವಾದ ಮಂತ್ರಶಕ್ತಿಯಿಂದ. ಇದನ್ನು ಅಲ್ಟ್ರಸೋನಿಕ್ ಗರ್ಭ ತಂತ್ರಜ್ಞಾನ ಎಂದು ಇನ್ನು ವಿಜ್ಞಾನಿಗಳು ಕಂಡುಹಿಡಿಯಬಹುದೇನೋ! ಈ ಎಲ್ಲ ಉದಾಹರಣೆಗಿಂತ ಹೆಚ್ಚಾಗಿ ಗಂಗಾ ನದಿಯ ತಟದ ಮೇಲೆ, ಯುವತಿಯಾಗಿದ್ದ ಕುಂತಿ ಸೂರ್ಯಮಂತ್ರವನ್ನು ಪಠಿಸಿ ಮಗ ಕರ್ಣನನ್ನು ಪಡೆದ ಕಥೆ ಜನಜನಿತ. ರಕ್ತಬೀಜಾಸುರ ಎಂಬ ರಾಕ್ಷಸನ ಹನಿ ಹನಿ ರಕ್ತ ಭೂಮಿಗೆ ಬಿದ್ದಾಗಲೂ ಬೀಜ ಅಂಕುರವೊಡೆದಂತೆ ನೂರಾರು, ಸಾವಿರಾರು ಸಂಖ್ಯೆಯಲ್ಲಿ ’ತದ್ರೂಪಿಗಳಂತೆ’ ಪುನರುತ್ಪತ್ತಿ ಆಗುತ್ತಿದ್ದರಂತೆ. ಇದನ್ನೇ ವಿಜ್ಞಾನಿಗಳು ರಕ್ತದ ಕಣದಿಂದ ತದ್ರೂಪಿಗಳನ್ನು ಸೃಷ್ಟಿಸುವ ಕ್ಲೋನಿಂಗ್ ತಂತ್ರಜ್ಞಾನ ಎಂದು ಕರೆಯುತ್ತಾರೆ.
ಇಂಥ ಸೆಕ್ಸ್‌ರಹಿತ ಸಂತಾನ ಭಾಗ್ಯವಿದ್ದ ಈ ಭರತಭೂಮಿಯಲ್ಲಿ ಇಂದು ಸಂತಾನ ಭಾಗ್ಯವೇ ಬೇಡದ ಲೈಂಗಿಕತೆ ವಿಜೃಂಭಿಸುತ್ತಿದೆ! ಭಾರತ ಕಾಮದೇವನ ಆಡುಂಬೋಲವಾಗಿದೆ.
ಸಾಲದು ಎಂಬಂತೆ ದೇಶದ ಹೆಣ್ಣುಮಕ್ಕಳೆಲ್ಲಾ ಯುವಕರಿಗೆ ಸೆಕ್ಸಾಯಣ ಸೂತ್ರ ಕಲಿಸುತ್ತಿದ್ದಾರೆ. ’ತಾಮ ಕೆಟ್ಟಿದ್ದಲ್ಲದೇ ನೀವೂ ಕೆಟ್ಟುಹೋಗಿ. ಈಗಿನ ಕಾಲದಲ್ಲಿ ನೀಮ ಕೆಟ್ಟು ಹೋಗುಮದನ್ನು ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ನೀಮ ಸುರಕ್ಷಿತ ರೀತಿಯಲ್ಲಿ ಕೆಟ್ಟು ಹೋಗಿ’ ಅಂತ ಧರ್ಮಬೋಧೆ ಮಾಡುತ್ತಿದ್ದಾರೆ. ಇಂಥ ಸೂತ್ರಗಳನ್ನು ಕಲಿಸುವ ಹಕ್ಕು ಇರುಮದು ವಾತ್ಸಾಯನನಂಥ ಮಹರ್ಷಿಗಳಿಗೆ ಮಾತ್ರ. ಇಡೀ ಪುರಾಣದಲ್ಲಿ ಯಾರಾದರೂ ಸ್ತ್ರೀ ಮಹರ್ಷಿ ಇಂತಹ ಉಪದೇಶ ಮಾಡಿದ ಉದಾಹರಣೆ ತೋರಿಸಿ!
‘ಈಗಿನ ಕಾಲದಲ್ಲಿ ಕನ್ಯೆಯರು ಕನ್ಯತ್ವ ಉಳಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ, ವಿದ್ಯಾವಂತ ಹುಡುಗರು ಕನ್ಯೆಯರನ್ನೇ ಮದುವೆಯಾಗುತ್ತೇವೆ ಎಂದು ಬಯಸುಮದಿಲ್ಲ.’ ಎಂಬರ್ಥದಲ್ಲಿ ಖುಷ್ಬು ಪ್ರವಚನ ನೀಡಿದ್ದಾಳೆ.
ಇದನ್ನು ಖುಷ್ಬು ಹೇಳಿರುಮದಕ್ಕೆ ನಮ್ಮ ವಿರೋಧವಿದೆ. ಅದನ್ನೇ ಯಾರಾದರೂ ಪುರುಷ ಹೇಳಿದ್ದರೆ ನಾಮ ಒಪ್ಪಿಕೊಳ್ಳುತ್ತಿದ್ದೆಮ.
ಈಗಿನ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದರೆ ಖುಷ್ಬು ಹೇಳಿರುಮದು ನಿಜ ಅಂತ ನಮಗೂ ಗೊತ್ತು. ಆದರೂ, ಆ ಸತ್ಯವನ್ನು ಹೇಳಲು ಆಕೆಗೆ ಹಕ್ಕಿಲ್ಲ ಅನ್ನುಮದೇ ನಮ್ಮ ಪ್ರಮುಖ ಆಕ್ಷೇಪ.
ಆಕೆ ಮದುವೆಗಿಂತ ಮೊದಲು ಕನ್ಯತ್ವ ಕಳೆದುಕೊಂಡಿದ್ದರೂ ನಮ್ಮ ಅಭ್ಯಂತರವಿಲ್ಲ. ಆಕೆ, ಸಿನಿಮಾಗಳಲ್ಲಿ ತನ್ನ ಬಹುತೇಕ ಅಂಗಾಂಗಗಳನ್ನು ತೋರಿಸಿರುಮದಕ್ಕೂ ನಮ್ಮ ತಕರಾರಿಲ್ಲ. ಆದರೆ, ಆ ಮಾತನ್ನು ಸಾರ್ವಜನಿಕವಾಗಿ ಆಕೆ ಹೇಳಬಾರದಿತ್ತು. ಇದು ನಮ್ಮ ಸಂಸ್ಕೃತಿಗೆ ತಕ್ಕುದಲ್ಲ.
ಇನ್ನು ಸಾನಿಯಾ ಕಥೆಯೂ ಅಷ್ಟೇ. ಆಕೆ, ಬುರ್ಖಾ ಹಾಕಿಕೊಂಡು ಟೆನಿಸ್ ಆಡುಮದು ಬಿಟ್ಟು ಚೋಟುದ್ದ ಲಂಗ ಹಾಕಿಕೊಂಡು ಟೆನಿಸ್ ಆಡುತ್ತಾಳೆ. ಟೈಟ್ ಟೀಶರ್ಟ್ ತೊಟ್ಟ ಆಕೆ ಶಾಟ್ ಹೊಡೆದರೆ, ನಮ್ಮ ಕಣ್ಣುಗಳೆಲ್ಲ ಆಟ ನೋಡುಮದು ಬಿಟ್ಟು ಆಕೆಯ ಮಾಟ ನೋಡುತ್ತವೆ.
ಟೆನಿಸ್ ಆಟಕ್ಕೇ ಇಷ್ಟು ಸಣ್ಣ ಬಟ್ಟೆ ತೊಟ್ಟುಕೊಳ್ಳುವ ಆಕೆ ಇನ್ನು ಈಜು ಸ್ಪರ್ಧೆಯಲ್ಲಿ ಭಾಗವಹಿಸುಮದಾದರೆ ಎಷ್ಟು ಬಟ್ಟೆ ತೊಟ್ಟುಕೊಳ್ಳುತ್ತಿದ್ದಳೋ ಅಂತ ಭಯವಾಗುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಆಕೆ ಕೂಡ ಖುಷ್ಬು ಮಾಡಿದ ತಪ್ಪನ್ನೇ ಮಾಡಿದ್ದಾಳೆ. ಅದಕ್ಕೇ ನೈತಿಕ ಕಾಂಡೋಮ್‌ಗಳಾದ ನಾಮ ಆಕೆಯ ವಿರುದ್ಧ ಫತ್ವಾ ಹೊರಡಿಸುವ ತಯಾರಿಯನ್ನು ಮಾಡಿಕೊಂಡಿದ್ದೇವೆ.
ನಾಮ ಎಷ್ಟು ಸಂಪ್ರದಾಯ ರಕ್ಷಕರು ನೋಡಿ. ಸಾನಿಯಾ ಜತೆ, ಅದೇ ಸ್ಥಳದಲ್ಲಿ, ಅದೇ ಸಂದರ್ಭದಲ್ಲಿ, ಅದೇ ಕ್ಷಣದಲ್ಲಿ ಅದೇ ರೀತಿಯ ಹೇಳಿಕೆಯನ್ನು ನೀಡಿದ ನರೇನ್ ಕಾರ್ತಿಕೇಯನ್ ವಿರುದ್ಧ ನಾಮ ತಕರಾರು ಮಾಡಲೇ ಇಲ್ಲವಲ್ಲ. ಯಾಕೆ ಹೇಳಿ?
ಯಾಕೆಂದರೆ, ಆತ ಪುರುಷ. ಆತನಿಗೆ ಸೆಕ್ಸ್ ಬಗ್ಗೆ ಅಥವಾ ವಿವಾಹ ಪೂರ್ವ ಸೆಕ್ಸ್ ಬಗ್ಗೆ ಮಾತನಾಡಲು ಪರವಾನಗಿಯಿದೆ. ಅದಕ್ಕಾಗಿ ಆತನ ವಿರುದ್ಧ ನಾಮ ಸೊಲ್ಲು ಎತ್ತಲಿಲ್ಲ. ನಾವಷ್ಟೇ ಏನು, ಸಾನಿಯಾ ಪ್ರಕರಣದ ಕುರಿತು ವರದಿ ಮಾಡಿದ ಭಾರತದ ಯಾವ ಪತ್ರಿಕೆಯೂ ಈ ಕುರಿತು ಪ್ರಶ್ನೆ ಹಾಕಲಿಲ್ಲ. ಏಕೆಂದರೆ, ಪುರಷರಿಗೆ ಲೈಂಗಿಕ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯ ನೀಡಿದೆ. ಮಹಿಳೆಯರಿಗೆ ನೀಡಿಲ್ಲ. ಈ ಸಂಪ್ರದಾಯದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವವಿಲ್ಲ. ಇದನ್ನು ಎಲ್ಲರೂ ಅರಿತು ನಡೆಯಬೇಕು.
ಅಷ್ಟೇ ಅಲ್ಲ. ಫರ್ದಿನ್ ಖಾನ್ ಎಂಬ ಸಿನಿಮಾ ನಟ ಕೇವಲ ಒಂದೇ ಒಂದು ಚಿಕ್ಕ ಒಳಉಡುಪು ಧರಿಸಿದ ಚಿತ್ರಗಳು ಎಷ್ಟಿಲ್ಲ. ಐಶ್ವರ್ಯ ರೈ ಜತೆ ಬೇಕಾದಷ್ಟು ಆಡಿಕೊಂಡಿದ್ದ ಸಲ್ಮಾನ್ ಖಾನ್‌ನ ಸಂಭಾಷಣೆ ಪ್ರಕಟವಾಗಿದ್ದು ನೆನಪಿರಬಹುದು. ಆತ ಎಷ್ಟು ಬಾರಿ ಫ... ಎಂಬ ನಿಷೇಧಿತ ಶಬ್ದವನ್ನು ಬಳಸಿಲ್ಲ. ಯಾವ್ಯಾವ ಹೀರೋಯಿನ್‌ಗಳ ಜತೆಗೆ ತಾನು ಮಲಗಿದ್ದೆ ಎಂದು ಅತ ಹೇಳಿದ್ದನಲ್ಲ. ಆದರೆ, ಅದು ತಪ್ಪಲ್ಲ. ಏಕೆಂದರೆ, ಆತ ಪುರುಷ. ಅದಕ್ಕೇ, ಸಲ್ಮಾನ್ ಖಾನ್ ವಿರುದ್ಧವಾಗಲಿ, ಫರ್ದಿನ್ ಖಾನ್ ವಿರುದ್ಧವಾಗಿ ಯಾರೂ ಪತ್ವಾ ಹೊರಡಿಸಲಿಲ್ಲ.
ಇಷ್ಟಕ್ಕೂ ನಿಮಗೆ ಗೊತ್ತಲ್ಲ? ಯಾವಾಗಲೂ ಹೇಳದೇ ಮಾಡುವವ ರೂಢಿಯೊಳಗುತ್ತಮನು. ಆಡಿ ಮಾಡುವ ಮಧ್ಯಮನು. ಆಡಿಯೂ ಮಾಡದವ ಅಧಮನು ಎಂದು ಸರ್ವಜ್ಞನೇ ಹೇಳಿದ್ದಾನೆ. ಆದ್ದರಿಂದ ಸಂಪ್ರದಾಯದ ಪ್ರಕಾರ ಉತ್ತಮ ಮಹಿಳೆ ಎನ್ನಿಸಿಕೊಳ್ಳಬೇಕಾದರೆ ಯಾಮದೇ ಮಹಿಳೆ ಮಾಡಬೇಕಾದದ್ದು ಇಷ್ಟೇ... ಆಕೆ ವಿವಾಹದ ಮೊದಲಾಗಲೀ, ನಂತರವಾಗಲೀ, ಪತಿಯ ಜತೆಗಾಗಲೀ, ಮಿತ್ರನ ಜತೆಗಾಗಲೀ ಲೈಂಗಿಕತೆಯಲ್ಲಿ ತೊಡಗಬುಹುದು. ಆದರೆ, ಆಕೆ ಅದನ್ನ ಗುಪ್ತವಾಗಿ ಇಟ್ಟಿರಬೇಕು. ಅರ್ಥಾತ್ ಆಡದೇ ಮಾಡಬೇಕು. ಇದರಿಂದ ನಮ್ಮ ಸಂಸ್ಕೃತಿಗೆ ಅಪಚಾರವಿಲ್ಲ.
ಮದುವೆಗಿಂತ ಮೊದಲೇ ತಾಯಿಯಾದ ಕುಂತಿ ಕೊನೆಗೆ ವಿಷಯ ಬಯಲಾದಾಗ ದೋಷಾರೋಪಕ್ಕೆ ಒಳಗಾದಳು. ಆದರೆ, ಯಾರೂ ಇದಕ್ಕೆ ಕಾರಣನಾದ ಸೂರ್ಯನನ್ನು ದೂಷಿಸಲಿಲ್ಲ. ಇದೇ ತಾನೇ ನಮ್ಮ ಸಂಸ್ಕೃತಿ?
ಇಂತಿ ನೈತಿಕ ಕಮಾಂಡೋಗಳು
Kannada Prabha issue dated November 21, 2005
Sex for Naren Kartikeyan, No sex for Sania and Khushbu!
-
Tuesday, November 22, 2005
ಸಾನಿಯಾ, ಖುಷ್ಬುಗೆ ಸೆಕ್ಸ್ ನಿಷೇಧ: ನರೇನ್‌ಗೆ ಪರವಾನಗಿ!
Subscribe to:
Post Comments (Atom)
No comments:
Post a Comment