Showing posts with label Minimum Age for Marriage and Sex. Show all posts
Showing posts with label Minimum Age for Marriage and Sex. Show all posts

Tuesday, November 22, 2005

ಸಾನಿಯಾ, ಖುಷ್ಬುಗೆ ಸೆಕ್ಸ್‌ ನಿಷೇಧ: ನರೇನ್‌ಗೆ ಪರವಾನಗಿ!

ಸಲ್ಮಾನ್‌, ಫರ್ದಿನ್‌ ಖಾನ್‌ ವಿರುದ್ಧ ಫತ್ವಾ ಇಲ್ಲ. ಪುರುಷರಿಗೆ ಶಿಕ್ಷೆಯಿಲ್ಲ
- ನೈತಿಕ ಕಾಂಡೋಂಗಳ ಕರಪತ್ರ


ನಾಮ ಎಷ್ಟು ಸಂಪ್ರದಾಯ ರಕ್ಷಕರು ನೋಡಿ. ಸಾನಿಯಾ ಜತೆ, ಅದೇ ಸ್ಥಳದಲ್ಲಿ, ಅದೇ ಸಂದರ್ಭದಲ್ಲಿ, ಅದೇ ಕ್ಷಣದಲ್ಲಿ ಅದೇ ರೀತಿಯ ಹೇಳಿಕೆಯನ್ನು ನೀಡಿದ ನರೇನ್‌ ಕಾರ್ತಿಕೇಯನ್‌ ವಿರುದ್ಧ ನಾಮ ತಕರಾರು ಮಾಡಲೇ ಇಲ್ಲವಲ್ಲ. ಯಾಕೆ? ಮದುವೆಗಿಂತ ಮೊದಲೇ ತಾಯಿಯಾದ ಕುಂತಿ, ವಿಷಯ ಬಯಲಾದಾಗ ದೋಷಾರೋಪಕ್ಕೆ ಒಳಗಾದಳು. ಆದರೆ, ಯಾರೂ ಇದಕ್ಕೆ ಕಾರಣನಾದ ಸೂರ್ಯನನ್ನು ದೂಷಿಸಲಿಲ್ಲ. ಇದೇ ತಾನೇ ನಮ್ಮ ಸಂಸ್ಕೃತಿ?



ಮಹಾಜನಗಳೇ,
ನಾಮ ಈ ಭೂಮಿಯ ಸಾಮಾಜಿಕ, ಸಾಂಸ್ಕೃತಿಕ, ನೈತಿಕ ಹಾಗೂ ಚಾರಿತ್ರಿಕ ರಕ್ಷಕರು. ನಮ್ಮನ್ನು ಬೇಕಾದರೆ ನೀಮ, ಸಮಾಜ ಸಂಸ್ಕೃತಿಯ ಕಮಾಂಡೋಗಳು ಅಥವಾ ನೈತಿಕ ಕಾಂಡೋಂಗಳು ಅಂತ ಕರೆಯಬಹುದು. ಯಾವ್ಯಾವಾಗ ಧರ್ಮಕ್ಕೆ, ಸಂಸ್ಕೃತಿಗೆ ಚ್ಯುತಿಯಾಗುತ್ತದೋ, ಆಗೆಲ್ಲ ನಾಮ ಪ್ಯಾಕಿನಿಂದ ಹೊರಬರುತ್ತೇವೆ... ಅರ್ಥಾತ್‌ ಅವತರಿಸುತ್ತೇವೆ! ...ಸಂಭವಾಮಿ ಯುಗೇ ಯುಗೇ, ಅಂತ ಹೇಳಿದ ಆ ಕೃಷ್ಣ ಪರಮಾತ್ಮ ಎಲ್ಲಿ ಮಾಯವಾದನೋ ಗೊತ್ತಿಲ್ಲ! ನಾಮ ಮಾತ್ರ ಕರೆಕ್ಟಾಗಿ ಟೈಮಿಗೆ ಸರಿಯಾಗಿ ಅವತರಿಸುತ್ತೇವೆ.

ನಮ್ಮನ್ನು ನಾಮ ಸಂಸ್ಕೃತಿಯ ರಕ್ಷಕರು, ನೈತಿಕತೆಯ ಕಮಾಂಡೋಗಳು ಅಂತ ಕರೆದುಕೊಳ್ಳುತ್ತೇವೆ.
ನಮಗೆ ಕಾಂಡೋಂಗಳು ಅಂತ ಸೆಕ್ಸೀ ಹೆಸರೂ ಇದೆ. ಏಕೆಂದರೆ, ಮನುಷ್ಯನಿಗೆ ಏಡ್ಸ್‌ ರೋಗ ಹರಡುಮದನ್ನು ಕಾಂಡೋಂಗಳು ಹೇಗೆ ತಡೆಯುತ್ತವೋ ಅದೇ ರೀತಿ ನಾಮ ನಮ್ಮ ಧರ್ಮ ಮತ್ತು ಸಂಸ್ಕೃತಿಗೆ ಲೈಂಗಿಕ ರೋಗ ಹರಡುಮದನ್ನು ತಡೆಯುತ್ತೇವೆ. ನೈತಿಕತೆ ಕೆಡುಮದನ್ನು ತಡೆಯುತ್ತೇವೆ. ಅದಕ್ಕಾಗಿ, ನಮಗೆ ಈ ಅನ್ವರ್ಥಕ ನಾಮ.

ಮಹಾಜನಗಳೇ,
ಎಂಥಾ ಪುಣ್ಯ ಭೂಮಿಯಾಗಿತ್ತು ನಮ್ಮದು! ಒಂದು ಕಾಲದಲ್ಲಿ ಲೈಂಗಿಕ ಕ್ರಿಯೆಯೇ ಇಲ್ಲದೇ ಸಂತಾನ ಉತ್ಪತ್ತಿಯಾಗುತ್ತಿದ್ದ ದೇಶ ನಮ್ಮದು. ದೇಶದ ಆರಾಧ್ಯ ದೈವ ಗಣಪತಿ ಸೃಷ್ಟಿಯಾದದ್ದು ಪಾರ್ವತಿ ತನ್ನ ಮೈಕೆಸರಿನಿಂದ ಮಾಡಿದ ಮೂರ್ತಿಯಿಂದ. ನಂತರ ಆತನಿಗೆ ಆನೆಯ ಮುಖ ಬಂದಿದ್ದು ಅಂಗಾಂಗ ಕಸಿಯಿಂದ. ಶ್ರೀರಾಮಚಂದ್ರ ಆಂಡ್‌ ಬ್ರದರ್ಸ್‌ ಹುಟ್ಟಿದ್ದು ದಶರಥನ ರಾಣಿಯರಿಗೆ ಯಜ್ಞದಿಂದ ಪ್ರಾಪ್ತವಾದ ಪಾಯಸದಿಂದ. ಈ ವೈದ್ಯ ವಿಜ್ಞಾನವನ್ನೇ ಈಗ ಕೃತಕ ಗರ್ಭಧಾರಣೆ ಎನ್ನಲಾಗುತ್ತದೆ. ಹಾಗೆ ನೋಡಿದರೆ, ಕೌರವರು ವಿಶ್ವದ ಮೊದಲ ಸಾಮೂಹಿಕ ಟೆಸ್ಟ್‌ಟ್ಯೂಬ್‌ ಬೇಬಿಗಳು. ವ್ಯಾಸ ಮಹಾಮುನಿಗಳು ನೀಡಿದ ತುಪ್ಪವನ್ನು ತಾಯಿ ಗಾಂಧಾರಿ ನೂರು ಕುಂಭಗಳಲ್ಲಿ ತುಂಬಿಟ್ಟಳು. ಕೆಲ ತಿಂಗಳುಗಳ ನಂತರ ಆ ಕುಂಭಗಳಿಂದ ಕೌರವರು ಜನಿಸಿದರು. ಇವರಿಗಿಂತ ಮೊದಲು ದ್ರೋಣರು ಎಲೆಯ ತಟ್ಟೆಯಲ್ಲಿ ಜನ್ಮ ಪಡೆದಿದ್ದರಿಂದ ಅವರೇ ವಿಶ್ವದ ಮೊದಲ ಟೆಸ್ಟ್‌ಟ್ಯೂಬ್‌ ಬೇಬಿ ಇರಬಹುದು. ಪಾಂಡವರು ಹುಟ್ಟಿದ್ದು ಕುಂತಿಗೆ ಪ್ರಾಪ್ತವಾದ ಮಂತ್ರಶಕ್ತಿಯಿಂದ. ಇದನ್ನು ಅಲ್ಟ್ರಸೋನಿಕ್‌ ಗರ್ಭ ತಂತ್ರಜ್ಞಾನ ಎಂದು ಇನ್ನು ವಿಜ್ಞಾನಿಗಳು ಕಂಡುಹಿಡಿಯಬಹುದೇನೋ! ಈ ಎಲ್ಲ ಉದಾಹರಣೆಗಿಂತ ಹೆಚ್ಚಾಗಿ ಗಂಗಾ ನದಿಯ ತಟದ ಮೇಲೆ, ಯುವತಿಯಾಗಿದ್ದ ಕುಂತಿ ಸೂರ್ಯಮಂತ್ರವನ್ನು ಪಠಿಸಿ ಮಗ ಕರ್ಣನನ್ನು ಪಡೆದ ಕಥೆ ಜನಜನಿತ. ರಕ್ತಬೀಜಾಸುರ ಎಂಬ ರಾಕ್ಷಸನ ಹನಿ ಹನಿ ರಕ್ತ ಭೂಮಿಗೆ ಬಿದ್ದಾಗಲೂ ಬೀಜ ಅಂಕುರವೊಡೆದಂತೆ ನೂರಾರು, ಸಾವಿರಾರು ಸಂಖ್ಯೆಯಲ್ಲಿ ’ತದ್ರೂಪಿಗಳಂತೆ’ ಪುನರುತ್ಪತ್ತಿ ಆಗುತ್ತಿದ್ದರಂತೆ. ಇದನ್ನೇ ವಿಜ್ಞಾನಿಗಳು ರಕ್ತದ ಕಣದಿಂದ ತದ್ರೂಪಿಗಳನ್ನು ಸೃಷ್ಟಿಸುವ ಕ್ಲೋನಿಂಗ್‌ ತಂತ್ರಜ್ಞಾನ ಎಂದು ಕರೆಯುತ್ತಾರೆ.

ಇಂಥ ಸೆಕ್ಸ್‌ರಹಿತ ಸಂತಾನ ಭಾಗ್ಯವಿದ್ದ ಈ ಭರತಭೂಮಿಯಲ್ಲಿ ಇಂದು ಸಂತಾನ ಭಾಗ್ಯವೇ ಬೇಡದ ಲೈಂಗಿಕತೆ ವಿಜೃಂಭಿಸುತ್ತಿದೆ! ಭಾರತ ಕಾಮದೇವನ ಆಡುಂಬೋಲವಾಗಿದೆ.

ಸಾಲದು ಎಂಬಂತೆ ದೇಶದ ಹೆಣ್ಣುಮಕ್ಕಳೆಲ್ಲಾ ಯುವಕರಿಗೆ ಸೆಕ್ಸಾಯಣ ಸೂತ್ರ ಕಲಿಸುತ್ತಿದ್ದಾರೆ. ’ತಾಮ ಕೆಟ್ಟಿದ್ದಲ್ಲದೇ ನೀವೂ ಕೆಟ್ಟುಹೋಗಿ. ಈಗಿನ ಕಾಲದಲ್ಲಿ ನೀಮ ಕೆಟ್ಟು ಹೋಗುಮದನ್ನು ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ನೀಮ ಸುರಕ್ಷಿತ ರೀತಿಯಲ್ಲಿ ಕೆಟ್ಟು ಹೋಗಿ’ ಅಂತ ಧರ್ಮಬೋಧೆ ಮಾಡುತ್ತಿದ್ದಾರೆ. ಇಂಥ ಸೂತ್ರಗಳನ್ನು ಕಲಿಸುವ ಹಕ್ಕು ಇರುಮದು ವಾತ್ಸಾಯನನಂಥ ಮಹರ್ಷಿಗಳಿಗೆ ಮಾತ್ರ. ಇಡೀ ಪುರಾಣದಲ್ಲಿ ಯಾರಾದರೂ ಸ್ತ್ರೀ ಮಹರ್ಷಿ ಇಂತಹ ಉಪದೇಶ ಮಾಡಿದ ಉದಾಹರಣೆ ತೋರಿಸಿ!
‘ಈಗಿನ ಕಾಲದಲ್ಲಿ ಕನ್ಯೆಯರು ಕನ್ಯತ್ವ ಉಳಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ, ವಿದ್ಯಾವಂತ ಹುಡುಗರು ಕನ್ಯೆಯರನ್ನೇ ಮದುವೆಯಾಗುತ್ತೇವೆ ಎಂದು ಬಯಸುಮದಿಲ್ಲ.’ ಎಂಬರ್ಥದಲ್ಲಿ ಖುಷ್ಬು ಪ್ರವಚನ ನೀಡಿದ್ದಾಳೆ.

ಇದನ್ನು ಖುಷ್ಬು ಹೇಳಿರುಮದಕ್ಕೆ ನಮ್ಮ ವಿರೋಧವಿದೆ. ಅದನ್ನೇ ಯಾರಾದರೂ ಪುರುಷ ಹೇಳಿದ್ದರೆ ನಾಮ ಒಪ್ಪಿಕೊಳ್ಳುತ್ತಿದ್ದೆಮ.
ಈಗಿನ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದರೆ ಖುಷ್ಬು ಹೇಳಿರುಮದು ನಿಜ ಅಂತ ನಮಗೂ ಗೊತ್ತು. ಆದರೂ, ಆ ಸತ್ಯವನ್ನು ಹೇಳಲು ಆಕೆಗೆ ಹಕ್ಕಿಲ್ಲ ಅನ್ನುಮದೇ ನಮ್ಮ ಪ್ರಮುಖ ಆಕ್ಷೇಪ.

ಆಕೆ ಮದುವೆಗಿಂತ ಮೊದಲು ಕನ್ಯತ್ವ ಕಳೆದುಕೊಂಡಿದ್ದರೂ ನಮ್ಮ ಅಭ್ಯಂತರವಿಲ್ಲ. ಆಕೆ, ಸಿನಿಮಾಗಳಲ್ಲಿ ತನ್ನ ಬಹುತೇಕ ಅಂಗಾಂಗಗಳನ್ನು ತೋರಿಸಿರುಮದಕ್ಕೂ ನಮ್ಮ ತಕರಾರಿಲ್ಲ. ಆದರೆ, ಆ ಮಾತನ್ನು ಸಾರ್ವಜನಿಕವಾಗಿ ಆಕೆ ಹೇಳಬಾರದಿತ್ತು. ಇದು ನಮ್ಮ ಸಂಸ್ಕೃತಿಗೆ ತಕ್ಕುದಲ್ಲ.

ಇನ್ನು ಸಾನಿಯಾ ಕಥೆಯೂ ಅಷ್ಟೇ. ಆಕೆ, ಬುರ್ಖಾ ಹಾಕಿಕೊಂಡು ಟೆನಿಸ್‌ ಆಡುಮದು ಬಿಟ್ಟು ಚೋಟುದ್ದ ಲಂಗ ಹಾಕಿಕೊಂಡು ಟೆನಿಸ್‌ ಆಡುತ್ತಾಳೆ. ಟೈಟ್‌ ಟೀಶರ್ಟ್‌ ತೊಟ್ಟ ಆಕೆ ಶಾಟ್‌ ಹೊಡೆದರೆ, ನಮ್ಮ ಕಣ್ಣುಗಳೆಲ್ಲ ಆಟ ನೋಡುಮದು ಬಿಟ್ಟು ಆಕೆಯ ಮಾಟ ನೋಡುತ್ತವೆ.

ಟೆನಿಸ್‌ ಆಟಕ್ಕೇ ಇಷ್ಟು ಸಣ್ಣ ಬಟ್ಟೆ ತೊಟ್ಟುಕೊಳ್ಳುವ ಆಕೆ ಇನ್ನು ಈಜು ಸ್ಪರ್ಧೆಯಲ್ಲಿ ಭಾಗವಹಿಸುಮದಾದರೆ ಎಷ್ಟು ಬಟ್ಟೆ ತೊಟ್ಟುಕೊಳ್ಳುತ್ತಿದ್ದಳೋ ಅಂತ ಭಯವಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಆಕೆ ಕೂಡ ಖುಷ್ಬು ಮಾಡಿದ ತಪ್ಪನ್ನೇ ಮಾಡಿದ್ದಾಳೆ. ಅದಕ್ಕೇ ನೈತಿಕ ಕಾಂಡೋಮ್‌ಗಳಾದ ನಾಮ ಆಕೆಯ ವಿರುದ್ಧ ಫತ್ವಾ ಹೊರಡಿಸುವ ತಯಾರಿಯನ್ನು ಮಾಡಿಕೊಂಡಿದ್ದೇವೆ.

ನಾಮ ಎಷ್ಟು ಸಂಪ್ರದಾಯ ರಕ್ಷಕರು ನೋಡಿ. ಸಾನಿಯಾ ಜತೆ, ಅದೇ ಸ್ಥಳದಲ್ಲಿ, ಅದೇ ಸಂದರ್ಭದಲ್ಲಿ, ಅದೇ ಕ್ಷಣದಲ್ಲಿ ಅದೇ ರೀತಿಯ ಹೇಳಿಕೆಯನ್ನು ನೀಡಿದ ನರೇನ್‌ ಕಾರ್ತಿಕೇಯನ್‌ ವಿರುದ್ಧ ನಾಮ ತಕರಾರು ಮಾಡಲೇ ಇಲ್ಲವಲ್ಲ. ಯಾಕೆ ಹೇಳಿ?
ಯಾಕೆಂದರೆ, ಆತ ಪುರುಷ. ಆತನಿಗೆ ಸೆಕ್ಸ್‌ ಬಗ್ಗೆ ಅಥವಾ ವಿವಾಹ ಪೂರ್ವ ಸೆಕ್ಸ್‌ ಬಗ್ಗೆ ಮಾತನಾಡಲು ಪರವಾನಗಿಯಿದೆ. ಅದಕ್ಕಾಗಿ ಆತನ ವಿರುದ್ಧ ನಾಮ ಸೊಲ್ಲು ಎತ್ತಲಿಲ್ಲ. ನಾವಷ್ಟೇ ಏನು, ಸಾನಿಯಾ ಪ್ರಕರಣದ ಕುರಿತು ವರದಿ ಮಾಡಿದ ಭಾರತದ ಯಾವ ಪತ್ರಿಕೆಯೂ ಈ ಕುರಿತು ಪ್ರಶ್ನೆ ಹಾಕಲಿಲ್ಲ. ಏಕೆಂದರೆ, ಪುರಷರಿಗೆ ಲೈಂಗಿಕ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯ ನೀಡಿದೆ. ಮಹಿಳೆಯರಿಗೆ ನೀಡಿಲ್ಲ. ಈ ಸಂಪ್ರದಾಯದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವವಿಲ್ಲ. ಇದನ್ನು ಎಲ್ಲರೂ ಅರಿತು ನಡೆಯಬೇಕು.
ಅಷ್ಟೇ ಅಲ್ಲ. ಫರ್ದಿನ್‌ ಖಾನ್‌ ಎಂಬ ಸಿನಿಮಾ ನಟ ಕೇವಲ ಒಂದೇ ಒಂದು ಚಿಕ್ಕ ಒಳಉಡುಪು ಧರಿಸಿದ ಚಿತ್ರಗಳು ಎಷ್ಟಿಲ್ಲ. ಐಶ್ವರ್ಯ ರೈ ಜತೆ ಬೇಕಾದಷ್ಟು ಆಡಿಕೊಂಡಿದ್ದ ಸಲ್ಮಾನ್‌ ಖಾನ್‌ನ ಸಂಭಾಷಣೆ ಪ್ರಕಟವಾಗಿದ್ದು ನೆನಪಿರಬಹುದು. ಆತ ಎಷ್ಟು ಬಾರಿ ಫ... ಎಂಬ ನಿಷೇಧಿತ ಶಬ್ದವನ್ನು ಬಳಸಿಲ್ಲ. ಯಾವ್ಯಾವ ಹೀರೋಯಿನ್‌ಗಳ ಜತೆಗೆ ತಾನು ಮಲಗಿದ್ದೆ ಎಂದು ಅತ ಹೇಳಿದ್ದನಲ್ಲ. ಆದರೆ, ಅದು ತಪ್ಪಲ್ಲ. ಏಕೆಂದರೆ, ಆತ ಪುರುಷ. ಅದಕ್ಕೇ, ಸಲ್ಮಾನ್‌ ಖಾನ್‌ ವಿರುದ್ಧವಾಗಲಿ, ಫರ್ದಿನ್‌ ಖಾನ್‌ ವಿರುದ್ಧವಾಗಿ ಯಾರೂ ಪತ್ವಾ ಹೊರಡಿಸಲಿಲ್ಲ.

ಇಷ್ಟಕ್ಕೂ ನಿಮಗೆ ಗೊತ್ತಲ್ಲ? ಯಾವಾಗಲೂ ಹೇಳದೇ ಮಾಡುವವ ರೂಢಿಯೊಳಗುತ್ತಮನು. ಆಡಿ ಮಾಡುವ ಮಧ್ಯಮನು. ಆಡಿಯೂ ಮಾಡದವ ಅಧಮನು ಎಂದು ಸರ್ವಜ್ಞನೇ ಹೇಳಿದ್ದಾನೆ. ಆದ್ದರಿಂದ ಸಂಪ್ರದಾಯದ ಪ್ರಕಾರ ಉತ್ತಮ ಮಹಿಳೆ ಎನ್ನಿಸಿಕೊಳ್ಳಬೇಕಾದರೆ ಯಾಮದೇ ಮಹಿಳೆ ಮಾಡಬೇಕಾದದ್ದು ಇಷ್ಟೇ... ಆಕೆ ವಿವಾಹದ ಮೊದಲಾಗಲೀ, ನಂತರವಾಗಲೀ, ಪತಿಯ ಜತೆಗಾಗಲೀ, ಮಿತ್ರನ ಜತೆಗಾಗಲೀ ಲೈಂಗಿಕತೆಯಲ್ಲಿ ತೊಡಗಬುಹುದು. ಆದರೆ, ಆಕೆ ಅದನ್ನ ಗುಪ್ತವಾಗಿ ಇಟ್ಟಿರಬೇಕು. ಅರ್ಥಾತ್‌ ಆಡದೇ ಮಾಡಬೇಕು. ಇದರಿಂದ ನಮ್ಮ ಸಂಸ್ಕೃತಿಗೆ ಅಪಚಾರವಿಲ್ಲ.

ಮದುವೆಗಿಂತ ಮೊದಲೇ ತಾಯಿಯಾದ ಕುಂತಿ ಕೊನೆಗೆ ವಿಷಯ ಬಯಲಾದಾಗ ದೋಷಾರೋಪಕ್ಕೆ ಒಳಗಾದಳು. ಆದರೆ, ಯಾರೂ ಇದಕ್ಕೆ ಕಾರಣನಾದ ಸೂರ್ಯನನ್ನು ದೂಷಿಸಲಿಲ್ಲ. ಇದೇ ತಾನೇ ನಮ್ಮ ಸಂಸ್ಕೃತಿ?

ಇಂತಿ ನೈತಿಕ ಕಮಾಂಡೋಗಳು


Kannada Prabha issue dated November 21, 2005
Sex for Naren Kartikeyan, No sex for Sania and Khushbu!

-

Tuesday, October 11, 2005

೧೫ಕ್ಕೆ ಮದುವೆ ಓಕೆ. ೧೬ಕ್ಕೆ ಸೆಕ್ಸ್‌ ಓಕೆ. ೧೮ಕ್ಕೆ ಕಾಯಬೇಕೆ?

ಕೋರ್ಟಿನ ಪರ್ಮಿಶನ್‌ ಇರುವಾಗ ನಿನ್ನದೇನು ಅಡ್ಡಿ ಪ್ರಿಯೆ!
- ಲೈಲಾಗೆ ಮಜನೂ ಇಮೇಲ್‌

ಗ್ಲೋಬಲ್‌ ಫಂಡಾ ಹೇಗಿದೆ ನೋಡು. ವಾಷಿಂಗ್‌ಟನ್‌ನಲ್ಲಿ ೧೬ ವರ್ಷದ ಹುಡುಗಿ ಮದುವೆಯಾಗಲು ಪಾಲಕರ ಒಪ್ಪಿಗೆ ಬೇಕು. ಹಾಗೂ ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಲು ಕನಿಷ್ಠ ೧೮ ವರ್ಷ ತುಂಬಿರಬೇಕು. ಆದರೆ, ಲೋಕಲ್‌ ಫಂಡಾ ಉಲ್ಟಾ! ಭಾರತದಲ್ಲಿ ೧೬ ವರ್ಷದ ಹುಡುಗಿ ತನ್ನ ಸ್ವಂತ ನಿರ್ಧಾರದಿಂದ ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಬಹುದು. ಪಾಲಕರೇ ಮಗಳ ಮದುವೆ ಮಾಡುಮದಾದರೆ ಆಕೆಗೆ ೧೮ ವರ್ಷ ತುಂಬಬೇಕು. ಇದ್ಯಾವ ನ್ಯಾಯ?

ಡಿಯರ್‌ ಲೈಲಾ,
ನಿಸ್ವಾರ್ಥ ಪ್ರೀತಿಗಾಗಿ ನಾಮ ಜೀವತ್ಯಾಗ ಮಾಡಿ ಎಷ್ಟು ವರ್ಷಗಳಾದವಲ್ಲ? ಆದರೂ ನೋಡು ನಮ್ಮ ಪ್ರೀತಿ ಹೇಗೆ ಅಮರವಾಗಿದೆ. ಈ ಕ್ಷಣ ಕೂಡ ನಿನ್ನನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂದರೆ ರೋಮಿಯೋ -ಜೂಲಿಯಟ್‌ ಕೂಡ ಅಸೂಯೆ ಪಡಬೇಕು. ಐಶ್‌ ಮತ್ತು ವಿವೇಕ್‌ ಬಗ್ಗೆ ಸಲ್ಮಾನ್‌ ಅಸೂಯೆ ಪಡುಮದಿಲ್ಲವೇ ಹಾಗೆ!

ಒಮ್ಮೊಮ್ಮೆ ಅನಿಸುತ್ತದೆ... ನಮಗೆಲ್ಲ ಮದುವೆಯಾಗದಿರುಮದೇ ಒಳ್ಳೆಯದಾಯಿತು. ನಾಮ ಅಮರ ಪ್ರೇಮಿಗಳಾಗಿಯಾದರೂ ಉಳಿದೆಮ. ನಮಗೂ ಮದುವೆಯಾಗಿದ್ದರೆ ನಮ್ಮ ಪ್ರೀತಿ ಚಿರಾಯುವಾಗುತ್ತಿರಲಿಲ್ಲವೋ ಏನೋ! ಬಹುತೇಕ ಗಂಡ ಹೆಂಡಿರಂತೆ ನಾವೂ ಜಗಳವಾಡುತ್ತಿದ್ದೆವೋ ಏನೋ! ನಮ್ಮದೂ ಡೈವೋರ್ಸ್‌ ಆಗಿಬಿಡುತ್ತಿತ್ತೋ ಏನೋ!

ಇಷ್ಟಕ್ಕೂ ಭೂಮಿಯಲ್ಲಿ ಕೋರ್ಟುಗಳು ಇರುವವರೆಗೂ ಡೈವೋರ್ಸ್‌ಗಳು ತಪ್ಪಿದ್ದಲ್ಲ. ಈತ್ತೀಚೆಗಂತೂ ಮದುವೆಗಳಿಗಿಂತ ಡೈವೋರ್ಸ್‌ಗಳೇ ಹೆಚ್ಚಾಗಿರುವಂತೆ ತೋರುತ್ತದೆ. ಅದಕ್ಕೇ ಯಾರೋ ತಮಾಷೆ ಮಾಡುತ್ತಿದ್ದರು. ಸ್ವರ್ಗದಲ್ಲಿ ಮದುವೆಯಾಗುತ್ತದೆ. ನರಕದಲ್ಲಿ ದಾಂಪತ್ಯ ಸಾಗುತ್ತದೆ. ಕೋರ್ಟುಗಳಲ್ಲಿ ಪರ್ಯವಸಾನವಾಗುತ್ತದೆ ಅಂತ.
ಪ್ರಿಯ ಲೈಲಾ, ಇಲ್ಲೊಬ್ಬಳು ಬಾಲೆಯ ಮದುವೆಗೆ ಕೋರ್ಟೇ ಬೆಂಬಲ ನೀಡಿದ ಕಥೆ ಕೇಳು ಗೆಳತಿ.

ಆಕೆಗೆ ಇನ್ನೂ ೧೬ ವರ್ಷ. ಆತನಿಗೆ ೨೧ರ ಪ್ರಾಯ. ನನ್ನ ನಿನ್ನಂತೆ ಅವರಿಗೂ ಸ್ಕೂಲಿನಲ್ಲಿ ಪ್ರೇಮಾಂಕುರ. ನನ್ನ-ನಿನ್ನಪ್ಪನಂತೆ ಇವರ ಪ್ರೇಮಕ್ಕೂ ಪಾಲಕರ ಅಡ್ಡಗಾಲು. ಹುಡುಗಿ ನಿನ್ನಂತೆ ಪುಕ್ಕಲಲ್ಲ. ಪ್ರಿಯಕರನೊಡನೆ ಓಡಿ ಹೋಗಿ ಮದುವೆಯಾದಳು. ಆದರೆ, ಕಾನೂನು ಪ್ರಕಾರ ಆಕೆಗಿನ್ನೂ ಮದುವೆಯ ವಯಸ್ಸಾಗಿಲ್ಲ. ೧೮ ವರ್ಷವಾದರೆ ಮಾತ್ರ ಆಕೆ ಮದುವೆಗೆ ಪ್ರಾಪ್ತವಯಸ್ಕಳು ಅಂತ ’ಹಿಂದೂ ವಿವಾಹ ಕಾಯ್ದೆ -೧೯೫೫’ ಸ್ಪಷ್ಟವಾಗಿ ತಿಳಿಸುತ್ತದೆ. ಸರಿ, ಹುಡುಗಿಯ ಅಪ್ಪ ಈ ಎಳೆ ದಂಪತಿಗಳನ್ನು ದೆಹಲಿ ಹೈಕೋರ್ಟಿಗೆ ಎಳೆದರು. ಹುಡುಗಿ ಇನ್ನೂ ಅಪ್ರಾಪ್ತಳು. ಆದ್ದರಿಂದ ಮದುವೆಯನ್ನು ಕ್ಯಾನ್ಸಲ್‌ ಮಾಡಿಸಿ ಕೊಡಿ ಎಂದು ನ್ಯಾಯಾಧೀಶರನ್ನು ಕೋರಿದರು. ಮೊಕದ್ದಮೆ ತಿಂಗಳಾನುಗಟ್ಟಲೆ ನಡೆಯಿತು. ನ್ಯಾಯಾಧೀಶರು ಏನು ತೀರ್ಪು ಕೊಟ್ಟರು ಗೊತ್ತಾ?

ಈ ಮದುವೆ ಕಾನೂನು ಬಾಹಿರ ಅಲ್ಲ. ಯಾಕೆಂದರೆ ಹುಡುಗಿ ತನ್ನ ’ವಿವೇಚನಾ ಕೋಟಾದಲ್ಲಿ’ ಮದುವೆಯಾಗಿದ್ದಾಳೆ! ಯಾವ ಹುಡುಗಿ ಸ್ವಂತ ವಿವೇಚನೆಯ ವಯಸ್ಸನ್ನು ತಲುಪುತ್ತಾಳೋ ಆಕೆ ತನ್ನ ನಿರ್ಧಾರದ ಪ್ರಕಾರ ಮದುವೆಯಾಗಬಹುದು. ಭಾರತದಲ್ಲಿ ೧೫ನೇ ವಯಸ್ಸಿಗೆ ಹುಡುಗಿಯರು ಸ್ವಂತ ವಿವೇಚನೆಯುಳ್ಳವರಾಗುತ್ತಾರೆ. ಆದ್ದರಿಂದ ಆಕೆ ಗಂಡನೊಂದಿಗೆ ಇರಬಹುದು ಅಂತ ದೆಹಲಿ ಹೈಕೋರ್ಟು ನವದಂಪತಿಗಳ ಪರ ತೀರ್ಮಾನ ಪ್ರಕಟಿಸಿತು.

ಇದೂ ಒಂದು ವಿಚಿತ್ರವೇ! ೧೫ರ ವಯಸ್ಸಿಗಷ್ಟೇ ಏನು... ನಿನ್ನಂಥ ಹುಡುಗಿಯರಿಗೆ ಎಂದಿಗಾದರೂ ವಿವೇಚನೆ ಮೂಡುತ್ತದೆಯೇ? ವಿವೇಚನೆ ಇದ್ದರೆ ಪ್ರೀತಿಗೆ ಸಿಲುಕುತ್ತಾರಾ? ಮದುವೆ ಆಗುತ್ತಾರಾ? ಏನೋ... ಹೈಕೋರ್ಟು ಅದರ ವಿವೇಚನೆಗೆ ಬಂದದ್ದನ್ನು ಹೇಳಿದೆ. ಆದರೆ, ಹುಡುಗರ ವಿಷಯದಲ್ಲಿ ಕೋರ್ಟು ಯಾಕೆ ಅದನ್ನೂ ಹೇಳಿಲ್ಲ? ಹುಡುಗರಿಗೆ ಯಾವ ವಯಸ್ಸಿನಲ್ಲೂ ವಿವೇಚನೆ ಬರುಮದೇ ಇಲ್ಲವೇ?

ಇಲ್ಲಿಯವರೆಗೆ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಮದುವೆ ಕಾನೂನುಬಾಹಿರ ಎನ್ನುತ್ತಿದ್ದ ಕಾನೂನು ಈಗ ದಿಢೀರ್‌ ಆಗಿ ೧೫ರ ಹೊಸ ರಾಗ ಹಾಡಿದೆ.

ಹಾಗೆ ನೋಡಿದರೆ, ಇದು ಹೊಸ ರಾಗವೇನೂ ಅಲ್ಲ ಅಂತ ಕೋರ್ಟು ಹೇಳಿದೆ. ಕೆಲಮ ವರ್ಷಗಳ ಹಿಂದೆಯೇ ಸುಪ್ರೀಂ ಕೋರ್ಟು, ಹಿಮಾಚಲ ಪ್ರದೇಶದ ಹೈಕೋರ್ಟು ಮತ್ತು ಚೆನ್ನೈ ಕೋರ್ಟುಗಳು ಇದೇ ರೀತಿಯ ತೀರ್ಪು ನೀಡಿವೆಯಂತೆ.

ಈ ತೀರ್ಪಿನ ವಿರುದ್ಧ ರೇಣುಕಾ ಚೌಧರಿ, ಬಂದಾ ಕಾರಟ್‌ ಮುಂತಾದ ಮಹಿಳಾ ಸುಧಾರಕ ಮಹಿಳೆಯರೆಲ್ಲ ಧ್ವನಿ ಎತ್ತಿದ್ದಾರೆ. ಈ ತೀರ್ಪಿನಿಂದ ಬಾಲ್ಯ ವಿವಾಹ ಪದ್ಧತಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಒಂದು ವೇಳೆ ೧೫ಕ್ಕೆ ಮದುವೆಯ ವಿವೇಚನೆಗೆ ಕಾನೂನು ಅಸ್ತು ಅನ್ನುಮದಾದರೆ ಮಹಿಳೆಯರಿಗೆ ೧೫ಕ್ಕೆ ಮತದಾನದ ಹಕ್ಕು , ಡ್ರೆೃವಿಂಗ್‌ ಲೈಸನ್ಸ್‌ ನೀಡಬೇಕು ಎಂದೆಲ್ಲಾ ಹುಯಿಲೆಬ್ಬಿಸಿದ್ದಾರೆ. ಅದೆಲ್ಲ ಹಾಗಿರಲಿ...

ಗ್ಲೋಬಲ್‌ ಫಂಡಾ ಹೇಗಿದೆ ನೋಡು. ವಾಷಿಂಗ್‌ಟನ್‌ನಲ್ಲಿ ೧೬ ವರ್ಷದ ಹುಡುಗಿ ಮದುವೆಯಾಗಲು ಪಾಲಕರ ಒಪ್ಪಿಗೆ ಬೇಕು. ಆದರೆ, ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಲು ಕನಿಷ್ಠ ೧೮ ವರ್ಷ ತುಂಬಿರಬೇಕು. ಆದರೆ, ಲೋಕಲ್‌ ಫಂಡಾ ಉಲ್ಟಾ! ಭಾರತದಲ್ಲಿ ೧೬ ವರ್ಷದ ಹುಡುಗಿ ತನ್ನ ಸ್ವಂತ ನಿರ್ಧಾರದಿಂದ ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಬಹುದು. ಪಾಲಕರು ಮಗಳ ಮದುವೆ ಮಾಡುಮದಾದರೆ ಆಕೆಗೆ ೧೮ ವರ್ಷ ತುಂಬಬೇಕು. ಇದ್ಯಾವ ನ್ಯಾಯ?

ಈ ನಡುವೆ ಪ್ರಾಪ್ತ ಮತ್ತು ಅಪ್ರಾಪ್ತ ವಯಸ್ಸಿನ ಕುರಿತು ಗೊಂದಲ ಉಂಟಾಗಿದೆ. ಇಂಡಿಯನ್‌ ಮೆಜಾರಿಟಿ ಆಕ್ಟ್‌ ೧೮೭೫ ಪ್ರಕಾರ ೧೮ಕ್ಕಿಂತ ಕಡಿಮೆ ವಯಸ್ಸಿನ ಹುಡುಗ ಅಥವಾ ಹುಡುಗಿಯರು ಅಪ್ರಾಪ್ತ ವಯಸ್ಕರು (Minors) ಆದರೆ, ಬಾಂಬೇ ಪ್ರಿವೆಂನ್‌ಶನ್‌ ಆಫ್‌ ಹಿಂದು ಬೈಗಮಸ್‌ ಮ್ಯಾರಿಯೇಜ್‌ ಆಕ್ಟ್‌ ೧೯೪೬ರ ಪ್ರಕಾರ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಪ್ರಾಪ್ತರು. ಇದು ಹೇಗೆ ಸಾಧ್ಯ!

ಲೈಲಾ ಓ ಲೈಲಾ ಲೈಲಾ...
ಈ ಕಾನೂನು ಎಷ್ಟು ಮಜವಾಗಿದೆ ಅಂತೀಯಾ? ಇಲ್ಲಿವೆ ಕೆಲಮ ಸ್ಯಾಂಪಲ್‌ ನೋಡು.
ಎಳೆಯ ವಯಸ್ಸಿಗೇ ಪತ್ನಿಯಾಗುವ ಹಕ್ಕನ್ನುಇಂಡಿಯನ್‌ ಪೀನಲ್‌ ಕೋಡ್‌ನ ೩೭೫ನೇ ಸೆಕ್ಷನ್‌ ಕಿತ್ತುಕೊಳ್ಳುಮದಿಲ್ಲ. ಆದರೆ, ಸೆಕ್ಸ್‌ ವಿಚಾರದಲ್ಲಿ ಕಟ್ಟಳೆಯನ್ನು ಹೇರುತ್ತದೆ. ಈ ಸೆಕ್ಸ್‌-ನ್‌ ಪ್ರಕಾರ ಹೆಂಡತಿಗೆ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದಲ್ಲಿ ಆಕೆ ಸಮ್ಮತಿಸಿದರೂ ಕೂಡ ಗಂಡ ಆಕೆಯೊಂದಿಗೆ ಸೆಕ್ಸಿಗೆ ಇಳಿಯುವಂತಿಲ್ಲ. ಹಾಗೇನಾದರೂ ಮಾಡಿದರೆ ಅದು ರೇಪ್‌ ಆಗುತ್ತದೆ. ಅಂದರೆ ಎಳೆಯ ವಯಸ್ಸಿಗೆ ಮದುವೆಯಾದರೂ ಪ್ರಸ್ತ ಮಾಡಬಾರದು ಎಂದರ್ಥ!

ಆದರೆ ಮಣಿಪುರದಲ್ಲಿ ಈ ಕಾನೂನನ್ನು ಸಡಿಲಗೊಳಿಸಲಾಗಿದ್ದು ಅಲ್ಲಿ ೧೩ನೇ ವಯಸ್ಸಿಗೇ ಪತ್ನಿಯೊಂದಿಗೆ ಸೆಕ್ಸ್‌ ಸಾಧ್ಯ.

ಅರೆ ಓ ಲೈಲಾ...
ಮದುವೆಯಾಗದಿದ್ದರೂ ೧೬ ವರ್ಷದ ಬಾಲಕಿ ಕಾನೂನು ಪ್ರಕಾರ ಲೈಂಗಿಕ ಕ್ರಿಯೆಗೆ ತಾನು ಇಚ್ಛಿಸಿದ ವ್ಯಕ್ತಿಗೆ ಸಮ್ಮತಿ ನೀಡಬಹುದು. ಐಪಿಸಿ ೩೭೫ರ ಪ್ರಕಾರ ೧೬ಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಜೊತೆ, ಆಕೆ ಸಮ್ಮತಿಯಿದ್ದರೂ, ಲೈಂಗಿಕ ಕ್ರಿಯೆ ನಡೆಸುಮದು ಅಪರಾಧ. ಆದರೆ ಹುಡುಗರು ೨೧ ವರ್ಷಕ್ಕಿಂತ ಮೊದಲು ಇಂತಹ ಯಾಮದೇ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುಮದು ಅಪರಾಧ ಅಂತ ಕಾಣುತ್ತೆ!

ಈಗ ಹೇಳು ಪ್ರಿಯೆ... ಕಾನೂನು ಪ್ರಕಾರ ೧೫ಕ್ಕೆ ಮದುವೆ ಓಕೆ. ೧೬ಕ್ಕೆ ಸೆಕ್ಸಿಗೂ ಓಕೆ. ಹಾಗಾದರೆ ೧೮ ವರ್ಷಕ್ಕೆ ನೀನು ಪ್ರಾಪ್ತ ವಯಸ್ಕಳಾಗುವವರೆಗೂ ಕಾಯಬೇಕು ಯಾಕೆ? ಛೆ... ಈ ಕಾನೂನುಗಳೆಲ್ಲ ಬರೀ ಶಬ್ದಗಳ ವಾದ-ವಿವಾದ, ಬುದ್ಧಿವಂತಿಕೆಯ ಘರ್ಷಣೆ. ಲೈ...ಲಾ... ಲಾ is an ass! ಕಾನೂನು ಒಂದು ಕತ್ತೆ! ಆದರೆ, ಪ್ರೀತಿಗೆ ಕಾನೂನು ಕಟ್ಟಳೆಯಿಲ್ಲ. ವಯಸ್ಸಿನ ಹಂಗಂತೂ ಇಲ್ಲವೇ ಇಲ್ಲ. All is fair in love and war. ಹಾಗಂತ ಅಲಿಖಿತ ಶಾಸನವಿದೆ ನಿನಗೆ ಗೊತ್ತಲ್ಲ ಅಷ್ಟು ಸಾಕು. ನಾಮ ಮದುವೆಯ ಗೊಂದಲಕ್ಕೆ ಸಿಲುಕಿಕೊಳ್ಳುಮದು ಬೇಡ. ಪ್ರೇಮಿಗಳಾಗೇ ಅಮರವಾಗಿರೋಣ.

ಇಂತಿ ನಿನ್ನ
ಮಜನೂ

Kannada Prabha Issue Dated - October 10, 2005
Marriage at 15: Ok, Sex at 16: Ok. Why wait till 18?
On the Minimum Age for Marriage and Sex

-