Tuesday, April 25, 2006

ದೇವೇಗೌಡರ ಆಶೀರ್ವಾದದ ಪರಿಣಾಮಗಳ ಅಧ್ಯಯನ

ಭೂತ, ವರ್ತಮಾನ ಹಾಗೂ ಭವಿಷ್ಯದಲ್ಲಿ ಅವರ ಆಶೀರ್ವಾದದಿಂದ ಏನೇನಾಗುತ್ತದೆ
- ಒಂದು ಸಂಶೋಧನಾ ಪ್ರಬಂಧ

‘ದೇವೇಗೌಡರ ಆಶೀರ್ವಾದ ಇಲ್ಲದಿದ್ದರೆ ಇಷ್ಟೆನ್ನೆಲ್ಲ ಮಾಡಲು ತಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಇದರ ಸಂಪೂರ್ಣ ಕೀರ್ತಿ ದೇವೇಗೌಡರಿಗೇ ಸಲ್ಲಬೇಕು’ ಎಂದು ಧರ್ಮಸಿಂಗ್‌ ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಇಂಥ ದೇವೇಗೌಡರ ಆಶೀರ್ವಾದ ಈಗ ಕುಮಾರಸ್ವಾಮಿಯವರಿಗೂ ಸಿಗಲು ಆರಂಭವಾಗಿದೆ! ಈ ಆಶೀರ್ವಾದದ ಫಲ ಹೇಗಿರುತ್ತದೆ ಎಂಬುದನ್ನು ನಾಮ ಕಾದು ನೋಡೋಣ ಮಗಾ.


ಪ್ರೀತಿಯ ಕುಮಾರಸಿಂಗನಿಗೆ,

ಈ ನಿನ್ನ ತಂದೆ ಗ್ರಾಮಸಿಂಗ ಮಾಡುವ ಆಶೀರ್ವಾದಗಳು. ಈಗಾಗಲೇ, ಮುಕ್ಕೋಟಿ ದೇವತೆಗಳು ಹಾಗೂ ಪಂಚಕೋಟಿ ಕನ್ನಡಿಗರ ಆಶೀರ್ವಾದ ಪಡೆದ ನಿನಗೆ ನನ್ನೊಬ್ಬನ ಆಶೀರ್ವಾದ ಮಾತ್ರ ಬಾಕಿ ಇತ್ತು. ಇಗೋ, ನಾನೂ ನಿನಗೆ ಆಶೀರ್ವಾದ ಮಾಡಿದ್ದೇನೆ. ಇದರೊಂದಿಗೆ, ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಆಶೀರ್ವಾದ ಪಡೆದ ಗಿನ್ನೆಸ್‌ ದಾಖಲೆ ನಿನ್ನದಾಗಬಹುದು.

ಬೈ ದ ವೇ ಮಗಾ, ಈ ಧರ್ಮಸಿಂಗರಿಗೆ ಈಗ ದಿಢೀರಾಗಿ ಧೈರ್ಯ ಬಂದಂತಿದೆ ಅಲ್ಲವಾ? ಅವರು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರ ವಿರುದ್ಧ ಒಂದಕ್ಷರ ಮಾತಾಡಲೂ ಅಂಜುತ್ತಿದ್ದರು. ಈಗ ನೋಡು, ಗೌಡರ ವಿರುದ್ಧ ಹೇಗೆ ಕಿಡಿಕಾರುವ ಸಾಮರ್ಥ್ಯ ಬಂದಿದೆ. ಈ ರೀತಿಯ ಶಕ್ತಿ ಅವರಿಗೆ ಎಲ್ಲಿಂದ ಬಂತು? ಯಾವ ಟಾನಿಕ್‌ ತಗೊಂಡರು ಗೊತ್ತಾಗ್ತಿಲ್ವೇ!

ಧರ್ಮಸಿಂಗರು ಸಹನೆಯ ಸಾಕ್ಷಾತ್‌ ಸ್ವರೂಪಿಯಷ್ಟೇ ಅಲ್ಲ... ಮಹಾ-ಸ್ವರೂಪಿ ಕೂಡ ಹೌದು. ಇನ್‌ಫ್ಯಾಕ್ಟ್‌ ಕುಮಾರಸ್ವಾಮಿ ಅವರಿಗಿಂತ ಧರ್ಮಸಿಂಗ್‌ ಸಹನೆ, ಮೆಲು ಮಾತು, ಸಮಚಿತ್ತದಲ್ಲಿ ಒಂದು ಮಣ ಹೆಚ್ಚೇ ತೂಗುತ್ತಿದ್ದರು. ಧರ್ಮಸಿಂಗರಿಗೂ ಕುಮಾರಸ್ವಾಮಿಗೂ ಎರಡು ಮೇಜರ್‌ ವ್ಯತ್ಯಾಸಗಳಿವೆ.

ವ್ಯತ್ಯಾಸ ಒಂದು - ಕುಮಾರಸ್ವಾಮಿ ನಿದ್ದೆ ಮಾಡುಮದೇ ಅಪರೂಪ. ಆದರೆ, ಧರ್ಮಸಿಂಗ್‌ ನಿದ್ದೆಯಿಂದ ಎದ್ದೇಳುಮದರಲ್ಲೂ ಬಹಳ ಸಹನಾಶೀಲ! ವ್ಯತ್ಯಾಸ ಎರಡು - ಯಾಮದೇ ವಿಷಯ ಎದುರಾದರೂ ಧರ್ಮಸಿಂಗ್‌ ನೋಡೋಣ್‌ ಬಿಡ್ರಿ... ಮಾಡೋಣ್‌ ಬಿಡ್ರಿ... ಎನ್ನುವ ಅಣಿಮುತ್ತು ಉದುರಿಸುತ್ತಿದ್ದರು. ಈಗ ಕುಮಾರಸ್ವಾಮಿ ಯಾಮದೇ ವಿಷಯ ಎದುರಾದರೂ ಒಂದು ದಿಢೀರ್‌ ಭರವಸೆ ಬಿಸಾಕುತ್ತಾರೆ!

ಧರ್ಮಸಿಂಗ್‌ ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತಷ್ಟೂ ಕಾಲ, ಒಂದು ಕ್ಷಣವೂ ತಮ್ಮ ಸಹನೆಯನ್ನು ಕಳೆದುಕೊಂಡವರಲ್ಲ. ಪತ್ರಕರ್ತರನ್ನೂ ಸೇರಿದಂತೆ ಯಾರ ಮೇಲೂ ಸಿಡುಕಿದವರಲ್ಲ. ಸೋನಿಯಾ ಗಾಂಧಿಯವರನ್ನೂ, ದೇವೇಗೌಡರನ್ನೂ ಸಮಚಿತ್ತದಿಂದ ಸ್ವೀಕರಿಸಿದರು. ಗೌಡರ ಆದೇಶವನ್ನೂ ಶಿರಸಾವಹಿಸಿದರು. ಸೋನಿಯಾ ಕಮಾಂಡನ್ನೂ ಅಕ್ಷರಶಃ ಪಾಲಿಸಿದರು. ಆದ್ದರಿಂದಲೇ, ದೇವೇಗೌಡರಿಂದಲೂ ಭೇಷ್‌ ಎನ್ನಿಸಿಕೊಂಡರು. ಸೋನಿಯಾರಿಂದಲೂ ಭಲೆ ಅನ್ನಿಸಿಕೊಂಡರು.

ಇದೊಂದು ಮುಖ್ಯವಾದ ವಿಚಾರ. ದೇವೇಗೌಡರು ಬೇರೆ ಪಕ್ಷದ ನರಪಿಳ್ಳೆ ಹಾಗಿರಲಿ, ಸೊಳ್ಳೆಯನ್ನು ಕೂಡ ಹೊಗಳುವಂಥವರಲ್ಲ. ಅಂಥವರೂ ಸಹ ಧರ್ಮಸಿಂಗರನ್ನು ಅತ್ಯುತ್ತಮ ಮುಖ್ಯಮಂತ್ರಿ ಎಂದೇ ಹೊಗಳುತ್ತಿದ್ದರು! ಹೀಗೆ ದೇವೇಗೌಡರ ಆಶೀರ್ವಾದ ಪಡೆದ ಕಾಂಗ್ರೆಸ್ಸಿನ ಏಕೈಕ ವ್ಯಕ್ತಿ ಧರ್ಮಸಿಂಗ್‌ ಮಾತ್ರ ಎಂದು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆಯಾಗಬಹುದು!

ಅದೇ ರೀತಿ, ದೇಶಾದ್ಯಂತ ಇಡೀ ಕಾಂಗ್ರೆಸ್ಸು ದೇವೇಗೌಡರನ್ನು ವಿರೋಧಿಸುತ್ತಿದ್ದರೂ ಒಬ್ಬ ಧರ್ಮಸಿಂಗ್‌ ಮಾತ್ರ ದೇವೇಗೌಡರನ್ನು ಸ್ತುತಿಸುತ್ತಿದ್ದರು. ಸರ್ಕಾರ ಪತನವಾದ ಕ್ಷಣದಲ್ಲೂ ಧರ್ಮಸಿಂಗ್‌ ದೇವೇಗೌಡರ ಪರವಾಗೇ ಮಾತನಾಡಿದ್ದರು. ಎಲ್ಲಾ ತಪ್ಪೂ ಗೌಡರ ಮಗಂದೇ. ದೇವೇಗೌಡರದ್ದು ಯಾಮದೇ ತಪ್ಪಿಲ್ಲ ಎಂದು ಧರ್ಮಸಿಂಗ್‌ ಸಾರಿ.. ಸಾರಿ.. ಹೇಳಿದ್ದರು. ಇಷ್ಟು ಆತ್ಮೀಯವಾಗಿತ್ತು ದೇವೇಗೌಡರು ಮತ್ತು ಧರ್ಮಸಿಂಗರ ಸಂಬಂಧ.

ಮಗಾ... ಈಗ ನೋಡು ಪರಿಸ್ಥಿತಿ ಹೇಗಾಗಿದೆ! ಧರ್ಮಸಿಂಗ್‌ -ದೇವೇಗೌಡರ ಸಂಬಂಧ ಭಾರತ -ಪಾಕಿಸ್ತಾನ್‌ ಥರ ಆಗಿದೆ! ಎಂದೂ ದೇವೆಗೌಡರಿಗೆ ಎದುರಾಡದ ಧರ್ಮಸಿಂಗ್‌ ಈಗ ದೇವೇಗೌಡರ ವಿರುದ್ಧವೇ ನೇರಾನೇರ ಆರೋಪ ಮಾಡುತ್ತಿದ್ದಾರೆ. ದೇವೇಗೌಡರು ತಮಗೆ ಬರೆದ ’ಪ್ರೇಮಪತ್ರ’ಗಳ ಸಂಪುಟ ಪ್ರಕಟಿಸುತ್ತೇನೆ ಎಂದು ಧರ್ಮಸಿಂಗರು ಧಮಕಿ ಹಾಕಿದ್ದಾರೆ. ತಾಮ ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ಸರ್ಕಾರದ ಆಡಳಿತದ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪದೇ ಪದೆ ಸೋಲುತ್ತಿರುಮದಕ್ಕೆ ದೇವೇಗೌಡರ ತಪುý್ಪ ತಪುý್ಪ ಸಲಹೆಗಳೇ ಕಾರಣ ಎಂದು ಧರಂ ಸ್ಪಷ್ಟೀಕರಣ ನೀಡಿದ್ದಾರೆ.

ಹಾಗಾದರೆ, ದೇವೇಗೌಡರು ರಾಜ್ಯದ ಆಡಳಿತಕ್ಕೆ ಅಡ್ಡಿ ಮಾಡುತ್ತಿದ್ದ ರಹಸ್ಯಗಳನ್ನು ಧರ್ಮಸಿಂಗ್‌ ತಾಮ ಮುಖ್ಯಮಂತ್ರಿಯಾಗಿದ್ದಾಗಲೇ ಯಾಕೆ ಬಹಿರಂಗ ಮಾಡಲಿಲ್ಲ ಹೇಳಿ? ಒಂದು -ಆಗ ದೇವೇಗೌಡರ ವಿರುದ್ಧ ಮಾತನಾಡಲು ಧರ್ಮಸಿಂಗರಿಗೆ ಧೈರ್ಯ ಇರಲಿಲ್ಲ. ಅಥವಾ ಆಗ ದೇವೇಗೌಡರು ನೀಡಿದ ಸಲಹೆಗಳೆಲ್ಲ ತಪುý್ಪ ತಪುý್ಪ ಎಂದು ಧರ್ಮಸಿಂಗರಿಗೆ ಈಗ ಜ್ಞಾನೋದಯವಾಗಿದೆ! ಅಥವಾ, ದೇವೇಗೌಡರ ಸಲಹೆಗಳು ತಪುý್ಪ ಎಂದು ಗೊತ್ತಿದ್ದೂ ಅವನ್ನೇ ಪಾಲಿಸಿ ಧರ್ಮಸಿಂಗ್‌ ರಾಜ್ಯಕ್ಕೆ ಅನ್ಯಾಯ ಮಾಡಿದರು. ಈಗ ಗೌಡರ ರಹಸ್ಯಗಳನ್ನು ಬಹಿರಂಗಮಾಡಿ ಧರ್ಮಸಿಂಗರು ರಾಜ್ಯಕ್ಕೆ ನ್ಯಾಯದಾನ ಮಾಡುತ್ತಿದ್ದಾರೆ!

ಎನಿವೇ, ಒಂದಂತೂ ಸ್ಪಷ್ಟ. ಆಗಿನ ಧರ್ಮಸಿಂಗ್‌ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಏನೆಲ್ಲಾ ಆಯಿತು, ರಾಜ್ಯಕ್ಕೆ ಯಾವ್ಯಾವ ಸ್ಥಿತಿ ಒದಗಿತು, ಧರ್ಮಸಿಂಗರಿಗೆ ಯಾವ ರೀತಿಯ ಹೆಸರು ಬಂತು... ಎಲ್ಲವೂ ದೇವೇಗೌಡರ ಆಶೀರ್ವಾದದ ಫಲ ಎಂಬುದು ಎಲ್ಲರಿಗೂ ಗೊತ್ತಾಗಿರುವ ಸತ್ಯ.

ಆದರೆ, ಈಗಿನ ರಾಜ್ಯ ಸರ್ಕಾರಕ್ಕೆ ಈವರೆಗೂ ಗೌಡರ ಆಶೀರ್ವಾದ ಇರಲಿಲ್ಲ. ಅದರಿಂದಾಗಿ ರಾಜ್ಯದಲ್ಲಿ ಏನೇನು ಆಗಿದೆ, ರಾಜ್ಯಕ್ಕೆ ಯಾವ ರೀತಿಯ ಪ್ರಚಾರ ಸಿಕ್ಕದೆ, ಕುಮಾರಸ್ವಾಮಿಯವರಿಗೆ ಯಾವ ರೀತಿಯ ಹೆಸರು ಬಂದಿದೆ ನೋಡಿ...

ಈ ಎರಡೂ ಸರ್ಕಾರದ ಅವಧಿಗಳನ್ನು ಆಧಾರವಾಗಿಟ್ಟುಕೊಂಡು ದೇವೇಗೌಡರ ಆಶೀರ್ವಾದದ ಫಲಶೃತಿ ಹೇಗಿರುತ್ತದೆ ಎಂಬುದರ ತುಲನಾತ್ಮಕ ಅಧ್ಯಯನ ಆಗಬೇಕು. ಸರಿಯಾಗಿ ಅಧ್ಯಯನ ಮಾಡಿದರೆ, ಇದೊಂದು ಒಳ್ಳೆಯ ಪಿಎಚ್‌ಡಿ ಪ್ರಬಂಧವಾದೀತು ಅಥವಾ ಜ್ಯೋತಿಷ್ಯ ಶಾಸ್ತ್ರಕ್ಕೆ ಒಂದು ಉತ್ತಮ ಗ್ರಂಥವಾದೀತು. ’ದೇವೇಗೌಡರ ಆಶೀರ್ವಾದದ ಫಲಶೃತಿ : ಭೂತ, ವರ್ತಮಾನ ಹಾಗೂ ಭವಿಷ್ಯ’ -ಎಂದು ಈ ಪ್ರಬಂಧ ಅಥವಾ ಗ್ರಂಥಕ್ಕೆ ಹೆಸರಿಡಬಹುದು!

ದೇವೇಗೌಡರ ಆಶೀರ್ವಾದದ ಬಲದಿಂದ ಧರ್ಮಸಿಂಗ್‌ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಉದ್ಯಮಿಗಳನ್ನು ಬಹುತೇಕ ಓಡಿಸಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಹಿಡಿದಿದ್ದ ಇನ್‌ಫೋಸಿಸ್‌ ನಾರಾಯಣಮೂರ್ತಿ ಎಂಬ ಗ್ರಹಣವನ್ನು ಬಿಡಿಸಿದರು. ಜಲ ನ್ಯಾಯಾಧೀಕರಣದ ವಿರುದ್ಧವೇ ಅರ್ಜಿ ಸಲ್ಲಿಸಿ ನೆರೆ ರಾಜ್ಯಗಳಿಗೆ ಅನುಕೂಲ ಮಾಡಿಕೊಟ್ಟರು. ಬೆಂಗಳೂರು ಫಾರ್ವಡ್‌ ಎಂಬ ನಗರಾಭಿವೃದ್ಧಿ ವೇದಿಕೆಯನ್ನು ಸಂಪೂರ್ಣ ವಿಸರ್ಜನೆ ಮಾಡಿದರು. ಬೆಂಗಳೂರು -ಮೈಸೂರು ಕಾರಿಡಾರ್‌ ವಿರುದ್ಧ ಸುಪ್ರೀಂಕೋರ್ಟ್‌ ವರೆಗೆ ಹೋಗಿ ನೈಸ್‌ ಕಂಪನಿಯ ಕೀರ್ತಿ ಹೆಚ್ಚಿಸಿದರು. ಮೆಟ್ರೋ ರೈಲಿಗೆ ಮೊದಲು ಬ್ರೇಕ್‌ ಹಾಕಿದರೂ ಕೊನೆಗೆ ಬೆಂಗಳೂರಿಗೆ ಮೆಟ್ರೋ ಹಾಗೂ ಮಾನೋ ಎರಡೂ ರೈಲು ಸಿಗುವಂತೆ ಮಾಡಿದರು. ಅರ್ಕಾವತಿ ಬಡಾವಣೆಯಲ್ಲಿ ಸರ್ಕಾರಕ್ಕೆ ಕಪಾಳಮೋಕ್ಷವಾದ ನಂತರವೇ ಪ್ರಜೆಗಳಿಗೆ ಸೈಟು ಸಿಗುವಂತೆ ಮಾಡಿದರು. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಎಂಬ ಸುದ್ದಿ ಸುಳ್ಳು ಎಂದು ವಿಶ್ವ ಬ್ಯಾಂಕಿನಿಂದಲೇ ಸ್ಪಷ್ಟೀಕರಣ ತರಿಸಿದರು. ದರಿದ್ರನಾರಾಯಣ ಹೆಸರಿನಲ್ಲಿ ಕನ್ನಡೇತರರಿಗೆಲ್ಲ ಬೆಂಗಳೂರಿನಲ್ಲಿ ನಿವೇಶನದ ಹಕ್ಕು ಸಿಗುವಂತೆ ಮಾಡಿದರು. ಸಿದ್ದರಾಮಯ್ಯನವರು ಅಹಿಂದ ಸಂಘಟನೆ ಸ್ಥಾಪನೆ ಮಾಡಲು ಕಾರಣರಾದರು. ಸಿಂಧ್ಯಾಗೆ ತ್ರಿಶಂಕು ಸ್ವರ್ಗ ತೋರಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ, ಸ್ವತಃ ತಮ್ಮ ಅಧಿಕಾರ ಬಿಟ್ಟುಕೊಟ್ಟು ಕರ್ನಾಟಕಕ್ಕೆ ಒಬ್ಬ ಹೊಸ ಕಾರ್ಯಶೀಲ ಮುಖ್ಯಮಂತ್ರಿ ಸಿಗಲು ಅನುಮ ಮಾಡಿಕೊಟ್ಟರು. ’ದೇವೇಗೌಡರ ಆಶೀರ್ವಾದ ಇಲ್ಲದಿದ್ದರೆ ಇಷ್ಟೆನ್ನೆಲ್ಲ ಮಾಡಲು ತಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಇದರ ಸಂಪೂರ್ಣ ಕೀರ್ತಿ ದೇವೇಗೌಡರಿಗೇ ಸಲ್ಲಬೇಕು’ ಎಂದು ಧರ್ಮಸಿಂಗ್‌ ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.ಇಂಥ ದೇವೇಗೌಡರ ಆಶೀರ್ವಾದ ಈಗ ಕುಮಾರಸ್ವಾಮಿಯವರಿಗೂ ಸಿಗಲು ಆರಂಭವಾಗಿದೆ! ಈ ಆಶೀರ್ವಾದದ ಫಲ ಹೇಗಿರುತ್ತದೆ ಎಂಬುದನ್ನು ನಾಮ ಕಾದು ನೋಡೋಣ ಮಗಾ.

ಇನ್ನೊಂದಿಷ್ಟು ಆಶೀರ್ವಾದಗಳೊಂದಿಗೆ,
ಇಂತಿ ನಿನ್ನಪ್ಪ
ಗ್ರಾಮಸಿಂಗ



Kannada Prabha issue dated April 24, 2006

A Research on the Effects of Dewe Gowda's Blessings!

--

Tuesday, April 18, 2006

ಹೊಡಿ ಮಗಾ, ಹೊಡಿ ಮಗಾ.. ಸಲ್ಮಾನ್‌ ಖಾನ್‌ಗೇ ಜೈ

ಡಾ.ರಾಜ್‌ ಆದರ್ಶಗಳು ಈಗ ಯಾರಿಗೆ ಬೇಕು? ವಿವೇಕ್‌ ಒಬೇರಾಯ್‌ಗೆ
ಸುಂದರಿ ಸುಶ್ಮಿತಾ ಪತ್ರ


ಕಾನೂನನ್ನು ಪದೇ ಪದೆ ಗಾಳಿಗೆ ತೂರಿ, ಅಪರಾಧಿ ಎನಿಸಿಕೊಂಡಿರುವ ಈ ದೇಶದ ನ್ಯಾಶನಲ್‌ ಹೀರೋ ಸಲ್ಮಾನ್‌ ಖಾನ್‌ ಕಳೆದ ವಾರ ಅಕ್ಷರಶಃ ಜೈಲು ಸೇರಿದ. ಮೂರು ದಿನದ ನಂತರ ಜಾಮೀನಿನ ಮೇಲೆ ಹೊರಬಂದ. ಆಗ ನೋಡಬೇಕಿತ್ತು... ಸ್ವಾತಂತ್ರ್ಯ ಹೋರಾಟಗಾರ ಜೈಲಿನಿಂದ ಹೊರಗೆ ಬಂದಾಗ ನೀಡುವಂಥ ಸ್ವಾಗತವನ್ನು ಅಭಿಮಾನಿಗಳು ಸಲ್ಮಾನ್‌ಗೆ ನೀಡಿದರು. ಇತ್ತ ರಾಜ್‌ ಮತ್ತು ಅವರ ಆದರ್ಶಗಳು ಸಮಾಧಿಯಾಗುತ್ತಿರುವಾಗ ಅತ್ತ ಸಲ್ಮಾನ್‌ ಮತ್ತು ಆತನ ಹೀರೋಯಿಸಂಗಳು ಸಂಭ್ರಮಿಸುತ್ತಿದ್ದಮ!


ಅಬ್ಬೇ ವಿವೇಕ್‌,
ಈಗಾದರೂ ಬುದ್ಧಿ ಬಂತಾ ಮರೀ? ಆ ನಖ್ರಾವಾಲಿ ಐಶ್ವರ್ಯ ನಿನ್ನ ಮಹಾ ಫ್ರೆಂಡು ಅಂತ ಹೇಳ್ತಾ ಇದ್ದೆ. ಆಕೆ ಜತೆ ನಿನ್ನ ಮದುವೆ ಅಂತಿದ್ದೆ. ಆಕೆಗಾಗಿ, ನೀನು ಪತ್ರಿಕಾಗೋಷ್ಠಿ ನಡೆಸಿ ’ಸಲ್ಮಾನ್‌ ಖಾನ್‌ ಒಬ್ಬ ವಿಕೃತ ಮನಸಿನ ರೋಗಿ’ ಅಂತ ಆರೋಪ ಮಾಡಿದ್ದೆ. ಈಗೇನಾಯ್ತು? ಐಶ್ವರ್ಯ ನಿನ್ನ ತೋಳು ಬಿಟ್ಟು ಪುರ್ರಂತ ಹಾರಿಹೋಗಿ ಅಭಿಷೇಕ್‌ ಬಚ್ಚನ್‌ ಭುಜದ ಮೇಲೆ ಕುಳಿತಿದ್ದಾಳೆ. ನಿಂಗೆ ಇದರಿಂದ ಬೇಜಾರಾಗಿದೆಯೇನೋ... ಪಾಪ. ಹೋಗಲಿ ಬಿಡು ವಿವೇಕ್‌. ಇದನ್ನ ಸುಮ್ಮನೆ ತಮಾಷೆ ಅಂತ ನೋಡ್ತಾ ಇರು ಅಷ್ಟೇ. ಅಭಿಷೇಕ್‌ಗೂ ಐಶ್‌ ಕೈಕೊಡುವ ಲಕ್ಷಣ ಕಾಣಿಸಿಸ್ತಿದೆ.

ಅವರ ಕಥೆ ಏನಾದ್ರೂ ಆಗಲಿ. ಆದರೆ, ಆಕೆಗಾಗಿ ನೀನು ಸಾಧಿಸಿದ್ದಾದರೂ ಏನು? ಸಲ್ಮಾನ್‌ ಜತೆ ದುಶ್ಮನಿ ತಾನೆ? ಅದರಿಂದ ನಿನ್ನ ಭವಿಷ್ಯ ಏನಾಯ್ತು? ನಿನ್ನ ಹಾದಿಯಲ್ಲಿದ್ದ ಎಲ್ಲಾ ಸಿನಿಮಾಗಳೂ ಬ್ಲಾಕ್‌ ಆಗಿಹೋದಮ ಗೊತ್ತಾ! ನಿಂಗೆ ಒಳ್ಳೆ ಅವಕಾಶಗಳು ಎಲ್ಲಿಂದ ಬರಬೇಕು ಹೇಳು? ಯೂ ಲಾಸ್ಟ್‌ ಬೋಥ್‌... ಐಶ್ವರ್ಯ ಆಂಡ್‌ ಆಫರ್ಸ್‌. ನಿನ್ನಥರ, ಇನ್ನಿತರ ಬಾಲಿಮಡ್‌ ಹೀರೋಗಳೂ, ಐಶ್ವರ್ಯಾಗಾಗಿ ಸಲ್ಮಾನ್‌ ಖಾನ್‌ ವಿರೋಧ ಕಟ್ಟಿಕೊಂಡರಾ? ಇಲ್ಲ. ಯಾಕೆ ಹೇಳು? ಅವರಿಗೆ ಗೊತ್ತು ಇಂಡಸ್ಟ್ರಿಯಲ್ಲಿ ಸಲ್ಮಾನ್‌ ಎಷ್ಟು ಪವರ್‌ಫುಲ್‌ ಅಂತ.

ಹೋಗಲಿ, ಇದು ನಿಂಗೆ ತಡವಾಗಿಯಾದರೂ ಅರ್ಥವಾಯಿತಲ್ಲ ಮಾರಾಯ. ನೀನೀಗ ಸಲ್ಮಾನ್‌ ಜತೆ ಗೆಳತನ ಬೆಳೆಸೋದಕ್ಕೆ ನಿರ್ಧರಿಸಿದ್ದೀಯಂತೆ. ಮೊನ್ನೆ ಮೊನ್ನೆ ಸಲ್ಮಾನ್‌ ತಾಯಿ ಆಸ್ಪತ್ರೆಯಲ್ಲಿ ಇದ್ದಾಗ, ನೀನು ಮತ್ತು ನಿನ್ನ ಅಪ್ಪ-ಅಮ್ಮ ಅಲ್ಲಿಗೆ ಭೇಟಿ ನೀಡಿದ್ದಿರಂತೆ. ನೀನು ಅಲ್ಲಿ ಸಲ್ಮಾನ್‌ ಖಾನ್‌ನ ತಾಯಿಯ ಕಾಲಿಗೆ ನಮಸ್ಕಾರ ಮಾಡಿದೆಯಂತೆ? ಆಮೇಲೆ, ಸಲ್ಮಾನ್‌ ಖಾನ್‌ನ ತಂದೆಯನ್ನೂ ಹೋಗಿ ನೋಡಿಬಂದಿರಂತೆ?

ಹೀಗೆಲ್ಲಾ ಮಾಡಿದರೆ, ಸಲ್ಮಾನ್‌ ದಾದಾನ ಕೃಪೆ ದೊರೆಯುತ್ತಾ ವಿವೇಕ್‌? ನನಗೆ ಗೊತ್ತಾಗಿರುವ ಮಾಹಿತಿ ಪ್ರಕಾರ, ಸಲ್ಮಾನ್‌ಗೆ ಇನ್ನೂ ನಿನ್ನ ಬಗ್ಗೆ ಕೋಪ ಹೋಗಿಲ್ಲ. ಅದು ಹಾಗೆಲ್ಲ ಹೋಗೋದೂ ಇಲ್ಲ. ನಿಂಗೆ ಸಲ್ಮಾನ್‌ ಹ್ಯಾಗೆ ಅಂತ ಗೊತ್ತಲ್ಲ? ಆತನನ್ನು ಒಲಿಸಿಕೊಳ್ಳಲು ಮಾಮೂಲಿ ವಿಧಾನಗಳು ನಡೆಯೋಲ್ಲ. ನನ್ನ ಸಲಹೆ ಕೇಳು.

ಸಲಹೆ ೧. ಮೊದಲು ಸಲ್ಮಾನ್‌ಗೆ ಒಂದು ಸ್ಲಗಲ್‌ ಆಗಿರುವ ಬಂದೂಕು ಉಡುಗೊರೆ ನೀಡು. ಇಂಥ ಉಡುಗೊರೆ ಸಿಕ್ಕರೆ ಸಲ್ಮಾನ್‌ ಖುಷಿಯಾಗುತ್ತಾನೆ.

ಸಲಹೆ ೨. ಯಾಮದಾದರೂ ಕಾಡಿಗೆ ಕರೆದುಕೊಂಡು ಹೋಗಿ ಜಿಂಕೆಗಳನ್ನು ತೋರಿಸು. ಸಲ್ಮಾನ್‌ ಖುಷಿಯಿಂದ ಬೇಟೆಯಾಡುತ್ತಾನೆ. ನೀನದಕ್ಕೆ ಕೇಕೆ ಹಾಕಿ ಉತ್ತೇಜನ ನೀಡು. ಜತೆಗೆ ಕಿಲಕಿಲ ನಗಲು ಒಂದಿಬ್ಬರು ಹೀರೋಯಿನ್‌ಗಳು ಇರಲಿ.

ಸಲಹೆ ೩. ಸಲ್ಮಾನ್‌ಗೆ ರಾತ್ರಿ ಮೂರು ಗಂಟೆಗೆ ಯದ್ವಾತದ್ವಾ ಹೆಂಡ ಕುಡಿಸಿ, ಸುಂಕ ತಪ್ಪಿಸಿ ತಂದ ವಿದೇಶಿ ಕಾರನ್ನು ಏಕಮುಖ ರಸ್ತೆಯಲ್ಲಿ ಡ್ರೆೃವಿಂಗಿಗೆ ಅಂತ ಕೊಡು. ಆಗ ನೋಡು ಸಲ್ಮಾನ್‌ ಒಂದೋ ಎರಡೋ ಆಕ್ಸಿಡೆಂಟ್‌ ಮಾಡಿ ಹೇಗೆ ಆನಂದ ಪಡ್ತಾನೆ ಅಂತ.

ಸಲಹೆ ೪. ಸಲ್ಮಾನ್‌ ಖಾನ್‌ಗೆ ಇರುವ ಭೂಗತ ವ್ಯಕ್ತಿಗಳ ಬಗ್ಗೆ ಪ್ರಶ್ನೆ ಹಾಕು. ಆತ ಒಂದೊಂದಾಗಿ... ದಾವೂದ್‌ ಇಬ್ರಾಹಿಂ, ನೂರ್‌ ಇಬ್ರಾಹಿಂ, ಚೋಟಾ ಶಕೀಲ್‌, ಅಬುಸಲೇಂ ಅಂತ ಕಥೆ ಹೇಳ್ತಾನೆ. ಕೆಲಮ ಸುಳ್ಳು ಸುಳ್ಳೇ ಘಟನೆ ಹೇಳ್ತಾನೆ. ನೀನದಕ್ಕೆ ಭಯ ಬಿದ್ದವನಂತೆ ನಟಿಸು.

ಸಲಹೆ ೫. ವೇಳೆ ಸಿಕ್ಕಾಗಲೆಲ್ಲ ಆಧುನಿಕ ಜಿಮ್‌ಗೆ ಕರೆದುಕೊಂಡು ಹೋಗು. ಬಾಡಿ ಬಿಲ್ಡ್‌ ಮಾಡಲು ಹೊಸ ಹೊಸ ಡ್ರಗ್‌ ಯಾಮದು ಬಂದಿದೆ ಅಂತ ಮಾಹಿತಿ ಕೊಡು.

ಸಲಹೆ ೬. ಅತ್ಯಂತ ಹೊಲಸು ಭಾಷೆ ಹಾಗೂ ಶಬ್ದಗಳನ್ನು ಬಳಸಿ ಮಾತನಾಡು. ಸಲ್ಮಾನ್‌ ಖುಷ್‌ ಹೋಗಾ!
ಒಂದು ಅಂಶವನ್ನು ಚೆನ್ನಾಗಿ ತಿಳಿದಿರು... ಸಲ್ಮಾನ್‌ಗೆ ಕಾನೂನು ಅಂದರೆ ಅಲರ್ಜಿ. ಹಿ ಹೇಟ್ಸ್‌ ನಯ, ವಿನಯ, ಶಿಸ್ತು, ನಾಗರಿಕತೆ, ಘನತೆ, ಗೌರವ ಇತ್ಯಾದಿ... ಅಷ್ಟೇ ಅಲ್ಲ. ಆತನಿಗೆ ಅಂಗಿ ಕಂಡರೂ ಆಗೋಲ್ಲ. ಅದಕ್ಕೇ ಸಲ್ಮಾನ್‌ ಬರೀ ಪ್ಯಾಂಟು ಮಾತ್ರ ಹಾಕ್ಕೊಂಡು ಅಕ್ಷರಶಃ ಅರೆನಗ್ನವಾಗಿರ್ತಾನೆ!

ಸಲ್ಮಾನ್‌ ಖಾನ್‌ ಈ ದೇಶದ ನ್ಯಾಶನಲ್‌ ಹೀರೋ ಅನ್ನೋದನ್ನ ಮರೆಯಬೇಡ. ಕಳೆದ ವಾರ, ಆತ ಮೂರು ದಿನ ಜೈಲಿನಲ್ಲಿ ಇದ್ದ ತಾನೆ? ಅದರಿಂದ, ಆತನ ಬಗ್ಗೆ ಉದ್ಯಮದಲ್ಲಿ ವಿಪರೀತ ಕನಿಕರ ಉಂಟಾಗಿದೆ. ಅನೇಕ ಮಹಾನ್‌ ವ್ಯಕ್ತಿಗಳು ಸಲ್ಮಾನ್‌ ಪರವಾಗಿ ಮಾತನಾಡಿದ್ದಾರೆ. ಅವರೆಲ್ಲ ಕೋರ್ಟಿನ ಮೇಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಲ್ಮಾನ್‌ ಅಭಿಮಾನಿ ಬಳಗ ಕೋರ್ಟಿಗೆ ಕಲ್ಲು ತೂರಿ ಪ್ರತಿಭಟನೆ ವ್ಯಕ್ತಪಡಿಸಿದೆ. ಕಟ್ರಿನಾ ಕೈಫ್‌ ಎಂಬ ಸುಂದರಿಯ ಹೃದಯ ಸಲ್ಮಾನ್‌ಗಾಗಿ ಮಿಡಿಯುತ್ತಾ ಜೈಲಿನವರೆಗೂ ಹೋಗಿತ್ತು. ಬಾಲಿಮಡ್‌ನ ನೂರಾರು ಕಿರಿಯ ಕಲಾವಿದರು ಸಲ್ಮಾನ್‌ ಖಾನ್‌ಗೆ ಬೆಂಬಲ ನೀಡಲು ತಮ್ಮ ತಲೆ ಬೋಳಿಸಿಕೊಂಡರು.

ಮೂರು ದಿನದ ನಂತರ ಸಲ್ಮಾನ್‌ ಜಾಮೀನು ಪಡೆದು ಜೈಲಿನಿಂದ ಹೊರಬಂದ. ಆಗ ನೋಡಬೇಕಿತ್ತು... ಸ್ವಾತಂತ್ರ್ಯ ಹೋರಾಟಗಾರ ಜೈಲಿನಿಂದ ಹೊರಗೆ ಬಂದಾಗ ನೀಡುವಂಥ ಸ್ವಾಗತವನ್ನು ಅಭಿಮಾನಿಗಳು ಸಲ್ಮಾನ್‌ಗೆ ನೀಡಿದರು. ಇದರಿಂದಲೇ ಗೊತ್ತಾಗುತ್ತದೆ, ಸಲ್ಮಾನ್‌ ಎಂಥ ಹೀರೋ ಅಂತ!

ಈ ನಡುವೆ ಸಲ್ಮಾನ್‌ ಎಂಥ ಒಳ್ಳೆಯ ಮನುಷ್ಯ ಅಂತ ಸಾಬೀತು ಪಡಿಸುವ ಅನೇಕ ಘಟನೆಗಳು ಜೈಲಿನಲ್ಲಿ ನಡೆದಮ. ಜೈಲಿನಲ್ಲಿ ಟಾಯ್ಲೆಟ್‌ ಸರಿಯಿಲ್ಲ ಎನ್ನುವ ವಿಷಯ ಸಲ್ಮಾನ್‌ಗೆ ಸ್ವತಃ ಅನುಭವಕ್ಕೆ ಬಂತು. ಅದ್ಕಕಾಗಿ, ಸಲ್ಮಾನ್‌ ಈಗ ಜೈಲಿನ ಟಾಯ್ಲೆಟ್‌ಗಳ ಅಭಿವೃದ್ಧಿಯ ಸಂಪೂರ್ಣ ವೆಚ್ಚ ಭರಿಸುಮದಾಗಿ ಭರವಸೆ ನೀಡಿದ್ದಾನೆ. ಕೈದಿಗಳು ತಮ್ಮ ಶಕ್ತಿವರ್ದಿಸಿಕೊಳ್ಳಲು ಅಗತ್ಯವಾದ ವ್ಯಾಯಾಮ ಶಾಲೆಕಟ್ಟಿಸಲೂ ಆತ ನಿರ್ಧರಿಸಿದ್ದಾನೆ. ಕೈದಿಗಳು ಜೈಲಿನಲ್ಲಿ ಆರಾಮವಾಗಿರಬೇಕು ಎಂಬ ಸಲ್ಮಾನ್‌ ಖಾನನ ಕಳಕಳಿ ನಿಜಕ್ಕೂ ಶ್ಲಾಘನೀಯವಲ್ಲವೇ?

ಅಲ್ಲದೇ, ಸಲ್ಮಾನ್‌ ಖಾನ್‌ಗೆ ಜೈಲಿನಲ್ಲಿ ಸಾಥಿಯಾಗಿದ್ದವನು ಒಬ್ಬ ಕೊಲೆಗಾರ. ಆತ ೪೭೫೦೦ ರು. ತುಂಬಿದರೆ, ಆತನ ಶಿಕ್ಷೆ ೫ ವರ್ಷ ಕಡಿಮೆಯಾಗಿ ಆತ ಬೇಗನೆ ಜೈಲಿನಿಂದ ಹೊರಬರಲು ಸಾಧ್ಯವಂತೆ. ಅದಕ್ಕೆ ನೆರಮ ನೀಡುಮದಾಗಿ ಸಲ್ಮಾನ್‌ ಖಾನ್‌ ಕೊಲೆಗಾರನಿಗೆ ಭರವಸೆ ನೀಡಿದ್ದಾನೆ.

ಅಷ್ಟೇ ಅಲ್ಲ, ಸಲ್ಮಾನ್‌ ಖಾನ್‌ ನಿಜಕ್ಕೂ ತಾಯಿಗೆ ತಕ್ಕ ಮಗ. ಸಲ್ಮಾನ್‌ಗೆ ತಂದೆಗಿಂತ ತಾಯಿ ಅಂದರೆ ಅತೀವ ಪ್ರೀತಿ. ಆತ ಜೈಲು ಸೇರಿದ ಸುದ್ದಿ ಕೇಳಿ ತಾಯಿ ಆಸ್ಪತ್ರೆ ಸೇರಿದ್ದರು. ಈ ವಿಷಯ ಸಲ್ಮಾನ್‌ಗೆ ಗೊತ್ತಾಗಿದ್ದು ಆತ ಜೈಲಿನಿಂದ ಹೊರಬಂದ ನಂತರ. ಆಗ... ಸಲ್ಮಾನ್‌ ಅರಚಿದ್ದೇನು ಗೊತ್ತೇ?... ’ಈ ವಿಷಯ ನನಗೆ ಮೊದಲೇ ಗೊತ್ತಾಗಿದ್ದರೆ, ನಾನು ಜೈಲನ್ನೇ ಒಡೆದುಕೊಂಡು ಹೊರಬಹುತ್ತಿದ್ದೆ’ ಅಂತ! ಇಂಥ ಉದ್ಘಾರ ಕೇಳಿದ ಯಾವ ಮಾತೃಹೃದಯ ತಾನೆ ಉಕ್ಕಿಬರುಮದಿಲ್ಲ? ಭಾರತದಲ್ಲಿ ಎಲ್ಲ ತಾಯಂದಿರಿಗೂ ಇದ್ದರೆ ಇರಬೇಕು ಇಂಥ ಮಗ! ಎಲ್ಲ ಅಭಿಮಾನಿಗಳಿಗೂ ಇರಬೇಕು ಇಂಥ ಹೀರೋ!
ಅದನ್ನು ಬಿಟ್ಟು, ಕಣ್ಣೀರಧಾರೆ ಎಂದು ದುಃಖಿಸುವ, ಹಿರಿಯರಿಗೆ ಗೌರವ ನೀಡುವ, ಮಹಿಳೆಯರೆಂದರೆ ಸೌಜನ್ಯದಿಂದ ವರ್ತಿಸುವ, ನೆಲದ ಕಾನೂನನ್ನು ಶಿರಸಾವಹಿಸುವ, ಕುಡಿತ, ಧೂಮಪಾನವನ್ನು ಎಂದೂ ಉತ್ತೇಜಿಸದ ೧೯ನೇ ಶತಮಾನದ ಹೀರೋ ಈಗ ಯಾರಿಗೆ ಬೇಕು?

ಈಗಿನ ಕಾಲ ಬದಲಾಗಿದೆ. ಪ್ರೇಕ್ಷಕ ಬದಲಾಗಿದ್ದಾನೆ. ಅದಕ್ಕಾಗಿ ಈಗಿನ ಕಾಲಕ್ಕೆ ರಾಜ್‌ಕಪೂರ್‌ ಅಥವಾ ರಾಜ್‌ಕುಮಾರ್‌ ಅವರಂಥ ಹೀರೋಗಳು ಬೇಕಾಗಿಲ್ಲ. ರಾಜ್‌ಕುಮಾರ್‌ ಮೊನ್ನೆ ನಿಧನರಾದರೂ ಅವರ ಆದರ್ಶ ಸಿನೆಮಾಗಳ ಯುಗ ಬಹಳ ಹಿಂದೆಯೇ ಅವಸಾನವಾಗಿದೆ. ಅವರ ತೆರೆಯ ಮೇಲಿನ ಕಲೆಗಾಗಲೀ, ತೆರೆಯ ಹೊರಗಿನ ನಡತೆಗಾಗಲೀ ಈಗ ಬೆಲೆಯಿಲ್ಲ. ಜನರಿಗೇನಿದ್ದರೂ ಈಗ ಬೇಟೆಗಾರ ಸಲ್ಮಾನ್‌ ಖಾನ್‌, ಮುಂಬೈ ಬಾಂಬರ್‌- ಮುನ್ನಾಭಾಯಿ ಸಂಜಯ ದತ್‌ ಅಂಥವರೇ ಹೀರೋಗಳು. ಹೊಡಿ ಮಗ ಹೊಡಿ ಮಗ ಎನ್ನುಮದೇ ಆದರ್ಶ. ಆದ್ದರಿಂದಲೇ ಕಳೆದ ವಾರ ರಾಜ್‌ಕುಮಾರ್‌ ಅವರ ಅಂತಿಮ ಯಾತ್ರೆಯಲ್ಲಿ ಹಲವಾರು ಸಲ್ಮಾನ್‌ ಖಾನ್‌ಗಳ ಹೀರೋಯಿಸಂ ವಿಜ್ರಂಭಿಸಿತು!

ವಿವೇಕ್‌, ಇದನ್ನು ಅರ್ಥ ಮಾಡಿಕೊಂಡು ನಿನ್ನ ಇಮೇಜನ್ನು ಬದಲಾಯಿಸಿಕೊಂಡರೆ ನೀನೂ ಸಲ್ಮಾನ್‌ ಥರಾ ಹೀರೋ ಆಗ್ತೀಯಾ. ಆಲ್‌ ದಿ ಬೆಸ್ಟ್‌!

ಇಂತಿ ನಿನ್ನ ಹಿತೈಷಿ
ತ್ರಿಪುರ ಸುಂದರಿ ಸುಶ್ಮಿತಾ



Kannada Prabha issue dated April 17, 2006

Our National Hero Is Mahatma Salman Khan... Jai Jai Khan

--

Tuesday, April 11, 2006

ಮೆರಿಟ್‌ ಸ್ಟೂಡೆಂಟಂತೆ! ನೀವೇನು ನಮಗೆ ಓಟ್‌ ಕೊಡ್ತೀರಾ?

ದೇಶದಲ್ಲಿ ಕೋಳಿ ಜ್ವರ, ಇಲಿ ಜ್ವರ, ಚಿಕನ್‌ ಗುನ್ಯಾ, ಏಡ್ಸ್‌, ಹಾಗೂ
ಮೆರಿಟ್‌ ನಿರ್ಮೂಲನೆ ಆಗಬೇಕು - ರಾಜಕಾರಣಿ ಉತ್ರ


ನೀಮ ಮೆರಿಟ್‌ ವಿದ್ಯಾರ್ಥಿಗಳು ನಮ್ಮ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಕಲಿಯುತ್ತೀರಿ. ಆಮೇಲೆ, ಲಕ್ಷಾಂತರ ರುಪಾಯಿ ಸಂಬಳ ಅಂತ ಫಾರಿನ್ನಿಗೆ ಹೋಗ್ತೀರಿ. ಮೆರಿಟ್‌ ಹೆಚ್ಚಾದಷ್ಟೂ ನೀಮ ಫಾರಿನ್ನಿಗೆ ಹೋಗೋದು ಹೆಚ್ಚು. ಆದರೆ, ಮೆರಿಟ್‌ ಇಲ್ಲದ ವಿದ್ಯಾರ್ಥಿಗಳು ದೇಶದಲ್ಲೇ ಉಳಿದು ತಾಯ್ನಾಡಿನ ಸೇವೆ ಮಾಡ್ತಾರೆ. ಅಂಥವರಿಗೇ ಸೀಟು ನೀಡಬೇಕಾದ್ದು ನಮ್ಮಂಥ ದೇಶಪ್ರೇಮಿಗಳ ಕರ್ತವ್ಯ ತಾನೆ?



ಮೆರಿಟ್‌ ಮಹಾಶಯರಿಗೆ ದೊಡ್ಡ ನಮಸ್ಕಾರ,

ಕಳೆದ ವಾರ ರಾಜ್ಯ ಮತ್ತು ಕೇಂದ್ರದಲ್ಲಿ ನಾಮ ಮಂಡಿಸಿರತಕ್ಕಂಥ ಮೀಸಲಾತಿ ನೀತಿಗೆ ನಿಮ್ಮ ಪ್ರತಿಭಟನೆ ಪತ್ರ ನಮ್ಮ ಕೈತಲುಪಿದೆ. ನಾಮ ಇನ್ನೂ ಈ ಮಂಡಲ ವರದಿಯನ್ನು ಅನುಷ್ಠಾನ ಮಾಡಿಲ್ಲ. ಆಗಲೇ, ನೀಮ ಕೆಂಡಾ- ಮಂಡಲ ಆಗಿದ್ದೀರಿ. ಹೀಗಾಗತಕ್ಕಂಥದ್ದು ಸಹಜವೇ. ಕೂಲ್‌ ಡೌನ್‌ ಸ್ವಾಮಿ. ನಿಮ್ಮ ಪತ್ರಕ್ಕೆ ಇಲ್ಲಿದೆ ನಮ್ಮ ಉತ್ರ.

ನಾಮ ಈ ಮೀಸಲಾತಿ ನೀತಿ ಅನುಷ್ಠಾನ ಮಾಡಲು ಹೊರಟಿದ್ದಕ್ಕೆ ಪ್ರಜಾಪ್ರಭುತ್ವಾತ್ಮಕ ಕಾರಣವಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಹಾಗಾಗಿ, ಮೆರಿಟ್‌ ವಿದ್ಯಾರ್ಥಿಗಳು ಮೇಲಲ್ಲ. ಮೆರಿಟ್ಟಿಲ್ಲದ ವಿದ್ಯಾರ್ಥಿಗಳು ಕೀಳಲ್ಲ! ಇಷ್ಟು ವರ್ಷ ಮೆರಿಟ್‌ ವಿದ್ಯಾರ್ಥಿಗಳಿಂದ ಮೆರಿಟ್ಟಿಲ್ಲದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿತ್ತು. ಒಟ್ಟೂ ಸೀಟುಗಳ ಸಿಂಹಪಾಲನ್ನು ಮೆರಿಟ್‌ ವಿದ್ಯಾರ್ಥಿಗಳೇ ಕಬಳಿಸುತ್ತಿದ್ದರು. ಈ ರೀತಿ ಎಲ್ಲಾ ಶಾಲಾ ಕಾಲೇಜುಗಳ ಸೀಟುಗಳನ್ನೂ ಮೆರಿಟ್‌ ವಿದ್ಯಾರ್ಥಿಗಳೇ ತಿಂದು ತೇಗಿದರೆ, ಮೆರಿಟ್ಟಿಲ್ಲದ ವಿದ್ಯಾರ್ಥಿಗಳು ಏನು ತಿನ್ನಬೇಕು ಸ್ವಾಮಿ?

ಹಾಗಾಗಿ ಈ ಮೆರಿಟ್‌ ಎನ್ನತಕ್ಕಂಥದ್ದು ಒಂದು ಸಮಾಜಿಕ ಪಿಡುಗಾಗಿದೆ! ಆದ್ದರಿಂದ, ನಾಮ ದೇಶದಲ್ಲಿನ ’ಮೆರಿಟ್‌’ ಪಿಡುಗನ್ನೇ ನಿರ್ಮೂಲನ ಮಾಡಲು ಪಣ ತೊಟ್ಟಿದ್ದೇವೆ. ಸಿಡುಬು, ಪೋಲಿಯೋ, ಪ್ಲೇಗ್‌, ಏಡ್ಸ್‌, ಕ್ಷಯ, ಇಲಿಜ್ವರ, ಕೋಳಿಜ್ವರ, ಚಿಕನ್‌ಗುನ್ಯಾ ಥರ ಮೆರಿಟ್‌ ಎನ್ನತಕ್ಕಂಥ ಹೆಮ್ಮಾರಿಯನ್ನೂ ನಾಮ ದೇಶದಿಂದ ಸಂಪೂರ್ಣ ತೊಡೆದು ಹಾಕಬೇಕಾಗಿದೆ!

ಕೆಲವೇ ವರ್ಷಗಳಲ್ಲಿ ಯಾರೂ ’ಮೆರಿಟ್‌’ ಎನ್ನತಕ್ಕಂಥ ಶಬ್ದವನ್ನೇ ಉಚ್ಚರಿಸದಂಥ ಪರಿಸ್ಥಿತಿ ನಿರ್ಮಾಣ ಮಾಡುತ್ತೇವೆ ಎನ್ನತಕ್ಕಂಥ ಭರವಸೆಯನ್ನು ನಾಮ ನೀಡಲು ಬಯಸಿದ್ದೇವೆ.

ಇನ್ನೊಂದು ಪ್ರಜಾಸತ್ತಾತ್ಮಕ ಕಾರಣ ನೋಡಿ. ಈ ವ್ಯವಸ್ಥೆಯಲ್ಲಿ ಯಾವತ್ತೂ ಬಹುಮತಕ್ಕೇ ಜಯ. ಈ ದೇಶದ ಅಂಕಿಸಂಕಿಯನ್ನು ಗಮನಿಸಿ. ಮೆರಿಟ್‌ ವಿದ್ಯಾರ್ಥಿಗಳು ಹಾಗೂ ಮೆರಿಟ್‌ ಇಲ್ಲದ ವಿದ್ಯಾರ್ಥಿಗಳಲ್ಲಿ ಯಾರ ಸಂಖ್ಯೆ ಹೆಚ್ಚಿದೆ? ಸಿಂಪಲ್ಲಾಗಿ ಕಳೆದ ೧೦ ವರ್ಷಗಳ ಎಸ್‌ಎಸ್‌ಎಲ್‌ಸಿ, ಪಿಯೂಸಿ ಫಲಿತಾಂಶವನ್ನೇ ನೋಡಿ. ಪರೀಕ್ಷೆಗೆ ಕುಳಿತವರಲ್ಲಿ ಶೇ.೫೩ರಿಂದ ಶೇ.೬೩ರಷ್ಟು ಜನ ನಪಾಸಾಗುತ್ತಾರೆ. ಅಂದರೆ, ಪಾಸಾಗುವವರಿಗಿಂತ ನಪಾಸಾಗುವವರ ಸಂಖ್ಯೆಯೇ ಹೆಚ್ಚು. ಪಾಸಾದವರಲ್ಲೂ ಸ್ವಂತ ಮೆರಿಟ್‌ ಮೇಲೆ ಪಾಸಾಗುವವರ ಸಂಖ್ಯೆ ಇನ್ನೂ ಕಡಿಮೆ. ಅಲ್ಲದೇ, ಬರೀ ಪಾಸಾದವರನ್ನು ಮೆರಿಟ್‌ ವಿದ್ಯಾರ್ಥಿಗಳು ಎನ್ನಲಾಗುತ್ತದೆಯೇ? ಕನಿಷ್ಠ ೭೦-೮೦ ಪರ್ಸೆಂಟ್‌ ಅಂಕ ಪಡೆದವರನ್ನು ಮೆರಿಟ್‌ ಸಾಲಿಗೆ ಸೇರಿಸಬಹುದು. ಇಂಥವರ ಸಂಖ್ಯೆ ದೇಶದಲ್ಲಿ ಎಷ್ಟಿದೆ ಮಹಾ? ವಿಶ್ವಾಸಮತ ಕೋರಿದರೆ, ಮೆರಿಟ್‌ ವಿದ್ಯಾರ್ಥಿಗಳು ಎಂದೂ ಬಹುಮತ ಸಾಬೀತು ಮಾಡಲು ಸಾಧ್ಯವಿಲ್ಲ! ಆದ್ದರಿಂದ, ಮೆರಿಟ್‌ ಇಲ್ಲದಿದ್ದರೂ ಬಹುಮತ ಇರುವ ವಿದ್ಯಾರ್ಥಿಗಳಿಗೇ ಕಿರೀಟ ತೊಡಿಸಬೇಕು ಎನ್ನತಕ್ಕಂಥದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಸಿದ್ಧಾಂತ. ಅಂದರೆ, ಮೆರಿಟ್‌ರಹಿತ ವಿದ್ಯಾರ್ಥಿಗಳಿಗೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಿಂಹಪಾಲು ಸೀಟು ಸಿಗಬೇಕು ಎನ್ನತಕ್ಕಂಥದ್ದು ಪ್ರಜಾತಂತ್ರ ವ್ಯವಸ್ಥೆಯ ಮೂಲ ಪಾಠ.

ಅಷ್ಟೇ ಅಲ್ಲ, ಈ ಮೆರಿಟ್‌ಗೆ, ಶಿಕ್ಷಣದಲ್ಲಿ ಯಾಕೆ ಆದ್ಯತೆ ನೀಡಬೇಕು? ಎನ್ನತಕ್ಕಂಥದ್ದು ನಮ್ಮ ಮೂಲಭೂತ ಪ್ರಶ್ನೆ.

ನೀಮ ಮೆರಿಟ್‌ ವಿದ್ಯಾರ್ಥಿಗಳು, ನಮ್ಮ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಕಲಿಯುತ್ತೀರಿ. ಆಮೇಲೆ, ಲಕ್ಷಾಂತರ ರುಪಾಯಿ ಸಂಬಳ ಸಿಗುತ್ತೆ ಅಂತ ಫಾರಿನ್‌ಗೆ ಹಾರಿ ಹೋಗುತ್ತೀರಿ. ವಿದೇಶಿ ಕಂಪನಿಗಳನ್ನು ಶ್ರೀಮಂತಗೊಳಿಸಲು ನೀಮ ದುಡಿಯುತ್ತೀರಿ. ಅಲ್ಲಿನ ಸರ್ಕಾರಗಳಿಗೆ ನೆರಮ ನೀಡುತ್ತೀರಿ. ಮೆರಿಟ್‌ ಹೆಚ್ಚಾದಂತೆ ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚು. ಮೆರಿಟ್‌ ಕಡಿಮೆ ಆದಂತೆ ದೇಶದಲ್ಲಿ ಉಳಿದು ತಾಯ್ನಾಡಿಗೆ ಸೇವೆ ಸಲ್ಲಿಸುವವರ ಸಂಖ್ಯೆ ಅಧಿಕ. ಆದ್ದರಿಂದ ತಾಯ್ನಾಡಿಗೆ ಸೇವೆ ಸಲ್ಲಿಸುವ ಮೆರಿಟ್‌ರಹಿತ ವಿದ್ಯಾರ್ಥಿಗಳಿಗೇ ಆದ್ಯತೆ ನೀಡಬೇದ್ದು ನಮ್ಮಂಥ ದೇಶಪ್ರೇಮಿಗಳ ಕರ್ತವ್ಯ. ಏನಂತೀರಿ?

ಕೋಟಾ ಕೊಟ್ಟಿದ್ದು ತನಗೆ,
ಮೆರಿಟ್ಟಿಗೆ ಮುಚ್ಚಿಟ್ಟಿದ್ದು ಪರರಿಂಗೆ,
ಎಂದು ಸ್ವತಃ ಸರ್ವಜ್ಞನೇ ಹೇಳಿದ್ದಾನೆ ಗೊತ್ತಲ್ಲ!

ಈ ಮೆರಿಟ್ಟಿನಿಂದಾಗಿ ಬರೀ ಶೈಕ್ಷಣಿಕ ಅಸಮಾನತೆಯಲ್ಲ. ಆರ್ಥಿಕ ಅಸಮಾನತೆಯೂ ಉಂಟಾಗುತ್ತದೆ. ಯಾಕೆಂದರೆ, ಮೆರಿಟ್‌ ಇರುವ ವಿದ್ಯಾರ್ಥಿಗಳು, ಒಳ್ಳೊಳ್ಳೆ ಕಂಪನಿ ಸೇರಿ, ಒಳ್ಳೊಳ್ಳೆ ಸಂಬಳ ಪಡೆಯುತ್ತಾರೆ. ಆದರೆ, ಮೆರಿಟ್‌ ಇಲ್ಲದ ವಿದ್ಯಾರ್ಥಿಗಳಿಗೆ ಸಂಬಳ ಹಾಗಿರಲಿ, ಪುಗಸಟ್ಟೆ ಬರ್ತೀನಿ ಅಂದರೂ ಯಾರೂ ಕೆಲಸ ಕೊಡುಮದಿಲ್ಲ. ಇದರಿಂದ ಈ ದೇಶದ ಅಲ್ಪಸಂಖ್ಯಾತ ಮೆರಿಟ್‌ ವಿದ್ಯಾರ್ಥಿಗಳಿಗೆ ಹಣದುಬ್ಬರ. ಬಹುಸಂಖ್ಯಾತ ಮೆರಿಟ್‌ರಹಿತ ವಿದ್ಯಾರ್ಥಿಗಳಿಗೆ ಹಣದ-ಬರ ಆಗಿ ದೇಶದಲ್ಲಿ ಆರ್ಥಿಕ ಅಸಮತೋಲನ ಉಂಟಾಗುತ್ತದೆ. ಇದನ್ನು ತಪ್ಪಿಸಬೇಕೆಂದರೆ, ದೇಶದಲ್ಲಿ ಮೆರಿಟ್‌ ವಿದ್ಯಾರ್ಥಿಗಳು ಹೆಚ್ಚದಂತೆ ಜಾಗ್ರತೆ ವಹಿಸಬೇಕು.

ಈ ಎಲ್ಲ ಕಾರಣಗಳಿಗಾಗಿ, ನಾಮ ಹೊಸ ಹೊಸ ಶೈಕ್ಷಣಿಕ ಸುಧಾರಣೆಗಳನ್ನು ತರುತ್ತಿದ್ದೇವೆ. ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಗೊಂದಲ ಉಂಟುಮಾಡಿ ಮೆರಿಟ್‌ ವಿದ್ಯಾರ್ಥಿಗಳಾಗಲು ಏನನ್ನು ಕಲಿಯಬೇಕು ಎಂಬುದೇ ಅರ್ಥವಾಗದಂತೆ ಮಾಡುತ್ತಿದ್ದೇವೆ. ಪ್ರತಿವರ್ಷ ಬೇರೆ ಬೇರೆ ರೀತಿಯ ಪರೀಕ್ಷಾ ಪದ್ಧತಿಯನ್ನು ಅಳವಡಿಸಿ ವಿದ್ಯಾರ್ಥಿಗಳನ್ನು ಕಂಗಾಲು ಮಾಡುತ್ತಿದ್ದೇವೆ. ಇಂಗ್ಲಿಷ್‌ ಮೀಡಿಯಂ ಮತ್ತು ಕನ್ನಡ ಮೀಡಿಯಂ ಎನ್ನತಕ್ಕಂತ ವಿವಾದ ಸೃಷ್ಟಿ ಮಾಡಿ ಪಾಲಕರ ತಲೆ ಚಿಟ್ಟು ಹಿಡಿಯುವಂತೆ ಮಾಡಿದ್ದೇವೆ. ಶಾಲಾ ಕಾಲೇಜು ಪುಸ್ತಕಗಳಲ್ಲಿ ತಪುý್ಪ ತಪುý್ಪ ಮಾಹಿತಿ ಮುದ್ರಿಸಿ ವಿದ್ಯಾರ್ಥಿಗಳು ದಾರಿತಪುý್ಪವಂತೆ ಪ್ರಯತ್ನಿಸುತ್ತಿದ್ದೇವೆ. ಪತ್ರಿಕೆಗಳಲ್ಲಿ ಸಿಇಟಿ, ಕಾಮೆಡ್‌, ಸೀಟು ಹಂಚಿಕೆ, ಮುಂತಾದ ವಿಷಯಗಳ ಕುರಿತು ದಿನಕ್ಕೊಂದು ರೀತಿಯ ಹೇಳಿಕೆ ಪ್ರಕಟವಾಗುವಂತೆ ಮಾಡಿ ನಿಜ ಏನು ಎನ್ನತಕ್ಕಂಥದ್ದು ಯಾರಿಗೂ ಅರ್ಥವಾಗದ ಪರಿಸ್ಥಿತಿಯನ್ನು ಕಾಯ್ದುಕೊಂಡುಬಂದಿದ್ದೇವೆ.

ಅಷ್ಟೇ ಅಲ್ಲ. ಮೆರಿಟ್‌ ಇಲ್ಲದ ವಿದ್ಯಾರ್ಥಿಗಳಿಗೆ ಗರಿಷ್ಠ ರ್ಯಾಂಕ್‌ ನೀಡುತ್ತಿದ್ದೇವೆ. ಉದಾಹರಣೆಗೆ, ಎಂಬಿಬಿಎಸ್‌ ಪರೀಕ್ಷೆ ಪಾಸು ಮಾಡಲು ೧೦ ವರ್ಷ ತೆಗೆದುಕೊಂಡ ಹಲವಾರು ಮೆರಿಟ್‌ರಹಿತ ವಿದ್ಯಾರ್ಥಿಗಳಿಗೆ ಉನ್ನತ ರ್ಯಾಂಕ್‌ ನೀಡಿ ನಿಜವಾಗಲೂ ಉನ್ನತ ಅಂಕ ಪಡೆದಿದ್ದ ವಿದ್ಯಾರ್ಥಿಗಳಿಗೆ ಕನಿಷ್ಠ ರ್ಯಾಂಕ್‌ ನೀಡಿದ್ದೇವೆ. ಈ ಮೆರಿಟ್‌ ನಿರ್ಮೂಲನಾ ಪದ್ಧತಿಯನ್ನು ರಾಜ್ಯದ ಅತ್ಯಂತ ಪ್ರತಿಷ್ಠಿತ ರಾಜೀವ್‌ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲೇ ಅಳವಡಿಸಿದ್ದೇವೆ. ಉಳಿದ ವಿ.ವಿ.ಗಳಲ್ಲೂ ಇದೇ ವ್ಯವಸ್ಥೆಯಿದೆ. ಕೆಪಿಎಸ್‌ಸಿ, ಐಎಎಸ್‌ ಪರೀಕ್ಷೆಯಲ್ಲೂ ನಾಮ ರ್ಯಾಂಕ್‌ ಹೆಚ್ಚು ಕಡಿಮೆ ಮಾಡಿ ಮೆರಿಟ್‌ ತಡೆಗೆ ಯಶಸ್ವಿಯಾಗಿದ್ದೇವೆ. ಹೀಗೆ, ನಾಮ ಕೈಗೊಂಡಿರುವ ಎಲ್ಲಾ ಮೆರಿಟ್‌ ನಿರ್ಮೂಲನಾ ಕ್ರಮಮಗಳನ್ನು ಇಲ್ಲಿ ವಿವರಿಸಲು ಆಗುಮದಿಲ್ಲ.
ಅಲ್ಲಾ ಮೆರಿಟ್‌ ಮಹನೀಯರೇ,

ಈಗ ನಮ್ಮ ಶೈಕ್ಷಣಿಕ ಕ್ಷೇತ್ರದ ಸುಧಾರಣೆ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದೀರಲ್ಲ. ನಾಮ ನಿಮಗೆ ಈಗ ನೆನಪಾದೆವಾ? ಚುನಾವಣೆಯಾದಾಗ ನಮ್ಮ ಕುರಿತು ಸ್ವಲ್ಪವಾದರೂ ಚಿಂತಿಸಿದಿರಾ? ನೀವೇನು ಓಟು ಹಾಕ್ತೀರಾ? ನೀಮ ಮೆರಿಟ್ಟಿದೆ ಅಂತ ನಿಮ್ಮ ಸಂಬಳ, ದುಡ್ಡು ಲೆಕ್ಕ ಮಾಡಿಕೊಂಡು ಮನೆಯಲ್ಲಿ ಕುಳಿತಿರ್ತೀರಿ. ಮತದಾನ ಕೇಂದ್ರದ ಮುಂದೆ ಯಾರು ಕ್ಯೂ ನಿಲ್ತಾರೆ ಅಂತ ಮನೆಯಲ್ಲೋ, ಕಚೇರಿಯಲ್ಲೋ ಆರಾಮವಾಗಿರ್ತೀರಿ. ನಿಮ್ಮಂಥವರು ನಮಗೆ ಓಟ್‌ ಹಾಕ್ತೀರಿ ಅಂತ ನಂಬಿಕೊಂಡ್ರೆ ನಾಮ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾ?

ನಮಗೆ ಓಟ್‌ ಕೊಡೋದು ಯಾರು ಅಂತ ನಮಗೆ ಚೆನ್ನಾಗಿ ಗೊತ್ತು. ನಾಮ ಅವರನ್ನು ಚೆನ್ನಾಗಿ ನೋಡಿಕೊಳ್ತೇವೆ. ನಮಗೆ ನಿಮ್ಮ ಓಟೂ ಬೇಡ. ಮೆರಿಟ್ಟೂ ಬೇಡ. ಬೇಕಾದರೆ, ಮೆರಿಟ್ಟಿಗೆ ಮರ್ಯಾದೆ ಕೊಡುವ ರಾಜಕಾರಣಿಯನ್ನೇ ಮುಂದಿನ ಎಲೆಕ್ಷನ್‌ನಲ್ಲಿ ಆರಿಸಿಕೊಳ್ಳಿ. ಯಾರು ಬ್ಯಾಡ ಅಂತಾರೆ ಸ್ವಾಮಿ. ಇದು ಪ್ರಜಾಪ್ರಭುತ್ವ. ಇಡೀ ವ್ಯವಸ್ಥೆ ಓಟಿನಿಂದಲೇ ನಡೆಯುತ್ತದೆ. ಇದ್ಯಾಕೆ ನಿಮ್ಮ ಮೆರಿಟ್‌ ಬುದ್ಧಿಗೆ ಹೊಳೆಯೋದಿಲ್ಲ ಸ್ವಾಮಿ?

ಇಂತಿ ಮೆರಿಟ್‌ ವಿರೋಧಿ
ಸರ್ವಪಕ್ಷ ರಾಜಕೀಯ ಒಕ್ಕೂಟ


Kannada Prabha issue dated April 10, 2006

Oh.. Merit Student? You Wouldn't Vote Us. We Know.

--

Tuesday, March 28, 2006

ಸೋನಿಯಾ ಬಿಟ್ಟ ಲಾಭದ ಹುದ್ದೆಗೆ ಪುತ್ರಿ ಪ್ರಿಯಾಂಕಾ?

ದೇಶದ ಅತ್ಯಂತ ಲಾಭದ ಹುದ್ದೆ ಸೋನಿಯಾ ಕೈಲೇ ಇದೆ
- ಸಂಸದ ಲಾಸು ಪ್ರಸಾದ್‌ ಯಾದವ್‌


ಈ ದೇಶದ ಅತ್ಯಂತ ಲಾಭದ ಹುದ್ದೆ ಈಗಲೂ ಸೋನಿಯಾ ಕೈಲೇ ಇದೆ. ನೆನಪಿರಲಿ. ಸೋನಿಯಾ ಅಣತಿ ಇಲ್ಲದೇ ‘ಕಾಂಗ್ರೆಸ್‌ ಹುಲ್ಲು’ ಕಡ್ಡಿ ಕೂಡ ಚಲಿಸದು. ಹಾಗಿರುವಾಗ ಜುಜುಬಿ ಒಂದು ಹುದ್ದೆ ಸೋನಿಯಾ ಕೈಲಿ ಇದ್ದರೆಷ್ಟು ಬಿಟ್ಟರೆಷ್ಟು! ಇಷ್ಟಕ್ಕೂ ಸೋನಿಯಾ ತಾವೇ ಪ್ರಧಾನಿ ಹುದ್ದೆ ಅಲಂಕರಿಸ್ತೀನಿ ಅಂದ್ರೆ ಬೇಡ ಅನ್ನೋರು ಕಾಂಗ್ರೆಸ್‌ನಲ್ಲಿ ಯಾರಾದರೂ ಇದ್ದಾರಾ? ಈಗಲೂ, ಸೋನಿಯಾ ಅವರು, ತಮ್ಮ ಮನೆಯಲ್ಲಿ ಕುಳಿತುಕೊಳ್ಳುವ ಕುರ್ಚಿಯೇ ಈ ದೇಶದ ಅತ್ಯಂತ ಲಾಭದಾಯಕ ಹುದ್ದೆ. ನೀವೇನಂತೀರಾ ರಾಬಡ್ಡಿ?



ಶ್ರೀಮತಿ ರಾಬಡ್ಡಿ ದೇವಿಯವರೆ,

ನಾನು ದುಃಖದಲ್ಲಿದ್ದೇನೆ. ನನ್ನಂತೆ ನೀವೂ ದುಃಖದಲ್ಲಿ ಇದ್ದೀರಿ ಎಂದು ನಾನು ತೀರ್ಮಾನಿಸುತ್ತೇನೆ. ನಾನು ಈ ಪತ್ರವನ್ನು ತಮ್ಮ ಪತಿಯಾಗಿ ಬರೆಯುತ್ತಿಲ್ಲ. ಲಾಭದಾಯಕ ಹುದ್ದೆಯಲ್ಲಿರುವ ಓರ್ವ ರಾಜಕಾರಣಿಯಾಗಿ ನನ್ನ ವಿಚಾರಧಾರೆಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಈ ದೇಶದ ರಾಜಕೀಯ ಯಾವ ಲೆವಲ್ಲಿಗೆ ಬಂತು ನೋಡಿದಿರಾ? ಲಾಭದಾಯಕ ಹುದ್ದೆಯಲ್ಲಿರುಮದು ತಪ್ಪಂತೆ ತಪುý್ಪ. ಅದ್ಯಾಮದೋ ಸಂವಿಧಾನದಲ್ಲೂ ಕರೆಕ್ಟಾಗಿ ವ್ಯಾಖ್ಯಾನ ಇಲ್ಲದ ರೂಲ್ಸ್‌ ಹಿಡಿದುಕೊಂಡು ಬಂದು ಈಗಿನ ರಾಜಕೀಯ ವ್ಯವಸ್ಥೆಯನ್ನೇ ತಲೆಕೆಳಗು ಮಾಡಲು ಪ್ರಯತ್ನಿಸುತ್ತಿದ್ದಾರೆ ಕೆಲವರು.

ವಾಟ್‌ ನಾನ್‌ಸೆನ್ಸ್‌! ಲಾಭ ಇಲ್ಲದಿದ್ದರೆ ಹುದ್ದೆ ಯಾಕೆ ಬೇಕು? ರಾಜಕೀಯ ಯಾರಿಗೆ ಬೇಕು! ಎಂಬುದನ್ನೂ ಯೋಚಿಸದ, ಕೆಲ ನಾನ್‌ಸೆನ್ಸ್‌ ರಾಜಕಾರಣಿಗಳು ಈ ಲಾಭದಾಯಕ ಹುದ್ದೆಯ ಗದ್ದಲವೆಬ್ಬಿಸಿದ್ದಾರೆ. ಈ ಗದ್ದಲದಿಂದ ಸುಮ್ಮನೆ ನಮ್ಮಂಥವರಿಗೆ ನಿದ್ದೆ ಹಾಳು ಅಷ್ಟೇ.

ಯಾವ ಹುದ್ದೆ ಕೊಟ್ಟರೂ ಲಾಭ ಮಾಡಿಕೊಳ್ಳುಮದು ಹೇಗೆ ಅಂತ ನಮ್ಮಂಥವರಿಗೆ ಗೊತ್ತಿಲ್ಲವಾ? ಲಾಭದಾಯಕ ಹುದ್ದೆ ಇಲ್ಲದಿದ್ದರೇನು ನಮಗೆ ಲಾಭ ಮಾಡಿಕೊಳ್ಳಲು ಆಗುಮದಿಲ್ಲವಾ? ವೋ ಹಮೆ ಕ್ಯಾ ಸಮಝ್‌ತೇ ಹೈ? ಎಮ್ಮೆಯ ಮೇವಿನಿಂದಲೇ ಲಾಭ ಹಿಂಡುಮದು ಹೇಗೆ ಎಂಬ ತಂತ್ರಜ್ಞಾನ ನಮಗೆ ಗೊತ್ತಿದೆ!

ಈ ಸೋನಿಯಾ ಮೇಡಂಗೆ ಏನಾಗಿದೆ? ಉತ್ತರ ಪ್ರದೇಶದಲ್ಲಿ ಯಾರೋ ಹೆಸರೇ ಗೊತ್ತಿಲ್ಲದ ರಾಜಕಾರಣಿ ಲಾಭದಾಯಕ ಹುದ್ದೆಯ ಅಪಸ್ವರ ಎತ್ತಿದ. ಅದಕ್ಕೆ ಈ ಅಮ್ಮ ರಾಜೀನಾಮೆ ಬಿಸಾಕಿಬಿಡೋದಾ? ಇದು ಬಿಜೆಪಿಯ ಕಾಲ ಇರಬಹುದು. ಆದರೆ, ರಾಮಾಯಣದ ಕಾಲ ಅಲ್ಲವಲ್ಲ! ಯಾಮದೋ ಅಗಸ ಸೀತೆಯ ಸಾಚಾತನದ ಬಗ್ಗೆ ಗಾಸಿಪ್‌ ಹಬ್ಬಿಸಿದ. ಈ ರಾಮ ಸಂಸಾರಕ್ಕೆ ರಾಜೀನಾಮೆ ನೀಡಿ ಸೀತೆಯನ್ನು ಕಾಡಿಗೆ ಕಳಿಸಿದ!

ನಾವೀಗ ಅದನ್ನೇ ಫಾಲೋ ಮಾಡಬೇಕಾ? ಈಗಿನ ಕಾಲದಲ್ಲಾಗಿದ್ದರೆ ಸೀತೆ, ರಾಮನಿಂದ ಕಾಂಪನ್‌ಸೇಷನ್‌ ಪಡೆಯಬಹುದಾಗಿತ್ತು. ಮೊನ್ನೆ ಮೊನ್ನೆ, ಸುಪ್ರೀಂ ಕೋರ್ಟು ಹೇಳಿಲ್ಲವಾ? ಗಂಡ ಹೆಂಡತಿ ದೂರವಾಗಿದ್ದರೆ, ಲೈಂಗಿಕ ಸಂಪರ್ಕ ಇಲ್ಲದಿದ್ದರೆ ಡೈವೋರ್ಸ್‌ ಪಡೆಯಬಹುದು ಅಂತ? ಆಗಿನ ಕಾಲಕ್ಕೇನೋ ರಾಮ ಮಾಡಿದ್ದು ಸರಿ ಅನ್ನಬಹುದು. ಈಗಿನ ಕಾಲದಲ್ಲಿ ಅದನ್ನೇ ಸರಿ ಅಂದರೆ ದೇಶದಲ್ಲಿ ಶೇ.೫೦ ರಷ್ಟು ಸೀತೆಯರನ್ನು ಕಾಡಿಗೆ ಕಳಿಸಬೇಕಾಗುತ್ತೆ.

ಇಷ್ಟಕ್ಕೂ ಸೋನಿಯಾ ಅವರ್ಯಾಕೆ ನಮ್ಮಂಥ ಮಾದರಿ ರಾಜಕಾರಣಿಗಳಿಂದ ಪಾಠ ಕಲಿಯುಮದಿಲ್ಲ? ರಾಜೀನಾಮೆ ಕೊಡಲೇ ಬೇಕು ಅಂತಿದ್ದರೆ, ಸೋನಿಯಾ ಕೂಡ ನಾನು ಮಾಡಿದಂತೆ ಮಾಡಬಹುದಾಗಿತ್ತು. ತಾಮ ಲಾಭದಾಯಕ ಹುದ್ದೆಗೆ ರಾಜೀನಾಮೆ ಕೊಟ್ಟು ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಆ ಹುದ್ದೆಯಲ್ಲಿ ಕೂರಿಸಿ ಲಾಭ ಮಾಡಿಕೊಳ್ಳಬಹುದಾಗಿತ್ತು! ನಾನು ನಿಮ್ಮಂಥ ಅವಿದ್ಯಾವಂತೆಯನ್ನೇ ರಾಜ್ಯದ ಅತ್ಯಂತ ಲಾಭದಾಯಕ ಹುದ್ದೆಯಾದ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕೂರಿಸಿರಲಿಲ್ಲವಾ? ಇಡೀ ದೇಶಕ್ಕೇ ಇದೊಂದು ಮಾದರಿಯಾಗಿ, ದೇಶದ ರಾಜಕಾರಣದ ಗಿನ್ನಿಸ್‌ ದಾಖಲೆಯಾಗಿ ಉಳಿದಿದೆ. ಹೀಗಿರುವಾಗ, ಪ್ರಿಯಾಂಕನಂಥ ಚೆಲುವೆ, ವಿದ್ಯಾವಂತೆ, ಸ್ಟೈಲ್‌ ಐಕಾನನ್ನು ಲಾಭದ ಹುದ್ದೆಯಲ್ಲಿ ಕೂರಿಸಿದ್ದರೆ ಸೋನಿಯಾಗೇ ಇನ್ನೂ ಹೆಚ್ಚಿನ ಲಾಭ ಆಗುತ್ತಿತ್ತು.

ಹೋಗ್ಲಿ ಬಿಡಿ. ಈಗ ಸೋನಿಯಾ ಲಾಭದ ಹುದ್ದೆ ಹೆಸರಲ್ಲಿ ಎರಡು ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ ತಾನೇ? ಒಂದು ತಮ್ಮ ಸಂಸತ್‌ ಸದಸ್ಯತ್ವಕ್ಕೆ ಹಾಗೂ ಇನ್ನೊಂದು ರಾಷ್ಟ್ರೀಯ ಸಲಹಾ ಮಂಡಳಿಗೆ. ಹಾಗಂತ, ಸೋನಿಯಾ ಅವರ ಲಾಭ ಏನು ಈಗ ಕಡಿಮೆ ಆಗೋಯ್ತಾ? ಈ ದೇಶದ ಅತ್ಯಂತ ಲಾಭದ ಹುದ್ದೆ ಈಗಲೂ ಸೋನಿಯಾ ಕೈಲೇ ಇದೆ. ನೆನಪಿರಲಿ. ‘ತೇನ ವಿನಾ ತೃಣಮಪಿ ನ ಚಲತಿ...’ ಅನ್ನುವಂತೆ ಸೋನಿಯಾ ಅಣತಿ ಇಲ್ಲದೇ ’ಕಾಂಗ್ರೆಸ್‌ ಹುಲ್ಲು’ ಕಡ್ಡಿ ಕೂಡ ಚಲಿಸದು. ಹಾಗಿರುವಾಗ ಕಾಂಗ್ರೆಸ್‌ನ ’ಹುಲು ಮಾನವ’ ಆಗಿರುವ ಪ್ರಧಾನಮಂತ್ರಿಯ ಬುದ್ಧಿ ಹೇಗೆ ಚಲಿಸೀತು?

ಸದ್ಯಕ್ಕೆ ಪ್ರಧಾನ ಮಂತ್ರಿಯ ಸಿಂಹಾಸನವೇ ಸೋನಿಯಾ ಕೈಲಿರುವಾಗ ಜುಜುಬಿ ಒಂದು ಹುದ್ದೆ ಸೋನಿಯಾ ಕೈಲಿ ಇದ್ದರೆಷ್ಟು ಬಿಟ್ಟರೆಷ್ಟು! ಇಷ್ಟಕ್ಕೂ ಸೋನಿಯಾ ನಾಳೆ ತಾವೇ ಪ್ರಧಾನಿ ಹುದ್ದೆ ಅಲಂಕರಿಸ್ತೀನಿ ಅಂದ್ರೆ ಬೇಡ ಅನ್ನೋರು ಕಾಂಗ್ರೆಸ್‌ನಲ್ಲಿ ಯಾರಾದರೂ ಇದ್ದಾರಾ? ಈಗಲೂ, ಸೋನಿಯಾ ಅವರು, ನಂ.೧೦, ಜನ್‌ಪಥ್‌ ರಸ್ತೆಯ, ತಮ್ಮ ಮನೆಯಲ್ಲಿ ಕುಳಿತುಕೊಳ್ಳುವ ಕುರ್ಚಿಯೇ ಈ ದೇಶದ ಅತ್ಯಂತ ಲಾಭದಾಯಕ ಹುದ್ದೆ. ನೀವೇನಂತೀರಾ ರಾಬಡ್ಡಿ?

ನಾನು ನನ್ನ ಈ ವಿಚಾರಧಾರೆಯನ್ನು ವಿವರಿಸುತ್ತ ಇರುವಾಗ, ಅದ್ಯಾರೋ ಬಂದು ಲಾಭದಾಯಕ ಹುದ್ದೆಗೆ ಸಂವಿಧಾನದಲ್ಲಿ ಈ ರೀತಿಯ ಲೌಕಿಕ ಲಾಭದ ಅರ್ಥವಿಲ್ಲ. ಅಲ್ಲಿನ ಅರ್ಥವೇ ಬೇರೆ ಎಂದು ಸಾಂವಿಧಾನಿಕವಾಗಿ ವಿವರಿಸಲು ಆರಂಭಿಸಿದ. ನಾನು ಅವನಿಗೆ ಶಟ್‌ ಅಪ್‌ ಅಂದೆ. ಈ ಸಂವಿಧಾನದಲ್ಲಿ ಏನೇನೋ ಹೇಳಿರ್ತಾರೆ. ಅದನ್ನೆಲ್ಲ ಸೀರಿಯಸ್ಸಾಗಿ ತಗೋಳ್ಳೋಕಾಗುತ್ತಾ ಅಂತ ಬೈದು ಕಳಿಸಿದೆ.

ನಾಮ ಯಾಮದನ್ನೇ ಆದರೂ ಪ್ರಾಕ್ಟಿಕಲ್ಲಾಗಿ ನೋಡಬೇಕು. ಸರ್ಕಾರದ ಹುದ್ದೆಗಳಲ್ಲಿ ಯಾಮದು ಲಾಭದಾಯಕ ಹುದ್ದೆ ಯಾಮದು ಅಲ್ಲ ಎಂದು ವಿಭಾಗ ಮಾಡುಮದೇ ಪ್ರಾಕ್ಟಿಕಲ್‌ ಅಲ್ಲ. ಇದನ್ನು ನ್ಯಾಯಾಲಯವಾಗಲೀ, ಚುನಾವಣಾ ಆಯೋಗವಾಗಲೀ ತೀರ್ಮಾನಿಸುಮದೇ ತಪುý್ಪ ಅಂತ ನನ್ನ ವಾದ. ಸರ್ಕಾರ ಅಂದಮೇಲೆ, ಎಲ್ಲ ಹುದ್ದೆಗಳೂ ಲಾಭದಾಯಕವೇ. ಆದರೆ, ಲಾಭ ಮಾಡಿಕೊಳ್ಳುಮದು ಹೇಗೆ ಮತ್ತು ಎಷ್ಟು ಎನ್ನುಮದು ಆಯಾ ವ್ಯಕ್ತಿಯ ಶಕ್ತಿ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ -ಎನ್ನುಮದು ನನ್ನ ವಿಚಾರಧಾರೆ.

ಹುದ್ದೆ ಯಾಮದೇ ಆಗಿರಲಿ, ಅದಕ್ಕೆ ಘನತೆ ಹೇಗೆ ಬರುತ್ತೆ ಗೊತ್ತಾ? ಆ ಹುದ್ದೆ ಎಷ್ಟು ಲಾಭ ತಂದು ಕೊಡುತ್ತೆ ಎಂಬ ಒಂದೇ ಅಂಶದಿಂದ! ಉದಾಹರಣೆಗೆ, ಪೊಲೀಸ್‌ ಪೇದೆಯ ಹುದ್ದೆಗಿಂತ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ಯಾಕೆ ಹೆಚ್ಚು ಘನತೆಯಿದೆ ಹೇಳು. ಪೇದೆಯ ಹುದ್ದೆಗೆ ಬರೀ ೫ ರುಪಾಯಿಯಿಂದ ೫೦೦ ರುಪಾಯಿ ಲಂಚ ಸಿಗುತ್ತೆ. ಅದೇ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿ ಇರುವಾತನಿಗೆ ೫೦೦ ರುಪಾಯಿಯಿಂದ ೫೦,೦೦೦ ರುಪಾಯಿ ಘನತೆಯಿದೆ. ಇನ್‌ಸ್ಪೆಕ್ಟರ್‌ ಹುದ್ದೆಗೆ ಲಕ್ಷ ರುಪಾಯಿಗಳಲ್ಲಿ ಘನತೆಯಿದೆ. ಹೀಗೆ ಹುದ್ದೆ ಹೆಚ್ಚಿದಂತೆಲ್ಲಾ ಘನತೆ ಹೆಚ್ಚುತ್ತಾ ಹೋಗುತ್ತದೆ! ಈ ಘನತೆ ಮೀರಿ ಕೋಟಿ ಗಟ್ಟಲೆ ಸಂಪಾದಿಸಿದರೆ ಮಿಕ್ಕವರ ಕಣ್ಣು ಆ ಹುದ್ದೆಯ ಮೇಲೆ ಬೀಳುತ್ತದೆ. ಆಗ ಲೋಕಾಯುಕ್ತ ವೆಂಕಟಾಚಲಯ್ಯ ದಾಳಿ ಮಾಡುತ್ತಾರೆ. ಪರಿಣಾಮವಾಗಿ ಲೋಕಾಯುಕ್ತ ಕಚೇರಿಯ ಅನೇಕ ಹುದ್ದೆಗಳ ಘನತೆ ಹೆಚ್ಚುತ್ತಾ ಹೋಗುತ್ತದೆ! ಶಾಸಕರು, ಸಂಸದರು, ಮಂತ್ರಿಗಳ ಹುದ್ದೆಗಳಿಗೂ ಇದೆ ನೀತಿ ಅನ್ವಯಿಸುತ್ತದೆ.

ಹೀಗೆ, ಇಡೀ ಸರ್ಕಾರಿ ವ್ಯವಸ್ಥೆಯ ಘನತೆ ಲಾಭದಾಯಕ ಹುದ್ದೆಗಳ ಮೇಲೆ ಅವಲಂಬಿತವಾಗಿದೆ. ಲಾಭದಾಯಕ ಹುದ್ದೆಗಳು ಹೆಚ್ಚಿದಷ್ಟೂ ಇಡೀ ಸರ್ಕಾರದ ಘನತೆ ಹೆಚ್ಚುತ್ತದೆ. ಆದ್ದರಿಂದ, ಲಾಭದಾಯಕ ಹುದ್ದೆಗಳ ಬಗ್ಗೆ ಯಾರೂ ಅಪಸ್ವರ ಎತ್ತಬಾರದು.
ಆದರೆ, ಒಬ್ಬರಿಗೆ ಒಂದೇ ಲಾಭದಾಯಕ ಹುದ್ದೆ ಎಂದು ಬೇಕಾದರೆ ಕಾನೂನು ಮಾಡಬಹುದು. ಇದರಿಂದ ದೇಶದಲ್ಲಿ ಹೆಚ್ಚಿನ ಜನರಿಗೆ ಲಾಭದಾಯಕ ಹುದ್ದೆ ಲಭಿಸಿ ಸರ್ವರ ಅಭಿವೃದ್ಧಿಯಾಗುತ್ತದೆ ಅಂತ ನನ್ನ ಸಲಹೆ.

ಒಂದು ವೇಳೆ ನನ್ನ ಸಲಹೆಗೆ ಮನ್ನಣೆ ನೀಡದೆ, ಸದ್ಯ ಲಾಭದ ಹುದ್ದೆಯಲ್ಲಿರುವ ಎಲ್ಲ ಶಾಸಕರೂ, ಸಂಸದರೂ ರಾಜೀನಾಮೆ ನೀಡುವಂತಾದರೆ, ಮತ್ತೆ ಚುನಾವಣೆ ನಡೆಸಬೇಕಾಗುತ್ತದೆ. ಇದರಿಂದ ದೇಶಕ್ಕೆ ನಷ್ಟವಾಗುತ್ತದೆ. ಹಾಗಾಗಬಾರದು ಎಂದರೆ, ಲಾಭದ ಹುದ್ದೆಗಳ ಗದ್ದಲ ತಕ್ಷಣ ಸ್ಥಗಿತವಾಗಬೇಕು.

ಲಾಭಾಕಾಂಕ್ಷಿ
ಲಾಸು ಪ್ರಸಾದ್‌ ಯಾದವ್‌


Kannada Prabha issue dated March 27, 2006

Priyanka Gets The Office-of-Profit Witch Sonia Quit

Tuesday, March 21, 2006

‘ಮಿಸ್‌ ಇಂಡಿಯಾ’ಗಳು ಹೆಚ್ಚುತ್ತಿದ್ದಾರೆ ಎಚ್ಚರಿಕೆ!

ಭುವನ ಸೌಂದರ್ಯದಲ್ಲಿ ಭಾರತ ನಂಬರ್-೧, ಗ್ರಾನ್‌ ಸ್ಲಾಂ ರ್ಯಾಂಕಿಂಗ್‌ ನಂ.೨ -
ಊರ್ವಶಿಗೆ ಮೊದಲ ಮಿಸ್‌ ಇಂಡಿಯಾ ಯೂನಿವರ್ಸ್‌ ರಂಭೆ ಪತ್ರ

ನಿಂಗೊತ್ತಾ? ಜಾಗತಿಕ ‘ಗ್ರಾನ್‌ ಸ್ಲಾಂ’ ಸೌಂದರ್ಯದಲ್ಲಿ ಭಾರತಕ್ಕೆ ೨ನೇ ಸ್ಥಾನವಿದೆ. ಭುವನ ಸುಂದರಿ ಸ್ಪರ್ಧೆಯನ್ನಷ್ಟೇ ಲೆಕ್ಕಕ್ಕೆ ಹಿಡಿದರೆ ಭಾರತಕ್ಕೆ ೧ನೇ ಗ್ರಾನ್‌ ಸ್ಲಾಂ ಪಟ್ಟ! ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ೩ನೇ ರ್ಯಾಂಕ್‌. ಮಿಸ್‌ ಇಂಟರ್‌ನ್ಯಾಶನಲ್‌ ಹಾಗೂ ಮಿಸ್‌ ಅರ್ಥ್‌ ಸ್ಪರ್ಧೆ ಭಾರತಕ್ಕೆ ತುಸು ಹೊಸತಾದ್ದರಿಂದ ಭಾರತದ ರ್ಯಾಂಕ್‌ ಇನ್ನೂ ಏರಿಲ್ಲ. ಆದರೂ, ಕ್ರಮವಾಗಿ ೫ ಹಾಗೂ ೧೨ನೇ ಸ್ಥಾನ ಭಾರತಕ್ಕಿದೆ.

ಊರ್ವಶಿ, ಊರ್ವಶಿ..
ಇದೂನೂ ಟೇಕ್‌ ಇಟ್‌ ಈಸಿ ಪಾಲಿಸಿ?

ಅಲ್ಲಾ ಕಣೆ, ಮೊನ್ನೆ ರಾತ್ರಿ ಟೀವೀಲಿ ಮಿಸ್‌ ಇಂಡಿಯಾ ಸ್ಪರ್ಧೆ ನೋಡಿದ್ಯಾ? ನಾನು ಯಾವ ಪ್ರೋಗ್ರಾಂ ಮಿಸ್‌ ಮಾಡಿದ್ರೂ ಈ ಸೌಂದರ್ಯ ಸ್ಪರ್ಧೆ ನೇರಪ್ರಸಾರ ನೋಡೋಕ್‌ ಮಾತ್ರ ಮರೆಯೋಲ್ಲ. ಈ ಸ್ಪರ್ಧೇಲಿ ಭಾಗವಹಿಸೋವ್ರಲ್ಲಿ ನನಗಿಂತ ಸುಂದರಿ ಯಾರಾದ್ರೂ ಇದ್ದಾಳಾ ಅಂತ ಆತಂಕದಿಂದಾನೇ ನೋಡ್ತೇನೆ. ಆಮೇಲೆ ಯಾರೂ ಇಲ್ಲಾಂತ ಖಚಿತ ಮಾಡ್ಕೊಂಡು ಸಮಾಧಾನ ಪಡ್ತೇನೆ! ಅಲ್ವಾ ಮತ್ತೆ... ನನಗಿಂತ ಸುಂದರಿ ಯಾರಾದ್ರೂ ಇರೋಕೆ ಸಾಧ್ಯಾನಾ?

ಏಯ್‌... ನಿನ್‌ ಬಗ್ಗೆ ಹೇಳ್ತಿಲ್ಲ ಕಣೆ. ನೀನೂ ನನ್‌ ಥರಾ ಸುಂದರೀನೇ. ಖರೇ ಹೇಳ್ಲಾ? ನಂಗೆ ತುಂಬಾ ವರ್ಷದಿಂದ ಒಂದು ಸಣ್ಣ ಅಹಂಕಾರ ಇತ್ತು. ನಾನು, ನೀನು, ಮೇನಕೆ ಮತ್ತು ತಿಲೋತ್ತಮೆ... ಮಾತ್ರ ತ್ರಿಲೋಕ ಸುಂದರಿಯರು. ನಮ್ಮನ್ನು ಬಿಟ್ರೆ ಇನ್ಯಾರೂ ಇಷ್ಟು ಸುಂದರಿಯರಲ್ಲ ಅನ್ನೋ ನಂಬಿಕೆಯಿತ್ತು. ಶ್ರೀಮಂತಿಕೆಗೆ ಕುಬೇರ ಹೇಗೋ, ಸೌಂದರ್ಯಕ್ಕೆ ನಾಮ ಹಾಗೆ ಅಂತ ನನ್ನೊಳಗೇ ಬೀಗ್ತಾಇದ್ದೆ. ಸೌಂದರ್ಯ ಅಂದರೆ ನಾಮ. ನಾಮ ಅಂದರೆ ಸೌಂದರ್ಯ ಅನ್ನೋ ಮಾತು ಕೇಳಿದಾಗೆಲ್ಲ ಖುಷಿಯಾಗ್ತಾ ಇತ್ತು. ಆದರೆ, ಈಗ ಸೌಂದರ್ಯ ಅಂದರೆ ಜನ ಐಶ್ವರ್ಯ ರೈ, ಸೆಕ್ಸಿ ಅಂದರೆ ಮಲ್ಲಿಕಾ ಶೆರಾವತ್‌ ಅಂತಾರೆ. ನಂಗೆ ಬೇಜಾರಾಗಲ್ವಾ ಹೇಳು? ನಿಂಗೂ ಬೇಜಾರಾಗಿರಬೇಕಲ್ವಾ? ಮೇನಕೆ, ತಿಲೋತ್ತಮೆಗೂ ಆಗಿರುತ್ತೆ ಬಿಡೆ.

ಇಷ್ಟಕ್ಕೂ ಈ ಮಿಸ್‌ ಇಂಡಿಯಾ ಸ್ಪರ್ಧೆ ಇದೆಯಲ್ಲಾ. ಇದು ಅಮೆರಿಕ ಮತ್ತು ಯೂರೋಪ್‌ನ ಸೌಂದರ್ಯ ಸ್ಪರ್ಧೆಗಳ ಮಾದರಿಯಲ್ಲಿ ಆರಂಭವಾದದ್ದು ಅಂತ ಮೊನ್ನೆ ಇಂದ್ರ ಹೇಳಿದ ಕಣೆ. ಆರಂಭದಲ್ಲಿ ’ಬಿಕಿನಿ ಡ್ರೆಸ್‌’ ಕಾರ್ಯಕ್ರಮವಾಗಿ ಆರಂಭವಾಯ್ತಂತೆ. ಆಮೇಲೆ ಅಮ ಟೀವಿ ಕಾರ್ಯಕ್ರಮಗಳಾಗಿ ರೂಪಾಂತರವಾದವಂತೆ.

ಕನ್ನಡದ ಉದಯ ಚಾನಲ್‌ನಲ್ಲಿ ಆದರ್ಶ ದಂಪತಿಗಳು ಅನ್ನೋ ಕಾರ್ಯಕ್ರಮ ಬರ್ತಿತ್ತಲ್ಲ. ಈಗ ಈ-ಟೀವಿಯಲ್ಲಿ ‘ಸಿಲ್ಲಿ ಲಲ್ಲಿ’ ಧಾರಾವಾಹಿ ಬರುತ್ತಲ್ಲ... ಹಾಗೆ, ಮಿಸ್‌ ವರ್ಲ್ಡ್‌, ಮಿಸ್‌ ಯೂನಿವರ್ಸ್‌, ಮಿಸ್‌ ಇಂಡಿಯಾ ಎಲ್ಲಾ ಈಗ ದುಡ್ಡು ಮಾಡೋ ಟೀವಿ ಕಾರ್ಯಕ್ರಮಗಳು ಅಷ್ಟೇ.

ಆದರ್ಶ ದಂಪತಿ ಕಾರ್ಯಕ್ರಮದಲ್ಲಿ ಬಹುಮಾನ ಪಡೆಯೋರು ನಿಜವಾಗ್ಲೂ ಆದರ್ಶ ದಂಪತಿಗಳು ಹೇಗಲ್ವೋ, ಈ ಸೌಂದರ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆಯೋರೂ ನಿಜವಾಗಿ ಸುಂದರಿಯರಲ್ಲ. ಈ ವರ್ಷದ ಮಿಸ್‌ ಇಂಡಿಯಾ ನೇಹಾ ಕಪೂರ್‌ ನೋಡು. ಬ್ಯೂಟಿಯಂತೆ ಬ್ಯೂಟಿ! ಈ ವರ್ಷ ಮಿಸ್‌ ಯೂನಿವರ್ಸ್‌ನಲ್ಲಿ ಸೋಲು ಗ್ಯಾರಂಟಿ.

ಈ ಜಗತ್ತಿನಲ್ಲಿ ಸುಂದರಿಯರು ಯಾರಾದರೂ ಇದ್ದರೆ ನಾಮ ನಾಲ್ಕೇ ಜನ ಅಂತ ಇಂದ್ರ ಹೇಳಿದ್ದಾನೆ ಕಣೆ. ಸೋ ನೈಸ್‌ ಆಫ್‌ ಹಿಮ್‌ ಅಲ್ವಾ?

ಈಗಂತೂ, ಪ್ರಪಂಚದಲ್ಲಿ ನೂರಾರು ರೀತಿಯ ಸುಂದರಿಯರ ಸ್ಪರ್ಧೆ ನಡೀತಿದೆ. ಮಿಸ್‌ ಯೂನಿವರ್ಸ್‌, ಮಿಸ್‌ ವರ್ಲ್ಡ್‌, ಮಿಸ್‌ ಇಂಟರ್‌ನ್ಯಾಶನ್‌, ಮಿಸ್‌ ಅರ್ತ್‌, ಮಿಸ್‌ ಇಂಟರ್‌ನ್ಯಾಶನ್‌ ಟೂರಿಸಂ, ಮಿಸ್‌ ಕಾಂಟಿನೆಂಟಲ್‌... ನಿಂದ ಹಿಡಿದು ಭಾರತದ ಮಿಸ್‌ ಇಂಡಿಯಾ, ಮಿಸ್‌ ಬೆಂಗಳೂರು, ಮಿಸ್‌ ದೊಡ್ಡಬಳ್ಳಾಪುರದ ವರೆಗೆ ಪ್ರತಿ ಊರು ಕೇರಿಗೂ ಒಂದೊಂದು ಸ್ಪರ್ಧೆಯಿದೆ. ಅಷ್ಟೇ ಅಲ್ದೇ, ಸುಡೊಕು ಸುಂದರಿ, ಬಿಕನಿ ಸುಂದರಿ, ಸೆಕ್ಸಿ ಸುಂದರಿ, ಮಂದಹಾಸ ಸುಂದರಿ, ಕೇಶ ಸುಂದರಿ, ತ್ವಚಾ ಸುಂದರಿ, ನೀಳ್ಗಾಲ ಸುಂದರಿ, ಇನಿದನಿಯ ಸುಂದರಿ... ಓಹೋಹೋ... ಸುಂದರಿಯರ ಪಟ್ಟಿ ಉದ್ದವಿದೆ. ಸಾಲದು ಅಂತ ಮದುವೆಯಾದ ಶ್ರೀಮತಿ ಸುಂದರಿ, ವೃದ್ಧ ಸುಂದರಿ, ಡುಮ್ಮಿ ಸುಂದರಿ ಅಂತೆಲ್ಲಾ ಇನ್ನೂ ಹಲವಾರು ಸ್ಪರ್ಧೆಗಳಿವೆ.

ಅಷ್ಟೇ ಅಲ್ಲ ಊರ್ವಶಿ,

ನಿಂಗೊತ್ತಾ? ಭಾರತದಲ್ಲಿ ಸುಂದರಿಯರ ಸಂಖ್ಯೆ ಹೆಚ್ಚುತ್ತಿದೆ. ಜಾಗತಿಕ ’ಗ್ರಾನ್‌ ಸ್ಲಾಂ’ ಸೌಂದರ್ಯದಲ್ಲಿ ಭಾರತಕ್ಕೆ ೨ನೇ ಸ್ಥಾನವಿದೆ. ಭುವನ ಸುಂದರಿ ಸ್ಪರ್ಧೆಯನ್ನಷ್ಟೇ ಲೆಕ್ಕಕ್ಕೆ ಹಿಡಿದರೆ ಭಾರತಕ್ಕೆ ೧ನೇ ಗ್ರಾನ್‌ ಸ್ಲಾಂ ಪಟ್ಟ! ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ೩ನೇ ರ್ಯಾಂಕ್‌. ಮಿಸ್‌ ಇಂಟರ್‌ನ್ಯಾಶನಲ್‌ ಹಾಗೂ ಮಿಸ್‌ ಅರ್ಥ್‌ ಸ್ಪರ್ಧೆ ಭಾರತಕ್ಕೆ ತುಸು ಹೊಸತಾದ್ದರಿಂದ ಭಾರತದ ರ್ಯಾಂಕ್‌ ಇನ್ನೂ ಏರಿಲ್ಲ. ಆದರೂ, ಕ್ರಮವಾಗಿ ೫ ಹಾಗೂ ೧೨ನೇ ಸ್ಥಾನ ಭಾರತಕ್ಕಿದೆ.

ಗ್ಲೋಬಲ್‌ ಬ್ಯೂಟಿಸ್‌ ಎಂಬ ಪ್ರತಿಷ್ಠಿತ ವೆಬ್‌ಸೈಟು ಈ ಲೆಕ್ಕವನ್ನು ಇಟ್ಟಿದೆ. ಪ್ರತಿ ಸೌಂದರ್ಯ ಸ್ಪರ್ಧೆಯಲ್ಲಿ ಆಯಾ ದೇಶದ ಪ್ರಗತಿಗನುಗುಣವಾಗಿ ಅಂಕಗಳನ್ನು ನೀಡುವ ಈ ವೆಬ್‌ಸೈಟು ಆ ಅಂಕಗಳ ಆಧಾರದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ದೇಶಗಳಿಗೆ ಸೌಂದರ್ಯದ ಗ್ರಾನ್‌ ಸ್ಲಾಂ ರ್ಯಾಂಕ್‌ ನೀಡಿದೆ. (ಪಟ್ಟಿ ನೋಡಿ)

ಗ್ಲೋಬಲ್‌ ಬ್ಯೂಟಿಸ್‌ ಗ್ರಾನ್‌ ಸ್ಲಾಂ
೨೦೦೫ರಲ್ಲಿ ಸ್ಥಾನ ----- ದೇಶ --------- ಅಂಕಗಳು
೧. ----------------- ವೆನಿಜುವೆಲಾ ----- ೬೦೧.೦೦
೨. ----------------- ಭಾರತ --------- ೫೫೭.೫೦
೩. ----------------- ಅಮೆರಿಕಾ ------- ೪೬೫.೦೦
೪. ----------------- ದಕ್ಷಿಣ ಆಫ್ರಿಕಾ --- ೩೪೨.೦೦
೫. ----------------- ಕೊಲಂಬಿಯಾ --- ೩೨೬.೦೦
೬. ----------------- ಪೋರ್ಟರಿಕೋ --- ೨೮೩.೦೦
೭. ----------------- ರಷ್ಯಾ ---------- ೨೭೮.೫೦
೮. ----------------- ಫಿಲಿಪೈನ್ಸ್‌ ------ ೨೭೬.೫೦
೯. ----------------- ಸ್ಪೇನ್‌ ---------- ೨೭೫.೫೦
೧೦. --------------- ಪೆರು ----------- ೨೩೩.೦೦


ಹೀಗೆ ದಿಢೀರ್‌ ಆಗಿ ಭಾರತದ ಸುಂದರಿಯರ ಸಂಖ್ಯೆ ಹೆಚ್ಚಾಗಲು ಕಾರಣವೇನು ಅಂತ ನಂಗೆ ಕುತೂಹಲ ಉಂಟಾಯ್ತು. ಅದಕ್ಕೆ ಒಂದು ತನಿಖೆ ನಡೆಸಿದಾಗ ಸತ್ಯ ಏನೂಂತ ಗೊತ್ತಾಯ್ತು. ಕಳೆದ ೧೦ ವರ್ಷಗಳ ಈಚೆ, ಸೌಂದರ್ಯ ಸ್ಪರ್ಧೆಗಳ ಸಂಖ್ಯೆ ಹೆಚ್ಚಾಗಿದೆ. ಈ ಸಮಯದಲ್ಲೇ ಭಾರತದಲ್ಲಿ ಟೆಲಿವಿಷನ್‌ ಕ್ರಾಂತಿಯಾಗಿದೆ. ಬಟ್ಟೆ ಬಿಚ್ಚುವ ಫ್ಯಾಷನ್‌ಗೆ ಜನ ಒಪ್ಪಿಕೊಂಡಿದ್ದಾರೆ. ಇದನ್ನು ನೋಡಲು ಪುರುಷರು ಹುಚ್ಚೆದ್ದಿದ್ದಾರೆ. ಫ್ಯಾಷನ್‌ಗೆ ಖರ್ಚು ಮಾಡಲು ಭಾರತದಲ್ಲಿ ಸಾಕಷ್ಟು ಹಣವಿದೆ. ಹಾಗಾಗಿ, ಭಾರತದ ಮೇಲೆ ಸೌಂದರ್ಯ ಪ್ರಸಾಧನಗಳ ಕಂಪನಿಗಳ ಕಣ್ಣಿದೆ. ಅದಕ್ಕೇ, ಭಾರತದಲ್ಲಿ ಸೌಂದರ್ಯ ಉದ್ಯಮ ಬೆಳೆಸಲು ನಿರ್ಧರಿಸಿರೋ ಈ ಕಂಪನಿಗಳು ವಿಪರೀತ ಬಂಡವಾಳ ಹೂಡಿವೆ. ಯುವ ಜನತೆಯ ಕ್ರೇಜ್‌ ಹೆಚ್ಚಿಸಲು ಸಿಕ್ಕ ಸಿಕ್ಕ ಸೌಂದರ್ಯ ಸ್ಪರ್ಧೆ ಹಾಗೂ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಿವೆ. ಈ ಹುಚ್ಚುಹೊಳೆಗೆ ಕೊಚ್ಚಿ ಹೋಗುತ್ತಿರುವ ನಮ್ಮ ಹುಡುಗ ಹುಡುಗಿಯರು ಫ್ಯಾಷನ್‌ ಲೋಕದ ದಾಸರಾಗುತ್ತಿದ್ದಾರೆ. ಪರಿಣಾಮವಾಗಿ ಜಗತ್ತಿನಲ್ಲೇ ಫ್ಯಾಷನ್‌ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಭಾರತವಾಗಿದೆ. ಅಜ್ಜಿಯರೂ ಬ್ಯೂಟಿ ಪಾರ್ಲರ್‌ಗೆ ಹೋಗ್ತಾ ಇರೋದೇ ಇದಕ್ಕೆ ಸಾಕ್ಷಿ!

ಇದು ತಪ್ಪಾ ಅಂತ ಕೇಳ ಬೇಡ ಊರ್ವಶಿ. ಕೆಲಮ ವಿಷಯಗಳಲ್ಲಿ ತಪ್ಪೋ ಸರಿಯೋ ಅನ್ನೋದು ಮುಖ್ಯವಲ್ಲ. ಇಷ್ಟವಾಗುತ್ತೋ ಇಲ್ಲವೋ ಅನ್ನೋದಷ್ಟೇ ವಾಸ್ತವವಾಗುತ್ತೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಹೇಳಿದ್ದ ಮಾತು ನಿಜ ಕಣೆ. ’ಸೌಂದರ್ಯ ಸ್ಪರ್ಧೆಯನ್ನು ಯಾಕೆ ವಿರೋಧಿಸ್ತೀರಿ? ಸೌಂದರ್ಯ ಇರೋರು ತೋರಿಸ್ತಾರೆ. ಆಸಕ್ತಿ ಇರೋರು ನೋಡಿಕೊಳ್ತಾರೆ. ಉಳಿದೋರು ತಮ್ಮ ತಮ್ಮ ಕೆಲಸ ನೋಡಿಕೊಳ್ಳಲಿ...’ ಅಂತ.

ನಂಗೆ ಅದಲ್ಲ ಕಣೆ ಚಿಂತೆ. ಈಗಿನ ಮಿಸ್‌ ಇಂಡಿಯಾಗಳಾದರೋ ವರ್ಷ ಕಳೆದ ಕೂಡಲೇ ಮಾಜಿ ಆಗುತ್ತಾರೆ. ಆದರೆ, ಈ ದೇಶದ ಮೊಟ್ಟ ಮೊದಲ ಮಿಸ್‌ ಇಂಡಿಯಾಗಳಾದ ನಾವಿನ್ನೂ ಮಾಜಿಗಳಾಗದೇ ಹಾಗೂ ಹೀಗೂ ಈವರೆಗೂ ಉಳಿದುಕೊಂಡಿಡ್ವಿ. ಆದ್ರೆ, ಭಾರತದಲ್ಲಿ ಈ ರೀತಿ ಮಿಸ್‌ ಇಂಡಿಯಾಗಳ ಸಂಖ್ಯೆ ಹೆಚ್ಚುತ್ತಾ ಹೋದ್ರೆ ನಮ್ಮ ಸ್ಥಾನ ಎಲ್ಲಿ ಮಿಸ್‌ ಆಗುತ್ತೋ ಅಂತ ಕಾಳಜಿಯಾಗಿದೆ.

ನೀನಗೇನೂ ಅನ್ನಿಸ್ತಿಲ್ವಾ ಊರ್ವಶಿ? ಇದಕ್ಕೆ ನಿನ್ನದೇನು ಸಮಜಾಯಿಶಿ?

ಮೊದಲ ಮಿಸ್‌ ಇಂಡಿಯಾ ಯೂನಿವರ್ಸ್‌
ರಂಭೆ

Kannada Prabha issue dated March 20, 2006

Beware... Miss Indias are increasing!

Tuesday, March 14, 2006

ಕಾಶಿಯಲ್ಲಿ ಬಾಂಬ್‌ ಸ್ಫೋಟಿಸಿದ ಉಗ್ರರಿಗೆ ನಿರಾಶೆ

ಇಡೀ ಭಾರತ ಹೊತ್ತಿ ಉರಿಯುತ್ತದೆ ಎಂದುಕೊಂಡಿದ್ದು ಸುಳ್ಳಾಯಿತಲ್ಲ:
ಲಾಡೆನ್‌ಗೆ ಉಗ್ರನ ಪತ್ರ


ನಾಮ ಕಾಶಿ ಬಾಂಬ್‌ ಘಟನೆಯ ಕುರಿತು ಒಂದು ಮಾರ್ಕೆಟ್‌ ಸರ್ವೆ ನಡೆಸಿದೆಮ. ಈ ಸಮೀಕ್ಷೆಯಲ್ಲಿ ಅಚ್ಚರಿಯ ವಿಷಯವೊಂದು ಪತ್ತೆಯಾಗಿದೆ. ಕಾಶಿಯಲ್ಲಿ ಬಾಂಬ್‌ ಸ್ಫೋಟಗೊಂಡಿರುವ ಬಗ್ಗೆ ಜನರಿಗೆ ಅಂತಹ ಭಯವೇನೂ ಆಗಿಲ್ಲವಂತೆ. ಆದರೆ, ಇದೇ ಬಾಂಬ್‌ ಏನಾದರೂ ಮೆಕ್ಕಾದಲ್ಲಿ ಸ್ಫೋಟಗೊಂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಊಹೆಯೇ ಜನರಿಗೆ ಭಯ ಉಂಟುಮಾಡಿದೆಯಂತೆ.



$$iND987432$$

*********

ತಮ್ಮೊಡನೆ ಸಂಪರ್ಕ ಹೊಂದಿರಲು ಅಂತಾರಾಷ್ಟ್ರೀಯ ಜಿಹಾದಿ ದಂಡನಾಯಕರು ಬಳಸುವ ಈ ಮೇಲಿನ ಎರಡೂ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ಸರಿಯಾಗಿದೆ ಎಂದು ಭಾವಿಸುತ್ತೇನೆ. ಹಾಗೆಯೇ ನನ್ನ ಪರಿಚಯಕ್ಕಾಗಿ ಈ ಕೆಳಗಿನ ಐಡಿ ಮತ್ತು ಪಾಸ್‌ವರ್ಡನ್ನು ತಾಮ ತಮ್ಮ ಲ್ಯಾಪ್‌ಟಾಪಿನಲ್ಲಿ ಪರಿಶೀಲಿಸಿ ಖಾತ್ರಿ ಮಾಡಿಕೊಳ್ಳಬಹುದಾಗಿ ವಿನಂತಿಸುತ್ತೇನೆ.
$$iND987432$$

*********

ಮರ್‍ಹಬಾ ಲಾಡನ್‌, ಕೈಫಾ ಹಲೂಕ್‌?
ಅಲ್‌ ಹಮ್ದು ಲೆಲ್ಲಾಹ್‌. ನಾನು ಆರಾಂ ಇದ್ದೇನೆ. ಹೆಚ್ಚು ಹೆಚ್ಚು ಭಯೋತ್ಪಾದನೆಗಳಲ್ಲಿ ಯಶಸ್ವಿಯಾಗುತ್ತಿದ್ದೇನೆ. ನಮಗೆ ಸಾಕಷ್ಟು ನೆರಮ ಹಾಗೂ ನೈತಿಕ ಬೆಂಬಲ ನೀಡುತ್ತಿರುಮದಕ್ಕೆ ಶುಕ್ರಾನ್‌.

ಕಳೆದ ವಾರ ಕಾಶಿಯ ಸಂಕಟ ಮೋಚನ ಹನುಮಾನ್‌ ಮಂದಿರದಲ್ಲಿ ಬಾಂಬ್‌ ಸ್ಫೋಟ ಮಾಡುವಲ್ಲಿ ನಾಮ ಯಶಸ್ವಿಯಾಗಿದ್ದಕ್ಕೆ ತಾಮ ಕಳಿಸಿದ ಮಬ್ರೂಕ್‌ ಸಂದೇಶ ತಲುಪಿದೆ. ಹಿಂದೂಗಳ ಪರಮ ಪವಿತ್ರ ಕ್ಷೇತ್ರದಲ್ಲೇ ಭಯೋತ್ಪಾದನೆ ನಡೆಸಿದ್ದಕ್ಕೆ ನೀಮ ಹರ್ಷ ವ್ಯಕ್ತಪಡಿಸಿದ್ದೀರಿ. ಶುಕ್ರಾನ್‌.

ಆದರೆ, ಅಫ್‌ವಾನ್‌... ನಾವಂದುಕೊಂಡಂತೆ, ಈ ಬಾಂಬ್‌ ಸ್ಫೋಟದಿಂದ ಏನೂ ಪ್ರಯೋಜನವಾಗಿಲ್ಲ ಎನ್ನುವ ಖೇದದ ಸಂಗತಿಯನ್ನು ನಿಮಗೆ ತಿಳಿಸಬೇಕಾಗಿದೆ.

ಕಾಶಿಯಂಥ ಪವಿತ್ರ ಕ್ಷೇತ್ರಕ್ಕೆ ಬಾಂಬ್‌ ಹಾಕಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಭೆ ಉಂಟುಮಾಡಬೇಕು ಅಂತ ನಮ್ಮ ಉದ್ದೇಶವಾಗಿತ್ತು. ಆದರೆ, ನಮ್ಮ ಮೂಲ ಉದ್ದೇಶವೇ ವಿಫಲವಾಗಿದೆ. ಯಾಕೆ ಅಂತಾನೇ ಗೊತ್ತಾಗ್ತಾ ಇಲ್ಲ.

ನಮ್ಮ ಪ್ರಕಾರ, ಕಾಶಿಯ ದೇವಾಲಯದಲ್ಲಿ ಬಾಂಬ್‌ ಸ್ಫೋಟವಾದ ಸುದ್ದಿ ಟೀವಿಯಲ್ಲಿ ಪ್ರಸಾರವಾಗುತ್ತಿದ್ದಂತೆ, ಇಡೀ ಭಾರತ ಉದ್ವಿಗ್ನವಾಗಬೇಕಿತ್ತು. ರಾತ್ರೋ ರಾತ್ರಿ ಹಿಂದೂಗಳು ಕ್ರುದ್ಧರಾಗಿ ಹಿಂಸಾಚಾರ ಆರಂಭಿಸಬೇಕಿತ್ತು. ಕೋಮು ಗಲಭೆಗಳಾಗಿ ದೇಶವೆಲ್ಲ ತಲ್ಲಣಗೊಳ್ಳಬೇಕಿತ್ತು. ಕನಿಷ್ಠ ನೂರಾರು ಮುಸ್ಲಿಮರನ್ನು ಹಿಂದುಗಳು ಇರಿದು ಕೊಂದುಹಾಕುತ್ತಾರೆ ಅಂತ ನಾಮ ಅಂದುಕೊಂಡಿದ್ದೆಮ. ಒಂದೆರಡು ಮಸೀದಿಗಳ ಮೇಲೆ ದಾಳಿ ನಡೆಯುತ್ತದೆ ಅಂತ ನಮ್ಮ ನಿರೀಕ್ಷೆಯಿತ್ತು.

ಕನಿಷ್ಠ ೧೫ ದಿನ ಭಾರತ ಹಿಂದೂ ಮುಸ್ಲಿಂ ಹಿಂಸೆಯಲ್ಲಿ ನಲುಗಿಹೋಗುತ್ತದೆ ಅನ್ನುವ ನಂಬಿಕೆ ನಮ್ಮದಾಗಿತ್ತು. ನಮ್ಮದಷ್ಟೇ ಅಲ್ಲ, ಭಾರತದಾದ್ಯಂತ ಎಲ್ಲ ಸಾಮಾನ್ಯ ಜನರ ಭಯವೂ ಇದೇ ಆಗಿತ್ತು.

ಆದರೆ, ಹಾಗಾಗಲೇ ಇಲ್ಲ. ಇಡೀ ಭಾರತ ಬಹಳ ಜವಾಬ್ದಾರಿಯಿಂದ ವರ್ತಿಸಿತು. ಸ್ವಲ್ಪ ಕೂಡ ಹಿಂಸಾಚಾರ ಆಗದಂತೆ ಇಡೀ ದೇಶ ಎಚ್ಚರ ವಹಿಸಿತು. ಇದು ಹೇಗೆ ಸಾಧ್ಯವಾಯಿತು? ಹಿಂಸಾಚಾರ ಭುಗಿಲೇಳದಂತೆ ತಡೆದವರು ಯಾರು ಅಂತಾನೇ ಗೊತ್ತಾಗ್ತಾ ಇಲ್ಲ. ನಮಗಷ್ಟೇ ಅಲ್ಲ... ಭಾರತದ ಜನಸಾಮಾನ್ಯರಿಗೂ ಇದೇ ಅಚ್ಚರಿಯ ವಿಷಯ!

ನಾಮ ಒಂದು ವಾರ ಹಾಗೂ ಹೀಗೂ ಕಾದು ನೋಡಿದ್ದಾಯ್ತು. ಈ ಬಿಜೆಪಿಯವರು, ಹಿಂದೂ ಪರಿವಾರದವರು ದೇಶದ ಶಾಂತಿ ಕದಡುವ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಅವರು ಯಾಮದೇ ಪ್ರಚೋದನಾತ್ಮಕ ಹೇಳಿಕೆ ನೀಡದೇ ಬಹಳ ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ. ಜನತೆ ಸಹನೆಯಿಂದ ಇರುವಂತೆ ಕರೆ ನೀಡಿದ್ದಾರೆ. ಈ ಹಿಂದುಗಳೂ ಕೆರಳದ ಹೊರತು ನಾಮ ಮುಸ್ಲಿಮರ ಕಿಚ್ಚು ಎಬ್ಬಿಸಲು ಸಾಧ್ಯವಾಗ್ತಾ ಇಲ್ಲ.

ಒಟ್ಟಿನಲ್ಲಿ ನಮ್ಮ ಕಾಶಿ ಬಾಂಬ್‌ ಪುಸ್‌ ಅಂದಿದೆ... ಹಿಂಸೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇದರಿಂದ ನಮ್ಮ ತಂಡದ ಎಲ್ಲರಿಗೂ ಬಹಳ ನಿರಾಶೆಯಾಗಿದೆ. ಕಾಶಿಗೆ ಬಾಂಬ್‌ ಹಾಕಿದರೂ ಏನೂ ಆಗಲಿಲ್ಲ ಎಂದರೆ, ಇನ್ಯಾವ ರೀತಿಯ ಭಯೋತ್ಪಾದನೆ ಮಾಡುಮದು ಅಂತ ನಮ್ಮ ಕೆಲಮ ಯುವಕರು ಚಿಂತೆಗೆ ಒಳಗಾಗಿದ್ದಾರೆ.

ಈ ಸಮಯದಲ್ಲಿ ನಮ್ಮ ಯುವಕರ ‘ಜಿಹಾದ್‌’ ಇಚ್ಛಾಶಕ್ತಿ ಉಡುಗದಂತೆ ತಾವೇ ಏನಾದರೂ ಮಾಡಬೇಕು. ತಮ್ಮ ಉಪನ್ಯಾಸದ ಲೇಟೆಸ್ಟ್‌ ಕ್ಯಾಸೆಟ್‌ ಒಂದನ್ನು ಕಳಿಸಿಕೊಡಿ. ಅದನ್ನು ನೋಡಿಯಾದರೂ ನಮ್ಮ ಯುವ ಜಿಹಾದ್‌ ಸೇನಾನಿಗಳಿಗೆ ಉತ್ಸಾಹ ಬಂದೀತು!

ಹಾಗೆ ನೋಡಿದರೆ, ಈ ಭಾರತದ ಹೊಸ ಪರಿಸ್ಥಿತಿಯೇ ನಮಗೆ ಬಹಳ ನಿರಾಸೆ ತರುವಂತಿದೆ. ಮೊದಲಿನಂತೆ ಹಿಂದೂ ಧರ್ಮದ ಹೆಸರಿನಲ್ಲಿ ಶಾಂತಿ ಕದಡುಮದು ನಮಗೆ ಸಾಧ್ಯವಾಗುತ್ತಿಲ್ಲ.

ಉದಾಹರಣೆಗೆ: ಇತ್ತೀಚೆಗೆ ರೋಮ್‌ನ ಒಂದು ಬಾರ್‌ನಲ್ಲಿ ದುರ್ಗಾ ದೇವಿಯ ಕೈಯಲ್ಲಿ ಹೆಂಡದ ಬಾಟಲಿಗಳನ್ನು ಹಿಡಿಸಿರುವ ಜಾಹೀರಾತು ಪೋಸ್ಟರುಗಳನ್ನು ಹಚ್ಚಲಾಯಿತು. ಈ ಸುದ್ದಿ ಕೇಳಿದ ಹಿಂದೂಗಳು ಕೆರಳಿ ಹಿಂಸಾಚಾರಕ್ಕೆ ಇಳಿಯಲಿಲ್ಲ. ಎಂ. ಎಫ್‌. ಹುಸೇನ್‌ ಎಂಬ ಮಹಾ ಕಲಾವಿದ ಹಿಂದೂಗಳ ದೇವರನ್ನೂ, ಭಾರತ ಮಾತೆಯನ್ನೂ ಕಲಾತ್ಮಕವಾಗಿ ನಗ್ನಗೊಳಿಸಿದ. ಒಂಚೂರು ಪ್ರತಿಭಟನೆ ನಡೆಯಿತು ಎಂಬುದನ್ನು ಬಿಟ್ಟರೆ ಹುಸೇನ್‌ಗೆ ಹಿಂದಿನಂತೆ ಭಾರೀ ಪ್ರಚಾರ ಸಿಗಲಿಲ್ಲ. ಅಲ್ಲೊಂದು ಇಲ್ಲೊಂದು ದೇವರ ಪ್ರತಿಮೆಗಳು ಭಗ್ನವಾದರೂ ಉದ್ವಿಗ್ನ ಪರಿಸ್ಥಿತಿ ಗ್ರಾಮದ ಗಡಿ ದಾಟಲಿಲ್ಲ.

ಇದೇ ರೀತಿ ಮುಂದುವರಿದರೆ, ಮತಾಂಧತೆಯ ಮಂತ್ರದಿಂದ ಹಿಂದೂಗಳನ್ನು ರೊಚ್ಚಿಗೆಬ್ಬಿಸುಮದು ಕಷ್ಟ ಅಂತ ನಮಗನ್ನಿಸಿದೆ. ಸದ್ಯ ನಾವಂತೂ ಇನ್ನಷ್ಟು ಹಿಂದೂ ದೇವಾಲಯಗಳು ಹಾಗೂ ಪುಣ್ಯ ಕ್ಷೇತ್ರಗಳ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದೇವೆ. ಆದರೆ, ಅಮಗಳಿಂದ ನಿಶ್ಚಿತ ಫಲ ದೊರೆಯುಮದೇ ಅಂತ ನಮಗೇ ಗೊಂದಲ ಉಂಟಾಗಿದೆ.

ಇಷ್ಟಕ್ಕೂ ಜನರು ಈಗ ಬಾಂಬಿಗೆ ಬೆದರುತ್ತಲೇ ಇಲ್ಲ. ಮೊದಲಾದರೆ ಹುಸಿಬಾಂಬ್‌ ಕರೆಗೂ ಜನ ಹೆದರಿ ವಾರಗಟ್ಟಲೆ ಅಳುಕಿ ನಡೆಯುತ್ತಿದ್ದರು. ಈಗ ಶಕ್ತಿಶಾಲಿ ಬಾಂಬ್‌ ಸಿಡಿದರೂ ಕೆಲವೇ ಗಂಟೆಗಳಲ್ಲಿ ಆರಾಮವಾಗಿ ಅಲ್ಲಿ ಜನ ನಡೆದಾಡಿಕೊಂಡಿರುತ್ತಾರೆ. ಬಾಂಬುಗಳಿಗೆ ಜನ ಒಗ್ಗಿಹೋಗಿದ್ದಾರೆ. ಹೀಗಾದರೆ, ನಾಮ ಭಯೋತ್ಪಾದನೆ ಮಾಡುಮದು ಹೇಗೆ ಎಂಬ ಭಯ ನಮಗೇ ಉಂಟಾಗಿದೆ.

ಸಾಲದು ಎಂಬಂತೇ, ರಾಜಕಾರಣಿಗಳೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಹೊಸ ವಿದ್ಯೆ ಕಲಿತುಕೊಂಡಿರುಮದು ನಮ್ಮ ಹಿನ್ನಡೆಗೆ ಇನ್ನೊಂದು ಕಾರಣ. ಬಾಂಬ್‌ ಸ್ಫೋಟವಾದ ಕೆಲವೇ ಗಂಟೆಯಲ್ಲಿ ಪೊಲೀಸರು ಯಾರನ್ನೋ ಹಿಡಿದು ಹಾಕಿ ಈತನೇ ‘ಬಾಂಬರ್‌’ ಎಂದು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಅಥವಾ ಯಾರನ್ನೋ ಗುಂಡುಹೊಡೆದು ಸಾಯಿಸಿ ಈತನೇ ಬಾಂಬ್‌ ಇಟ್ಟವನು ಅಂತ ಟೀವಿಯಲ್ಲಿ ತೋರಿಸುತ್ತಾರೆ. ಅದು ನಿಜವೋ ಸುಳ್ಳೋ ಎಂಬುದು ಗೊತ್ತಾಗುವ ಹೊತ್ತಿಗೆ ಇಡೀ ಘಟನೆಯ ಮೇಲೆ ಮಾಧ್ಯಮಗಳಿಗೆ ಹಾಗೂ ಜನರಿಗೆ ಆಸಕ್ತಿ ಕಡಿಮೆಯಾಗುತ್ತದೆ. ಸುದ್ದಿ ಮೊದಲ ಪುಟದಿಂದ ಒಳಪುಟಕ್ಕೆ ಜಾರುತ್ತದೆ. ಬೆಂಗಳೂರು ಐಐಎಸ್‌ಸಿ ಮೇಲಿನ ದಾಳಿ, ದೆಹಲಿಯಲ್ಲಿ ಬಾಂಬ್‌ ಸ್ಫೋಟ ಹಾಗೂ ಕಾಶಿಯಲ್ಲಿ ಬಾಂಬ್‌ ಸ್ಫೋಟ... ಎಲ್ಲ ಘಟನೆಯಲ್ಲೂ ಹೀಗೇ ಆಯಿತು.

ಈ ಸಿನಿಮಾಗಳೋ... ನಮಗಿಂತಲೂ ಹೆಚ್ಚು ಭಯೋತ್ಪಾದನೆ ಉಂಟು ಮಾಡುತ್ತವೆ. ಲಾಂಗು, ಮಚ್ಚು, ಬಾಂಬು, ಪಿಸ್ತೂಲು, ರಕ್ತ, ಕಿರುಚಾಟ ಇಲ್ಲದ ಸಿನಿಮಾವೇ ಇಲ್ಲ. ಇವಿಷ್ಟು ಐಟಂ ಹೆಚ್ಚಿದ್ದಷ್ಟೂ ಸಿನಿಮಾ ಹಿಟ್‌ ಆಗುತ್ತವೆ. ಹಿಂಸೆ ಹೆಚ್ಚಾದಷ್ಟೂ ಜನ ಆನಂದ ಪಡುತ್ತಾರೆ. ಹಾಗಾಗಿ ಜನ ಭಯೋತ್ಪಾದನೆಯನ್ನೂ ಹಿಂದಿ ಸಿನಿಮಾಗಳ ಥರ ಎಂಜಾಯ್‌ ಮಾಡೋದನ್ನು ಕಲಿತುಬಿಟ್ಟಿದ್ದಾರೆಯೇ ಅಂತ ನಮ್ಮ ಅನುಮಾನ.

ನಾಮ ಕಾಶಿ ಬಾಂಬ್‌ ಘಟನೆಯ ಕುರಿತು ಒಂದು ಮಾರ್ಕೆಟ್‌ ಸರ್ವೆ ನಡೆಸಿದೆಮ. ಈ ಸಮೀಕ್ಷೆಯಲ್ಲಿ ಅಚ್ಚರಿಯ ವಿಷಯವೊಂದು ಪತ್ತೆಯಾಗಿದೆ. ಕಾಶಿಯಲ್ಲಿ ಬಾಂಬ್‌ ಸ್ಫೋಟಗೊಂಡಿರುವ ಬಗ್ಗೆ ಜನರಿಗೆ ಅಂತಹ ಭಯವೇನೂ ಆಗಿಲ್ಲವಂತೆ.

ಆದರೆ, ಇದೇ ಬಾಂಬ್‌ ಏನಾದರೂ ಮೆಕ್ಕಾದಲ್ಲಿ ಸ್ಫೋಟಗೊಂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಊಹೆಯೇ ಜನರಿಗೆ ಭಯ ಉಂಟುಮಾಡಿದೆಯಂತೆ. ಒಂದು ಕಾರ್ಟೂನ್‌ ವಿಶ್ವಾದ್ಯಂತ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಲು ಯಶಸ್ವಿಯಾದರೆ ಒಂದು ಬಾಂಬ್‌ ಇನ್ನೆಂತಹ ಪರಿಸ್ಥಿತಿಯನ್ನು ಉಂಟುಮಾಡಬಲ್ಲದು ಎಂಬ ಕಲ್ಪನೆಯೇ ಹೆಚ್ಚು ಭಯಾನಕ. ಥ್ಯಾಂಕ್‌ ಗಾಡ್‌. ಮೆಕ್ಕಾದಲ್ಲಿ ಈ ಬಾಂಬ್‌ ಸ್ಫೋಟಿಸಲಿಲ್ಲ ... ಎಂದು ಸಮೀಕ್ಷೆಯಲ್ಲಿ ವ್ಯಕ್ತಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಮ ದೇಶದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಲು ಹೊಸ ದಾರಿಯನ್ನು ಹುಡುಕಬೇಕಾಗಿದೆ. ಇದಕ್ಕೆ ಭಯೋತ್ಪಾದನಾ ಎಕ್ಸ್‌ಪರ್ಟ್‌ ಆದ ತಾವೇ ಏನಾದರೂ ಸಲಹೆ ನೀಡಬೇಕು. ಆಸೆಫ್‌. ಅಫ್‌ವಾನ್‌. ನಾನು ತಮಗೆ ಈ ರೀತಿಯ ಪತ್ರ ಬರೆಯಬೇಕಾಯಿತು. ದಯವಿಟ್ಟು ದಾರಿ ತೋರಿ. ಇಲ್ಲವಾದರೆ ನಾಮ ಸಿನಿಮಾ ಡೈರಕ್ಟರುಗಳು ಹಾಗೂ ಚಿತ್ರಕಥೆಗಾರರ ಸಲಹೆ ಕೋರಬೇಕಾಗುತ್ತದೆ.

ತಮ್ಮ ಮಾರ್ಗದರ್ಶನದ ನಿರೀಕ್ಷೆಯಲ್ಲಿ,

-ಖುದಾ ಆಫೀಸ್‌

$$iND987432$$



Kannada Prabha issue dated March 13, 2006

Kashi Bombers are disappointed

--

Tuesday, February 28, 2006

ಈಗ ಪತ್ತೆಯಾಗಿದೆ ನಮ್ಮ ಕೋರ್ಟುಗಳ ವೈಫಲ್ಯಕ್ಕೆ ಕಾರಣ

ತನ್ನ ಪತ್ತೆದಾರಿ ಕೆಲಸದ ಕುರಿತು ಬೀರಬಲ್‌ಗೆ
‘ವಿಕಟೆಕಟೆಕವಿ’ ತೆನಾಲಿರಾಮನ ಪತ್ರ


ಈಗ ವಕೀಲರ ವಾದಗಳ ನಡುವೆ ಸತ್ಯವನ್ನು ಹುಡುಕಿ ತೆಗೆಯಲು ನ್ಯಾಯಾಧೀಶರಿಗೆ ಬಹುತೇಕ ಪ್ರಕರಣಗಳಲ್ಲಿ ಸಾಧ್ಯವಾಗುಮದಿಲ್ಲ. ಜೆಸ್ಸಿಕಾ ಪ್ರಕರಣದಲ್ಲಿ ಆದದ್ದೂ ಇದೇ. ಆದರೆ, ನಮ್ಮ ಕಾಲದಲ್ಲಿ ವಾದಿ-ಪ್ರತಿವಾದಿ ವಕೀಲರಿರಲಿಲ್ಲ. ನಾವೇ ಜಾಣತನದಿಂದ ಅಪರಾಧಿ ಬಾಯಿಂದ ನಿಜ ಹೊರಡಿಸುತ್ತಿದ್ದೆಮ. ಅಪರಾಧಿಗಳಿಗಿಂತ ನಾಮ ಹೆಚ್ಚು ಜಾಣರಾದ್ದರಿಂದ ಸತ್ಯಕ್ಕೇ ಜಯವಾಗುತ್ತಿತ್ತು.


ಹಾಯ್‌ ಬೀರ್ಬಲ್‌, ಹೌ ಆರ್ ಯು?

ಹೌಹಾರಿದ್ಯಾ... ಈ ಪತ್ರ ನೋಡಿ!
ನಾನು ಕಣಯ್ಯಾ ತೆನಾಲಿ ರಾಮ. ಇದೇನು ಸಡನ್ನಾಗಿ ನಾನು ನಿಂಗೆ ಪತ್ರ ಬರೆದಿದ್ದೇನೆ ಅಂತ ನಿಂಗೆ ಸರ್‌ಪ್ರೈಸ್ ಆಗಿರಬೇಕಲ್ಲ. ಹೀಗೆ ಎಲ್ಲಾರನ್ನೂ ಸರ್‌ಪ್ರೈಸ್ ಮಾಡೋದೇ ನನ್‌ ಸ್ಟೈಲು ಗೊತ್ತಲ್ಲ? ಅದಿರಲಿ, ನಾನು ನಿಂಗೆ ಈ ಪತ್ರ ಬರೆಯೋಕೆ ಒಂದು ಕಾರಣ ಇದೆ. ನಾನು ಇತ್ತೀಚೆಗೆ ಒಂದು ಮಹತ್ವದ ಪತ್ತೆದಾರಿ ಕೆಲಸ ಮಾಡಿದ್ದೇನೆ. ಆ ವಿಚಾರವನ್ನ ನಿನ್ನತ್ರ ಸ್ವಲ್ಪ ಡಿಸ್‌ಕಸ್‌ ಮಾಡೋದಿತ್ತು.

ಎಕ್ಚುವಲಿ ನಮ್ಮ ಕಾಲ ಮುಗಿದು ಶತಮಾನಗಳೇ ಆಯ್ತು ಅನ್ನೋದು ನಿಜ. ಈಗ ಎಷ್ಟೋ ಎಜುಕೇಟೆಡ್‌ ಹುಡುಗರಿಗೆ ನಮ್ಮಿಬ್ಬರ ಹೆಸರೇ ಗೊತ್ತಿಲ್ಲ. ನಾಕೌಟ್‌ ಗಿರಾಕಿಗಳು... ಬೀರ್‌ ಓಕೆ. ಬಲ್‌ ಯಾಕೇ... ಅಂತ ಕೂಗ್ತಾರೆ. ನಮ್ಮ ಕಥೆ ಕೇಳಿ ಗೊತ್ತಿರೋರಂತೂ ನಮ್ಮನ್ನ ಜೋಕರ್‌ಗಳ ಥರ ನೋಡ್ತಾರೆ. ಪ್ರೆೃಮರಿ ಸ್ಕೂಲಲ್ಲಿ ಕಲಿತಿರೋ ಮಕ್ಕಳಿಗೆ ನಮ್ಮ ಹೆಸರು ಗೊತ್ತಿರುತ್ತೆ. ದುರದೃಷ್ಟವಶಾತ್‌ ಅವರು ನಮ್ಮನ್ನೂ ಮಿಕ್ಕಿ ಮೌಸ್‌, ಸ್ಕೂಬಿ ಡೂ, ಟಾಮ್‌ ಆಂಡ್‌ ಜೆರ್ರಿ ಥರ ಕಾರ್ಟೂನ್‌ ಅಂದುಕೊಂಡಿರ್ತಾರೆ. ಐ ಪಿಟಿ ಯೂ. ಯೂ ಪಿಟಿ ಮಿ!

ಅಲ್ವಾ ಮತ್ತೆ? ಎಷ್ಟು ಜನರು ನಮ್ಮನ್ನು ಅತಿ ಬುದ್ಧಿವಂತ ನ್ಯಾಯದಾನಿಗಳು ಅಂತ ಗುರುತಿಸುತ್ತಾರೆ? ಕೃಷ್ಣದೇವರಾಯನ ಆಸ್ಥಾನದಲ್ಲಿ ನಾನು ವಿದೂಷಕ ಆಗಿದ್ದೆ ಅನ್ನೋದು ನಿಜ. ಆದರೆ, ನಾನು ಬುದ್ಧಿವಂತ ವಿಕಟಕವಿ ಕೂಡ ಆಗಿದ್ದೆನಲ್ಲ. ನನ್ನ ಲಾ ನಾಲೆಜ್‌ನಿಂದಾಗಿ ನಾನು ಕೋರ್ಟಿನ ಕಟೆಕಟೆಯಲ್ಲೂ ಎತ್ತಿದ ಕೈ ತಾನೆ. ಅದಕ್ಕೆ ನನ್ನನ್ನು ಬೇಕಾದರೆ ನೀನು ‘ವಿಕಟೆಕಟೆಕವಿ’ ಅಂತ ಕರಿ. ನೀನು? ಅಕ್ಬರ್‌ ಮಹಾರಾಜನ ಆಸ್ಥಾನದ ನವರತ್ನಗಳಲ್ಲಿ ಎಲ್ಲರಿಗೂ ಗೊತ್ತಿರುವ ಏಕೈಕ ರತ್ನ ತಾನೆ? ಈ ದೇಶ ಕಂಡ ಚಾಣಾಕ್ಷ ಮಂತ್ರಿ. ಆದರೂ ಜನ ನಿನ್ನನ್ನು ನೆನಪು ಮಾಡಿಕೊಳ್ಳುಮದು ನಿನ್ನ ತಮಾಷೆಯ ಕಥೆಗಳಿಗಾಗಿ ಮಾತ್ರ. ಹೌ ರಿಡಿಕ್ಯುಲಸ್‌!

ನಮ್ಮಿಬ್ಬರ ನ್ಯಾಯದಾನ ಸಾಮರ್ಥ್ಯಕ್ಕೆ ಸರಿಸಾಟಿಯಾದ ಬುದ್ಧಿವಂತರೇ ನಮ್ಮ ಕಾಲದಲ್ಲಿ ಯಾರೂ ಇರಲಿಲ್ಲ. ಅತ್ಯಂತ ಕಠಿಣವಾದ ಕೇಸುಗಳಲ್ಲೂ ಅತಿ ಜಾಣ್ಮೆಯಿಂದ ಸತ್ಯ ಕಂಡು ಹಿಡಿದವರು ನಾಮ. ನಮ್ಮ ನ್ಯಾಯದಾನದ ಮುಂದೆ ಉಳಿದ ಮಂತ್ರಿ -ಮಹೋದಯರು ಇಂಗು ತಿಂದ ಮಂಗನಂತಾದ ಘಟನೆಗಳು ನೂರಾರು. ಇನ್‌ ಫ್ಯಾಕ್ಟ್‌, ಉಳಿದ ಆಸ್ಥಾನ ವಿದ್ವಾಂಸರು ಹಾಗೂ ರಾಜರು ಬರೀ ಕಣ್ಣಿಗೆ ಕಾಣುವ, ಕಿವಿಗೆ ಕೇಳುವ ಸಾಕ್ಷ್ಯಗಳನ್ನು ನಂಬಿ ಪ್ರಜೆಗಳಿಗೆ ಅನ್ಯಾಯ ಮಾಡುತ್ತಿದ್ದರು. ಆಗೆಲ್ಲ ನಾಮ ಜಾಣ್ಮೆಯಿಂದ ಸತ್ಯ ಕಂಡುಹಿಡಿದು ನಿಜವಾದ ನ್ಯಾಯ ಒದಗಿಸಿದ್ದೇವೆ. ಬೋಗಸ್‌ ಸಾಕ್ಷ್ಯಗಳನ್ನು ಬಯಲುಮಾಡಿ ಅವರ ನ್ಯಾಯ ವಿತರಣೆ ಪದ್ಧತಿ ಎಷ್ಟು ಸ್ಟುಪಿಡ್‌ ಎಂದು ಪ್ರೂವ್‌ ಮಾಡಿದ್ದೇವೆ. ಕರೆಕ್ಟಾಗಿ ನ್ಯಾಯ ಒದಗಿಸುಮದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಆದರೂ, ಈ ಜನರಿಗೆ ನಾಮ ಮಾದರಿ ನ್ಯಾಯಾಧೀಶರಾಗಲೇ ಇಲ್ವಲ್ಲ ಮಾರಾಯ. ಯಾಕೆ?

ಐರನಿ ಏನು ಅಂದರೆ, ಅಂದು ಯಾವ ಪದ್ಧತಿ ತಪುý್ಪ ಅಂತ ನಾಮ ತೋರಿಸಿಕೊಟ್ಟೆವೋ ಈಗಿನ ಕೋರ್ಟುಗಳು ಆ ಪದ್ಧತಿಯನ್ನೇ ಸರಿ ಎಂಬಂತೆ ಪಾಲಿಸುತ್ತಿವೆ. ಯಾಮದು ಮೂರ್ಖತನದ ನ್ಯಾಯವಿಚಾರಣೆ ಎಂದು ನಾಮ ಜಗಜ್ಜಾಹೀರು ಮಾಡಿದೆವೋ ಅದನ್ನೇ ಇಂದಿನ ನ್ಯಾಯಾಲಯಗಳು ಸರಿ ಎನ್ನುವಂತೆ ಪಾಲಿಸುತ್ತಿವೆ. ಬರೀ ಸಾಕ್ಷಿಗಳು ಹಾಗೂ ವಕೀಲರ ವಾಕ್ಚಾತುರ್ಯದಲ್ಲಿ ನ್ಯಾಯದೇವತೆ ತಲೆಚಿಟ್ಟು ಹಿಡಿದು ಕುಳಿತಿದ್ದಾಳೆ.

ಈಗಿನ ಕೋರ್ಟುಗಳಿಂದ ನ್ಯಾಯದಾನ ಪದ್ಧತಿಯನ್ನೇ ಗೇಲಿಯಾದಂಥ ಎರಡು ಘಟನೆಗಳು ಕಳೆದವಾರ ನಡೆದುಹೋಗಿವೆ. ಜೆಸ್ಸಿಕಾ ಲಾಲ್‌ ಪ್ರಕರಣ. ಇನ್ನೊಂದು ಬೆಸ್ಟ್‌ ಬೇಕರಿ ಪ್ರಕರಣ.

ಹಾಗೆಂದು, ಭಾರತದ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಅಂತ ನಾನು ಹೇಳುತ್ತಿಲ್ಲ. ಆದರೆ, ಜನರ ನಂಬಿಕೆ ಕಳೆದುಕೊಳ್ಳುತ್ತಿದೆ ಅನ್ನೋದು ಮಾತ್ರ ನಿಜ. ನೂರಾರು ಜನರ ಕಣ್ಣೆದುರೇ ಹುಡುಗಿಯೊಬ್ಬಳು ಕೊಲೆಯಾದರೂ, ಅಪರಾಧಿಗಳು ನಾಜೂಕಾಗಿ ತಪ್ಪಿಸಿಕೊಳ್ಳುತ್ತಾರೆ. ಅಪರಾಧಿಗಳು ಧರ್ಮಗ್ರಂಥದ ಮೇಲೆ ಪ್ರಮಾಣ ಮಾಡಿ ಸುಳ್ಳು ಹೇಳಿ ಕೋರ್ಟುಗಳ ದಾರಿ ತಪ್ಪಿಸುತ್ತಾರೆ. ಇದು ಸದ್ಯ ಭಾರತದ ನ್ಯಾಯಾಂಗ ವ್ಯವಸ್ಥೆಗೇ ಸವಾಲಾಗಿದೆ. ಈ ಎರಡೂ ಪ್ರಕರಣವನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿದೆ ಅನ್ನೋದು ನಿಜಕ್ಕೂ ಗುಡ್‌ ನ್ಯೂಸ್‌.

ಆದ್ರೆ ಬೀರಬಲ್‌, ನನಗನಿಸುತ್ತೆ. ಈ ರೀತಿ ಒಂದೋ ಎರಡು ಪ್ರಕರಣಗಳನ್ನು ಮಾತ್ರ ಕೋರ್ಟುಗಳು ಪರಿಹರಿಸುಮದು ಪ್ರಾಕ್ಟಿಕಲಿ ಸಾಧ್ಯ. ದೇಶದಲ್ಲಿ ಇಂತಹ ಸಾವಿರಾರು ಪ್ರಕರಣಗಳು ಆಗುತ್ತವಲ್ಲ. ಅಮಗಳ ಬಗ್ಗೆ ಯಾರು ಹೋರಾಟ ಮಾಡುತ್ತಾರೆ. ಎಷ್ಟು ಕೋರ್ಟುಗಳು, ಎಷ್ಟು ಪ್ರಕರಣಗಳನ್ನು, ಎಷ್ಟು ಸಲ ಅಂತ ಪದೇ ಪದೇ ವಿಚಾರಣೆ ಮಾಡಲು ಸಾಧ್ಯ? ಅದಕ್ಕೆ, ಇದಕ್ಕೆಲ್ಲ ಮೂಲಭೂತ ಕಾರಣ ಏನು? ಪರಿಹಾರ ಏನು ಅಂತ ಕಂಡುಹಿಡಿಯಬೇಕೆನಿಸಿತು ನನಗೆ. ಹಾಗಾಗಿ, ನಾನೊಂದು ತನಿಖೆ ಮಾಡಿ ಒಂದು ಪರಿಹಾರ ಸೂಚಿಸುತ್ತಿದ್ದೇನೆ. ಸ್ವಲ್ಪ ಯೋಚಿಸಿ ನಿನ್ನ ಅಬಿಪ್ರಾಯ ಹೇಳಯ್ಯ.

ಅನ್‌ಫಾರ್ಚುನೇಟ್‌ಲಿ, ಈಗಿನ ನ್ಯಾಯ ವ್ಯವಸ್ಥೆಯಲ್ಲಿ ಸಾಕ್ಷಿಗಳೇ ಭಾಳಾ ಇಂಪಾರ್ಟೆಂಟು. ಅವರಿಗಿಂತ ವಕೀಲರು ಇನ್ನೂ ಇಂಪಾರ್ಟೆಂಟು. ನ್ಯಾಯವಾಗಿ ಇಮಗಳಿಗಿಂತ ನ್ಯಾಯಾಧೀಶರ ಬುದ್ಧಿವಂತಿಕೆ ಇಂಪಾರ್ಟೆಂಟ್‌ ಆಗಬೇಕಿತ್ತು! ಆದರೆ, ಪರಿಸ್ಥಿತಿ ಹಾಗಿಲ್ಲ. ಪಾಯಿಂಟ್‌ ಟು ಬಿ ನೋಟೆಡ್‌ ಯುವರ್‌ ಆನರ್‌.

ಬೀರಬಲ್‌, ಒಂದು ಅಪ್ರಿಯ ಸತ್ಯ ಹೇಳುತ್ತೇನೆ ಕೇಳು. ನಮ್ಮ ಎಷ್ಟೋ ನ್ಯಾಯಾಧೀಶರಿಗಿಂತ ವಕೀಲರೇ ಬುದ್ಧಿವಂತರಿರುಮದು ನಮ್ಮ ನ್ಯಾಯಾಂಗ ವ್ಯವಸ್ಥೆಯ ವೈಫಲ್ಯಕ್ಕೆ ಕಾರಣ. ಈ ವಕೀಲರ ವಾದಗಳ ನಡುವೆ ಸತ್ಯವನ್ನು ಹುಡುಕಿ ತೆಗೆಯಲು ನ್ಯಾಯಾಧೀಶರಿಗೆ ಬಹುತೇಕ ಪ್ರಕರಣಗಳಲ್ಲಿ ಸಾಧ್ಯವಾಗುಮದಿಲ್ಲ. ಜೆಸ್ಸಿಕಾ ಪ್ರಕರಣದಲ್ಲಿ ಆದದ್ದೂ ಇದೇ.
ಈಗ ವಕೀಲರೇ ತಮ್ಮ ಜಾಣ ತರ್ಕದಿಂದ ಕೇಸುಗಳನ್ನು ಗೆಲ್ಲಿಸುತ್ತಾರೆ ಅಥವಾ ಸೋಲಿಸುತ್ತಾರೆ. ಇವರ ವಾದ- ವಿವಾದಗಳಿಂದಾಗಿ ನ್ಯಾಯಾಧೀಶರು ಪ್ರತಿ ಹಂತದಲ್ಲೂ ಗೊಂದಲಗೊಳ್ಳುತ್ತಾ ಹೋಗುತ್ತಾರೆ. ಎಷ್ಟೋ ವರ್ಷಗಳ ನಂತರ ನ್ಯಾಯಾಧೀಶರು ಈ ವಾದ - ವಿವಾದಗಳ ಆಧಾರದ ಮೇಲೆ ಯಾರ ವಾದ ಗಟ್ಟಿಯಾಗಿದೆಯೋ ಅವರ ಪರ ತೀರ್ಪು ನೀಡುತ್ತಾರೆ. ಇದು ಈಗಿನ ಸಿಸ್ಟಂ. ಭಾರತದಲ್ಲಿ ಅಷ್ಟೇ ಅಲ್ಲ. ಜಗತ್ತಿನ ಬಹುತೇಕ ದೇಶಗಳಲ್ಲಿ ಇದೇ ಕಥೆ. ಇಡೀ ವ್ಯವಸ್ಥೆಯಲ್ಲಿ ಸತ್ಯ ಏನು ಎನ್ನುಮದಕ್ಕಿಂತ ವಾದ ಹಾಗೂ ಸಾಕ್ಷಿ ಎರಡೇ ಮುಖ್ಯವಾಗುತ್ತದೆ.

ಅದರಲ್ಲೂ, ಭಾರತೀಯ ನ್ಯಾಯಾಂಗದಲ್ಲಿ ಒಂದು ಬಹಳ ಮುಖ್ಯವಾದ ಪಾಯಿಂಟ್‌ ಇದೆ. ಹತ್ತು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು. ಇದರ ಉದ್ದೇಶವೇನೋ ಭಾಳಾ ಒಳ್ಳೆಯದು ಬೀರ್‌ಬಲ್‌. ಆದರೆ, ಬಹುತೇಕ ಅಪರಾಧಿಪರ ವಕೀಲರು ಬಚಾವಾಗಲು ಇದೇ ಪಾಯಿಂಟನ್ನು ಬಳಸಿಕೊಳ್ಳುತ್ತಾರೆ ಅನ್ನೋದೆ ಡ್ರಾಬ್ಯಾಕು. ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ‘ಬೆನಿಫಿಟ್‌ ಆಫ್‌ ಡೌಟ್‌’ ಆಧಾರದಲ್ಲಿ ಅಪರಾಧಿಗಳು ಕೇಸಿನಿಂದ ಹೊರಬರುತ್ತಾರೆ. ನ್ಯಾಯಾಧೀಶರು ಈ ವಿಷಯದಲ್ಲಿ ನಿಸ್ಸಹಾಯಕರು.

ಅನೇಕ ಭಯಂಕರ ಆರೋಪಿಗಳು ಅತಿ ಜಾಣ ವಕೀಲರನ್ನು ಹಿಡಿದುಕೊಂಡು ಪ್ರಕರಣದಿಂದ ಬಚಾವಾಗುತ್ತಾರೆ. ಉದಾಹರಣೆಗೆ ಭಾರತದ ‘ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌’ ದಾವೂದ್‌ ಇಬ್ರಾಹಿಂ ಈಗ ಖ್ಯಾತ ವಕೀಲ ಹಾಗೂ ರಾಜಕಾರಣಿ ರಾಮ್‌ ಜೇಠ್ಮಲಾನಿಯವರನ್ನು ಹಿಡಿದುಕೊಂಡು ಪಾರಾಗಲು ಹವಣಿಸುತ್ತಿಲ್ಲವೇ ಹಾಗೆ.

ಆದರೆ, ನಮ್ಮ ಕಾಲದಲ್ಲಿ ಹಾಗಲ್ಲ. ನಾಮ ನೇರವಾಗಿ ವಾದಿಗಳು ಹಾಗೂ ಪ್ರತಿವಾದಿಗಳ ಜೊತೆ ಮಾತನಾಡುತ್ತಿದ್ದೆಮ. ಆಗ ವಾದಿ ಹಾಗೂ ಪ್ರತಿವಾದಿ ವಕೀಲರಿರಲಿಲ್ಲ. ನಮ್ಮ ಜಾಣತನ ಉಪಯೋಗಿಸಿ ಅಪರಾಧಿಯ ಬಾಯಿಂದ ನಾವೇ ನಿಜ ಹೊರಡಿಸುತ್ತಿದ್ದೆಮ. ಅಪರಾಧಿಗಳಿಗಿಂತ ನಾಮ ಹೆಚ್ಚು ಬುದ್ಧಿವಂತರಾಗಿದ್ದುದರಿಂದ ಸತ್ಯಕ್ಕೇ ಜಯವಾಗುತ್ತಿತ್ತು. ನಾಮ ಕೇಸುಗಳನ್ನು ವರ್ಷಾನುಗಟ್ಟಲೆ ಎಳೆಯುತ್ತ ಹೋಗುತ್ತಿರಲಿಲ್ಲ. ಸತ್ಯ ಗೊತ್ತಾದ ತಕ್ಷಣ ತೀರ್ಪು ನೀಡುತ್ತಿದ್ದೆಮ. ಇದರಿಂದ ನ್ಯಾಯ ವಿತರಣೆ ಸುಲಭವೂ, ಕ್ಷಿಪ್ರವೂ ಆಗಿರುತ್ತಿತ್ತು. ಈಗಲೂ ಇಂಥದೇ ಸಿಸ್ಟಂ ಮತ್ತೆ ಜಾರಿಗೆ ತರಬೇಕು. ಅಂತ ನನ್ನ ಸಲಹೆ.

ಆದರೆ, ಕಾನೂನು ಪುಸ್ತಕದ ಬದನೇಕಾಯಿಯ ಈ ಪ್ರಪಂಚದಲ್ಲಿ ನನ್ನ ಹಿಸ್ಟಾರಿಕಲ್‌ ಸಲಹೆಯನ್ನು ಜಾರಿಗೆ ತರಲು ಶ್ರೀಕೃಷ್ಣ ದೇವರಾಯನೂ ಇಲ್ಲ. ನಿನ್ನ ಅಕ್ಬರ್‌ ಬಾದಶಹಾ ಕೂಡ ಇಲ್ಲ. ವಾಟ್‌ ಡು ವಿ ಡೂ?

ನಿನ್ನ ಚತುರ ಉತ್ತರಕ್ಕೆ ಕಾದಿರುತ್ತೇನೆ.

ಇಂತಿ ವಿಕಟೆಕಟೆಕವಿ
ತೆನಾಲಿ ರಾಮ


Kannada Prabha issue dated February 27, 2006

Honey.. Now I know why our courts Fail

-

Tuesday, February 21, 2006

ಅಣು ಬಾಂಬ್‌ಗಿಂತ ನನಗೆ ಧರ್ಮದ ಭಯ

ಮಹಾನ್ ವಿಜ್ಞಾನಿ ಐನ್‌ಸ್ಟೈನ್‌ಗೆ
ಶಾ೦ತಿ ಪ್ರಶಸ್ತಿ ಸ್ಥಾಪಕ ಆಲ್‌ಫ್ರೆಡ್ ನೊಬೆಲ್‌ನ ಪತ್ರ


ನನಗೆ ಈ ಬಾಂಬುಗಳ ಹೆದರಿಕೆಯಿಲ್ಲ ಗೊತ್ತಾ? ಈ ಬಾಂಬುಗಳಷ್ಟೇ ಅಪಾಯಕಾರಿಯಾಗುತ್ತಿರುವ ಧರ್ಮಾಂಧತೆಯ ಬಗ್ಗೆ ನನಗೆ ಭಯವಾಗಿದೆ. ಧರ್ಮದ ಹೆಸರು ಹೇಳಲೂ ಅಂಜಿಕೆಯಾಗುತ್ತಿದೆ. ಒಂದೊಂದು ಧರ್ಮದ ಹೆಸರೂ ನನ್ನ ಬೆನ್ನಹುರಿಯಲ್ಲಿ ಲಿಟ್ಲ್‌ ಬಾಯ್‌, ಫ್ಯಾಟ್‌ಮ್ಯಾನ್‌ ಎಂಬಷ್ಟೇ ಛಳಿಯನ್ನುಂಟು ಮಾಡುತ್ತವೆ. ಜಗತ್ತಿನ ಯಾಮದೋ ಮೂಲೆಯಲ್ಲಿ ಸಿಡಿದ ಧಾರ್ಮಿಕ ಸ್ಫೋಟ ಇನ್ನೊಂದು ಮೂಲೆಯನ್ನೂ ಸುಟ್ಟುಹಾಕುತ್ತದೆ. ಜಗತ್ತಿಗೆ ಅಟಂಬಾಂಬಿನಷ್ಟೇ ಧರ್ಮಾಂಧತೆಯಿಂದಲೂ ಅಪಾಯವಿದೆ.

ಸರ್ ಅಲ್ಬರ್ಟ್‌ ಐನ್‌ಸ್ಟೈನ್‌,
ಜಗತ್ತಿನಲ್ಲಿ ಎಲ್ಲರೂ ಈಗ ನಮ್ಮಿಬ್ಬರನ್ನು ಮಹಾನ್‌ ವ್ಯಕ್ತಿಗಳೆಂದು ನಂಬಿದ್ದಾರೆ. ನಿಮ್ಮನ್ನು ಅದ್ಭುತ ವಿಜ್ಞಾನಿ ಎಂದು ಜನ ಕೊಂಡಾಡುತ್ತಾರೆ. ಜಗತ್ತಿನ ಅತಿ ಪ್ರತಿಷ್ಠಿತ ‘ನೊಬೆಲ್‌ ಪ್ರಶಸ್ತಿಯ’ ಸ್ಥಾಪಕ ಎಂದು ಜನ ನನ್ನನ್ನು ಗೌರವಿಸುತ್ತಾರೆ.

ಆದರೆ, ನಮ್ಮ ಬಗ್ಗೆ ಸ್ವಲ್ಪ ಇತಿಹಾಸ ಗೊತ್ತಿರುವವರು ನಿಮ್ಮನ್ನೂ, ನನ್ನನ್ನೂ ನಮ್ಮ ಸಂಶೋಧನೆ ಮತ್ತು ಕೊಡುಗೆಗಳಿಗಾಗಿ ಜರಿಯುತ್ತಾರೆ. ನಾನೋ ಡೈನಮೈಟ್‌ ಸಂಶೋಧನೆ ಮಾಡಿ ಭೂಮಿಯ ನಾಶಕ್ಕೆ ಮಹಾನ್‌ ಆಯುಧ ಕಂಡು ಹಿಡಿದೆ ಎಂಬ ಆರೋಪವಿದೆ.

ಅಷ್ಟೇ ಅಲ್ಲ, ನನ್ನ ಹೆಸರಿನಲ್ಲಿ ನೀಡಲಾಗುತ್ತಿರುವ ನೊಬೆಲ್‌ ಪ್ರಶಸ್ತಿ ಕೂಡ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯಂತೇ ಲಾಬಿದಾರರಿಗೆ ಸಿಗುತ್ತದೆ ಎಂಬ ಆಪಾದನೆಯಿದೆ. ಎಷ್ಟೋ ಅಯೋಗ್ಯರಿಗೆ ಈ ಪ್ರಶಸ್ತಿ ದಕ್ಕಿದೆ. ಎಷ್ಟೋ ಯೋಗ್ಯರಿಗೆ ಈ ಪ್ರಶಸ್ತಿ ಸಿಗಲಿಲ್ಲ. ಉದಾಹರಣೆಗೆ: ಜಗತ್ತಿಗೇ ಶಾಂತಿಯುತ ಹೋರಾಟದ ಮಾರ್ಗ ಕಲಿಸಿದ ಮಹಾತ್ಮಾ ಗಾಂಧಿಗೆ ನನ್ನ ಪ್ರಶಸ್ತಿ ಸಿಗಲಿಲ್ಲ. ಕಾರಣ ಏನೆಂದರೆ, ಬ್ರಿಟನ್‌ ಸರ್ಕಾರಕ್ಕೆ ಇರುಸು ಮುರುಸು ಉಂಟುಮಾಡಲು ನಮ್ಮ ನಾರ್ವೆ ಸರ್ಕಾರಕ್ಕೆ ಇಷ್ಟ ಇರಲಿಲ್ಲ. ಅದಕ್ಕೇ ನಾಲ್ಕು ಬಾರಿ ಗಾಂಧೀಜಿ ಹೆಸರು ನಾಮಕರಣವಾದರೂ ಅವರಿಗೆ ನಾಲ್ಕೂ ಬಾರಿ ಪ್ರಶಸ್ತಿ ನಿರಾಕರಿಸಲಾಯಿತು ಎಂಬ ದೂರಿದೆ.

ಆದರೆ, ನನಗಿಂತ ನಿಮ್ಮ ಮೇಲಿನ ಆರೋಪ ಇನ್ನೂ ಗುರುತರವಾದದ್ದು. ನೀಮ ತಮ್ಮ ಸಾಪೇಕ್ಷತಾ ವಾದದ ಮೂಲಕ ಅಣುಬಾಂಬಿನ ಮೂಲ ಸೂತ್ರವನ್ನು ಕಂಡು ಹಿಡಿದಿರಿ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಣುಬಾಂಬ್‌ ತಯಾರಿಸುವಂತೆ ನೀವೇ ಅಮೆರಿಕವನ್ನು ಪ್ರೇರೇಪಿಸಿದಿರಿ. ಇದು ಬಹಳ ಜನರಿಗೆ ಗೊತ್ತಿಲ್ಲ. ನೀಮ ೧೯೩೯ ಅ.೨ರಂದು ಅಂದಿನ ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಟ್‌ಗೆ ಬರೆದ ಪತ್ರದ ನಕಲು ಈಗ ನನ್ನ ಕೈಲಿದೆ. ಅದನ್ನು ನೋಡುತ್ತಿದ್ದೆ. ಅಣು ಬಾಂಬ್‌ ಸಿದ್ಧಗೊಂಡ ಘಟನಾವಳಿಗಳು ನನ್ನ ಕಣ್ಣ ಮುಂದೆ ಚಲಿಸುತ್ತಿವೆ.

ನೀವು ಅಮೆರಿಕ ಅಧ್ಯಕ್ಷರಿಗೆ ಬರೆದದ್ದು ಇಷ್ಟು:

‘೧೯೩೮ರ ಈಚೆಗಿನ ಸಂಶೋಧನೆ ನೋಡಿದ ಮೇಲೆ ಅಣುಗಳಿಂದ ಹೊಸ ಶಕ್ತಿ ಸ್ಥಾವರ ಸ್ಥಾಪನೆ ಸಾಧ್ಯ ಎಂಬುದು ನನಗೂ ಮನವರಿಕೆಯಾಗಿದೆ. ಅಲ್ಲದೇ, ಈ ಶಕ್ತಿಯಿಂದ ಅತ್ಯಂತ ಶಕ್ತಿಶಾಲಿ ಬಾಂಬುಗಳ ತಯಾರಿಕೆ ಕೂಡ ಸಾಧ್ಯ. ಇಂತಹ ಒಂದು ಬಾಂಬನ್ನು ತುಂಬಿಕೊಂಡ ಹಡಗು ಯಾಮದಾದರೂ ಬಂದರಿನಲ್ಲಿ ಸ್ಫೋಟಿಸಿದರೆ ಆ ಇಡೀ ಬಂದರೇ ನಾಶವಾಗುತ್ತದೆ. ಅಷ್ಟೇ ಅಲ್ಲ ಅಕ್ಕಪಕ್ಕದ ಭೂಭಾಗವೂ ಹಾನಿಗೆ ಒಳಗಾಗುತ್ತದೆ. ಇಷ್ಟು ಸಾಮರ್ಥ್ಯ ಈ ಬಾಂಬಿಗೆ ಇರುತ್ತದೆ. ಆದರೆ, ಈ ಬಾಂಬುಗಳನ್ನು ಸಣ್ಣ ಹಡಗಿನಲ್ಲಿ ಒಯ್ಯುಮದು ಕಷ್ಟ ಅಂತ ನನ್ನ ಅನಿಸಿಕೆ.’

‘ಈ ನಡುವೆ ಜರ್ಮನಿಯ ನಾರಿhುಗಳು ಇಂತಹ ಬಾಂಬಿಗೆ ಬೇಕಾದ ಯುರೇನಿಯಮ್‌-೨೩೫ರ ಶುದ್ಧೀಕರಣದಲ್ಲಿ ತೊಡಗಿದ್ದಾರೆ ಎಂಬ ಸುಳಿವಿದೆ. ಅವರು ಇದರಿಂದ ಬಾಂಬ್‌ ತಯಾರಿಸುವ ಸಾಧ್ಯತೆಯಿದೆ. ಆದ್ದರಿಂದ ಅವರಿಗಿಂತ ಮೊದಲು ಬಾಂಬ್‌ ತಯಾರಿಸಬೇಕಾದರೆ, ಅಮೆರಿಕ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ವಿಷಯ ತಮ್ಮ ಗಮನಕ್ಕೆ ತರುಮದು ನನ್ನ ಕರ್ತವ್ಯ.’

ತಮ್ಮ ಈ ಪತ್ರ ಓದಿದ ಕೂಡಲೇ ಅಮೆರಿಕದ ಅಧ್ಯಕ್ಷರು ಅಣು ಬಾಂಬ್‌ ತಯಾರಿಕೆಗೆ ಗುಪ್ತ ಆದೇಶ ನೀಡಿದರು. ಆ ಗುಪ್ತ ಯೋಜನೆಗೆ ಇಟ್ಟ ಹೆಸರು ‘ದಿ ಮ್ಯಾನ್‌ಹಟನ್‌ ಪ್ರಾಜೆಕ್ಟ್‌.‘ ಈ ಯೋಜನೆಯ ಉದ್ದೇಶ ವಿಶ್ವದ ಮೊತ್ತ ಮೊದಲ ಅಣು ಬಾಂಬ್‌ ತಯಾರಿಕೆ. ಇದರ ಹೊಣೆ ಆಗಿನ ಖ್ಯಾತ ಅಣು ವಿಜ್ಞಾನಿ ಜೆ. ರಾಬರ್ಟ್‌ ಓಪನ್‌ಹೈಮರ್.

ಸತತ ೫ ವರ್ಷಗಳ ಸಂಶೋಧನೆಯ ಬಳಿಕ ತಣ್ಣಗೆ ಸಿದ್ಧಗೊಂಡಿತ್ತು ಒಂದು ಅಣುಬಾಂಬು. ಅದಕ್ಕೆ ಇದ್ದ ಗುಪ್ತನಾಮ ‘ದಿ ಗ್ಯಾಜೆಟ್‌‘. ಈ ಯೋಜನೆಗಾಗಿ ಆಗಿನ ಕಾಲದಲ್ಲೇ ೨ ಬಿಲಿಯನ್‌ ಡಾಲರ್‌ ಖರ್ಚಾಯಿತು.

೧೯೪೫ರ ಜುಲೈ ೧೬ ಮುಂಜಾಮ ೫ ಗಂಟೆ ೨೯ ನಿಮಿಷ ೪೫ ಸೆಕೆಂಡು. ಅಮೆರಿಕ ಸರ್ಕಾರ, ಮಿಲಿಟರಿ ಮತ್ತು ವಿಜ್ಞಾನಿಗಳ ಅತ್ಯಂತ ಗುಪ್ತ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆ ಹೆಸರು ‘ದಿ ಟ್ರಿನಿಟಿ’. ನ್ಯೂ ಮೆಕ್ಸಿಕೋ ಉತ್ತರ ಭಾಗದ ಮರುಭೂಮಿ ಪ್ರದೇಶದ ಅಲಮಗಾರ್ಡೋ ಬಾಂಬಿಂಗ್‌ ರೇಂಜ್‌ನಲ್ಲಿ ೧೦೦ ಅಡಿ ಎತ್ತರದ ಒಂದು ಕಬ್ಬಿಣದ ಗೋಪುರ ಮೇಲೆ ಏರಿ ಕುಳಿತಿದ್ದ ದಿ ಗ್ಯಾಜೆಟ್‌ ಸ್ಫೋಟ. ಭಯಂಕರ ಶಬ್ದದೊಂದಿಗೆ ಜಗತ್ತಿನ ಮೊದಲ ಅಣುಬಾಂಬ್‌ ಸಿಡಿಯಿತು! ಕೋರೈಸುವ ಬೆಂಕಿ ಬಣ್ಣದ ಬೆಳಕು ನೂರಾರು ಮೈಲಿ ದೂರಕ್ಕೂ ಕಾಣಿಸಿತು. ನೋಡು ನೋಡುತ್ತಲೇ ಅಣಬೆಯಂತೆ ದಟ್ಟ ಮೋಡಗಗಳು ತುಂಬಿಕೊಂಡಮ. ಅಣು ಬಾಂಬಿನ ಯುಗ ಆರಂಭವಾಯಿತು.

ಈ ಮರುಭೂಮಿ ಪ್ರದೇಶದಿಂದ ಬಹುದೂರದಲ್ಲಿದ್ದ ಜನರಿಗೆ ಏನಾಯಿತೆಂದೇ ಗೊತ್ತಾಗಲಿಲ್ಲ. ಆ ದಿನ ಸೂರ್ಯನೇಕೋ ಡಬ್ಬಲ್‌ ಪ್ರಖರವಾಗಿದ್ದ ಅಂತ ಅಂದರು ಕೆಲವರು. ಇದಕ್ಕಿಂತ ಅಚ್ಚರಿಯೆಂದರೆ... ಈ ಸ್ಫೋಟ ನಡೆದ ಸ್ಥಳದಿಂದ ೧೨೫ ಕಿ.ಮೀ. ದೂರದಲ್ಲಿದ್ದ ಅಂಧ ಬಾಲಕಿಯೊಬ್ಬಳಿಗೆ ಮಿಂಚು ಕಾಣಿಸಿತಂತೆ! ಎಷ್ಟು ಪ್ರಖರವಾಗಿ ಇದ್ದೀತು ಆ ಸ್ಫೋಟ!

ಈ ತಂಡದಲ್ಲಿದ್ದ ವಿಜ್ಞಾನಿಯೊಬ್ಬರಂತೂ ‘ಓಹ್‌ ಇದರಿಂದ ಭೂಮಿಯ ಸಮತೋಲನವೇ ತಪ್ಪಲಿದೆ. ಈ ಆಯುಧದಿಂದ ಮಾನವ ತಾನು ವಾಸಿಸುವ ಭೂಮಿಯನ್ನೇ ನಾಶ ಮಾಡಿಕೊಳ್ಳುತ್ತಾನೆ‘ ಎಂದು ಭವಿಷ್ಯ ನುಡಿದ. ಅಣು ಬಾಂಬ್‌ ಪಿತಾಮಹ ಓಪನ್‌ಹೈಮರ್‌ಗೆ ಹಿಂದೂಗಳ ಭಗವದ್ಗೀತೆ ಅಷ್ಟಷ್ಟು ಗೊತ್ತಿತ್ತು. ಅದನ್ನು ಉದ್ಧರಿಸಿ ಆತ ಹಲುಬಿದ -‘ನಾನು ಮೃತ್ಯು. ಈ ವಿಶ್ವದ ವಿನಾಶಕ’ ಎಂದು. ಈ ಯೋಜನೆಯ ನಿರ್ದೇಶಕ ಕೆನ್‌ ಬೇನ್‌ಬ್ರಿಡ್ಜ್‌ ಹೇಳಿದ ‘ನೌ ವಿ ಆರ್‌ ಆಲ್‌ ಸನ್ಸ್‌ ಆಫ್‌ ಬಿಚ್ಚಸ್‌’.

ಜಗತ್ತಿನ ಮೊದಲ ಬಾಂಬ್‌ ಸೃಷ್ಟಿಕರ್ತರ ತಂಡ ತನ್ನ ಯಶಸ್ಸಿನಿಂದ ಕಂಗಾಲಾಗಿತ್ತು! ಪ್ರಯೋಗಾರ್ಥ ಸ್ಫೋಟಿಸಿದ ಸಣ್ಣ ಬಾಂಬಿಗೆ ಅವರು ನಡುಗಿಹೋಗಿದ್ದರು. ಅಣು ಬಾಂಬಿನ ಶಕ್ತಿಯನ್ನು ಕಂಡು ಈ ಅಸ್ತ್ರವನ್ನು ಕೈಬಿಡುವಂತೆ ಅವರು ಅಮೆರಿಕಕ್ಕೆ ಮನವಿ ಮಾಡಿದರು. ಆದರೆ, ಅಮೆರಿಕ ಅಂಥ ಮನಸ್ಥಿತಿಯಲ್ಲಿ ಇರಲಿಲ್ಲ. ಎರಡನೇ ಮಹಾಯುದ್ಧದ ತುತ್ತತುದಿಯಲ್ಲಿತ್ತು. ಹೊಸ ಬ್ರಹ್ಮಾಸ್ತ್ರವನ್ನು ಕೈಲಿ ಹಿಡಿದುಕೊಂಡು ಕೇಕೆ ಹಾಕಿ ನಲಿಯುತ್ತಿತ್ತು.

ಅಮೆರಿಕದ ಬಳಿ ಇನ್ನೂ ಎರಡು ಬಾಂಬ್‌ಗಳಿತ್ತು. ಒಂದು ‘ಲಿಟ್ಲ್‌ ಬಾಯ್‌’ ಇನ್ನೊಂದು ‘ಫ್ಯಾಟ್‌ ಮ್ಯಾನ್‌’.
ಜಗತ್ತಿನ ಮೊದಲ ಬಾಂಬ್‌ ಸಿಡಿದ ಸರಿಯಾಗಿ ೨೦ ದಿನಗಳ ನಂತರ, ೧೯೪೫ ಆಗಸ್ಟ್‌ ೬ರಂದು, ಹಿರೋಶಿಮಾ ಮೇಲೆ ಹಾರಿ ಬಂತು ಅಮೆರಿಕದ ಎನೋಲಾ ಗೇ -ಎಂಬ ಬಿ ೨೯ ವಿಮಾನ. ಅದು ಅಲ್ಲಿನ ಸೇತುವೆಯೊಂದನ್ನು ಗುರಿಯಾಗಿಟ್ಟುಕೊಂಡು ‘ಲಿಟ್ಲ್‌ ಬಾಯ್‌’ ಅಣು ಬಾಂಬನ್ನು ಧಸಕ್ಕೆಂದು ಬೀಳಿಸಿ ಹೊರಟು ಹೋಯಿತು. ಸುಮಾರು ನಾಲ್ಕೂವರೆ ಟನ್‌ ತೂಕದ ‘ಲಿಟ್ಲ್‌ ಬಾಯ್‌’ ತನ್ನ ಗುರಿಗಿಂತ ಕೇವಲ ೮೦೦ ಅಡಿ ದೂರಬಿತ್ತು. ಅಣು ಬಾಂಬಿಗೆ ಇದ್ಯಾವ ಲೆಕ್ಕ. ಹಿರೋಶಿಮಾ ಚಿಂದಿಯಾಯಿತು. ಇದಾದ ಮೂರು ದಿನಗಳ ನಂತರ ಇನ್ನೊಂದು ಅಣುಬಾಂಬ್‌ ‘ಫ್ಯಾಟ್‌ ಮ್ಯಾನ್‌’ ಬಿತ್ತು. ನಾಗಾಸಾಕಿ ಚಿಂದಿಯಾಯಿತು. ಜಪಾನ್‌ ಅಮೆರಿಕಕ್ಕೆ ಶರಣಾಯಿತು. ಅಲ್ಲಿಗೆ ಎರಡನೇ ಮಹಾಯುದ್ಧ ಮುಗಿಯಿತು. ಆದರೆ, ೬೦ ವರ್ಷ ಕಳೆದರೂ ಅಂದು ಸ್ಪೋಟಗೊಂಡ ಅಣುಬಾಂಬಿನ ದುಷ್ಪರಿಣಾಮ ಇಂದಿಗೂ ಮುಗಿದಿಲ್ಲ.

ಇತಿಹಾಸದ ಯುದ್ಧಗಳಲ್ಲಿ ಇದೆರಡೇ ಬಾರಿ ಅಟಂ ಬಾಂಬ್‌ ಸಿಡಿದದ್ದು. ನಡೆದ ಸಣ್ಣ ಸಣ್ಣ ಯುದ್ಧದಲ್ಲಿ ಅಟಂ ಬಾಂಬ್‌ ಬಳಕೆಯಾಗಿಲ್ಲ. ಆದರೆ, ಇಂದು ಅಮೆರಿಕ ಅಷ್ಟೇ ಅಲ್ಲ, ಅಂದು ಸಿಡಿದ ಬಾಂಬುಗಳಿಗಿಂತ ೧೦೦೦ ಪಟ್ಟು ಶಕ್ತಿಶಾಲಿ ಬಾಂಬುಗಳನ್ನು ಬಚ್ಚಿಟ್ಟುಕೊಂಡು ಕುಳಿತಿವೆ ಅನೇಕ ದೇಶಗಳು. ಅಮಗಳಲ್ಲಿ ಭಾರತ ಪಾಕಿಸ್ತಾನಗಳು ಎರಡು ದೇಶಗಳು. ಈಗ ಇರಾನ್‌ ಇಡೀ ವಿಶ್ವವನ್ನೇ ಎದುರುಹಾಕಿಕೊಂಡು ಅಣು ಬಾಂಬ್‌ ತಯಾರಿಸುತ್ತಿದೆ. ಇವೆಲ್ಲಾ ಬಾಂಬುಗಳು ಸಿಡಿಯದೇ ಇರುತ್ತವಾ? ಸಿಡಿದರೆ ಭೂಮಿಯ ಮೇಲೆ ಯಾರು ಬದುಕಿರುತ್ತಾರೆ. ಹೋಗಲಿ ಭೂಮಿಯಾದರೂ ಇರುತ್ತದಾ? ಗೊತ್ತಿಲ್ಲ. ಇದಕ್ಕೆ ವಿಜ್ಞಾನದ ಯಾವ ಸಿದ್ಧಾಂತ ಉತ್ತರಿಸುತ್ತದೆ!

ಡಿಯರ್‌ ಐನ್‌ಸ್ಟೈನ್‌,
ಆದರೆ, ನನಗೆ ಈ ಬಾಂಬುಗಳ ಹೆದರಿಕೆಯಿಲ್ಲ ಗೊತ್ತಾ? ಈ ಬಾಂಬುಗಳಷ್ಟೇ ಅಪಾಯಕಾರಿಯಾಗುತ್ತಿರುವ ಧರ್ಮಾಂಧತೆಯ ಬಗ್ಗೆ ನನಗೆ ಭಯವಾಗಿದೆ. ಧರ್ಮದ ಹೆಸರು ಹೇಳಲೂ ಅಂಜಿಕೆಯಾಗುತ್ತಿದೆ. ಒಂದೊಂದು ಧರ್ಮದ ಹೆಸರೂ ನನ್ನ ಬೆನ್ನಹುರಿಯಲ್ಲಿ ಲಿಟ್ಲ್‌ ಬಾಯ್‌, ಫ್ಯಾಟ್‌ ಮ್ಯಾನ್‌ ಎಂಬಷ್ಟೇ ಚಳಿಯನ್ನುಂಟು ಮಾಡುತ್ತವೆ. ಜಗತ್ತಿನ ಯಾಮದೋ ಮೂಲೆಯಲ್ಲಿ ಸಿಡಿದ ಧಾರ್ಮಿಕ ಸ್ಫೋಟ ಇನ್ನೊಂದು ಮೂಲೆಯನ್ನೂ ಸುಟ್ಟುಹಾಕುತ್ತದೆ. ಜಗತ್ತಿಗೆ ಅಟಂಬಾಂಬಿನಷ್ಟೇ ಧರ್ಮಾಂಧತೆಯಿಂದಲೂ ಅಪಾಯವಿದೆ. ಇನ್ನೊಂದು ಜಾಗತಿಕ ಯುದ್ಧದ ಭೀತಿಯನ್ನು ಹುಟ್ಟಿಸುತ್ತದೆ.

ಇನ್ನು ಎಷ್ಟು ಸಾವಿರ ಜನರಿಗೆ ನನ್ನ ಪ್ರತಿಷ್ಠಾನದಿಂದ ‘ನೊಬೆಲ್‌ ಶಾಂತಿ ಪ್ರಶಸ್ತಿ’ ನೀಡಿದರೂ ಅಷ್ಟೇ... ಭೂಮಿ ಎಂದೂ ಶಾಂತಿಯಿಂದ ಇರದು.

ಇಂತಿ ಭಯಭೀತ,
ಆಲ್‌ಫ್ರೆಡ್‌ ನೊಬೆಲ್‌

Kannada Prabha issue dated February 20, 2006

Religion is more Scarier than the Atom Bomb!

Tuesday, February 14, 2006

ನೀವೆಷ್ಟು ಅದೃಷ್ಟವಂತರು? ಸ್ಕೇರ್‌ ಡೆಕ್ಕನ್‌ನಿಂದ ತಿಳಿಯಿರಿ

ನಿಮ್ಮ ವಿಮಾನಯಾನ ಸುಖಕರವಾಗಿದ್ದರೆ ಪೂರ್ವಜನ್ಮದ ಪುಣ್ಯ ಫಲ ಗ್ಯಾರಂಟಿ:
ಕ್ಯಾಪ್ಟನ್ ಪಾಪಿನಾಥನ ಪತ್ರ

ಈ ವಿಮಾನದಲ್ಲಿ ಪ್ರಯಾಣಿಸುಮದು ಅಂದರೆ ಒಂಥರಾ ಸಾಹಸ ಯಾತ್ರೆ ಮಾಡಿದಂತೆ. ಒಮ್ಮೆ ಜುರಾಸಿಕ್‌ ಪಾರ್ಕ್‌ ಸಿನಿಮಾದಂತೆ ಥ್ರಿಲ್ಲಿಂಗ್‌. ಇನ್ನೊಮ್ಮೆ ಜಗ್ಗೇಶ್‌ ಸಿನಿಮಾ ಥರ ಕಾಮೆಡಿ. ಇನ್ನೊಮ್ಮೆ ಶ್ರುತಿ ಸಿನಿಮಾ ರೀತಿ ಟ್ರಾಜಿಡಿ. ಮಗದೊಮ್ಮೆ ’ಈವಿಲ್‌ ಡೆಡ್‌’ ಥರ ಹಾರರ್‌, ಇನ್ನಷ್ಟು ಸಲ ಗುಪ್ತ್‌ ಸಿನಿಮಾದಂತೆ ಸಸ್ಪೆನ್ಸ್‌... ಬಹುತೇಕ ಬಾರಿ ಟ್ರಾಜಿಡಿ, ಕಾಮೆಡಿ, ಆಕ್ಷನ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಎಲ್ಲಾ ಸೇರಿದ ಹಿಂದಿ ಸಿನಿಮಾದ ಮಿನಿಮಮ್‌ ಮನರಂಜನೆ ಗ್ಯಾರಂಟಿ.



ಪ್ರಿಯ ಸೋವಿನಾಥ್‌,
ನಾನೂ ನೋಡುತ್ತಲೇ ಇದ್ದೇನೆ. ಬಹಳ ದಿನಗಳಿಂದ ನೀನ್ಯಾಕೋ ತುಂಬಾ ಡಲ್ಲಾಗಿದ್ದೀಯಲ್ಲ. ಯಾಕೆ? ಜೀವನ ಬಹಳ ಯಾಂತ್ರಿಕವಾಗಿದೆ ಎಂದು ಬೋರಾಗಿದೆಯೇ? ಅದೇ ಆಫೀಸು. ಅದೇ ಕೆಲಸ. ಅದೇ ಓಡಾಟ. ಅದೇ ಹಾರಾಟ. ಒಂದು ದಿನ ಮಜವಾಗಿ ಕಳೆಯೋಣ ಅಂದರೆ ರಜಾ ತಗೊಳ್ಳೋಕೇ ಆಗಲ್ಲ ಅಂತೀಯಾ? ಇಂಥ ಬ್ಯುಸಿ ಲೈಫಲ್ಲಿ ಚಾರ್ಮೇ ಇಲ್ಲ ಅನಿಸುತ್ತಾ?

ನೀನು ಬುದ್ದು ಕಣೋ. ನಿಂಗೆ ಲೈಫನ್ನ ಹೇಗೆ ಎಂಜಾಯ್‌ ಮಾಡಬೇಕು ಅಂತಾನೇ ಗೊತ್ತಿಲ್ಲ. ಅದಕ್ಕೇ ಹೀಗೆ ಜೀವನ ಯಾಂತ್ರಿಕವಾಗಿದೆ ಅಂತ ಗೂಬೆ ಥರ ಕೂತಿರುತ್ತೀಯ. ನಿನ್ನ ಸಮಸ್ಯೆಗೆಲ್ಲ ಕಾರಣ ಏನು ಗೊತ್ತಾ? ನೀನು ಒಳ್ಳೇ ಕಂಪ್ಯೂಟರ್‌ ಥರ ಪ್ಲಾನ್‌ ಮಾಡಿಕೊಂಡು, ರೋಬಟ್‌ ಥರ ದುಡಿತೀಯ. ಹಾಗೆ ಸಿಸ್ಟಮ್ಯಾಟಿಕ್‌ ಆಗಿ ಇರೋ ಬದಲು, ಮಾಡುತ್ತಿರುವ ಕೆಲಸವನ್ನೇ ಸ್ವಲ್ಪ ಡಿಫರೆಂಟ್‌ ಆಗಿ ಮಾಡೋಕೆ ಆಗಲ್ವ ನಿಂಗೆ? ಲೈಫ್‌ನಲ್ಲಿ ಚೇಂಜ್‌ ಇರುತ್ತೆ ಕಣೋ. ಇಲ್ಲಾಂದ್ರೆ ನೀನು ಹೇಳೋ ಹಾಗೆ ಲೈಫು ಬರೀ ರೊಬೊಟಿಕ್‌ ಆಗದೇ ಇನ್ನೇನು ಆಗುತ್ತೆ ಹೇಳು.

ಉದಾಹರಣೆಗೆ ನೀನು ಡೆಲ್ಲಿಗೆ ಹೋಗಬೇಕು ಅಂದ್ಕೊ. ಬೆಂಗಳೂರಲ್ಲಿ ಯಾಮದೋ ವಿಮಾನ ಹತ್ತುತೀಯ. ಅದು ನಿನ್ನನ್ನು ಡೆಲ್ಲಿಯಲ್ಲಿ ಇಳಿಸುತ್ತೆ. ಆಮೇಲೆ ನೀನು ಡೆಲ್ಲಿ ಆಫೀಸಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್‌ ಇನ್ನೊಂದು ವಿಮಾನ ಹತ್ತುತೀಯ. ಆ ವಿಮಾನ ನಿನ್ನನ್ನ ಬೆಂಗಳೂರಲ್ಲಿ ಇಳಿಸುತ್ತೆ. ಇಷ್ಟೇ ತಾನೇ ನೀನು ಮಾಡೋದು.
ಈ ರೂಟೀನ್‌ ಬದಲು, ನಾನು ಹೇಳೋ ಮಾತು ಕೇಳು. ನಿನ್ನ ಪ್ರಯಾಣ ಎಷ್ಟು ಮಜವಾಗಿರುತ್ತೆ ನೋಡು!

ನಮ್ಮ ಕನ್ನಡದವರದ್ದೇ ಒಂದು ವಿಮಾನ ಕಂಪನಿ ಇದೆ. ಹೆಸರು ಸ್ಕೇರ್‌ ಡೆಕ್ಕನ್‌ ಅಂತ. ಈ ವಿಮಾನಯಾನ ಅಂದ್ರೆ ಕ್ಷಣ ಕ್ಷಣಕ್ಕೂ ರೋಮಾಂಚಕಾರಿ ಅನುಭವ. ಒಂದು ದಿನದ ಪ್ರಯಾಣದಂತೆ ಇನ್ನೊಂದು ದಿನದ ಪ್ರಯಾಣ ಇರುಮದಿಲ್ಲ. ಒಮ್ಮೆ ಆದ ಅನುಭವವನ್ನು ನೀನೆಂದೂ ಮರೆಯುಮದಿಲ್ಲ! ಪ್ರತಿ ಪ್ರಯಾಣವೂ ಒಂದೊಂದು ಥರ ಮಜ. ಒಮ್ಮೆ ಜುರಾಸಿಕ್‌ ಪಾರ್ಕ್‌ ಸಿನಿಮಾದಂತೆ ಥ್ರಿಲ್ಲಿಂಗ್‌. ಇನ್ನೊಮ್ಮೆ ಜಗ್ಗೇಶ್‌ ಸಿನಿಮಾದಂತೆ ಕಾಮೆಡಿ. ಇನ್ನೊಮ್ಮೆ ಶ್ರುತಿ ಸಿನಿಮಾ ಥರ ಟ್ರಾಜಿಡಿ. ಮಗದೊಮ್ಮೆ ’ಈವಿಲ್‌ ಡೆಡ್‌’ ಥರ ಹಾರರ್‌, ಇನ್ನಷ್ಟು ಸಲ ಗುಪ್ತ್‌ ಸಿನಿಮಾದಂತೆ ಸಸ್ಪೆನ್ಸ್‌... ಬಹುತೇಕ ಬಾರಿ ಟ್ರಾಜಿಡಿ, ಕಾಮೆಡಿ, ಆಕ್ಷನ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಎಲ್ಲಾ ಸೇರಿದ ಹಿಂದಿ ಸಿನಿಮಾದ ಮಿನಿಮಮ್‌
ಎಂಟರ್‌ಟೇನ್‌ಮೆಂಟ್‌ ಗ್ಯಾರಂಟಿ.

ನಾನು ಹೇಳೋದು ನಂಬು... ಈ ಸ್ಕೇರ್‌ ಡೆಕ್ಕನ್‌ ವಿಮಾನ ಯಾನ ಮಾಡಿ ಬಂದ ಮೇಲೆ, ನೀನು ಖಂಡಿತ ’ಪ್ರಯಾಣ ಮಾಮೂಲಾಗಿತ್ತು ಕಣೋ’ ಅಂತ ಮಾತ್ರ ಹೇಳೋಲ್ಲ. ಅಷ್ಟು ಭರವಸೆಯನ್ನು ನಾನು ಕೊಡುತ್ತೇನೆ.

ಅಷ್ಟೇ ಏನು? ಈ ವಿಮಾನ ಯಾನ ಮಾಡೋದ್ರಿಂದ ನಿನ್ನ ಅದೃಷ್ಟ ಕೂಡ ಪರೀಕ್ಷಿಸಿಕೊಳ್ಳಬಹುದು. ಟಿಕೆಟ್‌ ಬುಕಿಂಗ್‌ನಿಂದಲೇ ನಿನ್ನ ಅದೃಷ್ಟ ಪರೀಕ್ಷೆ ಆರಂಭವಾಗುತ್ತೆ. ಕೇವಲ ೫೦೦ ರುಪಾಯಿಗೆ ಡೆಲ್ಲಿಗೆ ಹೋಗಿ, ಕೊಲ್ಕತಾಗೆ ಹಾರಿ, ಹೈದರಾಬಾದ್‌, ಮುಂಬೈ, ಗೋವಾ, ಚೆನ್ನೈ... ಎಲ್ಲಿಗೆ ಬೇಕಾದರೂ ಪ್ರಯಾಣಿಸಿ. ಈ ತಿಂಗಳಿಗೆ ಇಷ್ಟು ಕಡಿಮೆ ಬೆಲೆಯ ೧ ಲಕ್ಷ ಟಿಕೆಟ್‌ ಬಿಡುಗಡೆ ಮಾಡಿದ್ದೀವಿ ಅಂತ ಕಂಪನಿ ಪ್ರಚಾರ ಮಾಡುತ್ತೆ. ನಿಮಗೇನಾದರೂ ಈ ಟಿಕೆಟ್‌ ಸಿಕ್ಕರೆ ನೀನು ೧೦ ಪರ್ಸೆಂಟ್‌ ಅದೃಷ್ಟವಂತ ಅಂದ್ಕೊ. ಆಮೇಲೆ ಆ ವಿಮಾನ ನಿಗದಿತ ವೇಳೆಗಿಂತ ಕೇವಲ ೨-೩ ಗಂಟೆ ತಡವಾಗಿ ಹಾರಿದರೆ ನೀನು ೨೦ ಪರ್ಸೆಂಟ್‌ ಅದೃಷ್ಟವಂತ. ಈ ವಿಮಾನ ಏನಾದರೂ ಟೈಮಿಗೆ ಸರಿಯಾಗಿ ಹಾರಿಬಿಟ್ಟರಂತೂ ವಾರೇ ವ್ಹಾ... ನೀನು ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿರಬೇಕು ಕಣೋ... ೫೦ ಪರ್ಸೆಂಟ್‌ ಅದೃಷ್ಟವಂತ ಅಂತ ಖುಷಿಪಡು. ಈಗೀಗ ಸ್ಕೇರ್‌ ಡೆಕ್ಕನ್‌ ವಿಮಾನ ನಿಗದಿತ ವೇಳೆಗಿಂತ ಮುಂಚೆಯೂ ಹಾರುಮದಕ್ಕೆ ಶುರುಮಾಡಿದೆ. ಅಂದರೆ ನೀನು ವಿಮಾನ ನಿಲ್ದಾಣ ತಲುಪುಮದಕ್ಕಿಂತ ಮೊದಲೇ ಅದು ಹಾರಿ ಹೋಗಿಲ್ಲ ಅಂದರೆ ನೀನು ೬೦ ಪರ್ಸೆಂಟ್‌ ಅದೃಷ್ಟವಂತ. ಪ್ರತಿದಿನ ಈ ವಿಮಾನದ ೩-೪ ಟ್ರಿಪುý್ಪಗಳು ಕ್ಯಾನ್ಸಲ್‌ ಆಗುತ್ತವೆ. ಯಾರಿಗೂ ಹೇಳದೇ, ಕೇಳದೇ, ಈ ಕಂಪನಿಯ ಸಿಬ್ಬಂದಿ ವಿಮಾನ ನಿಲ್ದಾಣದಿಂದ ಹಾರಿಬಿಟ್ಟಿರುತ್ತಾರೆ! ನೀನು ಅಲ್ಲೇ ಕೋತಿ ಥರ ಕೂತಿರಬೇಕಾಗುತ್ತದೆ. ಅಂತಹ ಸಂದರ್ಭ ನಿನಗೆ ಬಂದಿಲ್ಲ ಅಂದರೆ ನೀನು ೭೦ ಪರ್ಸೆಂಟ್‌ ಲಕ್ಕಿ.

ಒಮ್ಮೊಮ್ಮೆ ಈ ವಿಮಾನದ ಟೈರು ಒಡೆದುಹೋಗಿ ಗಾಡಿ ರನ್‌ವೇಯಲ್ಲೇ ನಿಂತು ಬಿಡುತ್ತದೆ. ಅಥವಾ ರೆಕ್ಕೆ ಕಳಚಿ ನೇತಾಡಲು ಶುರುಮಾಡುತ್ತದೆ. ಮತ್ತೊಮ್ಮೆ ವಿಮಾನದ ಬಾಗಿಲೇ ಸರಿಯಾಗಿ ಹಾಕಿಕೊಳ್ಳುಮದಿಲ್ಲ. ಅಂಥದ್ದೇನು ನಡೆಯಲಿಲ್ಲ ಅಂದರೆ ನೀನು ೮೦ ಪರ್ಸೆಂಟ್‌ ಲಕ್ಕಿ. ವಿಮಾನ ಸರಿಯಾಗಿ ಇಳಿಯಬೇಕಾದ ನಿಲ್ದಾಣದಲ್ಲೇ ಇಳಿದರೆ ನೀನು ೧೦೦ ಪರ್ಸೆಂಟ್‌ ಅದೃಷ್ಟಶಾಲಿ. ಗೊತ್ತಾಯ್ತ? ನಿನಗೀ ವಿಮಾನದಲ್ಲಿ ಗುಟುಕು ನೀರು ಬೇಕಾದರೂ ದುಡ್ಡು ಕೊಡಬೇಕು. ಆದರೆ, ನಿನ್ನ ಅದೃಷ್ಟ ಪರೀಕ್ಷೆ ಉಚಿತ!

ಕಚೇರಿ ಕೆಲಸ ಬಿಟ್ಟು ಯಾಮದೇ ಇಂಟರೆಸ್ಟಿಂಗ್‌ ಟೈಮ್‌ಪಾಸ್‌ ಆಟಕ್ಕೆ ನಿನಗೆ ಟೈಮ್‌ ಸಿಗುಮದಿಲ್ಲ ಅಂತ ನಂಗೆ ಗೊತ್ತು. ಆದರೆ, ನಿನ್ನ ಕೆಲಸವನ್ನೇ ಒಂದು ಟೈಮ್‌ಪಾಸ್‌ ಗೇಮ್‌ ಮಾಡಿಕೊಳ್ಳಬಹುದು ಅಂತ ನಿಂಗೆ ಗೊತ್ತಾ? ಉದಾಹರಣೆಗೆ, ನೀನು ಸ್ಕೇರ್‌ ಡೆಕ್ಕನ್‌ ವಿಮಾನದ ಟಿಕೆಟ್‌ ಬುಕ್‌ ಮಾಡಿನೋಡು ಗೊತ್ತಾಗುತ್ತೆ. ೫೦೦ ರು.ಗೆ ಎಲ್ಲಿಗೆ ಬೇಕಾದರೂ ಟಿಕೆಟ್‌ ಸಿಗುತ್ತೆ ಅಂತ ಕಂಪನಿ ಹೇಳುತ್ತೆ ತಾನೆ? ನೀನು ಕಂಪನಿಯ ವೆಬ್‌ಸೈಟಿನಲ್ಲಿ ಎಲ್ಲಿ ಬೇಕಾದರೂ ಕ್ಲಿಕ್‌ ಮಾಡಿ ನೋಡು. ನಿಂಗೆ ೫೦೦ ರು. ಟಿಕೆಟ್‌ ಬುಕ್‌ ಮಾಡೋದಕ್ಕೇ ಆಗೋಲ್ಲ. ಒಂಥರಾ ಸುಡೊಕು ಥರ. ಒಮ್ಮೆ ನೀನು ಬುಕ್‌ ಮಾಡಲು ಶುರು ಹಚ್ಚಿಕೊಂಡೆಯೋ, ಆಯ್ತು. ಅದು ಟಿಕೆಟ್‌ ಬುಕ್‌ ಆಗುಮದಿಲ್ಲ. ನೀನು ಬಿಡುಮದಿಲ್ಲ! ಎಂಥಾ ಟೈಮ್‌ ಪಾಸ್‌. ಸುಡೊಕು ತೆಗೆದು ಮೂಲೆಗೆ ಬಿಸಾಕು!

ಇದಕ್ಕಿಂತ ಹೆಚ್ಚಾಗಿ ನೀನು ವಿಮಾನ ಅಪಹರಣದ ಬಗ್ಗೆ ಕೇಳಿದ್ದೀಯಲ್ಲ. ಹಾಗೆ ವಿಮಾನ ಹೈಜಾಕ್‌ ಆದಾಗ ಅದರೊಳಗಿನ ಯಾತ್ರಿಗಳ ಪರಿಸ್ಥಿತಿ ಹೇಗಿರುತ್ತದೆ ಗೊತ್ತಾ? ಸಾಕ್ಷಾತ್‌ ಅನುಭವ ಬೇಕೆಂದರೆ ಸ್ಕೇರ್‌ ಡೆಕ್ಕನ್‌ ವಿಮಾನ ಯಾನ ಮಾಡಬೇಕು. ನೀನು ಬೋರ್ಡಿಂಗ್‌ ಪಾಸ್‌ ತೆಗೆದುಕೊಂಡು, ಸೆಕ್ಯುರಿಟಿ ಚೆಕ್‌ ಮುಗಿಸಿಕೊಂಡು ಒಳಗೆ ಹೋಗಿರುತ್ತೀಯ. ಎಷ್ಟೋ ಹೊತ್ತಿನ ನಂತರ ನಿನ್ನನ್ನು ವಿಮಾನದೊಳಕ್ಕೆ ತುಂಬಿಯೂ ಆಗುತ್ತದೆ. ಆದರೆ, ವಿಮಾನ ಮಾತ್ರ ಹಾರುಮದೇ ಇಲ್ಲ. ಆಮೇಲೆ ನೋಡು ಥ್ರಿಲ್‌ ಶುರು. ವಿಮಾನದಲ್ಲಿ ಏನಾಗುತ್ತಿದೆ ಎಂದು ಯಾರೂ ಹೇಳುಮದಿಲ್ಲ. ಯಾವಾಗ ಟೇಕ್‌ಆಫ್‌ ಎಂದು ತಿಳಿಯುಮದಿಲ್ಲ. ಒಂದೆಡೆ ನಿನಗೆ ಹಸಿವೆ ಆಗುತ್ತಿರುತ್ತದೆ. ಆದರೆ, ತಿಂಡಿಯಿಲ್ಲ. ಗುಟುಕು ನೀರೂ ಇಲ್ಲ. ಪೆಟ್ರೋಲ್‌ ಖರ್ಚಾಗುತ್ತದೆ ಎಂದು ವಿಮಾನದ ಎಸಿಯನ್ನೂ ಪೈಲಟ್‌ ಆನ್‌ ಮಾಡಿರುಮದಿಲ್ಲ. ಹಾಗಾಗಿ ವಿಮಾನದ ಒಳಗೆ ಸೆಖೆ ಆರಂಭವಾಗುತ್ತದೆ. ಕುರ್ಚಿಗಳೇನೂ ಸುಖಾಸನಗಳಲ್ಲವಲ್ಲ. ಕುಳಿತುಕೊಳ್ಳುಮದು ಕಷ್ಟವಾಗುತ್ತದೆ. ವಿಮಾನದಿಂದ ಇಳಿಯಲು ಕೊಡುಮದಿಲ್ಲ. ಇತ್ತ ನಿನ್ನ ಬಂಧುಗಳು ನೀನು ಸುರಕ್ಷಿತವಾಗಿ ಗಮ್ಯ ತಲುಪಿದ್ದೀಯೋ ಇಲ್ಲವೋ ಅಂತ ಚಿಂತಿಸುತ್ತಿರುತ್ತಾರೆ. ಅತ್ತ ಒಂದಷ್ಟು ಜನರು ನಿನ್ನ ಬರವಿಗಾಗಿ ಕಾಯುತ್ತಿರುತ್ತಾರೆ. ಈ ಹೈಜಾಕ್‌ನಲ್ಲಿ ಉಗ್ರಗಾಮಿಗಳ ಮುಖವೊಂದು ಕಾಣುಮದಿಲ್ಲ ಅಷ್ಟೇ. ಉಳಿದಂತೆ ಆಹಾ... ಥೇಟ್‌ ಅಪಹರಣವಾದ ವಿಮಾನದಲ್ಲಿ ಕುಳಿತ ಅನುಭವ ನಿನಗೆ!

ಇನ್ನೊಂದು ಹೆಮ್ಮೆಯ ವಿಷಯ ಏನು ಗೊತ್ತಾ? ಏರ್‌ಪೋರ್ಟ್‌ನಲ್ಲಿ ನಿನ್ನ ಕೈಲಿ ಸ್ಕೇರ್‌ ಡೆಕ್ಕನ್‌ ಟಿಕೆಟ್‌ ನೋಡಿದ ಕೂಡಲೇ ಉಳಿದ ಪ್ರಯಾಣಿಕರಿಗೆ ನಿನ್ನ ಬಗ್ಗೆ ಗೌರವ ಹುಟ್ಟುತ್ತದೆ. ಈ ಭಯಂಕರ ವಿಮಾನದಲ್ಲಿ ಪ್ರಯಾಣಿಸುವ ಎದೆಗಾರಿಕೆ ನಿನಗಿದೆಯಲ್ಲ ಎಂದು ಅವರು ಅಚ್ಚರಿಪಡುತ್ತಾರೆ. ನಿನ್ನ ಧೈರ್ಯಕ್ಕೆ ಮೆಚ್ಚುತ್ತಾರೆ. ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತಾರೆ.
ಶಾರ್ಟಾಗಿ ಹೇಳಬೇಕೆಂದರೆ, ಸ್ಕೇರ್‌ ಡೆಕ್ಕನ್‌ ಯಾನ ಎಂದರೆ ಒಂಥರಾ ಸಾಹಸ ಯಾತ್ರೆ. ಒಮ್ಮೆ ಯಾತ್ರೆ ಮಾಡಿನೋಡು. ಆಮೇಲಾದರೂ ನೀನು ಸ್ವಲ್ಪ ಲವಲವಿಕೆಯಿಂದ ಇರುತ್ತೀಯೇನೋ ಅಂತ ನನಗೊಂದು ಆಸೆ ಕಣೋ.

Dare it man. Dare it.

ನಿನ್ನ ಪ್ರಿಯ ಫ್ರೆಂಡು
ಕ್ಯಾಪ್ಟನ್ ಪಾಪಿನಾಥ್



Kannada Prabha issue dated February ೧೩, 2006
How Lucky You Are?.. Test it with Scare Deccan!

-

Tuesday, February 07, 2006

ಇಲ್ಲಿ ಎಲ್ಲರ ಆಕರ್ಷಕ ಭೂತಗಳು ಸಿಗುತ್ತವೆ!

ಸೋನಿಯಾ ತಗೊಂಡರೆ ಮನಮೋಹನ್‌ ಫ್ರೀ, ೪ ಯಡಿಯೂರ್‌ ಜತೆ ೨ ಉಚಿತ, ಧರಂ ಕ್ಲಿಯರೆನ್ಸ್‌ ಸೇಲ್‌

ನೀಮ ಗೌರಿ- ಗಣೇಶ ಮೂರ್ತಿ, ಪೆಂಡಾಲ್‌ ಐಟಂ, ರೆಡಿಮೇಡ್‌ ಬಟ್ಟೆ, ಖರೀದಿಸಿ, ಬಾಡಿಗೆಗೆ ಪಡೆದು ಅದರಿಂದ ದಿಢೀರ್‌ ಸಿಗುವ ಅನುಕೂಲ ಅನುಭವಿಸಿದ್ದೀರಿ. ಈಗ ನಮ್ಮ ರೆಡಿ-ಟು-ಯೂಸ್‌ ಭೂತ, ಬೋರ್ಡುಗಳಿಂದ ನಿಮ್ಮ ಹೋರಾಟಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೇ,ನಮ್ಮ ಬ್ರಾಂಡೆಡ್‌ ಭೂತಗಳು ಆಕರ್ಷಕವೂ, ವರ್ಣಮಯವೂ ಆಗಿರುಮದರಿಂದ ನಿಮ್ಮ ಹೋರಾಟದ ಹೆಚ್ಚು ಹೆಚ್ಚು ಚಿತ್ರಗಳು ಟೀವಿಯಲ್ಲಿ ಪ್ರಸಾರವಾಗುತ್ತವೆ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ.



ಕೇಳಿ!! ಕೇಳಿ!!

ಇದೀಗ ಸುಸಂಧಿ!!! ತ್ವರೆ ಮಾಡಿ!!!


ವಿದೇಶಿ ಮಹಿಳೆ ಸೋನಿಯಾ ವಿರುದ್ಧ ನೀಮ ಹೋರಾಟ ಮಾಡಬೇಕೆ? ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಭೂತದಹನ ಮಾಡಬೇಕೆ? ಕಾವೇರಿ ನೀರು ಕೇಳುವ ಜಯಲಲಿತಾ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಬೇಕೆ? ಮುಕ್ತ ಲೈಂಗಿಕ ಹೇಳಿಕೆ ನೀಡುವ ಖುಷ್ಬೂ ವಸ್ತ್ರಾಪಹರಣ ಮಾಡಿ ಸಾರ್ವಜನಿಕವಾಗಿ ಅವಮಾನ ಮಾಡಬೇಕೇ? ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ, ಅನಂತಕುಮಾರ್‌, ಎಸ್‌.ಎಂ. ಕೃಷ್ಣ, ಮುಷರ್ರಫ್‌, ಬುಷ್‌ ಅವರ ಅಣಕು ಶವಯಾತ್ರೆ ನಡೆಸಬೇಕೆ?

ಚಿಂತೆ ಬೇಡ... ನಿಮ್ಮ ಸೇವೆಗಾಗೇ ನಾಮ ಹೊಸ ಬಿಸಿನೆಸ್‌ ಆರಂಭಿಸಿದ್ದೇವೆ. ನಗರದ ಎಲ್ಲಾ ಬಡಾವಣೆಯಲ್ಲೂ ಒಂದೊಂದು ‘ಭೂತ್‌ ಮಹಲ್‌’ ಬ್ರಾಂಡೆಡ್‌ ಷೋರೂಮ್‌ ತೆರೆದಿದ್ದೇವೆ!

ನಮ್ಮಲ್ಲಿ ನಗರಪಾಲಿಕೆ ಸದಸ್ಯರಿಂದ ಹಿಡಿದು, ರಾಜ್ಯ, ದೇಶ ಹಾಗೂ ವಿದೇಶಗಳ ಹಲವಾರು ವಿಐಪಿಗಳ ಆಕರ್ಷಕ ರೆಡಿಮೇಡ್‌ ಭೂತಗಳು, ಪ್ರತಿಕೃತಿಗಳು ಮತ್ತು ಕಟೌಟುಗಳು ಲಭ್ಯ. ಅಲ್ಲದೇ, ಕೇಂದ್ರ ಸರ್ಕಾರದ ಹಣಕಾಸು ನೀತಿ, ಅಮೆರಿಕದ ದಬ್ಬಾಳಿಕೆ ನೀತಿ, ರಾಜ್ಯ ಸರ್ಕಾರದ ಜನವಿರೋಧಿ ನೀತಿ, ನಗರಪಾಲಿಕೆಯ ಕಳಪೆ ಕಾಮಗಾರಿ, ಕನ್ನಡ ವಿರೋಧಿ ಧೋರಣೆಗಳಲ್ಲದೇ ಮಾನವ ಹಕ್ಕು, ಸ್ತ್ರೀ ಭ್ರೂಣಹತ್ಯೆ, ಬಾಲಕಾರ್ಮಿಕ ಪದ್ಧತಿ, ಕೋಮುವಾದ, ಉಗ್ರವಾದ, ಪೊಲೀಸ್‌ ದೌರ್ಜನ್ಯ, ಭ್ರಷ್ಟಾಚಾರ, ಖಾಸಗೀಕರಣ, ಸಾಮಾನ್ಯ ಬೆಲೆ ಏರಿಕೆ, ಪೆಟ್ರೋಲ್‌ ಮತ್ತು ತೈಲ ಬೆಲೆ ಏರಿಕೆ ಮುಂತಾದ ಸಾರ್ವಕಾಲಿಕ ವಿಷಯಗಳನ್ನು ಚಿತ್ತಾಕರ್ಷಕವಾಗಿ ಬಿಂಬಿಸುವ ಮತ್ತು ವಿರೋಧಿಸುವ ಪ್ರತಿಕೃತಿಗಳೂ, ಮಾದರಿಗಳೂ ನಮ್ಮಲ್ಲಿ ರೆಡಿ ಸ್ಟಾಕ್‌ ಇವೆ.

ನಮ್ಮ ಭೂತ ಹಾಗೂ ಪ್ರತಿಕೃತಿಗಳು ವಾಸ್ತವ ರೂಪ, ಮುಖ ಚಹರೆ ಹಾಗೂ ನೈಜ ಉಡುಗೆಯನ್ನು ಹೋಲುಮದು ನಮ್ಮ ವೈಶಿಷ್ಟ್ಯ. ನಿಮ್ಮ ಬಜೆಟ್‌ಗೆ ಸರಿಯಾಗಿ ೩ ಅಡಿ ಎತ್ತರದಿಂದ ಹಿಡಿದು ನೈಜ ಗಾತ್ರದ ಮತ್ತು ದುಪ್ಪಟ್ಟು ಗಾತ್ರದ ಗೊಂಬೆಗಳು ನಮ್ಮಲ್ಲಿ ದೊರೆಯುತ್ತವೆ. ಇಮ ಸಾಗಣೆಗೆ ಹಗುರವಾಗಿದ್ದು, ಸೀಮೆಎಣ್ಣೆ ಅಥವಾ ಪೆಟ್ರೋಲ್‌ ಸಹಾಯವಿಲ್ಲದೆ ಸುಲಭವಾಗಿ ಸುಟ್ಟು ಬೂದಿಯಾಗುವ ಗ್ಯಾರಂಟಿಯನ್ನು ನಾಮ ನೀಡುತ್ತೇವೆ.

ಸುಡುವಾಗ ದಟ್ಟ ಹೊಗೆ, ಪಟಾಕಿ ಸಿಡಿತ, ಬೊಯ್ಯೆಂದು ವಿಚಿತ್ರ ಸದ್ದು ಅಥವಾ ಬೇರೆ ಬೇರೆ ಬಣ್ಣದ ಬೆಂಕಿ ಉಂಟುಮಾಡುವ ಸ್ಪೆಷಲ್‌ ಇಫೆಕ್ಟ್‌ ಭೂತಗಳೂ ನಮ್ಮಲ್ಲಿವೆ.

ವಿವಿಧ ವಿಐಪಿಗಳ ರಾಜೀನಾಮೆಗೆ ಆಗ್ರಹಿಸುವ ಫಲಕಗಳು ಹಾಗೂ ಅವರಿಗೆ ಧಿಕ್ಕಾರ ಘೋಷಣೆಯ ಬೋರ್ಡುಗಳು, ಬ್ಯಾನರುಗಳೂ ನಮ್ಮಲ್ಲಿದ್ದು ಇಂಗ್ಲಿಷ್‌ ಹಾಗೂ ಕನ್ನಡ ಭಾಷೆಯಲ್ಲಿ ನೀಮ ಆಯ್ಕೆ ಮಾಡಿಕೊಳ್ಳಬಹುದು.

ವಿಶೇಷ ಸೂಚನೆ: ನಮ್ಮಲ್ಲಿ ಈಗಾಗಲೇ, ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ರಾಜೀನಾಮೆ ಮತ್ತು ವಜಾಕ್ಕೆ ಕೋರುವ ಹಾಗೂ ಅವರಿಗೆ ಧಿಕ್ಕಾರ ಕೂಗುವ ಫಲಕಗಳು ಮತ್ತು ಅವರ ಭೂತಗಳ ಹೊಸ ಸ್ಟಾಕೂ ಬಂದಿದೆ. ನೂತನ ಮಂತ್ರಿಮಂಡಳ ರಚನೆಯ ದಿನವೇ ಆ ಎಲ್ಲ ನೂತನ ಮಂತ್ರಿಗಳ ವಿರೋಧಿ ಬೋರ್ಡುಗಳೂ, ಪ್ರತಿಕೃತಿಗಳೂ ನಮ್ಮಲ್ಲಿ ಮಾರಾಟಕ್ಕೆ ಸಿದ್ಧಗೊಳ್ಳುತ್ತವೆ. ಈ ಎಲ್ಲ ಹೊಸ ಸರಕುಗಳಿಗೆ ತೀವ್ರ ಬೇಡಿಕೆ ಬರಲಿದ್ದು, ಈಗಲೇ ಅಡ್ವಾನ್ಸ್‌ ನೀಡುವ ಮೂಲಕ ತಾಮ ಸರಕನ್ನು ಬುಕ್‌ ಮಾಡುವ ಸೌಲಭ್ಯವನ್ನು ನಾಮ ನೀಡುತ್ತೇವೆ.

ಅಷ್ಟೇ ಅಲ್ಲ, ನಮ್ಮಲ್ಲಿ ರೆಡಿಮೇಡ್‌ ಹರಕು ಚಪ್ಪಲಿ ಹಾರ, ಬೆಂಕಿ ಹಾಕಲು ಹಳೇ ಟೈರುಗಳು ಸದಾ ಕಾಲ ಲಭ್ಯವಿರುತ್ತದೆ. ಆದರೆ, ಕೊಳೆತ ಟೊಮೇಟೊ ಮತ್ತು ಕೋಳಿಮೊಟ್ಟೆಗಳು ಪ್ರತಿದಿನ ಸ್ಟಾಕ್‌ ಇರುವವರೆಗೆ ಮಾತ್ರ ಸಿಗುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ.

ಬಾಡಿಗೆಗೆ ಬೇಕೆ? ಇಲ್ಲಿ ಗಮನಿಸಿ:
ಈ ಬೋರ್ಡುಗಳನ್ನು ನೀಮ ಖರೀದಿ ಮಾಡಲು ಬಯಸದಿದ್ದರೆ ಬಾಡಿಗೆಗೂ ಪಡೆಯಬಹುದು. ಒಂದು ವೇಳೆ ಭೂತದಹನ ಅಥವಾ ಪ್ರತಿಕೃತಿ ಸುಡುವ ಕಾರ್ಯಕ್ರಮ ಇಲ್ಲದೇ, ಕೇವಲ ಕತ್ತೆಯ ಮೇಲೆ ಮೆರವಣಿಗೆ, ಅಣಕು ಶವಯಾತ್ರೆ, ಚಪ್ಪಲಿ ಹಾರಾರ್ಪಣೆ, ಚಪ್ಪಲಿಯಲ್ಲಿ ಥಳಿತ, ಪ್ರತಿಕೃತಿಯ ಮುಂದೆ ರೋದನ ಮುಂತಾದ ಪ್ರದರ್ಶನವಿದ್ದರೆ, ಈ ಪ್ರತಿಕೃತಿಗಳನ್ನು ನಾಮ ಬಾಡಿಗೆಗೆ ನೀಡಲೂ ಸಿದ್ಧ. ಆದರೆ, ಈ ಸರಕುಗಳು ಹಾಳಾಗದಂತೆ ವಾಪಸ್‌ ತಂದೊಪ್ಪಿಸುವ ಜವಾಬ್ದಾರಿ ಸಂಘಟಕರ ಮೇಲಿರುತ್ತದೆ. ಒಂದು ವೇಳೆ ನಮ್ಮ ಸರಕಿಗೆ ಹಾನಿಯುಂಟಾದರೆ ನೀಮ ನೀಡಿದ ಠೇವಣಿಯಿಂದ ಡ್ಯಾಮೇಜ್‌ ಚಾರ್ಜ್‌ ಮುರಿದುಕೊಳ್ಳಲಾಗುಮದು. ಈ ವಿಷಯದಲ್ಲಿ ಮಳಿಗೆಯ ಮಾಲೀಕರ ನಿರ್ಧಾರವೇ ಅಂತಿಮ.

ಹೋಲ್‌ಸೇಲ್‌ ರೇಟ್‌:
ಅರ್ಧ ಡಜನ್‌ ಭೂತಗಳಿಗೆ ಆರ್ಡರ್‌ ಮಾಡಿದರೆ ಸಗಟು ರಿಯಾಯಿತಿಯಿದೆ. ೨೫ಕ್ಕಿಂತ ಹೆಚ್ಚಿನ ಭೂತಗಳಿಗೆ ಭಾರಿ ರಿಯಾಯಿತಿ ನೀಡಲಾಗುಮದು. ನೂರಕ್ಕಿಂತ ಹೆಚ್ಚಿನ ಭೂತಗಳಿಗೆ ಬೇಡಿಕೆ ನೀಡಿದರೆ ರಾಜ್ಯದ ಬೇರೆ ಬೇರೆ ಭಾಗಗಳಿಗೆ ಭೂತಗಳ ಸಾಗಣೆ ವೆಚ್ಚವನ್ನೂ ನಾವೇ ಭರಿಸುತ್ತೇವೆ. ನಮ್ಮ ರೆಗ್ಯುಲರ್‌ ಗ್ರಾಹಕರಿಗೆ ಶೇ.೧೦ರಷ್ಟು ವಿಶೇಷ ರಿಯಾಯಿತಿಯಿದೆ. ಕ್ರೆಡಿಟ್‌ ಕಾರ್ಡ್‌ ಮೂಲಕ ಬಿಲ್‌ ಪಾವತಿಸಿದರೆ ಶೇ.೨ರಷ್ಟು ಅಧಿಕ ದರ ವಿಧಿಸುಮದು ಅನಿವಾರ್ಯ. ಕ್ಯಾಶ್‌ ಅಂಡ್‌ ಕ್ಯಾರಿ ವ್ಯವಹಾರಕ್ಕೇ ನಮ್ಮ ಆದ್ಯತೆ.

ದಯವಿಟ್ಟು ಉದ್ರಿ ಕೇಳಬೇಡಿ.

ಸೋನಿಯಾ ಜತೆ ಮನಮೋಹನ್‌ ಫ್ರೀ:
ನಮ್ಮ ಭೂತದ ಷೋರೂಮ್‌ ಆರಂಭೋತ್ಸವದ ನಿಮಿತ್ತ, ನಾಮ ವಿಶೇಷ ಆಫರ್‌ಗಳನ್ನು ನೀಡುತ್ತಿದ್ದೇವೆ. ಸೋನಿಯಾ ಭೂತ ತಗೊಂಡರೆ ಮನಮೋಹನ್‌ ರಾಕ್ಷಸ ಫ್ರೀ. ಪ್ರತಿ ೪ ಯಡಿಯೂರಪ್ಪ ಪ್ರತಿಕೃತಿ ಜತೆ ೨ ಯಡಿಯೂರಪ್ಪ ಉಚಿತ. ಖರ್ಗೆ, ಐಟಂಗೆ ಶೇ.೫೦ ಪರ್ಸೆಂಟ್‌ ಡಿಸ್ಕೌಂಟ್‌. ಧರಂ ಸಿಂಗ್‌ ಹಾಗೂ ಪೂಜಾರಿ ಅವರ ಹಳೆ ಸ್ಟಾಕ್‌ ಕ್ಲಿಯರೆನ್ಸ್‌ ಸೇಲ್‌! ಸೇಲ್‌! ಸೇಲ್‌! ಭಾರಿ ರಿಯಾಯಿತಿ ಮಾರಾಟ. ಶೇ.೯೦ ಕಡಿತ. ಈ ಆಫರ್‌ ಸ್ಟಾಕ್‌ ಇರುವವರೆಗೆ ಮಾತ್ರ.

ಬ್ರಾಂಡೆಡ್‌ ಭೂತದ ಅನುಕೂಲಗಳು:
೧ ಪ್ರಿಯ ಗ್ರಾಹಕರೇ, ನಾಮ ನಿಮ್ಮಂಥ ಹೋರಾಟಗಾರರು, ಪ್ರತಿಭಟನಕಾರರು, ಚಳವಳಿಕೋರರಿಗೆ ನೆರಮ ನೀಡಲೆಂದೇ ಈ ಹೊಸ ಬಿಸಿನೆಸ್‌ ಆರಂಭಿಸಿದ್ದೇವೆ. ಇಷ್ಟರವರೆಗೆ ನೀಮ ಗೌರಿ- ಗಣೇಶ ಮೂರ್ತಿ, ಪೆಂಡಾಲ್‌ ಐಟಂ, ರೆಡಿಮೇಡ್‌ ಬಟ್ಟೆ, ರೆಡಿ-ಟು-ಈಟ್‌ ಆಹಾರ ಖರೀದಿಸಿ, ಬಾಡಿಗೆಗೆ ಪಡೆದು ಅದರಿಂದ ದಿಢೀರ್‌ ಸಿಗುವ ಅನುಕೂಲ ಅನುಭವಿಸಿದ್ದೀರಿ. ಆದರೆ, ದಿಢೀರ್‌ ಆಗಿ ಹೋರಾಟ ನಡೆಸಲು ನೀಮ ಪರದಾಡುತ್ತಿದ್ದೀರಿ. ಈಗ ನಮ್ಮ ರೆಡಿ-ಟು-ಯೂಸ್‌ ಭೂತ, ಬೋರ್ಡುಗಳಿಂದ ನಿಮ್ಮ ಹೋರಾಟಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ನಮ್ಮ ವಿಶ್ವಾಸ.

೨ ಸದ್ಯ ನೀಮ ಬಳಸುತ್ತಿರುವ ಕಚ್ಚಾ ಭೂತ ಹಾಗೂ ಪ್ರತಿಕೃತಿಗಳನ್ನು ನೋಡಿ ನೋಡಿ ಜನರಿಗೆ ಬೋರಾಗಿದೆ. ನಿಮ್ಮ ಎಲ್ಲ ವಿನೂತನ ಹೋರಾಟಗಳೂ ಹಳೆಯದಾಗಿವೆ. ಈಗ ನಮ್ಮ ಹೊಸ ಬ್ರಾಂಡೆಡ್‌ ಭೂತಗಳಿಂದ ನಿಮ್ಮ ಪ್ರದರ್ಶನಗಳಿಗೆ ಹೊಸ ಕಳೆ ಮೂಡುತ್ತವೆ. ನಮ್ಮ ಭೂತಗಳು ಹೆಚ್ಚು ಆಕರ್ಷಕವೂ, ವರ್ಣಮಯವೂ ಆಗಿರುಮದರಿಂದ ನಿಮ್ಮ ಹೋರಾಟದ ಹೆಚ್ಚು ಹೆಚ್ಚು ಚಿತ್ರಗಳು ಟೀವಿಯಲ್ಲಿ ಪ್ರಸಾರವಾಗುತ್ತವೆ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ನಮ್ಮ ಭೂತಗಳು ಜನರಿಗೆ ಹೆಚ್ಚು ಮನರಂಜನೆ ನೀಡುಮದರಿಂದ ಅವರೂ ನಿಮ್ಮ ಹೋರಾಟವನ್ನು ಒಮ್ಮೆ ಗಮನಿಸುತ್ತಾರೆ.

ಬನ್ನಿ, ಹೋರಾಟ ನಮ್ಮ ಜನ್ಮಸಿದ್ಧ ಹಕ್ಕು. ನಾಮ ಹೆಚ್ಚು ಹೆಚ್ಚು ಹೋರಾಟ ಮಾಡೋಣ. ಹೋರಾಟವೇ ಪ್ರಜಾಪ್ರಭುತ್ವಕ್ಕೆ ಭೂಷಣ. ಪ್ರತಿಭಟನೆ ನಿಮ್ಮದು. ಭೂತ ನಮ್ಮದು. ಜೈ ಭಾರತ್‌ ಮಾತಾಕಿ

ನಿಮ್ಮ ಸನಿಹದ ‘ಭೂತ್‌ ಮಹಲ್‌’ ಮಳಿಗೆಗೆ ಒಮ್ಮೆ ಭೇಟಿ ಕೊಡಿ.

ವಿ.ಸೂ: ಅಧಿಕಾರ ಸ್ವೀಕಾರದ ದಿನದಿಂದಲೇ ಅಂಬೇಡ್ಕರ್‌ ಫೋಟೋ ಹಗರಣಕ್ಕೆ ಸಿಲುಕಿಕೊಂಡಿರುವ ಉಪ ಮುಖ್ಯಮಂತ್ರಿ ಯಡಿಯೂರಪ್ಪನವರ ‘ಭೂತಗಳಿಗೆ’ ರಾಜ್ಯದಲ್ಲಿ ದಿಢೀರ್‌ ಬೇಡಿಕೆ ಬಂದಿದ್ದು ನಮ್ಮಲ್ಲಿ ಸ್ಟಾಕ್‌ ಮುಗಿದಿದೆ. ದಯವಿಟ್ಟು ಯಡಿಯೂರಪ್ಪನವರ ಪ್ರತಿಕೃತಿಗಳಿಗೆ ಎರಡು ದಿನ ಮುಂಗಡ ಬುಕಿಂಗ್‌ ಮಾಡಬೇಕಾಗಿ ವಿನಂತಿ.

Kannada Prabha issue dated February 6, 2006

Effigy of all Prominent People Are Available Here!

Bhoot Mahal Effigy Stores - A New Business Venture.

--

Tuesday, January 31, 2006

ಕೆಡವೋಣು ಬಾರಾ... ಕೆಡವೋಣು ಬಾ...

ಎಲ್‌-ಬೋರ್ಡ್‌ ಸರ್ಕಾರ ಕೆಡವಲು ಐದು ಐಡಿಯಾಗಳು
ಅಕಅಶಒ ಕಾರ್ಯದರ್ಶಿ ಪತ್ರ


ನೂತನ ಸರ್ಕಾರ ಅಸ್ತಿತ್ವಕ್ಕೆ ಬರುಮದು ಫೆಬ್ರವರಿ ೩ರಿಂದ. ಆದರೆ, ನಮ್ಮ ಒಕ್ಕೂಟ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಕುಮಾರಸ್ವಾಮಿ ಸರ್ಕಾರ ರಚನೆಯ ಕಾರ್ಯ ಆರಂಭಿಸುಮದಕ್ಕಿಂತ ಮುಂಚೆಯೇ ಅದನ್ನು ಬೀಳಿಸುವ ನಮ್ಮ ಕಾರ್ಯ ಆರಂಭಿಸಿದ್ದೇವೆ ಎಂದು ತಿಳಿಸಲು ನಮಗೆ ಹರ್ಷವೆನಿಸುತ್ತಿದೆ. ನಮ್ಮ ಒಕ್ಕೂಟದ ಅಧ್ಯಕ್ಷರು, ಸರ್ಕಾರ ಬೀಳಿಸುವ ೫ ಪ್ರಾಥಮಿಕ ಯೋಜನೆಗಳ ರೂಪರೇಷೆಯನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ.


ಅತೃಪ್ತ ಶಾಸಕರೇ ನಂ ನಮಸ್ಕಾರ ನಿಮಗ...

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುವಂತೆ ಹಳೆ ಸರ್ಕಾರ ಬಿದ್ದರೂ ಹೊಸ ಸರ್ಕಾರ ಬರುತಿದೆ. ಅದರ ಹಿಂದೆ ಅತೃಪ್ತಿಯನ್ನೂ ಹೊಸತು ಹೊಸತು ತರುತಿದೆ!

ಪ್ರಿಯ ಅತೃಪ್ತ ಮಿತ್ರರೇ, ಕರ್ನಾಟಕದಲ್ಲಿ ಏನು ಆಗುಮದು ಬೇಡ ಎಂದು ನಾಮ ಅಂದುಕೊಂಡಿದ್ದೆವೋ ಅದೇ ಆಗಿಹೋಗಿದೆ. ಧರ್ಮಸಿಂಗ್‌ ಸರ್ಕಾರವನ್ನು ಬೀಳಿಸುವ ನಮ್ಮ ಉದ್ದೇಶ ಈಡೇರಿದೆ. ಆದರೆ, ಇನ್ನೊಂದು ಸರ್ಕಾರ ರಚನೆ ಆಗದಂತೆ ತಡೆಯಲು ನಮ್ಮಿಂದ ಆಗಲಿಲ್ಲ. ನಮ್ಮೆಲ್ಲ ಪ್ರಯತ್ನವನ್ನೂ ಮೀರಿದ ’ಅಗೋಚರ ದೇವ’ಶಕ್ತಿಯ ಪರಿಣಾಮವಾಗಿ ಕರ್ನಾಟಕದಲ್ಲಿ ಇನ್ನೊಂದು ಸರ್ಕಾರ ಅಧಿಕಾರಕ್ಕೆ ಬರುತ್ತಿದೆ.

ಈ ಬೆಳವಣಿಗೆಯಿಂದ ನಮ್ಮಂತೆ ನೀಮ ಸಹ ಅತೃಪ್ತರಾಗಿದ್ದೀರಿ ಅಥವಾ ಆಗಲಿದ್ದೀರಿ ಅಂತ ನಮಗೆ ಗೊತ್ತು. ನಮ್ಮ ನಮ್ಮ ಅತೃಪ್ತಿಗಳಿಗೆ ಬೇರೆ ಬೇರೆ ಕಾರಣಗಳು ಇರಬಹುದು. ಆದರೆ, ನಮ್ಮೆಲ್ಲರ ಅತೃಪ್ತಿ ಮಾತ್ರ ಒಂದೇ ತಾನೇ? ಈ ಹಿನ್ನೆಲೆಯಲ್ಲಿ ನಾಮ ಅಖಿಲ ಕರ್ನಾಟಕ ಅತೃಪ್ತ ಶಾಸಕರ ಒಕ್ಕೂಟ ’ಅಕಅಶಒ’ ರಚಿಸಲು ಉದ್ದೇಶಿಸಿದ್ದೇವೆ.

ನೂತನ ಸರ್ಕಾರ ಅಸ್ತಿತ್ವಕ್ಕೆ ಬರುಮದು ಫೆಬ್ರವರಿ ೩ರಿಂದ. ಆದರೆ, ನಮ್ಮ ಒಕ್ಕೂಟ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಅವರು ಸರ್ಕಾರ ರಚನೆಯ ಕಾರ್ಯ ಆರಂಭಿಸುಮದಕ್ಕಿಂತ ಮುಂಚೆಯೇ ಅದನ್ನು ಬೀಳಿಸುವ ನಮ್ಮ ಕಾರ್ಯ ಆರಂಭಿಸಿದ್ದೇವೆ ಎಂದು ತಮಗೆ ತಿಳಿಸಲು ನಮಗೆ ಹರ್ಷವೆನಿಸುತ್ತಿದೆ.

ಈ ಒಕ್ಕೂಟಕ್ಕೆ ಪಕ್ಷ, ಜಾತಿ ಹಾಗೂ ಸಿದ್ಧಾಂತಗಳ ಭೇದವಿಲ್ಲ. ತಮಗೆ ಈ ಸರ್ಕಾರದ ಬಗ್ಗೆ ಅತೃಪ್ತಿಯೊಂದಿದ್ದರೆ ಸಾಕು. ತಮ್ಮನ್ನು ಈ ಒಕ್ಕೂಟದ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗುಮದು.

ನಮ್ಮ ಒಕ್ಕೂಟದ ಸ್ಥಾಪಕ ಸದಸ್ಯರು, ಸರ್ಕಾರ ಬೀಳಿಸುವ ಪ್ರಾಥಮಿಕ ಯೋಜನೆಗಳ ರೂಪರೇಷೆಯನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ.

ಈ ಯೋಜನೆಯ ೫ ಪ್ರಮುಖ ಹಂತಗಳು ಹೀಗಿವೆ:

೧. ಮಂತ್ರಿಗಿರಿ ಅತೃಪ್ತಿ
ಮಂತ್ರಿ ಮಂಡಳ ಹಂಚಿಕೆ ವಿಚಾರವಾಗಿ ಹೊಸ ಮೈತ್ರಿ ಪಕ್ಷಗಳಲ್ಲಿ ಶೀಘ್ರವೇ ಕೆಲಮ ಶಾಸಕರಿಗೆ ಅತೃಪ್ತಿ ಉಂಟಾಗಲಿದೆ. ಅಂಥವರಿಗೆ ಉತ್ತೇಜನ ನೀಡಿ, ಅತೃಪ್ತಿಯನ್ನು ಹೆಚ್ಚಿಸುಮದು ನಮ್ಮ ತಕ್ಷಣದ ಕಾರ್ಯತಂತ್ರ.

೨. ಕಾಮನ್‌ ಮಿನಿಮಮ್‌ ಅತೃಪ್ತಿ:
ಜಾತ್ಯತೀತಾತೀತ ಜನತಾದಳ ಮತ್ತು ರಾಮವಾದಿ ಪಕ್ಷ ಸದ್ಯವೇ ತಮ್ಮ ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿವೆ. ಈ ಸಂದರ್ಭದಲ್ಲಿ, ಜಾತ್ಯತೀತಾತೀತ ದಳಕ್ಕೆ ದೇವೇಗೌಡರ ಪರೋಕ್ಷ ನೆರಮ ಸಿಗುವಂತೆ ನಾಮ ಕಾರ್ಯತಂತ್ರ ರೂಪಿಸಬೇಕು. ಆಗ ಹೊಸ ದೋಸ್ತಿಗಳ ನಡುವೆ ಅಸಮಾಧಾನ ಆರಂಭವಾಗುತ್ತದೆ!

ಇಲ್ಲದಿದ್ದರೆ, ಹೊಸ ದೋಸ್ತಿಗಳ ಕಾಮನ್‌ ಮಿನಿಮಮ್‌ ಪ್ರೋಗ್ರಾಂ ಸುಲಭವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಏಕೆಂದರೆ, ಕುಮಾರಸ್ವಾಮಿ ಬಣದಲ್ಲಿ ಈಗ ಯಾಮದೇ ಮಹಾನ್‌ ರಾಷ್ಟ್ರ ನಾಯಕರೂ ಇಲ್ಲ. ಇರುವ ಎಲ್ಲರೂ ಸಣ್ಣ ಪುಟ್ಟ ಲೋಕಲ್‌ ನಾಯಕರೇ. ಆದರೆ, ಬಿಜೆಪಿಯಲ್ಲಿ ಹಾಗಲ್ಲ... ದೊಡ್ಡ ನಾಯಕರ ದೊಡ್ಡ ಬ್ಯಾಚೇ ಇದೆ. ಈ ಕಾಮನ್‌ ಮಿನಿಮಮ್‌ ಪ್ರೋಗ್ರಾಂ ರೂಪಿಸುವಾಗ ಬಿಜೆಪಿ ಪರವಾಗಿ ಈ ದೊಡ್ಡ ನಾಯಕರ ಬ್ಯಾಚು, ಕುಮಾರಸ್ವಾಮಿಯವರ ಲೋಕಲ್‌ ನಾಯಕರ ಮೇಲೆ ಸುಲಭವಾಗಿ ಒತ್ತಡ ಹಾಕುಮದು ಖಚಿತ. ಅದರಲ್ಲೂ ’ವೀರ ಕನ್ನಡಿಗ’ ಕುಮಾರಸ್ವಾಮಿಯವರ ಮುಂದೆ ಜೇಟ್ಲಿ, ವೆಂಕಯ್ಯ ನಾಯ್ಡು, ವಾಜಪೇಯಿ ಮುಂತಾದವರೆಲ್ಲ ಇಂಗ್ಲೀಷ್‌ ಅಥವಾ ಹಿಂದಿಯಲ್ಲಿ ವಾಗ್ಝರಿ ಹರಿಸುತ್ತಾರೆ. ಆಗ, ಆ ಒತ್ತಡ ತಾಳಲಾರದೇ, ಈ ಲೋಕಲ್‌ ನಾಯಕರು ದೊಡ್ಡ ನಾಯಕರು ಹೇಳಿದ್ದಕ್ಕೆ ಸುಲಭವಾಗಿ ತಲೆಯಾಡಿಸುತ್ತಾರೆ. ತಲೆಯಾಡಿಸಲಿಲ್ಲ ಎಂದರೆ ಬಿಜೆಪಿ ನಾಯಕರು ಬೆಂಬಲ ಹಿಂತೆಗೆದುಕೊಳ್ಳುಮದಾಗಿ ಬೆದರಿಸುತ್ತಾರೆ. ಆಗ, ಕುಮಾರಸ್ವಾಮಿ ಪಕ್ಷದವರು ಬಿಜೆಪಿ ಹೇಳಿದ ಕಾಮನ್‌ ಮಿನಿಮಮ್‌ ಪ್ರೋಗ್ರಾಮ್‌ಗೆ ಒಪುý್ಪತ್ತಾರೆ. ಇದು ಒಂಥರಾ ಅತೃಪ್ತಿಗೆ ಕಾರಣವಾಗುತ್ತದೆ. ಇದನ್ನು ನಾಮ ಪೊರೆದು ಪೋಷಿಸಬೇಕು. ಅಲ್ಲದೇ, ಈ ಮಿನಿಮಮ್‌ ಪ್ರೋಗ್ರಾಂ ವಿಷಯದಲ್ಲಿ ಎಷ್ಟು ಮ್ಯಾಕ್ಸಿಮಮ್‌ ಆಗುತ್ತದೋ ಅಷ್ಟು ಭಿನ್ನಾಭಿಪ್ರಾಯ ಉಂಟಾಗುವಂತೆ ನಾಮ ಮಾಡಬೇಕು. ಆಮೇಲೆ, ಜಾತ್ಯತೀತರು ಕೋಮುವಾದಿಗಳ ಒತ್ತಡಕ್ಕೆ ಮಣಿದರು ಎಂದು ನಾಮ ಪ್ರಚಾರ ಮಾಡಬೇಕು. ಆಗ ದೋಸ್ತಿಗಳಲ್ಲಿ ಅತೃಪ್ತಿ ಹೆಚ್ಚಾಗುತ್ತದೆ. ಒಂದು ವೇಳೆ ಈ ಹಂತದಲ್ಲಿ ಕುಮಾರ ಪಕ್ಷದ ಏಕೈಕ ರಾಷ್ಟ್ರನಾಯಕ ದೇವೇಗೌಡರು ಪರೋಕ್ಷವಾಗಿ ನೆರಮ ನೀಡಿದರೆ, ಬಿಜೆಪಿಯವರಲ್ಲಿ ತಾನೇ ತಾನಾಗಿ ಅತೃಪ್ತಿ ಹೆಚ್ಚಾಗುತ್ತದೆ. ಅದೇನೇ ಆದರೂ ನಮಗೆ ಅನುಕೂಲ.

೩. ಮೆಟ್ರೋ ಮತ್ತು ನಕ್ಸಲರ ಅತೃಪ್ತಿ
ತಂದೆಯವರಿಂದ ಭೇಷ್‌ ಅನ್ನಿಸಿಕೊಳ್ಳುವಂಥ ಆಡಳಿತ ನೀಡುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಅದರ ಅರ್ಥ, ಕುಮಾರಸ್ವಾಮಿಯವರು ಮೆಟ್ರೋ ರೈಲನ್ನು ಕ್ಯಾನ್ಸಲ್‌ ಮಾಡಿ ಮಾನೋ ರೈಲಿಗೆ ಟಿಕೆಟ್‌ ನೀಡಬೇಕು. ಅದು ಬಿಜೆಪಿ ವಿರುದ್ಧ ನಿರ್ಧಾರ. ಅದೇ ರೀತಿ ನಕ್ಸಲರ ನಿಗ್ರಹದ ಬಗ್ಗೆ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಐತ್ರಿ! ಇದು ಅತೃಪ್ತಿಗೆ ಕಾರಣವಾಗುಮದು ಗ್ಯಾರಂಟಿ. ನಾಮ ಅದಕ್ಕೆ ಉಪುý್ಪ ಖಾರ ಸೇರಿಸಬೇಕು.

೪. ರಾಮಾಯಣ ಮತ್ತು ನಾರಾಯಣ ಅತೃಪ್ತಿ
ಬಿಜೆಪಿಯ ರಾಮಾಯಣದ ಪರಿಣಾಮ ಬಾಬಾಬುಡನ್‌ಗಿರಿ, ಹುಬ್ಬಳ್ಳಿಯ ಈದ್ಗಾ ಮೈದನದಲ್ಲಿ ಆಗುಮದು ಖಚಿತ. ಇದಕ್ಕೆ ಜಾತ್ಯತೀತ ಕುಮಾರಸ್ವಾಮಿ ಗ್ಯಾಂಗು ಅತೃಪ್ತಿಯಿಂದ ಪ್ರತಿರೋಧ ವ್ಯಕ್ತಪಡಿಸದೇ ಇದ್ದೀತೇ? ಆಹಾ... ಈ ಅತೃಪ್ತ ಹೊಗೆಯನ್ನು ನಾಮ ತೀವ್ರಗೊಳಿಸಬೇಕು. ಇತ್ತ ಕುಮಾರಸ್ವಾಮಿಯವರು ಪಿತೃವಾಕ್ಯ ಪರಿಪಾಲನಾರ್ಥಾಯ ದರಿದ್ರನಾರಾಯಣ ವ್ರತ ಕೈಗೊಳ್ಳುಮದು ಕಷ್ಟವಾಗಲಾರದು. ಆದರೆ, ಐಟಿ ನಾರಾಯಣರನ್ನು ಕುಮಾರಸ್ವಾಮಿ ಒಲಿಸಿಕೊಳ್ಳದಿದ್ದರೆ ನಷ್ಟ. ಒಲಿಸಿಕೊಂಡರೆ ಗೌಡರಿಂದ ಕಷ್ಟ. ಪತ್ರದ ಮೇಲೆ ಪತ್ರ. ಗೋಷ್ಠಿಯ ಮೇಲೆ ಪತ್ರಿಕಾಗೋಷ್ಠಿ. ದೇವೇಗೌಡರು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ರಿಟೈರ್‌ ಆಗಿರಬಹುದು. ಆದರೆ, ಸರಣಿ ಪತ್ರ ಬರೆಯುವ ಕೃತ್ಯದಿಂದ ದೂರಾಗಿದ್ದಾರೆ ಎಂದುಕೊಳ್ಳಬೇಡಿ. ಗೌಡರ ಪತ್ರವನ್ನೇ ಮುಂದಿಟ್ಟುಕೊಂಡು ನಾಮ ಕುಮಾರಸ್ವಾಮಿಯವರ ಚಿಂತೆಗಳನ್ನು ಹೆಚ್ಚಿಸಬಹುದು. ಥ್ಯಾಂಕ್ಯೂ ಗೌಡಾಜೀ!

೫. ಬಿಸಿ ರಕ್ತದ ಅತೃಪ್ತಿ
ಈ ಸರ್ಕಾರದಲ್ಲಿ ಇರುವ ಬಹು ಪಾಲು ಶಾಸಕರು, ಮಂತ್ರಿಗಳು ಎಲ್ಲ ಯುವಕರು. ಮಂತ್ರಿಗಿರಿ ಹಾಗಿರಲಿ, ಕರೆಕ್ಟಾಗಿ ರಾಜಕೀಯದ ಅನುಭವ ಕೂಡ ಇಲ್ಲದವರು. ಎಲ್‌-ಬೋರ್ಡುಗಳು! ಅರ್ಥಾತ್‌... ಲರ್ನರ್ಸ್‌ ಲೈಸೆನ್ಸ್‌ನಲ್ಲೇ ಸರ್ಕಾರ ಚಲಾಯಿಸುವವರು. ಅದರಲ್ಲೂ ಬಿಸಿ ರಕ್ತದವರು. ಹೋರಾಟ ಮನೋಭಾವದವರು. ಕೆಲವರಂತೂ ಇನ್ನೂ ಟೀನ್‌ ಏಜ್‌ ಯುವಕರು. ಇವರನ್ನೆಲ್ಲ ಕೆರಳಿಸಿ ಬಿಡುಮದು ನಮಗೆ ಕಷ್ಟವೇನಲ್ಲ. ಬಿಸಿ ರಕ್ತವನ್ನು ಒಂದಷ್ಟು ಕುದಿಸಿ ಬಿಟ್ಟರೆ... ಸರ್ಕಾರ ಬೀಳಿಸುವ ನಮ್ಮ ಕೆಲಸ ಸಲೀಸು.

ಹಾಗಂತ, ಸರ್ಕಾರ ನಡೆಸಲು ಭಾರೀ ಅನುಭವ ಬೇಕು ಅಂತೇನಿಲ್ಲ. ಹೊಸ ಯುವಕರು ಮನಸ್ಸು ಮಾಡಿದರೆ ಉತ್ತಮ ಆಡಳಿತ ನೀಡಲೂಬಹುದು. ಇಡೀ ದೇಶದಲ್ಲಿ ಯುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಹುಲ್‌ ಗಾಂಧಿ ಎಂಬ ಯುವಕ ಹೇಗೆ ರಾಷ್ಟ್ರದ ನಾಯಕನನ್ನಾಗಿ ಬೆಳೆಸಲಾಗುತ್ತಿದೆ ನೋಡಿ. ಕರ್ನಾಟಕದಲ್ಲೂ ಯುವ ರಾಜಕಾರಣಿಗಳ ಟ್ರೆಂಡ್‌ ಇದೆ. ಆದರೆ, ಈ ಯುವ ರಾಜಕಾರಣಿಗಳನ್ನು ರಾಹುಲ್‌ ಗಾಂಧಿಯಂತೆ ಬೆಳೆಸಲು ಯಾರೂ ಯತ್ನಿಸುತ್ತಿಲ್ಲ. ನಾವೂ ಅಷ್ಟೇ... ಈ ಯುವ ರಾಜಕಾರಣಿಗಳು ಪಕ್ಕಾ ನಾಯಕರಾಗಿ ಬೆಳೆಯದಂತೆ ಎಚ್ಚರ ವಹಿಸಬೇಕು. ಈ ಯುವ ರಾಜಾಕಾರಣಿಗಳು ಚಿಲ್ಲರೆ ಪೊಲಿಟ್ರಿಕ್ಸ್‌ನಲ್ಲೇ ಬ್ಯುಸಿಯಾಗಿರುವಂತೆ ನಾಮ ಮುತುವರ್ಜಿ ವಹಿಸಬೇಕು. ಆಗ ಮಾತ್ರ ನಮ್ಮಂಥ ಅತೃಪ್ತರಿಗೆ ಉಜ್ವಲ ಭವಿಷ್ಯವಿರುತ್ತದೆ. ಇಲ್ಲವಾದರೆ, ನಮ್ಮಂಥ ಅನುಭವಿ, ಸದಾ ಅತೃಪ್ತ ರಾಜಕಾರಣಿಗಳಿಗೆ ಅಪಾಯ ಕಾದಿದೆ!

ಅದಕ್ಕೇ... ಈ ಯುವಕರ ಸರ್ಕಾರವನ್ನು ಕೆಡವೋಣು ಬಾರಾ... ಕೆಡವೋಣು ಬಾ!

ಇಂತಿ
ಸಂಘಟನಾ ಕಾರ್ಯದರ್ಶಿ
ಅಖಿಲ ಕರ್ನಾಟಕ ಅತೃಪ್ತ ಶಾಸಕರ ಒಕ್ಕೂಟ



Kannada Prabha issue dated January 30, 2006

Let's Pull it Down... Let's Pull it Down...

--

Tuesday, January 24, 2006

ಕಾಂಗ್ರೆಸ್‌ ರಾಜಕಾರಣಕ್ಕೆ ವಿಶ್ವನಾಥನ್‌ ಆನಂದ್‌ ನೆರಮ

ದೇವೇಗೌಡರ ‘ಫೋರ್ಕ್‌’ ಅರ್ಥ ಮಾಡಿಕೊಳ್ಳಲು ಅಂತಾರಾಷ್ಟ್ರೀಯ ಚೆಸ್‌ ಗ್ರಾಂಡ್‌ ಮಾಸ್ಟರ್‌ಗೆ ಮಾತ್ರ ಸಾಧ್ಯ!

ಈ ಫೋರ್ಕ್‌ ಏನಿದೆ... ಇದು ಚದುರಂಗದಲ್ಲಿ ಭಯಂಕರ ಡೆಡ್ಲಿ ಮೂವ್‌. ಗೌಡರು ಈಗ ಕರ್ನಾಟಕ ರಾಜಕೀಯದ ಮೇಲೆ ಮಾಡಿರುವ ದಾಳಿ ಏನಿದೆ... ಇದು ಫೋರ್ಕ್‌ ಅಲ್ಲದೇ ಬೇರಾಮದೂ ಅಲ್ಲ. ಇಂಥ ಭಯಂಕರ ಫೋರ್ಕ್‌ನಲ್ಲಿ ಕಾಂಗ್ರೆಸ್ಸನ್ನು ಸಿಕ್ಕಿ ಹಾಕಿಸಿದ ಗೌಡರಿಗೆ ಎದುರಾಗಿ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ಸಿನಲ್ಲಿ ಯಾವ ನಾಯಕರಿಗೂ ಆಗಲಿಲ್ಲ. ಅದಕ್ಕೇ... ಇಂಥ ಫೋರ್ಕ್‌ ಎದರಿಸಲು ವಿಶ್ವ ಚೆಸ್‌ ಪಟು ವಿಶ್ವನಾಥನ್‌ ಆನಂದ್‌ಗೆ ಮಾತ್ರ ಸಾಧ್ಯ!



ಗೆ-
ಸ್ಯಾಮ್‌ ಪಿತ್ರೊಡ
ರಾಜೀವ್‌ ಗಾಂಧಿಯವರ ಮಾಜಿ ತಾಂತ್ರಿಕ ಸಲಹೆಗಾರರು

ಇಂದ-
ನರಾರ್ದನ ಪೂಜಾರಿ
ಕಾಂಗ್ರೆಸ್‌ ಕಾರ್ಯಕರ್ತರು, ಕರ್ನಾಟಕ

ಮಾನ್ಯರೇ,
ತಾಮ ಶ್ರೀಯುತ ರಾಜೀವ್‌ ಗಾಂಧಿಯವರ ಮಿತ್ರರಾಗಿ ಇದ್ದಂಥವರು. ಅಷ್ಟೇ ಅಲ್ಲ... ಶ್ರೀ ರಾಜೀವ್‌ಜೀಯವರ ತಾಂತ್ರಿಕ ಸಲಹೆಗಾರರಾಗಿ ಇದ್ದಂಥವರು. ಮಾನ್ಯ ರಾಜೀವ್‌ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಅವರ ತಲೆಯಲ್ಲಿ ೨೧ನೇ ಶತಮಾನದ ಕಂಪ್ಯೂಟರ್‌ ಚಿಪ್‌ಗಳನ್ನು ಅಳವಡಿಸಿದಂಥವರು. ಪಬ್ಲಿಕ್‌ ಟೆಲಿಫೋನ್‌ ಬೂತ್‌ ಎನ್ನತಕ್ಕಂಥ ಕಲ್ಪನೆಯನ್ನು ಶ್ರೀ ರಾಜೀವ್‌ ಗಾಂಧಿಯವರ ಮೂಲಕ ಈ ದೇಶಕ್ಕೆ ಪರಿಚಯಿಸಿರತಕ್ಕಂಥವರು. ಈ ಮೂಲಕ... ಭಾರತದಲ್ಲಿ ದೂರಸಂಪರ್ಕ ಎನ್ನತಕ್ಕಂಥ ಕ್ರಾಂತಿಗೆ ಕಾರಣರಾಗಿರತಕ್ಕಂಥವರು. ಈಗ ಶ್ರೀಮತಿ ಸೋನಿಯಾಜೀ ಹಾಗೂ ಶ್ರೀ ರಾಹುಲ್‌ಜೀ ಏನಿದ್ದಾರೆ.... ಅವರ ನಿಕಟವರ್ತಿಯಾಗಿದ್ದೀರಿ. ತಾಮ ಮಾತನಾಡತಕ್ಕಂಥ ಮಾಡರ್ನ್‌ ಮಾತುಗಳು ಏನಿವೆ... ಅವನ್ನ ಶ್ರೀಮತಿ ಸೋನಿಯಾಜೀಯವರೂ, ಶ್ರೀ ರಾಹುಲ್‌ ಗಾಂಧಿಯವರೂ ಕಿವಿಗೊಟ್ಟು ಕೇಳಿಸಿಕೊಳ್ಳುತ್ತಾರೆ.

ಆದ್ದರಿಂದ ನಾನು ನಿಮ್ಮಲ್ಲಿ ನಿವೇದನೆ ಮಾಡಿಕೊಳ್ಳತಕ್ಕಂಥದ್ದು ಏನಿದೆ ಅಂದರೆ, ದಯವಿಟ್ಟು ತಾಮ ಕರ್ನಾಟಕ ಕಾಂಗ್ರೆಸ್‌ನ ನೆರವಿಗೆ ಬರಬೇಕು. ಇದನ್ನ ನಾನು ನರಾರ್ದನ ಪೂಜಾರಿ ಮಾತ್ರ ಅಲ್ಲ, ಇಡೀ ಕರ್ನಾಟಕ ರಾಜ್ಯವೆ... ಬಹಳ ಕಳಕಳಿಯಿಂದ ಬೇಡಿಕೊಳ್ಳುತ್ತಿದೆ.

ಹಾಗೆಂದಾಕ್ಷಣ, ನಾವೇನು ರಾಜಕೀಯ ಮಾಡ್ತೇವೆ ಆ ರಾಜಕೀಯವನ್ನು ನೀವೂ ಮಾಡಬೇಕು ಅಂತಾ ಹೇಳ್ತಾ ಇಲ್ಲ. ನೀವೇನು ಮಾಡಬೇಕು? ಒಂದು ಸಣ್ಣ ಸಹಾಯ ಮಾಡಬೇಕು. ಏನದು? ಶ್ರೀಮತಿ ಸೋನಿಯಾಜೀಯವರು, ಶ್ರೀ ರಾಹುಲ್‌ ಗಾಂಧಿಯವರೂ ಏನಿದ್ದಾರೆ... ಅವರಿಗೆ ಒಂದು ಮಾತು ಹೇಳಬೇಕು. ಯಾವ ಮಾತು?

ವಿಶ್ವನಾಥನ್‌ ಆನಂದ್‌ ಏನಿದ್ದಾರೆ... ಅಂತಾರಾಷ್ಟ್ರೀಯ ಚದುರಂಗ ಗ್ರಾಂಡ್‌ ಮಾಸ್ಟರ್‌... ಅವರನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ವ್ಯವಹಾರಗಳಿಗೆ ಸಂಬಂಧಿಸಿ ಸೋನಿಯಾಜೀಯವರು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕು.... ಈ ಮಾತನ್ನ ತಾಮ ಶ್ರೀಮತಿ ಸೋನಿಯಾಜೀ ಅವರಿಗೆ ಹೇಳಬೇಕು. ನೀಮ ನೀಡಿರತಕ್ಕಂಥ ಈ ಸಲಹೆ ಏನಿದೆ ಅದನ್ನ ಶ್ರೀಮತಿ ಸೋನಿಯಾಜಿಯವರು ಕೇಳ್ತಾರೆ.

ಈ ದೇವೇಗೌಡರು ಏನಿದ್ದಾರೆ... ಅವರ ಹಾವಳಿ ಭಾಳಾ ಆಗಿದೆ. ಅವರ ರಾಜಕೀಯ ಲೆಕ್ಕಾಚಾರ ಏನಿದೆ... ಅದು ಭಾಳ ಆಳವಾಗಿದೆ. ಅವರ ತಂತ್ರ ಕುತಂತ್ರ ಏನಿದೆ... ಅಮಗಳನ್ನ ಅರ್ಥ ಮಾಡಿಕೊಳ್ಳೋಕೆ... ಕರ್ನಾಟಕದ ಯಾಮದೇ ಕಾಂಗ್ರೆಸ್‌ ನಾಯಕರಿಗೂ ಆಗ್ತಾ ಇಲ್ಲ. ಕಾಂಗ್ರೆಸ್‌ ಅಷ್ಟೇ ಏನು... ಯಾವ ಪಕ್ಷದ ನಾಯಕರಿಗೂ ಆಗ್ತಾ ಇಲ್ಲ.

ಈ ದೇವೇಗೌಡರು ಏನಿದ್ದಾರೆ... ಅವರಿಗೆ ಉತ್ತರ ಕೊಟ್ಟೂ ಕೊಟ್ಟೂ... ನಮಗೆಲ್ಲ ಸಾಕಾಗಿದೆ. ಅವರ ತಂತ್ರಗಳು ಏನಿದ್ದಾವೆ... ಅಮಗಳಿಗೆ ಪ್ರತಿತಂತ್ರ ಹುಡುಕೀ ಹುಡುಕೀ ನಮಗೆ ಸುಸ್ತಾಗಿದೆ. ನಮ್ಮ ಬುದ್ಧಿಯೇನಿತ್ತು.... ಎಲ್ಲಾ ಖರ್ಚಾಗಿಹೋಗಿದೆ. ಆದರೆ, ಈ ಗೌಡರು ಏನಿದ್ದಾರೆ... ಅವರು ಒಬ್ಬರೇ ಕರ್ನಾಟಕದ ಎಲ್ಲಾ ರಾಜಕಾರಣಿಗಳನ್ನೂ ಒಂಟಿಯಾಗಿ ಆಡಿಸುತ್ತಿದ್ದಾರೆ!

ಗೌಡರು ಬಹುಶಃ ಅವರ ಶಾಲಾ, ಕಾಲೇಜು ದಿನಗಳಲ್ಲಿ ಚೆಸ್‌ ಛಾಂಪಿಯನ್‌ ಆಗಿದ್ರೂ ಅಂತ ಕಾಣುತ್ತೆ! ಅದಕ್ಕೇ... ದೇವೇಗೌಡರ ಪ್ರತಿ ರಾಜಕೀಯ ನಡೆಗಳು ಏನಿವೆ... ಅವೆಲ್ಲ ಪಕ್ಕಾ ಚದುರಂಗದ ನಡೆಗಳ ಹಾಗಿರುತ್ತವೆ. ಯಾವ ಕಾಯಿಯನ್ನು ಇಲ್ಲಿ, ಈಗ ನಡೆಸಿದರೆ... ಇಪ್ಪತ್ತು ನಡೆಯ ನಂತರ ಎಲ್ಲಿ ಯಾವ ಕಾಯಿ ಉದುರಿಹೋಗುತ್ತೆ... ಯಾವ ಕಾಯಿಯನ್ನು ಈಗ ಬಲಿಕೊಟ್ಟರೆ.... ಹತ್ತನೆ ನಡೆಯಲ್ಲಿ ಯಾವ ದೊಡ್ಡ ಕಾಯಿ ತಮಗೆ ಸಿಗುತ್ತೆ... ಅಂತ ಗೌಡರಿಗೆ ಕರೆಕ್ಟಾಗಿ ಲೆಕ್ಕ ಸಿಗುತ್ತೆ. ಅವರ ಈ ಪ್ರಮಾಣದ ಲೆಕ್ಕಾಚಾರ ಸಾಮರ್ಥ್ಯ ನೋಡಿದರೆ, ದೇವೇಗೌಡರು ಇಲ್ಲಿ ರಾಜಕೀಯಕ್ಕೆ ಬರದೇ ಇದ್ದಿದ್ದರೆ ಅವರು ಖಂಡಿತ ಕ್ಯಾಸ್ಪರೋವ್‌, ಕಾರ್ಪೋವ್‌ ಅವರನ್ನೆಲ್ಲ ನುಂಗಿ ನೀರು ಕುಡಿದು ವಿಶ್ವ ಗ್ರಾಂಡ್‌ ಮಾಸ್ಟರ್‌ ಆಗೇ ಬಿಡುತ್ತಿದ್ದರು ಅಂತ ನಾನು ಹೇಳುತ್ತೇನೆ!

ಅದಕ್ಕಾಗೇ... ನಾನು ಹೇಳೋದು ಇಷ್ಟೇ: ಗೌಡರಿಗೆ ನಾಮ ಪ್ರತಿತಂತ್ರ ಹೂಡಬೇಕು ಅಂದರೆ... ಕ್ಯಾಸ್ಪರೋವ್‌, ಕಾರ್ಪೋವ್‌ ಅವರಿಗಿಂತ ಬುದ್ಧಿವಂತ ಚೆಸ್‌ ಮಾಸ್ಟರನ್ನು ಕಾಂಗ್ರೆಸ್‌ ಪಕ್ಷ ಹಿಡಿಯಬೇಕು. ಗೌಡರಿಗಿಂತ ಚೆನ್ನಾಗಿ ಲೆಕ್ಕ ಹಾಕಬಲ್ಲ ಚೆಸ್‌ ಪಟು ಮಾತ್ರ ಕಾಂಗ್ರೆಸ್‌ನ ಷಡ್ಯಂತ್ರಗಳನ್ನು ರೂಪಿಸಬೇಕು. ಅಂಥ ವ್ಯಕ್ತಿಗಳು ಭಾರತದಲ್ಲಿ ಯಾರಾದರೂ ಇದ್ದಾರಾ... ಅಂತ ಹುಡುಕಿದರೆ ನಮಗೆ ಕಂಡಿದ್ದು ಒಂದೇ ಹೆಸರು... ಅದು ಸದ್ಯ ಜಗತ್ತಿನ ಅತಿ ಬುದ್ಧಿವಂತ ಚೆಸ್‌ ಪಟು... ವಿಶ್ವ ಗ್ರಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌!

ಆತ ಏನಿದ್ದಾನೆ.... ಆತ ಮಾತ್ರ ದೇವೇಗೌಡರ ಚಾಣಕ್ಯ ರಾಜಕೀಯ ನಡೆ ಎದುರಿಸಬಲ್ಲ ಅಂತ ತಾಮ ದಯವಿಟ್ಟು ಮೇಡಂ ಅವರಿಗೆ ಸಲಹೆ ನೀಡಬೇಕು. ಅಷ್ಟೇ ಅಲ್ಲ. ನೀಮ ಹೇಳಬೇಕು... ಆದಷ್ಟು ಬೇಗ ಅತಿ ಬುದ್ಧಿವಂತ ಚೆಸ್‌ ಪಟು ಕಾಂಗ್ರೆಸ್‌ನ ಸಲಹೆಗಾರ ಆಗದಿದ್ದರೆ, ಗೌಡರ ನಡೆಗಳಿಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಷ್ಟೇ ಅಲ್ಲ, ಎಲ್ಲ ಪಕ್ಷಗಳೂ ತರಗೆಲೆಗಳಾಗುತ್ತವೆ... ಅಂತ!

ಪಿತ್ರೊಡಾ ಅವರೇ,
ನಮ್ಮ ದಕ್ಷಿಣ ಕನ್ನಡದಲ್ಲಿ ಪತ್ರೊಡೆ ಅಂತ ಒಂದು ತಿನಿಸಿದೆ. ನಿಮ್ಮ ಹೆಸರು ಏನಿದೆ... ಅದು ಸ್ಪಲ್ಪ ಪತ್ರೊಡೆ ಥರ ಕೇಳಿಸ್ತದೆ. ಹಾಗಾಗಿ, ನಿಮ್ಮ ಹೆಸರು ನಮಗೆ ಭಾಳಾ ಇಷ್ಟ. ಅದಿರಲಿ... ಆ ವಿಷಯ ಈಗ ಬೇಡಾ. ನಾವೀಗ ಮಾತನಾಡಬೇಕಿರತಕ್ಕಂಥ ವಿಷಯ ಗೌಡರ ರಾಜಕೀಯ ಚದುರಂಗದ ಬಗ್ಗೆ.

ಈ ಗೌಡರು ಈಗೇನು ಮಾಡಿದ್ದಾರೆ... ಇದಕ್ಕೆ ಚೆಸ್‌ ಆಟದಲ್ಲಿ ಫೋರ್ಕ್‌ ಎನ್ನತಕ್ಕಂಥ ಹೆಸರಿದೆ. ಅಂದರೆ, ಚದುರಂಗದ ಕುದುರೆಯನ್ನು ಒಮ್ಮೆ ಹಾರಿಸಿದರೆ... ಎದುರಾಳಿಯ ಎರಡು ಕಾಯಿಗಳ ಮೇಲೆ ಏಕಕಾಲದಲ್ಲಿ ದಾಳಿಯಾಗುತ್ತದೆ. ಎದುರಾಳಿ ಒಂದು ಕಾಯಿಯನ್ನು ಈ ದಾಳಿಯಿಂದ ತಪ್ಪಿಸಿಕೊಂಡರೆ ಇನ್ನೊಂದು ಕಾಯಿ ಕುದುರೆಗೆ ಆಹುತಿಯಾಗುಮದಂತೂ ಗ್ಯಾರಂಟಿ.

ಈ ಫೋರ್ಕ್‌ ಏನಿದೆ... ಇದು ಚದುರಂಗದಲ್ಲಿ ಭಯಂಕರ ಡೆಡ್ಲಿ ಮೂವ್‌. ಗೌಡರು ಈಗ ಕರ್ನಾಟಕ ರಾಜಕೀಯದ ಮೇಲೆ ಮಾಡಿರುವ ದಾಳಿ ಏನಿದೆ... ಇದು ಫೋರ್ಕ್‌ ಅಲ್ಲದೇ ಬೇರಾಮದೂ ಅಲ್ಲ. ಒಂದು ಕಡೆ... ಆ ಕುಮಾರಸ್ವಾಮಿ ಏನಿದ್ದಾರೆ... ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುತ್ತೇನೆ ಅಂತ ಜೆಡಿಎಸ್‌ ಶಾಸಕರನ್ನೂ ಹೈಜಾಕ್‌ ಮಾಡಿದ್ದಾರೆ. ಇನ್ನೊಂದು ಕಡೆ... ದೇವೇಗೌಡರು... ಸೋನಿಯಾ ಜೊತೆ ಮಾತುಕತೆಗೆ ಇಳಿದಿದ್ದಾರೆ. ತಮ್ಮ ಒಂಬತ್ತು ಷರತ್ತುಗಳಿಗೆ ಒಪ್ಪಿದರೆ... ಈಗಲೂ ಕಾಂಗ್ರೆಸ್‌ ಜೊತೆಯೇ ಸರ್ಕಾರ ಮಾಡುತ್ತೇನೆ ಅಂತ ಭಾಷೆ ಕೊಟ್ಟಿದ್ದಾರೆ. ಆ ಕುಮಾರ ನನ್ನ ಮಗ. ಆತ ನಾನು ಹೇಳಿದಂತೆ ಕೇಳುತ್ತಾನೆ...
ಯೂ ಡೋಂಟ್‌ ವರಿ ಅಂತ ಗೌಡರು ಪದೇ ಪದೇ ಹೇಳುತ್ತಿದ್ದಾರೆ. ಇದರ ಅರ್ಥವೇನು?

ಸೋನಿಯಾಜೀಯವರು ಗೌಡರ ಷರತ್ತಿಗೆ ಸೋತರೆ... ಈಗಿನ ರಾಜಕೀಯ ಆಟದಲ್ಲಿ ಎಸ್‌. ಎಂ. ಕೃಷ್ಣ ಅವರ ಗ್ಯಾಂಗು ಹಾಗೂ ಸಿದ್ದರಾಮಯ್ಯ ಗ್ಯಾಂಗು ಒಟ್ಟಿಗೇ ಬಲಿ! ಒಂದು ವೇಳೆ ಷರತ್ತಿಗೆ ಸೋನಿಯಾಜೀಯವರು ಸೋಲದಿದ್ದರೆ... ಕಾಂಗ್ರೆಸ್‌ ಅಧಿಕಾರವೇ ಬಲಿ! ಇದರರ್ಥ ಹೇಗೆ ನೋಡಿದರೂ ಕಾಂಗ್ರೆಸ್ಸಿಗೆ ಒಂದಲ್ಲ ಒಂದು ಲಾಸ್‌!

ಇಂಥ ಭಯಂಕರ ಫೋರ್ಕಿಂಗ್‌ನಲ್ಲಿ ಕಾಂಗ್ರೆಸ್ಸನ್ನು ಸಿಕ್ಕಿ ಹಾಕಿಸಿದ ಗೌಡರಿಗೆ ಎದುರಾಗಿ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ಸಿನಲ್ಲಿ ಯಾವ ನಾಯಕರಿಗೂ ಆಗಲಿಲ್ಲ. ಅದಕ್ಕೇ... ಇಂಥ ನೂರಾರು ಫೋರ್ಕ್‌ಗಳನ್ನ ಎದುರಿಸಿ ಗೆದ್ದ ಅಭ್ಯಾಸವಿರುವ ವಿಶ್ವನಾಥನ್‌ ಆನಂದ್‌ ಅವರ ಸಲಹೆಯನ್ನು ಸೋನಿಯಾಜೀಯವರು ಪಡೆಯುವಂತೆ ನೀಮ ಮಾಡಬೇಕು. ಈ ಮೂಲಕ ನಮ್ಮನ್ನೆಲ್ಲ ನೀಮ ಕಾಪಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪರವಾಗಿ ನಾನು ನರಾರ್ದನ ಪೂಜಾರಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ.

ಜೈ ಹಿಂದ್‌, ಜೈ ಕರ್ನಾಟಕ


Kannada Prabha issue dated January 23, 2006
Vishwanathan Anand To Help Congress Politics Against H D Dewegowda

(In chess, a fork is a tactic that uses one piece to attack two or more of the opponent's pieces at the same time, to achieve material gain.)

--

Tuesday, January 17, 2006

ಸ್ತ್ರೀಯರು ಮನೆಯಿಂದ ಹೊರಬರದಂತೆ ನಿಷೇಧಾಜ್ಞೆ

ಪೊಲೀಸ್‌ ಹಿರಿಯಾಧಿಕಾರಿ ಟಿಂಟೆಡ್‌ ಸಿಂಗ್‌ ಅವರಿಗೆ ಕೋಲ್ಯ ಸಿಂಗ್‌ ನೀಡಿದ ಹೊಸ ಲಾ ಆಂಡ್‌ ಆರ್ಡರ್‌ ಸಲಹೆ

ಶೇ.೫೦ರಷ್ಟು ಅಪರಾಧಗಳು ಮಹಿಳೆಯರು ಹಾಗೂ ಹುಡುಗಿಯರ ಕಾರಣದಿಂದಾಗಿಯೇ ನಡೆಯುತ್ತವೆ. ಶೇ.೩೦ರಷ್ಟು ಲಾ ಆಂಡ್‌ ಆರ್ಡ್‌ರ್‌ ಸಮಸ್ಯೆ ಇರುಮದು ಮಹಿಳೆಯರು ರಸ್ತೆಗಳಲ್ಲಿ ಓಡಾಡುಮದರಿಂದಲೇ ಎಂಬುದು ಪೊಲೀಸರ ಅಂದಾಜು. ಮಹಿಳೆಯರು ಮನೆಯ ಹೊಸ್ತಿಲು ದಾಟುತ್ತಿರುಮದೇ ಈ ಎಲ್ಲ ಸಮಸ್ಯೆಗೂ ಕಾರಣ. ಆದ್ದರಿಂದ ಅವರು ಮನೆಯಿಂದ ಹೊರಬರಲು ನಿಷೇಧ ಹೇರಿದರೆ ಅಪರಾಧ ಪ್ರಮಾಣ ಗಣನೀಯವಾಗಿ ತಗ್ಗುತ್ತದೆ!

ಮಾನ್ಯ ಟಿಂಟೆಡ್‌ ಸಿಂಗ್‌ರವರು
ಪೊಲೀಸ್‌ ಹಿರಿಯಾಧಿಕಾರಿಗಳು, ಇವರಿಗೆ

ಕೋಲ್ಯ ಸಿಂಗ್‌ ಎಂಬ, ಅಜಮಾಸು ೮೩ ವರ್ಷದ,
ಬೆಂಗಳೂರು ನಿವಾಸಿಯಾದ ನಾನು ಮಾಡುವ ಪ್ರಣಾಮಗಳು.

ಬೆಂಗಳೂರಿನ ಜಗತ್‌ಪ್ರಸಿದ್ಧ ಎಂ.ಜಿ. ರಸ್ತೆಯನ್ನು ಭಾನುವಾರ ಬಂದ್‌ ಮಾಡಿ, ಮಕ್ಕಳ ಸ್ಕೇಟಿಂಗ್‌ ರಸ್ತೆಯನ್ನಾಗಿ ಆದೇಶ ಹೊರಡಿಸಲು ಉದ್ದೇಶಿದ್ದ, ಖ್ಯಾತ ಪೊಲೀಸ್‌ ಅಧಿಕಾರಿ ಸಾಂಗ್ಲಿಯಾನಾ ನಂತರ ಅತ್ಯಂತ ಜನರಂಜನಾತ್ಮಕ ನಿರ್ಧಾರ ಕೈಗೊಳ್ಳುತ್ತಿರುವ ತಮ್ಮಂಥ ಪೊಲೀಸ್‌ ಅಧಿಕಾರಿಗೆ ನನ್ನ ಅಭಿನಂದನೆಗಳು.

ಎಲ್ಲಕ್ಕಿಂತ ಮುಖ್ಯವಾಗಿ ಕಾಲ್‌ಸೆಂಟರ್‌ ಉದ್ಯೋಗಿ ಪ್ರತಿಭಾಳ ಅತ್ಯಾಚಾರ ಹಾಗೂ ಕೊಲೆಯನ್ನು ಹೇಗೆ ತಪ್ಪಿಸಬಹುದಿತ್ತು ಎಂಬುದಕ್ಕೆ ನೀಮ ಉತ್ತರ ಕಂಡು ಹಿಡಿದು ಮಹಾನ್‌ ಸಾಧನೆ ಮಾಡಿದ್ದೀರಿ. ನಿಮ್ಮ ಸಂಶೋಧನೆಯ ಪ್ರಕಾರ, ಆಕೆ ಪ್ರಯಾಣಿಸಿದ ವಾಹನದ ಗಾಜುಗಳು ಕಪ್ಪಾಗಿದ್ದದ್ದೇ ಇಡೀ ದುರಂತಕ್ಕೆ ಕಾರಣ! ಆಕೆ ಪ್ರಯಾಣಿಸಿದ ವಾಹನದ ಗಾಜುಗಳು ಟಿಂಟೆಡ್‌ ಗ್ಲಾಸುಗಳಾಗಿರದೇ, ಪಾರದರ್ಶಕವಾಗಿದ್ದರೆ ಆಕೆಯ ಅತ್ಯಾಚಾರವೂ ಆಗುತ್ತಿರಲಿಲ್ಲ. ಕೊಲೆಯೂ ಆಗುತ್ತಿರಲಿಲ್ಲ! ಇಂಥ ಸತ್ಯ ಶೋಧನೆ ಮಾಡಿದ ತಮ್ಮ ಸಾಮರ್ಥ್ಯವನ್ನು ಎಷ್ಟು ಬಣ್ಣಿಸಿದರೂ ಕಡಿಮೆಯೇ!

ಈ ತಮ್ಮ ಸತ್ಯ ಶೋಧನೆಯ ನಂತರ, ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಲು ತಮ್ಮ ಇಲಾಖೆ ಒಂದು ಪಾರದರ್ಶಕ ಕ್ರಮ ಕೈಗೊಂಡಿದ್ದು ಸರಿಯಾಗಿಯೇ ಇದೆ. ಬೆಂಗಳೂರಿನಲ್ಲಿರುವ ಸುಮಾರು ೨ ಲಕ್ಷ ಕಾರುಗಳ ಕಿಟಕಿ ಗಾಜುಗಳ ತಂಪಿನ ಪೊರೆಯನ್ನು ತೆಗೆಯಬೇಕೆಂದು ತಮ್ಮ ಇಲಾಖೆ ಆದೇಶಿಸಿದೆ. ಬೆಂಗಳೂರಿನ ಎಲ್ಲ ವಾಹನಗಳ ತಂಪಿನ ಪೊರೆ ತೆಗೆದುಬಿಟ್ಟರೆ ಇನ್ನು ಮುಂದೆ ಇಂತಹ ಅಪರಾಧಗಳು ನಡೆಯುಮದೇ ಇಲ್ಲ ಎಂಬುದು ಶತಃಸಿದ್ಧ!

ಈ ಆದೇಶವನ್ನು ಕೆಲಮ ಅಜ್ಞಾನಿಗಳು ಟೀಕಿಸುತ್ತಿದ್ದಾರೆ. ಯಾಮದೋ ಓಬಿರಾಯನ ಕಾಲದ ಕಾನೂನನ್ನು ಈಗ ಅನುಷ್ಠಾನ ಮಾಡುವ ಮೂಲಕ ಪೊಲೀಸ್‌ ಇಲಾಖೆ ಮುಗ್ಧ ನಾಕರಿಕರಿಗೆ ಕಿರುಕಳ ನೀಡುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿರುಮದು ಖಂಡಿತ ತಪುý್ಪ.

ಈಗ ಜಗತ್ತೇ ಬದಲಾಗಿದೆ ಅಂತ ನಮ್ಮ ಓಬಿರಾಯನ ಕಾಲದ ಕಾನೂನನ್ನೂ ಬದಲಾಯಿಸುಮದು ಸರಿಯೇ? ಪ್ರಪಂಚ ಬದಲಾಗಿದೆ ಅಂತ ಭಗವದ್ಗೀತೆಯನ್ನೂ ತಿದ್ದಲು ಆಗುತ್ತದೆಯೇ? ಆದ್ದರಿಂದ ಜನರಿಗೆ ಅನನುಕೂಲತೆ ಆಗುತ್ತೆ ಅಂತ ಕಾನೂನನ್ನು ಸರಳಮಾಡುಮದು ತರವೇ? ಕಾನೂನು ಅಂದರೆ ಕಠಿಣವಾಗಿರಬೇಕು!

ಈ ಹೊಸ ಆದೇಶದ ಬಗ್ಗೆ ಕೆಲಮ ಗೊಂದಲಗಳಿರುಮದು ನಿಜ. ಆದರೆ, ಅವಕ್ಕೆ ನನ್ನ ಬಳಿ ಉತ್ತರವಿದೆ. ಅಮಗಳನ್ನು ನಿಮಗೆ ತಿಳಿಸುಮದೇ ಈ ಪತ್ರದ ಉದ್ದೇಶ.

ಗೊಂದಲ ೧ : ಈ ಕಾನೂನನ್ನು ಬೆಂಗಳೂರಿನಲ್ಲಿ ಮಾತ್ರ ಜಾರಿಗೆ ತಂದರೆ, ಬೆಂಗಳೂರಿಗೆ ಹೊರಗಿನಿಂದ ಬರುವ ವಾಹನಗಳು ಏನು ಮಾಡಬೇಕು?

ಉತ್ತರ: ಅಮ ಬೆಂಗಳೂರಿಗೆ ಬರುವಾಗ ತಮ್ಮ ತಂಪಿನ ಗಾಜುಗಳನ್ನು ತೆಗೆದುಹಾಕಿ ಪಾರದರ್ಶಕ ಗಾಜುಗಳನ್ನು ಹಾಕಿಕೊಳ್ಳಬೇಕು. ಮತ್ತೆ ಊರಿಗೆ ಹೋದ ನಂತರ ತಂಪಿನ ಗಾಜುಗಳನ್ನು ಹಾಕಿಕೊಳ್ಳಬಹುದು. ಇದು ದುಬಾರಿ ಎನಿಸಿದರೆ, ಇನ್ನೊಂದು ಉಪಾಯವಿದೆ. ಬೆಂಗಳೂರಿಗೆ ತಂಪಿನ ಗಾಜುಗಳನ್ನು ಹಾಕಿಕೊಂಡು ಬಂದಾಗ, ಪೊಲೀಸರು ದಂಡ ಹಾಕುತ್ತಾರೆ. ಅದಷ್ಟನ್ನು ಕೊಟ್ಟು, ಬಂದ ಕೆಲಸ ಮುಗಿಸಿಕೊಂಡು ವಾಪಸ್‌ ಹೋಗಬಹುದು.

ಗೊಂದಲ ೨ : ಕಿಟಕಿ ಗಾಜುಗಳನ್ನು ಪಾರದರ್ಶಕ ಮಾಡಿದರೆ, ಕಾರಿನ ಒಳಗೆ ಇಟ್ಟಿರುಮದೆಲ್ಲ ಕಾಣಿಸುತ್ತದೆ. ಇದರಿಂದ ಕಳ್ಳರಿಗೆ ಯಾವ ಕಾರಿಗೆ ಕನ್ನ ಹಾಕಬೇಕು ಎಂಬುದು ಸುಲಭವಾಗಿ ತಿಳಿಯುತ್ತದೆ.

ಉತ್ತರ: ಕಾರುಗಳು ಇರುಮದು ಬರೀ ಓಡಾಡುಮದಕ್ಕೆ. ಅದನ್ನು ಅಮೂಲ್ಯ ವಸ್ತುಗಳನ್ನು ಇಡುವ ಅಲ್ಮೆರಾ ಮಾಡಬೇಡಿ. ಕಾರಿನಿಂದ ಇಳಿದು ಓಡಾಡುವಾಗ ಕಾರಿನಲ್ಲಿರುವ ಬ್ಯಾಗು, ಫೈಲು, ಷಾಪಿಂಗ್‌ ಮಾಡಿದ ಪೆಟ್ಟಿಗೆಗಳು, ಬ್ರೀಫ್‌ಕೇಸ್‌ ಹಾಗೂ ಸ್ಟೀರಿಯೋ ಸೆಟ್‌ಗಳನ್ನು ನಿಮ್ಮ ಜೊತೆಯೇ ತೆಗೆದುಕೊಂಡು ಹೋಗಿ. ಇದರಿಂದ ಖಾಲಿ ಕಾಣಿಸುವ ಕಾರು ನೋಡಿ ಕಳ್ಳರು ನಿಮ್ಮ ಕಾರಿಗೆ ಕನ್ನ ಹಾಕುಮದಿಲ್ಲ. ಅಥವಾ, ನಿಮ್ಮ ಕಾರಿನ ಜೊತೆ ಒಬ್ಬ ಕಾವಲುಗಾರರನ್ನು ಕರೆದೊಯ್ಯಿರಿ. ನೀಮ ಕಾರಿನಿಂದ ಆಚೆ ಹೋದಾಗ ಆತ ಕಾರು ಕಾಯುತ್ತಿರಲಿ.

ಗೊಂದಲ ೩ : ವಾಹನಗಳ ಕಿಟಕಿ ಗಾಜುಗಳು ಪಾರದರ್ಶಕವಾಗಿದ್ದರೆ, ದೊಡ್ಡ ಸಿನಿಮಾ ಸ್ಟಾರ್‌ಗಳು, ಖ್ಯಾತನಾಮರಿಗೆ ಕಷ್ಟವಾಗುತ್ತದೆ. ಏಕೆಂದರೆ, ಕಾರಿನೊಳಗಿದ್ದವರು ಯಾರು ಅಂತ ಕಾಣಿಸಿ ಜನ ವಾಹನಕ್ಕೆ ಮುಗಿಬೀಳಬಹುದು. ಅಲ್ಲದೇ, ಯಾಮದೇ ಕುಟುಂಬದ ಪ್ರವಾಸದಲ್ಲೂ ಪ್ರೆೃವಸಿ ಇರುಮದಿಲ್ಲ.

ಉತ್ತರ: ಸ್ಟಾರ್‌ಗಳು ಹಾಗೂ ಖ್ಯಾತನಾಮರು ಪಾರದರ್ಶಕ ಕಿಟಕಿಗಳ ವಾಹನಗಳಲ್ಲಿ ಓಡಾಡುಮದನ್ನು ಬಿಡಬೇಕು. ಅವರು ಸರಕು ಸಾಗಣೆಯ ವಾಹನದೊಳಗೆ ಕುಳಿತರೆ ಒಳಗೆ ಯಾರಿದ್ದಾರೆ ಎಂದು ಹೊರ ಜಗತ್ತಿಗೆ ತಿಳಿಯುಮದಿಲ್ಲ. ಮುಚ್ಚಿದ ಕ್ಯಾಬ್‌, ಲಾರಿ, ಮಾರುತಿ ಕಾರ್ಗೋ ಓಮ್ನಿ ಅಥವಾ ಟೆಂಪೋ ರಿಕ್ಷಾದಂತಹ ವಾಹನಗಳಿಗೆ ಕಿಟಕಿಯೇ ಇರುಮದಿಲ್ಲ. ಆದ್ದರಿಂದ ಒಳಗೆ ಕುಳಿತ ಖ್ಯಾತನಾಮರು ಹೊರಗಿನ ಜನರಿಗೆ ಕಾಣಿಸುಮದಿಲ್ಲ. ಇದರಿಂದ ಖ್ಯಾತನಾಮರು ನಿರಾಳವಾಗಿ ಓಡಾಡಬಹುದು. ಅಲ್ಲದೇ, ಓಡಾಡುವಾಗ ಪ್ರೆೃವಸಿ ಬೇಕು ಎನ್ನುವ ಕುಟುಂಬಗಳೂ ಸಹ ಇಂತಹ ಸರಕು ಸಾಗಣೆ ವಾಹನವನ್ನೇ ಬಳಸಬಹುದು.

ಗೊಂದಲ ೪ : ಪಾರದರ್ಶಕ ಗಾಜುಗಳಿದ್ದರೆ ರಾತ್ರಿ ವೇಳೆ ಮಹಿಳೆಯರು ಕಾರು ಓಡಿಸುಮದು ಕಷ್ಟ. ಏಕೆಂದರೆ, ಮಹಿಳೆಯರು ಕಾರು ಓಡಿಸುಮದು ಕಂಡರೆ ಪುಂಡರಿಂದ ಆಪಾಯ ಆಗಬಹುದು. ಇದರಿಂದ ಮಹಿಳೆಯರಿಗೆ ರಾತ್ರಿ ಕಾರು ಓಡಿಸಲು ಭಯವಾಗುತ್ತದೆ.

ಉತ್ತರ: ಮಹಿಳೆಯರು ರಾತ್ರಿ ವೇಳೆ ಮನೆಯಲ್ಲಿ ಇರುಮದು ಬಿಟ್ಟು ಯಾಕೆ ಕಾರು ಓಡಿಸಬೇಕು? ಮಹಿಳೆಯರು ಮನೆಯ ಹೊಸ್ತಿಲು ದಾಟುತ್ತಿರುಮದೇ ಈ ಎಲ್ಲ ಸಮಸ್ಯೆಗೂ ಕಾರಣ. ರಾಮಾಯಣದಲ್ಲಿ ಲಕ್ಷ್ಮಣ ರೇಖೆಯನ್ನು ದಾಟಿ ಸೀತೆಗೆ ಯಾವ ಗತಿ ಬಂತು ಗೊತ್ತಲ್ಲ? ಹಾಗೆ, ಈಗ ಮಹಿಳೆಯರು ಮನೆ ಬಿಟ್ಟು ಹೊರಗೆ ಬರಬಾರದು. ಅದರಲ್ಲೂ ಸುಂದರ ಯುವತಿಯರು ಹೊರ ಬಂದರೆ, ಯುವಕರು ಕೋತಿಗಳಂತೆ ಆಗುತ್ತಾರೆ. ಆ ಯುವತಿಯರು ಮಿನಿ ಫ್ಯಾಷನ್‌ ಬಟ್ಟೆ ತೊಟ್ಟರಂತೂ ಪಡ್ಡೆಗಳು ಕೋತಿಗಳಿಗೆ ಸುರೆ ಕುಡಿಸಿದಂತೆ ಕುಣಿಯುತ್ತಾರೆ. ಇನ್ನು, ಯವತಿಯರು ಒಂದು ಕುಡಿನೋಟ ಹಾಯಿಸಿ, ಮುಗುಳು ನಗು ಬೀರಿ, ಎರಡು ಮಾತು ಆಡಿದರಂತೂ ಮುಗಿದೇಹೋಯಿತು. ಹುಡುಗರು ಎಂಥ ಅನರ್ಥಕ್ಕೂ ಕೈಹಾಕುತ್ತಾರೆ. ಹಾಗೆ ನೋಡಿದರೆ, ಶೇ.೫೦ರಷ್ಟು ಅಪರಾಧಗಳು ಮಹಿಳೆಯರು ಹಾಗೂ ಹುಡುಗಿಯರ ಕಾರಣದಿಂದಾಗಿಯೇ ನಡೆಯುತ್ತವೆ. ಶೇ.೩೦ರಷ್ಟು ಲಾ ಆಂಡ್‌ ಆರ್ಡ್‌ರ್‌ ಸಮಸ್ಯೆ ಇರುಮದು ಮಹಿಳೆಯರು ರಸ್ತೆಗಳಲ್ಲಿ ಚೆಲ್ಲುಚೆಲ್ಲಾಗಿ ಓಡಾಡುಮದರಿಂದಲೇ ಎಂಬುದು ಒಂದು ಪೊಲೀಸ್‌ ಅಂದಾಜು. ಆದ್ದರಿಂದ, ಮಹಿಳೆಯರು ಮನೆಯಿಂದ ಹೊರಕ್ಕೆ ಬರಲೇಬಾರದು. ಬಂದರೂ ಸಾಯಂಕಾಲದ ನಂತರ ಮಹಿಳೆಯರು ಮನೆಯೊಳಗೇ ಇರಬೇಕು. ಆಗ ಮಹಿಳೆಯರ ಮೇಲಿನ ದೌರ್ಜನ್ಯ ಶೇ.೯೦ರಷ್ಟು ಕಡಿಮೆಯಾಗುತ್ತದೆ. ಈ ಬಗ್ಗೆ ಪೊಲೀಸರು ಒಂದು ನಿಷೇಧಾಜ್ಞೆ ಹೊರಡಿಸಬೇಕು. ಇದಕ್ಕೆ ಪೊಲೀಸರು ಓಬಿರಾಯನ ಕಾಲದ ಲಾ ಆಂಡ್‌ ಆರ್ಡರ್‌ನ ಯಾಮದಾದರೂ ಐಪಿಸಿ ಸೆಕ್ಷನ್ನನ್ನು ತೋರಿಸಬಹುದು.

ಗೊಂದಲ ೫ : ದುಷ್ಕರ್ಮಿಗಳು ಕಿಟಕಿ ಇರುವ ವಾಹನಬಿಟ್ಟು, ಬೆಡ್‌ರೂಮ್‌ನಷ್ಟು ಸ್ಥಳಾಕಾವಕಾಶ ಇರುವ ಲಾರಿಯಂಥ ಸರಕು ಸಾಗಣೆ ವಾಹನ ಬಳಸಿ, ಮಹಿಳೆಯನ್ನು ಅಪಹರಣ ಮಾಡಿ, ಅದರಲ್ಲಿ ಅತ್ಯಾಚಾರ ಮಾಡಬಹುದಲ್ಲ! ಆಗ ಟಿಂಟೆಡ್‌ ಗ್ಲಾಸ್‌ ನಿಷೇಧದಿಂದ ಏನು ಪ್ರಯೋಜನ?

ಉತ್ತರ: ಅದೆಲ್ಲ ನಮಗೆ ಗೊತ್ತಿಲ್ಲ. ನಮ್ಮ ಕಾನೂನು ಇರುಮದು ಕಿಟಕಿ ಇರುವ ವಾಹನಗಳಲ್ಲಿ ಅತ್ಯಾಚಾರ, ಅಪಹರಣ ಮತ್ತಿತ್ಯಾದಿ ದುಷ್ಕರ್ಮ ತಡೆಯಲು ಮಾತ್ರ. ಅದಕ್ಕಾಗಿ, ಮುಂದಿನ ದಿನಗಳಲ್ಲಿ ’ಸರಕು ಸಾಗಣೆ ವಾಹನಕ್ಕೂ ಬಸ್‌ನಂತೆ ಕಿಟಕಿಗಳು ಇರಬೇಕು ಹಾಗೂ ಅಮಗಳಿಗೆ ಟಿಂಟೆಡ್‌ ಗ್ಲಾಸ್‌ ಇರಬಾರದು’ ಎಂದು ಇನ್ನೊಂದು ಆದೇಶ ಹೊರಡಿಸಿ ಆ ಸರಕು ಸಾಗಣೆ ವಾಹನಗಳನ್ನೂ ಟಿಂಟೆಡ್‌ ಗ್ಲಾಸ್‌ ಕಾನೂನಿನ ವ್ಯಾಪ್ತಿಗೆ ತರಬಹುದು. ಅಲ್ಲಿವರೆಗೂ ದುಷ್ಕರ್ಮಿಗಳು ತಮ್ಮ ಕೃತ್ಯವನ್ನು ಸರಕು ಸಾಗಣೆ ವಾಹನಗಳಲ್ಲಿ ನಡೆಸಬಹುದು.

ಗೊಂದಲ ೬ : ಟಿಂಟೆಡ್‌ ಗ್ಲಾಸ್‌ ಇಲ್ಲದಿದ್ದರೂ ದುಷ್ಕರ್ಮಿಗಳು ರಾಜಾರೋಷವಾಗಿ ಪಾರದರ್ಶಕ ಕಿಟಕಿಗಳ ವಾಹನಗಳಲ್ಲೇ ಬಂದು ಅಪರಾಧ ನಡೆಸುವ ಎಷ್ಟೋ ದೃಶ್ಯಗಳನ್ನು ಚಲನಚಿತ್ರಗಳಲ್ಲಿ ತೋರಿಸುತ್ತಾರಲ್ಲ? ಅಪರಾಧಕ್ಕೂ ಟಿಂಟೆಡ್‌ ಗ್ಲಾಸಿಗೂ ಏನು ಸಂಬಂಧ?

ಉತ್ತರ: ಚಲನಚಿತ್ರಗಳೇ ಬಹುತೇಕ ಅಪರಾಧಗಳಿಗೆ ಕಾರಣ ಎಂದು ಇನ್ನೊಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಆದ್ದರಿಂದ ಬೆಂಗಳೂರಿನಲ್ಲಿ ಎಲ್ಲಾ ಚಲನಚಿತ್ರಗಳ ಪ್ರದರ್ಶನವನ್ನೂ ನಿಷೇಧಿಸಬಹುದು. ಟಿಂಟೆಡ್‌ ಗ್ಲಾಸ್‌ ನಿಷೇಧಿಸಿದ ಪೊಲೀಸರಿಗೆ ಇದೇನೂ ದೊಡ್ಡ ಕೆಲಸವಲ್ಲ! ಇದಕ್ಕೆ ಕಾನೂನು ತೊಡಕೂ ಇಲ್ಲ. ಓಬಿರಾಯನ ಕಾಲದ ಕಾನೂನಿನ ಪ್ರಕಾರ ಅಪರಾಧಕ್ಕೆ ಪ್ರಚೋದನೆ ನೀಡುವ ಯಾಮದೇ ವಿಷಯವನ್ನೂ ನಿಷೇಧಿಸಲು ಪೊಲೀಸರಿಗೆ ಅವಕಾಶವಿದೆ.
ನನ್ನ ಈ ಸಲಹೆಗಳನ್ನು ತಾಮ ಜಾರಿಗೊಳಿಸಿದರೆ ತಾಮ ಸಾಂಗ್ಲಿಯಾನಾ ಅವರಿಗಿಂತಲೂ ಖ್ಯಾತರಾಗುಮದು ಶತಃಸಿದ್ಧ.
ತಮ್ಮ ಇನ್ನಷ್ಟು ಜನರಂಜನಾ ಸೇವೆಗೆ ಶುಭವಾಗಲಿ.

ಇಂತಿ ತಮ್ಮ ಅಭಿಮಾನಿ
ಕೋಲ್ಯ ಸಿಂಗ್‌



Kannada Prabha issue dated January 16, 2006
Women Coming Out of House is Banned

--

Tuesday, January 10, 2006

ಕಟ್ಟಾ ಸಸ್ಯಾಹಾರಿಯಾದರೆ ನಾಮ ಬದುಕುಮದೇ ಕಷ್ಟ!

ವೆಜ್‌ ಐಸ್‌ಕ್ರೀಮ್‌ನಲ್ಲೂ ಹಂದಿ ಮಾಂಸ, ಔಷಧಿಯಲ್ಲಿ ಮಾನವನ ಮೂಳೆ -ಸಸ್ಯಾಹಾರಿಯ ದುಃಖತಪ್ತ ಪತ್ರ

ಇಡೀ ಜಗತ್ತೇ ಒಂದಲ್ಲಾ ಒಂದು ರೀತಿಯಲ್ಲಿ ಮಾಂಸಾಹಾರಿ ಎನಿಸುತ್ತಿದೆ. ಆಹಾರದಲ್ಲಿ ಮಾಂಸ ತಿನ್ನದಿದ್ದರೂ ಔಷಧಿಗಳ ರೂಪದಲ್ಲಿ ಪ್ರಾಣಿಜನ್ಯ ವಸ್ತುಗಳನ್ನು ನಾಮ ಸೇವಿಸಿರುಮದು ಖಂಡಿತ. ಹೊಟೆಲ್‌ ಹಾಗೂ ರೆಡಿಮೇಡ್‌ ತಿನಿಸುಗಳಲ್ಲಿ ಪಕ್ಕಾ ಸಸ್ಯಾಹಾರ ಬಹಳ ಅಪರೂಪ. ಪ್ಯಾಕ್‌ ಆದ ಜ್ಯೂಸ್‌ನಲ್ಲೂ ಇರುತ್ತದೆ ಪ್ರಾಣಿಜನ್ಯ ಪದಾರ್ಥ. ಇಷ್ಟಕ್ಕೂ ಕೋಕ್‌, ಪೆಪ್ಸಿಯಲ್ಲಿ ಮಾಂಸಾಹಾರ ಇಲ್ಲ ಎಂದು ಹೇಳುವ ಕಾರಟ್‌ ಎಲ್ಲಾದರೂ ಇದ್ದಾರಾ? ಇಗೊಳ್ಳಿ ಚಾಲೆಂಜ್‌!


ಶ್ರೀಮತಿ ವೇದಾ ಕ್ಯಾರಟ್‌ ಅವರಿಗೆ

ಸಲಾಂ, ನಮಸ್ತೆ
ನಾನೊಬ್ಬ ಪರಮ ಸಸ್ಯಾಹಾರಿ. ನನ್ನ ದುಃಖಕ್ಕೆ ಪಾರವೇ ಇಲ್ಲ. ಕಳೆದವಾರ ಶ್ರೀಮತಿ ಬೃಂದಾ ಕಾರಟ್‌ ಅವರು ಸ್ವಾಮಿ ರಾಮದೇವ್‌ ಅವರ ನಾನ್‌ವೆಜ್‌ ಔಷಧಿ ಹಗರಣ ಬಯಲು ಮಾಡಿದ ಮೇಲಂತೂ ನನ್ನ ಬ್ಲಡ್‌ಪ್ರಶರ್‌ ಇನ್ನಷ್ಟು ಹೆಚ್ಚಾಗಿದೆ. ನಾನು ಸಸ್ಯಾಹಾರಿಯಾಗಿ ಘೋರ ದುರಂತವಾಯಿತು ಎಂದೆನ್ನಿಸಿದೆ. ಈ ದೇಶದ ಬಹುಜನರಂತೆ ನಾನೂ ಮಾಂಸಾಹಾರಿ ಆಗಬೇಕಿತ್ತು. ಆಗ ಆಹಾರದಲ್ಲಿ ಪ್ರಾಣಿಯಿದೆಯೋ, ಪಕ್ಷಿಯಿದೆಯೋ, ಗಿಡವಿದೆಯೋ, ಮರವಿದೆಯೋ, ತರಕಾರಿಯಿದೆಯೋ ಎಂದು ಚಿಂತಿಸುವ ಅಗತ್ಯವಿರಲಿಲ್ಲ. ರುಚಿಯಾಗಿರುಮದನ್ನೆಲ್ಲ ನಿಶ್ಚಿಂತೆಯಿಂದ ತಿಂದು ತೇಗಬಹುದಿತ್ತು!

ಈಗ ನಾನು ಪರಮ ಸಸ್ಯಾಹಾರಿ ಆಗಿರುಮದರಿಂದ ನನ್ನ ತಿನ್ನುವ ಆಯ್ಕೆಗಳೇ ಕಡಿಮೆಯಾಗಿವೆ. ಒಮ್ಮೊಮ್ಮೆಯಂತೂ, ಜಗತ್ತಿನಲ್ಲಿ ನನಗೆ ತಿನ್ನಲೇನೂ ಸಿಕ್ಕುಮದೇ ಇಲ್ಲವೇನೋ ಅನ್ನಿಸಿ ಬಿಡುತ್ತದೆ! ಏನನ್ನಾದರೂ ತಿನ್ನೋಣ ಅಂತ ಆಸೆಯಾದರೆ ಅದರಲ್ಲಿ ಮಾಂಸಾಹಾರ ಇದೆಯೇನೋ ಅನ್ನುವ ಸಂಶಯ. ಏನನ್ನಾದರೂ ತಿಂದಾದಮೇಲೆ, ಅದರಲ್ಲಿ ಏನಾದರೂ ಮಾಂಸಾಹಾರದ ಅಂಶ ಇತ್ತೇನೋ ಅನ್ನುವ ಚಿಂತೆ. ಛೆ... ಕಷ್ಟವಾಗಿಬಿಟ್ಟಿದೆ ಸಸ್ಯಾಹಾರಿಯ ಜೀವನ.

ಸ್ವಂತ ಮನೆಯ ಅನ್ನ-ಸಾಂಬಾರ್‌ ಬಿಟ್ಟರೆ ನನಗೆ ಇನ್ನಾಮದರಲ್ಲೂ ನಂಬಿಕೆಯಿಲ್ಲ. ಆದರೂ, ಊಟಕ್ಕೆ ಕುಳಿತಾಗ, ಅನ್ನದಲ್ಲಿ ಹುಳುವೇನಾದರೂ ಬಿದ್ದುಹೋಗಿದೆಯೇನೋ ಅಂತ ಅನುಮಾನ ಆಗುತ್ತದೆ. ಅನ್ನದಲ್ಲಿ ನೂರು ಕಲ್ಲು ಬಂದರೂ ಪರವಾಗಿಲ್ಲ ಶಿವನೇ... ಹುಳು ಇಲ್ಲದಿರಲಿ ಎಂದು ಪ್ರಾರ್ಥಿಸುತ್ತೇನೆ. ಅಕಸ್ಮಾತ್‌ ಅನ್ನದಲ್ಲಿ ಒಂದು ಹುಳು ಅಥವಾ ಇರುವೆ ಕಾಣಿಸಿದರಂತೂ ಮುಗಿದೇ ಹೋಯಿತು. ಊಟಮಾಡಿದ್ದೂ ವಾಪಸ್‌ ಬಂದುಬಿಡುತ್ತದೆ... ಏನು ಮಾಡಲಿ?ಸೊಪುý್ಪ, ತರಕಾರಿಯಲ್ಲೂ ಹುಳು ಹುಡುಕಿ ಹುಡುಕಿ ಸಾಕಾಗಿ ಹೋಗಿದೆ. ಬೀನ್ಸ್‌, ಬದನೆಕಾಯಿ, ಕೋಸುಗಡ್ಡೆ, ಕ್ಯಾಲಿಫ್ಲಾವರ್‌ನಲ್ಲಿ ಹುಳುಗಳು ಇರುಮದು ಹೆಚ್ಚು ಅಂತ ಯಾರೋ ಹೇಳಿದ ಮೇಲಂತೂ ಅಮಗಳ ಸಹವಾಸವನ್ನೇ ಬಿಟ್ಟುಬಿಟ್ಟಿದ್ದೇನೆ.

ಹಾಲು ಮೊಸರನ್ನು ಕೂಡ ನಾನು ಮುಟ್ಟುವ ಹಾಗಿಲ್ಲವಲ್ಲ. ಏಕೆಂದರೆ ಹಾಲು, ಮೊಸರು, ಮಜ್ಜಿಗೆ ಎಲ್ಲಾ ಮಾಂಸಾಹಾರ! ಹಾಗಂತ ನನಗೆ ಗೊತ್ತಿರಲಿಲ್ಲ. ಬಹಳ ವರ್ಷಗಳ ಕಾಲ ನಾನು ಅವನ್ನೆಲ್ಲ ಸಸ್ಯಾಹಾರ ಅಂತಲೇ ಪಟ್ಟಾಗಿ ಸವಿಯುತ್ತಿದ್ದೆ. ಆದರೆ, ಒಂದು ದಿನ ನನ್ನ ಸ್ನೇಹಿತನೊಬ್ಬನ ಪ್ರಶ್ನೆಯಿಂದ ನನಗೆ ಜ್ಞಾನೋದಯವಾಯಿತು. ಆಕಳು, ಎಮ್ಮೆಯ ಹೊಟ್ಟೆಯೊಳಗಿಂದ ಉತ್ಪತ್ತಿಯಾಗುವ ಹಾಲು ಪ್ರಾಣಿಜನ್ಯವಾಗುತ್ತದೆಯೇ ಹೊರತೂ ಅದು ಸಸ್ಯಜನ್ಯವಾಗಲಾರದು. ಅಂದರೆ, ಹಾಲು ಕೂಡ ಸಸ್ಯಾಹಾರವಲ್ಲ. ಪ್ರಾಣಿಯ ಹೊಟ್ಟೆಯೊಳಗೆ ಮಾಂಸದ ನಡುವೆ ಉತ್ಪತ್ತಿಯಾಗುವ ಹಾಲು ಮಾಂಸಾಹಾರವೇ ಅಂತ ನನಗೆ ಇಷ್ಟು ವರ್ಷ ಯಾಕೆ ಹೊಳೆಯಲಿಲ್ಲವೋ ಅಂತ ನನಗೆ ಬಹಳ ಪಾಪಪ್ರಜ್ಞೆ ಉಂಟಾಯಿತು. ಹಾಲು ಮಾಂಸಹಾರ ಅಂದರೆ ಮಜ್ಜಿಗೆ, ಮೊಸರು, ತುಪ್ಪ, ಬೆಣ್ಣೆ, ಗಿಣ್ಣು ಎಲ್ಲಾ ಹೇಗೆ ಸಸ್ಯಾಹಾರವಾದೀತು? ಹಾಗಾಗಿ... ಅಮಗಳ ಸೇವನೆಯನ್ನೆಲ್ಲ ನಾನು ಬಿಟ್ಟು ಬಿಡಬೇಕಾಯಿತು. ಅಷ್ಟು ವರ್ಷ ಸೇವಿಸಿದ ಪಾಪಪ್ರಜ್ಞೆಯಿಂದ ಹೊರಬರಲು ನನಗೆ ಹಲವಾರು ತಿಂಗಳುಗಳೇ ಬೇಕಾಯಿತು.
ನನಗೆ ಈಗ ಸಕ್ಕರೆ ಅಂದರೂ ಅಸಹ್ಯ. ಬಹಳ ವರ್ಷಗಳ ಕಾಲ ನಾನು ಕಬ್ಬಿನ ರಸದಿಂದ ತಯಾರಾಗುವ ಸಕ್ಕರೆಯನ್ನು ಸಸ್ಯಾಹಾರ ಅಂತಲೇ ಅಂದುಕೊಂಡಿದ್ದೆ. ಆದರೆ, ಸಕ್ಕರೆ ತಯಾರಾಗುವ ವಿಧಾನ ಕೇಳಿದ ನಂತರ ನನ್ನ ನಂಬಿಕೆಯೆಲ್ಲಾ ಸಿಡಿದು ಪುಡಿಪುಡಿಯಾಯಿತು. ಸಕ್ಕರೆ ಮೊದಲು ತಯಾರಾದಾಗ ಕಪುý್ಪ ಬಣ್ಣದಲ್ಲಿರುತ್ತದೆ. ಅದಕ್ಕೆ ಬ್ಲೀಚಿಂಗ್‌ ಮಾಡಲೋಸ್ಕರ ನಾಯಿ ಅಥವಾ ಪ್ರಾಣಿಯ ಮೂಳೆಗಳ ಇದ್ದಲನ್ನು ಬಳಸುತ್ತಾರಂತೆ. ಅದು ತಿಳಿದಾಗಿನಂದ ಇಲ್ಲಿಯ ವರೆಗೂ ನನಗೆ ಬೆಲ್ಲವೇ ಗತಿ. ಚಹಕ್ಕೂ ನಾನು ಬೆಲ್ಲ ಹಾಕಿ ಕುಡಿಯುವ ಪರಿಸ್ಥಿತಿ ಇತ್ತು.

ಎಷ್ಟೋ ಸಾರಿ ಹೊಟೆಲ್‌ಗೆ ಹೋಗಬೇಕೂಂತ ಆಸೆಯಾಗುತ್ತದೆ. ಆದರೆ, ಏನುಮಾಡುಮದು? ನಾನಲ್ಲಿಗೆ ಹೋಗುವಂತಿಲ್ಲ. ಬಹಳ ಹೊಟೆಲ್‌ಗಳಲ್ಲಿ ಪದಾರ್ಥಕ್ಕೆ ರುಚಿ ಬರಲೀ ಅಂತ ಮೀನಿನ ಪೌಡರ್‌ ಬಳಸುತ್ತಾರಂತೆ. ರೋಟಿ, ಕೇಕು, ಬ್ರೆಡ್ಡು, ಬಿಸ್ಕಿಟ್ಟು ಮಿದುವಾಗಲಿ ಅಂತ ತತ್ತಿಯನ್ನು ಹಾಕುತ್ತಾರಂತೆ. ವೆಜ್‌ ಸಲಾಡ್‌ನಲ್ಲಿ ಅಣಬೆ ಸೇರಿಸುತ್ತಾರಂತೆ ಅನ್ನುವ ವಿಷಯಗಳು ಗೊತ್ತಾದ ನಂತರವೂ ನಾನು ಹೇಗೆ ಹೊಟೆಲ್‌ ಪದಾರ್ಥ ತಿನ್ನಲಿ?

ಆವೊತ್ತೊಂದು ದಿನ, ಇಷ್ಟವಾಯಿತು ಅಂತ ರಸಗುಲ್ಲ ತಿನ್ನುತ್ತಿದ್ದೆ. ಇದು ಹಾಲಿನಿಂದ ಮಾಡುವ ಬೆಂಗಾಲಿ ಸ್ವೀಟು ಮಾರಾಯ... ಅಂತ ಮಿತ್ರ ಹೇಳಿದ್ದೇ ಹೇಳಿದ್ದು... ಬೆಂಗಾಲಿ ಸ್ವೀಟು ತಿನ್ನುಮದನ್ನು ನಿಲ್ಲಿಸಿಬಿಡಬೇಕಾಯಿತು. ಅಷ್ಟೇ ಅಲ್ಲ, ಸಕ್ಕರೆಯಂಥ ಮಾಂಸಾಹಾರವನ್ನು ಬಳಸುವ ಯಾಮದೇ ಸ್ವೀಟೂ ಮಾಂಸಾಹಾರವೇ ತಾನೆ?

ಐಸ್‌ಕ್ರೀಮಿನ ಕಥೆ ಇನ್ನೂ ಭಯಾನಕ. ಹೊಟೆಲ್‌, ಬೇಕರಿಯ ತಿನಿಸುಗಳಲ್ಲಿ ಜಿಲೆಟಿನ್‌ ಅನ್ನೋ ಪದಾರ್ಥವನ್ನು ವ್ಯಾಪಕವಾಗಿ ಬಳಸುತ್ತಾರಂತೆ. ಇದನ್ನು ಹಂದಿಯ ಅಸ್ತಿಮಜ್ಜೆಯಿಂದ ತಯಾರಿಸುತ್ತಾರಂತೆ. ಇದನ್ನು ಐಸ್‌ಕ್ರೀಮ್‌ಗೂ ಹಾಕುತ್ತಾರಂತೆ. ಹಾಗಾಗಿ ಐಸ್‌ಕ್ರೀಮು, ಜೆಲ್ಲಿ... ಎಲ್ಲಾ ನೋಡಿದರೆ ಮಾಂಸದ ಮುದ್ದೆಯನ್ನು ನೋಡಿದಂತೇ ಭಾಸವಾಗಿ ವಾಕರಿಕೆ ಬರುತ್ತದೆ.
ಕೋಕಿನಿಯಲ್‌ ಎಂದರೆ ಬಹುತೇಕ ಜನರಿಗೆ ಗೊತ್ತಿಲ್ಲ. ಆದರೆ, ನಾವೆಲ್ಲ ಒಂದಲ್ಲ ಒಂದು ರೀತಿಯಿಂದ ತಿಂದು ಬಿಟ್ಟಿದ್ದೇವೆ. ಇದು ಆಹಾರಕ್ಕೆ ಕೆಂಪು ಬಣ್ಣ ನೀಡುವ ಪದಾರ್ಥ. ಇದನ್ನು ಕೀಟವೊಂದನ್ನು ಹುಡಿಮಾಡಿ ತಯಾರಿಸಿರುತ್ತಾರೆ.

ಈ ನಡುವೆ ನನಗೆ ಡಯಾಬಿಟಿಸ್‌ ಆರಂಭವಾಗಿದ್ದು ಒಳ್ಳೆಯದಾಯಿತು ಅಂದುಕೊಂಡೆ. ಯಾಕೆಂದರೆ, ಈ ಕಾರಣಕ್ಕಾದರೂ ನಾನು ಈ ಸ್ವೀಟುಗಳೆಂಬೋ ಮಾಂಸಾಹಾರದಿಂದ ಕಡ್ಡಾಯವಾಗಿ ದೂರವಿರಬಹುದಲ್ಲ! ಆದರೆ, ವಿಧಿ ಅಲ್ಲೂ ನನಗೆ ಕೈಕೊಡಬೇಕೆ? ಮಧುಮೇಹ ನಿಯಂತ್ರಣಕ್ಕೆ ಬಳಸುವ ಇನ್‌ಸುಲಿನ್‌ ಔಷಧವನ್ನು ಪ್ರಾಣಿಗಳಿಂದಲೇ ಸಂಸ್ಕರಿಸುತ್ತಾರಂತೆ. ಹಾಗಾಗಿ ಇನ್‌ಸುಲಿನ್‌ ಮಾಂಸಾಹಾರ ಅಂತ ಗೊತ್ತಾಗಿ ಗೋಳೋ ಅಂತ ಅತ್ತುಬಿಟ್ಟೆ. ಸದ್ಯ... ವಿಜ್ಞಾನಿಗಳು ದೇವರಂತೆ ಬಂದು ನನ್ನನ್ನು ಕಾಪಾಡಿದರು. ಸಸ್ಯಾಹಾರಿ ಇನ್‌ಸುಲಿನ್‌ ಕಂಡುಹಿಡಿದಿದ್ದಾರೆ. ಇದು ಬಹಳ ದುಬಾರಿಯಾದರೂ ನನಗೆ ಬೇರೆ ಗತಿ ಇಲ್ಲ.

ಈ ನಡುವೆ, ನನಗೆ ಬಹಳ ಕೆಮ್ಮು. ಅದಕ್ಕಾಗಿ ಬೆನೆಡ್ರಿಲ್‌ ಎಂಬ ಔಷಧಿ ಕುಡಿಯುತ್ತಿದ್ದೆ. ಯಾರೋ ಹೇಳಿದರು... ಅದು ಕೋಣದ ರಕ್ತದಿಂದ ತಯಾರಾಗುತ್ತದೆ ಅಂತ. ಅದು ಹಾಗಿರಲಿಕ್ಕಿಲ್ಲ ಅಂತ ನನಗೆ ಗೊತ್ತಿದ್ದರೂ... ಆ ಔಷಧಿಯ ರೂಪ, ರುಚಿ ಎಲ್ಲ ಕೋಣದ ರಕ್ತದಂತೆ ಕಂಡು ಅದನ್ನೂ ಕುಡಿಯುಮದು ನಿಲ್ಲಿಸಿದ್ದೇನೆ.

ಅಷ್ಟೇ ಏನು... ಬಹುತೇಕ ಇಂಗ್ಲಿಷ್‌ ಔಷಧಿಗಳಲ್ಲಿ ಪ್ರಾಣಿಜನ್ಯ ಪದಾರ್ಥಗಳನ್ನೇ ಬಳಸುತ್ತಾರಂತೆ. ಮೀನೆಣ್ಣೆಯ ಟಾನಿಕ್‌ನಿಂದ ಹಿಡಿದು ಹಾವಿನ ವಿಷದ ವರೆಗೆ ಅನೇಕ ಪ್ರಾಣಿಜನ್ಯ ವಸ್ತುಗಳು ಇರುತ್ತವೆ. ಹಾಗಾಗಿ... ಬಹುತೇಕ ಇಂಗ್ಲಿಷ್‌ ಔಷಧಗಳು ಮಾಂಸಾಹಾರ ಎಂದು ತೀರ್ಮಾನಿಸಿ ನಾನು ಆಯುರ್ವೇದ ಔಷಧಿಗೆ ಒಗ್ಗಿಕೊಂಡೆ.

ಆದರೆ, ಆಯುರ್ವೇದವೂ ಸಂಪೂರ್ಣ ಸಸ್ಯಾಹಾರಿ ಎಂದು ಎಲ್ಲೂ ಹೇಳಿಕೊಂಡಿಲ್ಲ. ಗಿಡಮೂಲಿಕೆಗಳು ಹಾಗೂ ಅನೇಕ ಪ್ರಾಣಿ ಜನ್ಯ ವಸ್ತುಗಳನ್ನು ಆಯುರ್ವೇದ ಬಳಸಿಕೊಳ್ಳುತ್ತದೆ ಎಂದು ಎಲ್ಲೋ ಓದಿದ ಮೇಲೆ ನನ್ನನ್ನು ಕಾಪಾಡುವ ಸಸ್ಯಾಹಾರಿ ಔಷಧವೇ ಇಲ್ಲವೇನೋ ಅನ್ನಿಸಲು ಪ್ರಾರಂಭವಾಗಿದೆ. ಅದರಲ್ಲೂ ಸ್ವಾಮಿ ರಾಮ್‌ದೇವ್‌ ಅವರಂಥ ಮಹಾ ಸಾತ್ವಿಕ ಯೋಗಿಯೂ ತಮ್ಮ ಔಷಧದಲ್ಲಿ ಪ್ರಾಣಿಗಳು ಹಾಗೂ ಮನುಷ್ಯನ ಮೂಳೆಯನ್ನು ಬಳಸುತ್ತಾರೆ ಎಂಬ ವಿಷಯ ತಿಳಿದು ತೀರಾ ಕಂಗಾಲಾಗಿದ್ದೇನೆ.
ಇಡೀ ಜಗತ್ತೇ ಒಂದಲ್ಲಾ ಒಂದು ರೀತಿಯಲ್ಲಿ ಮಾಂಸಾಹಾರಿ ಎನ್ನಿಸಲು ಶುರುವಾಗಿದೆ. ಪಕ್ಕಾ ಸಸ್ಯಾಹಾರಿಗಳಿಗೆ ಜಗತ್ತಿನಲ್ಲಿ ತಿನ್ನಲು ಬಹಳ ಕಡಿಮೆ ಆಯ್ಕೆಗಳಿವೆ ಎಂಬುದು ಖಚಿತವಾಗಿದೆ. ಹಾಗಾಗಿ ಮುಂದಿನ ಜನ್ಮದಲ್ಲಾದರೂ ನಾನು ಮಾಂಸಾಹಾರಿಯಾಗಿ ಹುಟ್ಟುವ ಆಸೆಯಾಗಿದೆ.

ಇಷ್ಟೆಲ್ಲಾ ಹೇಳಿ ನಾನು ನಿಮ್ಮ ತಲೆ ತಿಂದೆನೇನೋ? ನನ್ನ ಈ ಅನುಮಾನಕ್ಕೆ ನೀವೇನಾದರೂ ಹೂಂ ಅಂದರೆ... ನಾನು ನಿಮ್ಮ ತಲೆತಿಂದ ಮಾಂಸಾಹಾರಿಯಾದೆನಲ್ಲಾ ಎಂಬ ಪಾಪಪ್ರಜ್ಞೆ ನನ್ನನ್ನು ಕಾಡುತ್ತದೆ! ದಯವಿಟ್ಟು ಕಾಪಾಡಿ.
ಇಂತಿ ಸಸ್ಯಾಹಾರಿ ಸತ್ಯಣ್ಣ



Kannada Prabha issue dated January 9, 2006

Are you a Pure Vegetarian?.. Life is Difficult for you!

Horrible Life Story of a Vegan

--

Tuesday, January 03, 2006

ಕರ್ನಾಟಕ ಸರ್ಕಾರ ಶೀಘ್ರ ಸ್ಫೋಟ: ‘ಉಗ್ರಕಾರಣಿಗಳ’ ಎಚ್ಚರಿಕೆ!

ಕರ್ನಾಟಕದ ಜನತೆಗೆ ರಾಜಕೀಯ ಭಯೋತ್ಪಾದಕರ ಹೊಸವರ್ಷದ ಬೆದರಿಕೆಗಳು!


ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನುಸ್ಫೋಟಗೊಳಿಸುವ ಬಾಂಬಿನ ರಿಮೋಟ್‌ ಕಂಟ್ರೋಲ್‌ ಇರುಮದು ಸೋನಿಯಾಜಿ ಬಳಿಯೇ ಹೊರತು ಎಸ್‌.ಎಂ.ಕೃಷ್ಣ ಅವರ ಬಳಿ ಅಲ್ಲ. ಆದ್ದರಿಂದ ಕೃಷ್ಣ ಅವರ ಭಯೋತ್ಪಾದನೆಗೆ ಯಾರೂ ಹೆದರಬೇಕಿಲ್ಲ ಎಂದು ಮುಖ್ಯಮಂತ್ರಿಯವರು, ರಾಜ್ಯದ ಜನತೆಗೆ ಪದೇ ಪದೇ ಅಭಯ ನೀಡುತ್ತಿದ್ದಾರೆ.

ರಾಜ್ಯದ ಮಹಾಜನತೆಗೆ ಹೊಸವರ್ಷದ ಬೆದರಿಕೆಗಳು!

ನಾಮ ಉಗ್ರರು ಸಾರ್‌ ಉಗ್ರರು. ಅಸಲಿ ಉಗ್ರರು. ಕಳೆದ ಒಂದು ವರ್ಷದಿಂದ ಕರ್ನಾಟಕದ ಕೆಲಮ ಮಹತ್ವದ ಕಟ್ಟಡಗಳು, ದೇವಾಲಯಗಳು ಹಾಗೂ ಸಂಸ್ಥೆಗಳನ್ನು ಸ್ಫೋಟಿಸುತ್ತೇವೆ ಎಂದು ಎಚ್ಚರಿಸುತ್ತಲೇ ಬಂದಿದ್ದೇವೆ. ಆದರೆ, ನೀಮ ನಮ್ಮ ಎಚ್ಚರಿಕೆಯನ್ನು ಹುಸಿಬಾಂಬ್‌ ಬೆದರಿಕೆ ಎಂದು ಅಲಕ್ಷ್ಯ ಮಾಡಿದ್ದೀರಿ.

ಹೀಗೆ ಅಲಕ್ಷ್ಯ ಮಾಡಿದ್ದು ನಿಮ್ಮ ತಪ್ಪಲ್ಲ ಎಂದು ನಮಗೆ ಗೊತ್ತು. ಇದಕ್ಕೆಲ್ಲ ಕರ್ನಾಟಕದ ರಾಜಕೀಯ ಭಯೋತ್ಪಾದಕರೇ ಕಾರಣ! ಸರ್ಕಾರವನ್ನು ಇವತ್ತು ಸ್ಫೋಟಿಸುತ್ತೇವೆ. ನಾಳೆ ಕೆಡವಿಹಾಕುತ್ತೇವೆ ಎಂದು ಒಂದು ವರ್ಷದಿಂದ ಜೆಡಿಎಸ್‌ ಭಯೋತ್ಪಾದಕರು ಹಾಗೂ ಕಾಂಗ್ರೆಸ್ಸಿನ ಉಗ್ರಗಾಮಿಗಳು ಪ್ರತಿದಿನವೂ ಬೆದರಿಸುತ್ತಿದ್ದಾರೆ. ಆದರೆ, ಸರ್ಕಾರವನ್ನು ಮಾತ್ರ ಸ್ಫೋಟಿಸುತ್ತಿಲ್ಲ! ಅವರ ಇಂತಹ ಹುಸಿ ಬೆದರಿಕೆಗಳನ್ನು ಪ್ರತಿ ದಿನ ಕೇಳಿ ಕೇಳಿ ನೀಮ ಬೆದರಿಕೆಗಳಿಗೆ ಒಗ್ಗಿ ಹೋಗಿದ್ದೀರಿ. ಹಾಗಾಗಿ, ಅಸಲಿ ಉಗ್ರಗಾಮಿಗಳಾದ ನಾಮ ಒಡ್ಡುವ ಅಸಲಿ ಬೆದರಿಕೆಗಳಿಗೂ ನೀಮ ಜಗ್ಗುತ್ತಿಲ್ಲ. ನಮ್ಮ ಬೆದರಿಕೆಯನ್ನೂ ನೀಮ ರಾಜಕೀಯ ಭಯೋತ್ಪಾದಕರ ಮಾಮೂಲಿ ಭಾಷಣಾವೇಶ ಎಂದು ಅಂದುಕೊಂಡಿರುಮದು ನಿಜಕ್ಕೂ ಖೇದದ ಸಂಗತಿ.

ರಾಜಕಾರಣಿಗಳ ಭರವಸೆಗಳಂತೆ ಬೆದರಿಕೆಗಳಿಗೂ ವಿಶ್ವಾಸಾರ್ಹತೆ ಇಲ್ಲ ಎಂದು ಜನ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಬೋಗಸ್‌ ಬೆದರಿಕೆಗಳಿಂದಾಗಿ ನಮ್ಮ ಅಸಲಿ ‘ಭಯೋತ್ಪಾದನೆ’ಯ ಮೌಲ್ಯವೇ ಕಡಿಮೆಯಾಗಿದೆ. ಸರ್ಕಾರ ಎಂದು ಸ್ಫೋಟಗೊಳ್ಳುಮದೋ ಎಂಬ ಭಯದ ನಡುವೆಯೇ ಜನರು ಆರಾಮವಾಗಿ ಬದುಕಲು ಕಲಿತಿದ್ದಾರೆ! ಇದು ಭಯೋತ್ಪಾದನೆ ಎಂಬ ಶಬ್ದಕ್ಕೇ ಆದ ಅವಮಾನ ಎಂದು ನಾಮ ಪರಿಗಣಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆ ಎಂಬ ಶಬ್ದಕ್ಕೆ ಮರುಮೌಲ್ಯ ತಂದು ಕೊಡಲು ನಾಮ ಅನಿವಾರ್ಯವಾಗಿ ಮುಂದಾಗಬೇಕಾಯಿತು. ಅದಕ್ಕಾಗಿ ಕಳೆದವಾರ ಬೆಂಗಳೂರಿನ ಐಐಎಸ್‌ಸಿ ಸಭಾಂಗಣದ ಮೇಲೆ ದಾಳಿ ನಡೆಸಿ ಭಯೋತ್ಪಾದನೆಗೆ ಒಂದು ಮರ್ಯಾದಿ ತಂದುಕೊಡಬೇಕಾಯಿತು. ಇಲ್ಲವಾದರೆ, ರಾಜಕಾರಣಿಗಳ ಬೆದರಿಕೆಗೂ ನಮ್ಮ ಬೆದರಿಕೆಗೂ ಯಾಮದೇ ವ್ಯತ್ಯಾಸ ಇರುತ್ತಿರಲಿಲ್ಲ.

ಇತ್ತೀಚೆಗೆ ಹುಸಿಬಾಂಬ್‌ ಬೆದರಿಕೆಗಳು ಹೆಚ್ಚುತ್ತಿರುವ ಬಗ್ಗೆ ನಮಗೆ ನಿಜಕ್ಕೂ ಕಳವಳವಾಗಿದೆ. ಸಂಸತ್ತಿನಿಂದ ಹಿಡಿದು ಅಶೋಕಾ ಹೋಟೆಲ್‌ ತನಕ, ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಿಂದ ಹಿಡಿದು ಐಬಿಎಂ ಸಾಫ್ಟ್‌ವೇರ್‌ ಕಂಪನಿಯ ತನಕ, ಮುಖ್ಯಮಂತ್ರಿ ಮನೆಯಿಂದ ಹಿಡಿದು, ಎಂ ಜಿ ರಸ್ತೆಯ ಅಂಗಡಿಯ ತನಕ ಎಲ್ಲವನ್ನೂ ಸ್ಫೋಟಿಸುವ ಬಾಂಬ್‌ ಬೆದರಿಕೆಗಳು ದಿನ ಬೆಳಗಾದರೆ, ಈ ಮೇಲ್‌ನಲ್ಲಿ, ಫೋನ್‌ನಲ್ಲಿ, ಫ್ಯಾಕ್ಸ್‌ನಲ್ಲಿ ಬರುತ್ತಿವೆ. ಆದರೆ, ಅವೆಲ್ಲ ಕೊನೆಗೆ ಠುಸ್‌ ಎನ್ನುವ ಹುಸಿ ಬಾಂಬ್‌ ಎಚ್ಚರಿಕೆಗಳಾಗುತ್ತಿವೆ. ಹಾಗಾಗಿ, ‘ಇದೇನು ಮಾಮೂಲಿ ಹುಸಿಬಾಂಬ್‌ ಬಿಡು’ ಎನ್ನುವಷ್ಟರ ಮಟ್ಟಿಗೆ ನೀಮ ನಿರಾತಂಕರಾಗಿದ್ದೀರಿ. ನಮ್ಮ ಭಯೋತ್ಪಾದನೆಯಿಂದ ನಿಮಗೆ ಭಯವಾಗುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾಮ ಭಯೋತ್ಪಾದನೆಗೆ ಇನ್ಯಾವ ಮಾರ್ಗ ಹಿಡಿಯುಮದೋ ನಮಗೆ ಅರ್ಥವಾಗುತ್ತಿಲ್ಲ.

ಹಾಗಾಗಿ, ನಾಮ ಉಗ್ರಗಾಮಿಗಳಾದರೂ, ಹುಸಿ ಬಾಂಬ್‌ ಬೆದರಿಕೆ ಒಡ್ಡುವವರ ಬಳಿ ಬೇಷರತ್‌ ಮನವಿ ಮಾಡಿಕೊಳ್ಳುತ್ತೇವೆ... ‘ದಯವಿಟ್ಟು ಹುಸಿ ಬೆದರಿಕೆ ಒಡ್ಡುಮದನ್ನು ಬಿಡಿ. ಇದರಿಂದ ‘ಭಯೋತ್ಪಾದನೆ’ಯ ಗೌರವವೇ ಕುಂದುತ್ತಿದೆ.’

ರಾಜಕಾರಣಿಗಳು ಬೆದರಿಕೆ ಒಡ್ಡುವಾಗ ಸ್ವಲ್ಪ ಕೇರ್‌ಫುಲ್‌ ಆಗಬೇಕು ಎಂಬುದು ನಮ್ಮ ಸಲಹೆ. ಇಲ್ಲವಾದರೆ ಯಡಿಯೂರಪ್ಪನವರ ಕಥೆಯಾಗುತ್ತದೆ. ಅವರ ಎಲ್ಲ ಬೆದರಿಕೆಗಳೂ ಹುಸಿಬಾಂಬ್‌ ಎಂದು ಬಹುತೇಕ ಜನತೆ ತೀರ್ಮಾನ ಮಾಡಿರುಮದರಿಂದ ಯಡಿಯೂರಪ್ಪನವರ ಬೆದರಿಕೆಗೆ ಯಾರೂ ಮಣಿಯುತ್ತಿಲ್ಲ. ಅತ್ತ ಪೂಜಾರಿಯವರ ಬಾಂಬುಗಳೂ ಅಷ್ಟೇ... ಠುಸ್‌ ಅನ್ನುತ್ತಿವೆ. ಸಿ. ಎಂ. ಇಬ್ರಾಹಿಂ, ಎ.ಕೆ.ಸುಬ್ಬಯ್ಯನವರ ಬಾಂಬುಗಳು ನಗೆಬಾಂಬುಗಳೆಂದು ಜನ ಎಂಜಾಯ್‌ ಮಾಡುತ್ತಿದ್ದಾರೆ.

ಸದ್ಯ ಇದ್ದುದರಲ್ಲಿ ದೇವೇಗೌಡರ ಲೆಟರ್‌ ಬಾಂಬ್‌ಗಳಿಗೆ ಮಾತ್ರ ತುಸು ಭಯೋತ್ಪಾದನೆಯ ಮೌಲ್ಯವಿದೆ. ಆದರೆ, ಅವರ ಪತ್ರಬಾಂಬುಗಳನ್ನೆಲ್ಲ ಇತ್ತೀಚೆಗೆ ಕೋರ್ಟುಗಳಲ್ಲಿ ನ್ಯಾಯಾಧೀಶರು ನಿಷ್ಕ್ರಿಯಗೊಳಿಸುತ್ತಿರುಮದು ಶೋಚನೀಯ. ಹಾಗಾಗಿ, ಗೌಡರ ಲೆಟರ್‌ಬಾಂಬ್‌ಗಳ ಕುರಿತೂ ಜನರಿಗೆ ಹೆದರಿಕೆ ಕಡಿಮೆಯಾಗುತ್ತಿದೆ. ಅದರಲ್ಲೂ ಇತ್ತೀಚಿನ ಜಿ.ಪಂ., ತಾ.ಪಂ ಚುನಾವಣೆಯಾದ ಮೇಲೆ ಗೌಡರ ಬಾಂಬುಗಳ ಶಕ್ತಿಯೇ ಕಡಿಮೆಯಾಗಿದೆ ಎಂದು ಗುಪ್ತದಳ ವರದಿ ಮಾಡಿದ್ದು ನಮಗೂ ತಿಳಿದುಬಂದಿದೆ.

ಈ ನಡುವೆ, ಸರ್ಕಾರ ಸ್ಫೋಟಿಸುವ ನಿಜವಾದ ಬಾಂಬ್‌ ಇರುಮದು ಡಿ.ಕೆ.ಶಿವಕುಮಾರ್‌ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಕೈಲಿ ಹಾಗೂ ಆ ಬಾಂಬುಗಳ ರಿಮೋಟ್‌ ಕಂಟ್ರೋಲ್‌ ಇರುಮದು ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ಅವರ ಕೈಲಿ ಎಂದು ಸರ್ಕಾರದ ಅತ್ಯುನ್ನತ ಮೂಲಗಳು ನಂಬಿವೆ. ಆದ್ದರಿಂದ ಎಸ್‌.ಎಂ.ಕೃಷ್ಣ ಅವರು ಬೆಂಗಳೂರಿಗೆ ಬಂದಾಗಲೆಲ್ಲ ರಾಜಧಾನಿಯಲ್ಲಿ ಭದ್ರತಾ ವ್ಯವಸ್ಥೆ ಬಲಗೊಳ್ಳುತ್ತದೆ. ಕೃಷ್ಣ ಅವರ ಚಲನವಲನದ ಮೇಲೆ ಗುಪ್ತಚರ ದಳ ವಿಶೇಷ ಕಣ್ಣಿಟ್ಟಿರುತ್ತದೆ. ಅದರಲ್ಲೂ ಖರ್ಗೆ ಮತ್ತು ಕೃಷ್ಣ ಗುಪ್ತ ಸಮಾಲೋಜನೆ ನಡೆಸಿದರಂತೂ ಸರ್ಕಾರ ಸ್ಫೋಟವಾಗಲು ಕ್ಷಣಗಣನೆ ಆರಂಭವಾಯಿತು ಎಂಬಂತೆ ಭಯೋತ್ಪಾದನೆಯಾಗುತ್ತದೆ.

ಆದರೆ, ಇದು ಕೂಡ ಹುಸಿಬಾಂಬು ಬೆದರಿಕೆ ಎಂದು ಮುಖ್ಯಮಂತ್ರಿಗಳು ರಾಜ್ಯದ ಪ್ರಜೆಗಳಿಗೆ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯವರ ಪ್ರಕಾರ, ರಿಮೋಟ್‌ ಕಂಟ್ರೋಲ್‌ ಕೃಷ್ಣ ಅವರ ಕೈಲಿಲ್ಲ. ಸೋನಿಯಾಜಿ ಅವರ ಕೈಲಿದೆ. ಆದ್ದರಿಂದ, ಈ ಸರ್ಕಾರ ಸ್ಫೋಟಗೊಳಿಸುವ ನಿಜವಾದ ಭಯೋತ್ಪಾದಕಿ ಸೋನಿಯಾಜಿಯೇ ಹೊರತು ಕೃಷ್ಣ ಅಲ್ಲ. ಎಸ್‌.ಎಂ. ಕೃಷ್ಣ ಅವರ ಭಯೋತ್ಪಾದನೆಗೆ ಯಾರೂ ಹೆದರಬೇಕಿಲ್ಲ ಎಂದು ಮುಖ್ಯಮಂತ್ರಿ ಧರಂಸಿಂಗ್‌ ರಾಜ್ಯದ ಜನತೆಗೆ ಪದೇ ಪದೇ ಅಭಯ ನೀಡಿದ್ದಾರೆ.

ಈ ನಡುವೆ, ಕುಮಾರ ಸ್ವಾಮಿಯವರು ಸ್ವಲ್ಪ ಉಗ್ರಗಾಮಿಯಂತೆ ಮಾತನಾಡಿದರೂ ಈ ಸರ್ಕಾರ ಸ್ಫೋಟಿಸುವ ಸಂಚು ನಮ್ಮದಲ್ಲ ಎಂದು ಜನತೆಗೆ ಸಾರಿ ಹೇಳಿದ್ದಾರೆ. ‘ಈ ಸರ್ಕಾರಕ್ಕೆ ನಾನು ಭಯೋತ್ಪಾದಕ ಅಲ್ಲ. ಒಂದು ವೇಳೆ ಸರ್ಕಾರ ಸ್ಫೋಟಗೊಂಡರೆ ನಾನು ಹೊಣೆ ಹೊರುಮದಿಲ್ಲ’ ಎಂದು ಗೌಡರೂ ವಿಷದಪಡಿಸಿದ್ದಾರೆ. ಇವರೆಲ್ಲರ ಬಳಿ ಇರುವ ಮಾಹಿತಿಯೂ ಒಂದೇ... ಈ ಸರ್ಕಾರ ಸ್ಫೋಟಿಸುವ ರಿಮೋಟ್‌ ಕಂಟ್ರೋಲ್‌ ಸೋನಿಯಾ ಅವರ ಬಳಿಯೇ ಇದೆ! ಈ ಲಾಜಿಕ್ಕನ್ನೆಲ್ಲ ನೋಡಿದರೆ, ಕರ್ನಾಟಕ ಸರ್ಕಾರಕ್ಕೆ ನಿಜವಾದ ಭಯೋತ್ಪಾದಕಿ ಸೋನಿಯಾಜಿ ಎಂದು ತೀರ್ಮಾನಕ್ಕೆ ಬರಲಡ್ಡಿಯಿಲ್ಲ.

ಈ ಎಲ್ಲ ಹುಸಿ ಬೆದರಿಕೆಗಳ ನಡುವೆಯೂ ಸಿದ್ದರಾಮಯ್ಯನವರಂಥ ನಿಜವಾದ ಭಯೋತ್ಪಾದಕರೂ ಇದ್ದಾರೆ ಎಂಬುದಷ್ಟೇ ನಮಗೆ ಹೆಮ್ಮೆಯ ವಿಷಯ. ಸಿದ್ದರಾಮಯ್ಯನವರನ್ನು ಮಾನವಬಾಂಬ್‌ ಅಂತಾದರೂ ಕರೆಯಿರಿ ಅಥವಾ ಆತ್ಮಹತ್ಯಾ ದಳದ ನೇತಾರ ಎಂದಾದರೂ ತಿಳಿಯಿರಿ... ಅವರು ಬೆದರಿಕೆ ಒಡ್ಡಿದ್ದಷ್ಟೇ ಅಲ್ಲ, ಮೊನ್ನೆ ಚುನಾವಣೆಯಲ್ಲಿ ಜೆಡಿಎಸ್ಸಿನ ಬಹುಭಾಗವನ್ನು ಸ್ಫೋಟಿಸಿ ಚಿಂದಿಮಾಡಿದರು ಎಂಬುದು ಗಮನಾರ್ಹ ವಿಷಯ. ಆದ್ದರಿಂದ, ಸಿದ್ದರಾಮಯ್ಯ ಜೆಡಿಎಸ್ಸಿಗೆ ನಿಜವಾದ ಭಯೋತ್ಪಾದಕರಾಗಿರುವಂತೆ ತೋರುತ್ತದೆ.

ಈ ಬೆಳವಣಿಗೆಯಿಂದ ಸ್ಫೂರ್ತಿ ಪಡೆದು ಜೆಡಿಎಸ್‌ ಹಾಗೂ ಕಾಂಗ್ರೆಸ್ಸಿನ ಉಗ್ರರೆಲ್ಲ ಸೇರಿ ಸರ್ಕಾರವನ್ನು ಈ ವರ್ಷವಾದರೂ ಖಂಡಿತ ಸ್ಫೋಟಿಸುತ್ತಾರೆ ಎಂಬ ನಂಬಿಕೆ ನಮಗಿದೆ.

ಇದು ಹುಸಿ ಬಾಂಬ್‌ ಆಗಲಾರದು ಎಂಬ ವಿಶ್ವಾಸದೊಂದಿಗೆ ಎಲ್ಲ ಭಯೋತ್ಪಾದಕ ಸಂಘಟನೆಗಳ ಪರವಾಗಿ ತಮಗೆಲ್ಲ ಮತ್ತೊಮ್ಮೆ ಹೊಸವರ್ಷದ ಬೆದರಿಕೆಗಳು


Kannada Prabha issue dated January 2, 2006
We'll Blast the Karnataka Government: Political Terrorists Warn!

-