ಇಡೀ ಭಾರತ ಹೊತ್ತಿ ಉರಿಯುತ್ತದೆ ಎಂದುಕೊಂಡಿದ್ದು ಸುಳ್ಳಾಯಿತಲ್ಲ:
ಲಾಡೆನ್‌ಗೆ ಉಗ್ರನ ಪತ್ರ
ನಾಮ ಕಾಶಿ ಬಾಂಬ್ ಘಟನೆಯ ಕುರಿತು ಒಂದು ಮಾರ್ಕೆಟ್ ಸರ್ವೆ ನಡೆಸಿದೆಮ. ಈ ಸಮೀಕ್ಷೆಯಲ್ಲಿ ಅಚ್ಚರಿಯ ವಿಷಯವೊಂದು ಪತ್ತೆಯಾಗಿದೆ. ಕಾಶಿಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಬಗ್ಗೆ ಜನರಿಗೆ ಅಂತಹ ಭಯವೇನೂ ಆಗಿಲ್ಲವಂತೆ. ಆದರೆ, ಇದೇ ಬಾಂಬ್ ಏನಾದರೂ ಮೆಕ್ಕಾದಲ್ಲಿ ಸ್ಫೋಟಗೊಂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಊಹೆಯೇ ಜನರಿಗೆ ಭಯ ಉಂಟುಮಾಡಿದೆಯಂತೆ.
$$iND987432$$
*********
ತಮ್ಮೊಡನೆ ಸಂಪರ್ಕ ಹೊಂದಿರಲು ಅಂತಾರಾಷ್ಟ್ರೀಯ ಜಿಹಾದಿ ದಂಡನಾಯಕರು ಬಳಸುವ ಈ ಮೇಲಿನ ಎರಡೂ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಸರಿಯಾಗಿದೆ ಎಂದು ಭಾವಿಸುತ್ತೇನೆ. ಹಾಗೆಯೇ ನನ್ನ ಪರಿಚಯಕ್ಕಾಗಿ ಈ ಕೆಳಗಿನ ಐಡಿ ಮತ್ತು ಪಾಸ್‌ವರ್ಡನ್ನು ತಾಮ ತಮ್ಮ ಲ್ಯಾಪ್‌ಟಾಪಿನಲ್ಲಿ ಪರಿಶೀಲಿಸಿ ಖಾತ್ರಿ ಮಾಡಿಕೊಳ್ಳಬಹುದಾಗಿ ವಿನಂತಿಸುತ್ತೇನೆ.
$$iND987432$$
*********
ಮರ್‍ಹಬಾ ಲಾಡನ್, ಕೈಫಾ ಹಲೂಕ್?
ಅಲ್ ಹಮ್ದು ಲೆಲ್ಲಾಹ್. ನಾನು ಆರಾಂ ಇದ್ದೇನೆ. ಹೆಚ್ಚು ಹೆಚ್ಚು ಭಯೋತ್ಪಾದನೆಗಳಲ್ಲಿ ಯಶಸ್ವಿಯಾಗುತ್ತಿದ್ದೇನೆ. ನಮಗೆ ಸಾಕಷ್ಟು ನೆರಮ ಹಾಗೂ ನೈತಿಕ ಬೆಂಬಲ ನೀಡುತ್ತಿರುಮದಕ್ಕೆ ಶುಕ್ರಾನ್.
ಕಳೆದ ವಾರ ಕಾಶಿಯ ಸಂಕಟ ಮೋಚನ ಹನುಮಾನ್ ಮಂದಿರದಲ್ಲಿ ಬಾಂಬ್ ಸ್ಫೋಟ ಮಾಡುವಲ್ಲಿ ನಾಮ ಯಶಸ್ವಿಯಾಗಿದ್ದಕ್ಕೆ ತಾಮ ಕಳಿಸಿದ ಮಬ್ರೂಕ್ ಸಂದೇಶ ತಲುಪಿದೆ. ಹಿಂದೂಗಳ ಪರಮ ಪವಿತ್ರ ಕ್ಷೇತ್ರದಲ್ಲೇ ಭಯೋತ್ಪಾದನೆ ನಡೆಸಿದ್ದಕ್ಕೆ ನೀಮ ಹರ್ಷ ವ್ಯಕ್ತಪಡಿಸಿದ್ದೀರಿ. ಶುಕ್ರಾನ್.
ಆದರೆ, ಅಫ್‌ವಾನ್... ನಾವಂದುಕೊಂಡಂತೆ, ಈ ಬಾಂಬ್ ಸ್ಫೋಟದಿಂದ ಏನೂ ಪ್ರಯೋಜನವಾಗಿಲ್ಲ ಎನ್ನುವ ಖೇದದ ಸಂಗತಿಯನ್ನು ನಿಮಗೆ ತಿಳಿಸಬೇಕಾಗಿದೆ.
ಕಾಶಿಯಂಥ ಪವಿತ್ರ ಕ್ಷೇತ್ರಕ್ಕೆ ಬಾಂಬ್ ಹಾಕಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಭೆ ಉಂಟುಮಾಡಬೇಕು ಅಂತ ನಮ್ಮ ಉದ್ದೇಶವಾಗಿತ್ತು. ಆದರೆ, ನಮ್ಮ ಮೂಲ ಉದ್ದೇಶವೇ ವಿಫಲವಾಗಿದೆ. ಯಾಕೆ ಅಂತಾನೇ ಗೊತ್ತಾಗ್ತಾ ಇಲ್ಲ.
ನಮ್ಮ ಪ್ರಕಾರ, ಕಾಶಿಯ ದೇವಾಲಯದಲ್ಲಿ ಬಾಂಬ್ ಸ್ಫೋಟವಾದ ಸುದ್ದಿ ಟೀವಿಯಲ್ಲಿ ಪ್ರಸಾರವಾಗುತ್ತಿದ್ದಂತೆ, ಇಡೀ ಭಾರತ ಉದ್ವಿಗ್ನವಾಗಬೇಕಿತ್ತು. ರಾತ್ರೋ ರಾತ್ರಿ ಹಿಂದೂಗಳು ಕ್ರುದ್ಧರಾಗಿ ಹಿಂಸಾಚಾರ ಆರಂಭಿಸಬೇಕಿತ್ತು. ಕೋಮು ಗಲಭೆಗಳಾಗಿ ದೇಶವೆಲ್ಲ ತಲ್ಲಣಗೊಳ್ಳಬೇಕಿತ್ತು. ಕನಿಷ್ಠ ನೂರಾರು ಮುಸ್ಲಿಮರನ್ನು ಹಿಂದುಗಳು ಇರಿದು ಕೊಂದುಹಾಕುತ್ತಾರೆ ಅಂತ ನಾಮ ಅಂದುಕೊಂಡಿದ್ದೆಮ. ಒಂದೆರಡು ಮಸೀದಿಗಳ ಮೇಲೆ ದಾಳಿ ನಡೆಯುತ್ತದೆ ಅಂತ ನಮ್ಮ ನಿರೀಕ್ಷೆಯಿತ್ತು.
ಕನಿಷ್ಠ ೧೫ ದಿನ ಭಾರತ ಹಿಂದೂ ಮುಸ್ಲಿಂ ಹಿಂಸೆಯಲ್ಲಿ ನಲುಗಿಹೋಗುತ್ತದೆ ಅನ್ನುವ ನಂಬಿಕೆ ನಮ್ಮದಾಗಿತ್ತು. ನಮ್ಮದಷ್ಟೇ ಅಲ್ಲ, ಭಾರತದಾದ್ಯಂತ ಎಲ್ಲ ಸಾಮಾನ್ಯ ಜನರ ಭಯವೂ ಇದೇ ಆಗಿತ್ತು.
ಆದರೆ, ಹಾಗಾಗಲೇ ಇಲ್ಲ. ಇಡೀ ಭಾರತ ಬಹಳ ಜವಾಬ್ದಾರಿಯಿಂದ ವರ್ತಿಸಿತು. ಸ್ವಲ್ಪ ಕೂಡ ಹಿಂಸಾಚಾರ ಆಗದಂತೆ ಇಡೀ ದೇಶ ಎಚ್ಚರ ವಹಿಸಿತು. ಇದು ಹೇಗೆ ಸಾಧ್ಯವಾಯಿತು? ಹಿಂಸಾಚಾರ ಭುಗಿಲೇಳದಂತೆ ತಡೆದವರು ಯಾರು ಅಂತಾನೇ ಗೊತ್ತಾಗ್ತಾ ಇಲ್ಲ. ನಮಗಷ್ಟೇ ಅಲ್ಲ... ಭಾರತದ ಜನಸಾಮಾನ್ಯರಿಗೂ ಇದೇ ಅಚ್ಚರಿಯ ವಿಷಯ!
ನಾಮ ಒಂದು ವಾರ ಹಾಗೂ ಹೀಗೂ ಕಾದು ನೋಡಿದ್ದಾಯ್ತು. ಈ ಬಿಜೆಪಿಯವರು, ಹಿಂದೂ ಪರಿವಾರದವರು ದೇಶದ ಶಾಂತಿ ಕದಡುವ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಅವರು ಯಾಮದೇ ಪ್ರಚೋದನಾತ್ಮಕ ಹೇಳಿಕೆ ನೀಡದೇ ಬಹಳ ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ. ಜನತೆ ಸಹನೆಯಿಂದ ಇರುವಂತೆ ಕರೆ ನೀಡಿದ್ದಾರೆ. ಈ ಹಿಂದುಗಳೂ ಕೆರಳದ ಹೊರತು ನಾಮ ಮುಸ್ಲಿಮರ ಕಿಚ್ಚು ಎಬ್ಬಿಸಲು ಸಾಧ್ಯವಾಗ್ತಾ ಇಲ್ಲ.
ಒಟ್ಟಿನಲ್ಲಿ ನಮ್ಮ ಕಾಶಿ ಬಾಂಬ್ ಪುಸ್ ಅಂದಿದೆ... ಹಿಂಸೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇದರಿಂದ ನಮ್ಮ ತಂಡದ ಎಲ್ಲರಿಗೂ ಬಹಳ ನಿರಾಶೆಯಾಗಿದೆ. ಕಾಶಿಗೆ ಬಾಂಬ್ ಹಾಕಿದರೂ ಏನೂ ಆಗಲಿಲ್ಲ ಎಂದರೆ, ಇನ್ಯಾವ ರೀತಿಯ ಭಯೋತ್ಪಾದನೆ ಮಾಡುಮದು ಅಂತ ನಮ್ಮ ಕೆಲಮ ಯುವಕರು ಚಿಂತೆಗೆ ಒಳಗಾಗಿದ್ದಾರೆ.
ಈ ಸಮಯದಲ್ಲಿ ನಮ್ಮ ಯುವಕರ ‘ಜಿಹಾದ್’ ಇಚ್ಛಾಶಕ್ತಿ ಉಡುಗದಂತೆ ತಾವೇ ಏನಾದರೂ ಮಾಡಬೇಕು. ತಮ್ಮ ಉಪನ್ಯಾಸದ ಲೇಟೆಸ್ಟ್ ಕ್ಯಾಸೆಟ್ ಒಂದನ್ನು ಕಳಿಸಿಕೊಡಿ. ಅದನ್ನು ನೋಡಿಯಾದರೂ ನಮ್ಮ ಯುವ ಜಿಹಾದ್ ಸೇನಾನಿಗಳಿಗೆ ಉತ್ಸಾಹ ಬಂದೀತು!
ಹಾಗೆ ನೋಡಿದರೆ, ಈ ಭಾರತದ ಹೊಸ ಪರಿಸ್ಥಿತಿಯೇ ನಮಗೆ ಬಹಳ ನಿರಾಸೆ ತರುವಂತಿದೆ. ಮೊದಲಿನಂತೆ ಹಿಂದೂ ಧರ್ಮದ ಹೆಸರಿನಲ್ಲಿ ಶಾಂತಿ ಕದಡುಮದು ನಮಗೆ ಸಾಧ್ಯವಾಗುತ್ತಿಲ್ಲ.
ಉದಾಹರಣೆಗೆ: ಇತ್ತೀಚೆಗೆ ರೋಮ್‌ನ ಒಂದು ಬಾರ್‌ನಲ್ಲಿ ದುರ್ಗಾ ದೇವಿಯ ಕೈಯಲ್ಲಿ ಹೆಂಡದ ಬಾಟಲಿಗಳನ್ನು ಹಿಡಿಸಿರುವ ಜಾಹೀರಾತು ಪೋಸ್ಟರುಗಳನ್ನು ಹಚ್ಚಲಾಯಿತು. ಈ ಸುದ್ದಿ ಕೇಳಿದ ಹಿಂದೂಗಳು ಕೆರಳಿ ಹಿಂಸಾಚಾರಕ್ಕೆ ಇಳಿಯಲಿಲ್ಲ. ಎಂ. ಎಫ್. ಹುಸೇನ್ ಎಂಬ ಮಹಾ ಕಲಾವಿದ ಹಿಂದೂಗಳ ದೇವರನ್ನೂ, ಭಾರತ ಮಾತೆಯನ್ನೂ ಕಲಾತ್ಮಕವಾಗಿ ನಗ್ನಗೊಳಿಸಿದ. ಒಂಚೂರು ಪ್ರತಿಭಟನೆ ನಡೆಯಿತು ಎಂಬುದನ್ನು ಬಿಟ್ಟರೆ ಹುಸೇನ್‌ಗೆ ಹಿಂದಿನಂತೆ ಭಾರೀ ಪ್ರಚಾರ ಸಿಗಲಿಲ್ಲ. ಅಲ್ಲೊಂದು ಇಲ್ಲೊಂದು ದೇವರ ಪ್ರತಿಮೆಗಳು ಭಗ್ನವಾದರೂ ಉದ್ವಿಗ್ನ ಪರಿಸ್ಥಿತಿ ಗ್ರಾಮದ ಗಡಿ ದಾಟಲಿಲ್ಲ.
ಇದೇ ರೀತಿ ಮುಂದುವರಿದರೆ, ಮತಾಂಧತೆಯ ಮಂತ್ರದಿಂದ ಹಿಂದೂಗಳನ್ನು ರೊಚ್ಚಿಗೆಬ್ಬಿಸುಮದು ಕಷ್ಟ ಅಂತ ನಮಗನ್ನಿಸಿದೆ. ಸದ್ಯ ನಾವಂತೂ ಇನ್ನಷ್ಟು ಹಿಂದೂ ದೇವಾಲಯಗಳು ಹಾಗೂ ಪುಣ್ಯ ಕ್ಷೇತ್ರಗಳ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದೇವೆ. ಆದರೆ, ಅಮಗಳಿಂದ ನಿಶ್ಚಿತ ಫಲ ದೊರೆಯುಮದೇ ಅಂತ ನಮಗೇ ಗೊಂದಲ ಉಂಟಾಗಿದೆ.
ಇಷ್ಟಕ್ಕೂ ಜನರು ಈಗ ಬಾಂಬಿಗೆ ಬೆದರುತ್ತಲೇ ಇಲ್ಲ. ಮೊದಲಾದರೆ ಹುಸಿಬಾಂಬ್ ಕರೆಗೂ ಜನ ಹೆದರಿ ವಾರಗಟ್ಟಲೆ ಅಳುಕಿ ನಡೆಯುತ್ತಿದ್ದರು. ಈಗ ಶಕ್ತಿಶಾಲಿ ಬಾಂಬ್ ಸಿಡಿದರೂ ಕೆಲವೇ ಗಂಟೆಗಳಲ್ಲಿ ಆರಾಮವಾಗಿ ಅಲ್ಲಿ ಜನ ನಡೆದಾಡಿಕೊಂಡಿರುತ್ತಾರೆ. ಬಾಂಬುಗಳಿಗೆ ಜನ ಒಗ್ಗಿಹೋಗಿದ್ದಾರೆ. ಹೀಗಾದರೆ, ನಾಮ ಭಯೋತ್ಪಾದನೆ ಮಾಡುಮದು ಹೇಗೆ ಎಂಬ ಭಯ ನಮಗೇ ಉಂಟಾಗಿದೆ.
ಸಾಲದು ಎಂಬಂತೇ, ರಾಜಕಾರಣಿಗಳೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಹೊಸ ವಿದ್ಯೆ ಕಲಿತುಕೊಂಡಿರುಮದು ನಮ್ಮ ಹಿನ್ನಡೆಗೆ ಇನ್ನೊಂದು ಕಾರಣ. ಬಾಂಬ್ ಸ್ಫೋಟವಾದ ಕೆಲವೇ ಗಂಟೆಯಲ್ಲಿ ಪೊಲೀಸರು ಯಾರನ್ನೋ ಹಿಡಿದು ಹಾಕಿ ಈತನೇ ‘ಬಾಂಬರ್’ ಎಂದು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಅಥವಾ ಯಾರನ್ನೋ ಗುಂಡುಹೊಡೆದು ಸಾಯಿಸಿ ಈತನೇ ಬಾಂಬ್ ಇಟ್ಟವನು ಅಂತ ಟೀವಿಯಲ್ಲಿ ತೋರಿಸುತ್ತಾರೆ. ಅದು ನಿಜವೋ ಸುಳ್ಳೋ ಎಂಬುದು ಗೊತ್ತಾಗುವ ಹೊತ್ತಿಗೆ ಇಡೀ ಘಟನೆಯ ಮೇಲೆ ಮಾಧ್ಯಮಗಳಿಗೆ ಹಾಗೂ ಜನರಿಗೆ ಆಸಕ್ತಿ ಕಡಿಮೆಯಾಗುತ್ತದೆ. ಸುದ್ದಿ ಮೊದಲ ಪುಟದಿಂದ ಒಳಪುಟಕ್ಕೆ ಜಾರುತ್ತದೆ. ಬೆಂಗಳೂರು ಐಐಎಸ್‌ಸಿ ಮೇಲಿನ ದಾಳಿ, ದೆಹಲಿಯಲ್ಲಿ ಬಾಂಬ್ ಸ್ಫೋಟ ಹಾಗೂ ಕಾಶಿಯಲ್ಲಿ ಬಾಂಬ್ ಸ್ಫೋಟ... ಎಲ್ಲ ಘಟನೆಯಲ್ಲೂ ಹೀಗೇ ಆಯಿತು.
ಈ ಸಿನಿಮಾಗಳೋ... ನಮಗಿಂತಲೂ ಹೆಚ್ಚು ಭಯೋತ್ಪಾದನೆ ಉಂಟು ಮಾಡುತ್ತವೆ. ಲಾಂಗು, ಮಚ್ಚು, ಬಾಂಬು, ಪಿಸ್ತೂಲು, ರಕ್ತ, ಕಿರುಚಾಟ ಇಲ್ಲದ ಸಿನಿಮಾವೇ ಇಲ್ಲ. ಇವಿಷ್ಟು ಐಟಂ ಹೆಚ್ಚಿದ್ದಷ್ಟೂ ಸಿನಿಮಾ ಹಿಟ್ ಆಗುತ್ತವೆ. ಹಿಂಸೆ ಹೆಚ್ಚಾದಷ್ಟೂ ಜನ ಆನಂದ ಪಡುತ್ತಾರೆ. ಹಾಗಾಗಿ ಜನ ಭಯೋತ್ಪಾದನೆಯನ್ನೂ ಹಿಂದಿ ಸಿನಿಮಾಗಳ ಥರ ಎಂಜಾಯ್ ಮಾಡೋದನ್ನು ಕಲಿತುಬಿಟ್ಟಿದ್ದಾರೆಯೇ ಅಂತ ನಮ್ಮ ಅನುಮಾನ.
ನಾಮ ಕಾಶಿ ಬಾಂಬ್ ಘಟನೆಯ ಕುರಿತು ಒಂದು ಮಾರ್ಕೆಟ್ ಸರ್ವೆ ನಡೆಸಿದೆಮ. ಈ ಸಮೀಕ್ಷೆಯಲ್ಲಿ ಅಚ್ಚರಿಯ ವಿಷಯವೊಂದು ಪತ್ತೆಯಾಗಿದೆ. ಕಾಶಿಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಬಗ್ಗೆ ಜನರಿಗೆ ಅಂತಹ ಭಯವೇನೂ ಆಗಿಲ್ಲವಂತೆ.
ಆದರೆ, ಇದೇ ಬಾಂಬ್ ಏನಾದರೂ ಮೆಕ್ಕಾದಲ್ಲಿ ಸ್ಫೋಟಗೊಂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಊಹೆಯೇ ಜನರಿಗೆ ಭಯ ಉಂಟುಮಾಡಿದೆಯಂತೆ. ಒಂದು ಕಾರ್ಟೂನ್ ವಿಶ್ವಾದ್ಯಂತ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಲು ಯಶಸ್ವಿಯಾದರೆ ಒಂದು ಬಾಂಬ್ ಇನ್ನೆಂತಹ ಪರಿಸ್ಥಿತಿಯನ್ನು ಉಂಟುಮಾಡಬಲ್ಲದು ಎಂಬ ಕಲ್ಪನೆಯೇ ಹೆಚ್ಚು ಭಯಾನಕ. ಥ್ಯಾಂಕ್ ಗಾಡ್. ಮೆಕ್ಕಾದಲ್ಲಿ ಈ ಬಾಂಬ್ ಸ್ಫೋಟಿಸಲಿಲ್ಲ ... ಎಂದು ಸಮೀಕ್ಷೆಯಲ್ಲಿ ವ್ಯಕ್ತಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಮ ದೇಶದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಲು ಹೊಸ ದಾರಿಯನ್ನು ಹುಡುಕಬೇಕಾಗಿದೆ. ಇದಕ್ಕೆ ಭಯೋತ್ಪಾದನಾ ಎಕ್ಸ್‌ಪರ್ಟ್ ಆದ ತಾವೇ ಏನಾದರೂ ಸಲಹೆ ನೀಡಬೇಕು. ಆಸೆಫ್. ಅಫ್‌ವಾನ್. ನಾನು ತಮಗೆ ಈ ರೀತಿಯ ಪತ್ರ ಬರೆಯಬೇಕಾಯಿತು. ದಯವಿಟ್ಟು ದಾರಿ ತೋರಿ. ಇಲ್ಲವಾದರೆ ನಾಮ ಸಿನಿಮಾ ಡೈರಕ್ಟರುಗಳು ಹಾಗೂ ಚಿತ್ರಕಥೆಗಾರರ ಸಲಹೆ ಕೋರಬೇಕಾಗುತ್ತದೆ.
ತಮ್ಮ ಮಾರ್ಗದರ್ಶನದ ನಿರೀಕ್ಷೆಯಲ್ಲಿ,
-ಖುದಾ ಆಫೀಸ್
$$iND987432$$
Kannada Prabha issue dated March 13, 2006
Kashi Bombers are disappointed
--
Tuesday, March 14, 2006
ಕಾಶಿಯಲ್ಲಿ ಬಾಂಬ್ ಸ್ಫೋಟಿಸಿದ ಉಗ್ರರಿಗೆ ನಿರಾಶೆ
Tuesday, January 03, 2006
ಕರ್ನಾಟಕ ಸರ್ಕಾರ ಶೀಘ್ರ ಸ್ಫೋಟ: ‘ಉಗ್ರಕಾರಣಿಗಳ’ ಎಚ್ಚರಿಕೆ!
ಕರ್ನಾಟಕದ ಜನತೆಗೆ ರಾಜಕೀಯ ಭಯೋತ್ಪಾದಕರ ಹೊಸವರ್ಷದ ಬೆದರಿಕೆಗಳು!
ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನುಸ್ಫೋಟಗೊಳಿಸುವ ಬಾಂಬಿನ ರಿಮೋಟ್ ಕಂಟ್ರೋಲ್ ಇರುಮದು ಸೋನಿಯಾಜಿ ಬಳಿಯೇ ಹೊರತು ಎಸ್.ಎಂ.ಕೃಷ್ಣ ಅವರ ಬಳಿ ಅಲ್ಲ. ಆದ್ದರಿಂದ ಕೃಷ್ಣ ಅವರ ಭಯೋತ್ಪಾದನೆಗೆ ಯಾರೂ ಹೆದರಬೇಕಿಲ್ಲ ಎಂದು ಮುಖ್ಯಮಂತ್ರಿಯವರು, ರಾಜ್ಯದ ಜನತೆಗೆ ಪದೇ ಪದೇ ಅಭಯ ನೀಡುತ್ತಿದ್ದಾರೆ.
ರಾಜ್ಯದ ಮಹಾಜನತೆಗೆ ಹೊಸವರ್ಷದ ಬೆದರಿಕೆಗಳು!
ನಾಮ ಉಗ್ರರು ಸಾರ್ ಉಗ್ರರು. ಅಸಲಿ ಉಗ್ರರು. ಕಳೆದ ಒಂದು ವರ್ಷದಿಂದ ಕರ್ನಾಟಕದ ಕೆಲಮ ಮಹತ್ವದ ಕಟ್ಟಡಗಳು, ದೇವಾಲಯಗಳು ಹಾಗೂ ಸಂಸ್ಥೆಗಳನ್ನು ಸ್ಫೋಟಿಸುತ್ತೇವೆ ಎಂದು ಎಚ್ಚರಿಸುತ್ತಲೇ ಬಂದಿದ್ದೇವೆ. ಆದರೆ, ನೀಮ ನಮ್ಮ ಎಚ್ಚರಿಕೆಯನ್ನು ಹುಸಿಬಾಂಬ್ ಬೆದರಿಕೆ ಎಂದು ಅಲಕ್ಷ್ಯ ಮಾಡಿದ್ದೀರಿ.
ಹೀಗೆ ಅಲಕ್ಷ್ಯ ಮಾಡಿದ್ದು ನಿಮ್ಮ ತಪ್ಪಲ್ಲ ಎಂದು ನಮಗೆ ಗೊತ್ತು. ಇದಕ್ಕೆಲ್ಲ ಕರ್ನಾಟಕದ ರಾಜಕೀಯ ಭಯೋತ್ಪಾದಕರೇ ಕಾರಣ! ಸರ್ಕಾರವನ್ನು ಇವತ್ತು ಸ್ಫೋಟಿಸುತ್ತೇವೆ. ನಾಳೆ ಕೆಡವಿಹಾಕುತ್ತೇವೆ ಎಂದು ಒಂದು ವರ್ಷದಿಂದ ಜೆಡಿಎಸ್ ಭಯೋತ್ಪಾದಕರು ಹಾಗೂ ಕಾಂಗ್ರೆಸ್ಸಿನ ಉಗ್ರಗಾಮಿಗಳು ಪ್ರತಿದಿನವೂ ಬೆದರಿಸುತ್ತಿದ್ದಾರೆ. ಆದರೆ, ಸರ್ಕಾರವನ್ನು ಮಾತ್ರ ಸ್ಫೋಟಿಸುತ್ತಿಲ್ಲ! ಅವರ ಇಂತಹ ಹುಸಿ ಬೆದರಿಕೆಗಳನ್ನು ಪ್ರತಿ ದಿನ ಕೇಳಿ ಕೇಳಿ ನೀಮ ಬೆದರಿಕೆಗಳಿಗೆ ಒಗ್ಗಿ ಹೋಗಿದ್ದೀರಿ. ಹಾಗಾಗಿ, ಅಸಲಿ ಉಗ್ರಗಾಮಿಗಳಾದ ನಾಮ ಒಡ್ಡುವ ಅಸಲಿ ಬೆದರಿಕೆಗಳಿಗೂ ನೀಮ ಜಗ್ಗುತ್ತಿಲ್ಲ. ನಮ್ಮ ಬೆದರಿಕೆಯನ್ನೂ ನೀಮ ರಾಜಕೀಯ ಭಯೋತ್ಪಾದಕರ ಮಾಮೂಲಿ ಭಾಷಣಾವೇಶ ಎಂದು ಅಂದುಕೊಂಡಿರುಮದು ನಿಜಕ್ಕೂ ಖೇದದ ಸಂಗತಿ.
ರಾಜಕಾರಣಿಗಳ ಭರವಸೆಗಳಂತೆ ಬೆದರಿಕೆಗಳಿಗೂ ವಿಶ್ವಾಸಾರ್ಹತೆ ಇಲ್ಲ ಎಂದು ಜನ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಬೋಗಸ್ ಬೆದರಿಕೆಗಳಿಂದಾಗಿ ನಮ್ಮ ಅಸಲಿ ‘ಭಯೋತ್ಪಾದನೆ’ಯ ಮೌಲ್ಯವೇ ಕಡಿಮೆಯಾಗಿದೆ. ಸರ್ಕಾರ ಎಂದು ಸ್ಫೋಟಗೊಳ್ಳುಮದೋ ಎಂಬ ಭಯದ ನಡುವೆಯೇ ಜನರು ಆರಾಮವಾಗಿ ಬದುಕಲು ಕಲಿತಿದ್ದಾರೆ! ಇದು ಭಯೋತ್ಪಾದನೆ ಎಂಬ ಶಬ್ದಕ್ಕೇ ಆದ ಅವಮಾನ ಎಂದು ನಾಮ ಪರಿಗಣಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆ ಎಂಬ ಶಬ್ದಕ್ಕೆ ಮರುಮೌಲ್ಯ ತಂದು ಕೊಡಲು ನಾಮ ಅನಿವಾರ್ಯವಾಗಿ ಮುಂದಾಗಬೇಕಾಯಿತು. ಅದಕ್ಕಾಗಿ ಕಳೆದವಾರ ಬೆಂಗಳೂರಿನ ಐಐಎಸ್‌ಸಿ ಸಭಾಂಗಣದ ಮೇಲೆ ದಾಳಿ ನಡೆಸಿ ಭಯೋತ್ಪಾದನೆಗೆ ಒಂದು ಮರ್ಯಾದಿ ತಂದುಕೊಡಬೇಕಾಯಿತು. ಇಲ್ಲವಾದರೆ, ರಾಜಕಾರಣಿಗಳ ಬೆದರಿಕೆಗೂ ನಮ್ಮ ಬೆದರಿಕೆಗೂ ಯಾಮದೇ ವ್ಯತ್ಯಾಸ ಇರುತ್ತಿರಲಿಲ್ಲ.
ಇತ್ತೀಚೆಗೆ ಹುಸಿಬಾಂಬ್ ಬೆದರಿಕೆಗಳು ಹೆಚ್ಚುತ್ತಿರುವ ಬಗ್ಗೆ ನಮಗೆ ನಿಜಕ್ಕೂ ಕಳವಳವಾಗಿದೆ. ಸಂಸತ್ತಿನಿಂದ ಹಿಡಿದು ಅಶೋಕಾ ಹೋಟೆಲ್ ತನಕ, ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿನಿಂದ ಹಿಡಿದು ಐಬಿಎಂ ಸಾಫ್ಟ್‌ವೇರ್ ಕಂಪನಿಯ ತನಕ, ಮುಖ್ಯಮಂತ್ರಿ ಮನೆಯಿಂದ ಹಿಡಿದು, ಎಂ ಜಿ ರಸ್ತೆಯ ಅಂಗಡಿಯ ತನಕ ಎಲ್ಲವನ್ನೂ ಸ್ಫೋಟಿಸುವ ಬಾಂಬ್ ಬೆದರಿಕೆಗಳು ದಿನ ಬೆಳಗಾದರೆ, ಈ ಮೇಲ್‌ನಲ್ಲಿ, ಫೋನ್‌ನಲ್ಲಿ, ಫ್ಯಾಕ್ಸ್‌ನಲ್ಲಿ ಬರುತ್ತಿವೆ. ಆದರೆ, ಅವೆಲ್ಲ ಕೊನೆಗೆ ಠುಸ್ ಎನ್ನುವ ಹುಸಿ ಬಾಂಬ್ ಎಚ್ಚರಿಕೆಗಳಾಗುತ್ತಿವೆ. ಹಾಗಾಗಿ, ‘ಇದೇನು ಮಾಮೂಲಿ ಹುಸಿಬಾಂಬ್ ಬಿಡು’ ಎನ್ನುವಷ್ಟರ ಮಟ್ಟಿಗೆ ನೀಮ ನಿರಾತಂಕರಾಗಿದ್ದೀರಿ. ನಮ್ಮ ಭಯೋತ್ಪಾದನೆಯಿಂದ ನಿಮಗೆ ಭಯವಾಗುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾಮ ಭಯೋತ್ಪಾದನೆಗೆ ಇನ್ಯಾವ ಮಾರ್ಗ ಹಿಡಿಯುಮದೋ ನಮಗೆ ಅರ್ಥವಾಗುತ್ತಿಲ್ಲ.
ಹಾಗಾಗಿ, ನಾಮ ಉಗ್ರಗಾಮಿಗಳಾದರೂ, ಹುಸಿ ಬಾಂಬ್ ಬೆದರಿಕೆ ಒಡ್ಡುವವರ ಬಳಿ ಬೇಷರತ್ ಮನವಿ ಮಾಡಿಕೊಳ್ಳುತ್ತೇವೆ... ‘ದಯವಿಟ್ಟು ಹುಸಿ ಬೆದರಿಕೆ ಒಡ್ಡುಮದನ್ನು ಬಿಡಿ. ಇದರಿಂದ ‘ಭಯೋತ್ಪಾದನೆ’ಯ ಗೌರವವೇ ಕುಂದುತ್ತಿದೆ.’
ರಾಜಕಾರಣಿಗಳು ಬೆದರಿಕೆ ಒಡ್ಡುವಾಗ ಸ್ವಲ್ಪ ಕೇರ್‌ಫುಲ್ ಆಗಬೇಕು ಎಂಬುದು ನಮ್ಮ ಸಲಹೆ. ಇಲ್ಲವಾದರೆ ಯಡಿಯೂರಪ್ಪನವರ ಕಥೆಯಾಗುತ್ತದೆ. ಅವರ ಎಲ್ಲ ಬೆದರಿಕೆಗಳೂ ಹುಸಿಬಾಂಬ್ ಎಂದು ಬಹುತೇಕ ಜನತೆ ತೀರ್ಮಾನ ಮಾಡಿರುಮದರಿಂದ ಯಡಿಯೂರಪ್ಪನವರ ಬೆದರಿಕೆಗೆ ಯಾರೂ ಮಣಿಯುತ್ತಿಲ್ಲ. ಅತ್ತ ಪೂಜಾರಿಯವರ ಬಾಂಬುಗಳೂ ಅಷ್ಟೇ... ಠುಸ್ ಅನ್ನುತ್ತಿವೆ. ಸಿ. ಎಂ. ಇಬ್ರಾಹಿಂ, ಎ.ಕೆ.ಸುಬ್ಬಯ್ಯನವರ ಬಾಂಬುಗಳು ನಗೆಬಾಂಬುಗಳೆಂದು ಜನ ಎಂಜಾಯ್ ಮಾಡುತ್ತಿದ್ದಾರೆ.
ಸದ್ಯ ಇದ್ದುದರಲ್ಲಿ ದೇವೇಗೌಡರ ಲೆಟರ್ ಬಾಂಬ್‌ಗಳಿಗೆ ಮಾತ್ರ ತುಸು ಭಯೋತ್ಪಾದನೆಯ ಮೌಲ್ಯವಿದೆ. ಆದರೆ, ಅವರ ಪತ್ರಬಾಂಬುಗಳನ್ನೆಲ್ಲ ಇತ್ತೀಚೆಗೆ ಕೋರ್ಟುಗಳಲ್ಲಿ ನ್ಯಾಯಾಧೀಶರು ನಿಷ್ಕ್ರಿಯಗೊಳಿಸುತ್ತಿರುಮದು ಶೋಚನೀಯ. ಹಾಗಾಗಿ, ಗೌಡರ ಲೆಟರ್‌ಬಾಂಬ್‌ಗಳ ಕುರಿತೂ ಜನರಿಗೆ ಹೆದರಿಕೆ ಕಡಿಮೆಯಾಗುತ್ತಿದೆ. ಅದರಲ್ಲೂ ಇತ್ತೀಚಿನ ಜಿ.ಪಂ., ತಾ.ಪಂ ಚುನಾವಣೆಯಾದ ಮೇಲೆ ಗೌಡರ ಬಾಂಬುಗಳ ಶಕ್ತಿಯೇ ಕಡಿಮೆಯಾಗಿದೆ ಎಂದು ಗುಪ್ತದಳ ವರದಿ ಮಾಡಿದ್ದು ನಮಗೂ ತಿಳಿದುಬಂದಿದೆ.
ಈ ನಡುವೆ, ಸರ್ಕಾರ ಸ್ಫೋಟಿಸುವ ನಿಜವಾದ ಬಾಂಬ್ ಇರುಮದು ಡಿ.ಕೆ.ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಕೈಲಿ ಹಾಗೂ ಆ ಬಾಂಬುಗಳ ರಿಮೋಟ್ ಕಂಟ್ರೋಲ್ ಇರುಮದು ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರ ಕೈಲಿ ಎಂದು ಸರ್ಕಾರದ ಅತ್ಯುನ್ನತ ಮೂಲಗಳು ನಂಬಿವೆ. ಆದ್ದರಿಂದ ಎಸ್.ಎಂ.ಕೃಷ್ಣ ಅವರು ಬೆಂಗಳೂರಿಗೆ ಬಂದಾಗಲೆಲ್ಲ ರಾಜಧಾನಿಯಲ್ಲಿ ಭದ್ರತಾ ವ್ಯವಸ್ಥೆ ಬಲಗೊಳ್ಳುತ್ತದೆ. ಕೃಷ್ಣ ಅವರ ಚಲನವಲನದ ಮೇಲೆ ಗುಪ್ತಚರ ದಳ ವಿಶೇಷ ಕಣ್ಣಿಟ್ಟಿರುತ್ತದೆ. ಅದರಲ್ಲೂ ಖರ್ಗೆ ಮತ್ತು ಕೃಷ್ಣ ಗುಪ್ತ ಸಮಾಲೋಜನೆ ನಡೆಸಿದರಂತೂ ಸರ್ಕಾರ ಸ್ಫೋಟವಾಗಲು ಕ್ಷಣಗಣನೆ ಆರಂಭವಾಯಿತು ಎಂಬಂತೆ ಭಯೋತ್ಪಾದನೆಯಾಗುತ್ತದೆ.
ಆದರೆ, ಇದು ಕೂಡ ಹುಸಿಬಾಂಬು ಬೆದರಿಕೆ ಎಂದು ಮುಖ್ಯಮಂತ್ರಿಗಳು ರಾಜ್ಯದ ಪ್ರಜೆಗಳಿಗೆ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯವರ ಪ್ರಕಾರ, ರಿಮೋಟ್ ಕಂಟ್ರೋಲ್ ಕೃಷ್ಣ ಅವರ ಕೈಲಿಲ್ಲ. ಸೋನಿಯಾಜಿ ಅವರ ಕೈಲಿದೆ. ಆದ್ದರಿಂದ, ಈ ಸರ್ಕಾರ ಸ್ಫೋಟಗೊಳಿಸುವ ನಿಜವಾದ ಭಯೋತ್ಪಾದಕಿ ಸೋನಿಯಾಜಿಯೇ ಹೊರತು ಕೃಷ್ಣ ಅಲ್ಲ. ಎಸ್.ಎಂ. ಕೃಷ್ಣ ಅವರ ಭಯೋತ್ಪಾದನೆಗೆ ಯಾರೂ ಹೆದರಬೇಕಿಲ್ಲ ಎಂದು ಮುಖ್ಯಮಂತ್ರಿ ಧರಂಸಿಂಗ್ ರಾಜ್ಯದ ಜನತೆಗೆ ಪದೇ ಪದೇ ಅಭಯ ನೀಡಿದ್ದಾರೆ.
ಈ ನಡುವೆ, ಕುಮಾರ ಸ್ವಾಮಿಯವರು ಸ್ವಲ್ಪ ಉಗ್ರಗಾಮಿಯಂತೆ ಮಾತನಾಡಿದರೂ ಈ ಸರ್ಕಾರ ಸ್ಫೋಟಿಸುವ ಸಂಚು ನಮ್ಮದಲ್ಲ ಎಂದು ಜನತೆಗೆ ಸಾರಿ ಹೇಳಿದ್ದಾರೆ. ‘ಈ ಸರ್ಕಾರಕ್ಕೆ ನಾನು ಭಯೋತ್ಪಾದಕ ಅಲ್ಲ. ಒಂದು ವೇಳೆ ಸರ್ಕಾರ ಸ್ಫೋಟಗೊಂಡರೆ ನಾನು ಹೊಣೆ ಹೊರುಮದಿಲ್ಲ’ ಎಂದು ಗೌಡರೂ ವಿಷದಪಡಿಸಿದ್ದಾರೆ. ಇವರೆಲ್ಲರ ಬಳಿ ಇರುವ ಮಾಹಿತಿಯೂ ಒಂದೇ... ಈ ಸರ್ಕಾರ ಸ್ಫೋಟಿಸುವ ರಿಮೋಟ್ ಕಂಟ್ರೋಲ್ ಸೋನಿಯಾ ಅವರ ಬಳಿಯೇ ಇದೆ! ಈ ಲಾಜಿಕ್ಕನ್ನೆಲ್ಲ ನೋಡಿದರೆ, ಕರ್ನಾಟಕ ಸರ್ಕಾರಕ್ಕೆ ನಿಜವಾದ ಭಯೋತ್ಪಾದಕಿ ಸೋನಿಯಾಜಿ ಎಂದು ತೀರ್ಮಾನಕ್ಕೆ ಬರಲಡ್ಡಿಯಿಲ್ಲ.
ಈ ಎಲ್ಲ ಹುಸಿ ಬೆದರಿಕೆಗಳ ನಡುವೆಯೂ ಸಿದ್ದರಾಮಯ್ಯನವರಂಥ ನಿಜವಾದ ಭಯೋತ್ಪಾದಕರೂ ಇದ್ದಾರೆ ಎಂಬುದಷ್ಟೇ ನಮಗೆ ಹೆಮ್ಮೆಯ ವಿಷಯ. ಸಿದ್ದರಾಮಯ್ಯನವರನ್ನು ಮಾನವಬಾಂಬ್ ಅಂತಾದರೂ ಕರೆಯಿರಿ ಅಥವಾ ಆತ್ಮಹತ್ಯಾ ದಳದ ನೇತಾರ ಎಂದಾದರೂ ತಿಳಿಯಿರಿ... ಅವರು ಬೆದರಿಕೆ ಒಡ್ಡಿದ್ದಷ್ಟೇ ಅಲ್ಲ, ಮೊನ್ನೆ ಚುನಾವಣೆಯಲ್ಲಿ ಜೆಡಿಎಸ್ಸಿನ ಬಹುಭಾಗವನ್ನು ಸ್ಫೋಟಿಸಿ ಚಿಂದಿಮಾಡಿದರು ಎಂಬುದು ಗಮನಾರ್ಹ ವಿಷಯ. ಆದ್ದರಿಂದ, ಸಿದ್ದರಾಮಯ್ಯ ಜೆಡಿಎಸ್ಸಿಗೆ ನಿಜವಾದ ಭಯೋತ್ಪಾದಕರಾಗಿರುವಂತೆ ತೋರುತ್ತದೆ.
ಈ ಬೆಳವಣಿಗೆಯಿಂದ ಸ್ಫೂರ್ತಿ ಪಡೆದು ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಉಗ್ರರೆಲ್ಲ ಸೇರಿ ಸರ್ಕಾರವನ್ನು ಈ ವರ್ಷವಾದರೂ ಖಂಡಿತ ಸ್ಫೋಟಿಸುತ್ತಾರೆ ಎಂಬ ನಂಬಿಕೆ ನಮಗಿದೆ.
ಇದು ಹುಸಿ ಬಾಂಬ್ ಆಗಲಾರದು ಎಂಬ ವಿಶ್ವಾಸದೊಂದಿಗೆ ಎಲ್ಲ ಭಯೋತ್ಪಾದಕ ಸಂಘಟನೆಗಳ ಪರವಾಗಿ ತಮಗೆಲ್ಲ ಮತ್ತೊಮ್ಮೆ ಹೊಸವರ್ಷದ ಬೆದರಿಕೆಗಳು
Kannada Prabha issue dated January 2, 2006
We'll Blast the Karnataka Government: Political Terrorists Warn!
-
