"ರೆಡ್ ಐ ಶಿಕ್ಯಾಗೋ" ಪತ್ರಿಕೆಯ ಮುಖಪುಟ
(ಉದಯವಾಣಿ, 7 ಅಕ್ಟೋಬರ್ 2011)
ಇಂತಹ ವ್ಯಕ್ತಿಗಳು ಪದೇ ಪದೇ ಭೂಮಿಗೆ ಬರುವುದಿಲ್ಲ. ತುಂಬಾ ಅಪರೂಪಕ್ಕೆ ಬಂದರೂ ಅದೇನೋ ಅರ್ಜೆಂಟು ಎಂಬಂತೆ ಬಹಳ ಬೇಗ ಲೋಕತೊರೆದು ಹೋಗಿಬಿಡುತ್ತಾರೆ. ಅಂಥವರು ಖಾಲಿ ಬಿಟ್ಟುಹೋಗುವ ಖುರ್ಚಿಗಳು ಹಾಗೇ ಇರುತ್ತವೆ... ಎಂದೆಂದಿಗೂ ಖಾಲಿಯಾಗಿ.
ಈಗ ಸ್ಟೀವ್ ಜಾಬ್ಸ್ ಸ್ಥಾನ ತೆರವಾಗಿದೆ. ಆ ಸ್ಥಾನ ಹಾಗೇ ಖಾಲಿ ಇದೆ. ಬಹುಶಃ ಎಂದೆಂದಿಗೂ ಖಾಲಿಯೇ ಇರಲಿದೆ. ಎಷ್ಟೇ Wanted ಜಾಹೀರಾತು ಕೊಟ್ಟರೂ ಆ Job Vacancy ತುಂಬಲು ಸಾಧ್ಯವೆ ಇಲ್ಲವೇನೋ.
ಜಗತ್ತಿನಲ್ಲಿ ಇದ್ದದ್ದು ಒಬ್ಬನೇ ಸ್ಟೀವ್ಸ್ ಜಾಬ್ಸ್. ಹಾಗಂತ ಎಲ್ಲರಿಗೂ ಆತನ ಹೆಸರು ಗೊತ್ತು ಅಂತ ಹೇಳಲಿಕ್ಕಾಗದು. ಆದರೆ, ಆತ ಅಭಿವೃದ್ಧಿಪಡಿಸಿದ ಐಪಾಡ್, ಐಫೋನ್, ಐಪ್ಯಾಡ್ ಬಗ್ಗೆ ಕೇಳದವರು ಬಹಳ ವಿರಳ. ಹಾಗೆ ನೋಡಿದರೆ, ಅವು ಮೂರೇ ಅಲ್ಲ... ಆತನ ಟಾಪ್-10 ಅನ್ವೇಷಣೆಗಳು ನಮ್ಮ ಕಂಪ್ಯೂಟರ್ ಜಗತ್ತನ್ನೇ ಬದಲಾಯಿಸಿದವು. ಜನರ ‘ಸ್ಟೈಲ್ ಸ್ಟೇಟ್ಮೆಂಟ್’ಗೂ ಹೊಸ ಭಾಷ್ಯ ಬರೆದವು.
ಇವಿಷ್ಟೇ ಆಗಿದ್ದಿದ್ದರೆ, That is not a great Job ಅನ್ನಬಹುದಿತ್ತು. ಆತ ಮೇಧಾವಿ ಕಂಪ್ಯೂಟರ್ ತಜ್ಞ, ಚಾಣಾಕ್ಷ ಉದ್ಯಮಿ, ಯಶಸ್ವಿ ಬಿಸಿನೆಸ್ಮ್ಯಾನ್ ಅಷ್ಟೇ ಆಗಿರುತ್ತಿದ್ದ. ಆತ ಅದಕ್ಕಿಂತ ಹೆಚ್ಚು. ಯಾಕೆಂದರೆ...
1. ಹುಟ್ಟನ್ನು ಗೆದ್ದರೆ ಸಾಕು... ಸಾವು ಹಾಗೂ ಬದುಕನ್ನು ಗೆಲ್ಲಬಹುದು ಎಂಬುದಕ್ಕೆ ಅತ ಉದಾಹರಣೆಯಾದ. ಸ್ಟೀವ್ಸ್ ಹುಟ್ಟಿದ್ದು ಕಾಲೇಜು ಹುಡುಗಿಯೊಬ್ಬಳ ಅಕ್ರಮ ಸಂಬಂಧಕ್ಕೆ. ಆಕೆಗೆ ಆತನ ಹುಟ್ಟು ಬೇಕಿರಲಿಲ್ಲ. ಆದರೆ, ಆಕೆ ಗರ್ಭಪಾತ ಮಾಡಿಸದಿರಲು ನಿರ್ಧರಿಸಿದ್ದೇ ಈ ಲೋಕದ ಪುಣ್ಯವಾಯಿತು. ಹೆತ್ತ ಬಳಿಕ ಆಕೆ ಮಗುವನ್ನು ಯಾರಿಗೋ ದತ್ತು ನೀಡಿದಳು. ಇದೊಂದೇ ಆತನ ತಾಯಿಯ ಕೊಡುಗೆ. ಸ್ಟೀವ್ಸ್ ಜೀವನದ ಉಳಿದ ಸಾಧನೆಗಳೆಲ್ಲ ‘ಸ್ವಯಂಕೃತಾಪರಾಧ’.
2. ಉತ್ತಮ ಕಾಲೇಜು, ಸಾಫ್ಟ್ವೇರ್ನಲ್ಲಿ ಇಂಜಿನಿಯರಿಂಗ್ ಡಿಗ್ರಿ, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೈತುಂಬಾ ಸಂಬಳ ನೀಡುವ ಜಾಬ್... ಇವೆಲ್ಲಾ ಜೀವನಕ್ಕೆ ಬೇಕಾಗಿಲ್ಲ ಎಂದು ನಿರೂಪಿಸಿದ ಈ ಜಾಬ್ಸ್. ದುಡಿದ ದುಡ್ಡನ್ನೆಲ್ಲಾ ಸುರಿದು, ಪಾಲಕರು ಇವನನ್ನು ಅತ್ಯಂತ ಉತ್ತಮ ಕಾಲೇಜಿಗೆ ಸೇರಿಸಿದರು. ಆರೇ ತಿಂಗಳಿಗೆ ಆತ ಕಾಲೇಜು ಬಿಟ್ಟ. ಅಷ್ಟೊಂದು ದುಡ್ಡು ಖರ್ಚು ಮಾಡಿ ಕಾಲೇಜು ಡಿಗ್ರಿ ಬೇಡ ಅನ್ನುವುದು ಆತನ ನಂಬಿಕೆಯಾಗಿತ್ತು. ಯಶಸ್ಸಿಗೆ ಬೇಕಾಗಿರುವುದು ಜಾಣತನ, ಆತ್ಮವಿಶ್ವಾಸ, ಕಷ್ಟಪಟ್ಟು ದುಡಿಯುವ ಪ್ರವೃತ್ತಿ, ಸೋಲಿಗೆ ಹೆದರದಿರುವ ಮನೋಭಾವ ಹಾಗೂ ಏನನ್ನಾದರೂ ಹೊಸತನ್ನು ಹುಡುಕುವ ತುಡಿತ ಹಾಗೂ ಕನಸನ್ನೂ ಸಾಕಾರಗೊಳಿಸಬಹುದೆಂಬ ಛಲ. ಇದರಿಂದಾಗಿ ಜಗತ್ತಿನ ನವಪೀಳಿಗೆಯ ಎಷ್ಟೋ ಉದ್ಯಮಶೀಲ ವ್ಯಕ್ತಿಗಳಿಗೆ ಆತ ದೇವರು ಎನಿಸಿದ. 20ನೇ ವರ್ಷಕ್ಕೆ, ಮನೆಯ ಗ್ಯಾರೇಜ್ನಲ್ಲಿ ಆ್ಯಪಲ್ ಕಂಪನಿ ಸ್ಥಾಪಿಸಿದ. ಹತ್ತೇ ವರ್ಷದಲ್ಲಿ 2 ಬಿಲಿಯನ್ ಡಾಲರ್ ಕಂಪನಿಯಾಗಿ ಬೆಳೆಸಿದ ಈ ‘ಡಿಗ್ರಿ ನಪಾಸು’ ಹುಡುಗ.
3. ಈ ಹಂತದಲ್ಲಿ ಆತ ಕ್ರಿಯಾಶೀಲ ಐಡಿಯಾಗಳಿಂದ ಹಲವಾರು ತಪ್ಪುಗಳನ್ನು ಮಾಡಿ ಆ್ಯಪಲ್ ಕಂಪನಿಯ ನಷ್ಟಕ್ಕೆ ಕಾರಣವಾದ. 30ನೇ ವರ್ಷದಲ್ಲಿ ಅವನೇ ಸ್ಥಾಪಿಸಿದ ಕಂಪನಿಯಿಂದ ಆತನನ್ನು ವಜಾ ಮಾಡಲಾಯಿತು. ಆದರೆ, ಜಾಬ್ ಹೋಯಿತೆಂದು ಸ್ಟೀವ್ ಜಾಬ್ಸ್ಗೆ ಬೇಜಾರಗಲಿಲ್ಲ. ಐದೇ ವರ್ಷದಲ್ಲಿ ಒಂದರ ಬದಲು ಎರಡು ಕಂಪನಿ ಸ್ಥಾಪಿಸಿದ. ಒಂದು ನೆಕ್ಸ್ಟ್ ಎನ್ನುವ ಕಂಪ್ಯೂಟರ್ ಕಂಪನಿ. ಇನ್ನೊಂದು ಪಿಕ್ಸಾರ್ ಎಂಬ ಕಂಪ್ಯೂಟರ್ ಅನಿಮೇಶನ್ ಕಂಪನಿ. ಆತ ನಿರ್ಮಿಸಿದ ‘ಟಾಯ್ಸ್ಟೋರಿ’ ಅನಿಮೇಶನ್ ಚಿತ್ರ ಇಡೀ ಮನರಂಜನಾ ಉದ್ಯಮದ ದಿಸೆಯನ್ನೇ ಬದಲಾಯಿಸಿತು. ನೆಕ್ಸ್ಟ್ ಕಂಪನಿ ಎಷ್ಟು ಯಶಸ್ವಿಯಾಯಿತೆಂದರೆ ಆ್ಯಪಲ್ ಕಂಪನಿಯೇ ಅದನ್ನು ಖರೀದಿಸಿತು. ಮತ್ತೆ ತನ್ನ ಆ್ಯಪಲ್ ಕಂಪನಿಗೆ ವಾಪಸಾದ. ತಪ್ಪು ತಪ್ಪಲ್ಲ. ತಪ್ಪನ್ನು ಸರಿಪಡಿಸಬಹುದು ಎಂಬುದನ್ನು ನಿರೂಪಿಸಿದ.
4. ಆತ Innovation, ಹೊಸತನಕ್ಕೆ ಹೊಸ ಭಾಷ್ಯ ಬರೆದ. ಬಳಕೆದಾರ-ಕೇಂದ್ರಿತ ಸುಧಾರಣೆಗಳಿಗೆ ಆದ್ಯತೆ ನೀಡಿದರೆ ಮಾತ್ರ ಉದ್ಯಮವೊಂದು ಉಳಿಯಬಲ್ಲುದು ಎಂದು ನಿರೂಪಿಸಿ ತೋರಿಸಿದ. ಇಡೀ ಜಗತ್ತು ಮೈಕ್ರೋಸಾಫ್ಟ್ ವಿಂಡೋಸ್, ಇಂಟೆಲ್ ಚಿಪ್, ನೋಕಿಯಾ ಫೋನ್, ಸೋನಿ ವಾಕ್ಮನ್, ಡೆಲ್ ಲ್ಯಾಪ್ಟಾಪ್ನಿಂದ ನಡೆಯುತ್ತಿರುವಾಗ ಈತ ಐಮ್ಯಾಕ್ನ ಮ್ಯಾಜಿಕ್ ಮಾಡಿದ. ಐಪಾಡ್ನಿಂದ ವಾಕ್ಮನ್ನನ್ನು ಮೂಲೆಯಲ್ಲಿ ಮಲಗಿಸಿದ. ಐಫೋನ್ನಿಂದ ನೋಕಿಯಾವನ್ನು ನೂಕಿದ. ಐಪ್ಯಾಡ್ ಟ್ಯಾಬ್ಲೆಟ್ ಮೂಲಕ ಲ್ಯಾಪ್ಟಾಪ್ನ್ನು ಡೌನ್ ಮಾಡಿದ. ಹೊಸತನ ಅಂದರೆ ಸಾಮಾನ್ಯ ಜಾಬ್ಗಳಲ್ಲ... ಅವು ಸ್ಟೀವ್ ಜಾಬ್ಸ್!
5. ಸಾವು... ಯಾರನ್ನೂ ಬಿಡಲ್ಲ. ನನಗೂ ಪ್ರತಿದಿನ ಸಾವಿನ ಭಯವಿತ್ತು. ಆದರೆ, ಅದೇ ನನಗೆ ನನ್ನ ಕನಸುಗಳನ್ನು ಬೇಗಬೇಗನೆ ಸಾಕಾರಗೊಳಿಸಲು ಸ್ಫೂರ್ತಿಯಾಯಿತು ಎಂದ ಈ ಮಹಾಶಯ. ಕಾನ್ಸರ್ ಇದೆ ಎಂದು ಗೊತ್ತಾದಾಗ, ಇನ್ನು ಬದುಕಲು ಕೆಲವೇ ತಿಂಗಳುಗಳಿವೆ ಎಂದು ಡಾಕ್ಟರ್ ಹೇಳಿದಾಗ ಸ್ಟೀವ್ ಎದೆಗುಂದಲಿಲ್ಲ. ಅಂದುಕೊಂಡಿದ್ದನ್ನು ಸಾಧಿಸಲು ಹೆಚ್ಚು ಸಮಯ ಎಲ್ಲ ಎಂದಷ್ಟೇ ಆತನಿಗೆ ಅನ್ನಿಸಿತು. ಸಾಯುವ ಮೊದಲು ಸಾಧನೆ ಮಾಡಬೇಕೆಂದರೆ ತಾನು ಕೆಲಸ ಮಾಡುವ ರೀತಿಯಲ್ಲಿ ಏನೋ ಬದಲವಣೆಯಾಗಬೇಕು, ವೇಗವಾಗಿ ಮಾಡಬೇಕು ಎಂದು ಲೆಕ್ಕ ಹಾಕಿದ ಆತ ಅದೃಷ್ಟ ವಶಾತ್ 6 ತಿಂಗಳ ಬದಲು 6 ವರ್ಷ ಬದುಕಿದ. ಬದುಕಿದ್ದಷ್ಟೂ ವರ್ಷ, ವರ್ಷಕ್ಕೊಂದರಂತೆ ಹೊಸತನ್ನು ನೀಡುತ್ತಲೇ ಇದ್ದ. ಹಾಗಾಗಿ, ಸಾವಿನ ನೆರಳಲ್ಲಿರುವವರು ಜೀವನನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳಬಹುದು ಎಂಬುದಕ್ಕೆ ಮಾದರಿಯಾದ.
ಈ ರೀತಿ, ನಮ್ಮಲ್ಲಿ ಜೀವನಸ್ಫೂರ್ತಿ ತುಂಬಬಲ್ಲವರು, ಸ್ಟೀವ್ ಒಬ್ಬನೇ ಅಲ್ಲ ಎನ್ನುವುದು ನಿಜ. ಈ ರೀತಿ ಉದ್ಯಮಿಗಳಿಗೆ ಮಾದರಿಯಾಗಬಲ್ಲವರು ಜಗತ್ತಿನಲ್ಲಿ ಇನ್ನೂ ಕೆಲವರಿದ್ದಾರೆ ಅನ್ನೋದೂ ನಿಜ. ಮುಂದೂ ಕೆಲವರಿದ್ದೇ ಇರುತ್ತಾರೆ ಅನ್ನುವುದೂ ಸತ್ಯ. ಏಕೆಂದರೆ ಜಗತ್ತು ಯಾರಿದ್ದರೂ ಇಲ್ಲದಿದ್ದರೂ ನಡೆಯುತ್ತಲೇ ಇರುತ್ತದೆ. ಇರಬೇಕು... ಈಗ ಜಗತ್ತಿನ ಮುಂದಿದೆ ಬಿಲಿಯನ್ ಡಾಲರ್ ಜಾಬ್ ಜಾಹೀರಾತು... ಜಾಬ್ಸ್ ಜಾಬ್ಗೆ ಸೂಕ್ತ ವ್ಯಕ್ತಿಗಳು ಬೇಕಾಗಿದ್ದಾರೆ!
Friday, October 07, 2011
ಜಾಬ್ಸ್ ಇನ್ನಿಲ್ಲ. ಜಾಬ್ ಖಾಲಿ ಇದೆ!
Wednesday, July 06, 2011
Udayavani tops the readership growth in all Bangalore newspapers
Want to share a small happy news with you. We received the detailed analysis of Indian Readership Survey – IRS 2011 Q1 results. Udayavani has recorded an all around growth in its Bangalore edition among all Bangalore Kannada Newspapers.
In Total Readership (TR) – Udayavani Bangalore edition has achieved a remarkable growth of 18.8% while three other top Kannada Newspapers have lost 2.9%, 1.7% and 5.3%.
In Average Issue Readership (AIR) - Udayavani Bangalore edition has grown by a steep 34.9% while two other newspapers have grown by only 1.6% and 1.4% in Bangalore edition and another newspaper has lost an AIR of 6.9%.
This was possible even under a high profile competition and zero marketing schemes. Hubli Edition picture may reflect in IRS 2011 Q2. I thank all my editorial colleagues and marketing team which made this possible. I know, it is not easy to keep the same growth trajectory everytime but will keep striving for better as always.
PS: After I started, the editorial reforms in Udayavani-Bangalore, this is the first IRS report. Hence, this was most critical for me. What else can be the happier news for me than to show such an impressive growth in the area of my operation? Feeling Cool :-)
Thank you readers and my well wishers.
Monday, June 27, 2011
ನನ್ನ ವಿರುದ್ಧ ಆರೋಪಗಳಿಗೆ ಇಗೋ ಸಮಾರೋಪ
ಈ ವರ್ಷ ಸಂಕ್ರಾಂತಿ ನನ್ನ ವೃತ್ತಿ ಜೀವನದಲ್ಲೂ ಸಂಕ್ರಾಂತಿಯ ಗಳಿಗೆ. ಆ ವೇಳೆಯಲ್ಲಿ ನಾನು ದಿಢೀರನೆ ಸುವರ್ಣ ನ್ಯೂಸ್ ಬಿಡುವ ನಿರ್ಧಾರ ಕೈಗೊಂಡಿದ್ದು, ಕನ್ನಡದ ಎರಡು ಪ್ರಮುಖ ಪತ್ರಿಕೆಗಳಲ್ಲಿ ಯಾವುದನ್ನು ಸೇರಲಿ ಎಂಬ ಆಯ್ಕೆಯ ಮುಂದೆ ಕುಳಿತು ಹಗಲೂ ರಾತ್ರಿ ಯೋಚಿಸಿದ್ದು, ನನ್ನ ಸಹೋದ್ಯೋಗಿಗಳೋಡನೆ ಈ ಕುರಿತು ಚರ್ಚಿಸಿದ್ದು, ನಂತರ ಉದಯವಾಣಿಯ ಗ್ರೂಪ್ ಎಡಿಟರ್ ಆದದ್ದು, ಯಾವುದೇ ತಯಾರಿ ಇಲ್ಲದೇ ಮೂರು ಬಜೆಟ್, ವಿಶ್ವಕಪ್ ಕ್ರಿಕೆಟ್ ಮುಂತಾದ ಪ್ರಮುಖ ದಿನಗಳ ಪತ್ರಿಕೆ ರೂಪಿಸಿದ್ದು, ದಿಢೀರನೆ ಹುಬ್ಬಳ್ಳಿ ಆವೃತ್ತಿ ಆರಂಭಿಸಿದ್ದು, ಪತ್ರಿಕೆಯ ಮುಂದಿನ 5 ವರ್ಷಗಳ ನೀಲನಕ್ಷೆ ರೂಪಿಸಲು ಕೈಹಾಕಿದ್ದು, ಮಂಗಳೂರು ಆವೃತ್ತಿಯ ವೃತ್ತಿಸೂಕ್ಷ್ಮಗಳನ್ನು ಅಭ್ಯಸಿಸಿದ್ದು, ಬೆಂಗಳೂರು ಆವೃತ್ತಿಯ ಮೂಲಸೌಕರ್ಯ ಹೆಚ್ಚಿಸಿಕೊಳ್ಳಲು ಅವಿರತ ಪ್ರಯತ್ನಿಸಿದ್ದು.... ಹೀಗೆ ಒಂದು ದಿನವೂ ಬಿಡುವಿಲ್ಲದೇ ಕಳೆದ 5 ತಿಂಗಳು ಅದು ಹೇಗೆ ಉರುಳಿತೋ ಗೊತ್ತಾಗುತ್ತಲೇ ಇಲ್ಲ. ಇದೆಲ್ಲ ಗಡಿಬಿಡಿಯಲ್ಲಿ ನಾನು ಎಷ್ಟು ಕಳೆದುಹೋದೆನೆಂದರೆ ನನಗೆ ಶುಭ ಕೋರಿದ ಎಷ್ಟೋ ಹಿತೈಷಿಗಳಿಗೆ ಒಂದು Thank You ಮೇಲ್ ಕಳಿಸಲಿಲ್ಲ. ನನ್ನ ವಿರುದ್ಧ ಕುಹಕವಾಡಿದವರು ಹಾಗೂ ವಿವಿಧ ಆಪಾದನೆ ಮಾಡಿದವರಿಗೆ ಒಮ್ಮೆಯಾದರೂ ಉತ್ತರ ನೀಡುವ ಮನಸ್ಥಿತಿಯಲ್ಲಿರಲಿಲ್ಲ. ನಾನು ಸುವರ್ಣ ಬಿಟ್ಟು ಉದಯವಾಣಿ ಸೇರುವಾಗಲೇ ಗೊತ್ತಿತ್ತು... ಎಂಥ ಕಷ್ಟದ ನಿರ್ಧಾರ ಅದು ಎಂದು. ಸಂಪಾದಕ ಅಥವಾ ಗ್ರೂಪ್ ಎಡಿಟರ್ ಎಂಬ ಆಕರ್ಷಕ ಪಟ್ಟಕ್ಕೆಲ್ಲಾ ಮೋಹಗೊಳ್ಳುವ ವ್ಯಕ್ತಿ ನಾನಲ್ಲ. ಇದು ನನ್ನನ್ನು ಬಲ್ಲ ಎಲ್ಲರಿಗೂ ಗೊತ್ತು. ನಾನಾಗಿ ಯಾವುದೇ ಹುದ್ದೆಯನ್ನು ಹುಡುಕಿಕೊಂಡು ಹೋಗಿಲ್ಲ. ಅವಾಗಿಯೇ ಬಂದ ಎಲ್ಲ exciting offerಗಳನ್ನು ಬಾಚಿಕೊಂಡವನೂ ಅಲ್ಲ. ಹಾಗೆ ನೋಡಿದರೆ, ನಾನು ಉದಯವಾಣಿ ಸೇರುವ ಹಂತದಲ್ಲೇ ಇದ್ದ ಇನ್ನೊಂದು ಅತ್ಯಾಕರ್ಷಕ ಆಹ್ವಾನ ಬಿಟ್ಟು, ಕ್ಲಿಷ್ಟ ಎನಿಸಿದರೂ ಉದಯವಾಣಿಯ ಆಯ್ಕೆಯನ್ನೇ ಕೈಗೊತ್ತಿಕೊಂಡವನು ನಾನು. ಬಹುಶಃ ನೀವೂ ಒಪ್ಪುತ್ತೀರಿ... ಕನ್ನಡ ಪತ್ರಿಕೋದ್ಯಮದಲ್ಲಿ ಉದಯವಾಣಿ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳ ಚುಕ್ಕಾಣಿ ಹಿಡಿಯುವುದು ಸುಲಭದ ವಿಷಯವಲ್ಲವೇ ಅಲ್ಲ. ಈ ಎರಡೂ ಪತ್ರಿಕೆಯ ‘ಓದುಗ-ಸಿಬ್ಬಂದಿ-ಮಾಲಿಕತ್ವ’ದ fabric ತುಂಬಾ delicate ಆದದ್ದು. ಅದರಲ್ಲಿ ಒಂದು ನೂಲನ್ನು ಅತ್ತಿತ್ತ ಮಾಡಿದರೂ ಇಡೀ ವ್ಯವಸ್ಥೆಯ ಹದ ಹಾಳಾಗುತ್ತದೆ. ಅಲ್ಲದೇ, Media Strategists ಈ ಎರಡೂ ಪತ್ರಿಕೆಗಳನ್ನು “Prisoners of their own strong fort” ಎಂದೇ ಗುರುತಿಸುತ್ತಾರೆ. ಈ ಪತ್ರಿಕೆಗಳ ಪರಂಪರಾಗತ ಹದವನ್ನೂ ಉಳಿಸಿಕೊಂಡು, ಕೋಟೆಯ ಹೊರಗೂ ಹರವನ್ನು ಹೆಚ್ಚಿಸುವುದು ಆಟದ ಮಾತಲ್ಲ ಎನ್ನುವುದು ನನಗೆ ತುಂಬಾ ಚೆನ್ನಾಗಿಗೊತ್ತು. ಇದೆಲ್ಲ ಗೊತ್ತಿದ್ದೂ ನಾನು ಉದಯವಾಣಿಯ hot-seat ಆರಿಸಿಕೊಂಡೆ ಎಂದರೆ ನಿಮಗೆ ರಾಬರ್ಟ್ ಫ್ರಾಸ್ಟ್ ಬರೆದ “The Road Not Taken” ಕವನ ನೆನಪಾಗುತ್ತಿದೆಯೇ? Well, I love challenges. I am used to challenges in all my previous 20 years. I am happy that I have made the right choice :-) ನಾನು ಉದಯವಾಣಿಯ ಗ್ರೂಪ್ ಎಡಿಟರ್ ಆಗುತ್ತೇನೆ ಎಂದಾಗ ಅನೇಕರು ಸಂತಸ ಪಟ್ಟರು. ಇನ್ನು ಅನೇಕರು ಸಂಶಯಪಟ್ಟರು. Can he fit the bill ಅಂತ! ಅದು ಸಹಜ ಬಿಡಿ. ಕನ್ನಡಪ್ರಭದಲ್ಲಿ ನಾನು ಕಾರ್ಯನಿರ್ವಾಹಕ ಸಂಪಾದಕ ಹಾಗೂ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಸಂಪಾದಕನಾಗಿ ಅನುಭವಹೊಂದಿದ್ದರೂ ಸ್ವತಂತ್ರವಾಗಿ ಪತ್ರಿಕೆಯನ್ನು ನಡೆಸುವುದು ಇದೇ ಮೊದಲ ಬಾರಿ. ಹಾಗಾಗಿ, ಅಂತಹುದೊಂದು ಸಂಶಯ ಅಸಹಜವೇನಲ್ಲ. ಹಾಗೆ ನೋಡಿದರೆ, ಮೊದಲಬಾರಿ ಸಂಪಾದಕನಾಗುವ ಎಲ್ಲ ವ್ಯಕ್ತಿಯ ಕುರಿತೂ ಇಂತಹ ಸಣ್ಣ ಸಂದೇಹ ಇದ್ದೇ ಇರುತ್ತದೆ. ಅಂದು ವಿಶ್ವೇಶ್ವರ ಭಟ್ ಹಾಗೂ ರಂಗ ಸಂಪಾದಕರಾಗುವಾಗಲೂ ಇದೇ ರೀತಿಯ ಸಂಶಯ ಇತ್ತು. ಹಾಗೂ ಹಿಂದೆ ನನ್ನನ್ನು ಕನ್ನಡಪ್ರಭದ ಸುದ್ದಿಸಂಪಾದಕನ್ನಾಗಿ ಮಾಡಿದಾಗಲೂ ನಾನು ಇಂತಹ ಸಂಶಯಕ್ಕೆ ಗ್ರಾಸನಾಗಿದ್ದೆ. ಹಾಗಾಗಿ, ಈ ಸಂಶಯಕ್ಕೆಲ್ಲ ಕಾಲವೇ ಉತ್ತರಿಸುತ್ತದೆ ಬಿಡಿ. ಅಂದಹಾಗೆ, 1996ರಿಂದ ಕನ್ನಡಪ್ರಭದಲ್ಲಿ ಏನೆಲ್ಲ ಬದಲಾವಣೆಯಾಗಿದೆ, ಅದರಲ್ಲಿ ನನ್ನ ಪಾತ್ರ ಏನು-ಎಷ್ಟು ಎಂದು ಈಗಲೂ ಕನ್ನಡಪ್ರಭದಲ್ಲಿರುವವರಿಗೆ ಗೊತ್ತು. Well, ಕನ್ನಡಪ್ರಭದಲ್ಲಿರುವವರಿಗೆ ಮಾತ್ರ ಗೊತ್ತು! ಏಕೆಂದರೆ, I always worked under shadow… the shadow of YNK, TJS George, Satya, Venkatnarayan and Ranga. I, just now, have come out of the shadow. ಈ ಹಂತದಲ್ಲಿ, ನನ್ನ ಕುರಿತು, ನನ್ನ ಸಾಮರ್ಥ್ಯ ಹಾಗೂ ಕೆಲಸದ ಕುರಿತು ಅನೇಕ ಬ್ಲಾಗುಗಳಲ್ಲಿ ಅನೇಕ ಅಭಿಪ್ರಾಯಗಳು ವ್ಯಕ್ತವಾಗಿವೆ. ನಾನು ಅವುಗಳನ್ನು ಗಮನಿಸಲೇ ಇಲ್ಲ ಎಂದು ಸುಳ್ಳು ಹೇಳುವುದಿಲ್ಲ. I read blogs and I try to take positive things out of them. In fact, ಕನ್ನಡಪತ್ರಿಕೋದ್ಯಮದಲ್ಲಿ ಬ್ಲಾಗ್ ಎಂದರೆ ಏನು ಎಂದು ಗೊತ್ತಿರದ ಕಾಲದಲ್ಲೇ ನಾನು ಬ್ಲಾಗ್ ಕುರಿತು ಭಾಷಣ ಮಾಡುತ್ತಿದ್ದೆ. ನಾನೂ ಬ್ಲಾಗ್ ಆರಂಭಿಸಿದ್ದೆ. ಆದರೆ, ಈ ಬ್ಲಾಗುಗಳು ಯಾವಾಗ ಬೇರೆಯವರನ್ನು ಬಾಯಿಗೆ ಬಂದಂತೇ ದೂಷಿಸಲು ಆರಂಭಿಸಿದವೋ ಆಗಿನಿಂದ ನಾನು ಬ್ಲಾಗುಗಳಿಂದ ಸ್ವಲ್ಪ ದೂರವಾದದ್ದು ನಿಜ. ಅದರಲ್ಲೂ ಕನ್ನಡ ಮಾಧ್ಯಮ ಕ್ಷೇತ್ರದ ವಿಮರ್ಶೆ ಮಾಡುವ ಅನೇಕ ಬ್ಲಾಗುಗಳು ಕನ್ನಡದಲ್ಲಿವೆ. ಅವುಗಳನ್ನು ಒಮ್ಮೆ ಓದಿದರೆ ಸಾಕು ಅವು ಯಾರ ವಿರೋಧಿ ಬ್ಲಾಗುಗಳು, ಯಾರ ಪರ ಬ್ಲಾಗುಗಳು ಎಂದು ಗೊತ್ತಾಗಿಬಿಡುತ್ತವೆ. ಆದರೂ, I respect their freedom of speech. ಕೆಲವೊಮ್ಮೆ ಈ ಬ್ಲಾಗುಗಳಲ್ಲಿನ speculationಗಳು ಕಚೇರಿಯ administrationನಲ್ಲಿ intruding ಅನ್ನಿಸಿದರೂ ನಾನು ಆ ಬ್ಲಾಗುಗಳನ್ನು ನನ್ನ ಕಚೇರಿಯಲ್ಲಿ block ಮಾಡಿಸಿಲ್ಲ. This is information age. ಈ ಬ್ಲಾಗುಗಳಲ್ಲಿ ಸಾಕಷ್ಟು information ಇರುತ್ತೆ. ಪಾಸಿಟಿವ್ ಆದದ್ದನ್ನು ಆರಿಸಿಕೊಳ್ಳಿ ಉಳಿದದ್ದು ಬಿಟ್ಟಾಕಿ. ಸಾಧ್ಯವಾದಷ್ಟೂ ಬ್ಲಾಗ್ ಬೈಗುಳದ ಕಾಮೆಂಟುಗಳಿಂದ ದೂರವಿರಿ – ಎನ್ನುವುದಷ್ಟೇ ನನ್ನ ಮಿತ್ರರಿಗೆ ನನ್ನ ಹಿತನುಡಿ. Good or bad ಈ ಬ್ಲಾಗುಗಳು ಕನ್ನಡಪತ್ರಿಕೋದ್ಯಮದ watchdogs ಅನ್ನುವುದನ್ನು ನಾನು ಖಂಡಿತ ಒಪ್ಪುತ್ತೇನೆ. ಆದರೆ, ಈ ಬ್ಲಾಗುಗಳಲ್ಲಿ ಪ್ರಕಟವಾಗುವ ಅಭಿಪ್ರಾಯ, ವಿಮರ್ಶೆ, ಸಲಹೆ ಸೂಚನೆಗಳಲ್ಲಿ ನನಗೆ ಕಾಣಿಸುವ ಒಂದೇ ಒಂದು ಕೊರತೆ ಅಂದರೆ – Media Economics. Ideal journalismಗೂ real journalismಗೂ ಇರುವ ದೊಡ್ಡ ಕಂದಕವೇ ಅದು. ಇಂದು ಸಂಪಾದಕರು ಅಂದರೆ ಕೇವಲ ಕಾಂಟೆಂಟ್ ತುಂಬಿಸುವ ಪತ್ರಿಕೋದ್ಯಮಿಗಳಲ್ಲ... He should always work for ROI of the media house. ಇದರ ಬಗ್ಗೆ ದೊಡ್ಡ ದೊಡ್ಡ ಚರ್ಚೆ, ವಿಮರ್ಶೆ ನಡೆಸುವುದು ಸುಲಭ ಆದರೆ ಅದರ ಕಷ್ಟ ಸಂಪಾದಕನ ಹಾಟ್ ಸೀಟಲ್ಲಿ ಕುಳಿತವರಿಗೆ ಮಾತ್ರ ಗೊತ್ತು. Thanks to Manoj Kumar Sonthalia – ಕಳೆದ 8 ವರ್ಷಗಳಲ್ಲಿ ಅವರಿಂದ ನಾನು ಮತ್ತು ರಂಗ ಕಲಿತ Media Economics ನಮ್ಮ ಈ ಜನ್ಮಪೂರ್ತಿ ಸಾಕು. ಅಂದಹಾಗೆ. ಕನ್ನಡದಲ್ಲಿ ಲಾಭ ಗಳಿಕೆಯಲ್ಲಿ ನಂಬರ್-1 ಪತ್ರಿಕೆ “ಉದಯವಾಣಿ” ಎಂಬುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ! ಈ ನಡುವೆ, ನನ್ನ ಕುರಿತು ಕೆಲ ಆರೋಪಗಳು ಕೇಳಿ ಬಂದವು. ಕೆಲವಕ್ಕೆ ಇಲ್ಲಿ ಉತ್ತರಿಸಿದ್ದೇನೆ. ಯಾವುದೇ ಕುಹಕವಿಲ್ಲ. Plain facts ಮುಂದಿಟ್ಟಿದ್ದೇನೆ. ಈ ಕುರಿತು ಚರ್ಚೆ ಮುಂದುವರಿಸುವ ಉದ್ದೇಶ ಇಲ್ಲ. ಕೆಲವು ಪ್ರಮುಖ ಆರೋಪಗಳಿಗೆ ಇದು ಸಮಾರೋಪ ಆಗಲಿ ಎಂದಷ್ಟೇ ಆಶಯ. 1 – ರವಿ ಹೆಗಡೆ ಎರಡು ಮುಖದ ವ್ಯಕ್ತಿ. ನಯವಂಚಕ. ನಗುತ್ತಲೇ ಜನರನ್ನು ಕೊಲ್ಲುವಷ್ಟು ಕ್ರೂರ ವ್ಯಕ್ತಿ. Over a period of time, ನಮ್ಮಿಂದ ಕಠಿಣ ಕ್ರಮಕ್ಕೆ ಒಳಗಾದವರು ಹೀಗೆ INTERPRET ಮಾಡುವುದು ಸಹಜ. ಆದರೆ, ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ನನಗೆ ಶತ್ರುಗಳಿಗಿಂತ ಮಿತ್ರರ ಸಂಖ್ಯೆ ಅಧಿಕ – 1:8. I think it’s a pretty good score! 2. ರಂಗ ಮತ್ತು ರವಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಂಸ್ಥೆಗಳನ್ನು ತಮ್ಮ ದಬ್ಬಾಳಿಕೆಯಿಂದ ಹಾಳುಮಾಡಿದರು. ಕನ್ನಡಪ್ರಭ ನಮ್ಮ ಕೈಗೆ ಬಂದಾಗ ಪ್ರಸರಣ ಸಂಖ್ಯೆ 48000. ನಾವು ಅಲ್ಲಿಂದ ಹೊರಬಂದಾಗ ಗರಿಷ್ಠ ಹಂತದಲ್ಲಿ 210000 ಪ್ರತಿ ಇತ್ತು. ಸುವರ್ಣ ನ್ಯೂಸಿಗೆ ನಾವು ಕಾಲಿಡುವಾಗ 28 GRP ಇತ್ತು. ಬಿಡುವ ಹಂತದಲ್ಲಿ 100ರ ಆಜುಬಾಜು ಇತ್ತು. (ವಿವಿಧ ಕಾರಣಗಳಿಗೆ ಇದು +/-30 ಪಾಯಿಂಟ್ ಹೊಯ್ದಾಡುತ್ತಿತ್ತು. ಇದು ಸಹಜ.) ಅದಕ್ಕಿಂತ ಸಂಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವ ತಂಡ ಹಾಗೂ ವ್ಯವಸ್ಥೆಯನ್ನು ಎರಡೂ ಸಂಸ್ಥೆಗಳಿಗೆ ನೀಡಿದ ಹೆಮ್ಮೆ ನಮಗಿದೆ. ಅಲ್ಲದೇ ಮಾಧ್ಯಮಗಳ ಮಾರ್ಕೆಟ್ ವ್ಯಾಲ್ಯೂಯೇಶನ್ ಹಲವು ಪಟ್ಟು ಹೆಚ್ಚಿಸಿದ್ದಕ್ಕೆ ಮಾಲಿಕರಿಬ್ಬರಿಗೂ ಸಂತೋಷವಿದೆ. ಅಂದಹಾಗೆ, ಕಂಪನಿ turn-around ಮಾಡುವಾಗ ಕೆಲವು ಕಠಿಣ ಕ್ರಮಗಳು ಅಗತ್ಯ. ಆ ಕ್ರಮಕ್ಕೆ ಒಳಗಾದವರು ನಮ್ಮ ಕುರಿತು ಒಳ್ಳೆಯ ಮಾತನ್ನು ಹೇಗೆ ಹೇಳಿಯಾರು? 3. ರವಿ ಹೆಗಡೆ ಮ್ಯಾನೇಜ್ ಮೆಂಟಿನ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ರವಿ ಹೆಗಡೆ ಕುರಿತು ಮ್ಯಾನೇಜ್ ಮೆಂಟ್ ಅಸಮಾಧಾನಗೊಂಡಿದೆ. ರವಿ ಸದ್ಯವೇ ಉದಯವಾಣಿ ಬಿಟ್ಟು ವಿಜಯ ಕರ್ನಾಟಕಕ್ಕೆ ಹೋಗುತ್ತಾರೆ. ರವಿ ಹೆಗಡೆಯನ್ನು ಶೀಘ್ರ ಕಿತ್ತುಹಾಕಲಾಗುತ್ತದೆ. ರವಿ ಹೆಗಡೆ ರಂಗನ ಚಾನಲ್ಗೆ ಹೋಗುತ್ತಾರೆ. Bull S*** 4. ರವಿ ಹೆಗಡೆ ತಮ್ಮ ವೆಬ್ಸೈಟಿನಲ್ಲಿ ತಮ್ಮ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. Transferred to Belgaum for launching and planning Kannada Prabha edition ಅಂತ ಬರೆದಿದ್ದಾರೆ. ಇದು ಸುಳ್ಳು. ಆಗ, ರವಿ ಹೆಗಡೆ ಇನ್ನೂ ಜ್ಯೂನಿಯರ್. ತಿಮ್ಮಪ್ಪ ಭಟ್ ಬೆಳಗಾವಿ ಆವೃತ್ತಿಯ ಮುಖ್ಯಸ್ಥರಾಗಿದ್ದರು. 1995ರಲ್ಲಿ ಅಪ್ರೆಂಟಿಸ್ ವರದಿಗಾರನಾಗಿ ಕನ್ನಡಪ್ರಭ ಸೇರಿದ ಮೊದಲ 3 ತಿಂಗಳು ಮಾತ್ರ ನಾನು ಮುಖ್ಯವರದಿಗಾರರಿಗೆ ವರದಿಮಾಡಿಕೊಳ್ಳುತ್ತಿದೆ. ನಂತರ As per the orders of Mr YNK, then editor ನಾನು ನೇರವಾಗಿ ವರದಿಮಾಡಿಕೊಳ್ಳುತ್ತಿದ್ದುದು ಸಂಪಾದಕರಿಗೆ ಮಾತ್ರ. ನಾನು ಯಾವ ಕೆಲಸ ಮಾಡಬೇಕು, ಎಲ್ಲಿ ಕೆಲಸ ಮಾಡಬೇಕು, ನನ್ನ ರಜಾ, ಪ್ರಮೋಷನ್ ಇತ್ಯಾದಿ ಎಲ್ಲವನ್ನೂ ತೀರ್ಮಾನಿಸುತ್ತಿದ್ದುದು ಸಂಪಾದಕರು ಮಾತ್ರ. ಟೆಕ್ನಾಲಜಿ ಕೌಶಲ್ಯ ಹಾಗೂ ಹೊಸ ಆವೃತ್ತಿ ಆರಂಭಿಸುವ ಮತ್ತು ನಡೆಸುವ ಅನುಭವ ಆಗ ಕನ್ನಡಪ್ರಭದಲ್ಲಿ ನನಗೆ ಮಾತ್ರ ಇತ್ತು. ತಿಮ್ಮಪ್ಪಭಟ್ಟರಿಗಾಗಲೀ ಇತರರಿಗಾಗಲೀ ಆ ಅನುಭವ ಇರಲಿಲ್ಲ. ಹಾಗಾಗಿ, ಸಹಜವಾಗೇ ಸಂಪಾದಕರು ನನ್ನನ್ನು ಹೈದರಾಬಾದಿನಿಂದ ಬೆಳಗಾವಿಗೆ 6 ತಿಂಗಳ ಮಟ್ಟಿಗೆ ಹೊಸ ಆವೃತ್ತಿ ಆರಂಭಿಸಲು ಕಳಿಸಿದರು. ಆವೃತ್ತಿಯ ಇನ್ ಚಾರ್ಜ್ ತಿಮ್ಮಪ್ಪ ಭಟ್ ಆಗಿದ್ದರು. ಕಂಪನಿಯ ಯೋಜನೆಯಂತೆ ಅದು ಕೇವಲ ಪ್ರಿಂಟ್ ಎಡಿಷನ್ ಆಗಿತ್ತು. ಆದರೆ, ಅದನ್ನು ಲೈವ್ ಎಡಿಷನ್ ಆಗುವಂತೆ ಯೋಜನೆ ರೂಪಿಸಿದ್ದು ಸ್ವತಃ ನಾನು. ಆವೃತ್ತಿ ಆರಂಭವಾದ ಬಳಿಕ, ನಾನು ಬೆಂಗಳೂರಿಗೆ ವರ್ಗವಾದೆ. ತಿಮ್ಮಪ್ಪ ಭಟ್ ಬೆಳಗಾವಿಯ ಮುಖ್ಯಸ್ಥರಾಗೇ ಮುಂದುವರೆದಿದ್ದರು. ನಂತರ ನಾನು ಇನ್ನೂ ಹಲವಾರು ಪ್ರಾಜೆಕ್ಟ್ ಮುಗಿಸಿ ಸುದ್ದಿ ಸಂಪಾದಕನಾದೆ. ಆಗ ಸುಮಾರು 1 ವರ್ಷ ತಿಮ್ಮಪ್ಪ ಭಟ್ ಉಪ-ಸುದ್ದಿ ಸಂಪಾದಕರಾಗಿ ನನ್ನ ಜೊತೆಯೇ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು. ನಂತರ ಅವರು ಸುದ್ದಿ ಸಂಪಾದಕರಾಗಿ ಉಷಾ ಕಿರಣಕ್ಕೆ ಹೋದರು. ಅಷ್ಟರೊಳಗೇ ನಾನು ಕನ್ನಡಪ್ರಭದ ಕಾರ್ಯನಿರ್ವಾಹಕ ಸಂಪಾದಕನೂ ಆಗಿದ್ದೆ. ಇದು ವಾಸ್ತವ. ಇಂಥ ವಿಷಯಗಳನ್ನೆಲ್ಲ ವೆಬ್ಸೈಟಿನಲ್ಲಿ ಯಾಕಾದರೂ ಸುಳ್ಳುಹೇಳಬೇಕೋ ನನಗಂತೂ ಗೊತ್ತಿಲ್ಲ! 5. ರವಿ ಹೆಗಡೆ ವಿಶ್ವೇಶ್ವರ ಭಟ್ಟರನ್ನು ಕಾಪಿ ಮಾಡಿ ಉದಯವಾಣಿಗೆ ಹೊಸ ರೂಪ ಕೊಟ್ಟಿದ್ದಾರೆ. ಅಡ್ವಾಣಿ ಅಂಕಣವನ್ನು ಕನ್ನಡಪ್ರಭದಲ್ಲಿ ಮೊದಲು ಆರಂಭಿಸಲಾಯಿತು. ಅದನ್ನು ಉದಯವಾಣಿ ಕಾಪಿ ಮಾಡಿತು. ಟ್ವೀಟರನ್ನು ವಿ.ಭಟ್ ಮೊದಲು ಬಳಸಿದರು. ರವಿ ಹೆಗಡೆ ಕಾಪಿ ಮಾಡಿದರು. ಪುಟಕ್ಕೊಂದು ಪಂಚ್ ವಿ.ಕದಲ್ಲಿ ಮಾಡಿದ ಪ್ರಯೋಗಗಳು. ಇತ್ಯಾದಿ... ಟೀಕೆ, ಹೊಗಳಿಕೆಗಳೇನೇ ಇರಲಿ... ಕನ್ನಡ ಪತ್ರಿಕೋದ್ಯಮದ ಅತ್ಯುತ್ತಮ ಸಂಪಾದಕರಲ್ಲಿ ವಿಶ್ವೇಶ್ವರ ಭಟ್ಟರು ಒಬ್ಬರು. ಅವರು ಅತ್ಯಂತ ಪ್ರಯೋಗಶೀಲ, ಸೃಜನಶೀಲ ಸಂಪಾದಕ ಎಂಬುದರಲ್ಲಿ ಎರಡು ಮಾತಿಲ್ಲವೇ ಇಲ್ಲ. ಅಲ್ಲದೇ ಅವರು ನನಗಿಂತ ಹಿರಿಯರೂ ಕೂಡ. ಕನ್ನಡಪ್ರಭದಲ್ಲಿರುವಾಗಲೇ ನಾನು ಅವರಿಂದ ಕಲಿತದ್ದು ಬೇಕಾದಷ್ಟಿದೆ. ಅವರೂ ಸಹ ಅನೇಕ ಸಲ ನನ್ನ ಬೆನ್ನುತಟ್ಟಿದ್ದಿದೆ. ನಾವಿಬ್ಬರೂ ಪರಸ್ಪರ ಗೌರವಿಸುವ ಸಂಬಂಧ ಇರಿಸಿಕೊಂಡವರು. ಅದಕ್ಕಿಂತಲೂ ಅವರು ಹಾಗೂ ನಾನು ವೈಎನ್ಕೆ ಹಾಗೂ ಟಿಜೆಎಸ್ ಗರಡಿಯಲ್ಲೇ ಪಳಗಿದವರು. ಸಮಕಾಲೀನ ಜಗತ್ತಿನ ಅತ್ಯುತ್ತಮ ಪತ್ರಿಕೋದ್ಯಮವನ್ನು ಅಳವಡಿಸಿಕೊಳ್ಳುವ ಮುಕ್ತ ಮನಸ್ಸು ಇಬ್ಬರಲ್ಲೂ ಇದೆ. ಹಾಗಾಗಿ ಭಟ್ಟರ ಪ್ರಭಾವ ನನ್ನ ಮೇಲಿರುವುದು ಸ್ವಾಭಾವಿಕ. ಹಾಗೆ ಭಟ್ಟರ ಮೇಲೂ ಹಲವು ಅತ್ಯುತ್ತಮ ಸಂಪಾದಕರ ಪ್ರಭಾವ ಇದ್ದೇ ಇರುತ್ತದೆ. ಅಂತಹ ಪ್ರಭಾವಗಳ ಪಟ್ಟಿ ಮಾಡುತ್ತಾ ಕುಳಿತುಕೊಳ್ಳುವಷ್ಟು Childish ನಾನಾಗಲಾರೆ. ಆದರೆ, ಈ ಆಡ್ವಾಣಿ ಲೇಖವಿದೆಯಲ್ಲ... ಅದನ್ನು ಮೊದಲು ಪ್ರಕಟಿಸಿದ್ದು ಉದಯವಾಣಿ. ಕನ್ನಡಪ್ರಭದಲ್ಲಿ ಆಡ್ವಾಣಿ ಅಂಕಣ ಆರಂಭವಾಗುವಕ್ಕಿಂತ ವಾರಗಟ್ಟಲೆ ಮೊದಲೇ ಆಡ್ವಾಣಿಯವರ ಅದೇ ಲೇಖನ ಪ್ರಕಟವಾಗಿತ್ತು. 13-4-2011 ಉದಯವಾಣಿಯ ಸಂಪಾದಕೀಯ ಪುಟ ನೋಡಿ. ಅದಕ್ಕೂ ಮೊದಲೇ ಅಡ್ವಾಣಿ ಲೇಖನವನ್ನು ನಾವು ಕನ್ನಡಪ್ರಭದಲ್ಲಿ ಎಷ್ಟು ಬಾರಿ ಬಳಸಿದ್ದೆವೋ ಲೆಕ್ಕವಿಲ್ಲ. ಇನ್ನು ಟ್ವಿಭಾಷಿತದ ವಿಚಾರ. ಟ್ವೀಟರ್ ಅಂದರೆ ಏನು ಅಂತ ಕನ್ನಡ ಪತ್ರಿಕೆಗಳಲ್ಲಿ ಮೊದಲ ಲೇಖನ ನಾನು ಬರೆದದ್ದು 2008ರಲ್ಲಿ. ಅಷ್ಟರಲ್ಲೇ ಕನ್ನಡದ ಅನೇಕ ಟೆಕ್ಕಿಗಳು ಟ್ವೀಟರ್ ಬಳಸುತ್ತಿದ್ದರು. ನಂತರ ಅನೇಕ ಕಾಲೇಜುಗಳಲ್ಲಿ ನಾನು ಟ್ವೀಟರ್ ಹಾಗೂ ನ್ಯೂಮೀಡಿಯಾ ಕುರಿತು ಉಪನ್ಯಾಸ ನೀಡಿದ್ದೇನೆ. I am one of the earliest (mostly first) Kannada Journalists to have twitter id. ಅಲ್ಲದೇ, ಟ್ವೀಟರನ್ನು ಕನ್ನಡಪ್ರಭದಲ್ಲೂ, ಸುವರ್ಣ ನ್ಯೂಸಲ್ಲೂ ಸಿಕ್ಕಾಪಟ್ಟೆ ಬಳಸಿಕೊಂಡಿದ್ದೇನೆ. ಇಷ್ಟಕ್ಕೂ ಕನ್ನಡಪ್ರಭದಲ್ಲಿ ಟ್ವಿಭಾಷಿತ ಆರಂಭವಾಗುವುದಕ್ಕೂ ಮೊದಲೇ, ನಾನು ಉದಯವಾಣಿ ಸೇರುವುದಕ್ಕೂ ಮೊದಲೇ, ಟ್ವೀಟರ್ ಕೋಟ್ ಎನ್ನುವ ಚುಟುಕು ಅಂಕಣ ಉದಯವಾಣಿಯಲ್ಲೇ ಇತ್ತು. ಇನ್ನು ಪುಟಕ್ಕೊಂದು ಪಂಚ್, ಹಾಸ್ಯ ಪ್ರಶ್ನೋತ್ತರದ ಬಗ್ಗೆ ಹೇಳುವುದಾದರೆ ಅವು ನಾನು ಹುಟ್ಟುವುದಕ್ಕೂ ಮೊದಲೇ ಕನ್ನಡ ಪತ್ರಿಕೋದ್ಯಮದಲ್ಲಿ ಇತ್ತು. ಹಾಗಾಗಿ,, ಇವನ್ನೆಲ್ಲ ಯಾರಿಗೋ ಒಬ್ಬರಿಗೆ ಪೇಟೆಂಟ್ ಕೊಡುವುದು ಸರಿಯಲ್ಲ ಅಂತ ನನ್ನ ಭಾವನೆ. ಆರೋಪ ಮಾಡುವವರು ಈ ಸ್ಪಷ್ಟೀಕರಣವನ್ನೆಲ್ಲ ಒಪ್ಪಲಿಕ್ಕಿಲ್ಲ. ಅವರಿಗೆ ಇನ್ನೇನಾದರೂ ಕೊಂಕು ಕಂಡೇ ಕಾಣುತ್ತದೆ. ನಾವು ನಡೆಯುತ್ತಿರುತ್ತೇವೆ ನೋಡಿ... ಎಲ್ಲೂ ಎಡವುವುದೇ ಇಲ್ಲ ಅನ್ನುವ ಭ್ರಮೆ ನನಗಿಲ್ಲ. ಕೊನೆಯದಾಗಿ – ನಾನಾಗಲೀ, ನಮ್ಮ ಪತ್ರಿಕೆಯಾಗಲೀ ಯಾರೊಂದಿಗೂ ಕಾಲು ಕೆರೆದುಕೊಂಡು ಸ್ಪರ್ಧೆಗೆ ಇಳಿದಿಲ್ಲ ಎಂದು ಸ್ಪಷ್ಟಪಡಿಸಿಬಿಡುತ್ತೇನೆ. ನಮಗೆ ನಂಬರ್ 1 ಪ್ರಸರಣ ಹೊಂದಿದ ಪತ್ರಿಕೆ ಆಗುವ ಬಯಕೆಯೂ ಇಲ್ಲ. ಅಂಥ ROI ಸ್ಕೀಮ್ ಕೂಡ ನಮ್ಮದಲ್ಲ. Our objective is to give the best possible content mix for our target readers. And ದಿನಾ ದಿನಾ ನೋಡ್ತಾ ಇರಿ... We will evolve into a better newspaper :-)
Thursday, August 20, 2009
ಸೋಷಿಯಲ್ ನೆಟ್ವರ್ಕಿಂಗ್ : ನಮ್ಮ ಜನ್ಮ ಡಬಲ್!
Life is Short ಅಂತಾರೆ ಕೆಲವರು. ಆದರೆ, ಈಗ ಇಂಟರ್ನೆಟ್ಟಿನ ‘ಸೋಶಿಯಲ್ ನೆಟ್ವರ್ಕಿಂಗ್’ನಿಂದಾಗಿ ನಮ್ಮ ಲೈಫು ಡಬಲ್ ಆಗಿದೆ! ಒಂದೇ ಬಾರಿಗೆ ಎರಡೆರಡು ಜನ್ಮ ಸಾಧ್ಯ. ಒಂದು ಭೂಲೋಕದಲ್ಲಿ. ಇನ್ನೊಂದು ಇಂಟರ್ರ್ನೆಟ್ ಲೋಕದಲ್ಲಿ! ಅದು ಸತ್ಯವೂ ಅಲ್ಲದ, ಮಿಥ್ಯವೂ ಅಲ್ಲದ, ಕನಸೂ ಅಲ್ಲದ, ನನಸೂ ಅಲ್ಲದ ಜೀವನ. ವರ್ಚುವಲ್ ಲೈಫ್. ನಾನು ಕನ್ನಡಪ್ರಭದ 'ಸಖಿ' ಪಾಕ್ಷಿಕಕ್ಕೆ ಬರೆದ ಸೋಶಿಯಲ್ ನೆಟ್ವರ್ಕಿಂಗ್ ಕುರಿತ ಲೇಖನ ಇದು.
Heyyyyy Wassup? ಏನೂ ಸ್ಕ್ರಾಪ್ಸೇ ಇಲ್ಲ?
ಏಯ್... I dumped Orkut. ಆಮ್ ಆನ್ Facebook. Dunno?
wth! (What The Hell)
hmm..
but, y?
that ssssucks
y?
ಅದ್ಯಾರಿಗೋ ನನ್ನ asl (Age, Sex, Location) ಗೊತ್ತಾಯ್ತು. ಸೋ. ಅದನ್ನ ಬಿಟ್ಟೆ.
ಬಟ್ txt ಮಾಡ್ಬೋದಿತ್ತಲ್ಲ?
Status ಅಪ್ಡೇಟ್ ಮಾಡಿದ್ನಲ್ಲಾ. Y?, ನನ್ ಟ್ವೀಟೂ ನೋಡಿಲ್ವಾ?
U on Twitter?
ss... follow me @sakhi
k. cusn (OK. See You Soon)
ಆಕೆ ಹೈದರಾಬಾದ್ನಲ್ಲಿ. ಈಕೆ ಬೆಂಗಳೂರಲ್ಲಿ. ಈ ಸಂಭಾಷಣೆ ನಡೆದದ್ದು gmail Chatನಲ್ಲಿ. ಅವರಿಬ್ಬರೂ ನೆಟ್ಮೇಟ್ಸು. ಎರಡು ವರ್ಷದಿಂದ ಫ್ರೆಂಡ್ಸು. ಒಬ್ಬರನ್ನೊಬ್ಬರು ನೋಡಿಲ್ಲ. ಇಬ್ಬರೂ ಒರಿಜಿನಲ್ ಹುಡುಗೀರಾ? ಅಥವಾ ಆನ್ಲೈನಲ್ಲಿನ ಡುಪ್ಲಿಕೇಟ್ ಅವತಾರವಾ! ಗೊತ್ತಿಲ್ಲ. ಬಟ್ ಇಟ್ಸ್ ಓಕೆ. ವರ್ಚುವಲ್ ಲೈಫ್ ಈಸ್ ವೆರೀ ಕೂಲ್.
ಈಗಿನ ಹೊಸ ಪೀಳಿಗೆಯ ಹುಡುಗ ಹುಡುಗಿಯರೇ ಹಾಗೆ. ಅವರಿಗೆ ಒಂದೇ ಬಾರಿಗೆ ಎರಡೆರಡು ಜನ್ಮವಿದೆ. ಒಂದು ಭೂಲೋಕದಲ್ಲಿ. ಇನ್ನೊಂದು ಇಂಟರ್ರ್ನೆಟ್ ಲೋಕದಲ್ಲಿ!
ಸುಳ್ಳಲ್ಲ... ಭೂಮಿಯಲ್ಲಿ ಇರೋ ಹುಡುಗ ಅಂತರ್ಜಾಲದಲ್ಲಿ ಹುಡುಗಿಯಾಗಿರಬಹುದು. ನೆಲದಲ್ಲಿ ನಾಚುತ್ತಾ ನಡೆದಾಡೋ ಹುಡುಗಿ ಇಂಟರ್ನೆಟ್ಟಲ್ಲಿ ಸಖತ್ ರೋಮ್ಯಾಂಟಿಕ್ ಆಗಿ ನಲಿದಾಡಬಹುದು. ಕನ್ನಡಿಯ ಮುಂದಿನ ಬ್ಲಾಕ್ ಬ್ಯೂಟಿ, ಕಂಪ್ಯೂಟರ್ ವಿಂಡೋದಲ್ಲಿ ಫೇರ್ ಆಂಡ್ ಲೌವ್ಲಿ ಎನಿಸಿಕೊಳ್ಳಬಹುದು. ಕಾಲೇಜು ಆವರಣದಲ್ಲಿ ಅಂತರ್ಮುಖಿ, ಅಂತರ್ಜಾಲದಲ್ಲಿ ವಾಚಾಳಿ ಸಖಿ... ಅಥವಾ ನೋ ಡೋಂಗಿ... ರಕ್ತ ಮಾಂಸದ ವಾಸ್ತವ ಜಗತ್ತಿನಲ್ಲೂ ವೈರು ಸಿಲಿಕಾನಿನ ಭ್ರಾಮಕ ಜಗತ್ತಿನಲ್ಲೂ ಆಕೆಯ ವ್ಯಕ್ತಿತ್ವ ಒಂದೇ ಆಗಿರಬಹುದು.
Life is Short ಅಂತಾರೆ ಕೆಲವರು. ಆದರೆ, ಈಗ ಇಂಟರ್ನೆಟ್ಟಿನ ‘ಸೋಶಿಯಲ್ ನೆಟ್ವರ್ಕಿಂಗ್’ನಿಂದಾಗಿ ನಮ್ಮ ಲೈಫು ಡಬಲ್ ಆಗಿದೆ! ಸತ್ತ ಮೇಲೆ ಏನಾಗ್ತೀವೋ, ಯಾವ ಲೋಕಕ್ಕೆ ಹೋಗ್ತೀವೋ ಗೊತ್ತಿಲ್ಲ. ಆದರೆ, ಈಗಿಂದೀಗ ಅಂತರ್ಜಾಲ ಲೋಕದಲ್ಲಿ ನಮಗೆ ಬೇಕಾದಂಥ ಲೈಫು ಪಡೆಯುವುದು ಸಾಧ್ಯ.
ನಿಜ ಜೀವನದಲ್ಲಿ ನಮಗೆ ಹಿತವಾಗಿರುವವರಿಗಿಂತ ಅಲರ್ಜಿಯಾಗುವವರ ಜೊತೆಯೇ ಒಡನಾಟ ಅನಿವಾರ್ಯವಾಗುತ್ತದೆ. ನಮಗೆ ಬೇಕಾದವರು ಇನ್ಯಾರಿಗೋ ಸಿಕ್ಕಿರುತ್ತಾರೆ. ಅಂತರ್ಜಾಲದ ಸೋಷಿಯಲ್ ನೆಟ್ವರ್ಕಿಂಗ್ನಲ್ಲಿ ಹಾಗಲ್ಲ. ಅಲ್ಲಿ ನಮಗೆ ಇಷ್ಟವಾಗುವಂಥವರ ಗ್ಯಾಂಗ್ ಕಟ್ಟಿಕೊಳ್ಳಬಹುದು. ಅವರ ಜೊತೆ ವಾಸ್ತವ ಜಗತ್ತಿನಷ್ಟೇ ನೈಜವಾದ ಜೀವನ ಸಾಗಿಸಬಹುದು. ನಮಗೆ ಪ್ರೀತಿಯಾಗುವಂಥ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ, ಗಂಡ, ಹೆಂಡತಿ, ನೆರೆಹೊರೆ, ಫ್ರೆಂಡ್ಸ್ ಆಂಡ್ ಫಿಲಾಸಫರ್ಗಳ ಹೊಸ ಸೋಷಿಯಲ್ ವ್ಯವಸ್ಥೆಯನ್ನೇ ಸ್ಥಾಪಿಸಿಕೊಳ್ಳಬಹುದು. ಇಂಟರ್ನೆಟ್ಟಿಗೆ ಲಾಗಿನ್ ಆದಾಗಲೆಲ್ಲ ಅವರ ಜೊತೆ ಮಾನಸಿಕ ಜೀವನ ಸಾಗಿಸಬಹುದು. ಅದು ಸತ್ಯವೂ ಅಲ್ಲದ, ಮಿಥ್ಯವೂ ಅಲ್ಲದ, ಕನಸೂ ಅಲ್ಲದ, ನನಸೂ ಅಲ್ಲದ ಜೀವನ. ವರ್ಚುವಲ್ ಲೈಫ್.
Thanks to Social Networking sites, ಇಂಟರ್ನೆಟ್ಟಿನಲ್ಲಿರುವ, ನಮಗಿಷ್ಟವಾಗುವ, ನಿಜವಾದ ವ್ಯಕ್ತಿಗಳ ಜೊತೆ ನಮ್ಮ ಒಡಲಾಳದ ತೊಳಲಾಟವನ್ನು ತೋಡಿಕೊಳ್ಳಬಹುದು. ಅಳು ಉಮ್ಮಳಿಸಿದರೆ ಅತ್ತು ಹಗುರಾಗಬಹುದು. ಸಂತೋಷವಾದಾಗ ಹಂಚಿಕೊಂಡು ಸಂಭ್ರಮಿಸಬಹುದು. ಕೀಟಲೆ ಮಾಡಬೇಕೆನಿಸಿದಾಗ ತುಂಟಾಟ ಆಡಬಹುದು, ದ್ವಂದ್ವ ಎದುರಾದಾಗ, ದಿಕ್ಕು ತೋಚದಾದಾಗ, ಧೈರ್ಯ ಕುಂದಿದಾಗ, ಅವಮಾನವನ್ನು ಎದುರಿಸಬೇಕಾದಾಗ ಯಾರದ್ದಾದರೂ ಸಲಹೆ ಬೇಕೆನಿಸಿದಾಗ... ಆಪ್ತ ಸಮಾಲೋಚನೆ ನಡೆಸಬಹುದು.
ಸೋಷಿಯಲ್ ನೆಟ್ವರ್ಕಿನ ಕಾಲೇಜು ಫ್ರೆಂಡಿಂದ ನೋಟ್ಸನ್ನೂ, ನೋಟ್ಸಿನ ಡೌಟಿಗೆ ಪರಿಹಾರವನ್ನೂ, ಅದರ ಜೊತೆಗೇ ಸ್ನೇಹವನ್ನೂ, ಪರಿಣಾಮವಾಗಿ ಪ್ರೀತಿಯನ್ನೂ, ಮುಂದುವರಿದು ರೋಮಾನ್ಸನ್ನೂ... ಥೂ ಪೋಲೀ ಗೀಲೀ ಬೇಡ... ವಿನಾಕಾರಣ ಉಲ್ಲಾಸಗೊಳ್ಳಲು ಒಂದು ಕಾರಣವನ್ನೂ ಇಂಟರ್ನೆಟ್ಟಿನ ಸೋಶಿಯಲ್ ನೆಟ್ವರ್ಕ್ ನೀಡುತ್ತದೆ.
ಭಾವನಾತ್ಮಕ ಜೀವನಕ್ಕಷ್ಟೇ ಅಲ್ಲ ಸೋಷಿಯಲ್ ನೆಟ್ವರ್ಕ್ ಅಂದರೆ, ಕೇವಲ ಭಾವನಾತ್ಮಕ ಸಾಂತ್ವನ ನೀಡುವ ‘ಇಮೋಷನಲ್ ವೆಬ್ತಾಣ’ ಅಂತೇನೂ ಭಾವಿಸಬೇಕಿಲ್ಲ. ಈ ನೆಟ್ವರ್ಕು... ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸು, ಉದ್ಯಮಿಗಳಿಗೆ ಮಾರ್ಕೆಟಿಂಗ್ ಚಾನಲ್ಲು, ರಿಟೇಲ್ ವ್ಯಾಪಾರಿಗಳಿಗೆ ಚಿಲ್ಲರೆ ಮಾರಾಟದ ಷೋರೂಮು, ಕಮಿಷನ್ ಬ್ರೋಕರ್ಗಳಿಗೆ ಕ್ಲಾಸಿಫೈಡ್ ಪೇಪರ್ರ್ಉಂ, ಸಮೀಕ್ಷೆ-ಸಂಶೋಧಕರಿಗೆ ಜನನಿಬಿಡ ಬಸ್ ಸ್ಟಾಂಡು, ಸಾಮಾನ್ಯ ಜನರಿಗೆ ಯೆಲ್ಲೋ ಪೇಜಸ್ಸು, ಉದ್ಯೋಗ ಹುಡುಕುವವರಿಗೆ ಎಚ್ಆರ್ ಕಲ್ಸಲ್ಟೆನ್ಸಿ, ಪತ್ರಕರ್ತರಿಗೆ ಸುದ್ದಿ ಸಿಗುವ ಹಾಟ್ ಸ್ಪಾಟು, ರಾಜಕಾರಣಿಗಳಿಗೆ ವಿಧಾನಸಭಾ ಕ್ಷೇತ್ರ, ಸುಮ್ಮನೆ ತಮಾಷೆ ಬೇಕಾದವರಿಗೆ ಎಂಟರ್ಟೈನ್ಮೆಂಟು, ಹೀಗೆ... ಸೋಷಿಯಲ್ ನೆಟ್ವರ್ಕು
ಅವರವರ ಭಾವಕ್ಕೆ... ಅವರವರರ ಲಾಭಕ್ಕೆ...
೨೦೦೮ರ ಅಮೆರಿಕದ ಚುನಾವಣೆಯ ಸಂದರ್ಭದಲ್ಲಿ ಬರಾಕ್ ಒಬಾಮಾ ಲಕ್ಷಾಂತರ ಜನ ಬೆಂಬಲಿಗರನ್ನೂ ಅವರಿಂದ ಮಿಲಿಯನ್ಗಟ್ಟಲೆ ದೇಣಿಗೆಯನ್ನೂ ನಂತರ ಅವರ ವೋಟನ್ನೂ ಪಡೆಯಲು ಸಾಧ್ಯವಾದದ್ದು ಸೋಷಿಯಲ್ ನೆಟ್ವರ್ಕಿಂಗ್ ಸೈಟುಗಳಿಂದ. ಇಂದು ವೋಡಾಫೋನ್ನ್ ಝೂಝೂ ಜಾಹೀರಾತು ಯೂಟ್ಯೂಬಿನಲ್ಲಿ ಲಭ್ಯ. ಆ ಜಾಹೀರಾತುಗಳಿಗೆ ಹತ್ತಾರು ಸಾವಿರ ಅಭಿಮಾನಿಗಳ ದಂಡು!
ಎರಡು ದಶಕದ ಹಿಂದೆ, ಈ-ಮೇಲ್ ಕ್ರಾಂತಿಯಾದ ಮೇಲೆ ಅಂತರ್ಜಾಲದಲ್ಲಿ ಸೋಷಿಯಲ್ ನೆಟ್ವರ್ಕಿಂಗ್ ಎಂಬ ಫಿನಾಮಿನಾ ಕೂಡ ಶುರುವಾಯಿತು. ಜಗತ್ತಿನ ಯಾವ್ಯಾವುದೋ ಭಾಗಗಳಿಂದ ಸಮಾನ ಆಸಕ್ತರು ಈ-ಮೇಲ್ ಮೂಲಕ ಗುಂಪು ಕಟ್ಟಿಕೊಳ್ಳಲಾರಂಭಿಸಿದರು. ಆದರೆ ಆಗ ಯಾರೂ ಅದನ್ನು ಸೋಷಿಯಲ್ ನೆಟ್ವರ್ಕಿಂಗ್ ಅಂತ ಕರೆಯುತ್ತಿರಲಿಲ್ಲ. ಸುಮ್ಮನೇ ‘ಈ-ಮೇಲ್ ಲಿಸ್ಟ್’ ಎನ್ನುತ್ತಿದ್ದರು. ನಂತರ, ಇದು ಫೋಟೋ, ಫೈಲು, ಕ್ಯಾಲೆಂಟರ್ ಮುಂತಾದವುಗಳನ್ನು ಹಂಚಿಕೊಳ್ಳುವ ‘ಗ್ರೂಪ್’ ಆಯಿತು. ನಂತರ, ಮದುವೆಗಾಗಿ ಗಂಡು-ಹೆಣ್ಣು ಹುಡುಕುವ ಮೆಟ್ರಿಮೋನಿಯಲ್ ತಾಣವಾಗಿ ಪ್ರವರ್ಧಮಾನಕ್ಕೆ ಬಂತು. ಇದಾದ ಮೇಲೆ, ದೀರ್ಘ ಕಾಲದ ವೈವಾಹಿಕ ಬಂಧನದ ಬದಲು, ತಕ್ಷಣದ ಮೋಜಿನ ಡೇಟಿಂಗಿಗಾಗಿ ವಿಶಾಲ ಮನಸ್ಸಿನ ಹುಡುಗ-ಹುಡುಗಿಯರನ್ನು ಅರಸುವ ಫ್ರೆಂಡ್ಫೈಂಡ್ ನೆಟ್ವರ್ಕ್ಗಳ ಭರಾಟೆ ಆರಂಭವಾಯಿತು. ಆಮೇಲೆ, ಸಜ್ಜನರೂ, ಮರ್ಯಾದಸ್ಥರೂ ತಮ್ಮ ಸಮಾನ ಮನಸ್ಕರ ಮಿತ್ರವೃಂದ ಸ್ಥಾಪಿಸಿಕೊಳ್ಳಲು ಅನುವಾಗುವ ಸೋಷಿಯಲ್ ನೆಟ್ವರ್ಕಿಂಗ್ ಸೈಟುಗಳು ಪ್ರಾರಂಭವಾದವು.
-ಹಲವು ವಿಧ
ಈಗ ಇಂಟರ್ನೆಟ್ಟಿನ ತುಂಬಾ ನೂರಾರು ಸೋಷಿಯಲ್ ನೆಟ್ವರ್ಕಿಂಗ್ ಸೈಟುಗಳು. Orkut, Myspace, Hi5, Facebookನಂಥ ಗೆಳೆಯರ ಬಳಗವಷ್ಟೇ ಅಲ್ಲ, ಬೇರೆ ಬೇರೆ ರೀತಿಯ ಸೋಷಿಯಲ್ ನೆಟ್ವರ್ಕಿಂಗ್ ಸೈಟುಗಳೂ ಆರಂಭವಾಗಿವೆ. Dig, Del.icio.us, Stumbleupon, Yahoo Buzzನಂಥ ಸೋಷಿಯಲ್, ಬುಕ್ ಮಾರ್ಕಿಂಗ್ ಸೈಟುಗಳು, Flickr, Picassaದಂಥ ಸೋಷಿಯಲ್ ಫೋಟೋ ಷೇರಿಂಗ್ ಸೈಟುಗಳು, Youtube, Vimeoದಂಥ ಸೋಷಿಯಲ್ ವಿಡಿಯೋ ಸೈಟುಗಳು, Twitter, Pingನಂಥ ಸೋಷಿಯಲ್ ಮೈಕ್ರೋ ಬ್ಲಾಗಿಂಗ್ ಸೈಟುಗಳು, Identi.caದಂಥ ಪಬ್ಲಿಕ್ ಟೈಮ್ಲೈನುಗಳು ಹೀಗೆ... ಹಲವು ವಿಧದ ಸೋಷಿಯಲ್ ನೆಟ್ವರ್ಕ್ ಆರಂಭವಾಗಿವೆ.
ಇಂದು ನಿಮ್ಮ ಈ-ಮೇಲ್ ತೆರೆದರೆ ಸಾಕು. ದಿನಕ್ಕೆ ಕನಿಷ್ಠ ಒಂದೆರಡಾದರೂ ಸೋಷಿಯಲ್ ನೆಟ್ವರ್ಕಿಗೆ ಸೇರಲು ನಿಮಗೆ ನಿಮ್ಮ ಯಾವುದೋ ಮಿತ್ರರಿಂದ ಆಹ್ವಾನ ಬಂದಿರುತ್ತದೆ. Tagged, Linkedin, Zorpia, Jaiku, Ning, yelp ಹೀಗೆ ಬೇರೆ ಬೇರೆ ವಿಚಿತ್ರ ಹೆಸರಿನ ಸೈಟಿನ ಆಹ್ವಾನಗಳು. ಕೆಲವೊಮ್ಮೆ ಈ ಆಹ್ವಾನಗಳು ಎಷ್ಟು ಕಿರಿಕಿರಿ ಉಂಟುಮಾಡುತ್ತವೆ ಅಂದರೆ, Tagged.comಗೆ ಜಗತ್ತಿನ ಅತ್ಯಂತ ಕಿರಿಕಿರಿಯ ಸೋಷಿಯಲ್ ನೆಟ್ವರ್ಕ್ ಅಂತ ಟೈಮ್ ಮ್ಯಾಗ್ಝಿನ್ ಬಿರುದು ನೀಡಿದೆ!
ಎಲ್ಲರೂ, ಎಲ್ಲ ಸೋಷಿಯಲ್ ನೆಟ್ವರ್ಕನ್ನೂ ಸೇರುವುದಾಗಲೀ, ಎಲ್ಲ ನೆಟ್ವರ್ಕ್ನಲ್ಲಿ ಇರುತ್ತೇನೆ ಎನ್ನುವುದಾಗಲೀ ಮೂರ್ಖತನ. ಹಾಗೆಯೇ, ಒಂದೂ ಸೋಷಿಯಲ್ ನೆಟ್ವರ್ಕ್ ತನಗೆ ಬೇಡ ಎನ್ನುವುದೂ ಜಾಣತನವಲ್ಲ.
ನಿಮ್ಮನ್ಯಾರೋ ಹುಡುಕುತ್ತಿದ್ದಾರೆ!
ಇಂದು ಸೋಷಿಯಲ್ ನೆಟ್ವರ್ಕಲ್ಲಿ ಇರುವುದು ಸ್ಟೈಲ್, ಫ್ಯಾಷನ್ ಅಷ್ಟೇ ಅಲ್ಲ ಅಗತ್ಯ ಕೂಡ. ಯಾರೋ ಎಲ್ಲೋ ನಿಮಗೋಸ್ಕರ ಹುಡುಕುತ್ತಿರುತ್ತಾರೆ. ಅವರಿಗೆ ನೀವು ಸಿಗಬೇಕು ಅಂದರೆ ನೀವು ಈ ನೆಟ್ವರ್ಕಿನಲ್ಲಿ ಎಲ್ಲೋ ಇರಬೇಕು.
ನಿಮ್ಮ ಬಾಲ್ಯದ ಗೆಳೆಯ, ಗೆಳತಿ, ಯಾವುದೋ ಹಂತದಲ್ಲಿ ನಿಮ್ಮಿಂದ ದೂರವಾದ ನಿಮ್ಮ ಕ್ಲಾಸ್ಮೇಟ್, ನಿಮ್ಮ ಪಕ್ಕದ್ಮನೆ ಈನಾ-ಮೀನಾ... ಯಾರೋ ನಿಮಗೋಸ್ಕರ ತಡಕಾಡುತ್ತಿರಬಹುದು. ನಿಮಗೆ ಕೆಲಸ ನೀಡಬೇಕಾದ ಕಂಪನಿ ನಿಮ್ಮ ಬಗ್ಗೆ ಮಾಹಿತಿ ಬೇಕೆಂದರೆ, ಇಂಟರ್ನೆಟ್ಲ್ಲಿ ಜಾಲಾಡುತ್ತಿರಬಹುದು. ನಿಮ್ಮ ಬಗ್ಗೆ ಲೇಖನ ಬರೆಯಲು ಬರಹಗಾರರು ಮಾಹಿತಿ ಸಂಗ್ರಹಿಸುತ್ತಿರಬಹುದು. ಯಾವುದೋ ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಪೊಲೀಸರೂ ನಿಮ್ಮ ಸುಳಿವನ್ನು ಇಂಟರ್ನೆಟ್ಟಿನಲ್ಲಿ ಪಡೆಯುತ್ತಿರಬಹುದು! ಯಾರೂ ನಿಮ್ಮ ಬಗ್ಗೆ ಇಂಟರ್ನೆಟ್ಟಿನಲ್ಲಿ ಹುಡುಕಾಡುವುದಿಲ್ಲ ಎಂದರೆ, Sorry, ನೀವು ಈ ಜಗತ್ತಿನಲ್ಲಿ ಯಾರಿಗೂ ಬೇಡವಾಗಿದ್ದೀರಿ ಅಂತ ಅರ್ಥ!
ನೀವು ಗುಗ್ಗು ಅಲ್ಲ, ಈ ಜಮಾನದವರು ಅನ್ನಿಸಿಕೊಳ್ಳಬೇಕಾದರೆ ನಿಮಗಿರುವುದು ಎರಡೇ ಆಯ್ಕೆ... ಒಳ್ಳೆಯ ಸೋಷಿಯಲ್ ನೆಟ್ವರ್ಕಿನಲ್ಲಿ ಇರುವುದು ಅಥವಾ ಒಳ್ಳೆಯ ನೆಟ್ವರ್ಕ್ ಸೇರುವುದು!
ಸೋಷಿಯಲ್ ನೆಟ್ವರ್ಕ್ ಅಂದರೆ ಏನು?
ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರಾಜಕುಮಾರ್ ಅಭಿಮಾನಿಗಳ ಬಳಗ, ಕಟ್ಟೆ ಗೆಳೆಯರ ಬಳಗ, ಯುವಕ ಸಂಘ ... ಹೀಗೆ ನೂರಾರು ಸಂಘ ಸಂಸ್ಥೆಗಳ ಹೆಸರು ಕೇಳಿದ್ದೀರಲ್ಲ. ಇವೆಲ್ಲ ವಾಸ್ತವ ಜಗತ್ತಿನ ಸೋಷಿಯಲ್ ನೆಟ್ವರ್ಕ್ಗಳು. ಅದೇ ರೀತಿ, ಇಂಟರ್ನೆಟ್ಟಿನಲ್ಲೂ ಗೆಳೆಯರ ಬಳಗವಿದೆ. ಈ ಬಳಗದಲ್ಲಿ ಜಗತ್ತಿನ ಬೇರೆ ಬೇರೆ ಪ್ರದೇಶಗಳಿಂದ, ಬೇರೆ ಬೇರೆ ವೃತ್ತಿಯ, ಬೇರೆ ಬೇರೆ ಪ್ರವೃತ್ತಿಯ, ಬೇರೆ ಬೇರೆ ವಯಸ್ಸಿನ ವ್ಯಕ್ತಿಗಳು ಸದಸ್ಯರಾಗಿರುತ್ತಾರೆ. ಈ ಸದಸ್ಯರಲ್ಲಿ ಎಲ್ಲರಿಗೂ ಎಲ್ಲರ ಪರಿಚಯವಿರುವುದಿಲ್ಲ. ಆದರೆ, ಈ ಸದಸ್ಯರು ಸಮಾನ ಆಸಕ್ತಿ ಇರುವ ವ್ಯಕ್ತಿಗಳನ್ನು ಆಯ್ದುಕೊಂಡು ಅವರ ಜೊತೆ ಮಾಹಿತಿ ಅಥವಾ ಸ್ನೇಹ ವಿನಿಮಯ ಮಾಡಿಕೊಳ್ಳುತ್ತಾರೆ. ಇಲ್ಲಿ ಮೋಜು, ಮಸ್ತಿ, ಶಿಕ್ಷಣ, ಬಿಸಿನೆಸ್, ಜಾಹೀರಾತು, ಮಾಹಿತಿ, ಸುದ್ದಿ, ಫೋಟೋಗಳು, ವಿಡಿಯೋಗಳು, ಸಂಗೀತ, ಸ್ಲೈಡ್ಷೋ ಎಲ್ಲಾ ಇರುತ್ತದೆ.
ನೆಟ್ವರ್ಕ್ ಸೇರುವಾಗ ಜಾಗೃತೆ
ಬಾಳೆಹಣ್ಣು ತಿನ್ನುವಷ್ಟೇ ಸುಲಭ ಕೆಲಸ ಇದು. ಬಹುತೇಕ ನೆಟ್ವರ್ಕ್ಗಳಿಗೆ ಉಚಿತವಾಗಿ ಸೇರಬಹುದು. ಶುಲ್ಕ ಕೊಟ್ಟರೆ ಹೆಚ್ಚುವರಿ ಸೇವೆಗಳೂ ಲಭ್ಯ. ನೆಟ್ವರ್ಕ್ ಸೇರುವಾಗ ನೀವು ಕೆಲವು ಮಾಹಿತಿಯನ್ನು ಕೊಡುತ್ತೀರಿ. ಆಗ ಈ ಟಿಪ್ಸ್ ಗಮನಿಸಿ:
೧ ನಿಮ್ಮ ಬ್ಯಾಂಕಿಂಗ್ ಸಂಬಂಧಿ ಮಾಹಿತಿ, ಈ-ಮೇಲ್ ವಿಳಾಸ, ಪಾಸ್ವರ್ಡ್ ನೀಡಲೇ ಬೇಡಿ.
೨ ಸೋಷಿಯಲ್ ನೆಟ್ವರ್ಕಿಗೆಂದೇ ಪ್ರತ್ಯೇಕ ಈ-ಮೇಲ್ ಐಡಿ ಇದ್ದರೆ ಒಳ್ಳೆಯದು. ಈ-ಮೇಲ್ ಪಾಸ್ವರ್ಡ್ ಹಾಗೂ ನೆಟ್ವರ್ಕ್ ಪಾಸ್ವರ್ಡ್ ಎಲ್ಲಾ ಬೇರೆಯಾಗಿರಲಿ.
೩ ನಿಜವಾದ ಜನ್ಮ ದಿನ ನೀಡಬೇಡಿ. ಜನ್ಮದಿನ ನಿಮ್ಮ ಹಣಕಾಸು ವಹಿವಾಟಿನಲ್ಲಿ ಪ್ರಮುಖ ಮಾಹಿತಿಗಳಲ್ಲೊಂದು.
೪ ಹೊಸ ಮಿತ್ರರನ್ನು ಮಾಡಿಕೊಳ್ಳುವಾಗ ಅವರ ಹಿನ್ನೆಲೆ ತಿಳಿದುಕೊಳ್ಳಲು ಅವಕಾಶವಿರುತ್ತದೆ. ಓದಿ ನಿಮಗೆ ಒಪ್ಪಿಗೆಯಾದರೆ ಮಾತ್ರ ಸ್ನೇಹಹಸ್ತ ಚಾಚಿ. ಒಂದುವೇಳೆ, ಎಲ್ಲರನ್ನೂ ಮಿತ್ರರನ್ನಾಗಿ ಮಾಡಿಕೊಂಡರೂ ವ್ಯವಹರಿಸುವಾಗ ಎಚ್ಚರ.
೫ ಮಿತ್ರರನ್ನು ಆಹ್ವಾನಿಸಿ ಎಂಬ ಬಟನ್ ಎಲ್ಲಾ ನೆಟ್ವರ್ಕ್ನಲ್ಲೂ ಇರುತ್ತದೆ. ಅದನ್ನು ಆದಷ್ಟೂ ಕಡಿಮೆ ಬಳಸಿ. ಇಲ್ಲದಿದ್ದರೆ ನಿಮ್ಮ ಆ ರಿಕ್ವೆಸ್ಟ್ನಿಂದ ಮಿತ್ರರಿಗೆಲ್ಲ ಕಿರಿಕಿರಿ.
ಇಲ್ಲೂ ಕ್ರಿಮಿನಲ್ಗಳಿದ್ದಾರೆ ಎಚ್ಚರ!
ಸೋಷಿಯಲ್ ನೆಟ್ವರ್ಕ್ ಅಂದರೆ... ಸುಖದ ಹೊಳೆ, ಸಂತೋಷದ ಮಳೆ ಅಂದುಕೊಳ್ಳುವ ಹಾಗಿಲ್ಲ. ಇದರಲ್ಲೂ ಅನೇಕ ಅಪಾಯಗಳಿವೆ. ಅವುಗಳ ಬಗ್ಗೆ ಜಾಗರೂಕರಾಗಿರಿ.
ಲೈಂಗಿಕ ಕಿರುಕುಳ
ಸೋಷಿಯಲ್ ನೆಟ್ವರ್ಕಿನಲ್ಲಿ ಅತ್ಯಂತ ದೊಡ್ಡ ಸಮಸ್ಯೆ ಇದು. ಇಂಟರ್ನೆಟ್ನಲ್ಲಿ ಗೋಮುಖ ವ್ಯಾಘ್ರಗಳು ಅನೇಕ. ಸಂಭಾವಿತರಂತೆ ಪರಿಚಯವಾಗುವ ಇವರು ಕ್ರಮೇಣ ರೋಮ್ಯಾಂಟಿಕ್ ಆಗುತ್ತಾರೆ. ಆಮೇಲೆ, ಸಾಧುಗಳಂತೆ, ಇಂಟರ್ನೆಟ್ಟಿನ ಹೊರಗೆ, ವಾಸ್ತವ ಜಗತ್ತಿನಲ್ಲಿ ಭೇಟಿಯಾಗಲು ಆರಂಭಿಸುತ್ತಾರೆ. ಆ ಭೇಟಿಯನ್ನು ಲೈಂಗಿಕವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.
ಅಪಹರಣ, ಕಳವು ಇತ್ಯಾದಿ
ಇಂಟರ್ನೆಟ್ ಮೂಲಕ ಪರಿಚಯವಾಗುವ ಸೋಗುಧಾರಿಗಳು, ಮಕ್ಕಳು ಹಾಗೂ ಯುವತಿಯರನ್ನು ಅಪಹರಣ ಮಾಡಿ ಒತ್ತೆ ಹಣಕ್ಕಾಗಿ ತಂದೆ ತಾಯಿಯರನ್ನು ಪೀಡಿಸಿದ ಅನೇಕ ಉದಾಹರಣೆಗಳಿವೆ. ಮನೆಯ ವಿಳಾಸ, ಮನೆಯಲ್ಲಿ ಇರುವ ವ್ಯಕ್ತಿಗಳ ಸಂಖ್ಯೆ, ಯಾವಾಗ ಮನೆಯಲ್ಲಿ ವ್ಯಕ್ತಿಗಳಿರುವುದಿಲ್ಲ ಎಂಬುದನ್ನೆಲ್ಲಾ ತಿಳಿದು ಮನೆಯನ್ನು ಕಳವು ಮಾಡಿರುವ ಘಟನೆಗಳೂ ನಡೆದಿವೆ. ನೆಟ್ ಮೂಲಕ ಪರಿಚಯವಾದ ಸ್ನೇಹದ ಮೂಲಕ ಮನೆ ಪ್ರವೇಶಿಸುವ ಕ್ರಿಮಿನಲ್ಗಳು ಕೊಲೆ ಮಾಡಿರುವ ಅಪರಾಧಗಳೂ ಜರುಗಿವೆ.
ಮಾನ ಹರಾಜು, ಅವಮಾನ
ಇಂಟರ್ನೆಟ್ಟಿನ ಇನ್ನೊಂದು ದೊಡ್ಡ ಅಪಾಯ ಇದು. ಕೆಲವು ದೂರ್ತರು ನಿಮ್ಮ ಮಾನ ಹರಾಜು ಹಾಕಲು ಅಥವಾ ನಿಮಗೆ ಅವಮಾನ ಮಾಡಲು ಸೋಷಿಯಲ್ ನೆಟ್ವರ್ಕ್ಗಳನ್ನು ಬಳಸಿಕೊಳ್ಳಬಹುದು. ನಿಮ್ಮ ಹೆಸರಿನಲ್ಲಿ ಸುಳ್ಳು ಖಾತೆ ತೆರೆದು, ಕೃತಕವಾಗಿ ಸೃಷ್ಟಿಸಿದ ನಿಮ್ಮ ನಗ್ನ ಚಿತ್ರಗಳನ್ನು ಅಥವಾ ಲೈಂಗಿಕ ಕ್ರಿಯೆಯ ಚಿತ್ರಗಳನ್ನು ನೆಟ್ವರ್ಕಿನಲ್ಲಿ ಪ್ರದರ್ಶಿಸಬಹುದು. ನಿಮ್ಮ ಬಗ್ಗೆ ಅವಾಚ್ಯ ಬೈಗುಳಗಳನ್ನೋ ಅಥವಾ ಅವಮಾನ ಮಾಡುವ ಬರಹಗಳನ್ನೋ ಹಾಕಬಹುದು. ಕೆಲವೊಮ್ಮೆ ಈ ವಿಷಯದಲ್ಲಿ ಬ್ಲಾಕ್ಮೇಲ್ ಮಾಡುವ ಸಂಭವವೂ ಇದೆ. ಅಥವಾ ಕೇವಲ ಕಿರಿಕಿರಿ ಉಂಟು ಮಾಡಲು ನಿಮ್ಮ ಮೊಬೈಲ್ ಫೋನ್ ಬಹಿರಂಗಪಡಿಸುವುದು, ಫೋನು ಮಾಡುವಂತೆ ಇತರರನ್ನು ಆಹ್ವಾನಿಸುವುದು... ಮುಂತಾದ ಕಿಡಿಗೇಡಿ ಕೆಲಸಗಳನ್ನು ಮಾಡಬಹುದು.
ಹ್ಯಾಕಿಂಗ್, ವೈಯಕ್ತಿಕ ಮಾಹಿತಿ ಕಳವು
ಇದು ಕಂಪ್ಯೂಟರಿನ ದೊಡ್ಡ ಸಮಸ್ಯೆ. ಸೋಶಿಯಲ್ ನೆಟ್ವರ್ಕ್ಲ್ಲಿ ನಿಮ್ಮ ಸ್ನೇಹ ಬೆಳೆಸಿ, ನಿಮ್ಮ ಕೆಲವು ವೈಯಕ್ತಿಕ ಮಾಹಿತಿ ಪಡೆದು ದುರುಪಯೋಗ ಮಾಡಬಹುದು. ಅಥವಾ, ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಆದ್ದರಿಂದ, ಇಂಟರ್ನೆಟ್ಟಿನಲ್ಲಿ, ಸೋಷಿಯಲ್ ಸೈಟಿನಲ್ಲಿ ಸೂಕ್ಷ್ಮವೆನಿಸುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದೂ ಬಹಿರಂಗ ಮಾಡಬೇಡಿ.
ಮಕ್ಕಳ ದುರ್ಬಳಕೆ
ಸೋಷಿಯಲ್ ನೆಟ್ವರ್ಕಿನಲ್ಲಿ ಇತ್ತೀಚೆಗೆ ಚಿಕ್ಕ ಮಕ್ಕಳು, ಹದಿಹರೆಯದವರ ಸಂಖ್ಯೆ ಹೆಚ್ಚುತ್ತಿದೆ. ಕೆಲವು ದೂರ್ತರು ಇಂಥವರ ಮೇಲೆ ಕಣ್ಣಿಟ್ಟಿರುತ್ತಾರೆ. ಚಿಕ್ಕ ಮಕ್ಕಳು ಹಾಗೂ ಹದಿಹರೆಯದವರು ತಮ್ಮ ಮುಗ್ಧತೆಯಿಂದಾಗಿ ಸುಲಭವಾಗಿ ತುತ್ತಾಗುತ್ತಾರೆ. ಈ ಬಗ್ಗೆ ಪಾಲಕರು ಹೆಚ್ಚು ಗಮನಹರಿಸಲೇಬೇಕು.
ಸೈನಿಕರ ಮಾಹಿತಿ
ತಮ್ಮ ಮಿತ್ರರು ಹಾಗೂ ಮನೆಯವರ ಜೊತೆ ಸಂಪರ್ಕದಲ್ಲಿರಲು, ಸುಮಾರು ೩೫೦೦೦ ಭಾರತೀಯ ಸೈನಿಕರು ಫೇಸ್ಬುಕ್ ಆರ್ಕುಟ್ನಂಥ ಸೋಷಿಯಲ್ ನೆಟ್ವರ್ಕ್ ಸೇರಿಕೊಂಡಿದ್ದಾರೆ. ಇವರು ಅಥವಾ ಇವರ ಸಂಬಂಧಿಕರು ಸೋಷಿಯಲ್ ನೆಟ್ವರ್ಕಿನಲ್ಲಿ ಸೈನ್ಯ ಅಥವಾ ಸೈನಿಕರ ಸಂಬಂಧಿ ಮಾಹಿತಿ, ಫೋಟೋ, ನಕಾಶೆ ಮುಂತಾದ ಮಾಹಿತಿ ನೀಡುವಾಗ ಬಹಳ ಜಾಗೃತೆ ವಹಿಸಬೇಕು. ಸೂಕ್ಷ್ಮ ವಿಷಯಗಳನ್ನು ನೀಡಲೇ ಬಾರದು ಎಂದು ಇತ್ತೀಚೆಗೆ ಭಾರತೀಯ ಸೇನೆ ಆದೇಶವನ್ನೂ ನೀಡಿದೆ. ನೀವು ಸೈನಿಕರ ಸಂಬಂಧಿಯಾಗಿದ್ದರೆ, ಸೋಷಿಯಲ್ ನೆಟ್ವರ್ಕಿನಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚು ಎಂಬುದನ್ನು ಮರೆಯಬೇಡಿ.
ಸಮಯ ಹಾಳು
ಸೋಷಿಯಲ್ ನೆಟ್ವರ್ಕ್ ಒಂಥರಾ ಅಡಿಕ್ಟಿವ್. ಇದರಲ್ಲಿ ಒಮ್ಮೆ ಮುಳುಗಿದರೆ, ಸಮಯ ಹೋದದ್ದೇ ತಿಳಿಯುವುದಿಲ್ಲ. ಹಾಗಾಗಿ, ಅನೇಕರ ಸಮಯ ವ್ಯರ್ಥವಾಗುತ್ತದೆ. ಅದಕ್ಕಾಗಿ ಸೋಷಿಯಲ್ ನೆಟ್ವರ್ಕ್ಗಳ ಬಳಕೆಯ ಮೇಲೆ ಹಿಡಿತ ಹಾಗೂ ಮಿತಿ ಇಟ್ಟುಕೊಳ್ಳುವುದು ಅಗತ್ಯ.
ನಿಮಗೆ ಯಾವ ನೆಟ್ವರ್ಕ್ ಸೂಕ್ತ? ಟಾಪ್ ೧೦ ಸಲಹೆ
೧ ಇಂದು ಇಂಟರ್ನೆಟ್ಟಿನಲ್ಲಿ ನೂರಾರು ಸೋಷಿಯಲ್ ನೆಟ್ವರ್ಕ್ಗಳಿವೆ. ಎಲ್ಲವನ್ನೂ ನೀವು ಸೇರುವುದು ಸಾಧ್ಯವೂ ಇಲ್ಲ. ತರವೂ ಅಲ್ಲ.
೨ ಯಾವ್ಯಾವುದೋ ಸೋಷಿಯಲ್ ನೆಟ್ವರ್ಕ್ ಸೇರುವಂತೆ ನಿಮಗೆ, ನಿಮ್ಮ ಗೆಳೆಯರ ಹೆಸರಿನಲ್ಲಿ, ಬರುವ ಆಹ್ವಾನಗಳನ್ನೆಲ್ಲ ನೀವು ಮನ್ನಿಸಬೇಡಿ.
೩ ಒಟ್ಟಾರೆ ೩-೪ ನೆಟ್ವರ್ಕ್ಗಳನ್ನು ನೀವು ಸೇರಿಕೊಂಡರೆ ಸಾಕು. ಅದಕ್ಕಿಂತ ಹೆಚ್ಚು ನೆಟ್ವರ್ಕ್ ಸೇರಿಕೊಂಡರೆ, ಯಾವ ನೆಟ್ವರ್ಕಿನಲ್ಲೂ ಕ್ವಾಲಿಟಿ ಟೈಮ್ ಕಳೆಯಲು ನಿಮ್ಮಿಂದ ಸಾಧ್ಯವಾಗದು.
೪ ಸಾಮಾನ್ಯ ವಿಷಯಗಳಿಗೆ ಫೇಸ್ಬುಕ್ ಅಥವಾ ಆರ್ಕುಟ್, ಸಂದೇಶ ವಿನಿಮಯಕ್ಕಾಗಿ ಟ್ವೀಟರ್ ಹಾಗೂ ವೃತ್ತಿಪರ ವಿಷಯಗಳಿಗೆ ಲಿಂಕ್ಡ್ಇನ್ ನೆಟ್ವರ್ಕ್ ಸೇರಿದರೆ ಬೇಕಾದಷ್ಟಾಯಿತು. ಈ ಮೂರು ಅಂತಾರಾಷ್ಟ್ರೀಯ ನೆಟ್ವರ್ಕ್ ಅಲ್ಲದೇ, ನಿಮ್ಮ ಭಾಷೆ, ಸಮುದಾಯ ಅಥವಾ ಆಸಕ್ತಿಗೆ ಸಂಬಂಧಿಸಿದ ಇನ್ನೊಂದು ಲೋಕಲ್ ನೆಟ್ವರ್ಕ್ ಸೇರುವುದು ಒಳ್ಳೆಯದು.
೫ Facebook.com, Orkut.comಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡರೆ ಸಾಕು. ಪ್ರಪಂಚದಲ್ಲಿ ಬೇರೆಡೆ ಅಷ್ಟೇನೂ ಪ್ರಸಿದ್ಧವಲ್ಲದಿದ್ದರೂ, ಆರ್ಕುಟ್ ಭಾರತದಲ್ಲಿ ಅತ್ಯಧಿಕ ಸದಸ್ಯರನ್ನು ಹೊಂದಿರುವ ನೆಟ್ವರ್ಕ್. ಫೇಸ್ಬುಕ್ ಜಗತ್ತಿನ ಅತ್ಯಂತ ಪ್ರಸಿದ್ಧ ನೆಟ್ವರ್ಕ್ ಆದರೆ, ಭಾರತದಲ್ಲಿ ಇದೀಗ ಜನಪ್ರಿಯವಾಗುತ್ತಿದೆ. ಅಷ್ಟು ಇಷ್ಟವಾದರೆ, ಇವೆರಡೂ ನೆಟ್ವರ್ಕ್ ಸೇರಿಕೊಂಡರೂ ಪರವಾಗಿಲ್ಲ. ಆದರೆ, ಇನ್ನಷ್ಟು ನೆಟ್ವರ್ಕ್ ಸೇರಲು ಹೋಗಬೇಡಿ.
ಈ ನೆಟ್ವರ್ಕ್ಗಳಲ್ಲಿ ಸಮಾನ ಮನಸ್ಕರನ್ನು ಹುಡುಕಬಹುದು. ಅವರ ಬಗ್ಗೆ ಮಾಹಿತಿ ತಿಳಿದುಕೊಂಡು ಹೊಸ ಮಿತ್ರರನ್ನು ಮಾಡಿಕೊಳ್ಳಬಹುದು. ಅವರೊಡನೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಫೋಟೋ, ವಿಡಿಯೋ, ಎಂಪಿಥ್ರೀ ಮುಂತಾದವುಗಳನ್ನು ಹಂಚಿಕೊಳ್ಳಬಹುದು. ಆಟ ಆಡಬಹುದು, ವಿವಿಧ ಮೋಜಿನ ಕ್ವಿಝ್, ಜ್ಯೋತಿಷ್ಯ, ಪರ್ಸ್ನಾಲಿಟಿ ಟೆಸ್ಟ್ನಲ್ಲಿ ಪಾಲ್ಗೊಳ್ಳಬಹುದು. ವರ್ಚುವಲ್ ಗಿಫ್ಟ್, ಗ್ರೀಟಿಂಗ್ ಕಳಿಸಬಹುದು. ಮಿತ್ರರ ಕಾಲೆಳೆಯಬಹುದು ಅಥವಾ ಇಲ್ಲಿ ಸೀರಿಯಸ್ ಬಿಸಿನೆಸ್ ಕನ್ಸಲ್ಟನ್ಸಿ ನಡೆಸಬಹುದು. ಇವೆರಡೂ ಮೋಸ್ಟ್ ಫ್ಲೆಕ್ಸಿಬಲ್ ಹಾಗೂ ಮೋಸ್ಟ್ ಪವರ್ಫುಲ್ ನೆಟ್ವರ್ಕ್ಗಳು.
೬ Twitter.com ಇದು ಜಗತ್ತಿನ ಹೊಸ ಕ್ರೇಜ್. ನೀವು ಸದ್ಯಕ್ಕೆ ಸೇರಬಹುದಾದ ಇನ್ನೊಂದು ರೀತಿಯ ಅತ್ಯುತ್ತಮ ನೆಟ್ವರ್ಕ್. ಎಸ್ಎಂಎಸ್ಸನ್ನು ಆನಂದಿಸುವಂಥ ಅನುಭವನ್ನು ಈ ನೆಟ್ವರ್ಕ್ ನೀಡುತ್ತದೆ. ಇದು ಅತ್ಯಂತ ವೇಗದ ಸುದ್ದಿ ಪ್ರಸಾರ ಮಾಡಲು ಹಾಗೂ ಸುದ್ದಿ ತಿಳಿಯಲು ಉಪಯುಕ್ತ ಮೈಕ್ರೋ ಬ್ಲಾಗಿಂಗ್ ನೆಟ್ವರ್ಕ್. ಒಂದು ಸಂದೇಶದಲ್ಲಿ ೧೪೦ ಅಕ್ಷರಗಳನ್ನು ಮಾತ್ರ ಬರೆಯಲು ಸಾಧ್ಯ.
‘ಬೆಂಗಳೂರಿನಲ್ಲಿ ಗಡ್ಬಡ್ ಐಸ್ಕ್ರೀಮ್ ಎಲ್ಲಿ ಚೆನ್ನಾಗಿದೆ? ಕಡಿಮೆ ದರದಲ್ಲಿ ಅತ್ಯುತ್ತಮ ಡ್ರೆಸ್ ಮಟೀರಿಯಲ್ ಎಲ್ಲಿ ಸಿಗುತ್ತದೆ? ಐಎಫ್ಬಿ ವಾಷಿಂಗ್ ಮಷಿನ್ ಬೆಟರ್ರ್ಓ ಎಲ್ಜಿಯೋ’ -ಇಂಥ ಪ್ರಶ್ನೆಯನ್ನೂ ಈ ಟ್ವೀಟರ್ನಲ್ಲಿ ಕೇಳಬಹುದು. ಆಗ, ಟ್ವೀಟರ್ ನೆಟ್ವರ್ಕಿನ ಮಿತ್ರರು ಉತ್ತರ ನೀಡುತ್ತಾರೆ. ಬಹಳಷ್ಟು ಜನ ಇಂಥ ಉಪಯೋಗಕ್ಕೆ ಟ್ವೀಟರನ್ನು ಬಳಸುತ್ತಿದ್ದಾರೆ. ನಿಮಗೂ ಉಪಯೋಗವಾದೀತು.
೭ Linkedin.com ವೃತ್ತಿಪರರು ಹಾಗೂ ಉದ್ಯೋಗಸ್ಥರು ಸೇರಬಹುದಾದ ಇನ್ನೊಂದು ಸೋಷಿಯಲ್ ನೆಟ್ವರ್ಕ್. ಇದೊಂದು ವೃತ್ತಿಪರರ ಡೈರಕ್ಟರಿ ಅಂದರೂ ಪರವಾಗಿಲ್ಲ. ಇತರ ವೃತ್ತಿಪರರ ಜೊತೆ ಸಂವಹನ ನಡೆಸಲು, ಅವರ ವೃತ್ತಿ ಹಿನ್ನೆಲೆ ತಿಳಿದುಕೊಳ್ಳಲು, ಬಿಸಿನೆಸ್ ಅಥವಾ ವೃತ್ತಿಪರ ಸಂಬಂಧ ಬೆಳೆಸಲು ಈ ನೆಟ್ವರ್ಕ್ ಉಪಯುಕ್ತ. ಆದರೆ, ಕೇವಲ ನೌಕರಿ ಹುಡುಕಲು ಆಸಕ್ತರಾಗಿರುವವರು Naukri.com ನೆಟ್ವರ್ಕ್ ಸೇರಬಹುದು.
೮ ಈ ಮೇಲಿನ ಮೂರು ಅಂತಾರಾಷ್ಟ್ರೀಯ ನೆಟ್ವರ್ಕ್ ಹೊರತಾಗಿ ನೀವು ಸೇರಬಹುದಾದ ಇನ್ನೊಂದು ಲೋಕಲ್ ನೆಟ್ವರ್ಕ್ KannadaBlogs.ning.com. ಕನ್ನಡದಲ್ಲಿ ಬ್ಲಾಗಿಂಗ್ ಚಟುವಟಿಕೆ ಸಾಕಷ್ಟು ನಡೆಯುತ್ತಿದೆ. ಆದರೆ, ಅವೆಲ್ಲ ಚದುರಿಹೋಗಿರುವುದರಿಂದ ಯಾರ ಬ್ಲಾಗ್ ಎಲ್ಲಿದೆ? ಯಾವ ಬ್ಲಾಗಿನಲ್ಲಿ ಹೊಸದೇನಿದೆ? ಎಂದು ತಿಳಿಯುವುದು ಕಷ್ಟ. ಈ ಹಿನ್ನೆಲೆಯಲ್ಲಿ, KannadaBlogs.ning.com. ಎಂಬ ಕನ್ನಡ ಬ್ಲಾಗಿಗರ ಕೂಟ ಸೇರಬಹುದು.
೯ ಫೋಟೋ ವಿನಿಮಯಕ್ಕೆ Flickr.comಉತ್ತಮ ನೆಟ್ವರ್ಕ್. ಆದರೆ, ಉಚಿತ ಬಳಕೆದಾರರಿಗೆ ಈ ನೆಟ್ವರ್ಕಿನಲ್ಲಿ ಕಡಿವಾಣ ಹೆಚ್ಚು. ಅದಕ್ಕಾಗಿ, PicasaWeb.com ನೆಟ್ವರ್ಕ್ ಬಳಸಬಹುದು. ವಿಡಿಯೋ ವಿನಿಮಯಕ್ಕಾಗಿ YouTube.com ಉತ್ತಮ ನೆಟ್ವರ್ಕ್.
೧೦ ಇದಲ್ಲದೇ, ಸ್ಲೈಡ್ ವಿನಿಮಯಕ್ಕೆ Slide.com ಅಥವಾ SlideShare.net ಸೇರಬಹುದು.
Wednesday, August 19, 2009
ಪುಟ ವಿನ್ಯಾಸ - ಜಿಲ್ಲಾ ಪತ್ರಿಕೆಗಳಿಗೆ ಒಂದು ಕಾರ್ಯಾಗಾರ
ಇತ್ತೀಚೆಗೆ ಸಂಯುಕ್ತ ಕರ್ನಾಟಕ ಹಾಗೂ ಹೊಸ ದಿಗಂತ ಪತ್ರಿಕೆಗಳು ಹೊಸ ರೂಪ ಪಡೆಯುವುದರೊಂದಿಗೆ ರಾಜ್ಯ ಮಟ್ಟದ ಕನ್ನಡ ಪತ್ರಿಕೆಗಳೆಲ್ಲಾ ಒಂದು ಸುತ್ತು ಮರುವಿನ್ಯಾಸ ಪ್ರಕ್ರಿಯೆಗೆ ಒಳಗಾದಂತಾಗಿದೆ. ಈಗ ಕನ್ನಡಪತ್ರಿಕಾ ಕಚೇರಿಗಳಲ್ಲೆಲ್ಲಾ Newspaper Design ಎನ್ನುವುದು Buzz word. ಮುಂದಿನ ತಯಾರಿ ಗ್ರಾಮೀಣ ಹಾಗೂ ಜಿಲ್ಲಾ ಪತ್ರಿಕೆಗಳದ್ದು. ಕರ್ನಾಟಕ ಮಾಧ್ಯಮ ಅಕಾಡೆಮಿ ಇತ್ತೀಚೆಗೆ ಕೋಲಾರ ಜಿಲ್ಲಾ ಮಟ್ಟದ ಪತ್ರಿಕೆಗಳಿಗಾಗಿ ಒಂದು ಕಾರ್ಯಾಗಾರ ಏರ್ಪಡಿಸಿತ್ತು. ಅಲ್ಲಿ ನಾನು ಪುಟ ವಿನ್ಯಾಸದ ಮೂಲ ತತ್ವಗಳ ಕುರಿತು ನೀಡಿದ ಒಂದೂವರೆಗಂಟೆಯ ಪ್ರಸೆಂಟೇಶನ್ ಇದು. [ ppt ಇಂಗ್ಲೀಷಿನಲ್ಲಿದ್ದರೂ ವಿವರಣೆ ನೀಡಿದ್ದು ಕನ್ನಡದಲ್ಲಿ :-) ]