Tuesday, December 27, 2005

ಹಿಸ್‌ ನೇಮ್‌ ಈಸ್‌ ಸ್ಟಿಂಗ್‌... ಧರಂ ‘ಸ್ಟಿಂಗ್‌’

‘ಆಪರೇಷನ್‌ ಸುನಾಮಿ’ ಕುರಿತು ಸಂತಾ ಸ್ಟಿಂಗ್‌ಗೆ ಬಂತಾ ಸ್ಟಿಂಗ್‌ ಇಂಟರೆ‘ಸ್ಟಿಂಗ್‌’ ಪತ್ರ


ಸುನಾಮಿಯ೦ತೆ ೨೦ ಸ೦ಸದರ ಮೇಲೆ ಟೀವಿ ಚಾನಲ್ ಗಳ ‘ಸ್ಟಿ೦ಗ್ ಆಪರೇಷನ್’ ಎರಗಿದ್ದೇ ತಡ ‘ಸ್ಟಿ೦ಗ್’ ಅನ್ನೋದು ‘ಬ್ಲಾ-ಸ್ಟಿ೦ಗ್’ ಆಗಿದೆ! ದುರ್ಯೋಧನ, ಚಕ್ರವ್ಯೂಹದ೦ಥ ಸ್ಟಿ೦ಗ್ ಆಪರೇಷನ್ ನೋಡಿದ ಮೇಲೆ ನಮ್ಮ ಸ೦ಸದರ ಬಗ್ಗೆ ನನಗೆ ಗೌರವ ಹೆಚ್ಚಾಗಿದೆ! ಅವರ ಬಗ್ಗೆ ಇಷ್ಟು ದಿನ ತಪ್ಪು ತಿಳಿದುಕೊ೦ಡಿದ್ದೆ ಎ೦ದು ವಿಷಾದವಾಗಿದೆ.

ಓಯೆ... ಸಂತಾ ಸ್ಟಿಂಗ್‌
ನಿನ್ನ ಹೆಸರನ್ನ ಸಿಂಗ್‌ ಬದಲು ಸ್ಟಿಂಗ್‌ ಅಂತ ನಾನ್ಯಾಕೆ ಬದಲಾಯಿಸಿದೆ ಗೊತ್ತಾ? ಈ ಹೆಸರು ಒಂಥರಾ ಇಂಟರೆ-ಸ್ಟಿಂಗ್‌ ಆಗಿದೆ ಅಲ್ವಾ... ಅದಕ್ಕೆ.


ಕಳೆದ ವರ್ಷ ಡಿಸೆಂಬರ್‌ ೨೬ಕ್ಕಿಂತ ಮೊದಲು ಭಾರತ ದೇಶದ ೧೦೦ ಕೋಟಿ ಜನಸಂಖ್ಯೆಯಲ್ಲಿ ೯೯.೯೯ ಕೋಟಿ ಜನರಿಗೆ ಸುನಾಮಿ ಅನ್ನೋ ಶಬ್ದವೇ ಗೊತ್ತಿರಲಿಲ್ಲ... ಗೊತ್ತಾ? ಭಾರತೀಯರು ಸುನಾಮಿಯನ್ನು ಕಂಡಿರಲಿಲ್ಲ. ಕೇಳಿರಲಿಲ್ಲ. ಓದಿರಲಿಲ್ಲ. ಆದರೆ, ಕೇವಲ ಒಂದೇ ವರ್ಷದಲ್ಲಿ ಎಂಥಾ ಬದಲಾವಣೆ ನೋಡು! ಇವತ್ತು ಮತ್ತೆ ಡಿಸೆಂಬರ್‌ ೨೬. ಯಾರನ್ನು ಬೇಕಾದರೂ ಕೇಳು... ಸುನಾಮಿ ಅಂದರೆ ಏನು ಅಂತ ಚಿಕ್ಕ ಭಾಷಣ ಕೊಡುತ್ತಾರೆ. ಜೋರಾಗಿ ಮಳೆ ಬಂದರೆ ‘ಗಗನ ಸುನಾಮಿ’ ಅಂತ ವರ್ಣಿಸುತ್ತಾರೆ. ವಿಪರೀತ ಪ್ರಶ್ನೆ ಕೇಳಿದರೆ ‘ಪ್ರಶ್ನೆ ಸುನಾಮಿ’ ಅಂತ ಛೇಡಿಸುತ್ತಾರೆ. ಪದೇ ಪದೇ ಮನೆಗೆ ಬಂದು ಕಾಟ ಕೊಡುವ ಅತಿಥಿಯನ್ನು ‘ಗೆಸ್ಟ್‌ ಸುನಾಮಿ’ ಅಂತ ಮೂದಲಿಸುತ್ತಾರೆ. ದೇವೇಗೌಡರು ಪದೇ ಪದೇ ಬರೆಯುವ ಪತ್ರಗಳಿಗೆ ‘ಪತ್ರ ಸುನಾಮಿ’ ಅಂತಾರೆ. ಯಡಿಯೂರಪ್ಪ ವಾಗ್ದಾಳಿಗೆ ‘ವಾಗ್ಸುನಾಮಿ’ ಅಂತಾರೆ. ಪದೇ ಪದೇ ಹೃದಯಕ್ಕಪ್ಪಳಿಸುವ ಹುಡುಗಿಗೆ ‘ಪ್ರೀತಿಯ ಸುನಾಮಿ’ ಅಂತಾರೆ. ರಭಸವಾಗಿ ನುಗ್ಗುವ ಧಡಿಯನಿಗೆ ‘ಮಾನವ ಸುನಾಮಿ’ ಅಂತಾರೆ... ಒಂದರ ಹಿಂದೆ ಒಂದರಂತೆ ವಕ್ಕರಿಸುವ ರಕ್ಕಸ ಅಲೆಗಳ ಈ ‘ಸುನಾಮಿ’ ಈಗ ಜನರ ಬಾಯಲ್ಲಿ ಹೇಗೆ ವಿಧ ವಿಧ ರೂಪ ಹಾಗೂ ಅರ್ಥ ಪಡೆದುಕೊಂಡಿದೆ ನೋಡು! ಜನಸಾಮಾನ್ಯರ ಡಿಕ್ಷನರಿಯಲ್ಲಿ ಸುನಾಮಿ ಅನ್ನೋ ಶಬ್ದ ಅಯಾಚಿತವಾಗಿ ಹೇಗೆ ಸೇರಿಕೊಂಡಿತು ನೋಡು!


ಅದೇ ರೀತಿ... ಕಳೆದ ಒಂದು ವರ್ಷದಲ್ಲಿ ಜನಸಾಮಾನ್ಯರ ಡಿಕ್ಷನರಿ ಸೇರಿಕೊಂಡ ಇನ್ನೊಂದು ಪ್ರಮುಖ ಶಬ್ದಾರ್ಥ- ‘ಸ್ಟಿಂಗ್‌ ಆಪರೇಷನ್‌’!


೪ ವರ್ಷಗಳ ಹಿಂದೆ ತೆಹಲ್ಕಾ ಡಾಟ್‌ ಕಾಮ್‌ ಸ್ಟಿಂಗ್‌ ಆಪರೇಷನ್‌ ನಡೆಸಿದರೂ ಜನರ ನಿಘಂಟು ಸೇರದ ಈ ‘ಸ್ಟಿಂಗ್‌’ ಕಳೆದ ಏಳೆಂಟು ತಿಂಗಳಲ್ಲಿ ಜನಮನದಲ್ಲಿ ಎಕ್ಸಿ-ಸ್ಟಿಂಗ್‌. ಬಾಲಿಮಡ್‌ ನಟ ಶಕ್ತಿ ಕಪೂರ್‌ ವಿರುದ್ಧ ‘ಇಂಡಿಯಾ ಟೀವಿ ಚಾನೆಲ್‌’ ಗುಪ್ತ ಕಾರ್ಯಾಚರಣೆ ನಡೆಸಿದ ನಂತರ ಈ ‘ಸ್ಟಿಂಗ್‌ ಪತ್ರಿಕೋದ್ಯಮ’ ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚು ಪರ್ಸಿ-ಸ್ಟಿಂಗ್‌. ಆದರೆ, ಈ ತಿಂಗಳು, ಸುನಾಮಿಯಂತೆ ೨೦ ಸಂಸದರ ಮೇಲೆ ಟೀವಿ ಚಾನಲ್‌ಗಳ ‘ಸ್ಟಿಂಗ್‌ ಆಪರೇಷನ್‌’ ಎರಗಿದ್ದೇ ತಡ... ‘ಸ್ಟಿಂಗ್‌’ ಅನ್ನೋದು ‘ಬ್ಲಾ-ಸ್ಟಿಂಗ್‌’ ಆಗಿದೆ! ಈ ವರ್ಷ ಹಲವಾರು ಹೊಸ ಸುದ್ದಿ ಚಾನೆಲ್‌ಗಳು ಆರಂಭವಾಗಿವೆ. ಈ ಸ್ಪರ್ಧೆಯಲ್ಲಿ ಜನರ ಮನ ಗೆಲ್ಲಲು ಆ ಚಾನಲ್‌ಗಳೆಲ್ಲ ಅನುಸರಿಸುತ್ತಿರುವ ಪ್ರಮುಖ ವಿಧಾನ ಸ್ಟಿಂಗ್‌ ಆಪರೇಷನ್‌.


ಹೀಗಾಗಿ... ಸ್ಟಿಂಗ್‌ ಎನ್ನುವ ಲೇಟೆಸ್ಟ್‌ ಫ್ಯಾಷನ್‌ ಟ್ರೆಂಡಿಗೆ ಜನ ಈಗ ತಾನೇ ಅಡ್ಜೆ-ಸ್ಟಿಂಗ್‌. ಸ್ಟಿಂಗ್‌ ಅಂದರೆ ರಾಜಕಾರಣಿಗಳು ಒಮ್ಮೆ ಬೆಚ್ಚಿಬೀಳುತ್ತಾರೆ. ಉಳಿದವರು ಒಮ್ಮೆ ಕಿವಿ ನಿಮಿರಿಸುತ್ತಾರೆ. ಆದರೆ, ಎಲ್ಲರೂ ಒಮ್ಮೆ ಗಮನಹರಿಸುತ್ತಾರೆ. ಅದಕ್ಕೇ ಜನರ ಗಮನ ಸೆಳೆಯಲು ನಾನು ಸಿಂಗ್‌ ಅನ್ನೋ ಹಳೇ ಹೆಸರನ್ನ ಸ್ಟಿಂಗ್‌ ಅಂತ ಮಾಡರ್ನ್‌ ಮಾಡಿದ್ದೇನೆ... ಅರ್ಥವಾಯಿತಾ, ಸಂತಾ ಸ್ಟಿಂಗ್‌?


ಎಕ್ಚುವಲಿ, ಇನ್ನೂ ಅನೇಕರ ಹೆಸರನ್ನು ಬದಲು ಮಾಡೋದಕ್ಕೂ ನಾನೀಗ ಅಸಿ-ಸ್ಟಿಂಗ್‌. ಸದ್ಯಕ್ಕೆ ಕೆಲಮ ಹೆಸರನ್ನು ಟೆ-ಸ್ಟಿಂಗ್‌... ಉದಾಹರಣೆಗೆ ಧರಂ ಸ್ಟಿಂಗ್‌, ಸಂಗ್ರಾಂ ಸ್ಟಿಂಗ್‌, ಅಜಯ್‌ ಕುಮಾರ್‌ ಸ್ಟಿಂಗ್‌, ಮನಮೋಹನ ಸ್ಟಿಂಗ್‌, ನಟ್ವರ್‌ ಸ್ಟಿಂಗ್‌... ಇತ್ಯಾದಿ!


ಬೈ ದ ವೇ, ಇತ್ತೀಚಿನ ಸ್ಟಿಂಗ್‌ ಆಪರೇಷನ್‌ನಲ್ಲಿ ೧೧ ಸಂಸದರು ಉಚ್ಚಾಟನೆಗೊಂಡರಲ್ಲ. ಅವರನ್ನೆಲ್ಲ ನೋಡಿದರೆ, ಪಾಪ ಅನ್ನಿಸುತ್ತದೆ. ಯಾಕೆಂದರೆ, ಅವರು ಪ್ರಶ್ನೆ ಕೇಳೋದಕ್ಕೆ ತಗೊಂಡಿದ್ದ ಹಣವಾದರೂ ಎಷ್ಟು? ಇಪ್ಪತ್ತೋ, ಐವತ್ತೋ ಸಾವಿರ ರುಪಾಯಿ ಮಾತ್ರ. ಇಷ್ಟು ಕಡಿಮೆ ಲಂಚ ಪಡೆದರೆ ಅವರಿಗೆ ಉಚ್ಚಾಟನೆಯಂಥ ಘನ ಘೋರ ಶಿಕ್ಷೆಯೇ? ಮತ್ತೆಂದೂ ಪ್ರಶ್ನೆ ಕೇಳಲು ಲಂಚ ಪಡೆಯಲಾಗದಂಥ ಅವಸ್ಥೆಯೇ! ಅಂತ ಆಡ್ವಾಣಿಯವರು ಕೆಂಡ ಕಾರಿದ್ದಾರೆ.


ನನಗೂ ಆಡ್ವಾಣಿಯವರು ಹೇಳಿದ್ದು ಸರಿ ಅನ್ನಿಸುತ್ತಿದೆ. ಸಂಸದರು ಇಷ್ಟೇ ಇಷ್ಟು ಲಂಚ ತಿಂದರೆ ದೇಶದ ಮಾನ ಎಷ್ಟು ಮಹಾ ಹೋದೀತು! ಸ್ವಲ್ಪ ಮಾನ ಹೋಗಿರಬಹುದು. ಆದರೆ, ಈ ಸಂಸದರನ್ನು ನೋಡಿ ವ್ಯಥೆಯಾಗುತ್ತಿದೆ. ಎಷ್ಟು ಕಡಿಮೆ ಲಂಚಕ್ಕೂ ಕೈಚಾಚುವ ಪರಿಸ್ಥಿತಿ ಅವರಿಗೆ ಇದೆಯಲ್ಲಾ ಎಂದು ಕನಿಕರ ಉಂಟಾಗುತ್ತಿದೆ. ಎಲ್ಲಾ ಬಿಟ್ಟು ಸದನದಲ್ಲಿ ಪ್ರಶ್ನೆ ಕೇಳುಮದಕ್ಕೂ ಲಂಚ ಪಡೆಯುವಂಥ ಹೀನ ಪರಿಸ್ಥಿತಿ ಅವರಿಗೆ ಬಂದೊದಗಿದೆಯಲ್ಲಾ ಎಂದು ದುಃಖವಾಗುತ್ತಿದೆ. ಈ ಸಂಸದರಿಗೆ ಬೇರೆ ಯಾಮದಾದರೂ ರೀತಿಯಲ್ಲಿ ಕೋಟಿಗಟ್ಟಲೆ ಹಣವನ್ನು ಸುಲಭವಾಗಿ ಸಂಪಾದಿಸುವ ಅವಕಾಶ ಸಿಗಲಿಲ್ಲವಲ್ಲಾ ಅಂತ ಖೇದವಾಗುತ್ತಿದೆ. ಅಂಥ ಅವಕಾಶ ಸಿಕ್ಕಿದ್ದರೆ ಇವರೆಲ್ಲ ಈ ಪುಡಿಗಾಸಿಗೆ ಕೈಚಾಚುತ್ತಿದ್ದರೇ... ನೀನೇ ಹೇಳು!


ಒಂದು ದೃಷ್ಟಿಯಲ್ಲಿ ನೋಡಿದರೆ, ಈ ಸ್ಟಿಂಗ್‌ ಆಪರೇಷನ್‌ನಿಂದ ನಮ್ಮ ಸಂಸದರ ಬಗ್ಗೆ ನನಗೆ ಗೌರವ ಹೆಚ್ಚಾಗಿದೆ! ಏಕೆಂದರೆ, ಈ ಸಂಸದರು ಮತ್ತು ರಾಜಕಾರಣಿಗಳು ಹತ್ತಿಪ್ಪತ್ತು ಸಾವಿರಕ್ಕೆಲ್ಲ ಯಾವ ಕೆಲಸವನ್ನೂ ಮಾಡಿಕೊಡುಮದಿಲ್ಲ ಅಂದುಕೊಂಡಿದ್ದೆ. ಲಕ್ಷಾಂತರ, ಕೋಟ್ಯಂತರ ರುಪಾಯಿ ಲಂಚ ಕೊಟ್ಟರೆ ಮಾತ್ರ ಇವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ತಪುý್ಪ ಕಲ್ಪನೆ ನನ್ನಲ್ಲಿತ್ತು. ಆದರೆ, ಇಷ್ಟು ಕಡಿಮೆ ಲಂಚಕ್ಕೂ ಇವರು ಸಂಸತ್ತಿನಲ್ಲಿ ತಮ್ಮ ಗಿರಾಕಿಗಳ ಕೆಲಸ ಮಾಡಿಕೊಟ್ಟರು ಎನ್ನುಮದು ನಮ್ಮ ಸಂಸದರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ. ಲಂಚದ ಬಾಬತ್ತು ಕಡಿಮೆಯಾಯಿತು ಎಂದು ಸಂಸದರು ಪ್ರಶ್ನೆ ಕೇಳದೇ ಇರಲಿಲ್ಲ. ಗಿರಾಕಿಗಳಿಗೆ ಮೋಸ ಮಾಡಲಿಲ್ಲ ಎನ್ನುಮದು ಶ್ಲಾಘನೀಯವೇ ಸರಿ.


ನಮ್ಮ ಕರ್ನಾಟಕದ ಸಂಸದರೂ ಇದ್ದಾರೆ. ವೆರಿಗುಡ್‌ ಪೀಪಲ್‌... ಬಟ್‌ ಗುಡ್‌ ಫಾರ್‌ ನಥಿಂಗ್‌! ಇವರು ಲಂಚ ಪಡೆದಾದರೂ ರಾಜ್ಯದ ಜನತೆಯ ಕೆಲಸ ಮಾಡಬಹುದಿತ್ತು ಅನಿಸುತ್ತಿದೆ ನನಗೆ!


ಹಾಗೆ ನೋಡಿದರೆ, ನಮ್ಮ ಸಂಸದರಿಗಿಂತ ಸರ್ಕಾರಿ ಅಧಿಕಾರಿಗಳೇ ಬೆಟರ್ರು. ಯಾಕೆಂದರೆ, ಲಂಚ ಪಡೆದಾದರೂ ಜನರ ಕೆಲಸ ಮಾಡಿಕೊಡುತ್ತಾರೆ. ಸಂಸದರಿಗಿಂತ ಈ ಅಧಿಕಾರಿಗಳು ಸ್ವಲ್ಪ ದುಬಾರಿ ಎನ್ನಿ. ಉದಾಹರಣೆಗೆ, ಒಂದು ಸೈಟ್‌ ರಜಿಸ್ಟ್ರೇಶನ್‌ ಮಾಡಲು ಈ ಅಧಿಕಾರಿಗಳು ೨೦ ಸಾವಿರದಿಂದ ೧ ಲಕ್ಷ ರುಪಾಯಿ ಲಂಚ ಪಡೆಯುತ್ತಾರೆ. ಆದರೂ ಪರವಾಗಿಲ್ಲ. ಕೆಲಸ ಮಾಡುತ್ತಾರಲ್ಲ ಅದಕ್ಕಿಂತ ಭಾಗ್ಯ ಈ ದೇಶಕ್ಕೆ ಇನ್ನೇನಿದೆ! ಅಂಥವರ ಮೇಲೆ ಸ್ಟಿಂಗ್‌ ಆಪರೇಷನ್‌ ಮಾಡಿ ಅವರು ಕೆಲಸ ಮಾಡದಂತೆ ನಿರುತ್ಸಾಹಗೊಳಿಸುಮದು ಒಳ್ಳೆಯ ಪತ್ರಿಕೋದ್ಯಮದ ಲಕ್ಷಣವಲ್ಲ.


ಈಗಿನ ಕಾಲಕ್ಕೆ ಬೇಕಾದ ಸ್ಟಿಂಗ್‌ ಆಪರೇಷನ್‌ ದುರ್ಯೋಧನ, ಚಕ್ರವ್ಯೂಹ ಥರದ್ದಲ್ಲ. ಲಂಚ ತಿಂದರೂ ಯಾರೂ ಕೆಲಸ ಮಾಡಿಕೊಡುತ್ತಿಲ್ಲ ಹಾಗೂ ಯಾರೂ ಲಂಚವನ್ನೂ ತಿನ್ನೋಲ್ಲ, ಕೆಲಸವನ್ನೂ ಮಾಡೋಲ್ಲ ಎನ್ನುಮದನ್ನು ಬಹಿರಂಗಗೊಳಿಸುವಂಥ ಸ್ಟಿಂಗ್‌ ಆಪರೇಷನ್‌ ಬೇಕಾಗಿದೆ ಈಗ. ಅದಕ್ಕೆ ನಾನು ಒಂದು ಪ್ಲಾನ್‌ ಹಾಕಿದ್ದೇನೆ.


ಕರ್ನಾಟಕ ಸರ್ಕಾರದಲ್ಲಿ ಬಹಳಷ್ಟು ಮಂತ್ರಿಗಳು, ಶಾಸಕರು, ಅಧಿಕಾರಿಗಳು ಲಂಚ ತಿಂದರೂ ಕೆಲಸ ಮಾಡುತ್ತಿಲ್ಲ ಎನ್ನುವ ಆಪಾದನೆಗಳಿವೆ. ರಸ್ತೆ ನಿರ್ಮಾಣ, ನೆರೆ ಪರಿಹಾರ, ಬೆಳೆ ಪರಿಹಾರ, ಗ್ರಾಮೀಣಾಭಿವೃದ್ಧಿ ಮುಂತಾದ ಹೆಸರಿನಲ್ಲಿ ಸರ್ಕಾರದ ಬೊಕ್ಕಸ ಕರಗುತ್ತ ಇದೆ. ಆದರೆ, ಯಾವ ಅಭಿವೃದ್ಧಿಯೂ ಆಗುತ್ತಿಲ್ಲ. ಇದನ್ನು ಕಂಡುಹಿಡಿಯಲು ನಾನು ಸ್ಟಿಂಗ್‌ ಆಪರೇಷನ್‌ ನಡೆಸಬೇಕೆಂದಿದ್ದೇನೆ. ಇದಕ್ಕೆ ನಾನು ‘ಆಪರೇಷನ್‌ ಸುನಾಮಿ’ ಅಂತ ಹೆಸರಿಟ್ಟಿದ್ದೇನೆ. ಈ ಹೆಸರು ಯಾಕೆ ಅಂತ ಕೇಳಬೇಡ. ಏಕೆಂದರೆ, ಆಪರೇಷನ್‌ ದುರ್ಯೋಧನ ಹೆಸರಿಟ್ಟವರಿಗೂ ಆ ಹೆಸರು ಯಾಕಿಟ್ಟಿದ್ದೇವೆ ಅಂತ ಗೊತ್ತಿಲ್ಲ! ಹಾಗಾಗಿ, ನಮಗೂ ನಾವ್ಯಾಕೆ ಸುನಾಮಿ ಹೆಸರಿಟ್ಟಿದ್ದೇವೆ ಅಂತ ಗೊತ್ತಿರಬೇಕಿಲ್ಲ.


ನಾಮ ಆದಷ್ಟು ಬೇಗ ಈ ಸ್ಟಿಂಗ್‌ ಆಪರೇಷನ್‌ ಮಾಡಬೇಕು. ತಡ ಮಾಡಿದರೆ, ಈ ಧರಂಸ್ಟಿಂಗ್‌ ಸರ್ಕಾರ ಬಿದ್ದುಹೋಗಿರುತ್ತದೆ. ಆಮೇಲೆ, ಸ್ಟಿಂಗ್‌ ಆಪರೇಷನ್‌ ಮಾಡಲು ಮುಂದಿನ ಸರ್ಕಾರ ರಚನೆಯಾಗುವವರೆಗೂ ನಾಮ ಕಾಯಬೇಕಾಗುತ್ತದೆ.
ಆದ್ದರಿಂದ, ಟೈಮ್‌ ವೇಸ್ಟಿಂಗ್‌ ಮಾಡದೇ, ನಮ್ಮ ಸ್ಟಿಂಗ್‌ ಆಪರೇಷನ್ನಿಗೆ ಸಿದ್ಧನಾಗು.


ಇಂತಿ ನಿನ್ನ ಪಾರ್ಟ್‌ನರ್‌
ಬಂತಾ ಸ್ಟಿಂಗ್‌



Kannada Prabha issue dated december 26, 20056
His Name is Sting... Dharam Sting!

--

Tuesday, December 20, 2005

ಯೂ ಆರ್‌ ಅನಂತಮೂರ್ತಿ ಹೆಸರು ಬದಲಾವಣೆ!

ಸುವರ್ಣ ಕನ್ನಡ ರಾಜ್ಯೋತ್ಸವ ವರ್ಷದಲ್ಲಿ ಎಲ್ಲ ಕನ್ನಡ ಸಾಹಿತಿಗಳ ಹೆಸರುಗಳ ಕನ್ನಡೀಕರಣ



ಕುತೂಹಲದ ಸಂಗತಿಯೆಂದರೆ, ಅಮೆರಿಕದಲ್ಲಿ ಜಾಹೀರಾತಿಗಾಗಿ ಕೆಲ ಊರುಗಳ ಹೆಸರುಗಳನ್ನು ಕೆಲ ವರ್ಷದ ಮಟ್ಟಿಗೆ ಬದಲಿಸುವ ಬಿಸಿನೆಸ್ಸಿದೆ! ಈ ಸುವರ್ಣ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಬ್ಯಾಂಗಲೋರನ್ನು ಬೆಂಗಳೂರು ಮಾಡುವ ಮೊದಲು ಕನ್ನಡ ಕವಿಗಳು, ಸಾಹಿತಿಗಳ ಹೆಸರುಗಳನ್ನೂ ಬದಲಿಸಬೇಕು. ಆರಂಭದಲ್ಲಿ ಯೂ. ಆರ್‌. ಅನಂತಮೂರ್ತಿ ಹೆಸರನ್ನು ಉ.ರಾ.ಅನಂತುಮೂರ್ತು ಎಂದು ಪರಿವರ್ತಿಸಬೇಕು!



Tuesday, December 13, 2005

ರಾಜಕಾರಣಿಗಳಿಗೆ ಪ್ರತಿವರ್ಷ ಸತ್ಯ ಹರಿಶ್ಚಂದ್ರ ಪ್ರಶಸ್ತಿ!

೨೦೦೫ನೇ ಸಾಲಿನ ಪ್ರಶಸ್ತಿ ಕರ್ನಾಟಕದ ಮಂತ್ರಿಗಳಿಗೆ
-ವಿಶ್ವಾಮಿತ್ರರ ಮಾಜಿ ಆಪ್ತ ಸಹಾಯಕ ನಕ್ಷತ್ರಿಕನ ಪ್ರಸ್ತಾವನೆ


‘ತಮಾಷೆ ಸಿನಿಮಾಗಳೇ ಈಗೀಗ ಹೆಚ್ಚು ಬರುತ್ತಿರುವೆ. ಸೂಪರ್‌ ಹಿಟ್‌ ಆಗುತ್ತಿವೆ. ಯಾಕೆ ಗೊತ್ತಾ? ಜನರಿಗೆ ತಮಾಷೆ ಬೇಕಾಗಿದೆ. ಅದಕ್ಕಾಗಿ ಅವರು ದುಡ್ಡು ಕೊಟ್ಟು ತಮಾಷೆ ಸಿನಿಮಾಗಳಿಗೆ ಹೋಗುತ್ತಿದ್ದಾರೆ. ಜನ ತಮಾಷೆಗೂ ದುಡ್ಡು ಕೊಡಬೇಕಾದ ಶೋಚನೀಯ ಪರಿಸ್ಥಿತಿ ನಿವಾರಣೆ ಆಗಬೇಕೆಂದರೆ, ರಾಜಕಾರಣಿಗಳ ಪುಗಸಟ್ಟೆ ಮನರಂಜನೆ ಇನ್ನೂ ಹೆಚ್ಚಾಗಬೇಕಾಗಿದೆ!’


ರಾಜಾ ಹರಿಶ್ಚಂದ್ರಾ,
ಆಯಮ್‌ ವೆರಿ ಸಾರಿ. ಈ ಮೊದಲು ನನ್ನ ಹೈಕಮಾಂಡ್‌ ವಿಶ್ವಾಮಿತ್ರ ಮುನಿಗಳ ಮಾತು ಕೇಳಿ ನಿನಗೆ ಕೊಡಬಾರದ ಕಷ್ಟ ಕೊಟ್ಟೆ. ಆಡಬಾರದ ಮಾತನ್ನಾಡಿದೆ. ಕ್ಷಮಿಸು ರಾಜನ್‌... ಕ್ಷಮಿಸು. ಇದಕ್ಕೆಲ್ಲ ನನ್ನ ಹೈಕಮಾಂಡ್‌ ಕಾರಣವೇ ಹೊರತೂ ನಾನಲ್ಲ. ಹೈಕಮಾಂಡ್‌ ಹೇಳಿದಂತೆ ಮಾಡುಮದು ನನಗೆ ಅನಿವಾರ್ಯವಾಗಿತ್ತು. ಹಾಗಾಗಿ, ಹಿಂದೆ ನಾನು ಹೇಳಿದ ಮಾತನ್ನಾಗಲೀ, ಕೊಟ್ಟ ಕಷ್ಟವನ್ನಾಗಲೀ ದಯವಿಟ್ಟು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಮಹಾರಾಜಾ.

ಬೈ ದ ವೇ ಮಹಾರಾಜಾ, ಈಗ ನಾನು ವಿಶ್ವಾಮಿತ್ರರ ಬಣದಲ್ಲಿಲ್ಲ. ಸಿದ್ದರಾಮಯ್ಯ ಜೆಡಿಎಸ್‌ ಬಿಟ್ಟುಬಂದ ಹಾಗೆ, ಮುತಾಲಿಕ್‌ ಮೊದಲು ವಿಶ್ವ ಹಿಂದೂ ಪರಿಷತ್‌ ತ್ಯಜಿಸಿದ ಹಾಗೆ ನಾನು ವಿಶ್ವಾಮಿತ್ರ ಮುನಿಗಳ ಆಶ್ರಮ ಬಿಟ್ಟು ಬಂದಿದ್ದೇನೆ! ನಾನು ವಿಶ್ವಾಮಿತ್ರರಿಗೆ ಎಷ್ಟೇ ನಿಷ್ಠೆಯಿಂದ ನಡೆದುಕೊಂಡರೂ ಅವರು ನನಗೆ ಪ್ರಮೋಶನ್‌ ನೀಡಲೇ ಇಲ್ಲ. ಎಷ್ಟು ವರ್ಷಾ ಅಂತ ನಾನು ಅಡಿಯಾಳಾಗೇ ಇರುಮದು! ನನಗೂ ಉನ್ನತ ಸ್ಥಾನ, ಮಾನ ಬೇಡವೇ? ಆ ಬಗ್ಗೆ ನಾನು ಹಲಮ ಬಾರಿ ಅಸಮಾಧಾನ ತೋಡಿಕೊಂಡರೂ ಅವರು ಅಚಲರಾಗಿದ್ದಾರೆ. ಹಾಗಾಗಿ, ನಾನು ನಿಮ್ಮ ಆಶ್ರಯ ಕೋರುವ ಪ್ರಯತ್ನದಲ್ಲಿದ್ದೆ. ಇದನ್ನು ಹೇಗೋ ತಿಳಿದುಕೊಂಡ ಸ್ವಾಮಿಗಳು ನನ್ನನ್ನು ಆಶ್ರಮದಿಂದ ಉಚ್ಚಾಟಿಸಿದ್ದಾರೆ.

ಮೊನ್ನೆ ಮೊನ್ನೆ ಉಮಾಭಾರತಿಯವರ ಉಚ್ಚಾಟನೆಯನ್ನೂ ನೋಡಿದ ಮೇಲೆ ಯಾಕೋ ಉಚ್ಚಾಟನೆಗಳು ಈಗ ಬಹಳ ಕಾಮನ್‌ ಆದಂತೆ ತೋರುತ್ತಿವೆ. ಹೀಗೆ ಉಚ್ಚಾಟನೆ ಆದ ನಾವೆಲ್ಲ ನಮ್ಮ ನಮ್ಮ ಭವಿಷ್ಯಕ್ಕೊಂದು ಕಾಯಕಲ್ಪ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದೇವೆ. ಅದರ ಮೊದಲ ಪ್ರಯತ್ನವಾಗಿ ಒಂದೊಂದು ರಾಜಕೀಯೇತರ ವೇದಿಕೆ ರೂಪಿಸಿಕೊಂಡು ನಾಯಕನ ಇಮೇಜ್‌ ಸೃಷ್ಟಿಸಿಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲೇ ನಾನೀಗ ‘ಸತ್ಯ ಹರಿಶ್ಚಂದ್ರ ಪ್ರತಿಷ್ಠಾನ’ ಸ್ಥಾಪಿಸಿದ್ದೇನೆ.

ಪ್ರತಿವರ್ಷ ರಾಜಕಾರಣಿಗಳಿಗೆ ಪ್ರಶಸ್ತಿ ನೀಡುಮದು ಈ ಪ್ರತಿಷ್ಠಾನದ ಮೂಲ ಕೆಲಸ. ಎಲ್ಲಾದರೂ ನೋಡಿ... ಎಂತಾದರೂ ನೋಡಿ. ರಾಜಕಾರಣಿಗಳಿಗೆ ಸದಾ ಪ್ರಶಸ್ತಿ ವಿತರಿಸುವ ಕೆಲಸ. ಒಬ್ಬೊಬ್ಬ ರಾಜಕಾರಣಿಯೂ ತಮ್ಮ ತಮ್ಮ ಅಮೃತಹಸ್ತದಿಂದ ಎಷ್ಟು ಸಾವಿರ ಪ್ರಶಸ್ತಿ ವಿತರಿಸಿರುತ್ತಾನೋ ಲೆಕ್ಕವಿಲ್ಲ. ಆದರೆ, ಅವೇ ಅಮೃತಹಸ್ತಗಳಿಗೆ ಎಷ್ಟು ಪ್ರಶಸ್ತಿ ಪಡೆಯುವ ಯೋಗವಿದೆ ಹೇಳಿ? ರಾಜಕಾರಣಿಗಳು ಪ್ರಶಸ್ತಿ ವಿತರಿಸಿದ ಸುದ್ದಿಯನ್ನು ಪ್ರತಿದಿನ ನಾಮ ಓದುತ್ತೇವೆ. ಆದರೆ, ರಾಜಕಾರಣಿಗೆ ಪ್ರಶಸ್ತಿ ಲಭಿಸಿದ ಸುದ್ದಿ ಬಹಳ ಅಪರೂಪವಲ್ಲವೇ? ಪ್ರಶಸ್ತಿಗಳ ಬದಲಿಗೆ ರಾಜಕಾರಣಿಗಳಿಗೆ ಸನ್ಮಾನಗಳು ಆಗುತ್ತವೆ ನಿಜ. ಆದರೆ, ನೂರು ಸನ್ಮಾನಗಳು ಒಂದು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಗೆ ಸಮವೇ? ಲಕ್ಷ ಸನ್ಮಾನಗಳು ಒಂದು ‘ಪದ್ಮಶ್ರಿ’ ಪ್ರಶಸ್ತಿಗೆ ಸಾಟಿಯೇ! ನೀವೇ ಹೇಳಿ. ಸನ್ಮಾನಗಳ ಇಫೆಕ್ಟೇ ಬೇರೆ. ಪ್ರಶಸ್ತಿಗಳ ಗಮ್ಮತ್ತೇ ಬೇರೆ. ಈ ಕೊರಗು ರಾಜಕಾರಣಿಗಳಿಗೂ ಇದೆ.

ಈ ವೀಕ್‌ನೆಸ್ಸನ್ನು ಕ್ಯಾಶ್‌ ಮಾಡಿಕೊಳ್ಳಲು ನನ್ನ ಈ ಪ್ರತಿಷ್ಠಾನ ಸ್ಥಾಪಿಸಿದ್ದೇನೆ. ಈ ಪ್ರತಿಷ್ಠಾನ ತಮ್ಮ ಹೆಸರಿನಲ್ಲಿ ಸ್ಥಾಪನೆಯಾಗಿರುಮದರಿಂದ ಇದಕ್ಕೆ ತಮ್ಮ ಅನುಮತಿ ಹಾಗೂ ನೈತಿಕ ಬೆಂಬಲ ಪಡೆಯುಮದು ನನ್ನ ಈ ಪತ್ರದ ಉದ್ದೇಶ.

ಮಹಾರಾಜಾ,
ಪ್ರಶಸ್ತಿಯ ಹೆಸರು ‘ಸತ್ಯ ಹರಿಶ್ಚಂದ್ರ ಪ್ರಶಸ್ತಿ’. ಇದನ್ನು ಮಾಮೂಲಿಯಂತೆ ಸುಳ್ಳು ಹೇಳುವ ರಾಜಕಾರಣಿಗೆ ನೀಡುಮದಿಲ್ಲ. ಈ ಪ್ರಶಸ್ತಿಗೆ ಆಯ್ಕೆ ಆಗುಮದು ಸುಲಭವಲ್ಲ.

ರಾಜಕಾರಣಿಗಳು ಎಂದೂ ಸತ್ಯ ಹೇಳುಮದಿಲ್ಲ ಎಂಬ ಸತ್ಯದ ಅರಿಮ ಪ್ರಜೆಗಳಿಗೆಲ್ಲ ಇದೆ. ದೇಖೆಂಗೆ, ಸೋಚೇಂಗೆಯಿಂದ ಹಿಡಿದು... ನೋಡೋಣ್‌ ಬಿಡ್ರಿ, ಮಾಡೋಣ್‌ ಬಿಡ್ರಿ... ವರೆಗೆ, ಕೊಟ್ಟೇ ಕೊಡುತ್ತೇವೆ, ಬಂದೇ ಬರುತ್ತವೆಯಿಂದ ಹಿಡಿದು... ಕಟ್ಟೇ ಕಟ್ಟುತ್ತೇವೆ, ಬೀಳಿಸಿಯೇ ತೀರುತ್ತೇವೆ ತನಕ... ಉಚಿತ, ರಿಯಾಯ್ತಿಯಿಂದ ಹಿಡಿದು ಪ್ಯಾಕೇಜ್‌, ವಿಮೆಯ ತನಕ ಪ್ರಜೆಗಳು ಬಹಳಷ್ಟು ರಾಜಕಾರಣಿಗಳ ಭಾಷಣಗಳನ್ನೂ, ಭರವಸೆಯನ್ನೂ, ಆಶ್ವಾಸನೆಗಳನ್ನೂ, ಘೋಷಣೆಗಳನ್ನೂ ನೋಡಿದ್ದಾರೆ... ಕೇಳಿದ್ದಾರೆ.

ಅವೆಲ್ಲ ಜಾನಿ ಲಿವರ್‌ ಜೋಕಿನಂತೆ, ಮಸೂರಿ ಕೃಷ್ಣಮೂರ್ತಿ ಮಾತಿನಿಂತೆ, ಎನ್‌ ಎಸ್‌ ರಾವ್‌ ನಟನೆಯಂತೆ, ಟೆನ್ನಿಸ್‌ ಕೃಷ್ಣ ತಮಾಷೆಯಂತೆ... ಮಾಮೂಲಾಯಿತು. ಜನ ಚೇಂಜ್‌ ಕೇಳುತ್ತಿದ್ದಾರೆ. ಬೇರೆ ರೀತಿಯ ತಮಾಷೆಗಳನ್ನು ಜನ ಎದುರು ನೋಡುತ್ತಿದ್ದಾರೆ.

ಸಾಕ್ಷಿ ಬೇಕಾ? ನೋಡಿ... ಕುರಿಗಳು ಸಾರ್‌ ಕುರಿಗಳು, ಕೋತಿಗಳು ಸಾರ್‌ ಕೋತಿಗಳು, ಮುನ್ನಾ ಭಾಯಿ ಎಂಬಿಬಿಎಸ್‌, ನೋ ಎಂಟ್ರಿ, ಶಾದಿ ನಂ.೧, ರಾಮ ಶಾಮ ಭಾಮ... ಮುಂತಾದ ತಮಾಷೆ ಸಿನಿಮಾಗಳೇ ಈಗೀಗ ಹೆಚ್ಚು ಬರುತ್ತಿರುವೆ. ಸೂಪರ್‌ ಹಿಟ್‌ ಆಗುತ್ತಿವೆ. ಯಾಕೆ ಗೊತ್ತಾ? ಜನರಿಗೆ ತಮಾಷೆ ಬೇಕಾಗಿದೆ. ಅದಕ್ಕಾಗಿ ಅವರು ದುಡ್ಡು ಕೊಟ್ಟು ತಮಾಷೆ ಸಿನಿಮಾಗಳಿಗೆ ಹೋಗುತ್ತಿದ್ದಾರೆ.

ಜನ ತಮಾಷೆಗಾಗಿಯೂ ದುಡ್ಡು ಕೊಡಬೇಕಾದ ಶೋಚನೀಯ ಪರಿಸ್ಥಿತಿ ನಿವಾರಣೆ ಆಗಬೇಕೆಂದರೆ, ರಾಜಕಾರಣಿಗಳ ಪುಗಸಟ್ಟೆ ಮನರಂಜನೆ ಇನ್ನೂ ಹೆಚ್ಚಾಗಬೇಕಾಗಿದೆ. ರಾಜಕಾರಣಿಗಳ ಕ್ರಿಯೇಟಿವಿಟಿ ಚುರುಕುಗೊಳ್ಳಬೇಕಾಗಿದೆ. ಹೊಸ ತಲೆಮಾರಿನ ಯುವ ಪೀಳಿಗೆಗೆ ಅಪ್ಯಾಯಮಾನವಾಗುವಂಥ ಮನರಂಜನೆಯನ್ನು ಈ ರಾಜಕಾರಣಿಗಳು ನೀಡಬೇಕಾಗಿದೆ. ತಮಾಷೆ ಸಿನಿಮಾಗಳಲ್ಲಿ ಹೀರೋಗಳು ಸುಳ್ಳು ಹೇಳುತ್ತಿರುಮದು ಪ್ರೇಕ್ಷಕರಿಗೆಲ್ಲ ಗೊತ್ತಿರುತ್ತದೆ. ಆದರೂ, ಹೀರೋಗಳು ಅದನ್ನೇ ಸತ್ಯ ಎಂಬಂತೆ ಒಬ್ಬರನ್ನೊಬ್ಬರು ನಂಬಿಸಲು ಪ್ರಯತ್ನಿಸುವ ಪ್ರಸಂಗಗಳನ್ನು ಜನ ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಆಮೇಲೆ ಅತಿ ಹೆಚ್ಚು ನಗಿಸಿದ ಸಿನಿಮಾಕ್ಕೂ, ಅತಿ ಹೆಚ್ಚು ನಗಿಸಿದ ನಟರಿಗೂ, ಇತರ ಕಲಾವಿದರೂ ಪ್ರಶಸ್ತಿಗಳ ಸುರಿಮಳೆಯಾಗುತ್ತದೆ. ಆದರೆ, ಇದೇ ರೀತಿಯ ಕಲಾ ಪ್ರದರ್ಶನ ನೀಡುವ ರಾಜಕಾರಣಿಗಳನ್ನು ಯಾರೂ ಗಮನಿಸುಮದೇ ಇಲ್ಲ. ಇಂಥ ರಾಜಕಾರಣಿಗಳ ಕಲೆಯನ್ನು ಜನತೆ ನಿರ್ಲಕ್ಷಿಸಿದ್ದಾರೆ.

ಈಗ ‘ಸತ್ಯ ಹರಿಶ್ಚಂದ್ರ ಪ್ರತಿಷ್ಠಾನ’ ಅಂಥ ಕಲಾ ಸಂಪನ್ನ ರಾಜಕಾರಣಿಗಳನ್ನು ಮಾತ್ರ ಗುರುತಿಸಿ, ಅವರಿಗೆ ಪ್ರತಿವರ್ಷ ಪ್ರಶಸ್ತಿ ನೀಡುತ್ತದೆ. ಇದರಿಂದ ಇತರ ರಾಜಕಾರಣಿಗಳೂ ಉತ್ತೇಜಿತರಾಗಿ ಮಾಮೂಲಿ ಸುಳ್ಳುಗಳನ್ನು ಬಿಟ್ಟು ಸೃಜನಾತ್ಮಕ ಸುಳ್ಳುಗಳ ಮೂಲಕ ಜನತೆಗೆ ಹೆಚ್ಚು ಮನರಂಜನೆ ನೀಡುತ್ತಾರೆ ಎಂಬುದು ಈ ಪ್ರತಿಷ್ಠಾನದ ಸದುದ್ದೇಶ.

ಜಿ.ಎಸ್‌.ಶಿವರುದ್ರಪ್ಪ ಹೇಳಿದಂತೆ... ‘ಎಲ್ಲ ಕೇಳಲಿ ಎಂದು ನಾನು ಹೇಳುಮದಿಲ್ಲ, ಹೇಳುಮದು ಅನಿವಾರ್ಯ ಕರ್ಮ ಎನಗೆ’ -ಎಂಬ ಭಾವನೆ ರಾಜಕಾರಣಿಗೆ ಬೇಡ.

ಜನ ಕೇಳಿ ಆನಂದಿಸುವಂತೆ ‘ಮಜ ತುಂಬಿ ಹೇಳುವೆನು ಇಂದು ನಾನು’ ಎಂಬ ಜಾಯಮಾನವನ್ನು ರಾಜಕಾರಣಿಗಳು ಬೆಳೆಸಿಕೊಳ್ಳಲಿ ಎಂಬುದು ಈ ಪ್ರತಿಷ್ಠಾನದ ಆಶಯ.

ಕಳೆದ ವರ್ಷವಾಗಿದ್ದರೆ, ಲಾಲೂ ಪ್ರಸಾದ್‌ ಯಾದವ್‌ಗೆ ಈ ಪ್ರಶಸ್ತಿ ಸಿಗುತ್ತಿತ್ತೇನೋ? ಆದರೆ, ಈ ವರ್ಷ ಅವರ ಕಾಮೆಡಿ ಕಡಿಮೆಯಾಗಿ ಟ್ರಾಜಿಡಿ ಹೆಚ್ಚಾಗಿದೆ. ಅದಕ್ಕಾಗಿ ಅವರಿಗೆ ಈ ಬಾರಿ ಪ್ರಶಸ್ತಿ ನೀಡಲು ಸಾಧ್ಯವಾಗದಿರಬಹುದು. ಆದರೆ, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಬಂದಮೇಲೆ ಜನತೆಗೆ ಸಾಕಷ್ಟು ಕಾಮೆಡಿ ಮನರಂಜನೆ ಲಭಿಸಿದೆ. ಕೆಲಮ ಮಂತ್ರಿಗಳ ಸುಳ್ಳುಗಳಂತೂ ಸೂಪರ್‌ ಹಿಟ್‌ ಜೋಕ್‌ ಆಗಿವೆ! ಬಹುಶಃ ೨೦೦೫ರ ‘ಸತ್ಯ ಹರಿಶ್ಚಂದ್ರ ಪ್ರಶಸ್ತಿ’ ಕರ್ನಾಟಕದ ಮಂತ್ರಿಗಳಲ್ಲೇ ಒಬ್ಬರಿಗೆ ದೊರಕುವ ಸಾಧ್ಯತೆ ಇದೆ.

ಆದಷ್ಟು ಬೇಗ ಈ ಪ್ರತಿಷ್ಠಾನಕ್ಕೆ ತಮ್ಮ ಹೆಸರಿಡಲು ತಾಮ ‘ನೋ ಅಬ್ಜೆಕ್ಷನ್‌ ಸರ್ಟಿಫಿಕೆಟ್‌’ ನೀಡಿದರೆ ನನಗೆ ಪ್ರಶಸ್ತಿ ಪ್ರದಾನ ಮಾಡಲು ಸಾಧ್ಯವಾಗುತ್ತದೆ. ಬೆಂಗಳೂರು ಮೆಟ್ರೋ ರೈಲು ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹಸಿರು ನಿಶಾನೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲೆದಾಡಿಸಿದಂತೆ ನೀಮ ನನ್ನನ್ನು ಅಲೆದಾಡಿಸಲಾರಿರಿ ಎಂಬ ನಂಬುಗೆಯೊಡನೆ...

ತಮ್ಮ ಹಾಲಿ ವಿಶ್ವಾಸಿ
ನಕ್ಷತ್ರಿಕ
(ವಿಶ್ವಾಮಿತ್ರರ ಮಾಜಿ ಆಪ್ತ ಸಹಾಯಕ)


Kannada Prabha issue dated December 12, 2005
Satya Harishchandra Annual Award for Politicians!

Tuesday, December 06, 2005

ಯುದ್ಧ ಮಾಡಲೆಂದೇ ಧರ್ಮಗ್ರಂಥ ಬೋಧಿಸಲಾಯಿತು!

ಡಿಸೆಂಬರ್‌ ೬ರ ಮುನ್ನಾದಿನ ಆದಿ ಕವಿ ಪಂಪನಿಗೆ ಜಾತ್ಯತೀತ ಸೈಬರ್‌ ಕವಿ ಗಾಂಪನ ಪತ್ರ

ಧರ್ಮಗ್ರಂಥಗಳಿಂದ ಸಮಾಜದಲ್ಲಿ ಶಾಂತಿಗಿಂತ ಸಮರವೇ ಹೆಚ್ಚಾಗಿದೆ ಎಂಬ ಸಂಶಯ ಮೂಡುತ್ತದೆ. ಧರ್ಮದ ರಕ್ಷಣೆಗೆ ಶ್ರೀಕೃಷ್ಣ ಪವಿತ್ರ ‘ಗೀತೆ’ ಬೋಧಿಸಿ ಅರ್ಜುನ ಯುದ್ಧ ಮಾಡುವಂತೆ ಮಾಡಿದ. ಮಹಾಭಾರತ ಯುದ್ಧವೇ ನಡೆದುಹೋಯಿತು. ಅತ್ತ ಇಸ್ಲಾಂ ಧರ್ಮ ರಕ್ಷಣೆಗೆ ’ಜಿಹಾದ್‌’ ಬೊಧಿಸಲಾಯಿತು. ಈ ಯುದ್ಧಗಳಿಂದ ಇಡೀ ಜಗತ್ತೇ ಅಶಾಂತವಾಯಿತು. ಇದಕ್ಯಾರು ಕಾರಣ?


ಆದರಣೀಯ ಆದಿ ಕವಿ, ಪಂಪನಿಗೆ
ಸೈಬರ್‌ ಕವಿ ಗಾಂಪನ ನಮಸ್ಕಾರಗಳು. ಬಹಳ ದಿನಗಳಿಂದ ಜಾತ್ಯತೀತ ಮಹಾಭಾರತದ ಕುರಿತು ನಾನು ನಿನಗೆ
ಈ-ಮೇಲ್‌ ಬರೆಯಬೇಕು ಅಂದುಕೊಂಡಿದ್ದೆ. ಆದರೆ, ಸಮಯ ಕೂಡಿ ಬಂದಿರಲಿಲ್ಲ. ಈಗ ಸಂದರ್ಭ ಸಿಕ್ಕಿದೆ.
ನಾಳೆ ಡಿಸೆಂಬರ್‌ ೬. ರಾಮ ಜನ್ಮಭೂಮಿಯಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನ. ಇದು ಕೋಮುವಾದ ಹಾಗೂ ಜಾತ್ಯತೀತತೆಯ ಉನ್ಮಾದದ ದಿನ. ಧರ್ಮಸಂಘರ್ಷ ಹಾಗೂ ಧರ್ಮರಕ್ಷಣೆಯ ವ್ಯಾಖ್ಯಾನದ ದಿನ. ಭಾರತದ ರಾಷ್ಟ್ರೀಯ ದಿನಾಚರಣೆಗಳಲ್ಲಿ ಇದೂ ಒಂದು! ಬಿಜೆಪಿಗಳು ವಿಜಯೋತ್ಸವ ಎಂದೂ, ಬಿಜೆಪಿ ವಿರೋಧಿಗಳು ಇದನ್ನು ಕರಾಳದಿನ ಎಂದೂ ಆಚರಿಸುತ್ತಾರೆ. ಜನಸಾಮಾನ್ಯರು ಮಾತ್ರ ಕೋಮುಗಲಭೆಯ ಆತಂಕದಲ್ಲೇ ದಿನ ಕಳೆಯುತ್ತಾರೆ.

ಕವಿವರ್ಯಾ,
ನನಗೆ, ಧರ್ಮಗ್ರಂಥಗಳಾದ ಭಗವದ್ಗೀತೆ -ಖುರಾನ್‌ ಮತ್ತು ಮಹಾ ಸಾಫ್ಟ್‌ವೇರ್‌ಗಳಾದ ಮೈಕ್ರೋಸಾಫ್ಟ್‌ ವಿಂಡೋಸ್‌ ಹಾಗೂ ಲೈನಕ್ಸ್‌ ನಡುವೆ ಹಲವಾರು ಸಾಮ್ಯತೆ ಕಾಣುತ್ತಿದೆ.

ಮಹಾಭಾರತದ ಭಗವದ್ಗೀತೆ ಹಿಂದುಗಳಿಗೆ ಹೇಗೆ ಧರ್ಮಗ್ರಂಥವೋ ಹಾಗೆ ಮುಸ್ಲಿಮರಿಗೆ ಖುರಾನ್‌ ಧರ್ಮಗ್ರಂಥ. ಇವೆರಡೂ ಬೇರೆ ಬೇರೆ ಗ್ರಂಥಗಳಾದರೂ, ಉದ್ದೇಶ ಹಾಗೂ ಉಪಯೋಗ ಮಾತ್ರ ಒಂದೇ ತಾನೆ? ಅದರೆ, ಈ ಗ್ರಂಥಗಳ ಆರಾಧಕರು ಯಾಕೋ ತಾಮ ಪರಸ್ಪರ ವಿರೋಧಿಗಳು ಎಂಬಂತೆ ಹೋರಾಡುತ್ತಾರೆ.

ಈಗಿನ ನಮ್ಮ ಸೈಬರ್‌ಲೋಕದಲ್ಲೂ ಇದೇ ಹಣೆಬರಹ. ಒಂದು ಪಂಥದ ಗಣಕಿಗಳಿಗೆ ಮೈಕ್ರೋಸಾಫ್ಟ್‌ ವಿಂಡೋಸ್‌ ‘ಧರ್ಮತಂತ್ರಾಂಶ’ವಾದರೆ ಇನ್ನೊಂದು ವಿರೋಧಿ ಪಂಥಕ್ಕೆ ’ಲೈನಕ್ಸ್‌’ ಎಂಬುದು ಧರ್ಮತಂತ್ರಾಂಶ’. ಇವೆರಡೂ ತಂತ್ರಾಂಶಗಳ ಉದ್ದೇಶ ಹಾಗೂ ಉಪಯೋಗ ಒಂದೇ ಆದರೂ, ಉಭಯ ಪಂಥಗಳ ನಡುವೆ ಹಿಂದೂ-ಮುಸ್ಲಿಂ ಥರ ಶೀತಲ ಸಮರ ಇದೆ.

ಅಷ್ಟೇ ಅಲ್ಲ, ಮೈಕ್ರೋಸಾಫ್ಟಿನ ವಿಂಡೋಸ್‌ಗೂ ಮಹಾಭಾರತಕ್ಕೂ ಇನ್ನೊಂದು ಪ್ರಮುಖ ಸಾಮ್ಯತೆ ಇದೆ. ಅತ್ಯಂತ ಹೆಚ್ಚು ವರ್ಶನ್‌ಗಳಿರುವ ಮಹಾಸಾಫ್ಟ್‌ವೇರ್‌ ಎಂಬ ಖ್ಯಾತಿ ವಿಂಡೋಸ್‌ಗಾದರೆ, ಅತ್ಯಂತ ಹೆಚ್ಚು ಆವೃತ್ತಿಗಳಿರುವ ಮಹಾಗ್ರಂಥ ಎಂಬ ಖ್ಯಾತಿ ಮಹಾಭಾರತಕ್ಕೆ!

ಆದರೆ, ಕವೀಶ
ಒಂದು ಖೇದದ ವಿಷಯವೆಂದರೆ, ವಿಂಡೋಸ್‌ನ ಹೊಸ ವರ್ಷನ್‌ಗಳು ಈಗಲೂ ಬಿಡುಗಡೆಯಾಗುತ್ತಿವೆ. ಅದೇಕೋ ಮಹಾಭಾರತದ ಹೊಸ ಆವೃತ್ತಿಗಳು ಮಾತ್ರ ನಿಂತುಹೋಗಿವೆ! ನಿನ್ನಂಥ ಮಹಾಕವಿಗಳೂ ಮಹಾಭಾರತದ ಹೊಸ ವರ್ಶನ್‌ ಬರೆಯುವ ಸಾಹಸಕ್ಕೆ ಕೈಹಾಕುತ್ತಿಲ್ಲ. ನೀನೂ ಅಷ್ಟೇ, ಮೂಲ ಕೃತಿಯ ‘ಪಂಪಭಾರತ -ವರ್ಶನ್‌ ೧.೦’ ಬಿಡುಗಡೆ ಮಾಡಿದ ಮೇಲೆ ಯಾಕೆ ಪರಿಷ್ಕಾರಕ್ಕೆ ಕೈಹಾಕಿಲ್ಲ. ಈಗ ನೀನು ‘ಪಂಪಭಾರತ ವರ್ಶನ್‌ ೨.೧’ ಬರೆಯಬೇಕು. ಇದು ಸೂಪರ್‌ ಹಿಟ್‌ ಆಗುಮದು ಗ್ಯಾರಂಟಿ. ಪುಸ್ತಕ ಪ್ರಪಂಚದಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ’ಹ್ಯಾರಿ ಪಾಟರ್‌’ ಎಂಬ ಇಂಗ್ಲೀಷ್‌ ಕಾದಂಬರಿ ಸರಣಿಗಿಂತ ನಿನ್ನ ಕೃತಿಯೇ ಅತ್ಯಧಿಕ ಬೇಡಿಕೆ ಪಡೆಯುವ ಸಾಧ್ಯತೆಯಿದೆ.

ಅಂದು ನೀನು ಸುಲಭವಾಗಿ ‘ಪಂಪಭಾರತ’ ಬರೆದಿರಬಹುದು. ಆದರೆ, ಈಗ ಮಹಾಭಾರತ ಬರೆಯುಮದು ಸುಲಭದ ಮಾತಲ್ಲ ಎಂಬುದು ನೆನಪಿರಲಿ. ಅದಕ್ಕಾಗಿ ನೀನು ಈ ಕೆಳಗಿನ ಎರಡು ಜಾಗ್ರತೆ ವಹಿಸಬೇಕಾಗುತ್ತದೆ:

೧. ನೀನು ಬರೆದ ಪಂಪಭಾರತದಲ್ಲಿ, ರಾಜ ಅರಿಕೇಸರಿಯನ್ನೇ ಅರ್ಜುನ ಎಂಬಂತೆ ಬಿಂಬಿಸಿದ್ದಿ. ದ್ರೌಪದಿ ಕೇವಲ ಅರ್ಜುನನ ಹೆಂಡತಿ ಎಂದೂ, ದುರ್ಯೋಧನನು ಅತ್ಯಂತ ಛಲವಂತ ಎಂದೂ ವೈಭವೀಕರಿಸಿದ್ದಿ. ಇದು, ವ್ಯಾಸ ಮಹಾಮುನಿಗಳ ಮೂಲಕಥೆಗೆ ನೀನು ಮಾಡಿದ ಬದಲಾವಣೆ. ಇಂತಹ ಬದಲಾವಣೆಗೆ ಆಗ ಯಾರೂ ಪ್ರತಿಭಟಿಸಲಿಲ್ಲ. ಈಗ ಈ ರೀತಿಯ ತಪುý್ಪ ಮಾಡಬೇಡ. ಈಗಿನ ಕಾಲ ಹಿಂದೆಂದಿಗಿಂತ ಅತ್ಯಂತ ಹೆಚ್ಚು ’ಧರ್ಮ ಸೂಕ್ಷ್ಮವೂ’, ಜನರು ಹಿಂದೆಂದಿಗಿಂತ ಧರ್ಮಪ್ರಿಯರೂ ಆಗಿದ್ದಾರೆ. ಈಗಿನ ಜನರು ತಮ್ಮ ಧರ್ಮದ ವಿಷಯದಲ್ಲಿ ಸುಮ್ಮನೆ ಕುಳಿತುಕೊಳ್ಳುಮದಿಲ್ಲ. ಹಾಗಾಗಿ, ಇಂತಹ ಬದಲಾವಣೆ ಮಾಡುಮದಾದರೆ ಒಮ್ಮೆ ಹಿಂದೂ ರಕ್ಷಣಾ ವೇದಿಕೆ ಮತ್ತು ಜಾತ್ಯತೀತ ಸೌಹಾರ್ದ ಪರಿಷತ್ತಿನ ಪರವಾನಿಗೆ ಪಡೆದುಕೊಳ್ಳುಮದು ಒಳಿತು! ಇಲ್ಲವಾದರೆ, ನಿನ್ನ ವಿರುದ್ಧ ಅನೇಕ ಹೋರಾಟಗಳು ನಡೆಯಬಹುದು. ನಿನ್ನ ’ಭೂತ ದಹನ’ವಂತೂ ಗ್ಯಾರಂಟಿ. ಮೋರೆಗೆ ಮಸಿ ಬಳಿಯುವ ಅಪಾಯವೂ ಇದೆ.

೨. ನೀನು ಬರೆದ ‘ಭಾರತದಲ್ಲಿ’ ಭಗವದ್ಗೀತೆ ಚಿಕ್ಕ ಪ್ರಸ್ತಾಪದೊಂದಿಗೆ ಮುಗಿದುಹೋಗುತ್ತದೆ. ಈ ವಿಷಯದಲ್ಲಿ ನೀನು ಎಚ್ಚರವಾಗಿ ಇರುಮದು ಒಳ್ಳೆಯದು. ನಿನ್ನ ಹೊಸ ಗ್ರಂಥದಲ್ಲಿ ಭಗವದ್ಗೀತೆಯನ್ನು ಚಿಕ್ಕದಾಗಿ ಮುಗಿಸಿದರೆ, ಹಿಂದೂ ಧರ್ಮಗ್ರಂಥವನ್ನು ನಿರ್ಲಕ್ಷಿಸಿದ ‘ಹಿಂದೂ ವಿರೋಧಿ’ ಎಂಬ ಆರೋಪ ನಿನ್ನ ಮೇಲೆ ಬರುತ್ತದೆ. ಅಥವಾ ಯಥಾವತ್‌ ಭಗವದ್ಗೀತೆಯನ್ನು ಅಳವಡಿಸಿದರೆ ನೀನು ‘ಕೋಮುವಾದಿ’ ಎನಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಭಗವದ್ಗೀತೆಗೆ ಅಲ್ಲಲ್ಲಿ, ತಿದ್ದುಪಡಿ ಮಾಡಿ ನೀನು ಕೋಮುಸೌಹಾರ್ದ, ಜಾತ್ಯತೀತ ಭಗವದ್ಗೀತೆಯನ್ನು ಬರೆದುಬಿಡುಮದು ಒಳ್ಳೆಯದು. ರಾಷ್ಟ್ರಕವಿ ಕುವೆಂಪು ಎಷ್ಟೋ ವರ್ಷಗಳ ಹಿಂದೆ ಬರೆದಿಟ್ಟು ಹೋಗಿದ್ದ ಕರ್ನಾಟಕದ ನಾಡಗೀತೆಯೇ ಇಂಥ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು ಎಂಬುದನ್ನು ಮರೆಯಬೇಡ.

ಇಷ್ಟಕ್ಕೂ ಹಿಂದುತ್ವ, ಕೋಮುವಾದ, ಜಾತ್ಯತೀತತೆ ಅಂದರೆ ಏನು ಎಂದು ನೀನು ಕೇಳಬಹುದು. ನಿಜವಾಗಿ ಹೇಳಬೇಕೆಂದರೆ, ಅದೆಲ್ಲ ನಮ್ಮಂಥ ಜನಸಾಮಾನ್ಯರಿಗೆ ಅರ್ಥವಾಗುಮದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ವಾದ ಮಂಡಿಸಿ ನಮ್ಮನ್ನು ಬೆಚ್ಚಿಬೀಳಿಸುತ್ತಾರೆ. ಆಮೇಲೆ ಅವರೆಲ್ಲರೂ ಹೇಳಿದ್ದು ನಿಜ ಅನಿಸುತ್ತದೆ. ನಮಗೆ ಗೊಂದಲವಾಗುತ್ತದೆ.
ಈ ದೊಡ್ಡ ಶಬ್ಧಗಳು ನಮ್ಮಂಥ ಹುಲುಮಾನವರಿಗೆ ಅರ್ಥವಾಗಿರುಮದು ಹೀಗೆ:

ಹಿಂದುತ್ವ: ಬಿಜೆಪಿಯ ರಾಜಕೀಯ ತಳಪಾಯ ಇದು. ವಿಶ್ವ ಹಿಂದೂ ಪರಿಷತ್‌, ಆರ್‌ಎಸ್‌ಎಸ್‌ ಮತ್ತಿತರ ಸಂಘಟನೆಗಳು ಹಿಂದುತ್ವದ ಪವರ್‌ ಆಫ್‌ ಅಟಾರ್ನಿ ಹೊಂದಿವೆ!

ಕೋಮುವಾದ: ಬಿಜೆಪಿ ಹಾಗೂ ಇದರ ಅಂಗ ಸಂಘಗಳ ಯಾಮದೇ ಮಾತುಗಳನ್ನು ಟೀಕಿಸಲು ವಿರೋಧಿ ಪಕ್ಷಗಳು ಬಳಸುವ ಶಬ್ದ ಇದು. ಬಿಜೆಪಿಯ ಅನುಯಾಯಿಗಳೆಲ್ಲ ಕೋಮುವಾದಿಗಳು ಎಂಬುದು ಮಿಕ್ಕೆಲ್ಲ ಪಕ್ಷಗಳ ವ್ಯಾಖ್ಯೆ. ಭಾರತದ ಪುರಾತನ ಸಂಸ್ಕೃತಿ, ಪುರಾಣ, ವೇದ, ಆಚರಣೆಗಳನ್ನು ಸಮರ್ಥಿಸುವವರೆಲ್ಲರೂ ಕೋಮುವಾದಿಗಳೆಂಬ ವಾದವೂ ಇದೆ. ಬ್ರಾಹ್ಮಣರನ್ನು ಸಹ ಕೋಮುವಾದಿಗಳು ಎನ್ನಲಾಗುತ್ತದೆ. ಆದರೆ, ಕಟ್ಟಾ ಮುಸ್ಲಿಮರು ಜಾತ್ಯತೀತ ಪಕ್ಷಗಳ ವೋಟ್‌ ಬ್ಯಾಂಕುಗಳು!

ಜಾತ್ಯತೀತತೆ: ಸಾಮಾನ್ಯವಾಗಿ ಮುಸ್ಲಿಂ ಬಾಂಧವರಿಗೆ ಉತ್ತೇಜನ ನೀಡುಮದು ಹಾಗೂ ಬಿಜೆಪಿ ಅನುಯಾಯಿಗಳನ್ನು ದೂರ ಇಡುಮದೇ ಜಾತ್ಯತೀತತೆ! ಜಾತಿ, ಒಳಜಾತಿಗಳನ್ನು ಬೇರೆ ಬೇರೆ ಮಾಡಿ ಎಲ್ಲರಲ್ಲೂ ಕೋಮು ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ತಮ್ಮ ತಮ್ಮ ಜಾತಿಗಾಗಿ ಹೋರಾಡುವಂತೆ ಮಾಡುಮದನ್ನೂ ಜಾತ್ಯತೀತತೆ ಎನ್ನಲಾಗುತ್ತದೆ! ಅದೇ ರೀತಿ ಮೇಲ್ಜಾತಿಯವರೆಲ್ಲರೂ ಸಮಾಜ ಶೋಷಕರು ಎಂದು ಬಿಂಬಿಸಿದರೂ ಅದು ಜಾತ್ಯತೀತತೆ. ಬಿಜೆಪಿಯ ವಿರೋಧಿ ಪಕ್ಷಗಳ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ತಮ್ಮನ್ನು ಜಾತ್ಯತೀತರು ಎಂದು ಕರೆದುಕೊಳ್ಳುತ್ತಾರೆ.

ಈ ಧರ್ಮ ವ್ಯಾಖ್ಯಾನ ನೋಡಿ, ನೀನು ಧರ್ಮಸಂಕಟಕ್ಕೆ ಒಳಗಾಗಬಹುದು. ನಮ್ಮ ಧರ್ಮಗ್ರಂಥಗಳಿಂದ ಸಮಾಜದಲ್ಲಿ ಶಾಂತಿಗಿಂತ ಸಮರವೇ ಹೆಚ್ಚಾಗಿದೆ ಎಂಬ ಸಂಶಯ ನಿನಗೆ ಮೂಡಬಹುದು. ಅದು ನಿಜ ಪಂಪ. ಅರ್ಜುನ ತಾನು ತನ್ನ ಬಂಧುಗಳ ಜೊತೆ ಯುದ್ಧ ಮಾಡಲಾರೆ ಎಂದು ಹೇಳಿದಾಗ ಧರ್ಮದ ರಕ್ಷಣೆಗೆ ಶ್ರೀಕೃಷ್ಣ ಪವಿತ್ರ ’ಗೀತೆ’ ಬೋಧಿಸಿ ಅರ್ಜುನ ಯುದ್ಧ ಮಾಡುವಂತೆ ಮಾಡಿದ. ಮಹಾಯುದ್ಧವೇ ನಡೆದುಹೋಯಿತು. ಅತ್ತ ಇಸ್ಲಾಂ ಧರ್ಮ ರಕ್ಷಣೆಗೆ ’ಜಿಹಾದ್‌’ ನಡೆಸುವಂತೆ ಬೊಧಿಸಲಾಯಿತು. ಇಡೀ ಜಗತ್ತೇ ಅಶಾಂತವಾಯಿತು. ಈ ರೀತಿ ಧರ್ಮಗ್ರಂಥಗಳೇ ಯುದ್ಧಗಳಿಗೆ ಕಾರಣವಾಗಿರುಮದಕ್ಕೆ ಯಾರು ಕಾರಣರೋ ಗೊತ್ತಿಲ್ಲ.

ಈ ಧರ್ಮಸೂಕ್ಷ್ಮವನ್ನು ಗಮನದಲ್ಲಿಟ್ಟುಕೊಂಡು ನೀನು ಒಂದು ಕೋಮುಸೌಹಾರ್ದ, ಜಾತ್ಯತೀತ ಭಗವದ್ಗೀತೆಯುಳ್ಳ ಮಹಾಭಾರತವನ್ನು ಬರೆಯುತ್ತೀ ಎಂಬ ನಿರೀಕ್ಷೆಯಲ್ಲಿ...

ಸೈಬರ್‌ ಕವಿ
ಗಾಂಪ



Kannada Prabha issue dated December 5, 2005
Holy Books of Religions were preached to do War!

-

Tuesday, November 29, 2005

ಕರ್ನಾಟಕದಲ್ಲಿ ಮೂರು ಉಪರಾಜ್ಯಗಳ ರಚನೆ

ದಕ್ಷಿಣ ಭಾರತದ ಕಾಶ್ಮೀರವಾಗಿರುವ ಬೆಳಗಾವಿ ಗಡಿಯಲ್ಲಿ ಶೀಘ್ರ ಎಲ್‌ಒಸಿ:ಸರ್ಕಾರಕ್ಕೆ ಮೀರ್‌ಸಾಧಿಕ್‌ ಪತ್ರ

ಪಾಕಿಸ್ತಾನ ಮತ್ತು ಭಾರತದ ನಡುವೆ ಸಿಲುಕಿರುವ ಕಾಶ್ಮೀರದಂತಾಗಿದೆ ನಮ್ಮ ಬೆಳಗಾವಿಯ ಪರಿಸ್ಥಿತಿ . ಅದಕ್ಕಾಗಿ ಬೆಳಗಾವಿಯನ್ನು ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಬಹುದು. ಕರ್ನಾಟಕ ಹಾಗೂ ಮಹಾರಾಷ್ಟ್ರ ಥೇಟ್‌ ಭಾರತ-ಪಾಕ್‌ ಥರ ಗುದ್ದಾಟದಲ್ಲಿ ತೊಡಗಿವೆ. ಕಾಶ್ಮೀರ ಸಮಸ್ಯೆಗೂ ಗೋಲ್ಡನ್‌ ಜುಬಿಲಿ. ಬೆಳಗಾವಿ ಸಮಸ್ಯೆಗೂ ಸುವರ್ಣಮಹೋತ್ಸವ. ಈಗ ಬಾಕಿ ಏನು ಗೊತ್ತಾ? ಭಾರತ-ಪಾಕ್‌ ನಡುವೆ ಇರುವಂಥ LOC !

ಪರಮ ಪೂಜ್ಯ ಮುಖ್ಯಮಂತ್ರಿಯವರೇ,
ಟಿಪುý್ಪ ಸುಲ್ತಾನರ ಆಪ್ತ ಸಲಹೆಗಾರನಾಗಿದ್ದ ಮೀರ್‌ ಸಾಧಿಕ್‌ನ ಅಭಿನಂದನೆಗಳು! ಪೂಜ್ಯ ಎಂದರೆ ಕನ್ನಡದಲ್ಲಿ ಸೊನ್ನೆ ಎಂಬ ಅರ್ಥವೂ ಇದೆ. ಆದರೆ, ನಾನು ಈ ಮೇಲೆ ಬಳಸಿರುವ ಪೂಜ್ಯ ಎಂಬುದು ಪೂಜನೀಯರು ಎಂಬ ಅರ್ಥದಲ್ಲಿ. ದಯವಿಟ್ಟು ಇದು ತಮ್ಮ ಸರ್ಕಾರದ ಕುರಿತು ಹೇಳಿದ್ದು ಎಂದು ತಪುý್ಪ ತಿಳಿಯಬೇಡಿ. ನೀವೇ ಹೇಳಿಕೊಂಡಂತೆ, ತಾಮ ಕರ್ನಾಟಕದ ಲಕ್ಕಿ ಮುಖ್ಯಮಂತ್ರಿ ಎನ್ನುಮದನ್ನು ನಾನು ಒಪ್ಪಿಕೊಂಡೇ ಈ ಪತ್ರ ಬರೆಯುತ್ತಿದ್ದೇನೆ.

ತಾಮ ಮುಖ್ಯಮಂತ್ರಿ ಆದ ಮೇಲೆ ಈ ರಾಜ್ಯದ ಎಷ್ಟೋ ಸಮಸ್ಯೆಗಳು ಪರಿಹಾರವಾಗಿರುಮದು ನಿಜ. ಮುಖ್ಯವಾಗಿ ಕರ್ನಾಟಕದ ಸಿಂಹ ಹಾಗೂ ಸಿಂಹಿಣಿ ಸ್ವಪ್ನಗಳು ಈಗಿಲ್ಲ. ಸಿಂಹಸ್ವಪ್ನವಾಗಿದ್ದ ವೀರಪ್ಪನ್‌ ಹತನಾಗಿದ್ದಾನೆ. ಕಾವೇರಿ ನೀರಿಗಾಗಿ ನಮಗೆ ಸಿಂಹಿಣಿಸ್ವಪ್ನವಾಗಿದ್ದ ಜಯಲಲಿತಾ ಕೂಡ ತೆಪ್ಪಗಾಗಿದ್ದಾರೆ. ಈ ಬಾರಿ ಆದ ಭಾರೀ ಮಳೆಯಿಂದ ತಮಿಳುನಾಡಿನ ಅರ್ಧ ಭೂಭಾಗ ಪ್ರವಾಹದಲ್ಲಿ ಮುಳುಗಿಹೋಗಿದೆ. ಆದ್ದರಿಂದ ಈಗ ನಾಮ ನೀರು ಬಿಡುತ್ತೇವೆಂದರೂ... ’ಬೇಡ ದಯವಿಟ್ಟು ಆ ಕೆಲಸ ಮಾಡಬೇಡಿ’ ಎಂದು ಅಂಗಾಲಾಚುವ ಸ್ಥಿತಿ ಜಯಲಲಿತಾ ಅವರಿಗೆ ಬಂದಿದೆ. ಯಾಕೋ ಎರಡು ವರ್ಷಗಳಿಂದ ಜಯಲಲಿತಾ ಹೋಗಿ ಜಲ-ಯಲಿತಾ ಆಗಿಬಿಟ್ಟಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಸುನಾಮಿಯಿಂದ ಜಲಪ್ರಳಯವಾಗಿ ತಮಿಳುನಾಡಿನ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ವಿಪರೀತ ಮಳೆ, ಚಂಡಮಾರುತದಿಂದಾಗಿ ಅಲ್ಲಿಯ ಜನ ಜಲಪ್ರಳಯದಲ್ಲಿ ಸಿಲುಕಿದ್ದಾರೆ. ಪಾಪ... ಹತ್ತಾರು ಸಾವಿರ ಜನರು ಮೃತರಾಗಿ ಹಲವಾರು ಲಕ್ಷ ಬಡವರು ನಿರಾಶ್ರಿತರಾಗಿದ್ದಾರೆ. ಹೀಗೆ, ನೀಮ ಲಕ್ಕಿ ಆದ ಕೂಡಲೇ ಜಯಾ ಅನ್‌ಲಕ್ಕಿ ಆಗಿದ್ದಾರೆ.

ಆದರೂ ಮುಖ್ಯಮಂತ್ರೀಜಿ,
ಕರ್ನಾಟಕದಲ್ಲಿನ್ನೂ ದಶಕಗಳಿಂದ ಇರುವ ಕೆಲಮ ಸಮಸ್ಯೆಗಳು ಹಾಗೇ ಮುಂದುವರೆದಿವೆ. ನಿಮ್ಮಂಥ ಲಕ್ಕಿ ಮುಖ್ಯಮಂತ್ರಿಗೂ ಅಮ ಜಗ್ಗುತ್ತಿಲ್ಲ. ಉದಾಹರಣೆಗೆ ಬೆಳಗಾವಿಯ ಗಡಿ ಸಮಸ್ಯೆ. ಉತ್ತರ ಕರ್ನಾಟಕದ ಅಭಿವೃದ್ಧಿ. ಕೊಡವರ ಕೊರಗು... ಇತ್ಯಾದಿ.

ಚಿಂತೆ ಬೇಡ. ನಿಮ್ಮ ಅದೃಷ್ಟದಿಂದಾಗಿ, ನನ್ನ ಕೆಲಮ ಸಲಹೆಯಿಂದಾಗಿ ಹಾಗೂ ಅತ್ಯಂತ ದೀರ್ಘವಾದ ತಮ್ಮ ತಾಳ್ಮೆಯಿಂದಾಗಿ ಈ ಸಮಸ್ಯೆಗಳೂ ಕೂಡ ತಂತಾನೇ ಪರಿಹಾರವಾಗುತ್ತವೆ ಎಂಬ ನಂಬಿಕೆ ನನಗಿದೆ.

ಉದಾಹರಣೆಗೆ, ಹೈದರಾಬಾದ್‌ ಕರ್ನಾಟಕದ ವಿಷಯವನ್ನೇ ನೋಡಿ. ಆ ಪ್ರದೇಶದ ಜನರು ತಮ್ಮ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಒತ್ತಾಯಿಸಿ ಬೇಸತ್ತು ಈಗ ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಂಡಿದ್ದಾರೆ! ಅವರು ತಮ್ಮದು ಪ್ರತ್ಯೇಕ ರಾಜ್ಯ ಎಂದು ಘೋಷಿಸಿಕೊಂಡು ಈ ತಿಂಗಳು, ಕನ್ನಡ ರಾಜ್ಯೋತ್ಸವದ ದಿನವೇ ತಮ್ಮ ನೂತನ ಹೈ-ಕ ರಾಜ್ಯದ ಧ್ವಜಾರೋಹಣ ಮಾಡಿಬಿಟ್ಟಿದ್ದಾರೆ! ಅಲ್ಲಿಗೆ, ಅವರ ಬಹುದಿನಗಳ ಬೇಡಿಕೆ ಈಡೇರಿದಂತಾಯಿತು. ರಾಜ್ಯದ ಅಭಿವೃದ್ಧಿಯ ತಲೆಬಿಸಿ ನಿಮಗೆ ಕಡಿಮೆಯಾಯಿತು. ’ನಿಮಗೂ ನಿಮ್ಮ ರಾಜ್ಯಕ್ಕೂ ಶುಭವಾಗಲಿ...’ ಎಂದು ಹೈ-ಕ ರಾಜ್ಯಕ್ಕೆ ಒಂದು ಸಾಲಿನ ಶುಭ ಸಂದೇಶ ಕಳಿಸಿಬಿಟ್ಟರೆ ನಿಮ್ಮ ಜವಾಬ್ದಾರಿ ಮುಗಿದುಹೋಯಿತು. ಹೈ-ಕ ರಾಜ್ಯದ ಪ್ರಜೆಗಳೇ ತಮ್ಮ ರಾಜ್ಯವನ್ನು ಅಭಿವೃದ್ಧಿ ಮಾಡಿಕೊಳ್ಳುತ್ತಾರಂತೆ. ಅದು ಹೇಗೆ ಅವರ ಅಭಿವೃದ್ಧಿಯಾಗುತ್ತದೋ ಗೊತ್ತಿಲ್ಲ.
ಬಟ್‌...ಹೌ ಲಕ್ಕಿ ಯು ಆರ್‌!

ಆದರೆ, ಉತ್ತರ ಕರ್ನಾಟಕದ ಇನ್ನೂ ಕೆಲಮ ಜಿಲ್ಲೆಗಳು ತಮ್ಮದೇ ರಾಜ್ಯವನ್ನು ರಚಿಸಿಕೊಳ್ಳುವಲ್ಲಿ ಪೂರ್ಣ ಯಶಸ್ವಿಯಾಗಿಲ್ಲ. ಹೈ-ಕ ರಾಜ್ಯದಂತೆ ಅವರೂ ಸಹ ಆದಷ್ಟು ಬೇಗ ತಮ್ಮ ರಾಜ್ಯದ ಬಾಮಟ ಹಾರಿಸಿಸುವ ಸಾಧ್ಯತೆ ಇದೆ. ಅವರೂ ತಮ್ಮ ರಾಜ್ಯದ ಬಾಮಟ ಹಾರಿಸಿಬಿಟ್ಟರೆ, ಕರ್ನಾಟಕ ಸರ್ಕಾರದ ಅರ್ಧ ಸಮಸ್ಯೆ ಪರಿಹಾರವಾದಂತೆ ಲೆಕ್ಕ. ಉತ್ತರ ಕರ್ನಾಟಕವನ್ನು ಈಗಾಗಲೇ ಅರ್ಧ ಮರೆತ ಕರ್ನಾಟಕ ಸರ್ಕಾರ ಆಮೇಲೆ ಸಂಪೂರ್ಣ ಮರೆಯಬಹುದು. ಆಮೇಲೆ, ಬೆಂಗಳೂರಿನ ಅಭಿವೃದ್ಧಿಗೆ ಮಾತ್ರ ಗಮನ ಕೇಂದ್ರೀಕರಿಸಲು ಕರ್ನಾಟಕ ಸರ್ಕಾರಕ್ಕೆ ದಾರಿ ಸುಗಮವಾಗುತ್ತದೆ.

ಆದೇ ರೀತಿ ಕೊಡವರಿಗೂ ಉತ್ತೇಜನ ನೀಡಬೇಕು. ಪ್ರತ್ಯೇಕ ರಾಜ್ಯ ರಚನೆಯ ಅವರ ಕೂಗು ಬಹಳ ವರ್ಷಗಳಿಂದ ಇದ್ದೇ ಇದೆ. ಅವರೂ ಒಂದು ರಾಜ್ಯ ರಚಿಸಿಕೊಂಡು ತಮ್ಮ ರಾಜ್ಯದ ಧ್ವಜಾರೋಹಣ ಮಾಡಿಬಿಟ್ಟರೆ ಮುಗಿಯಿತು. ಕೊಡವರ ದಶಕಗಳ ಬೇಡಿಕೆಯೂ ಈಡೇರಿದಂತಾಗುತ್ತದೆ. ಕರ್ನಾಟಕದ ಈ ಸಮಸ್ಯೆ ಪರಿಹಾರವಾದಂತೆ ಆಗುತ್ತದೆ.

ಒಂದು ವೇಳೆ ನಿಮಗೆ ಈ ಪ್ರತ್ಯೇಕ ರಾಜ್ಯ ರಚನೆ ಇಷ್ಟವಾಗಲಿಲ್ಲ ಅಂದರೆ, ನನ್ನದೊಂದು ಸಲಹೆಯಿದೆ. ಕೋಲೂ ಮುರಿಯಬಾರದು, ಹಾವೂ ಸಾಯಬೇಕು ಎನ್ನುವ ತಂತ್ರ ಅನುಸರಿಸುಮದು. ಅಂದರೆ, ಹೊಸ ರಾಜ್ಯ ರಚನೆಯೂ ಆಗಬಾರದು. ಕರ್ನಾಟಕ ಸರ್ಕಾರದಿಂದ ಈ ಪ್ರದೇಶಗಳು ಪ್ರತ್ಯೇಕವೂ ಆಗಬೇಕು ಎನ್ನುವ ಐಡಿಯಾ. ಹೈಕೋರ್ಟ್‌ ‘ಪೀಠ’ವೇ ಬೇಕೆಂದು ಹಠ ಹಿಡಿದವರಿಗೆ ಹೈಕೋರ್ಟ್‌ ‘ಬೆಂಚು’ ಕೊಟ್ಟು ನೀಮ ಸುಮ್ಮನಿರಿಸಿದಿರಲ್ಲ... ಆ ಥರದ್ದು!


ಹೈ-ಕ, ಉತ್ತರ ಕರ್ನಾಟಕ ಹಾಗೂ ಕೊಡಗುಗಳನ್ನು ಪ್ರತ್ಯೇಕ ರಾಜ್ಯಗಳೆಂದು ಕರೆಯುವ ಬದಲು ಇಮಗಳಿಗೆ ಕರ್ನಾಟಕದ ಉಪ-ರಾಜ್ಯಗಳೆಂದು ಮಾನ್ಯತೆ ನೀಡುಮದು. ಹಳೆಯ ಕಾಲದಲ್ಲಿ ಒಬ್ಬ ರಾಜನಿಗೆ ಹಲವಾರು ಸಾಮಂತರು ಇರುತ್ತಿರಲಿಲ್ಲವೇ? ಅದೇ ರೀತಿ ಈ ಉಪ ರಾಜ್ಯಗಳು ಕರ್ನಾಟಕ ರಾಜ್ಯದ ಅಡಿಯಲ್ಲಿ ಸ್ವತಂತ್ರ ರಾಜ್ಯಗಳಾಗಿ ಕಾರ್ಯನಿರ್ವಹಿಸಬೇಕು. ವರ್ಷಕ್ಕೆ ನಿಗದಿತ ಮೊತ್ತವನ್ನು ಈ ಉಪರಾಜ್ಯಗಳು ಕರ್ನಾಟಕದ ಬೊಕ್ಕಸಕ್ಕೆ ತೆರಿಗೆ ಸಲ್ಲಿಸಬೇಕು. ಹಾಗೂ ತಮ್ಮ ಅಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು.

ಈ ‘ಉಪ ರಾಜ್ಯ’ ಪದ್ಧತಿ ಭಾರತದ ಇತಿಹಾಸದಲ್ಲಿ ಯಶಸ್ವಿಯಾಗಿತ್ತು ಎಂಬುದನ್ನು ತಾಮ ಗಮನಿಸಬೇಕು. ಅಷ್ಟೇ ಅಲ್ಲ, ಇಂಥ ಪರಿಕಲ್ಪನೆ ವಾಣಿಜ್ಯ, ವ್ಯಾಪಾರದಲ್ಲೂ ಇದೆ. ಅದನ್ನು ಸಬ್‌ ಬ್ರೋಕರ್‌, ಸಬ್‌ ಲೀಸಿಂಗ್‌, ಸಬ್‌ ಕಾಂಟ್ರಾಕ್ಟ್‌ ಮುಂತಾದ ಪದಗಳಿಂದ ಬಣ್ಣಿಸುತ್ತಾರೆ. ಯೆ ಸಬ್‌... ಯಶಸ್ವಿಯಾಗಿ ನಡೆಯುತ್ತಿರುವಾಗ ’ಸಬ್‌ ಸ್ಟೇಟ್‌’ ಅಥವಾ ’ಉಪ ರಾಜ್ಯ’ ವ್ಯವಸ್ಥೆಯೂ ಯಶಸ್ವಿಯಾಗುಮದರಲ್ಲಿ ಯಾಮದೇ ಅನುಮಾನ ಬೇಡ. ಪ್ರಜಾತಂತ್ರ ಭಾರತದಲ್ಲಿ ಇಂಥ ಹೊಸ ರಾಜ್ಯಾಡಳಿತ ನೀತಿಯನ್ನು ಜಾರಿಗೊಳಿಸುವ ಮೊದಲ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗುವ ಲಕ್‌ ನಿಮ್ಮದಾಗುತ್ತದೆ. ಸ್ವಲ್ಪ ಯೋಚಿಸಿ.

ಆದರೆ, ಬೆಳಗಾವಿಯ ವಿಷಯ ತುಸು ಕಠಿಣ. ಯಾಕೆಂದರೆ, ಅದರ ಪರಿಸ್ಥಿತಿ ಪಾಕಿಸ್ತಾನ ಮತ್ತು ಭಾರತದ ನಡುವೆ ಸಿಲುಕಿರುವ ಕಾಶ್ಮೀರದಂತಾಗಿದೆ. ಅದಕ್ಕಾಗಿ ಬೆಳಗಾವಿಯನ್ನು ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಬಹುದು. ಅಧಿಕೃತವಾಗಿ ಬೆಳಗಾವಿ ಕರ್ನಾಟಕದಲ್ಲಿದೆ. ಆದರೆ, ಇದು ತನಗೆ ಸೇರಬೇಕು ಎಂದು ಮಹಾರಾಷ್ಟ್ರ ಹೋರಾಟ ಮಾಡುತ್ತಿದೆ. ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರದ ಆಡಳಿತವನ್ನು ದುರ್ಬಲಗೊಳಿಸಲು ಕೆಲಮ ಉಗ್ರಗಾಮಿಗಳು ಭಯೋತ್ವಾದನೆ ಮಾಡುತ್ತಿದ್ದಾರೆ. ಆ ಉಗ್ರರಿಗೆ ಗಡಿಯಾಚೆಗಿನ ಕುಮ್ಮಕ್ಕು ಮತ್ತು ನೆರಮ ದೊರೆಯುತ್ತಿದೆ. ಉಭಯ ರಾಜ್ಯಗಳ ಸರ್ಕಾರಗಳು ಥೇಟ್‌ ಭಾರತ-ಪಾಕ್‌ ಸರ್ಕಾರಗಳ ಥರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಅಲ್ಲಿ ಕಾಶ್ಮೀರ ಗಡಿಯ ಶಾಲೆಗಳಲ್ಲಿ ಜಿಹಾದಿ ಶಿಕ್ಷಣ ನೀಡುತ್ತಿದ್ದರೆ ಬೆಳಗಾವಿಯ ಗಡಿಯ ಶಾಲೆಗಳಲ್ಲಿ ಮರಾಠಿ ಜಿಹಾದಿ ತರಬೇತಿ ನೀಡಲಾಗುತ್ತಿದೆ. ಕನ್ನಡದ ವಿರುದ್ಧ, ಕನ್ನಡಿಗರ ವಿರುದ್ಧ ಪ್ರಚೋದನೆ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯೋತ್ಸವದ ದಿನ ಈ ಶಾಲೆಗಳಲ್ಲಿ ಕಪುý್ಪದಿನ ಆಚರಿಸಲಾಗುತ್ತದೆ. ಕಾಶ್ಮೀರ ಸಮಸ್ಯೆಗೂ ಗೋಲ್ಡನ್‌ ಜುಬಿಲಿ. ಬೆಳಗಾವಿ ಸಮಸ್ಯೆಗೂ ಸುವರ್ಣಮಹೋತ್ಸವ. ಇದನ್ನೆಲ್ಲ ನೋಡಿದರೆ, ಕಾಶ್ಮೀರವೇ ಬೆಳಗಾವಿಯಲ್ಲಿ ಅವತರಿಸಿದಂತೆ ಕಾಣುತ್ತದೆ.

ಹಾಗಾಗಿ, ಬೆಳಗಾವಿ ಸಮಸ್ಯೆಗೆ ಸದ್ಯಕ್ಕೆ ಯಾಮದೇ ಪರಿಹಾರ ಕಾಣುತ್ತಿಲ್ಲ. ಕರ್ನಾಟಕದ ಗಡಿಯಾಚೆಗಿನ ಉಗ್ರರು ಬೆಳಗಾವಿಯನ್ನು ಉಪ-ರಾಜ್ಯ ಎಂದು ಘೋಷಿಸಲೂ ಅವಕಾಶ ನೀಡುಮದಿಲ್ಲ. ಅದಕ್ಕಾಗಿ ಬೆಳಗಾವಿಯಲ್ಲಿ ಈಗಲೇ ಒಂದು ಗಡಿ ನಿಯಂತ್ರಣ ರೇಖೆ Line Of Control -LOC ಹಾಕಿಬಿಡುಮದು ಸೂಕ್ತ. ಇಲ್ಲವಾದರೆ, ಆಮೇಲೆ ಪಾಕ್‌ ಆಕ್ರಮಿತ ಕಾಶ್ಮೀರ ಇದ್ದಹಾಗೆ ಇನ್ನೊಂದು ಮಹಾರಾಷ್ಟ್ರ ಆಕ್ರಮಿತ ಬೆಳಗಾವಿ ಪ್ರದೇಶ ಸೃಷ್ಟಿಯಾಗಬಹುದು.

ಎಚ್ಚರ... ಎಚ್ಚರ!
ಇಂತು ಕರ್ನಾಟಕದ ಹಿತೈಷಿ
ಮೀರ್‌ ಸಾಧಿಕ್‌

Kannada Prabha issue dated November 28, 2005
Karnataka Divided in to Three Sub-States

-

Tuesday, November 22, 2005

ಸಾನಿಯಾ, ಖುಷ್ಬುಗೆ ಸೆಕ್ಸ್‌ ನಿಷೇಧ: ನರೇನ್‌ಗೆ ಪರವಾನಗಿ!

ಸಲ್ಮಾನ್‌, ಫರ್ದಿನ್‌ ಖಾನ್‌ ವಿರುದ್ಧ ಫತ್ವಾ ಇಲ್ಲ. ಪುರುಷರಿಗೆ ಶಿಕ್ಷೆಯಿಲ್ಲ
- ನೈತಿಕ ಕಾಂಡೋಂಗಳ ಕರಪತ್ರ


ನಾಮ ಎಷ್ಟು ಸಂಪ್ರದಾಯ ರಕ್ಷಕರು ನೋಡಿ. ಸಾನಿಯಾ ಜತೆ, ಅದೇ ಸ್ಥಳದಲ್ಲಿ, ಅದೇ ಸಂದರ್ಭದಲ್ಲಿ, ಅದೇ ಕ್ಷಣದಲ್ಲಿ ಅದೇ ರೀತಿಯ ಹೇಳಿಕೆಯನ್ನು ನೀಡಿದ ನರೇನ್‌ ಕಾರ್ತಿಕೇಯನ್‌ ವಿರುದ್ಧ ನಾಮ ತಕರಾರು ಮಾಡಲೇ ಇಲ್ಲವಲ್ಲ. ಯಾಕೆ? ಮದುವೆಗಿಂತ ಮೊದಲೇ ತಾಯಿಯಾದ ಕುಂತಿ, ವಿಷಯ ಬಯಲಾದಾಗ ದೋಷಾರೋಪಕ್ಕೆ ಒಳಗಾದಳು. ಆದರೆ, ಯಾರೂ ಇದಕ್ಕೆ ಕಾರಣನಾದ ಸೂರ್ಯನನ್ನು ದೂಷಿಸಲಿಲ್ಲ. ಇದೇ ತಾನೇ ನಮ್ಮ ಸಂಸ್ಕೃತಿ?



ಮಹಾಜನಗಳೇ,
ನಾಮ ಈ ಭೂಮಿಯ ಸಾಮಾಜಿಕ, ಸಾಂಸ್ಕೃತಿಕ, ನೈತಿಕ ಹಾಗೂ ಚಾರಿತ್ರಿಕ ರಕ್ಷಕರು. ನಮ್ಮನ್ನು ಬೇಕಾದರೆ ನೀಮ, ಸಮಾಜ ಸಂಸ್ಕೃತಿಯ ಕಮಾಂಡೋಗಳು ಅಥವಾ ನೈತಿಕ ಕಾಂಡೋಂಗಳು ಅಂತ ಕರೆಯಬಹುದು. ಯಾವ್ಯಾವಾಗ ಧರ್ಮಕ್ಕೆ, ಸಂಸ್ಕೃತಿಗೆ ಚ್ಯುತಿಯಾಗುತ್ತದೋ, ಆಗೆಲ್ಲ ನಾಮ ಪ್ಯಾಕಿನಿಂದ ಹೊರಬರುತ್ತೇವೆ... ಅರ್ಥಾತ್‌ ಅವತರಿಸುತ್ತೇವೆ! ...ಸಂಭವಾಮಿ ಯುಗೇ ಯುಗೇ, ಅಂತ ಹೇಳಿದ ಆ ಕೃಷ್ಣ ಪರಮಾತ್ಮ ಎಲ್ಲಿ ಮಾಯವಾದನೋ ಗೊತ್ತಿಲ್ಲ! ನಾಮ ಮಾತ್ರ ಕರೆಕ್ಟಾಗಿ ಟೈಮಿಗೆ ಸರಿಯಾಗಿ ಅವತರಿಸುತ್ತೇವೆ.

ನಮ್ಮನ್ನು ನಾಮ ಸಂಸ್ಕೃತಿಯ ರಕ್ಷಕರು, ನೈತಿಕತೆಯ ಕಮಾಂಡೋಗಳು ಅಂತ ಕರೆದುಕೊಳ್ಳುತ್ತೇವೆ.
ನಮಗೆ ಕಾಂಡೋಂಗಳು ಅಂತ ಸೆಕ್ಸೀ ಹೆಸರೂ ಇದೆ. ಏಕೆಂದರೆ, ಮನುಷ್ಯನಿಗೆ ಏಡ್ಸ್‌ ರೋಗ ಹರಡುಮದನ್ನು ಕಾಂಡೋಂಗಳು ಹೇಗೆ ತಡೆಯುತ್ತವೋ ಅದೇ ರೀತಿ ನಾಮ ನಮ್ಮ ಧರ್ಮ ಮತ್ತು ಸಂಸ್ಕೃತಿಗೆ ಲೈಂಗಿಕ ರೋಗ ಹರಡುಮದನ್ನು ತಡೆಯುತ್ತೇವೆ. ನೈತಿಕತೆ ಕೆಡುಮದನ್ನು ತಡೆಯುತ್ತೇವೆ. ಅದಕ್ಕಾಗಿ, ನಮಗೆ ಈ ಅನ್ವರ್ಥಕ ನಾಮ.

ಮಹಾಜನಗಳೇ,
ಎಂಥಾ ಪುಣ್ಯ ಭೂಮಿಯಾಗಿತ್ತು ನಮ್ಮದು! ಒಂದು ಕಾಲದಲ್ಲಿ ಲೈಂಗಿಕ ಕ್ರಿಯೆಯೇ ಇಲ್ಲದೇ ಸಂತಾನ ಉತ್ಪತ್ತಿಯಾಗುತ್ತಿದ್ದ ದೇಶ ನಮ್ಮದು. ದೇಶದ ಆರಾಧ್ಯ ದೈವ ಗಣಪತಿ ಸೃಷ್ಟಿಯಾದದ್ದು ಪಾರ್ವತಿ ತನ್ನ ಮೈಕೆಸರಿನಿಂದ ಮಾಡಿದ ಮೂರ್ತಿಯಿಂದ. ನಂತರ ಆತನಿಗೆ ಆನೆಯ ಮುಖ ಬಂದಿದ್ದು ಅಂಗಾಂಗ ಕಸಿಯಿಂದ. ಶ್ರೀರಾಮಚಂದ್ರ ಆಂಡ್‌ ಬ್ರದರ್ಸ್‌ ಹುಟ್ಟಿದ್ದು ದಶರಥನ ರಾಣಿಯರಿಗೆ ಯಜ್ಞದಿಂದ ಪ್ರಾಪ್ತವಾದ ಪಾಯಸದಿಂದ. ಈ ವೈದ್ಯ ವಿಜ್ಞಾನವನ್ನೇ ಈಗ ಕೃತಕ ಗರ್ಭಧಾರಣೆ ಎನ್ನಲಾಗುತ್ತದೆ. ಹಾಗೆ ನೋಡಿದರೆ, ಕೌರವರು ವಿಶ್ವದ ಮೊದಲ ಸಾಮೂಹಿಕ ಟೆಸ್ಟ್‌ಟ್ಯೂಬ್‌ ಬೇಬಿಗಳು. ವ್ಯಾಸ ಮಹಾಮುನಿಗಳು ನೀಡಿದ ತುಪ್ಪವನ್ನು ತಾಯಿ ಗಾಂಧಾರಿ ನೂರು ಕುಂಭಗಳಲ್ಲಿ ತುಂಬಿಟ್ಟಳು. ಕೆಲ ತಿಂಗಳುಗಳ ನಂತರ ಆ ಕುಂಭಗಳಿಂದ ಕೌರವರು ಜನಿಸಿದರು. ಇವರಿಗಿಂತ ಮೊದಲು ದ್ರೋಣರು ಎಲೆಯ ತಟ್ಟೆಯಲ್ಲಿ ಜನ್ಮ ಪಡೆದಿದ್ದರಿಂದ ಅವರೇ ವಿಶ್ವದ ಮೊದಲ ಟೆಸ್ಟ್‌ಟ್ಯೂಬ್‌ ಬೇಬಿ ಇರಬಹುದು. ಪಾಂಡವರು ಹುಟ್ಟಿದ್ದು ಕುಂತಿಗೆ ಪ್ರಾಪ್ತವಾದ ಮಂತ್ರಶಕ್ತಿಯಿಂದ. ಇದನ್ನು ಅಲ್ಟ್ರಸೋನಿಕ್‌ ಗರ್ಭ ತಂತ್ರಜ್ಞಾನ ಎಂದು ಇನ್ನು ವಿಜ್ಞಾನಿಗಳು ಕಂಡುಹಿಡಿಯಬಹುದೇನೋ! ಈ ಎಲ್ಲ ಉದಾಹರಣೆಗಿಂತ ಹೆಚ್ಚಾಗಿ ಗಂಗಾ ನದಿಯ ತಟದ ಮೇಲೆ, ಯುವತಿಯಾಗಿದ್ದ ಕುಂತಿ ಸೂರ್ಯಮಂತ್ರವನ್ನು ಪಠಿಸಿ ಮಗ ಕರ್ಣನನ್ನು ಪಡೆದ ಕಥೆ ಜನಜನಿತ. ರಕ್ತಬೀಜಾಸುರ ಎಂಬ ರಾಕ್ಷಸನ ಹನಿ ಹನಿ ರಕ್ತ ಭೂಮಿಗೆ ಬಿದ್ದಾಗಲೂ ಬೀಜ ಅಂಕುರವೊಡೆದಂತೆ ನೂರಾರು, ಸಾವಿರಾರು ಸಂಖ್ಯೆಯಲ್ಲಿ ’ತದ್ರೂಪಿಗಳಂತೆ’ ಪುನರುತ್ಪತ್ತಿ ಆಗುತ್ತಿದ್ದರಂತೆ. ಇದನ್ನೇ ವಿಜ್ಞಾನಿಗಳು ರಕ್ತದ ಕಣದಿಂದ ತದ್ರೂಪಿಗಳನ್ನು ಸೃಷ್ಟಿಸುವ ಕ್ಲೋನಿಂಗ್‌ ತಂತ್ರಜ್ಞಾನ ಎಂದು ಕರೆಯುತ್ತಾರೆ.

ಇಂಥ ಸೆಕ್ಸ್‌ರಹಿತ ಸಂತಾನ ಭಾಗ್ಯವಿದ್ದ ಈ ಭರತಭೂಮಿಯಲ್ಲಿ ಇಂದು ಸಂತಾನ ಭಾಗ್ಯವೇ ಬೇಡದ ಲೈಂಗಿಕತೆ ವಿಜೃಂಭಿಸುತ್ತಿದೆ! ಭಾರತ ಕಾಮದೇವನ ಆಡುಂಬೋಲವಾಗಿದೆ.

ಸಾಲದು ಎಂಬಂತೆ ದೇಶದ ಹೆಣ್ಣುಮಕ್ಕಳೆಲ್ಲಾ ಯುವಕರಿಗೆ ಸೆಕ್ಸಾಯಣ ಸೂತ್ರ ಕಲಿಸುತ್ತಿದ್ದಾರೆ. ’ತಾಮ ಕೆಟ್ಟಿದ್ದಲ್ಲದೇ ನೀವೂ ಕೆಟ್ಟುಹೋಗಿ. ಈಗಿನ ಕಾಲದಲ್ಲಿ ನೀಮ ಕೆಟ್ಟು ಹೋಗುಮದನ್ನು ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ನೀಮ ಸುರಕ್ಷಿತ ರೀತಿಯಲ್ಲಿ ಕೆಟ್ಟು ಹೋಗಿ’ ಅಂತ ಧರ್ಮಬೋಧೆ ಮಾಡುತ್ತಿದ್ದಾರೆ. ಇಂಥ ಸೂತ್ರಗಳನ್ನು ಕಲಿಸುವ ಹಕ್ಕು ಇರುಮದು ವಾತ್ಸಾಯನನಂಥ ಮಹರ್ಷಿಗಳಿಗೆ ಮಾತ್ರ. ಇಡೀ ಪುರಾಣದಲ್ಲಿ ಯಾರಾದರೂ ಸ್ತ್ರೀ ಮಹರ್ಷಿ ಇಂತಹ ಉಪದೇಶ ಮಾಡಿದ ಉದಾಹರಣೆ ತೋರಿಸಿ!
‘ಈಗಿನ ಕಾಲದಲ್ಲಿ ಕನ್ಯೆಯರು ಕನ್ಯತ್ವ ಉಳಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ, ವಿದ್ಯಾವಂತ ಹುಡುಗರು ಕನ್ಯೆಯರನ್ನೇ ಮದುವೆಯಾಗುತ್ತೇವೆ ಎಂದು ಬಯಸುಮದಿಲ್ಲ.’ ಎಂಬರ್ಥದಲ್ಲಿ ಖುಷ್ಬು ಪ್ರವಚನ ನೀಡಿದ್ದಾಳೆ.

ಇದನ್ನು ಖುಷ್ಬು ಹೇಳಿರುಮದಕ್ಕೆ ನಮ್ಮ ವಿರೋಧವಿದೆ. ಅದನ್ನೇ ಯಾರಾದರೂ ಪುರುಷ ಹೇಳಿದ್ದರೆ ನಾಮ ಒಪ್ಪಿಕೊಳ್ಳುತ್ತಿದ್ದೆಮ.
ಈಗಿನ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದರೆ ಖುಷ್ಬು ಹೇಳಿರುಮದು ನಿಜ ಅಂತ ನಮಗೂ ಗೊತ್ತು. ಆದರೂ, ಆ ಸತ್ಯವನ್ನು ಹೇಳಲು ಆಕೆಗೆ ಹಕ್ಕಿಲ್ಲ ಅನ್ನುಮದೇ ನಮ್ಮ ಪ್ರಮುಖ ಆಕ್ಷೇಪ.

ಆಕೆ ಮದುವೆಗಿಂತ ಮೊದಲು ಕನ್ಯತ್ವ ಕಳೆದುಕೊಂಡಿದ್ದರೂ ನಮ್ಮ ಅಭ್ಯಂತರವಿಲ್ಲ. ಆಕೆ, ಸಿನಿಮಾಗಳಲ್ಲಿ ತನ್ನ ಬಹುತೇಕ ಅಂಗಾಂಗಗಳನ್ನು ತೋರಿಸಿರುಮದಕ್ಕೂ ನಮ್ಮ ತಕರಾರಿಲ್ಲ. ಆದರೆ, ಆ ಮಾತನ್ನು ಸಾರ್ವಜನಿಕವಾಗಿ ಆಕೆ ಹೇಳಬಾರದಿತ್ತು. ಇದು ನಮ್ಮ ಸಂಸ್ಕೃತಿಗೆ ತಕ್ಕುದಲ್ಲ.

ಇನ್ನು ಸಾನಿಯಾ ಕಥೆಯೂ ಅಷ್ಟೇ. ಆಕೆ, ಬುರ್ಖಾ ಹಾಕಿಕೊಂಡು ಟೆನಿಸ್‌ ಆಡುಮದು ಬಿಟ್ಟು ಚೋಟುದ್ದ ಲಂಗ ಹಾಕಿಕೊಂಡು ಟೆನಿಸ್‌ ಆಡುತ್ತಾಳೆ. ಟೈಟ್‌ ಟೀಶರ್ಟ್‌ ತೊಟ್ಟ ಆಕೆ ಶಾಟ್‌ ಹೊಡೆದರೆ, ನಮ್ಮ ಕಣ್ಣುಗಳೆಲ್ಲ ಆಟ ನೋಡುಮದು ಬಿಟ್ಟು ಆಕೆಯ ಮಾಟ ನೋಡುತ್ತವೆ.

ಟೆನಿಸ್‌ ಆಟಕ್ಕೇ ಇಷ್ಟು ಸಣ್ಣ ಬಟ್ಟೆ ತೊಟ್ಟುಕೊಳ್ಳುವ ಆಕೆ ಇನ್ನು ಈಜು ಸ್ಪರ್ಧೆಯಲ್ಲಿ ಭಾಗವಹಿಸುಮದಾದರೆ ಎಷ್ಟು ಬಟ್ಟೆ ತೊಟ್ಟುಕೊಳ್ಳುತ್ತಿದ್ದಳೋ ಅಂತ ಭಯವಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಆಕೆ ಕೂಡ ಖುಷ್ಬು ಮಾಡಿದ ತಪ್ಪನ್ನೇ ಮಾಡಿದ್ದಾಳೆ. ಅದಕ್ಕೇ ನೈತಿಕ ಕಾಂಡೋಮ್‌ಗಳಾದ ನಾಮ ಆಕೆಯ ವಿರುದ್ಧ ಫತ್ವಾ ಹೊರಡಿಸುವ ತಯಾರಿಯನ್ನು ಮಾಡಿಕೊಂಡಿದ್ದೇವೆ.

ನಾಮ ಎಷ್ಟು ಸಂಪ್ರದಾಯ ರಕ್ಷಕರು ನೋಡಿ. ಸಾನಿಯಾ ಜತೆ, ಅದೇ ಸ್ಥಳದಲ್ಲಿ, ಅದೇ ಸಂದರ್ಭದಲ್ಲಿ, ಅದೇ ಕ್ಷಣದಲ್ಲಿ ಅದೇ ರೀತಿಯ ಹೇಳಿಕೆಯನ್ನು ನೀಡಿದ ನರೇನ್‌ ಕಾರ್ತಿಕೇಯನ್‌ ವಿರುದ್ಧ ನಾಮ ತಕರಾರು ಮಾಡಲೇ ಇಲ್ಲವಲ್ಲ. ಯಾಕೆ ಹೇಳಿ?
ಯಾಕೆಂದರೆ, ಆತ ಪುರುಷ. ಆತನಿಗೆ ಸೆಕ್ಸ್‌ ಬಗ್ಗೆ ಅಥವಾ ವಿವಾಹ ಪೂರ್ವ ಸೆಕ್ಸ್‌ ಬಗ್ಗೆ ಮಾತನಾಡಲು ಪರವಾನಗಿಯಿದೆ. ಅದಕ್ಕಾಗಿ ಆತನ ವಿರುದ್ಧ ನಾಮ ಸೊಲ್ಲು ಎತ್ತಲಿಲ್ಲ. ನಾವಷ್ಟೇ ಏನು, ಸಾನಿಯಾ ಪ್ರಕರಣದ ಕುರಿತು ವರದಿ ಮಾಡಿದ ಭಾರತದ ಯಾವ ಪತ್ರಿಕೆಯೂ ಈ ಕುರಿತು ಪ್ರಶ್ನೆ ಹಾಕಲಿಲ್ಲ. ಏಕೆಂದರೆ, ಪುರಷರಿಗೆ ಲೈಂಗಿಕ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯ ನೀಡಿದೆ. ಮಹಿಳೆಯರಿಗೆ ನೀಡಿಲ್ಲ. ಈ ಸಂಪ್ರದಾಯದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವವಿಲ್ಲ. ಇದನ್ನು ಎಲ್ಲರೂ ಅರಿತು ನಡೆಯಬೇಕು.
ಅಷ್ಟೇ ಅಲ್ಲ. ಫರ್ದಿನ್‌ ಖಾನ್‌ ಎಂಬ ಸಿನಿಮಾ ನಟ ಕೇವಲ ಒಂದೇ ಒಂದು ಚಿಕ್ಕ ಒಳಉಡುಪು ಧರಿಸಿದ ಚಿತ್ರಗಳು ಎಷ್ಟಿಲ್ಲ. ಐಶ್ವರ್ಯ ರೈ ಜತೆ ಬೇಕಾದಷ್ಟು ಆಡಿಕೊಂಡಿದ್ದ ಸಲ್ಮಾನ್‌ ಖಾನ್‌ನ ಸಂಭಾಷಣೆ ಪ್ರಕಟವಾಗಿದ್ದು ನೆನಪಿರಬಹುದು. ಆತ ಎಷ್ಟು ಬಾರಿ ಫ... ಎಂಬ ನಿಷೇಧಿತ ಶಬ್ದವನ್ನು ಬಳಸಿಲ್ಲ. ಯಾವ್ಯಾವ ಹೀರೋಯಿನ್‌ಗಳ ಜತೆಗೆ ತಾನು ಮಲಗಿದ್ದೆ ಎಂದು ಅತ ಹೇಳಿದ್ದನಲ್ಲ. ಆದರೆ, ಅದು ತಪ್ಪಲ್ಲ. ಏಕೆಂದರೆ, ಆತ ಪುರುಷ. ಅದಕ್ಕೇ, ಸಲ್ಮಾನ್‌ ಖಾನ್‌ ವಿರುದ್ಧವಾಗಲಿ, ಫರ್ದಿನ್‌ ಖಾನ್‌ ವಿರುದ್ಧವಾಗಿ ಯಾರೂ ಪತ್ವಾ ಹೊರಡಿಸಲಿಲ್ಲ.

ಇಷ್ಟಕ್ಕೂ ನಿಮಗೆ ಗೊತ್ತಲ್ಲ? ಯಾವಾಗಲೂ ಹೇಳದೇ ಮಾಡುವವ ರೂಢಿಯೊಳಗುತ್ತಮನು. ಆಡಿ ಮಾಡುವ ಮಧ್ಯಮನು. ಆಡಿಯೂ ಮಾಡದವ ಅಧಮನು ಎಂದು ಸರ್ವಜ್ಞನೇ ಹೇಳಿದ್ದಾನೆ. ಆದ್ದರಿಂದ ಸಂಪ್ರದಾಯದ ಪ್ರಕಾರ ಉತ್ತಮ ಮಹಿಳೆ ಎನ್ನಿಸಿಕೊಳ್ಳಬೇಕಾದರೆ ಯಾಮದೇ ಮಹಿಳೆ ಮಾಡಬೇಕಾದದ್ದು ಇಷ್ಟೇ... ಆಕೆ ವಿವಾಹದ ಮೊದಲಾಗಲೀ, ನಂತರವಾಗಲೀ, ಪತಿಯ ಜತೆಗಾಗಲೀ, ಮಿತ್ರನ ಜತೆಗಾಗಲೀ ಲೈಂಗಿಕತೆಯಲ್ಲಿ ತೊಡಗಬುಹುದು. ಆದರೆ, ಆಕೆ ಅದನ್ನ ಗುಪ್ತವಾಗಿ ಇಟ್ಟಿರಬೇಕು. ಅರ್ಥಾತ್‌ ಆಡದೇ ಮಾಡಬೇಕು. ಇದರಿಂದ ನಮ್ಮ ಸಂಸ್ಕೃತಿಗೆ ಅಪಚಾರವಿಲ್ಲ.

ಮದುವೆಗಿಂತ ಮೊದಲೇ ತಾಯಿಯಾದ ಕುಂತಿ ಕೊನೆಗೆ ವಿಷಯ ಬಯಲಾದಾಗ ದೋಷಾರೋಪಕ್ಕೆ ಒಳಗಾದಳು. ಆದರೆ, ಯಾರೂ ಇದಕ್ಕೆ ಕಾರಣನಾದ ಸೂರ್ಯನನ್ನು ದೂಷಿಸಲಿಲ್ಲ. ಇದೇ ತಾನೇ ನಮ್ಮ ಸಂಸ್ಕೃತಿ?

ಇಂತಿ ನೈತಿಕ ಕಮಾಂಡೋಗಳು


Kannada Prabha issue dated November 21, 2005
Sex for Naren Kartikeyan, No sex for Sania and Khushbu!

-

Tuesday, November 15, 2005

ಕಂಚಿ ಸ್ವಾಮಿಗಿಲ್ಲದ ರಾಷ್ಟ್ರಪತಿ ಕ್ಷಮಾದಾನ ಅಬು ಸಲೇಂಗೆ!

ಗಲ್ಲು ಶಿಕ್ಷೆಯಿಂದ ಪಾರುಮಾಡುಮದು ಸರ್ಕಾರಕ್ಕೇ ಅನಿವಾರ್ಯ:
ಮೋನಿಕಾ ಬೇಡಿಗೆ ಅಬು ಸಲೇಂ ರಹಸ್ಯ ಪತ್ರ


ಕೋರ್ಟು, ನಮಗೆ ಗಲ್ಲು ಶಿಕ್ಷೆ ವಿಧಿಸಿದರೂ ರಾಷ್ಟ್ರಪತಿ ಕ್ಷಮಾದಾನ ನೀಡಿ ನಮ್ಮನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡುತ್ತಾರೆ. ಅವರು ಪಾರು ಮಾಡಲೇ ಬೇಕಾಗುತ್ತದೆ. ಯಾಕೆಂದರೆ, ಇದು ಭಾರತ ಸರ್ಕಾರ ಪೋರ್ಚುಗಲ್‌ ಸರ್ಕಾರಕ್ಕೆ ನೀಡಿದ ಲಿಖಿತ ಭರವಸೆಯ ಪ್ರಶ್ನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರದ ವಿಶ್ವಾಸಾರ್ಹತೆಯ ವಿಷಯ.


ಮೋನಿ ಡಾರ್ಲಿಂಗ್‌,
ಮುಂಬೈ ಸ್ಫೋಟ, ಗುಲ್‌ಶನ್‌ ಕುಮಾರನ್ನ ಮಟಾಷ್‌ ಮಾಡಿದ್ದೂ ಸೇರಿ... ಸುಮಾರು ೬೦ ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಸಿಬಿಐನವರು ಹಿಡಿದು ಹಾಕಿದ್ದಾರೆ. ಇಲ್ಲಿಗೆ ನಮ್ಮ ಕಥೆ ಮುಗೀತು ಅಂತ ಭಯ ಪಟ್ಕೋಬೇಡ ಮೇರಿ ಜಾನ್‌. ಇವರು ನಮಗೆ ಏನೂ ಮಾಡೋಲ್ಲ. ಕೋರ್ಟಿನಿಂದಲೂ ಏನೂ ಮಾಡೋಕೆ ಆಗೋಲ್ಲ. ನಮ್ಮ ರಕ್ಷಣೆಯ ಭಾರವನ್ನು ಭಾರತ ಸರ್ಕಾರವೇ ಹೊತ್ತಿದೆ. ಸಾಲದೂ ಅಂತ ಪೋರ್ಚುಗಲ್‌ ಸರ್ಕಾರ, ಯೂರೋಪಿಯನ್‌ ಒಕ್ಕೂಟ, ವಿಶ್ವಸಂಸ್ಥೆ ಎಲ್ಲವೂ ನಮ್ಮ ಪರವಾಗೇ ನಿಂತಿವೆ. ಇನ್‌ ಫ್ಯಾಕ್ಟ್‌, ಕಂಚಿ ಸ್ವಾಮೀಜಿಗಿಂತ ನಾವೇ ಸೇಫ್‌ ಗೊತ್ತಾ?

ಕೊಲೆ ಮಾಡಿದ ಆರೋಪ ಸಾಬೀತಾದರೆ, ಕಂಚಿ ಸ್ವಾಮೀಜಿಗೆ ಗಲ್ಲು ಶಿಕ್ಷೆ ಗ್ಯಾರಂಟಿಯಂತೆ. ಯಾಕೆಂದರೆ, ಸಮಾಜಕ್ಕೆ ಮಾರ್ಗದರ್ಶನ ಮಾಡುವವರು, ಜನರಿಗೆ ಮಾದರಿಯಾಗಿ ಇರುವವರು, ಸಮಾಜದಲ್ಲಿ... ಅಂಥ ದೊಡ್ಡ ಸ್ಥಾನದಲ್ಲಿ ಇರುವವರೇ ನಮ್ಮ ಥರ ಕೊಲೆ, ಗಿಲೆ ಮಾಡಿಕೊಂಡಿದ್ದರೆ ಅವರನ್ನು ಕ್ಷಮಿಸಲು ಹೇಗೆ ಸಾಧ್ಯ?

ಆದರೆ, ನಮ್ಮ ಕೇಸ್‌ ಬೇರೆ. ‘ಪಾಪ... ಏನೋ ದಾರಿ ತಪ್ಪಿದ ಮಕ್ಕಳು. ಯಾಮದೋ ಗಳಿಗೆಯಲ್ಲಿ ತಪುý್ಪ ದಾರಿ ಹಿಡಿದಿದ್ದಾರೆ. ಈಗ ತಪ್ಪಿನ ಅರಿವಾಗಿದೆ. ತಪುý್ಪ ತಿದ್ದಿಕೊಳ್ಳಲು ಒಂದು ಅವಕಾಶ ಕೊಡಿ. ಮುಂದೆ ಅವರು ಸರಿಯಾಗ್ತಾರೆ.’ ಅಂತ ನಮ್ಮ ಪರವಾಗಿ ಇಡೀ ದೇಶದ ಬುದ್ಧಿಜೀವಿಗಳೇ ವಾದಿಸುತ್ತಾರೆ ನೋಡುತ್ತಿರು.

ಅಲ್ಲದೇ, ಪೊಲೀಸರು ನಮ್ಮ ಬಾಯಿ ಬಿಡಿಸಲು ನಮಗೆ ಹಿಂಸೆ ಕೊಡುವಂತೆಯೂ ಇಲ್ಲ. ಯಾಕೆಂದರೆ, ಅವರು ಹಾಗೆ ಮಾಡಿದರೆ ಅದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅದಕ್ಕಾಗಿ, ಮಾನವ ಹಕ್ಕು ಹೋರಾಟಗಾರರೂ ನಮ್ಮ ಪರವಾಗೇ ಹೋರಾಟ ಮಾಡುತ್ತಾರೆ. ವೀರಪ್ಪನ್‌ನ ‘ಮಾನವ ಹಕ್ಕಿಗಾಗೇ’ ಹೋರಾಟ ಮಾಡಿದ ಇವರೆಲ್ಲ ನಮ್ಮ ರಕ್ಷಣೆಗೂ ಬಾರದೇ ಇರುತ್ತಾರಾ!

ಅದಕ್ಕಿಂತ ಹೆಚ್ಚಾಗಿ ನಮಗೆ ಭಾರತ ಮತ್ತು ಪೋರ್ಚುಗಲ್‌... ಎರಡೂ ಸರ್ಕಾರದ ರಕ್ಷಣೆಯಿದೆ ಬಿಡು.

‘ಇವರಿಬ್ಬರಿಗೂ ಗಲ್ಲು ಶಿಕ್ಷೆ ವಿಧಿಸೋಲ್ಲ. ೨೫ ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯನ್ನೂ ಕೊಡೋಲ್ಲ’... ಅಂತ ಭಾರತ ಸರ್ಕಾರದ ಪರವಾಗಿ ಆಗಿನ ಪ್ರಧಾನಿ ವಾಜಪೇಯೀಜಿ ಪೋರ್ಚುಗಲ್‌ ಸರ್ಕಾರಕ್ಕೆ ಲಿಖಿತ ಭರವಸೆ ಕೊಟ್ಟಿದ್ದರಿಂದ ತಾನೆ ನಮ್ಮನ್ನು ಆ ಸರ್ಕಾರ ಭಾರತದ ವಶಕ್ಕೆ ಕೊಟ್ಟಿದ್ದು. ಒಂದು ವೇಳೆ ಭಾರತ ಈ ರೀತಿ ಭರವಸೆ ಕೊಡದೇ ಇದ್ದಿದ್ದರೆ ಪೋರ್ಚುಗಲ್‌ ಸರ್ಕಾರ ನಮ್ಮನ್ನು ಭಾರತದ ವಶಕ್ಕೆ ನೀಡುತ್ತಲೇ ಇರಲಿಲ್ಲ. ಏಕೆಂದರೆ, ಯೂರೋಪಿನ ದೇಶಗಳಲ್ಲಿ ಗಲ್ಲು ಶಿಕ್ಷೆಯೂ ಇಲ್ಲ. ೨೫ ವರ್ಷಕ್ಕಿಂತ ದೀರ್ಘ ಕಾಲದ ಜೈಲು ಶಿಕ್ಷೆಯೂ ಇಲ್ಲ. ಆದ್ದರಿಂದ ಗಲ್ಲು ಶಿಕ್ಷೆಯಿರುವ ದೇಶಗಳಿಗೆ ಯುರೋಪ್‌ ಅಪರಾಧಿಗಳನ್ನು ಹಸ್ತಾಂತರಿಸುಮದಿಲ್ಲ.

ಈ ಕಟ್ಟಳೆಯನ್ನು ಒಪ್ಪಿ ನಮ್ಮನ್ನು ವಶಪಡಿಸಿಕೊಂಡಿರುವ ಭಾರತವೇನಾದರೂ ಈಗ ತನ್ನ ಮಾತಿಗೆ ತಪ್ಪಿ ನಮ್ಮ ಸಾವಿಗೆ ಕಾರಣವಾದರೆ ಪೋರ್ಚುಗಲ್‌ ದೇಶ ಸುಮ್ಮನಿರುತ್ತದಾ? ಅಂತಾರಾಷ್ಟ್ರೀಯ ಒಪ್ಪಂದದ ಉಲ್ಲಂಘನೆ ಅಂತ ಹುಯಿಲೆಬ್ಬಿಸುತ್ತದೆ. ಇಡೀ ಯುರೋಪಿಯನ್‌ ಒಕ್ಕೂಟವನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತದೆ. ಈ ಗದ್ದಲ ಸಹಜವಾಗಿ ವಿಶ್ವಸಂಸ್ಥೆವರೆಗೂ ಹೋಗದೇ ಇರುತ್ತದಾ? ಹಾಗಾಗಿ ನಮ್ಮನ್ನು ರಕ್ಷಿಸುಮದು ಈಗ ಭಾರತಕ್ಕೆ ಅಂತಾರಾಷ್ಟ್ರೀಯ ಪ್ರತಿಷ್ಠೆಯ ಪ್ರಶ್ನೆ. ಇಂಥ ಸರ್ಕಾರಿ ಗೌರವ ಪಡೆಯುತ್ತಿರುವ ಭಾರತದ ಮೊದಲ ಪ್ರಜೆಗಳು ನಾಮ ಅಂತ ಹೆಮ್ಮೆ ಪಡು ಮೋನಿ!

ಒಂಥರಾ ತಮಾಷೆಯಾಗಿದೆಯಲ್ಲಾ?...
ಅಷ್ಟು ಕೊಲೆಗಳನ್ನು ಮಾಡಿದ ನನ್ನನ್ನ ಎರಡು ಬೃಹತ್‌ ದೇಶಗಳ ಸರ್ಕಾರಗಳೇ ಹೇಗೆ ರಕ್ಷಿಸುತ್ತಿವೆ ನೋಡು! ನಾನೆಷ್ಟು ಪವರ್‌ಫುಲ್‌ ಅಲ್ಲವಾ? ನನ್ನಂಥ ಗಂಡ ಸಿಕ್ಕಿದ್ದು ನಿನ್ನ ಲಕ್ಕು ಅಂದುಕೊಳ್ಳುತ್ತೀಯಾ ಡಾರ್ಲಿಂಗ್‌?

ಭಾರತಕ್ಕೆ ನಮ್ಮನ್ನು ಕರೆತಂದು ಟಾಡಾ ಕೋರ್ಟಿಗೆ ಸಿಬಿಐ ಹಾಜರುಪಡಿಸಿದ ದಿನ , ಕೋರ್ಟಿನ ಗರ್ಜನೆ ಕೇಳಿ ನನಗೂ ಸ್ವಲ್ಪ ಭಯ ಆದದ್ದು ನಿಜ.

‘ಇವರು ಇಬ್ಬರೂ ಅಪರಾಧಿಗಳು ಅಂತ ಸಾಬೀತಾದರೂ ಇವರಿಗೆ ಗಲ್ಲು ಶಿಕ್ಷೆ ವಿಧಿಸುವಂತಿಲ್ಲ ಹಾಗೂ ೨೫ ವರ್ಷಕ್ಕಿಂತ ಹೆಚ್ಚು ಶಿಕ್ಷೆ ಕೊಡುವಂತಿಲ್ಲ’ ಎಂದು ನಮ್ಮ ಪರವಾಗಿ ಸರ್ಕಾರಿ ವಕೀಲ ವಾದ ಮಂಡಿಸುತ್ತಿದ್ದಂತೆ, ಆ ಜಡ್ಜಿಗೆ ತುಂಬಾ ಕೋಪ ಬಂತು. ‘ಕೋರ್ಟಿಗೆ ಹೀಗೆಲ್ಲ ಕಟ್ಟಳೆ ವಿಧಿಸಲು ನೀವ್ಯಾರು? ಅಪರಾಧಕ್ಕೆ ತಕ್ಕ ಶಿಕ್ಷೆಯನ್ನು ಕೋರ್ಟು ವಿಧಿಸುತ್ತದೆ. ಸೂರ್ಯನಿಗೇ ಟಾರ್ಚಾ? ಕೋರ್ಟಿಗೇ ಶರತ್ತಾ?’ ಅಂತ ದೇವೇಗೌಡರ ಥರ ಗುಡುಗಿದರು.

ಆ ಕ್ಷಣ ನನಗೆ ಎಲ್ಲಿ ಎಡವಟ್ಟಾಗುತ್ತದೋ ಅಂತ ದಿಗಿಲಾಯಿತು. ಈಗ ವಕೀಲರ ಜೊತೆ ಸಮಾಲೋಚನೆ ನಡೆಸಿದ ನಂತರ ನನಗೆ ಸಂಪೂರ್ಣ ಸಮಾಧಾನ ಆಗಿದೆ.

ಕೋರ್ಟು, ಬೇಕಾದರೆ ನಮಗೆ ಗಲ್ಲು ಶಿಕ್ಷೆ ವಿಧಿಸಲಿ. ಆದರೂ ನಮಗೆ ಯಾವ ಭಯವೂ ಇಲ್ಲ. ಯಾಕೆ ಗೊತ್ತಾ? ರಾಷ್ಟ್ರಪತಿ ನಮಗೆ ಕ್ಷಮಾದಾನ ನೀಡಿ ನಮ್ಮನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡುತ್ತಾರೆ. ಅವರು ಪಾರು ಮಾಡಲೇ ಬೇಕು. ಯಾಕೆಂದರೆ, ಇದು ಭಾರತ ಸರ್ಕಾರ ಪೋರ್ಚುಗಲ್‌ ಸರ್ಕಾರಕ್ಕೆ ನೀಡಿದ ಲಿಖಿತ ಭರವಸೆಯ ಪ್ರಶ್ನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಶ್ವಾಸಾರ್ಹತೆ ಹಾಗೂ ಪ್ರತಿಷ್ಠೆಯ ವಿಷಯ. ಆದ್ದರಿಂದ ಈ ದೇಶದ ಅಂತಾರಾಷ್ಟ್ರೀಯ ವಿಶ್ವಾಸಾರ್ಹತೆ ಉಳಿಸಲು ರಾಷ್ಟ್ರಪತಿಗಳು ನಮಗೆ ವಿಧಿಸಿದ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಲೇ ಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಪತಿಗಳು ಯಾರಿಗೂ ಕ್ಷಮಾದಾನ ನೀಡಿಲ್ಲ. ಅದನ್ನು ಪಡೆಯುವ ನಾವೇ ಅದೃಷ್ಟವಂತರು ಡಾರ್ಲಿಂಗ್‌.

ಮೋನಿ ಡಾರ್ಲಿಂಗ್‌,
ಈ ನಡುವೆ ಜೈಲಿನಲ್ಲಿ ನನಗೆ ತುಂಬಾ ಫ್ರೀ ಟೈಮ್‌ ಸಿಗುತ್ತೆ. ಆಗ ನಾನು ಒಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ. ಶೀರ್ಷಿಕೆ: ಗಲ್ಲು ಶಿಕ್ಷೆಯಿಂದ ಪಾರಾಗುಮದು ಹೇಗೆ?

ಹೇಗೆ ಯೂರೋಪಿಯನ್‌ ದೇಶಗಳಿಂದ ಭಾರತಕ್ಕೆ ಗಡಿಪಾರಾಗಿ ಬಂದರೆ ಎಂಥ ಅಪರಾಧ ಮಾಡಿದ್ದರೂ ಭಾರತದ ಗಲ್ಲು ಶಿಕ್ಷೆಯಿಂದ ಪಾರಾಗಬಹುದು ಎಂಬುದನ್ನು ಹಂತ ಹಂತವಾಗಿ ವಿವರಿಸುತ್ತೇನೆ. ಈ ಪುಸ್ತಕ ಹೇಗೆ ಖರ್ಚಾಗುತ್ತೆ ನೋಡುತ್ತಿರು!

ಕಂಚಿ ಮಠದ ಒಂದೇ ಒಂದು ಕೊಲೆ ಕೇಸಿನಲ್ಲಿ ಸಿಕ್ಕಿಕೊಂಡು ವಿಲಿವಿಲಿ ಒದ್ದಾಡುತ್ತಿರುವ ಸ್ವಾಮಿಗಳ ಪರಿಸ್ಥಿತಿ ನೋಡಿ ನಗು ಬರುತ್ತಿದೆ. ಅಷ್ಟೇ ಅಲ್ಲ... ಈ ಸಿಬಿಐ ಅಧಿಕಾರಿಗಳ ಕಷ್ಟ ಕಂಡು ಪಾಪ ಅನ್ನಿಸುತ್ತಿದೆ.

ಮುಂಬೈ ಸ್ಫೋಟ ಸಂಭವಿಸಿ ೧೨ ವರ್ಷವಾದರೂ ಸಿಬಿಐ ಅಧಿಕಾರಿಗಳು ಇನ್ನೂ ಅಪರಾಧಿಗಳ ಹುಡುಕಾಟದಲ್ಲೇ ಇದ್ದಾರೆ. ನನ್ನನ್ನು ಪಡೆಯಲು ಪೋರ್ಚುಗಲ್‌ ದೇಶದ ಕಾನೂನಿನೊಡನೆ ಕಳೆದ ಮೂರು ವರ್ಷದಿಂದ ಬಡಿದಾಡಿ ಹೈರಾಣಾಗಿದ್ದಾರೆ. ಈಗ ಭಾರತದ ಕಾನೂನಿನೊಡನೆ ಅವರ ಹೋರಾಟ ಆರಂಭವಾಗಿದೆ. ಅವರು ಹೋರಾಡುತ್ತಲೇ ಇರುತ್ತಾರೆ. ಇದು ಅವರ ಹಣೆಬರಹ.
ನನಗೆ ಈಗ ಈ ಕಾನೂನಿನ ಭಯ ಉಳಿದಿಲ್ಲ. ಭಯವಿರುಮದು ನಮ್ಮ ಭೂಗತ ಲೋಕದ ಜನರ ಮೇಲೆ ಮಾತ್ರ. ಅದರಲ್ಲೂ ದಾವೂದ್‌ ಭಯ್ಯಾ ನನ್ನನ್ನು ಫಿನಿಷ್‌ ಮಾಡಲು ಖಂಡಿತ ಪ್ರಯತ್ನಿಸುತ್ತಾನೆ. ಅವನಿಗೆ ಸಿಬಿಐಗಿರುವಂಥ ಯಾವ ಕಾನೂನು ಇಲ್ಲವಲ್ಲ. ಅವರು ಎಲ್ಲಿಂದ, ಯಾವಾಗ, ಹೇಗೆ ನನ್ನ ಮೇಲೆ ಅಟ್ಯಾಕ್‌ ಮಾಡುತ್ತಾರೋ ಗೊತ್ತಿಲ್ಲ! ಸಿಬಿಐ ಅಧಿಕಾರಿಗಳು ಲಂಚ ತಗೊಂಡು ನನ್ನನ್ನು ದಾವೂದ್‌ ಕಡೆಯವರಿಗೆ ‘ಅರ್ಪಿಸು’ತ್ತಾರೋ ಎಂಬ ಭಯವೂ ಇದೆ. ಅಥವಾ ನಕಲಿ ಎನ್‌ಕೌಂಟರಿನಲ್ಲಿ ಸಾಯಿಸಿಬಿಡುತ್ತಾರೋ ಎಂಬ ಅಳುಕಿದೆ. ಹಾಗಾಗಿ ನನ್ನ ೧೦೦೦ ಕೋಟಿ ರುಪಾಯಿ ಆಸ್ತಿಯ ಆಮಿಷವನ್ನು ನಾನೂ ಇವರಿಗೆ ಒಡ್ಡಿದ್ದೇನೆ. ಪೊಲೀಸರು ನನಗೆ ಕೈಕೊಡಲಿಕ್ಕಿಲ್ಲ ಎಂದುಕೊಂಡಿದ್ದೇನೆ.

ಆದರೆ, ನನ್ನ ರಕ್ಷಣೆಯ ಹೊಣೆಯನ್ನು ಸಿಬಿಐ ಮತ್ತು ಭಾರತ ಸರ್ಕಾರ ಹೊತ್ತಿದೆ. ಯಾರಿಗೂ ನೀಡದಷ್ಟು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಅದೂ ಉಚಿತವಾಗಿ! ಇದಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಚಿರಋಣಿ.

ಹಾಗಾಗಿ ನಿಶ್ಚಿಂತೆಯಿಂದಿರು ಡಾರ್ಲಿಂಗ್‌.

ವಿತ್‌ ಲವ್‌
-ಅಬು ಸಲೇಂ



Kannada Prabha issue dated November 14, 2005
Clemency for Abu Salem Which the Kanchi Seer Wouldn't Get!

-


Tuesday, November 08, 2005

೧೦೦೦೦ ರು. ಕೊಡಿ, ಹೊಸ ಟಾಟಾ ಕಾರು ತಗೊಳ್ಳಿ

ಬುಕಿಂಗ್‌ ಆರಂಭಿಸುವ ಕುರಿತು ಜೈಲಿನಿಂದ ಹರ್ಷದ್‌ ಮೆಹ್ತಾಗೆ ವಿನಿವಿಂಕಿಯ ಯೋಜನಾ ಪತ್ರ!

ಈಗಿನ ಕಾರ್‌ ಲೋನ್‌ ಯುಗಕ್ಕೆ ತಕ್ಕ ಯೋಜನೆ ರೂಪಿಸಿದ್ದೇವೆ. ‘ಈಗ ಕೇವಲ ೧೦ ಸಾವಿರ ರುಪಾಯಿ ನೀಡಿ. ಮೂರು ವರ್ಷ ಬಿಟ್ಟು ೧ ಲಕ್ಷ ರುಪಾಯಿಯ ಟಾಟಾ ಕಾರು ಪಡೆಯಿರಿ’ ಎಂಬುದು ನಮ್ಮ ಘೋಷಣೆ. ಈ ಯೋಜನೆಗೆ ಮ್ಯೂಚುವಲ್‌ ಫಂಡ್‌ ರೀತಿಯಲ್ಲಿ ‘ಟಾಟಾ ವೆಹಿಕಲ್‌ ಫಂಡ್‌’ ಎಂದು ಆಕರ್ಷಕ ಹೆಸರು. ಜನರು ಮುಗಿಬಿದ್ದು ಹಣ ಹೂಡುತ್ತಾರೆ ನೋಡುತ್ತಿರಿ!


ಇವರಿಂದ:
ಮಿ. ವಿನಿವಿಂಕಿ,
ಟಾಟಾ ಬೈ ಬೈ ಪಬ್ಲಿಕ್‌ ಲಿ.,
ನಂ.೧-೪೨೦, ಚೋರ್‌ ಬಝಾರ್‌,
ಕನ್ನಿಂಗ್‌ ಹ್ಯಾಂ ರಸ್ತೆ, ಪೆಂಗಳೂರು -೪೨೦೮೪೦

ಇವರಿಗೆ:
ಮಿ. ಹರ್ಷದ್‌ ಮೆಹ್ತಾ
ಲೂಸ್‌ ಮೋರ್‌ ರಿಸರ್ಚ್‌ ಆಂಡ್‌
ಅಸೆಟ್‌ ಡ್ಯಾಮೇಜ್‌ಮೆಂಟ್‌ ಕಂ. ಲಿ.
ಸ್ವರ್ಗ ಅಪಾರ್ಟ್‌ಮೆಂಟ್‌ ಎದುರು,
ಗೋ ಟು ಹೆಲ್‌ ರಸ್ತೆ, ಖಬರಸ್ತಾನ್‌ -೨೩೪೧೯೯೨

ವಿಷಯ: ನೂತನ ಬ್ಲೇಡ್‌ ಯೋಜನೆಯ ರೂಪರೇಷೆ

ಉಲ್ಲೇಖ: ರತನ್‌ ಟಾಟಾ ಕಂಪನಿಯ ೧ ಲಕ್ಷ ರು. ಕಾರು

ಡಿಯರ್‌ ಮಿ.ಮೆಹ್ತಾ,
ಈ ಮೇಲೆ ಉಲ್ಲೇಖಿಸಲಾದ ವಿಷಯಕ್ಕೆ ಸಂಬಂಧಿಸಿ ನಮ್ಮ ಕಂಪನಿಯು ತಮ್ಮಿಂದ ಕೆಲಮ ಸಲಹೆ ಪಡೆಯಲು ಬಯಸುತ್ತದೆ. ಈ ಹಿನ್ನೆಲೆಯಲ್ಲಿ ನಾಮ ನಿಮಗೆ ಈ ಪತ್ರ ಬರೆಯುತ್ತಿದ್ದೇವೆ. ‘೧೯೯೨ ಎ ಸ್ಕಾü್ಯಮ್‌ ಸ್ಟೋರಿ’ಯ ಕರ್ತೃರೂ, ಭಾರತದ ಷೇರು ಹಗರಣದ ಪಿತಾಮಹರೂ ಆದ ತಾಮ ದಯಮಾಡಿ ನಮ್ಮ ಕಂಪನಿಗೆ ಅಮೂಲ್ಯ ಸಲಹೆ, ಸಹಕಾರ ನೀಡುತ್ತೀರೆಂದು ಭಾವಿಸಿದ್ದೇವೆ.

ನಮ್ಮ ಈ ಮೊದಲಿನ ಕಂಪನಿಯ ಮೂಲಕ ನಾಮ ಈಗಾಗಲೇ ಪಂಗನಾಮ ಉದ್ಯಮದಲ್ಲಿ ಪಳಗಿದ್ದು, ಸುಮಾರು ೯೦೦೦ ಹೂಡಿಕೆದಾರರ ೧೫೦ ಕೋಟಿ ರುಪಾಯಿಗಿಂತಲೂ ಹೆಚ್ಚು ಮೊತ್ತದ ಹಣದ ಅವ್ಯವಹಾರ ಮಾಡಿದ್ದೇವೆ. ನಮ್ಮ ಈ ಮೊದಲ ಕಂಪನಿಯನ್ನು ಯಶಸ್ವಿಯಾಗಿ ಮುಚ್ಚಲಾಗಿದ್ದು, ಬಹುಪಾಲು ಹಣವನ್ನು ಮಾಯಮಾಡಿದ್ದೇವೆ. ಸದ್ಯ ನಾಮ ಪೊಲೀಸರ ಬಲೆಗೆ ಬಿದ್ದು ಜೈಲು ಸೇರಿದ್ದೇವೆ. ಆದರೆ, ಈ ಹಿಂದೆ, ನೀಮ ಜೈಲಿನಿಂದ ಹೊರಬಂದು ಹೊಸ ವ್ಯವಹಾರ ಶುರುವಿಟ್ಟುಕೊಂಡ ರೀತಿಯಲ್ಲೇ ನಾವೂ ಸಹ ಆದಷ್ಟು ಬೇಗನೆ ಜೈಲಿನಿಂದ ಹೊರಬರುವ ವಿಶ್ವಾಸ ನಮಗಿದೆ.
ಈ ಹಿನ್ನೆಲೆಯಲ್ಲಿ ಭವಿಷ್ಯದ ಯೋಜನೆಯನ್ನು ರೂಪಿಸಲು ನಾಮ ಆರಂಭಿಸಿದ್ದು ಜೈಲಿನ ಪ್ರಶಾಂತ ಕೊಠಡಿಯಲ್ಲಿ ಕುಳಿತು ಕೂಲಂಕಷ ಸ್ಕೆಚ್‌ ಹಾಕುತ್ತಿದ್ದೇವೆ.

ನಾಮ ಜೈಲಿನಿಂದ ಹೊರಬಂದು ಹೊಸ ಅವ್ಯವಹಾರ ಆರಂಭಿಸುವ ಬಗ್ಗೆ ತಮಗೆ ಸಂಶಯ ಬೇಡ. ಇದಕ್ಕೆ ನಾಮ ಈ ಕೆಳಗಿನ ಕಾರಣಗಳನ್ನು ನೀಡಲು ಬಯಸುತ್ತೇವೆ:

೧. ಕಳೆದ ಒಂದು ದಶಕದಲ್ಲಿ ಭಾರತದ ಯಾಮದೇ ಹಣಕಾಸು ಹಗರಣಗಳನ್ನಾದರೂ ಗಮನಿಸಿ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿಲ್ಲ. ಎಲ್ಲರೂ ಜೈಲಿನಿಂದ ಹೊರಬಂದು ಇನ್ನಷ್ಟು ಭಾರೀ ಹಗರಣಗಳಿಗೆ ಕಾರಣವಾಗಿದ್ದಾರೆ. ಅಥವಾ ಜೈಲಿನಲ್ಲೇ ಕುಳಿತು ಯಶಸ್ವಿಯಾಗಿ ಇನ್ನೊಂದು ಹಗರಣವನ್ನು ನಡೆಸಿದ್ದಾರೆ.

೨. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಣಕಾಸು ಅವ್ಯವಹಾರಕ್ಕೆ ಯಾಮದೇ ಕಠೋರ ಶಿಕ್ಷೆಗಳಿಲ್ಲ. ಅಲ್ಲದೇ, ಹಗರಣದಿಂದ ನುಣುಚಿಕೊಳ್ಳಲು ನಮಗೆ ಅನೇಕ ಅನುಕೂಲಕರ ದಾರಿಗಳಿವೆ.

೩. ಉದಾಹರಣೆಗೆ, ನಿಮ್ಮ ಪ್ರಕರಣವನ್ನೇ ತೆಗೆದುಕೊಳ್ಳಿ. ಭಾರತದ ಆರ್ಥಿಕ ಹಗರಣದ ’ಮಹಾತಾಯಿ’ ಎಂದೇ ಬಣ್ಣಿಸಲಾಗುವ ೧೯೯೨ರ ನಿಮ್ಮ ಷೇರು ಹಗರಣದ ಬಳಿಕ ತಮ್ಮನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಆದರೆ, ಕೆಲಮ ತಿಂಗಳ ನಂತರ ನೀಮ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿರಿ. ಹರ್ಷದ್‌ ಡಾಟ್‌ ಕಾಮ್‌ ಹಾಗೂ ಕೆಲ ಪತ್ರಿಕೆಗಳ ಅಂಕಣಗಳ ಮೂಲಕ ನೀಮ ಹೊಸ ವ್ಯವಹಾರಕ್ಕೆ ಶುರುವಿಟ್ಟುಕೊಂಡಿರಿ. ಅಲ್ಲದೇ, ಜೈಲಿನಲ್ಲೇ ಕುಳಿತು ನೀಮ ಷೇರುಪೇಟೆಯನ್ನು ಆಟವಾಡಿಸುತ್ತಿದ್ದಿರಿ ಎನ್ನುವ ಸುದ್ದಿಯೂ ಇತ್ತು. ಈ ನಡುವೆ, ಭಾರತದ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರಿಗೆ ೧ ಕೋಟಿ ರುಪಾಯಿಯನ್ನು ಸೂಟ್‌ಕೇಸ್‌ನಲ್ಲಿ ಲಂಚ ನೀಡಿದ್ದಿರಿ ಎಂದು ನೀಮ ನಿರೂಪಿಸಿದಿರಿ. ಈ ಘಟನೆಯ ನಂತರ ನಿಮ್ಮ ಕೇಸುಗಳೆಲ್ಲ ಮುಚ್ಚಿಹೋದಮ. ಆದರೆ, ದುರದೃಷ್ಟವಶಾತ್‌ ಹೃದಯಾಘಾತ ನಿಮ್ಮನ್ನು ಬಲಿತೆಗೆದುಕೊಂಡಿತು. ಜೈಲಿನಿಂದ ಹೊರಬಂದಂತೆ ಈ ಬಾರಿ ನಿಮಗೆ ಸಾವಿನಿಂದ ಹೊರಬರಲಾಗಲಿಲ್ಲ ಎಂಬುದೇ ವಿಷಾದದ ಸಂಗತಿ. ಇಷ್ಟಾದರೂ, ೪೦೦೦ ಕೋಟಿ ರುಪಾಯಿಯನ್ನು ತೆಳ್ಳನೆ ಗಾಳಿಯಲ್ಲಿ ಮಾಯ ಮಾಡಿದ ನಿಮಗೆ ಶಿಕ್ಷೆಯಾಗಲಿಲ್ಲ ಎಂಬುದು ನಮಗೆ ಅತ್ಯಂತ ಸಂತೋಷದ ವಿಷಯ.

೪. ನಂತರ ಬಂದ ಎಂ.ಎಸ್‌.ಶೂ ಹಗರಣವೂ ಅಷ್ಟೇ. ಪವನ್‌ ಸಚದೇವ ಹಾಗೂ ಇನ್ನಿತರ ಚಾಣಾಕ್ಷರಿಂದ ಸೃಷ್ಟಿಯಾದ ಈ ಹೊಸ ಷೇರುಗಳ ಹಗರಣ ವಾಸ್ತವವಾಗಿ ನಿಮ್ಮ ಹಗರಣಕ್ಕಿಂತ ದೊಡ್ಡದು. ಆದರೆ, ಈ ನೆಲದ ಕಾನೂನು ಯಾರನ್ನೂ ಶಿಕ್ಷಿಸಲಿಲ್ಲ.

೫. ನಂತರ ನಡೆದ ಸಿಆರ್‌ಬಿ ಕ್ಯಾಪಿಟಲ್‌ ಹಗರಣದಲ್ಲಿ ಲಕ್ಷಾಂತರ ಹೂಡಿಕೆದಾರರ ೧೦೦೦ ಕೋಟಿ ರುಪಾಯಿ ಠೇವಣಿ ಹಣ ತಗುಲಿಕೊಂಡಿತು. ಹಗರಣದ ರೂವಾರಿ ಸಿ. ಆರ್‌. ಬನ್ಸಾಲಿಗೆ ಶಿಕ್ಷೆಯಾಯಿತೆ? ಇಲ್ಲ. ಜಾಮೀನಿನ ಮೇಲೆ ಹೊರಬಂದು ಬೇರೆ ಬಿಸಿನೆಸ್‌ ಶುರುವಿಟ್ಟುಕೊಂಡ.

೬. ಅನುಭವ ಟೀಕ್‌ನಂತಹ ಅನೇಕ ಪ್ಲಾಂಟೇಶನ್‌ ಕಂಪನಿಗಳ ಹಗರಣದಲ್ಲಿ ಸುಮಾರು ೮೦೦೦ ಕೋಟಿ ರುಪಾಯಿ ಹಣ ಎಲ್ಲಿ ಹೋಯಿತೋ ಗೊತ್ತಾಗಲಿಲ್ಲ. ಯಾರಿಗೂ ಶಿಕ್ಷೆಯಾಗಲಿಲ್ಲ. ಈಗಲೂ ಅನೇಕ ಟೀಕ್‌ ಕಂಪನಿಗಳು ಜನರಿಂದ ರಾಜಾರೋಷವಾಗಿ ಹಣ ಸಂಗ್ರಹಿಸುತ್ತಿವೆ.

೭. ನಿಮಗಿಂತ ದೊಡ್ಡ ಹಗರಣಕ್ಕೆ ಕಾರಣವಾದ ಖೇತನ್‌ ಪಾರಿಖ್‌ಗೆ ಯಾವ ಮಹಾ ಶಿಕ್ಷೆಯಾಯಿತು? ಹೋಮ್‌ ಟ್ರೇಡ್‌ ಡಾಟ್‌ ಕಾಮ್‌ನ ೬೦೦ ಕೋಟಿ ರುಪಾಯಿ ಪ್ರಕರಣದಲ್ಲಿ ಸಹಕಾರಿ ಬ್ಯಾಂಕುಗಳೂ ಹಗರಣದಲ್ಲಿ ತೊಡಗಿವೆ ಎಂಬುದು ಸಾಬೀತಾಗಲಿಲ್ಲವೇ? ಶಿಕ್ಷೆ ಆಗಿದ್ದು ಹಣ ಕಳೆದುಕೊಂಡ ಜನರಿಗೇ ಹೊರತು ನಮ್ಮಂಥ ಜಾಣರಿಗಲ್ಲ.

೯. ಹೋಗಲಿ, ಕರ್ನಾಟಕದ ಲೋಕಾಯುಕ್ತರು ಕಳೆದ ಮೂರು ವರ್ಷಗಳಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರಗಳನ್ನು ಪತ್ತೆ ಮಾಡಿ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಆರೋಪಿಗಳ ಫೋಟೋಗಳನ್ನು ಪ್ರಕಟಿಸಿ ಪ್ರಚಾರ ನೀಡಿದ್ದಾರೆ. ಯಾರಿಗಾದರೂ ಶಿಕ್ಷೆಯಾಯಿತೇ?

೧೦. ಭಾರತ ಕಂಡ ಅತಿ ದೊಡ್ಡ ಹಗರಣ ಕರೀಂ ಲಾಲಾ ತೆಲಗಿಯ ಛಾಪಾ ಹಗರಣ. ಇದರಲ್ಲಿ ಸಿಲುಕಿದ್ದ ಹಲವಾರು ಜನರು ಈಗ ನಿಷ್ಕಳಂಕ ಎಂದು ಖುಲಾಸೆಯಾಗಲಿಲ್ಲವೇ? ಕರೀಂ ಲಾಲಾ ತೆಲಗಿಗೆ ಈವರೆಗೂ ಶಿಕ್ಷೆಯಾಗಿದೆಯೇ?

ಇಂತಹ ಇನ್ನೂ ಹಲವಾರು ಉದಾಹರಣೆಗಳಿರುಮದು ನಿಮಗೂ ಗೊತ್ತು. ಆದ್ದರಿಂದ ಈಗ ಜೈಲಿನಲ್ಲಿರುವ ನಾಮ ಕೂಡ ಇಂದಲ್ಲ ನಾಳೆ ಹೊರಬರುತ್ತೇವೆ ಎಂಬ ಭರವಸೆಯನ್ನು ನಿಮಗೆ ನೀಡಲು ಇಚ್ಛಿಸುತ್ತೇವೆ. ಒಂದು ವೇಳೆ ಹೊರ ಬರಲು ಸಾಧ್ಯವಾಗದಿದ್ದರೆ ನಾಮ ಜೈಲಿನಲ್ಲೇ ಕುಳಿತು ವ್ಯವಹಾರ ನಡೆಸಲೂ ಉತ್ಸುಕರಾಗಿದ್ದೇವೆ.

ಈಗ ನಾಮ ಹಾಕಿರುವ ಯೋಜನೆ ಆಕರ್ಷಕವಾಗಿದೆ. ಇನ್ನು ಮೂರು ವರ್ಷದಲ್ಲಿ ರತನ್‌ ಟಾಟಾ ಕಂಪನಿ ತನ್ನ ಮಹತ್ವಾಕಾಂಕ್ಷೆಯ ಕಾರನ್ನು ಹೊರತರಲಿದೆ. ಕೇವಲ ೧ ಲಕ್ಷ ರುಪಾಯಿ ಬೆಲೆಯ ಈ ಕಾರಿನ ತಯಾರಿ ಪುಣೆ ಕಾರ್ಖಾನೆಯಲ್ಲಿ ಸಾಗಿದ್ದು, ಭಾರತದ ಮಧ್ಯಮ ವರ್ಗದ ಜನರು ಈ ಕಾರನ್ನು ಖರೀದಿಸಲು ಮುಗಿಬೀಳಲಿದ್ದಾರೆ.

ಈ ಆಮಿಷವನ್ನೇ ಇಟ್ಟುಕೊಂಡು ನಾಮ ಈಗಿನ ಕಾರ್‌ ಲೋನ್‌ ಯುಗಕ್ಕೆ ತಕ್ಕ ಯೋಜನೆ ರೂಪಿಸಿದ್ದೇವೆ. ’ಈಗ ಕೇವಲ ೧೦ ಸಾವಿರ ರುಪಾಯಿ ನೀಡಿ. ಮೂರು ವರ್ಷ ಬಿಟ್ಟು ೧ ಲಕ್ಷ ರುಪಾಯಿಯ ಟಾಟಾ ಕಾರು ಪಡೆಯಿರಿ’ ಎಂಬುದು ನಮ್ಮ ಘೋಷಣೆ. ಈ ಯೋಜನೆಗೆ ಮ್ಯೂಚುವಲ್‌ ಫಂಡ್‌ ರೀತಿಯಲ್ಲಿ ’ಟಾಟಾ ವೆಹಿಕಲ್‌ ಫಂಡ್‌’ ಎಂದು ಆಕರ್ಷಕ ಹೆಸರಿಡಬಹುದು.
ಆನಂತರ ನಾಮ ‘ಬುಕಿಂಗ್‌ ಆರಂಭವಾಗಿದೆ. ಇಂದೇ ಹಣ ಠೇವಣಿ ಮಾಡಿ’ ಎಂದು ಜಾಹೀರಾತು ನೀಡಬಹುದು.
೧೦೦೦೦ ಸಾವಿರ ರುಪಾಯಿಗೆ ೧ ಲಕ್ಷ ರುಪಾಯಿ ಕಾರು ಹೇಗೆ ನೀಡಲು ಸಾಧ್ಯ ಎಂದು ಜನರು ಯೋಚಿಸುಮದಿಲ್ಲ. ಹಿಂದಿನ ಇಂಥ ಬ್ಲೇಡ್‌ ಯೋಜನೆಗಳಿಂದ ಪಾಠ ಕಲಿಯುಮದಿಲ್ಲ. ಪಾಠ ಕಲಿತರೂ, ’ಇರಲಿ ಒಂದು ಕೈ ನೋಡಿ ಬಿಡುವಾ... ಕೇವಲ ೧೦ ಸಾವಿರ ತಾನೇ?’ ಎಂದು ರಿಸ್ಕ್‌ ತೆಗೆದುಕೊಳ್ಳುವ ದಡ್ಡರೂ ಕಡಿಮೆ ಏನಿಲ್ಲ.

ಈ ಯೋಜನೆ ಮೂಲಕ ಮೂರು ವರ್ಷದಲ್ಲಿ ಕನಿಷ್ಠ ೧೦೦-೨೦೦ ಕೋಟಿ ರುಪಾಯಿ ಸಂಗ್ರಹವಾಗುಮದು ಗ್ಯಾರಂಟಿ. ಆಮೇಲೆ ನಮ್ಮ ಎಲ್ಲಾ ಸುಂದರ ಶಾಖೆಗಳನ್ನೂ ಮುಚ್ಚಿ ನಾಮ ಓಡಿ ಹೋಗಬಹುದು. ಬಿಸಿನೆಸ್‌ ನಷ್ಟವಾಯಿತು ಎಂದು ಬಹುಪಾಲು ಹಣವನ್ನು ನಾಮ ಬಚ್ಚಿಡಬಹುದು. ಆಮೇಲೆ ನಾಮ ಸಿಕ್ಕಿಬಿದ್ದರೂ ಜಾಮೀನು ಪಡೆದು ಹೊರಬಂದು ಸುಖವಾಗಿ ಇರಬಹುದು.

ಕೊಟ್ಟವ ಮಂಕಿ. ಇಸಕೊಂಡವ ವಿನಿವಿಂಕಿ ಎಂಬುದೇ ನಮ್ಮ ಕಂಪನಿಯ ಧ್ಯೇಯ ವಾಕ್ಯ. ಇದನ್ನು ತಾವೂ ಒಪುý್ಪತ್ತೀರಿ ಎಂಬ ವಿಶ್ವಾಸ ನಮಗಿದ್ದು, ಈ ಯೋಜನೆಯನ್ನು ಪರಿಷ್ಕರಿಸುವ ಕುರಿತು ತಾಮ ತಮ್ಮ ಅಮೂಲ್ಯ ಸಲಹೆ, ಸೂಚನೆ ನೀಡಬೇಕಾಗಿ ನಾಮ ಈ ಮೂಲಕ ಕೋರುತ್ತೇವೆ.

ಧನ್ಯವಾದಗಳೊಂದಿಗೆ,
ಟಾಟಾ ಬೈ ಬೈ ಪಬ್ಲಿಕ್‌ ಲಿ. ಪರವಾಗಿ
ಮಿ. ವಿನಿವಿಂಕಿ


Kannada Prabha issue dated November 7, 2005
Pay just Rs.10000. Get Tata 1 lakh Rupee Nano Car Vinivinc Scam

-

Wednesday, November 02, 2005

ಕನ್ನಡ ಭಾಷೆಗೆ ಐಶ್ವರ್ಯ ರೈ ಪ್ರಚಾರ ರಾಯಭಾರಿ!

ಆಕೆ ದುಬಾರಿಯಾದರೆ ಮಲ್ಲಿಕಾ ಶೆರಾವತ್‌ ಆದರೂ ಓಕೆ:
ಕನ್ನಡದ ಕಣ್ವ ಬಿಎಂಶ್ರೀಗೆ ಯೆಂಡ್ಗುಡ್ಕ್‌ ರತ್ನನ ಈ-ಮೇಲ್‌

ಹೋರಾಟ ಮಾಡಿ, ಜನರ ಮೇಲೆ ಒತ್ತಡ ಹೇರಿ ಕನ್ನಡ ಭಾಷೆಯನ್ನ ಉದ್ಧಾರ ಮಾಡೋಕೆ ಆಗಲ್ಲ ಸಾರ್‌. ಕನ್ನಡ ಉದ್ಧಾರ ಆಗಬೇಕೂಂದ್ರೆ ಯುವ ಜನಾಂಗಾನ ಪ್ರೀತಿಯಿಂದ ಕನ್ನಡದತ್ತ ಆಕರ್ಷಿಸಬೇಕು... ಸಾರ್‌. ಅದಕ್ಕೆ ಸುಂದರ ಬ್ರಾಂಡ್‌ ಅಂಬಾಸಡರ್‌ ಇದ್ದರೆ ಕೆಲಸ ಸಲೀಸು. ಕನ್ನಡ ರಾಜ್ಯೋತ್ಸವದ ದಿನಾನೇ ಹುಟ್ಟಿರುವ ಐಶ್ವರ್ಯ ರೈಗಿಂತ ಬೇರೆ ‘ಕನ್ನಡ ಕುವರಿ’ ಎಲ್ಲಿ ಸಿಗ್ತಾಳೆ... ಸಾರ್‌!


ಕನ್ನಡದ ಕಣ್ವರಾದ ಶ್ರೀ ಬಿಎಂಶ್ರೀ ಸಾರ್‌ರವರೇ,
ನಮಸ್ಕಾರ ಸಾರ್‌... ನಾನು ರತ್ನ. ಯಂಡ್ಗುಡ್ಕ್‌ ರತ್ನ.
ಜಿ. ಪಿ. ರಾಜರತ್ನಂ ಅವರ ಕವನಪುತ್ರ ಸಾರ್‌. ಗೊತ್ತಾಗಲಿಲ್ವಾ ಸಾರ್‌...? ಬ್ರಮ್ಮಾ ನಿಂಗೆ ಜೋಡಿಸ್ತೀನಿ ಯೆಂಡಾ ಮುಟ್ಟಿದ ಕೈನಾ ಅನ್ನೋ ಫೇಮಸ್‌ ಸಾಂಗು ನಂದೇ ಸಾರ್‌. ನಾನೊಬ್ಬ ಕನ್ನಡದ ’ಉಟ್ಟು ಓರಾಟಗಾರ’ ಸಾರ್‌... ನಾನು ನನ್‌ ಫೇಮಸ್‌ ಸಾಂಗಲ್ಲಿ ಹೇಳ್ದಂಗೆ ಆ ಬ್ರಮ್ಮನೇ ಬಂದು ಕನ್ನಡ ಬಿಟ್ಟಾಕು ಅಂತ ಹೇಳದ್ರೂನೂ, ನನ್‌ ನಾಲ್ಗೆ ಸೀಳಾಕ್‌ದ್ರೂನೂ ನಾನು ಕನ್ನಡ ಮಾತಾಡೋದು ಮಾತ್ರ ಬಿಡೋದಿಲ್ಲ ಸಾರ್‌... ಬಿಡೋದಿಲ್ಲ.

ನಾಳೆ ಕನ್ನಡ ರಾಜ್ಯೋತ್ಸವ ಸಾರ್‌. ಈ ಹಿನ್ನೆಲೆಯಲ್ಲೇ ನಿಮಗೆ ನಾನು ಈ ಮೇಲ್‌ ಬರೀತಿದ್ದೇನೆ ಸಾರ್‌. ಈಗಿನ ಗ್ಲೋಬಲೈಸೇಶನ್‌ ಅರ್ಥಾತ್‌ ಜಾಗತೀಕರಣ ಯುಗದಲ್ಲಿ ಕನ್ನಡ ಉದ್ಧಾರಕ್ಕೆ ಸಾಂಪ್ರದಾಯಿಕ ವಿಧಾನ ನಡೆಯೋದಿಲ್ಲ. ಅದಕ್ಕೆ ಸಮಕಾಲೀನ ಗಿಮಿಕ್ಕೇ ಬೇಕು ಅನ್ನೋ ಪ್ರಾಕ್ಟಿಕಲ್‌ ಸಲಹೆ ನೀಡೋದು ಈ ಪತ್ರದ ಉದ್ದೇಶ ಸಾರ್‌.

ಸಾರ್‌... ಕನ್ನಡದ ಮಕ್ಕಳೆಲ್ಲ ಕನ್ನಡ ಬಿಟ್ಟು ಇಂಗ್ಲೀಷಿಗೆ ಅಂಟಿಕೊಂಡಿದ್ದಾರೆ ಅನ್ನೋದು ನಿಜ ಸಾರ್‌. ಈ ಪರಿಪಾಠ ಹೆಚ್ಚುತ್ತಿದೆ ಅನ್ನೋದೂ ನಿಜ ಸಾರ್‌. ಇದೆಲ್ಲಾ ಗ್ಲೋಬಲ್‌ ಫಿನೋಮಿನಾ ಸಾರ್‌ ಗ್ಲೋಬಲ್‌ ಫಿನೋಮಿನಾ.

ಹೀಗಾಗೋಕೆ ಕಾರಣ ಯುವಜನಾಂಗ ಸಾರ್‌. ಇವರೆಲ್ಲಾ ಒಂದೋ ಇಂಗ್ಲೀಷ್‌ ಲಾಂಗ್ವೇಜ್‌ ಹಿಂದೆ ಬಿದ್ದಿದ್ದಾರೆ ಇಲ್ಲಾ ಕಂಪ್ಯೂಟರ್‌ ಲಾಂಗ್ವೇಜ್‌ ಹಿಂದೆ ಬಿದ್ದಿದ್ದಾರೆ ಸಾರ್‌. ಅವರಿಗೆ ಇಂಗ್ಲೀಷು ಮತ್ತು ಕಂಪ್ಯೂಟರು ಎರಡೂ ಫ್ಯಾಷನ್ನು ಸಾರ್‌. ಕನ್ನಡ ಓಲ್ಡ್‌ ಫ್ಯಾಷನ್ನು ಸಾರ್‌. ಅದಕ್ಕೇ ಕನ್ನಡ ಅವಸಾನ ಆಗ್ತಿದೆ ಸಾರ್‌. ಕನ್ನಡ ಹೊಸ ಫ್ಯಾಷನ್‌ ಆದ್ರೆ ಮಾತ್ರ ಉದ್ಧಾರವಾಗುತ್ತೆ .... ಇದೇ ಈ ಶತಮಾನದ ಫಂಡಾ ಸಾರ್‌.

ಈಗ ಕನ್ನಡ ಉದ್ಧಾರ ಆಗಬೇಕೂಂದ್ರೆ ಈ ಯುವ ಜನಾಂಗಾನ ಕನ್ನಡದತ್ತ ಆಕರ್ಷಿಸಬೇಕು ಸಾರ್‌. ಯಾಕೆಂದರೆ ಇಂದಿನ ಯುವಕರೇ ಮುಂದಿನ ಪ್ರಜೆಗಳು ಸಾರ್‌. ಅಂದರೆ, ಅವರು ಇವತ್ತು ಯಾವ ಭಾಷೆಯನ್ನ ಕಲೀತಾರೋ ಮುಂದೆ ಆ ಭಾಷೆ ಬದುಕುತ್ತೆ. ಅವರು ಇವತ್ತು ಯಾವ ಭಾಷೆಯನ್ನ ಮರೀತಾರೋ ಮುಂದೆ ಆ ಭಾಷೆ ವಿನಾಶ ಆಗುತ್ತೆ ಸಾರ್‌. ಆದ್ದರಿಂದ ಕನ್ನಡ ಭಾಷೆ ಉಳೀಬೇಕು ಅಂದ್ರೆ ಮೊದಲು ಈ ಯುವ ಜನಾಂಗಾನ ಆಕರ್ಷಿಸಬೇಕು ಸಾರ್‌.

ಈಗಿನ ಕನ್ನಡ ಹೋರಾಟಗಾರರಿಗೆ ಕಷ್ಟ ಆಗ್ತಿರೋದು ಇದೇ ಸಾರ್‌. ಪಾಟೀಲ ಪುಟ್ಟಪ್ಪ, ಚಿದಾನಂದಮೂರ್ತಿ, ಚಂಪಾ, ವಾಟಾಳ್‌ನಾಗರಾಜ್‌ ಮುಂತಾದ ಕಟ್ಟಾಳುಗಳೆಲ್ಲ ನಿಜಕ್ಕೂ ಬಹಳ ಪ್ರಯತ್ನ ಪಡ್ತಾ ಇದ್ದಾರೆ ಸಾರ್‌. ಆದರೂ ಕನ್ನಡದತ್ತ ಯುವಕರು ಆಕರ್ಷಿತರಾಗ್ತಾ ಇಲ್ಲ ಸಾರ್‌.

ಸಾರ್‌... ನಿಜ ಹೇಳಿ ಸಾರ್‌... ಈ ಯುವಜನಾಂಗ ಪಾಟೀಲ ಪುಟ್ಟಪ್ಪ, ಚಿದಾನಂದ ಮೂರ್ತಿಯವರನ್ನೆಲ್ಲ ನೋಡಿ ಆಕರ್ಷಿತರಾಗೋಕೆ ಸಾಧ್ಯಾನಾ ಸಾರ್‌? ವಾಟಾಳ್‌ ನಾಗರಾಜ್‌ ಚಂದಾನೋ ಐಶ್ವರ್ಯ ರೈ ಚಂದಾನೋ ನೀವೇ ಹೇಳಿ ಸಾರ್‌!.. ಈ ರಹಸ್ಯಾನ ನೀಮ ಅರ್ಥ ಮಾಡಿಕೋಬೇಕು ಸಾರ್‌. ಅರ್ಥ ಮಾಡಿಕೊಂಡರೆ ಕನ್ನಡ ಅರ್ಧ ಉದ್ಧಾರ ಆದ ಹಾಗೇ ಸಾರ್‌.

ಅದಕ್ಕೇ ನನ್ನ ಸಲಹೆ ಏನೂಂದ್ರೆ... ಈ ಯುವಜನರನ್ನ ಆಕರ್ಷಿಸೋಕೆ ಕನ್ನಡಕ್ಕೊಬ್ಬಳು ಅತಿ ಸುಂದರ ಬ್ರಾಂಡ್‌ ಅಂಬಾಸಡರ್‌ ಬೇಕು ಸಾರ್‌. ಬ್ರಾಂಡ್‌ ಅಂಬಾಸಡರ್‌ ಅಂದ್ರೆ ಪ್ರಚಾರ ರಾಯಭಾರಿ ಅಂತ ಮಾರ್ಕೆಟಿಂಗ್‌ ಭಾಷೆಯಲ್ಲಿ ಅರ್ಥ ಸಾರ್‌.

ಸಾರ್‌... ಹಮಾಮ್‌ ಸೋಪಿನಿಂದ ಹಿಡಿದು ಗಾಡ್ರೆಜ್‌ ಹೇರ್‌ ಕಲರ್‌ವರೆಗೆ, ಮಹಿಳೆಯರ ಹೇರ್‌ ರಿಮೂವಲ್‌ ಕ್ರೀಮ್‌ನಿಂದ ಹಿಡಿದು ಪುರುಷರ ಷೇವಿಂಗ್‌ ಬ್ಲೇಡ್‌ವರೆಗೆ, ಮಕ್ಕಳ ಹಾರ್ಲಿಕ್ಸ್‌ನಿಂದ ಹಿಡಿದು ದೊಡ್ಡವರ ಆಲ್ಕೋಹಾಲ್‌ವರೆಗೆ ತಾರೆಯರೇ ಬ್ರಾಂಡ್‌ ಅಂಬಾಸಡರ್‌ ಅನ್ನೋದನ್ನ ಗಮನಿಸಿ ಸಾರ್‌. ಸಾರ್‌ ಯಾರನ್ನು ಬೇಕಾದ್ರೂ ಕೇಳಿ ಸಾರ್‌... ಸಿನಿಮಾ ತಾರೆಯರ ಸೌಂದರ್ಯದ ಗುಟ್ಟು ಲಕ್ಸ್‌ ಸೋಪು ಹೇಗೋ ಲಕ್ಸ್‌ ಸೋಪಿನ ಯಶಸ್ಸಿನ ಗುಟ್ಟೂ ಸಿನಿಮಾ ತಾರೆಯರು ಅಂತ ಹೇಳ್ತಾರೆ ಸಾರ್‌!

ಸಾರ್‌... ನಮಗೆ ಬೇಕಾದ ಬ್ರಾಂಡ್‌ ಅಂಬಾಸಡರ್‌ ಹೇಗಿರಬೇಕು ಅಂದರೆ, ಐಶ್ವರ್ಯ ರೈ ಥರ ಇರಬೇಕು ಸಾರ್‌. ಇಂಗ್ಲೀಷ್‌, ಹಿಂದಿ, ತೆಲಗು, ತಮಿಳು, ಮಲೆಯಾಳಂ... ಹೀಗೆ ಯಾಮದೇ ಭಾಷೆ ಮಾತಾಡುವ ಬಾಲಕ ಬಾಲಕಿಯರಿಗೂ, ಯುವಕ ಯುವತಿಯರಿಗೂ, ಪಾಲಕ ಪಾಲಕಿಯರಿಗೂ, ಮುದುಕ ಮುದುಕಿಯರಿಗೂ ಆಕೆ ಗೊತ್ತು ಸಾರ್‌. ಎಲ್ಲರೂ ಆಕೆ ಥರ ಕಾಣೋಕೆ ಬಯಸ್ತಾರೆ ಸಾರ್‌. ಅದರಲ್ಲೂ ಕಾಲೇಜ್‌ ಹುಡುಗೀರಂತೂ ಐಶ್ವರ್ಯ ಥರಾನೇ ಆಡ್ತಾರೆ ಸಾರ್‌. ಐಶ್ವರ್ಯ ಪ್ಯಾಂಟ್‌ ಹಾಕ್ಕೊಂಡರೆ ಇವರೂ ಪ್ಯಾಂಟ್‌ ಹಾಕ್ಕೋತಾರೆ ಸಾರ್‌. ಆಕೆ ಪ್ಯಾಂಟ್‌ ತೆಗೆದ್ರೆ ಇವರೂ ತೆಗೀತಾರೆ ಸಾರ್‌. ಆಕೆ ಇಂಗ್ಲೀಷಲ್ಲಿ ಹಾಯ್‌ ಎಂದರೆ ಇವ್ರೂ ಹಾಯ್‌ ಅಂತಾರೆ ಸಾರ್‌. ಆಕೆ ಕ್ಯಾ ಹೈ ಅಂತ ಹಿಂದಿಯಲ್ಲಿ ಉಲಿದರೆ ಇವರೂ ಕ್ಯಾ ಹೈ ಅಂತಾರೆ ಸಾರ್‌.

ಆದ್ದರಿಂದ ಆಕೆ ಕನ್ನಡದಲ್ಲಿ ಮಾತಾಡಿದರೆ, ಇವ್ರೂ ಕನ್ನಡದಲ್ಲಿ ಮಾತಾಡೋದು ಗ್ಯಾರಂಟಿ. ಆಕೆ ಕನ್ನಡದಲ್ಲಿ ಬರೆದರೆ ಇವರೂ ಕನ್ನಡದಲ್ಲಿ ಬರೆಯೋದು ಗ್ಯಾರಂಟಿ ಸಾರ್‌. ಇದು ಮಾರ್ಕೆಟ್ಟಲ್ಲಿ ಸಕ್ಸಸಾಗಿರೋ ಫಾರ್ಮುಲಾ.... ಸಾರ್‌.

ಸಾರ್‌... ಆಕೆ ಕನ್ನಡದ ರಾಯಭಾರಿಯಾದ್ರೆ ಕನ್ನಡ ಅಷ್ಟೇ ಅಲ್ಲ ಸಾರ್‌... ಕನ್ನಡೇತರ ಯುವಜನಾಂಗಾನೂ ಒಮ್ಮೆಲೇ ಕನ್ನಡದತ್ತ ಒಲಮ ತೋರಿಸುತ್ತೆ ಸಾರ್‌. ಒಂದು ಕಾಲೇಜಿನ ಹುಡುಗಿಯರು ಕನ್ನಡದಲ್ಲಿ ಉಲಿದರೆ ಸುತ್ತಲಿನ ಎಲ್ಲಾ ಕಾಲೇಜಿನ ಹುಡುಗರು ಕನ್ನಡದಲ್ಲೇ ಮಾತು ಶುರುವಿಟ್ಟುಕೊಳ್ಳುತ್ತಾರೆ ಸಾರ್‌. ಈ ಸ್ಟೈಲು ಇಡೀ ಊರಿಗೇ ವ್ಯಾಪಿಸುತ್ತೆ ಸಾರ್‌. ಊರಿಂದ... ಊರಿಗೆ, ಜಿಲ್ಲೆಯಿಂದ ಜಿಲ್ಲೆಗೆ.... ಆಮೇಲೆ ರಾಜ್ಯಕ್ಕೆ... ನಂತರ ಇಡೀ ದೇಶಕ್ಕೆ ಕನ್ನಡ ಫ್ಯಾಷನ್ನಾಗುತ್ತೆ ಸಾರ್‌. ನೋಡುತ್ತಿರಿ ಸಾರ್‌... ಕನ್ನಡ ಭಾಷೆ ಆಟೋಮ್ಯಾಟಿಕ್ಕಾಗಿ ಅಭಿವೃದ್ಧಿಯಾಗುತ್ತೆ ಸಾರ್‌!

ಸಾರ್‌... ಐಶ್ವರ್ಯ ರೈಗೆ ಕನ್ನಡ ಬರುತ್ತಾ ಅಂತ ನೀಮ ಕೇಳಬಹುದು. ಬೇಕಾಗಿಲ್ಲ ಸಾರ್‌. ಜಾಹೀರಾತಲ್ಲಿ ಆಕೆ ಲಕ್ಸ್‌ ಸೋಪ್‌ ಹಚ್ಚಿಕೋತಾಳೆ. ಹಾಗಂತ ದಿನಾ ಅದೇ ಸೋಪು ಹಚ್ಚಿಕೊಂಡು ಸ್ನಾನ ಮಾಡುತ್ತಾಳೆ ಅಂದುಕೊಂಡಿರಾ ಸಾರ್‌? ದುಡ್ಡು ಕೊಟ್ಟರೆ ರಾಯಭಾರಿಗಳು ಇದಕ್ಕೆಲ್ಲ ರೆಡಿ ಸಾರ್‌. ನಾವೂ ಆಕೆಗೆ ವರ್ಷಕ್ಕೆ ಐದೋ ಆರೋ ಕೋಟಿ ರುಪಾಯಿ ಕೊಟ್ಟರೆ ಆಯಿತು. ಇದನ್ನು ಸರ್ಕಾರ ಕನ್ನಡಾಭಿವೃದ್ಧಿ ಯೋಜನೆ ವೆಚ್ಚದಲ್ಲಿ ಸೇರಿಸಬಹುದು ಸಾರ್‌. ಐಶ್ವರ್ಯ ಕನ್ನಡ ಮ್ಯಾನೇಜ್‌ ಮಾಡುತ್ತಾಳೆ ಸಾರ್‌. ಇಷ್ಟಕ್ಕೂ ಆಕೆ ದಕ್ಷಿಣ ಕನ್ನಡದ ಮೂಲದವಳು ಸಾರ್‌. ಇಷ್ಟಕ್ಕೂ ಆಕೆ ಹುಟ್ಟಿದ್ದು ಕನ್ನಡ ರಾಜ್ಯೋತ್ಸವದ ದಿನಾನೇ ಸಾರ್‌. ಅದಕ್ಕೇ ಕನ್ನಡಕ್ಕೆ ಆಕೆಗಿಂತ ಉತ್ತಮ ಅಂಬಾಸಡರ್‌ ಯಾರು ಸಿಗ್ತಾರೆ ಸಾರ್‌?

ಸಾರ್‌... ಆಕೆ ದುಬಾರಿಯಾಯ್ತು ಅಂತೀರಾ ಸಾರ್‌? ಮಲ್ಲಿಕಾ ಶೆರಾವತ್‌ ಅಂತ ಇನ್ನೊಬ್ಳು ಸೆಕ್ಸ್‌ ಬಾಂಬ್‌ ಇದ್ದಾಳೆ ಸಾರ್‌. ಆಕೆಗೂ ಐಶ್ವರ್ಯಳಷ್ಟೇ ಪ್ರಭಾವವಿದೆ ಸಾರ್‌. ಅರ್ಧ ಬಜೆಟ್ಟಿಗೇ ಒಪ್ಪಿಕೊಳ್ಳುತ್ತಾಳೆ. ಅಷ್ಟೇ ಅಲ್ಲ ಸಾರ್‌... ಕೇವಲ ೧೦ ಲಕ್ಷಕ್ಕೆ ಅತ್ಯಂತ ಸೆಕ್ಸಿ ಸೀನಿನಲ್ಲಿ ಕಾಣಿಸಿಕೊಂಡಿದ್ದ ಆಕೆ ೨ ಕೋಟಿ ರುಪಾಯಿ ಕೊಟ್ಟರೆ ಕನ್ನಡಕ್ಕಾಗಿ ಏನೂ ಮಾಡಲು ರೆಡಿ ಇರ್ತಾಳೆ ಸಾರ್‌!

ಪ್ಲೀಸ್‌ ತಪುý್ಪ ತಿಳೀಬೇಡಿ ಸಾರ್‌. ಈಗಿನ ಕಾಲದ ಯುವ ಜನರು ಕನ್ನಡದ ಬಗ್ಗೆ ಆಕರ್ಷಿತರಾಗಲು ಇದೊಂದೇ ಮಾರ್ಗ ಸಾರ್‌. ಯೋಚಿಸಿ ನೋಡಿ ಸಾರ್‌. ಇದೆಲ್ಲ ಸರಿ ಅಲ್ಲ ಅನ್ನಿಸಿದ್ರೆ ನನ್ನ ಕ್ಷಮಿಸಿಬಿಡಿ ಸಾರ್‌. ಎಷ್ಟಂದ್ರೂ ನಾನು ಯಂಡ್ಗುಡ್ಕ್‌ ರತ್ನ ಸಾರ್‌.


ಜೈ ಕನ್ನಡ. ಜೈ ಕರ್ನಾಟಕ.

Kannada Prabha issue dated November 1, 2005
Airshwarya Rai as Brand Ambassador to Kannada Language

-

Tuesday, October 25, 2005

ಇಡೀ ರಾಜ್ಯ ದರಿದ್ರನಾರಾಯಣ ಮಯವಾಗಲಿ

ಗ್ಲೋಬಲ್‌ ವಿಲೇಜ್‌ನಿಂದ ಶ್ರೀಮನ್‌ ನಾರಾಯಣನಿಗೆ ಬಡ ಬೋರೇಗೌಡನ ಈ ಮೇಲ್‌

ಇನ್‌ಫೋಸಿಸ್‌ ಅಷ್ಟೇ ಏನು... ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಎಚ್‌ಎಎಲ್‌, ಇಂಟರ್‌ನ್ಯಾಶನಲ್‌ ಟೆಕ್‌ಪಾರ್ಕ್‌ ಮುಂತಾದ ಸಂಸ್ಥೆಗಳಿಂದಲೂ ಬಡಬೋರೇ ಗೌಡನಿಗೆ ನೇರವಾಗಿ ಯಾವಲಾಭವೂ ಇಲ್ಲ. ಅಮಗಳನ್ನೆಲ್ಲ ಕರ್ನಾಟಕದಿಂದ ಓಡಿಸಿ ಅಮಗಳ ಭೂಮಿಗಳನ್ನು ಸರ್ಕಾರ ವಶಪಡಿಸಿಕೊಂಡು ಬಡಜನರಿಗೆ ಹಂಚುವಂತಾಗಬೇಕು!

ಓಂ ನಮೋ ನಾರಾಯಣಾಯ,
ಹೀಗೆಂದಾಕ್ಷಣ ಕನ್‌ಫ್ಯೂಶನ್‌ ಬೇಡ ಹರಿಯೇ. ನಾರಾಯಣ ಅಂತ ನಾನು ಹೇಳಿದ್ದು ಇನ್‌ಫೋಸಿಸ್‌ ನಾರಾಯಣನೂ ಅಲ್ಲ ದರಿದ್ರನಾರಾಯಣನೂ ಅಲ್ಲ. ಅಸಲಿ ಭಗವಂತ ಶ್ರೀಮನ್‌ ನಾರಾಯಣನಾದ ನಿನಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.

ಯಾಕೆ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ ಅಂದರೆ, ಕಳೆದ ಒಂದು ವಾರದಿಂದ, ಭೂಲೋಕದಲ್ಲಿ ನಮ್ಮಂಥ ಹುಲುಮಾನವರಿಗೆ ಎರಡೇ ನಾರಾಯಣ ಗೊತ್ತಿರುಮದು. ಒಂದು ಜೆಡಿಎಸ್‌ ದ್ಯಾವ್ರ ಪಂಥದ ದರಿದ್ರ ನಾರಾಯಣ ಹಾಗೂ ಇನ್ನೊಂದು ಶ್ರೀಕೃಷ್ಣ ಪಂಥದ ಇನ್‌ಫೋಸಿಸ್‌ ನಾರಾಯಣ. ನಾನೀಗ ನಮಸ್ಕಾರ ಹೇಳಿದ್ದು ಈ ಇಬ್ಬರು ನಾರಾಯಣರಿಗೂ ಅಲ್ಲ. ಭಗವಾನ್‌ ನಾರಾಯಣನಾದ ನಿನಗೆ.

ನೀನು ಅದೆಲ್ಲಿ ಇದ್ದೀಯೋ? ಅದು ಹ್ಯಾಗಿದ್ದೀಯೋ! ಗೊತ್ತಿಲ್ಲ. ಆದರೂ ಸರ್ವಾಂತರ್ಮಯಿಯಾದ ನೀನು ಎಲ್ಲೆಲ್ಲೂ ಇದ್ದೀಯಾ ಅಂತ ಭಕ್ತ ಪ್ರಹ್ಲಾದ ಬಹಳ ಹಿಂದೆಯೇ ಪ್ರೂವ್‌ ಮಾಡಿರುಮದರಿಂದ ನೀನು ಸೈಬರ್‌ಲೋಕದಲ್ಲೂ ಅದೆಲ್ಲೋ ಇದ್ದೇ ಇರುತ್ತೀಯಾ ಅಂತ ನಾನು ನಂಬುತ್ತೇನೆ. ಭಗವಂತಾ, ನಿನ್ನ ಈ-ಮೇಲ್‌ ವಿಳಾಸ ನನಗೆ ಗೊತ್ತಿಲ್ಲ. ಆದರೂ, ಈ-ಮೇಲ್‌ ಕಳಿಸುತ್ತಿದ್ದೇನೆ. ನನಗೆ ಗೊತ್ತು... ಪ್ರತಿನಿತ್ಯ ಅಂತರ್ಜಾಲದಲ್ಲಿ ಅನ್‌ಡೆಲಿವರ್ಡ್‌ ಆದ ಮತ್ತು ಡಿಲೀಟ್‌ ಆದ ಕೋಟ್ಯಂತರ ಮೆಸೇಜ್‌ಗಳೆಲ್ಲ ನಿನ್ನ ಪಾದವನ್ನೇ ಸೇರುತ್ತವೆ! ಏಕೆಂದರೆ ಒಮ್ಮೆ ಸೃಷ್ಟಿಯಾದದ್ದೆಲ್ಲ ಲಯವಾಗಲೇ ಬೇಕು. ಲಯವಾದಮೇಲೆ ಅಮ ಇನ್ನೆಲ್ಲಿ ಹೋಗಲು ಸಾಧ್ಯ? ರಿಸೈಕಲ್ಡ್‌ಬಿನ್‌ನಿಂದ ನೇರವಾಗಿ ನಿನ್ನಲ್ಲೇ ಮುಕ್ತಿಕಾಣಬೇಕು ಎಂಬುದು ಸಿಂಪಲ್‌ ಲಾಜಿಕ್ಕು. ಈ ಅಚಲ ಭಕ್ತಿ ವಿಶ್ವಾಸದಿಂದ ನಿನಗೆ ಈ ಮೇಲ್‌-ಅರ್ಚನೆ ಮಾಡುತ್ತಿದ್ದೇನೆ. ದಯವಿಟ್ಟು ಓದು. ಇಷ್ಟುದಿನ ನಾನು ಪತ್ರಬರೆಯುತ್ತಿದ್ದೆ. ಆದರೆ, ಈಗ ಈ ಮೇಲ್‌ ಸಿಸ್ಟಂ ಅಳವಡಿಸಿಕೊಂಡಿದ್ದೇನೆ. ಏಕೆಂದರೆ, ಒಂದೇ ಬಟನ್‌ ಒತ್ತಿದರೆ ಪತ್ರವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಪ್ರಧಾನ ಮಂತ್ರಿ, ಸೋನಿಯಾಗಾಂಧಿ ಹಾಗೂ ಹಾಗೂ ದೇಶದ ಎಲ್ಲ ಪತ್ರಿಕೆ ಮತ್ತು ಟೀವಿ ಸಂಸ್ಥೆಗಳಿಗೂ ತಕ್ಷಣ ಕಳಿಸಬಹುದು. ಇದರಿಂದ ಪತ್ರ ಕಳಿಸಲು ತಗಲುತ್ತಿದ್ದ ವೆಚ್ಚ ಉಳಿತಾಯವಾಗುತ್ತದೆ!

ಇಷ್ಟಕ್ಕೂ ಮಹಾಮಹಿಮನಾದ ನಾರಾಯಣನೇ,
ದೇವಲೋಕ, ಭೂಲೋಕ, ಪಾತಾಳಲೋಕವೆಂಬ ತ್ರಿಲೋಕದ ನಿನ್ನ ಸೃಷ್ಟಿಕ್ರಿಯೆ ಅದ್ಬುತ ಎನ್ನುಮದರಲ್ಲಿ ಎರಡು ಮಾತಿಲ್ಲ. ಆದರೆ, ಮಾನವ ಸೃಷ್ಟಿಯ ಸೈಬರ್‌ಲೋಕವನ್ನು ಕಂಡು ನಿನಗೂ ತುಸು ಅಸೂಸೆಯಾಗಿರಬಹುದು ಅಂತ ನನಗೆ ಅನುಮಾನ. ಯಾಕೆಂದರೆ, ನೀನು ಸೃಷ್ಟಿಸಿದ ಎಲ್ಲ ಮೂರೂ ಲೋಕಗಳನ್ನೂ ಸೈಬರ್‌ಲೋಕವೊಂದರಲ್ಲೇ ಕಾಣಬಹುದು! ಹೂಂ ಅಂತೀಯಾ ಊಂಹೂ ಅಂತಿಯಾ?

ಇಲ್ಲಿ ಮೆಕ್ರೋಸಾಫ್ಟಿನ ಬಿಲ್ಸ್‌ಗೇಟ್ಸ್‌ ಎಂಬ ಕುಬೇರನಿದ್ದಾನೆ. ಐಬಿಎಂ ಕಂಪನಿಯ ವಜ್ರಾದಪಿ ಹಾರ್ಡ್‌ವೇರಿನ ಇಂದ್ರನಿದ್ದಾನೆ. ಅವನ ಆಸ್ಥಾನದಲ್ಲಿರುವ ರಂಭೆ, ಊರ್ವಶಿ, ತಿಲೋತ್ತಮೆ ಇತ್ಯಾದಿಗಳನ್ನೂ ಮೀರಿಸುವ ಅಪ್ಸರೆಯರಿದ್ದಾರೆ... ಪ್ರತಿದಿನವೂ ಹೊಸಸಾಫ್ಟವೇರ್‌ ಸೃಷ್ಟಿಸುವ ಭೃಹ್ಮ, ವೈರಸ್‌ ಹುಟ್ಟಿಸುವ ರಕ್ಕಸರು, ಕಂಪ್ಯೂಟರ್‌ ಮುಂದೆ ತಪಸ್ಸು ಮಾಡುವ ಋಷಿಗಳು, ಆನ್‌ಲೈನ್‌ ವಿದ್ಯೆ ನೀಡುವ ಸರಸ್ವತಿ, ಕ್ರೆಡಿಟ್‌ಕಾರ್ಡ್‌ ಮೂಲಕ ವ್ಯವಹರಿಸುವ ಲಕ್ಷ್ಮಿ, ಮಾಹಿತಿ ಹ್ಯಾಕ್‌ಮಾಡುವ ನಾರದ ಅಷ್ಟೇ ಏನು... ಬಗ್‌ನಂಥ ಕ್ರಿಮಿಯಿಂದ ಹಿಡಿದು, ಮೌಸು, ಟ್ರೋಜನ್‌ಹಾರ್ಸ್‌ನಂಥ ಪ್ರಾಣಿಸಂಕುಲದವರೆಗೆ ಇಲ್ಲಿ ಏನುಂಟು, ಏನಿಲ್ಲ? ನಾರಾಯಣನೇ... ಸ್ವತಃ ನಿನ್ನದೇ ವರ್ಚುವಲ್‌ ಅವತಾರ ಇಲ್ಲಿರುವಾಗ, ಅಂತರ್ಜಾಲದ ಮುಂದೆ ಯಾವಲೆಕ್ಕ ನಿನ್ನ ಮಾಯಾಜಾಲ!

ಹೇ ಪ್ರಭು...
ಈ-ಮೇಲ್‌ ಬರೆಯಲು ಕಾರಣವೇನೆಂದರೆ, ಭಾರತ ಹಳ್ಳಿಗಳ ದೇಶ. ರೈತರೇ ದೇಶದ ಬೆನ್ನೆಲುಬು. ಆದರೆ, ಇವರಲ್ಲಿ ಶೇ.೩೦ರಷ್ಟು ರೈತರು ಮಳೆಯ ಪ್ರವಾಹದಿಂದ ಬೆಳೆ ಕಳೆದುಕೊಂಡು ಲಾಸ್‌ ಅನುಭವಿಸುತ್ತಿದ್ದಾರೆ. ಇನ್ನು ಶೇ.೩೦ರಷ್ಟು ರೈತರು ಮಳೆಯೇ ಇಲ್ಲದೇ ಬೆಳೆ ಬಾರದೇ ನಷ್ಟಕ್ಕೊಳಗಾಗಿದ್ದಾರೆ. ಇನ್ನೂ ಶೇ.೩೦ರಷ್ಟು ರೈತರು ಉತ್ತಮ ಬೆಳೆಯಿಂದ ಸಂತಸಗೊಂಡರೂ ಬೆಲೆಕುಸಿತದಿಂದ ಸಂಪೂರ್ಣ ಅವಸಾನದ ಅಂಚು ತಲುಪಿದ್ದಾರೆ. ಅಂದರೆ, ಶೇ.೯೦ರಷ್ಟು ರೈತರು ಒಂದಲ್ಲಾ ಒಂದು ರೀತಿಯ ಲಾಸ್‌ನಲ್ಲಿದ್ದಾರೆ.

ಇದೆಂಥ ಅನ್ಯಾಯ ನೋಡು ಇನ್‌ಫೋಸಿನಂಥ ಕಂಪನಿ ಮಾತ್ರ ಪ್ರತಿವರ್ಷ ನೂರಾರು ಕೋಟಿ ರುಪಾಯಿ ಲಾಭ ಗಳಿಸುತ್ತಿದೆ. ನ್ಯಾಯಾನಾ ಭಗವಂತ? ರೈತರಿಗೆಲ್ಲ ನಷ್ಟವಾದರೆ ಇನ್‌ಫೋಸಿಸ್‌ಗೂ ನಷ್ಟವಾಗಬೇಕು. ಅದೇ ನ್ಯಾಯ ತಾನೇ?

ಈ ನಡುವೆ, ಶೇ.೫ರಷ್ಟು ರೈತರು ಅಲ್ಪ ಸ್ವಲ್ಪ ಲಾಭ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ, ಇನ್ನುಳಿದ ಶೇ.೫ರಷ್ಟು ರೈತರು ತಮ್ಮ ಭೂಮಿಯನ್ನು ಸಾಫ್ಟ್‌ವೇರ್‌ ಕಂಪನಿಗಳು ಮತ್ತು ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಮಾರಿ ಹಣಗಳಿಸಿ ರೈತಾಪಿ ಕೆಲಸವನ್ನೇ ಬಿಡುತ್ತಿದ್ದಾರೆ.

ಆದರೆ, ಇನ್‌ಫೋಸಿಸ್‌ ಮಾತ್ರ ರೈತರ ಹೊಲಗದ್ದೆಗಳನ್ನು ಖರೀದಿಸಿ ದೇಶದಲ್ಲೇ ದೊಡ್ಡದಾದ ಸಾಫ್ಟ್‌ವೇರ್‌ ಕ್ಯಾಂಪಸ್‌, ವಿಶ್ವದಲ್ಲೇ ದೊಡ್ಡದಾದ ಶಿಕ್ಷಣ ಕ್ಯಾಂಪಸ್‌ ಸ್ಥಾಪಿಸಿ ಬಡವರ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ.

ಇದು ಪರಮ ಅನ್ಯಾಯ. ಇದೇ ರಾಜ್ಯದಲ್ಲಿ ಐಬಿಎಂ, ಎಕ್ಸೆಂಚರ್‌, ಎಚ್‌ಪಿ, ವಿಪ್ರೋ ಮುಂತಾದ ಕಂಪನಿಗಳು ಬಾಡಿಗೆ ಕಟ್ಟಡದಲ್ಲಿ ಕೆಲಸಮಾಡುತ್ತಿಲ್ಲವೇ? ಹಾಗೇ ಇನ್ಫೋಸಿಸ್‌ ಕೂಡ ಬಾಡಿಗೆ ಕಟ್ಟಡದಲ್ಲೇ ಕೆಲಸ ಮಾಡಬೇಕು.

ರಾಜ್ಯದಲ್ಲಿ ಕೋಟ್ಯಂತರ ದರಿದ್ರ ನಾರಾಯಣರು ಸ್ಲಂಗಳಲ್ಲಿ, ಜೋಪಡಿಗಳಲ್ಲಿ ವಾಸಿಸುತ್ತಿರುವಾಗ ಇನ್‌ಫೋಸಿಸ್‌ ನಾರಾಯಣರಿಗೆ ಮಾತ್ರ ಹವಾನಿಯಂತ್ರಿತ ಪಂಚತಾರಾ ಕಟ್ಟಡದಲ್ಲಿ ವಾಸವಾಗಿರಲು ಹೇಗಾದರೂ ಮನಸ್ಸು ಬರುತ್ತದೋ? ಅವರೂ ಕೊಳಚೆ ಪ್ರದೇಶಗಳಲ್ಲಿ ಸಾಮಾನ್ಯ ನಾಗರಿಕರಂತೆ ಹಕ್ಕುಪತ್ರದ ಬದಲು ಸ್ವಾಧೀನ ಪತ್ರ ಇಟ್ಟುಕೊಂಡು ಜೀವನ ನಡೆಸಬೇಕು.

ಇಷ್ಟಕ್ಕೂ ಈ ಇನ್‌ಫೋಸಿಸ್‌ ಕಂಪನಿಯಿಂದ ದೇಶಕ್ಕೆ ಭಾರೀ ಹೆಸರು ಬಂದಿರಬಹುದು. ಜಿಡಿಪಿಗೆ ಸಾಕಷ್ಟು ಆದಾಯ ಆಗಿರಬಹುದು. ಇನ್‌ಫೋಸಿಸ್‌ ಷೇರುಗಳಿಂದ ದೇಶದಲ್ಲಿ ಕೋಟ್ಯಂತರ ಮಂದಿ ಶ್ರೀಮಂತರಾಗಿರಬಹುದು.

ಆದರೆ, ಅದರಿಂದೆಲ್ಲ ಬಡ ಬೋರೇಗೌಡನಿಗೆ ಏನು ಲಾಭವಾಯಿತು? ಇನ್‌ಫೋಸಿಸ್‌ ಅಷ್ಟೇ ಏನು... ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಹಿಂದೂಸ್ತಾನ್‌ ಏರೋನಾಟಿಕಲ್ಸ್‌, ಇಂಟರ್‌ನ್ಯಾಶನಲ್‌ ಟೆಕ್‌ಪಾರ್ಕ್‌ ಮುಂತಾದ ಸಂಸ್ಥೆಗಳಿಂದಲೂ ಬಡಬೋರೇ ಗೌಡನಿಗೆ ನೇರವಾಗಿ ಯಾವಲಾಭವೂ ಇಲ್ಲ. ಅಮಗಳನ್ನೆಲ್ಲ ಕರ್ನಾಟಕದಿಂದ ಓಡಿಸಿ ಅಮಗಳ ಭೂಮಿಗಳನ್ನು ಸರ್ಕಾರ ವಶಪಡಿಸಿಕೊಂಡು ಬಡಜನರಿಗೆ ಹಂಚುವಂತಾಗಬೇಕು.

ಪ್ರಜಾತಂತ್ರದ ಈ ದೇಶದಲ್ಲಿ ಬಹುಮತಕ್ಕೇ ಜಯ. ಈ ದೇಶದಲ್ಲಿ ಬಹುಮತ ಇರುಮದು ದರಿದ್ರನಾರಾಯಣರಿಗೆ. ಆದ್ದರಿಂದ ಇಡೀ ದೇಶದಲ್ಲಿ ದರಿದ್ರ ನಾರಾಯಣರ ಆಡಳಿತ ಬರಬೇಕು. ಇಡೀ ದೇಶ ದರಿದ್ರನಾರಾಯಣ ಮಯವಾಗ ಬೇಕು. ಇಡೀ ದೇಶ ಆಗದಿದ್ದರೆ ರಾಜ್ಯದಲ್ಲಂತೂ ಆಗಬೇಕು.

ಈ ಕೋರಿಕೆಯನ್ನು ಮನ್ನಿಸುತ್ತೀಯೆಂಬ ನಂಬಿಕೆಯಿದೆ. ಇಷ್ಟುದ್ದ ಈ-ಮೇಲ್‌ ಓದಿ, ತುಂಬಾ ಬೈಟ್ಸಾಯಿತು ಅಂತಿದಿಯೇನೋ. ಅದಕ್ಕೇ ಸದ್ಯಕ್ಕೆ ಲಾಗ್‌ಔಟ್‌ ಆಗುತ್ತೇನೆ. ಮತ್ತೆ ಯಾವಾಗಾದರೂ ಮೇಲ್‌ ಮಾಡುತ್ತೇನೆ.

ಇಂತಿ ನಿನ್ನ ಭಕ್ತೋತ್ತಮ
ಬೋರೇಗೌಡ

Kannada Prabha issue dated October 24, 2005
Let The Entier Karnataka Be Full of Narayanas.. Daridra Narayanas!

-

Tuesday, October 18, 2005

ಪ್ರಗತಿಪರ ಭ್ರಷ್ಟಾಚಾರದಿಂದಲೇ ದೇಶದ ಪ್ರಗತಿ!

ಭಾಂಜೆ ದುರ್ಯೋಧನನಿಗೆ ಮಾಮಾಶ್ರಿ ಶಕುನಿ ಕಳಿಸಿದ ಲೇಟೆಸ್ಟ್‌ ಈ-ಮೇಲ್‌

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಎಂಬುದು ಕರ್ನಾಟಕ ಎಷ್ಟು ಉದ್ಯಮ ಸ್ನೇಹಿ ಎಂಬುದಕ್ಕೆ ವಿಶ್ವಬ್ಯಾಂಕೇ ನೀಡಿದ ಪ್ರಶಸ್ತಿ ಪತ್ರ! ಇದರ ಯಶಸ್ಸಿನ ಪಾಲು ಯಾಮದೇ ಒಬ್ಬ ಸಿ.ಎಂ.ಗಾಗಲೀ, ಮಾಜಿ ಸಿ.ಎಂ.ಗಾಗಲೀ ಸಲ್ಲುಮದಿಲ್ಲ. ’ಇದು ಎಲ್ಲರ ಟೀಮ್‌ ಎಫರ್ಟ್‌’. ಯುದ್ಧಗೆಲ್ಲಲು ಕೇವಲ ರಾಜನಿಂದ ಮಾತ್ರ ಸಾಧ್ಯವಿಲ್ಲ... ಇಡೀ ಸೈನ್ಯವೇ ಹೋರಾಡಬೇಕು. ಅಂಡರ್‌ಸ್ಟಾಂಡ್‌....ಭಾಂಜೆ?

ಪ್ರಿಯ ಭಾಂಜೆ,
ನಿನಗೇನಾಗಿದೆ ಧಾಡಿ. ಶ್ರೀಯುತ ದೇವೇಗೌಡರನ್ನು ನೋಡು. ಈ ವಯಸ್ಸಿನಲ್ಲೂ ಎಷ್ಟು ಚುರುಕಾಗಿದ್ದಾರೆ. ಅವರ ಛಲವನ್ನು ನೋಡು. ಬಡಜನರಿಗಾಗಿ ಅವರು ಹೋರಾಡುವ ಪರಿಯನ್ನು ನೋಡು. ಅವರು ಎಷ್ಟು ಪತ್ರ ಬರೆಯುತ್ತಾರೆ. ಕಾಂಗ್ರೆಸ್ಸಿನ ಹೈ ಕಮಾಂಡಿನಿಂದ ಹಿಡಿದು ಜೆಡಿಎಸ್ಸಿನ ಲೋ ಕಮಾಂಡ್‌ವರೆಗೆ, ಕಾವೇರಿ ನದಿಯಿಂದ ಹಿಡಿದು ಮೆಟ್ರೋ ರೈಲಿನವರೆಗೆ, ಕೊಳಚೆ ಸೈಟಿನಿಂದ ಹಿಡಿದು ಹೈಟೆಕ್‌ ಕಾರಿಡಾರ್‌ವರೆಗೆ ಅವರ ಪತ್ರದ ಹರಮ ವಿಶಾಲವಾಗಿದೆ. ಕರ್ನಾಟಕದಲ್ಲಿ ಸದ್ಯ ನಂಬರ್‌ ಒನ್‌ ಪತ್ರ-ಕರ್ತ ಅಂದರೆ ಅವರೇ! ಪ್ರತಿ ಬಾರಿ ಅವರು ಪತ್ರ ಬರೆದಾಗಲೂ ಅದು ದೊಡ್ಡ ಸುದ್ದಿಯಾಗುತ್ತದೆ. ಯಾರ ಪತ್ರಕ್ಕೂ ಅಷ್ಟು ಪ್ರಚಾರ ಸಿಗುಮದಿಲ್ಲ.

ಭಾಂಜೆ...
ಈಗೀಗ ಎಲ್ಲರೂ ತಮ್ಮ ಜೀವನ ಜಂಜಡಲ್ಲಿ ಪತ್ರ ಬರೆಯುವ ಹವ್ಯಾಸವನ್ನೇ ಬಿಟ್ಟುಬಿಟ್ಟಿದ್ದಾರೆ. ಆದರೆ, ಅವರೆಲ್ಲರೂ ಶ್ರೀಯುತ ದೇವೇಗೌಡರಿಂದ ಸ್ಫೂರ್ತಿ ಪಡೆದು ಮತ್ತೆ ಪತ್ರ ಬರೆಯುವ ಹವ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು ಅಂತ ನನ್ನ ಆಸೆ.

ಇಟ್ಸ್‌ ಓಕೆ ಭಾಂಜೆ,
ಆದರೆ, ನನ್ನ ಈ ಪತ್ರಕ್ಕೆ ಶ್ರೀಯುತ ದೇವೇಗೌಡರು ಸ್ಫೂರ್ತಿಯಲ್ಲ ಎಂದು ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ. ಕಳೆದವಾರ ದಿಢೀರ್‌ ಆಗಿ ಪತ್ರಿಕೆಗಳಲ್ಲಿ ಕಾಣಿಸಿಕೊಂಡ ಒಂದು ವರದಿ ನನ್ನ ಈ ಪತ್ರಕ್ಕೆ ಕಾರಣ.

ಭ್ರಷ್ಟಾಚಾರದಲ್ಲಿ ಕರ್ನಾಟಕಕ್ಕೆ ನಂಬರ್‌ ಒನ್‌ ಸ್ಥಾನ ನೀಡಿದ ವಿಶ್ವಬ್ಯಾಂಕ್‌ ಸಮೀಕ್ಷೆ ಕುರಿತಾದ ವರದಿ ಅದು. ಕಳೆದ ವರ್ಷವೇ ನಿದ್ದೆಗೆ ಹೋಗಿದ್ದ ಈ ಸಮೀಕ್ಷೆ ಈಗ ದಿಢೀರ್‌ ಆಗಿ ಎದ್ದು ಬಂದದ್ದು ಹೇಗೆ ಎಂಬ ಕುತೂಹಲ ಉಂಟಾಯಿತು ನನಗೆ.
ಇಂಥ ನೂರಾರು ಸಮೀಕ್ಷೆಗಳೂ ವರದಿಗಳೂ ದಿನವೂ ಪ್ರಕಟವಾಗುತ್ತಿರುತ್ತವೆ. ಚಹ ಕುಡಿಯುವವರಲ್ಲಿ ಶೇ.೨೬ರಷ್ಟು ಜನರು ಕ್ಯಾನ್ಸರಿಗೆ ತುತ್ತಾಗುತ್ತಾರೆ ಎಂಬ ಸಮೀಕ್ಷೆಯಿಂದ ಹಿಡಿದು, ಕಾಫಿ ಕುಡಿಯದಿದ್ದರೆ ಹಾರ್ಟ್‌ ಅಟ್ಯಾಕ್‌ ಆಗುವ ಪ್ರಮಾಣ ಶೇ.೮೦ ರಷ್ಟು ಅಧಿಕ ಎಂಬ ಸಮೀಕ್ಷೆಯ ವರೆಗೆ, ಹೆಂಡತಿ ಊರಿಗೆ ಹೋದಾಗ ಸ್ನೇಹಿತೆಯ ಜೊತೆ ಶೇ.೪೫ರಷ್ಟು ಗಂಡಸರು ಮಲಗುತ್ತಾರೆ ಎಂಬ ಸಮೀಕ್ಷೆಯಿಂದ ಹಿಡಿದು ಟೀವಿ ಇರುವ ಶೇ.೭೩.೫ರಷ್ಟು ಮನೆಯ ಮಕ್ಕಳು ಪೋಲಿ ಆಗುತ್ತಾರೆ ಎಂಬ ಸಮೀಕ್ಷೆಯ ವರೆಗೆ ವೈವಿಧ್ಯ ಸಮೀಕ್ಷೆಗಳನ್ನು ಓದಿ ನಾನು ಆನಂದಿಸುತ್ತಿದ್ದೆ.

ಆದರೆ, ಕರ್ನಾಟಕದ ಭ್ರಷ್ಟಾಚಾರದ ಕುರಿತ ಎರಡು ಬೇರೆ ಬೇರೆ ಸಮೀಕ್ಷೆ ನನಗೆ ತುಸು ಕುತೂಹಲ ಮೂಡಿಸಿತು. ಮೊನ್ನೆ ಮೊನ್ನೆಯವರೆಗೆ ಭ್ರಷ್ಟಾಚಾರದಲ್ಲಿ ಕರ್ನಾಟಕ ೪ನೇ ರ್ಯಾಂಕು ಎಂದು ಭಾರತದ ಸಮೀಕ್ಷೆಯೊಂದರಲ್ಲಿ ಹೇಳಲಾಗುತ್ತಿತ್ತು. ಆಗೆಲ್ಲ... ಲೋಕಾಯುಕ್ತರು ಆ ವರದಿ ಸರಿಯಿಲ್ಲ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಫೋರ್‌ ಅಲ್ಲ. ನಂಬರ್‌ ಒನ್‌ ಅಂತ ಒತ್ತಿ ಒತ್ತಿ ಹೇಳಿದರು. ಆದರೆ, ಅವರ ಮಾತನ್ನು ಯಾರೂ ಸೀರಿಯಸ್ಸಾಗಿ ತಗೊಳ್ಳಲಿಲ್ಲ. ಆದರೆ, ಈಗ ನೋಡು. ವಿಶ್ವಬ್ಯಾಂಕಿನ ವರದಿಯ ಪ್ರಕಾರ ಕರ್ನಾಟಕ ನಂಬರ್‌ ಒನ್‌ ಭ್ರಷ್ಟಾಚಾರಿ ಅಂತ ಖಾತ್ರಿಯಾಗಿದೆ! ಲೋಕಾಯುಕ್ತರು ಹೇಳಿದ್ದು ಎರಡೇ ತಿಂಗಳಲ್ಲಿ ನಿಜವಾಗಿದೆ.

ಇಷ್ಟಕ್ಕೂ ಭಾಂಜೆ,
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಎಂದರೆ ಕನ್ನಡಿಗರು ಯಾಕೆ ಬೇಜಾರು ಮಾಡಿಕೊಳ್ಳಬೇಕು? ಈ ಭ್ರಷ್ಟಾಚಾರಕ್ಕೆ ಈ ಮುಖ್ಯಮಂತ್ರಿ ಕಾರಣ, ಆ ಮುಖ್ಯಮಂತ್ರಿ ಕಾರಣ ಅಂತ ಯಾಕೆ ಕೆಸರೆರಚಿಕೊಳ್ಳಬೇಕು? ಕನ್ನಡಿಗರು ತಮಗೆ ದೊರಕಿದ ರ್ಯಾಂಕಿನ ಬಗ್ಗೆ ಹೆಮ್ಮೆ ಪಡಬೇಕು. ನಿನಗೆ ಗೊತ್ತಿರಬೇಕಲ್ಲ. ೬೪ ವಿದ್ಯೆಗಳಲ್ಲಿ ಚೋರ ವಿದ್ಯೆಯೂ ಒಂದು ಅಂತ. ಈ ಭ್ರಷ್ಟಾಚಾರವೆಲ್ಲ ಆ ವಿದ್ಯೆಯ ಅಂಗವೇ ಆಗಿದೆ. ಇಂಥ ಎಜುಕೇಶನ್‌ ಫೀಲ್ಡಿನಲ್ಲಿ ಕರ್ನಾಟಕ ಒಂದನೇ ರ್ಯಾಂಕ್‌ ಗಳಿಸಿದೆ ಎಂದರೆ ಯಾಕೆ ಕನ್ನಡಿಗರು ತಲೆ ತಗ್ಗಿಸುತ್ತಾರೋ ನನಗಂತೂ ಅರ್ಥ ಆಗುಮದಿಲ್ಲ!

ಈ ಪ್ರಜೆಗಳಿಗೆ ಒಂದು ವಿಷಯ ಇನ್ನೂ ಗೊತ್ತಿಲ್ಲ. ಭ್ರಷ್ಟಾಚಾರದಲ್ಲೂ ಎರಡು ಬಗೆಯಿದೆ. ಒಂದು ಪ್ರಗತಿಪರ ಭ್ರಷ್ಟಾಚಾರ. ಇನ್ನೊಂದು ಮಾರಕ ಭ್ರಷ್ಟಾಚಾರ ಅಂತ.

ದೇಶದ ಕಾನೂನುಗಳನ್ನು ಸಡಿಲಗೊಳಿಸಿ ದೇಶದ ಪ್ರಗತಿಗೆ ನೆರವಾಗುವ ಭ್ರಷ್ಟಾಚಾರವೇ ಪ್ರಗತಿಪರ ಭ್ರಷ್ಟಾಚಾರ. ಕಾನೂನುಗಳನ್ನು ಕಾನೂನುಗಳಿಂದಲೇ ನಾಶಮಾಡುವ ಭ್ರಷ್ಟಾಚಾರವನ್ನು ಮಾರಕ ಭ್ರಷ್ಟಾಚಾರ ಅಂತ ಕರೆಯುತ್ತಾರೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಕಾಣುವಂಥದ್ದು ಪ್ರಗತಿಪರ ಭ್ರಷ್ಟಾಚಾರ. ಬಿಹಾರದಲ್ಲಿ ಕಾಣುವ ಭ್ರಷ್ಟಾಚಾರ ಎರಡನೇ ಬಗೆಯದು ಎಂದು ತಜ್ಞರ ಅಭಿಪ್ರಾಯ.

ಪ್ರಗತಿಪರ ಭ್ರಷ್ಟಾಚಾರವನ್ನು ಕೆಟ್ಟದ್ದು ಎಂದು ಕರೆಯಬಾರದು ಎಂದು ದೇಶದ ಖ್ಯಾತ ಉದ್ಯಮಿಗಳೆಲ್ಲ ಅಭಿಪ್ರಾಯ ಪಡುತ್ತಾರೆ. ಈ ದೇಶದ ಬಹುತೇಕ ಕೈಗಾರಿಕೆಗಳು, ಉದ್ದಿಮೆಗಳು ಈ ಅಡಿಪಾಯದಲ್ಲೇ ನಿರ್ಮಾಣ ಆಗಿವೆ ಹಾಗೂ ಆಗುತ್ತಿವೆ ಎಂದು ಅವರು ವಾದಿಸುತ್ತಾರೆ.

ಒಂದು ವೇಳೆ ಕಾನೂನುಗಳನ್ನೆಲ್ಲ ಪಾಲಿಸಿದರೆ ದೇಶದಲ್ಲಿ ಕೈಗಾರಿಕೆ ಸ್ಥಾಪಿಸುಮದು ಸಾಧ್ಯವೇ ಇಲ್ಲ. ವ್ಯವಹಾರ ನಡೆಸಲು ಆಗುಮದೇ ಇಲ್ಲ. ಲೈಸೆನ್ಸ್‌ ಪಡೆಯಲು ನೂರಾರು ಕಟ್ಟಳೆಗಳು, ಹಲವಾರು ವರ್ಷಗಳು ಬೇಕು. ಫೈಲುಗಳು ಸಾವಿರಾರು ಹಸ್ತಗಳನ್ನು ಬದಲಾಯಿಸಬೇಕು. ಇವೆಲ್ಲಾ ಆಗಿ ಕೈಗಾರಿಕೆಗೆ ಹಸಿರು ನಿಶಾನೆ ಸಿಗುವ ಹೊತ್ತಿಗೆ ಉದ್ಯಮಿಯ ಅರ್ಧ ಆಯುಸ್ಸೇ ಕಳೆದುಹೋಗಿರುತ್ತದೆ. ಆಮೇಲೆ ಕೈಗಾರಿಕೆ ಸ್ಥಾಪಿಸುಮದು ಯಾವಾಗ! ಬಿಸಿನೆಸ್‌ ಆಗುಮದು ಯಾವಾಗ? ದೇಶದ ಪ್ರಗತಿ ಆಗುಮದು ಯಾವಾಗ?...

ಬದಲಿಗೆ... ಕಾಸು ಕೊಟ್ಟ ಕೂಡಲೇ ಲೈಸೆನ್ಸು ಸಿಗುವ, ಕೈ ಬೆಚ್ಚಗೆ ಮಾಡಿದ ಕೂಡಲೇ ಹಸಿರು ನಿಶಾನೆ ತೋರಿಸುವ ವ್ಯವಸ್ಥೆ ಇದ್ದರೆ ಎಷ್ಟನುಕೂಲ ನೋಡಿ. ಅದರಲ್ಲೂ ಸಿಂಗಲ್‌ ವಿಂಡೋ ವ್ಯವಸ್ಥೆ ಬಂದ ಮೇಲೆ ಇಡೀ ಪ್ರಕ್ರಿಯೆ ಎಷ್ಟು ಸುಲಭವಾಗುತ್ತದೆ ಎಂದರೆ, ಒಂದೇ ವಿಂಡೋದಲ್ಲಿ ಕಾಸು ಹಾಕಿದರಾಯಿತು... ಲೈಸೆನ್ಸಿನ ಹಲವಾರು ಡೋರುಗಳು ಆಟೋಮ್ಯಾಟಿಕ್‌ ಆಗಿ ಓಪನ್‌ ಆಗತ್ತವೆ. ದಿಢೀರನೆ ಕೈಗಾರಿಕೆ ಸ್ಥಾಪಿಸಬಹುದು. ದಿಢೀರನೆ ವ್ಯವಹಾರ ನಡೆಸಬಹುದು. ದಿಢೀರನೆ ದೇಶದ ಪ್ರಗತಿಯಾಗುತ್ತದೆ. ಇದೆಲ್ಲಾ ಪ್ರಗತಿಪರ ಭ್ರಷ್ಟಾಚಾರದ ಲಾಭಗಳು.

ಆದ್ದರಿಂದ ಎಲ್ಲಿ ಪ್ರಗತಿಪರ ಭ್ರಷ್ಟಾಚಾರ ಹೆಚ್ಚಿರುತ್ತದೋ ಅಲ್ಲಿ ಕೈಗಾರಿಕಾ ಪ್ರಗತಿಯೂ ಹೆಚ್ಚು ಎನ್ನುಮದು ಉದ್ಯಮಿಗಳ ನಂಬಿಕೆ. ‘ಪ್ರಗತಿಪರ ಭ್ರಷ್ಟಾಚಾರ ಎಲ್ಲಿದೆಯೋ ಅಲ್ಲಿದೆ ಪ್ರಗತಿ’... ಅಂತ ಘೋಷಣೆಯನ್ನು ಕೂಗಬಹುದು.

ಈ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳಿಗೆ ಬಂಡವಾಳ ಹೂಡಲು ಕರ್ನಾಟಕ ಪ್ರಶಸ್ತ ರಾಜ್ಯ. ಏಕೆಂದರೆ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಅಂತ ವಿಶ್ವಬ್ಯಾಂಕು ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟದ ಜಂಟಿ ಸಮೀಕ್ಷೆಯಲ್ಲೇ ಹೇಳಲಾಗಿದೆ. ಇದು ಕರ್ನಾಟಕ ಎಷ್ಟು ಉದ್ಯಮ ಸ್ನೇಹಿ ಎಂಬುದಕ್ಕೆ ವಿಶ್ವಬ್ಯಾಂಕೇ ನೀಡಿದ ಪ್ರಶಸ್ತಿ ಪತ್ರ. ಇದರ ಯಶಸ್ಸಿನ ಪಾಲು ಯಾಮದೇ ಒಬ್ಬ ಮುಖ್ಯಮಂತ್ರಿಗಾಗಲೀ, ಮಾಜಿ ಮುಖ್ಯಮಂತ್ರಿಗಾಗಲೀ ಸಲ್ಲುಮದಿಲ್ಲ. ಇದು ಎಲ್ಲರ ಟೀಮ್‌ ಎಫರ್ಟ್‌. ಗ್ರಾಮ ಪಂಚಾಯ್ತಿಯ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿಯ ವರೆಗೆ, ಜವಾನನಿಂದ ಹಿಡಿದು ಸರ್ಕಾರದ ಮಖ್ಯಕಾರ್ಯದರ್ಶಿಯವರೆಗೆ ಎಲ್ಲರನ್ನೂ ಒಳಗೊಂಡ ತಂಡಕ್ಕೆ ಈ ಪ್ರಶಸ್ತಿ ಸಲ್ಲಬೇಕು.

ಯುದ್ಧವನ್ನು ಗೆಲ್ಲಲು ರಾಜನಿಂದ ಮಾತ್ರ ಸಾಧ್ಯವಿಲ್ಲ ಭಾಂಜೆ... ಇಡೀ ಸೈನ್ಯವೇ ಹೋರಾಡಬೇಕು. ಅಂಡರ್‌ಸ್ಟಾಂಡ್‌?
ಆಯುಷ್ಮಾನ್‌ ಭವ
ಮಾಮಾಶ್ರೀ


Kannada Prabha issue Dated - October 17, 2005
"Developmental Corruption" for the Development of the Nation!

-

Tuesday, October 11, 2005

೧೫ಕ್ಕೆ ಮದುವೆ ಓಕೆ. ೧೬ಕ್ಕೆ ಸೆಕ್ಸ್‌ ಓಕೆ. ೧೮ಕ್ಕೆ ಕಾಯಬೇಕೆ?

ಕೋರ್ಟಿನ ಪರ್ಮಿಶನ್‌ ಇರುವಾಗ ನಿನ್ನದೇನು ಅಡ್ಡಿ ಪ್ರಿಯೆ!
- ಲೈಲಾಗೆ ಮಜನೂ ಇಮೇಲ್‌

ಗ್ಲೋಬಲ್‌ ಫಂಡಾ ಹೇಗಿದೆ ನೋಡು. ವಾಷಿಂಗ್‌ಟನ್‌ನಲ್ಲಿ ೧೬ ವರ್ಷದ ಹುಡುಗಿ ಮದುವೆಯಾಗಲು ಪಾಲಕರ ಒಪ್ಪಿಗೆ ಬೇಕು. ಹಾಗೂ ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಲು ಕನಿಷ್ಠ ೧೮ ವರ್ಷ ತುಂಬಿರಬೇಕು. ಆದರೆ, ಲೋಕಲ್‌ ಫಂಡಾ ಉಲ್ಟಾ! ಭಾರತದಲ್ಲಿ ೧೬ ವರ್ಷದ ಹುಡುಗಿ ತನ್ನ ಸ್ವಂತ ನಿರ್ಧಾರದಿಂದ ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಬಹುದು. ಪಾಲಕರೇ ಮಗಳ ಮದುವೆ ಮಾಡುಮದಾದರೆ ಆಕೆಗೆ ೧೮ ವರ್ಷ ತುಂಬಬೇಕು. ಇದ್ಯಾವ ನ್ಯಾಯ?

ಡಿಯರ್‌ ಲೈಲಾ,
ನಿಸ್ವಾರ್ಥ ಪ್ರೀತಿಗಾಗಿ ನಾಮ ಜೀವತ್ಯಾಗ ಮಾಡಿ ಎಷ್ಟು ವರ್ಷಗಳಾದವಲ್ಲ? ಆದರೂ ನೋಡು ನಮ್ಮ ಪ್ರೀತಿ ಹೇಗೆ ಅಮರವಾಗಿದೆ. ಈ ಕ್ಷಣ ಕೂಡ ನಿನ್ನನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂದರೆ ರೋಮಿಯೋ -ಜೂಲಿಯಟ್‌ ಕೂಡ ಅಸೂಯೆ ಪಡಬೇಕು. ಐಶ್‌ ಮತ್ತು ವಿವೇಕ್‌ ಬಗ್ಗೆ ಸಲ್ಮಾನ್‌ ಅಸೂಯೆ ಪಡುಮದಿಲ್ಲವೇ ಹಾಗೆ!

ಒಮ್ಮೊಮ್ಮೆ ಅನಿಸುತ್ತದೆ... ನಮಗೆಲ್ಲ ಮದುವೆಯಾಗದಿರುಮದೇ ಒಳ್ಳೆಯದಾಯಿತು. ನಾಮ ಅಮರ ಪ್ರೇಮಿಗಳಾಗಿಯಾದರೂ ಉಳಿದೆಮ. ನಮಗೂ ಮದುವೆಯಾಗಿದ್ದರೆ ನಮ್ಮ ಪ್ರೀತಿ ಚಿರಾಯುವಾಗುತ್ತಿರಲಿಲ್ಲವೋ ಏನೋ! ಬಹುತೇಕ ಗಂಡ ಹೆಂಡಿರಂತೆ ನಾವೂ ಜಗಳವಾಡುತ್ತಿದ್ದೆವೋ ಏನೋ! ನಮ್ಮದೂ ಡೈವೋರ್ಸ್‌ ಆಗಿಬಿಡುತ್ತಿತ್ತೋ ಏನೋ!

ಇಷ್ಟಕ್ಕೂ ಭೂಮಿಯಲ್ಲಿ ಕೋರ್ಟುಗಳು ಇರುವವರೆಗೂ ಡೈವೋರ್ಸ್‌ಗಳು ತಪ್ಪಿದ್ದಲ್ಲ. ಈತ್ತೀಚೆಗಂತೂ ಮದುವೆಗಳಿಗಿಂತ ಡೈವೋರ್ಸ್‌ಗಳೇ ಹೆಚ್ಚಾಗಿರುವಂತೆ ತೋರುತ್ತದೆ. ಅದಕ್ಕೇ ಯಾರೋ ತಮಾಷೆ ಮಾಡುತ್ತಿದ್ದರು. ಸ್ವರ್ಗದಲ್ಲಿ ಮದುವೆಯಾಗುತ್ತದೆ. ನರಕದಲ್ಲಿ ದಾಂಪತ್ಯ ಸಾಗುತ್ತದೆ. ಕೋರ್ಟುಗಳಲ್ಲಿ ಪರ್ಯವಸಾನವಾಗುತ್ತದೆ ಅಂತ.
ಪ್ರಿಯ ಲೈಲಾ, ಇಲ್ಲೊಬ್ಬಳು ಬಾಲೆಯ ಮದುವೆಗೆ ಕೋರ್ಟೇ ಬೆಂಬಲ ನೀಡಿದ ಕಥೆ ಕೇಳು ಗೆಳತಿ.

ಆಕೆಗೆ ಇನ್ನೂ ೧೬ ವರ್ಷ. ಆತನಿಗೆ ೨೧ರ ಪ್ರಾಯ. ನನ್ನ ನಿನ್ನಂತೆ ಅವರಿಗೂ ಸ್ಕೂಲಿನಲ್ಲಿ ಪ್ರೇಮಾಂಕುರ. ನನ್ನ-ನಿನ್ನಪ್ಪನಂತೆ ಇವರ ಪ್ರೇಮಕ್ಕೂ ಪಾಲಕರ ಅಡ್ಡಗಾಲು. ಹುಡುಗಿ ನಿನ್ನಂತೆ ಪುಕ್ಕಲಲ್ಲ. ಪ್ರಿಯಕರನೊಡನೆ ಓಡಿ ಹೋಗಿ ಮದುವೆಯಾದಳು. ಆದರೆ, ಕಾನೂನು ಪ್ರಕಾರ ಆಕೆಗಿನ್ನೂ ಮದುವೆಯ ವಯಸ್ಸಾಗಿಲ್ಲ. ೧೮ ವರ್ಷವಾದರೆ ಮಾತ್ರ ಆಕೆ ಮದುವೆಗೆ ಪ್ರಾಪ್ತವಯಸ್ಕಳು ಅಂತ ’ಹಿಂದೂ ವಿವಾಹ ಕಾಯ್ದೆ -೧೯೫೫’ ಸ್ಪಷ್ಟವಾಗಿ ತಿಳಿಸುತ್ತದೆ. ಸರಿ, ಹುಡುಗಿಯ ಅಪ್ಪ ಈ ಎಳೆ ದಂಪತಿಗಳನ್ನು ದೆಹಲಿ ಹೈಕೋರ್ಟಿಗೆ ಎಳೆದರು. ಹುಡುಗಿ ಇನ್ನೂ ಅಪ್ರಾಪ್ತಳು. ಆದ್ದರಿಂದ ಮದುವೆಯನ್ನು ಕ್ಯಾನ್ಸಲ್‌ ಮಾಡಿಸಿ ಕೊಡಿ ಎಂದು ನ್ಯಾಯಾಧೀಶರನ್ನು ಕೋರಿದರು. ಮೊಕದ್ದಮೆ ತಿಂಗಳಾನುಗಟ್ಟಲೆ ನಡೆಯಿತು. ನ್ಯಾಯಾಧೀಶರು ಏನು ತೀರ್ಪು ಕೊಟ್ಟರು ಗೊತ್ತಾ?

ಈ ಮದುವೆ ಕಾನೂನು ಬಾಹಿರ ಅಲ್ಲ. ಯಾಕೆಂದರೆ ಹುಡುಗಿ ತನ್ನ ’ವಿವೇಚನಾ ಕೋಟಾದಲ್ಲಿ’ ಮದುವೆಯಾಗಿದ್ದಾಳೆ! ಯಾವ ಹುಡುಗಿ ಸ್ವಂತ ವಿವೇಚನೆಯ ವಯಸ್ಸನ್ನು ತಲುಪುತ್ತಾಳೋ ಆಕೆ ತನ್ನ ನಿರ್ಧಾರದ ಪ್ರಕಾರ ಮದುವೆಯಾಗಬಹುದು. ಭಾರತದಲ್ಲಿ ೧೫ನೇ ವಯಸ್ಸಿಗೆ ಹುಡುಗಿಯರು ಸ್ವಂತ ವಿವೇಚನೆಯುಳ್ಳವರಾಗುತ್ತಾರೆ. ಆದ್ದರಿಂದ ಆಕೆ ಗಂಡನೊಂದಿಗೆ ಇರಬಹುದು ಅಂತ ದೆಹಲಿ ಹೈಕೋರ್ಟು ನವದಂಪತಿಗಳ ಪರ ತೀರ್ಮಾನ ಪ್ರಕಟಿಸಿತು.

ಇದೂ ಒಂದು ವಿಚಿತ್ರವೇ! ೧೫ರ ವಯಸ್ಸಿಗಷ್ಟೇ ಏನು... ನಿನ್ನಂಥ ಹುಡುಗಿಯರಿಗೆ ಎಂದಿಗಾದರೂ ವಿವೇಚನೆ ಮೂಡುತ್ತದೆಯೇ? ವಿವೇಚನೆ ಇದ್ದರೆ ಪ್ರೀತಿಗೆ ಸಿಲುಕುತ್ತಾರಾ? ಮದುವೆ ಆಗುತ್ತಾರಾ? ಏನೋ... ಹೈಕೋರ್ಟು ಅದರ ವಿವೇಚನೆಗೆ ಬಂದದ್ದನ್ನು ಹೇಳಿದೆ. ಆದರೆ, ಹುಡುಗರ ವಿಷಯದಲ್ಲಿ ಕೋರ್ಟು ಯಾಕೆ ಅದನ್ನೂ ಹೇಳಿಲ್ಲ? ಹುಡುಗರಿಗೆ ಯಾವ ವಯಸ್ಸಿನಲ್ಲೂ ವಿವೇಚನೆ ಬರುಮದೇ ಇಲ್ಲವೇ?

ಇಲ್ಲಿಯವರೆಗೆ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಮದುವೆ ಕಾನೂನುಬಾಹಿರ ಎನ್ನುತ್ತಿದ್ದ ಕಾನೂನು ಈಗ ದಿಢೀರ್‌ ಆಗಿ ೧೫ರ ಹೊಸ ರಾಗ ಹಾಡಿದೆ.

ಹಾಗೆ ನೋಡಿದರೆ, ಇದು ಹೊಸ ರಾಗವೇನೂ ಅಲ್ಲ ಅಂತ ಕೋರ್ಟು ಹೇಳಿದೆ. ಕೆಲಮ ವರ್ಷಗಳ ಹಿಂದೆಯೇ ಸುಪ್ರೀಂ ಕೋರ್ಟು, ಹಿಮಾಚಲ ಪ್ರದೇಶದ ಹೈಕೋರ್ಟು ಮತ್ತು ಚೆನ್ನೈ ಕೋರ್ಟುಗಳು ಇದೇ ರೀತಿಯ ತೀರ್ಪು ನೀಡಿವೆಯಂತೆ.

ಈ ತೀರ್ಪಿನ ವಿರುದ್ಧ ರೇಣುಕಾ ಚೌಧರಿ, ಬಂದಾ ಕಾರಟ್‌ ಮುಂತಾದ ಮಹಿಳಾ ಸುಧಾರಕ ಮಹಿಳೆಯರೆಲ್ಲ ಧ್ವನಿ ಎತ್ತಿದ್ದಾರೆ. ಈ ತೀರ್ಪಿನಿಂದ ಬಾಲ್ಯ ವಿವಾಹ ಪದ್ಧತಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಒಂದು ವೇಳೆ ೧೫ಕ್ಕೆ ಮದುವೆಯ ವಿವೇಚನೆಗೆ ಕಾನೂನು ಅಸ್ತು ಅನ್ನುಮದಾದರೆ ಮಹಿಳೆಯರಿಗೆ ೧೫ಕ್ಕೆ ಮತದಾನದ ಹಕ್ಕು , ಡ್ರೆೃವಿಂಗ್‌ ಲೈಸನ್ಸ್‌ ನೀಡಬೇಕು ಎಂದೆಲ್ಲಾ ಹುಯಿಲೆಬ್ಬಿಸಿದ್ದಾರೆ. ಅದೆಲ್ಲ ಹಾಗಿರಲಿ...

ಗ್ಲೋಬಲ್‌ ಫಂಡಾ ಹೇಗಿದೆ ನೋಡು. ವಾಷಿಂಗ್‌ಟನ್‌ನಲ್ಲಿ ೧೬ ವರ್ಷದ ಹುಡುಗಿ ಮದುವೆಯಾಗಲು ಪಾಲಕರ ಒಪ್ಪಿಗೆ ಬೇಕು. ಆದರೆ, ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಲು ಕನಿಷ್ಠ ೧೮ ವರ್ಷ ತುಂಬಿರಬೇಕು. ಆದರೆ, ಲೋಕಲ್‌ ಫಂಡಾ ಉಲ್ಟಾ! ಭಾರತದಲ್ಲಿ ೧೬ ವರ್ಷದ ಹುಡುಗಿ ತನ್ನ ಸ್ವಂತ ನಿರ್ಧಾರದಿಂದ ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಬಹುದು. ಪಾಲಕರು ಮಗಳ ಮದುವೆ ಮಾಡುಮದಾದರೆ ಆಕೆಗೆ ೧೮ ವರ್ಷ ತುಂಬಬೇಕು. ಇದ್ಯಾವ ನ್ಯಾಯ?

ಈ ನಡುವೆ ಪ್ರಾಪ್ತ ಮತ್ತು ಅಪ್ರಾಪ್ತ ವಯಸ್ಸಿನ ಕುರಿತು ಗೊಂದಲ ಉಂಟಾಗಿದೆ. ಇಂಡಿಯನ್‌ ಮೆಜಾರಿಟಿ ಆಕ್ಟ್‌ ೧೮೭೫ ಪ್ರಕಾರ ೧೮ಕ್ಕಿಂತ ಕಡಿಮೆ ವಯಸ್ಸಿನ ಹುಡುಗ ಅಥವಾ ಹುಡುಗಿಯರು ಅಪ್ರಾಪ್ತ ವಯಸ್ಕರು (Minors) ಆದರೆ, ಬಾಂಬೇ ಪ್ರಿವೆಂನ್‌ಶನ್‌ ಆಫ್‌ ಹಿಂದು ಬೈಗಮಸ್‌ ಮ್ಯಾರಿಯೇಜ್‌ ಆಕ್ಟ್‌ ೧೯೪೬ರ ಪ್ರಕಾರ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಪ್ರಾಪ್ತರು. ಇದು ಹೇಗೆ ಸಾಧ್ಯ!

ಲೈಲಾ ಓ ಲೈಲಾ ಲೈಲಾ...
ಈ ಕಾನೂನು ಎಷ್ಟು ಮಜವಾಗಿದೆ ಅಂತೀಯಾ? ಇಲ್ಲಿವೆ ಕೆಲಮ ಸ್ಯಾಂಪಲ್‌ ನೋಡು.
ಎಳೆಯ ವಯಸ್ಸಿಗೇ ಪತ್ನಿಯಾಗುವ ಹಕ್ಕನ್ನುಇಂಡಿಯನ್‌ ಪೀನಲ್‌ ಕೋಡ್‌ನ ೩೭೫ನೇ ಸೆಕ್ಷನ್‌ ಕಿತ್ತುಕೊಳ್ಳುಮದಿಲ್ಲ. ಆದರೆ, ಸೆಕ್ಸ್‌ ವಿಚಾರದಲ್ಲಿ ಕಟ್ಟಳೆಯನ್ನು ಹೇರುತ್ತದೆ. ಈ ಸೆಕ್ಸ್‌-ನ್‌ ಪ್ರಕಾರ ಹೆಂಡತಿಗೆ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದಲ್ಲಿ ಆಕೆ ಸಮ್ಮತಿಸಿದರೂ ಕೂಡ ಗಂಡ ಆಕೆಯೊಂದಿಗೆ ಸೆಕ್ಸಿಗೆ ಇಳಿಯುವಂತಿಲ್ಲ. ಹಾಗೇನಾದರೂ ಮಾಡಿದರೆ ಅದು ರೇಪ್‌ ಆಗುತ್ತದೆ. ಅಂದರೆ ಎಳೆಯ ವಯಸ್ಸಿಗೆ ಮದುವೆಯಾದರೂ ಪ್ರಸ್ತ ಮಾಡಬಾರದು ಎಂದರ್ಥ!

ಆದರೆ ಮಣಿಪುರದಲ್ಲಿ ಈ ಕಾನೂನನ್ನು ಸಡಿಲಗೊಳಿಸಲಾಗಿದ್ದು ಅಲ್ಲಿ ೧೩ನೇ ವಯಸ್ಸಿಗೇ ಪತ್ನಿಯೊಂದಿಗೆ ಸೆಕ್ಸ್‌ ಸಾಧ್ಯ.

ಅರೆ ಓ ಲೈಲಾ...
ಮದುವೆಯಾಗದಿದ್ದರೂ ೧೬ ವರ್ಷದ ಬಾಲಕಿ ಕಾನೂನು ಪ್ರಕಾರ ಲೈಂಗಿಕ ಕ್ರಿಯೆಗೆ ತಾನು ಇಚ್ಛಿಸಿದ ವ್ಯಕ್ತಿಗೆ ಸಮ್ಮತಿ ನೀಡಬಹುದು. ಐಪಿಸಿ ೩೭೫ರ ಪ್ರಕಾರ ೧೬ಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಜೊತೆ, ಆಕೆ ಸಮ್ಮತಿಯಿದ್ದರೂ, ಲೈಂಗಿಕ ಕ್ರಿಯೆ ನಡೆಸುಮದು ಅಪರಾಧ. ಆದರೆ ಹುಡುಗರು ೨೧ ವರ್ಷಕ್ಕಿಂತ ಮೊದಲು ಇಂತಹ ಯಾಮದೇ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುಮದು ಅಪರಾಧ ಅಂತ ಕಾಣುತ್ತೆ!

ಈಗ ಹೇಳು ಪ್ರಿಯೆ... ಕಾನೂನು ಪ್ರಕಾರ ೧೫ಕ್ಕೆ ಮದುವೆ ಓಕೆ. ೧೬ಕ್ಕೆ ಸೆಕ್ಸಿಗೂ ಓಕೆ. ಹಾಗಾದರೆ ೧೮ ವರ್ಷಕ್ಕೆ ನೀನು ಪ್ರಾಪ್ತ ವಯಸ್ಕಳಾಗುವವರೆಗೂ ಕಾಯಬೇಕು ಯಾಕೆ? ಛೆ... ಈ ಕಾನೂನುಗಳೆಲ್ಲ ಬರೀ ಶಬ್ದಗಳ ವಾದ-ವಿವಾದ, ಬುದ್ಧಿವಂತಿಕೆಯ ಘರ್ಷಣೆ. ಲೈ...ಲಾ... ಲಾ is an ass! ಕಾನೂನು ಒಂದು ಕತ್ತೆ! ಆದರೆ, ಪ್ರೀತಿಗೆ ಕಾನೂನು ಕಟ್ಟಳೆಯಿಲ್ಲ. ವಯಸ್ಸಿನ ಹಂಗಂತೂ ಇಲ್ಲವೇ ಇಲ್ಲ. All is fair in love and war. ಹಾಗಂತ ಅಲಿಖಿತ ಶಾಸನವಿದೆ ನಿನಗೆ ಗೊತ್ತಲ್ಲ ಅಷ್ಟು ಸಾಕು. ನಾಮ ಮದುವೆಯ ಗೊಂದಲಕ್ಕೆ ಸಿಲುಕಿಕೊಳ್ಳುಮದು ಬೇಡ. ಪ್ರೇಮಿಗಳಾಗೇ ಅಮರವಾಗಿರೋಣ.

ಇಂತಿ ನಿನ್ನ
ಮಜನೂ

Kannada Prabha Issue Dated - October 10, 2005
Marriage at 15: Ok, Sex at 16: Ok. Why wait till 18?
On the Minimum Age for Marriage and Sex

-

Tuesday, October 04, 2005

ಇನ್ನಷ್ಟು ಗಾಂಧಿ ಪ್ರತಿಮೆಗಳಿಗೆ ಆಗ್ರಹಿಸಿ ಧರಣಿ!

ಈ ದೇಶದಲ್ಲಿ ಗಾಂಧಿ ಜಯಂತಿ ಬಿಟ್ಟರೆ ನಂತರದ ಅತ್ಯಂತ ಫೇಮಸ್‌ ಜಯಂತಿ ಅಂಬೇಡ್ಕರ್‌ ಜಯಂತಿ ಮಾತ್ರ. ನೆಹರೂಗೆ ಅಂತ ಒಂದು ರಸ್ತೆಯಿಲ್ಲ. ಅಂಥ ರಸ್ತೆ ಇದ್ದರೂ ಗಾಂಧಿ ರಸ್ತೆಯಷ್ಟು ಫೇಮಸ್ಸಂತೂ ಅಲ್ಲವೇ ಅಲ್ಲ. ಶಿವಲಿಂಗ ಹಾಗೂ ಗಣೇಶ ವಿಗ್ರಹಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರತಿಮೆಗಳಿರುಮದು ನಿನ್ನದೆ! ಆದರೂ ಭಾರತಕ್ಕೆ ಇನ್ನಷ್ಟು ಗಾಂಧಿ ಪ್ರತಿಮೆಗಳು ಬೇಕು. ಯಾಕೆ ಗೊತ್ತಾ?

ಮುಷ್ಕರ್‌ ದಾಸ್‌ ಧರಣ್‌ಚಂದ್‌ ಗಾಂಧಿಯವರು ಮೋಹನದಾಸ್‌ ಕರಮಚಂದ್‌ ಗಾಂಧಿಗೆ ಬರೆದ ಈಮೇಲ್‌

ಪ್ರೀತಿಯ ಗಾಂಧಿ ತಾತಾ,
ನಿನ್ನೆ ತಾನೇ ನಿನ್ನ ಹುಟ್ಟುಹಬ್ಬ ಆಚರಿಸಿ ಮುಗಿಸಿದ್ದೇವೆ. ನೀನು ಕಲಿಸಿದ ಮೌಲ್ಯಗಳ ಪ್ರಕಾರವೇ ನಿನ್ನ ಬರ್ತ್‌ಡೇಯನ್ನು ಸರಳವಾಗಿ ಆಚರಿಸಿದ್ದೇವೆ. ಯಾರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರೂ ನಿನ್ನ ಬರ್ತ್‌ಡೇಯನ್ನು ಮಾತ್ರ ವಿಜೃಂಭಣೆಯಿಂದ ನಡೆಸಿ ನಿನಗೆ ಅವಮಾನ ಮಾಡುಮದಿಲ್ಲ!

ಅದ್ಧೂರಿ ಬರ್ತ್‌ಡೇಗಳನ್ನು ಏನಿದ್ದರೂ, ಈಗಿನ ರಾಜಕಾರಣಿಗಳಿಗೆ ಮತ್ತು ಮರಿ ಪುಡಾರಿಗಳಿಗೇ ಮೀಸಲಿಟ್ಟಿದ್ದೇವೆ. ಅವರ ಬರ್ತ್‌ಡೇ, ಒಂಥರಾ ದರಿದ್ರನಾರಾಯಣ ಸಮಾವೇಶದಷ್ಟು ದೊಡ್ಡದೂ ಅಹಿಂದಾ ಸಮಾವೇಶದಷ್ಟೂ ವಿಶಾಲವೂ ಆಗಿರುತ್ತದೆ. ರಸ್ತೆಗಳ ತುಂಬಾ ಅವರ ಕಟೌಟು, ಊರತುಂಬಾ ಶುಭಾಶಯ ಕೋರುವ ಪೋಸ್ಟರುಗಳು, ಬ್ಯಾನರುಗಳು, ಪತ್ರಿಕೆಗಳಲ್ಲಿ ಜಾಹೀರಾತುಗಳು, ದೊಡ್ಡ ಸಾರ್ವಜನಿಕ ಸಮಾರಂಭ, ಕ್ವಿಂಟಾಲ್‌ ಭಾರದ ಹೂವಿನ ಹಾರ, ಕೇಕ್‌ ಕಟಿಂಗ್‌, ಗಿಫ್ಟ್‌ ಗಿವಿಂಗ್‌, ಹೊಗಳಿ ಹೊಗಳಿ, ಭಾಷಣಗಳು, ಓಟು-ಸೀಟಿಗೆ ಪೀಠಿಕೆಗಳು... ಆಸ್ಪತ್ರೆಯಲ್ಲಿ ಹಾಲು, ಬ್ರೆಡ್ಡು, ಬನ್ನು, ಹಣ್ಣು ವಿತರಣೆ... ವಿಶೇಷ ಅತಿಥಿಗಳಿಗೆ ಅಬಕಾರಿ ಸಚಿವ ಚೆನ್ನಿಗಪ್ಪ ಸರ್ಟಿಫೈಡ್‌ ಕ್ವಾಲಿಟಿ ಡ್ರಿಂಕ್‌... ಹೀಗೆ ನಡೆಯುತ್ತೆ ಅವರ ಬರ್ತ್‌ಡೇ ರ್ಯಾಲಿ.

ಆದರೆ, ನಿನ್ನ ಹುಟ್ಟುಹಬ್ಬ ವೆರಿ ಸಿಂಪಲ್‌. ನಿನ್ನ ಪ್ರತಿಮೆ ಅಥವಾ ಫೋಟೊ ಮುಂದೆ ಕೆಲವೇ ಕೆಲಮ ವೃದ್ಧರು ಸೇರಿ, ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ ಅಂತ... ನಾಕು ಸಾಲು ಗುನುಗಿ ಮನೆಗೆ ಹೋಗುತ್ತಾರೆ. ಇಷ್ಟೇ ಸಿಂಪಲ್‌ ಸಾಕಾ. ಇಲ್ಲಾ ಇನ್ನೂ ಸಿಂಪಲ್‌ ಬೇಕಾ?

ಅಂದಹಾಗೆ, ಈ ದೇಶದಲ್ಲಿ ಗಾಂಧಿ ಜಯಂತಿ ಬಿಟ್ಟರೆ ನಂತರದ ಅತ್ಯಂತ ಫೇಮಸ್‌ ಜಯಂತಿ ಅಂಬೇಡ್ಕರ್‌ ಜಯಂತಿ ಮಾತ್ರ. ಚಾಚಾ ನೆಹರೂ ದಿನವನ್ನು ಮಕ್ಕಳ ದಿನಾಚರಣೆ ಅಂತ ಕರೆದಿರುಮದರಿಂದ ನೆಹರೂ ಜಯಂತಿ ಅಂತ ಯಾವ ಕ್ಯಾಲೆಂಡರ್‌ನಲ್ಲೂ ನಾಮ ಪ್ರಕಟಿಸುಮದಿಲ್ಲ. ಹಾಗಾಗಿ, ನೀನು ನಂಬಿದರೆ ನಂಬು ಬಿಟ್ಟರೆ ಬಿಡು... ನೆಹರೂ ಚಾಚಾನನ್ನು ಹೆಚ್ಚು ಕಡಿಮೆ ನಾಮ ಮರೆತೇ ಬಿಡುತ್ತಿದ್ದೇವೆ.

ನಿನ್ನನ್ನು ಮಾತ್ರ ನಾಮ ಮರೆಯುವ ಹಾಗೇ ಇಲ್ಲ. ಏಕೆಂದರೆ, ನೀನು ಮಹಾತ್ಮ. ಎಷ್ಟು ಮಹಾತ್ಮ ಎಂದರೆ, ನೆಹರೂ ಈ ದೇಶವನ್ನು ಅಷ್ಟು ವರ್ಷ ಆಳಿದರೂ, ’ನೆಹರೂ ವಂಶ’ಕ್ಕಿಂತ ’ಗಾಂಧಿ ಸಂತಾನ’ವೇ ದೇಶಾದ್ಯಂತ ಫೇಮಸ್ಸು. ಇಂದಿರಾಗಾಂಧಿ, ರಾಜೀವ ಗಾಂಧಿ ಈಗಲೂ ದೇಶಕ್ಕೆ ನಾಯಕರು. ಅವರ ಕೃಪಾಕಟಾಕ್ಷದಲ್ಲೇ ಈ ದೇಶದ ಸೊಸೆ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಗಾಂಧಿ ಹೆಸರನ್ನು ಚಿರಾಯುಗೊಳಿಸುತ್ತಿದ್ದಾರೆ. ಈ ದಿಸೆಯಲ್ಲಿ ಸಂಜಯಗಾಂಧಿ ಪತ್ನಿ ಮೇನಕಾ ಗಾಂಧಿ ಅಳಿಲು ಸೇವೆ ಸಲ್ಲಿಸಿದರೆ, ಮೇನಕಾ ಪುತ್ರ ವರುಣ್‌ ಗಾಂಧಿ ಇದೀಗ ತಾನೇ ರಂಗಕ್ಕೆ ಇಳಿದಿದ್ದಾರೆ. ಈ ನಡುವೆ ನಿನ್ನ ಸ್ವಂತ ಮಕ್ಕಳಾದ ಹರಿಲಾಲ್‌ ಗಾಂಧಿ, ಮಣಿಲಾಲ್‌ ಗಾಂಧಿ, ರಾಮದಾಸ್‌ ಗಾಂಧಿ ಮತ್ತು ದೇವದಾಸ್‌ ಗಾಂಧಿ ಮಾತ್ರ ನಾಪತ್ತೆ... ಈಗಲೂ ಜೀವಂತ ಇರುವ ನಿನ್ನ ಮೊಮ್ಮೊಗ ವರುಣ್‌ ಗಾಂಧಿ ಎಂದರೆ ಯಾರಾತ ಅಂತ ಕೇಳುತ್ತಾರೆ ಜನ. ಹಾಗಾಗಿ ನಿನ್ನ ಮನೆಮಂದಿಗಿಂತ ಸೋನಿಯಾ ಗಾಂಧಿ ಎಷ್ಟೋ ವಾಸಿ!

ದೇಶದಲ್ಲಿ ಜನರು ಈಗಲೂ ನಿನ್ನ ದಾರಿಯಲ್ಲಿ ತಪ್ಪದೇ ನಡೆಯುತ್ತಿದ್ದಾರೆ. ದೇಶದ ಯಾಮದೇ ಪಟ್ಟಣವನ್ನು ಬೇಕಾದರೂ ನೋಡು... ಕನಿಷ್ಠ ಒಂದಾದರೂ ಮಹಾತ್ಮಾ ಗಾಂಧಿ ರಸ್ತೆಯಿರುತ್ತದೆ. ಅಲ್ಲಿ ಜನ ಬಹಳ ಬ್ಯೂಸಿಯಾಗಿ ನಡೆದಾಡುತ್ತಿರುತ್ತಾರೆ! ಅದನ್ನು ನೋಡಿದಾಗಲೆಲ್ಲ, ಜನ ಈಗಲೂ ಗಾಂಧಿ ಮಾರ್ಗ ಬಿಟ್ಟಿಲ್ಲ ಅಂತ ನಿನ್ನ ಹೃದಯ ತುಂಬಿಬರುತ್ತಿರಬೇಕಲ್ಲವೇ? ಇಷ್ಟಕ್ಕೂ ನೆಹರು ರಸ್ತೆ ಅಂತ ನೀನು ಎಲ್ಲಾದರೂ ಕೇಳಿದ್ದು ನೆನಪಿದೆಯೇ? ಅಂಥ ರಸ್ತೆ ಇದ್ದರೂ ಎಲ್ಲೋ ಇದ್ದಿರಬಹುದು. ಆದರೆ ಆ ರಸ್ತೆ ಗಾಂಧಿ ರಸ್ತೆಯಷ್ಟು ಫೇಮಸ್ಸಂತೂ ಅಲ್ಲವೇ ಅಲ್ಲ. ಇದು ವಿಚಿತ್ರವಾದರೂ ಸತ್ಯ.

ಅಷ್ಟೇ ಅಲ್ಲ, ಭಾರತದಲ್ಲಿ ಶಿವಲಿಂಗ ಹಾಗೂ ಗಣೇಶ ವಿಗ್ರಹಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರತಿಮೆಗಳಿರುಮದು ನಿನ್ನದೆ! ಹಳ್ಳಿ ಹಳ್ಳಿ, ಪೇಟೆ ಪಟ್ಟಣ, ನಗರ ಮಹಾನಗರಗಳನ್ನು ನೋಡು... ಕನಿಷ್ಠ ಒಂದಾದರೂ ಗಾಂಧಿ ಪ್ರತಿಮೆ ಇದ್ದೇ ಇರುತ್ತದೆ. ಪ್ರತಿ ಊರಿಗೆ ಅಂಬೇಡ್ಕರ್‌ ಬಡಾವಣೆಯ ಕಿರುತಿ ಹೇಗೋ ನಿನ್ನ ಮೂರುತಿ ಹಾಗೆ! ಒಂದು ಗಾಂಧಿ ಪಾರ್ಕು, ಒಂದು ಗಾಂಧಿ ಸರ್ಕಲ್ಲು, ಒಂದು ಗಾಂಧಿ ಭವನ, ಒಂದು ಗಾಂಧಿ ರಸ್ತೆ ಮತ್ತು ಒಂದು ಗಾಂಧಿ ಪ್ರತಿಮೆ ಪ್ರತಿ ಊರಿಗೂ ಕಡ್ಡಾಯ. ಊರಿನಲ್ಲಿ ಕುಡಿಯಲು ನೀರಿಲ್ಲದಿದ್ದರೂ, ಓಡಾಡಲು ರಸ್ತೆಯಿಲ್ಲದಿದ್ದರೂ ಇವೆಲ್ಲ ಇದ್ದೇ ಇರುವಂತೆ ನಮ್ಮ ಘನ ಸರ್ಕಾರ ವ್ಯವಸ್ಥೆ ಮಾಡಿದೆ.

ದೇಶದಲ್ಲಿ ಬೇರೆ ಬೇರೆ ನಾಯಕರ ಎಷ್ಟೋ ಪ್ರತಿಮೆಗಳಿವೆ. ಆದರೆ ಅವೆಲ್ಲಕ್ಕಿಂತ ಹೆಚ್ಚಿನ ಡಿಮಾಂಡು ನಿನ್ನ ಪ್ರತಿಮೆಗಳಿಗೆ ಇದೆ. ನೀನು ಕಲಿಸಿಕೊಟ್ಟ ಸತ್ಯಾಗ್ರಹ, ಧರಣಿ, ಮುಷ್ಕರ, ಚಳವಳಿ ನಡೆಸಲು ಗಾಂಧಿ ಪ್ರತಿಮೆ ಬೇಕೇ ಬೇಕಲ್ಲ. ಹಾಗಾಗಿ ನಿನ್ನ ಪ್ರತಿಮೆ ಧರಣಿ, ಸತ್ಯಾಗ್ರಹದ ಹೆಗ್ಗುರುತೇ ಆಗಿದೆ!

ಗಾಂಧಿ ತಾತಾ,
ನೀನೂ ಗಮನಿಸಿರಬಹುದು. ಕೆಲವರು ದಾರಿಯಲ್ಲಿ ಹೋಗುವಾಗ ಅಕಸ್ಮಾತ್‌ ದೇವಾಲಯ ಕಂಡರೆ, ಒಂದು ಕ್ಷಣ ನಿಂತು ನಮಸ್ಕಾರ ಮಾಡಿ ಮುಂದೆ ಹೋಗುತ್ತಾರಲ್ಲ. ಅದೇ ರೀತಿ, ಕೆಲವರು ನಿನ್ನ ಪ್ರತಿಮೆ ಕಂಡರೆ ಸಾಕು ಒಂದು ಕ್ಷಣ ಧರಣಿ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಮುನ್ನಡೆಯುತ್ತಾರೆ! ಕೆಲವರು ಅಷ್ಟರ ಮಟ್ಟಿಗೆ ನೀನು ಕಲಿಸಿದ ಸತ್ಯಾಗ್ರಹ ಪಾಠವನ್ನು ಪಾಲಿಸುತ್ತಾರೆ.

ಧರಣಿ ಸತ್ಯಾಗ್ರಹ ತತ್ವವನ್ನು ಜನರು ಎಷ್ಟು ಪಾಲಿಸುತ್ತಾರೆ ಅಂದರೆ, ಮಾತೆತ್ತಿದರೆ ಧರಣಿ ಎನ್ನುತ್ತಾ ನಿನ್ನ ಪ್ರತಿಮೆ ಹುಡುಕಿಕೊಂಡು ಹೋಗುತ್ತಿದ್ದಾರೆ. ಗಂಡನ ವಿರುದ್ಧ ಹೆಂಡತಿಯೇ ಧರಣಿ ಕುಳಿತ ಸುದ್ದಿ ಪತ್ರಿಕೆಯಲ್ಲಿ ಬಂದಿತ್ತು. ಗಾಂಧಿ ಪ್ರತಿಮೆಯೆದುರು ಆಮರಣಾಂತ ಉಪವಾಸ, ಗಾಂಧಿ ಪ್ರತಿಮೆಯಿಂದ ತಾಲೂಕಾ ಕಚೇರಿವರೆಗೆ ಮೆರವಣಿಗೆ ಇತ್ಯಾದಿ ಸುದ್ದಿಗಳನ್ನು ಪ್ರತಿದಿನವೂ ನಾಮ ಓದುತ್ತಲೇ ಇರುತ್ತೇವೆ.

ಈಗೀಗ ಒಂದೇ ದಿನ ೬-೮ ಧರಣಿ ಸತ್ಯಾಗ್ರಹಗಳು ನಡೆಯುವ ಕಾಲ ಬಂದಿದೆ. ಒಂದು ಗುಂಪು ಗಾಂಧಿ ಪ್ರತಿಮೆಯ ಎದರೂ, ಇನ್ನೊಂದು ಗುಂಪು ಗಾಂಧಿ ಮೈದಾನದಲ್ಲೂ, ಮತ್ತೊಂದು ಗುಂಪು ಗಾಂಧಿ ಪಾರ್ಕಿನಲ್ಲೂ... ಹೀಗೆ ವಿವಿಧ ಗಾಂಧಿ ಕ್ಷೇತ್ರಗಳನ್ನು ಆ ಗುಂಪುಗಳು ಪಾಲುಮಾಡಿಕೊಂಡಿವೆ. ಆದರೂ, ಇನ್ನಷ್ಟು ಧರಣಿ, ಸತ್ಯಾಗ್ರಹಕ್ಕೆ ಜಾಗ ಸಾಲುತ್ತಿಲ್ಲ. ಅದಕ್ಕೇ ಮತ್ತಷ್ಟು ಗಾಂಧಿ ಕ್ಷೇತ್ರಗಳನ್ನು ಸ್ಥಾಪಿಸಬೇಕಾಗಿದೆ. ಪಾರ್ಕು, ಭವನ, ಮೈದಾನ ನಿರ್ಮಾಣಮಾಡುಮದು ಕಷ್ಟದ ಕೆಲಸ. ಪ್ರತಿಮೆ ಸ್ಥಾಪಿಸುಮದು ಇದ್ದುದರಲ್ಲಿ ಸುಲಭ. ಹೀಗಾಗಿ ದೇಶದಲ್ಲಿ ಇನ್ನಷ್ಟು ಗಾಂಧಿಪ್ರತಿಮೆಗಳನ್ನಾದರೂ ಸರ್ಕಾರ ಪ್ರತಿಷ್ಠಾಪಸಲೇ ಬೇಕಾಗಿದೆ. ಆದ್ದರಿಂದ, ಆದಷ್ಟು ಬೇಗ ಹೆಚ್ಚಿನ ಗಾಂಧಿ ಪ್ರತಿಮೆಗಳನ್ನು ಸ್ಥಾಪಿಸುವಂತೆ ಸರ್ಕಾರವನ್ನು ಆಗ್ರಹಿಸಿ ನಾನು ಧರಣಿ ಕೂರಲು ತೀರ್ಮಾನಿಸಿದ್ದೇನೆ. ಇದಕ್ಕೆ ನಿನ್ನ ಆಶೀರ್ವಾದ ಇದೆ ಎಂದು ನಂಬಿದ್ದೇನೆ.

ಇಂತಿ ವಿಧೇಯ
ಮುಷ್ಕರದಾಸ್‌ ಧರಣ್‌ಚಂದ್‌ ಗಾಂಧಿ


Kannada Prabha Issue Dated - October 3, 2005
An Odd (not ode) to Mahatma Gandhi on his Jayanthi

-